ಮೈಸೂರು ನಗರದ ಸಾಮೂಹಿಕ ಗಣಪತಿ ವಿಸರ್ಜನೆ- ಸಂಬಂಧ ಬಂದೋಬಸ್ತ್ .
ದಿನಾಂಕ: 04/09/2014 ರಂದು ಮದ್ಯಾಹ್ನ 1-30 ಗಂಟೆಯಿಂದ ರಾತ್ರಿ 7-00 ಗಂಟೆಯ ವರೆಗೆ ಮೈಸೂರು ನಗರದಲ್ಲಿ ಸಮೂಹಿಕ ಗಣಪತಿ ವಿಸರ್ಜನೆ ಕಾರ್ಯಕ್ರಮವು ಬಹಳ ವಿಜೃಂಭಣೆಯಿಂದ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಭಾಗವಹಿಸುವವರಿದ್ದಾರೆ. ಈ ಸಮಯದಲ್ಲಿ ಯಾವುದೇ ರೀತಿಯ ಕಾನೂನು ಸುವ್ಯವಸ್ಥೆ ಸಮಸ್ಯೆಯು ಎದುರಾಗದಂತೆ ಮೈಸೂರು ನಗರ ಪೊಲೀಸರು ಎಲ್ಲಾ ರೀತಿಯ ಸುರಕ್ಷತಾ ಕ್ರಮಗಳನ್ನು ಕೈಗೊಂಡಿದ್ದು, ಬಂದೋಬಸ್ತ್ ವ್ಯವಸ್ಥೆಯನ್ನು ಮಾಡಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತರÀ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮೂಹಿಕ ಗಣಪತಿ ವಿಸರ್ಜನೆ ಕಾರ್ಯಕ್ರಮದಲ್ಲಿ ಮೆರವಣಿಗೆಯು ಈರನಗೆರೆ ಗಣೇಶ ದೇವಸ್ಥಾನದಿಂದ ಪ್ರಾರಂಭವಾಗಿ ಅಶೋಕರಸ್ತೆ, ದೊಡ್ಡ ಗಡಿಯಾರ, ದೇವರಾಜ ಅರಸು ರಸ್ತೆ, ಜೆ.ಎಲ್.ಬಿ. ರಸ್ತೆ, ರಾಮಸ್ವಾಮಿ ವೃತ್ತ, 100 ಅಡಿ ರಸ್ತೆ, ಪಾಠಶಾಲಾ ವೃತ್ತ ದಿಂದ ಗನ್‍ಹೌಸ್ ವೃತ್ತದಲ್ಲಿ ಮೆರವಣಿಗೆಯು ಮುಕ್ತಾಯಗೊಳ್ಳಲಿದ್ದು, ನಂತರ ಶ್ರೀರಂಗಪಟ್ಟಣಕ್ಕೆ ಹೋಗಿ ಗಣಪತಿಯನ್ನು ವಿಸರ್ಜಿಸಲಾಗುವುದು ಎಂದು ಹೇಳಿದ್ದಾರೆ.
ಈ ಕಾರ್ಯಕ್ರಮದ ಬಂದೋಬಸ್ತ್ ಉಸ್ತುವಾರಿಯನ್ನು ಮೈಸೂರು ನಗರದ ಪೊಲೀಸ್ ಆಯುಕ್ತರವರೇ ವಹಿಸಿಕೊಂಡಿದ್ದು, ಬಂದೋಬಸ್ತ್‍ಗೆ 4 ಡಿ.ಸಿ.ಪಿ, 7 ಎ.ಸಿ.ಪಿ. , 25 ಪಿ.ಐ, 40 ಪಿ.ಎಸ್.ಐ, 250 ಜನ ಹೆಚ್.ಸಿ/ಪಿ.ಸಿ.ಗಳನ್ನು ನಿಯೋಜನೆ ಮಾಡಿಕೊಳ್ಳಲಾಗಿದೆ. ಇಷ್ಟೇ ಅಲ್ಲದೇ 4 ಸಿ.ಎ.ಆರ್ ತುಕ್ಕಡಿಗಳು, 4 ಕೆ.ಎಸ್.ಆರ್.ಪಿ. ತುಕ್ಕಡಿಗಳು, 15 ಕುದುರೆಗಳು, 30 ಸಿಬ್ಬಂದಿಗಳ ಕಮಾಂಡೋ ಪಡೆ ಹಾಗೂ 200 ಮೀಸಲು ಪೊಲೀಸ್ ಸಿಬ್ಬಂದಿಗಳನ್ನು ನಿಯೋಜನೆ ಮಾಡಲಾಗಿದೆ.
ಈ ಮೆರವಣಿಗೆ ಮಾರ್ಗದಲ್ಲಿ ಅಹಿತಕರ ಘಟನೆಗಳನ್ನು ತಡೆಯಲು ಮತ್ತು ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಮಾರ್ಗದುದ್ದಕ್ಕೂ ಸಿ.ಸಿ. ಕ್ಯಾಮರಾಗಳನ್ನು ಅಳವಡಿಸಿದ್ದು, ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗುವವರ ವಿರುದ್ದ ಕಾನೂನಿನ ರೀತ್ಯಾ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ಆದ್ದರಿಂದ ಸಾರ್ವಜನಿಕರು ಸಾಮೂಹಿಕ ಗಣಪತಿ ವಿಸರ್ಜನೆ ಮೆರವಣಿಗೆಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳಿಗೆ ಅವಕಾಶ ನೀಡದೇ ಉತ್ತಮ ರೀತಿಯಲ್ಲಿ ಮೆರವಣಿಗೆಯು ನಡೆಯುವಂತೆ ಸಹಕರಿಸುವಂತೆ ಪೊಲೀಸ್ ಆಯುಕ್ತ ಎಂ.ಎ.ಸಲೀಮ್ ಮನವಿ ಮಾಡಿರುತ್ತಾರೆ ಎಂದು ತಿಳಿಸಿದ್ದಾರೆ.

No comments:
Post a Comment