ದಸರಾ ಚಲನಚಿತ್ರೋತ್ಸವಕ್ಕೆ ತಾರೆಯರ ದಂಡು
ಮೈಸೂರು, ಸೆಪ್ಟೆಂಬರ್ 23 .ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಕ ಕಾರ್ಯಕ್ರಮವಾದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸೆಪ್ಟೆಂಬರ್ 25 ರಂದು ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಯರ ದಂಡು ಆಗಮಿಸಲಿದೆ.
ಕನ್ನಡ ಚಲನ ಚಿತ್ರದ ಕನಸುಗಾರನೆÉಂದೇ ಹೆಸರುವಾಸಿಯಾಗಿರು ಕ್ರೇಜಿ ಸ್ಟಾರ್ ರವಿಚಂದ್ರನ್, ದುನಿಯಾ ಚಲನ ಚಿತ್ರದ ಖ್ಯಾತಿಯ ವಿಜಯ್, ಹಿರಿಯ ಕಲಾವಿದರಾದ ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಪ್ರಣಯರಾಜ ಶ್ರೀನಾಥ್, ಜಯಮಾಲಾ, ಖ್ಯಾತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಟ.ಎನ್.ಸೀತರಾಮ್, ಕೆ.ಶಿವರುದ್ರಯ್ಯ, ಕಲಾವಿದರಾದ ತಾರ, ಶ್ರೀಮುರಳಿ, ಶರಣ್, ಚೆನ್ನೇಗ್ವಾಡ, ರಾಗಿಣಿ, ರೂಪಿಕಾ, ಸಾಧುಕೋಕಿಲ, ಪೂಜಾ ಗಾಂಧಿ, ಮೇಘನಾ ರಾಜ್, ಭವ್ಯ, ಸುಂದರ್‍ರಾಜ್, ಪ್ರಮೀಳಾ ಜೋಷಾಯ್, ಮಾಸ್ಟರ್ ಚಿರಂಜೀವಿ, ಹಾಗೂ ಮುಂತಾದವರು ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಹಿರಿಯ ಕಲಾವಿದೆಯಾದ ಭಾರತಿ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷ ಪೂರ್ಣಗೊಂಡ ಹಿನ್ನಲೆಯಲ್ಲಿ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿ ಗೌರವಿಸಲಾಗವುದು.
ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಗೃಹ ಕಚೇರಿಯಲ್ಲಿ ಇಂದು ದಸರಾ ಚಲನಚಿತ್ರ ಉಪ ಸಮಿತಿಯ ದಸರಾ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದ ಮಡಿಕೆಪತ್ರವನ್ನು ಬಿಡುಗಡೆ ಮಾಡಿದರು. ದಸರಾ ಚಲನಚಿತ್ರ ಉಪ ಸಮಿತಿಯ ಅಧ್ಯಕ್ಷರಾದ ಕೆ.ಮಹಮ್ಮದ್ ಅಕ್ಬರ್ ಅಲೀಂ, ಕಾರ್ಯಧ್ಯಕ್ಷರಾದ ಎ.ಆರ್.ಪ್ರಕಾಶ್, ಕಾರ್ಯದರ್ಶಿ ಕೆ.ಕುಬೇರಪ್ಪ, ಸದಸ್ಯರಾದ ಎನ್.ನೀಲಕಂಠ ಹಾಗೂ ಬೋರಪ್ಪ ಈ ಸಂದರ್ಭದಲ್ಲಿ ಭಾಗವಹಿಸಿದರು.

No comments:
Post a Comment