ಶಾಲಾ ಕೊಠಡಿಗಳಲ್ಲಿ ದೇಶದ ಭವಿಷ್ಯ ರೂಪುಗೊಳ್ಳುತ್ತದೆ : ಸಿಎಂ
ಮೈಸೂರು,ಸೆ.5-ಶಿಕ್ಷಕರು ನೀಡುವ ಶಿಕ್ಷಣದಿಂದ ಶಾಲಾ ಕೊಠಡಿಗಳಲ್ಲಿ ನಮ್ಮ ದೇಶದ ಭವಿಷ್ಯ ರೂಪುಗೊಳ್ಳುತ್ತದೆ ಎಂದು ಮುಖ್ಯ ಮಂತ್ರಿ ಸಿದ್ಧರಾಮಯ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ನಗರದ ಮನಂದವಾಡಿ ರಸ್ತೆಯಲ್ಲಿನ ಎನ್.ಐ.ಇ ಕಾಲೇಜಿನ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಮ್ಮ ಸಮಾಜದಲ್ಲಿ ಶಿಕ್ಷಕರನ್ನು ತಮ್ಮ ಮನದಲ್ಲಿ ಎತ್ತರದ ಸ್ಥಾನವನ್ನು ನೀಡಿ ದೇವರಂತೆ ಕಾಣುತ್ತಾರೆ, ಅದನ್ನು ಶಿಕ್ಷಕರು ಉಳಿಸಿಕೊಳ್ಳಬೇಕು. ‘ವಿದ್ಯಾದಾನಂ ಸರ್ವದಾನ ಪ್ರಧಾನಂ’ ಎಂಬ ಸಂಸ್ಕøತದ ವಾಕ್ಯವು ವಿದ್ಯಾದಾನ ಎಲ್ಲಾದಾನಗಳಲ್ಲಿಯೇ ಶ್ರೇಷ್ಠವಾದ ದಾನ ಎಂದು ತಿಳಿಸಿದರು.
ಇಂದಿನ ಕಾರ್ಯಕ್ರಮದಲ್ಲಿ 52 ಮಂದಿಯನ್ನು ಶ್ರೇಷ್ಠ ಶಿಕ್ಷಕರೆಂದು ಗುರುತಿಸಲಾಗಿದ್ದು, ಅವರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಲಾಗಿದೆ. ಇತರ ಎಲ್ಲಾ ಶಿಕ್ಷಕರು ತಾವು ಸಹ ಈ ರೀತಿಯಾದ ಸಾಧನೆಯನ್ನು ತೋರಿ ಶಿಕ್ಷಕ ವೃತ್ತಿಯನ್ನು ಮೆರೆಯಬೇಕೆಂದು ಕರೆ ನೀಡಿದರು.
ಕೆಲವು ಶಿಕ್ಷಕರು ದಡ್ಡ ಶಿಕಾಮಣಿ ಎಂದು ಕರೆಯುವುದುಂಟು, ಯಾರೂ ಹುಟ್ಟುತ್ತಲೆ ದಡ್ಡರಲ್ಲ, ಕಲಿಯುವ ವಯಸ್ಸಿನಲ್ಲಿ ಉತ್ತಮವಾದ ವಾತಾವರಣ ಮತ್ತು ಒಳ್ಳೆಯ ಶಿಕ್ಷಣ ನೀಡಬೇಕು, ಇದು ಶಿಕ್ಷಕರಿಂದ ಮಾತ್ರ ಸಾಧ್ಯ. ಅಂತಹ ಮಕ್ಕಳನ್ನು ದಡ್ಡ ಶಿಕಾಮಣಿ ಎಂಬ ಪದ ಬಳಸಿ ಕರೆಯುವ ಬದಲಾಗಿ ಅವರನ್ನು ತಿದ್ದುವಂತಹ ಕೆಲಸಕ್ಕೆ ಮುಂದಾಗಬೇಕು, ಆಗ ಮಾತ್ರ ಶಿಕ್ಷಕನಾಗಿ ಸಾರ್ಥಕನಾಗಲು ಸಾಧ್ಯ ಎಂದರು.
ಶಿಕ್ಷಕರು ಕೇವಲ ಪಠ್ಯಪುಸ್ತಕದಲ್ಲಿರುವುದನ್ನು ಮಾತ್ರ ಬೋದಿಸಿದರೆ ಸಾಲದು, ಮಕ್ಕಳಿಗೆ ಸಮಾಜದ ಅರಿವು ಮೂಡಿಸುಂತಹ ಹಲವು ವಿಚಾರಗಳನ್ನು ತಿಳಿಸಿ ಸಮಾಜದಲ್ಲಿ ಸದೃಢರನ್ನಾಗಿಸಬೇಕು.
ಈ ಹಿಂದೆ ಶಿಕ್ಷಣ ಸಚಿವನಾಗಿದ್ದಾಗ, 1,10,000 ಮಂದಿ ಶಿಕ್ಷಕರನ್ನು ಯಾವುದೇ ರೀತಿಯಲ್ಲಿ ಲಂಚವನ್ನು ಸ್ವೀಕರಿಸದೇ ನೇಮಕ ಮಾಡಿದ್ದೆ. ಈಗ ಖಾಲಿ ಇರುವ 28 ಸಾವಿರ ಶಿಕ್ಷಕರ ನೇಮಾಕಾತಿಯನ್ನು ಶೀಘ್ರವಾಗಿ ಮಾಡುತ್ತೇನೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಶಿಕ್ಷಕರು ಮನೆ ಮನೆಗೆ ಹೋಗಿ ಮಕ್ಕಳನ್ನು ಕರೆತಂದು ಶಿಕ್ಷಣ ನೀಡಿ ಬುದ್ಧಿವಂತರನ್ನಾಗಿಸಬೇಕೆಂದು ಕರೆ ನೀಡಿದರು.
ಇದಕ್ಕೂ ಮುನ್ನ 52 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಶಿಕ್ಷಣ ಸಚಿವ ಕಿಮ್ಮಾನೆ ರತ್ನಾಕರ್,ಜಿ.ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಹೆಚ್.ಸಿ.ಮಹದೇವಪ್ಪ, ವಿಧಾನ ಪರಿಷತ್ ಸದಸ್ಯರುಗಳಾದ ಗೋ.ಮಧುಸೂಧನ್, ಮರಿಸಿದ್ದೇಗೌಡ, ಧರ್ಮಸೇನ, ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಹಲುವ ಗಣ್ಯರು ಉಪಸ್ಥಿತರಿದ್ದರು.

No comments:
Post a Comment