Wednesday, 24 September 2014

ವಿಶೇಷ ಲೇಖನ : ಎನ್.ಕೃಷ್ಣೇಗೌಡ ಪಾಂಡವಪುರ.
ಪಾಂಡವಪುರ : ಪಾಂಡವಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಪತ್ರಿಕೆಗಳನ್ನು ಪ್ರದರ್ಶನಕ್ಕೀಡಲಾಗಿತ್ತು.
ಗಾಂಧೀಜಿ ಅವರ ಅಪರೂಪದ ಕೃತಿಗಳಾದ 1942ರ `ಹರಿಜನ’ ಪತ್ರಿಕೆ, 1934ರ `ತಾಯಿನಾಡು’ ಪತ್ರಿಕೆ, 1949ರಲ್ಲಿನ `ಜನವಾಣಿ’ ಪತ್ರಿಕೆ, 1946ರ ವಯಸ್ಕರ ಶಿಕ್ಷಣ ಸಮಿತಿಯ ಮೊದಲ ಸಂಚಿಕೆ `ಪುಸ್ತಕ ಪ್ರಪಂಚ’, 1907ರ `ಎಪಿಫಾನಿ’ ಇಂಗ್ಲಿಷ್ ಪತ್ರಿಕೆ, 1917ರ `ಕರ್ನಾಟಕ ನಂದಿನಿ’ ಪತ್ರಿಕೆ, 1917ರ `ಪರಮಾರ್ಥ’ ಮಾಸ ಪತ್ರಿಕೆ, ಗಾಂಧೀಜಿ ಅವರ ಅಪರೂಪದ ಕೃತಿಯಾಧಾರಿತ 1921ರ `ಯಂಗ್ ಇಂಡಿಯಾ’ ಪತ್ರಿಕೆ, 1923ರ `ಜಯಕರ್ನಾಟಕ’ ಮಾಸ ಪತ್ರಿಕೆ, 1924ರ ಕುಸುಮಾಂಜಲಿ ಗ್ರಂಥಮಾಲೆಯ `ಭಗೀರಥ’ ಮಕ್ಕಳ ಮಾಸಿಕ ಪತ್ರಿಕೆ, 1925ರ ಕನ್ನಡ ಸಹಕಾರಿ ಶಿಕ್ಷಣದ `ಶಿಕ್ಷಣ ಪುರವಾಣಿ’ ಪತ್ರಿಕೆ, 1930ರ `ಪ್ರಾಣಿದಯ’ ಮಾಸ ಪತ್ರಿಕೆ, 1934ರ `ಪ್ರಬುದ್ಧ ಕರ್ನಾಟಕ’ ಸಾಹಿತ್ಯ ಪತ್ರಿಕೆ, 1938 ಹಾಗೂ 1944ರ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿತ `ಕನ್ನಡ ನುಡಿ’ ಪತ್ರಿಕೆ, 1946ರ `ಮೈಸೂರು ಪತ್ರಿಕೆ’ಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
1925ರ `ಆರೋಗ್ಯ ಚಂದ್ರಿಕೆ’ ಮಾಸ ಪತ್ರಿಕೆ, 1927ರ `ಪರಶುರಾಮ’ ಸಚಿತ್ರ ಮಾಸ ಪತ್ರಿಕೆ, 1929ರ `ದಿ ಮೈಸೂರು ಎಕಾನಮಿಕ್ ಜರ್ನಲ್’ ಪತ್ರಿಕೆ, 1931ರ `ಕರ್ತವ್ಯ’ ಸಚಿತ್ರ ಮಾಸ ಪತ್ರಿಕೆ, 1932ರ `ಅರ್ಥ ಸಾಧಕ’ ಪತ್ರಿಕೆ, 1936ರ `ಶ್ರೀ ಪೂರ್ಣ ಬೋಧ’ ಮಾಸ ಪತ್ರಿಕೆ, 1938ರ `ವಿದ್ಯಾದಾಯಿನಿ’ ಮಾಸ ಪತ್ರಿಕೆ, 1950ರ ದೇವುಡು ಸಂಪಾದಕತ್ವದ `ನಮ್ಮ ಪುಸ್ತಕ’ ಮಾಸ ಪತ್ರಿಕೆ, 1951ರ `ಬಾಲಮಿತ್ರ’ ಪತ್ರಿಕೆ ಮೊದಲ ಸಂಪುಟದ 4ನೇ ಸಂಚಿಕೆ, 1953ರ `ವಿಶ್ವಕರ್ಮ’ ಮಾಸ ಪತ್ರಿಕೆ, 1954ರ ಧರ್ಮರಾಜ್ಯ’ ಮಾಸ ಪತ್ರಿಕೆ, 1957ರ `ನವೀನ ಶಿಕ್ಷಕ’ ಮಾಸ ಪತ್ರಿಕೆ, 1960ರ `ಲೈಫ್’ ಪತ್ರಿಕೆ ಮಾಕ್ಸಿನ್ ಇಂಟರ್‍ನ್ಯಾಷನಲ್ ಸಂಪುಟಗಳು, 1969ರ ಜಿ.ಬಿ.ಜೋಶಿಯವರ `ಮನ್ವಂತರ’ ಸಾಹಿತ್ಯ ಪತ್ರಿಕೆ, 1970ರ `ಸಾವಧಾನ’ ಪಾಕ್ಷಿಕ ಪತ್ರಿಕೆ, 1976ರ `ತರಳಬಾಳು’ ಪತ್ರಿಕೆ ಹಾಗೂ `ರಾಷ್ಟ್ರೋತ್ಥಾನ ವಾರ್ತಾ’ ಪತ್ರಿಕೆ, 1981ರ ಯು.ಆರ್.ಅನಂತಮೂರ್ತಿ ಅವರ `ರುಜುವಾತು’ ಸಾಹಿತ್ಯ ಪತ್ರಿಕೆ, 1983ರ ವಯಸ್ಕರ ಶಿಕ್ಷಣ ಸಮಿತಿಯ `ಬೆಳಕು’ ಪತ್ರಿಕೆಗಳಿವೆ. 
ದಿನಾಂಕ 4. 11. 1967ರಲ್ಲಿ ಪ್ರಾರಂಭಗೊಂಡ `ಕನ್ನಡ ಪ್ರಭ’ ದಿನಪತ್ರಿಕೆಯ ಮೊದಲ ಸಂಚಿಕೆ, ಲೋಕ ಕಲ್ಯಾಣ ಟ್ರಸ್ಟ್‍ನ ಪ್ರಕಟಿತ 1959ರ `ಕರ್ಮವೀರ’ ದೀಪಾವಳಿ ವಿಶೇಷ ಸಂಚಿಕೆ, 1962ರ `ಕಸ್ತೂರಿ’ ಮಾಸ ಪತ್ರಿಕೆ, 1964ರ `ಕರ್ಮವೀರ’ ವಾರ ಪತ್ರಿಕೆ, `ಪ್ರಜಾವಾಣಿ ಪತ್ರಿಕೆಯ ಪ್ರಕಟಿತ 1965ರ `ಸುಧಾ’ ಹಾಗೂ 1968ರ `ಮಯೂರ’ ಮೊದಲ ಸಂಚಿಕೆಗಳು, ಮೈಸೂರಿನ ಅರಸ ಜಯಚಾಮರಾಜ ಒಡೆಯರ್ ನಿಧನರಾದ ಸಂದರ್ಭದ 1974ರ `ಪ್ರಜಾವಾಣಿ’ ದಿನಪತ್ರಿಕೆಗಳನ್ನು ಪ್ರದರ್ಶನಕ್ಕೀಟ್ಟಿದ್ದಾರೆ ಅಂಕೇಗೌಡರು. ಜತೆಗೆ ರಾಷ್ಟ್ರಕವಿ ಕುವೆಂಪುರವರ ನಿಧನರಾದ ಸಂದರ್ಭದಲ್ಲಿನ ಕೆ.ಶಾಮರಾವ್ ಸಂಪಾದಕತ್ವದ `ಸಂಯುಕ್ತ ಕರ್ನಾಟಕ’ ದಿನಪತ್ರಿಕೆ, `ಉದಯವಾಣಿ’, `ಕನ್ನಡ ಪ್ರಭ’, `ಪ್ರಜಾವಾಣಿ’ ಇತರೆ ಪತ್ರಿಕೆಗಳು ಇವೆ.
ತಮ್ಮ ಪ್ರಗತಿಪರ ಬರವಣಿಗೆಗಳ ಮೂಲಕ ಪತ್ರಿಕಾ ರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿದ ಪಿ.ಲಂಕೇಶ್ ಅವರ `ಲಂಕೇಶ್ ಪತ್ರಿಕೆ’, ರವಿಬೆಳಗೆರೆ ಅವರ `ಹಾಯ್‍ಬೆಂಗಳೂರು’, ಕೆ.ಬಿ.ಗಣಪತಿ ಸಂಪಾದಕತ್ವದ 1982ರ `ಸ್ಟಾರ್ ಆಫ್ ಮೈಸೂರು’ ಇಂಗ್ಲಿಷ್ ಪತ್ರಿಕೆ ಹಾಗೂ ರಾಜಶೇಖರ ಕೋಟಿ ಸಂಪಾದಕತ್ವದ 1996ರ `ಆಂದೋಲನ’ ಮಂಡ್ಯ ಆವೃತ್ತಿ ಪತ್ರಿಕೆ, ಹಾಗೂ  ಮಂಡ್ಯದ `ಕನ್ನಂಬಾಡಿ’, `ಶಿಂಷಾಪ್ರಭ’, `ನುಡಿ ಭಾರತಿ’, `ಪೌರವಾಣಿ’, `ಪ್ರಜಾವಾರ್ತೆ’, `ಉದಯಕಾಲ’, `ಮಂಡ್ಯ ಸುದ್ದಿ’, `ಮಧುರ ಮಂಡ್ಯ’, `ಮಂಡ್ಯ ಮಾತು’, `ಸ್ಟಾರ್ ಆಫ್ ಮಂಡ್ಯ’, `ಮಂಡ್ಯ ಮಾರ್ನಿಂಗ್’, `ಮಂಡ್ಯ ಪ್ರೆಸ್’, `ಸಂಜೆ ಸಮಾಚಾರ’, `ಸಂಜೆ ಇಂಪು’, `ಕೆಮ್ಮುಗಿಲು’, `ಸಂಜೆಮಿತ್ರ’, `ಜನೋದಯ’, `ಮಂಡ್ಯ ಎಕ್ಸ್‍ಪ್ರೆಸ್’, `ಕೊಳಲು’, ಲಿಂಗಣ್ಣ ಬಂಧುಕಾರ್ ಸಂಪಾದಕತ್ವದ `ಗಾಂಧಿ ಭವನ ವಾರ್ತೆ’ ಪತ್ರಿಕೆಗಳು ಸೇರಿದಂತೆ ಸಾವಿರಾರು ಪತ್ರಿಕೆಗಳು ಪ್ರದರ್ಶನಗೊಂಡವು.

No comments:

Post a Comment