Friday, 12 September 2014



ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಸಮಗ್ರವಾದ ಅಭಿವೃಧ್ಧಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ವಿಶೇಷವಾದ ಕಾರ್ಯಕ್ರಮಗಳನ್ನು ಜಾರಿಗೊಳಿಸಿವೆ. ಜನರು ರಾಜಕೀಯವನ್ನು ಬದಿಗಿತ್ತು ಗ್ರಾಮಾಭಿವೃದ್ಧಿಯ ಕಡೆಗೆ ಗಮನ ಹರಿಸಿ ಒಂದಾಗಿ ದುಡಿಯಲು ಮನಸ್ಸು ಮಾಡಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಅನುಸೂಯ ಗಂಗಾಧರ್ ಹೇಳಿದರು.
ಅವರು ತಾಲೂಕಿನ ಬಳ್ಳೇಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚೌಡೇನಹಳ್ಳೀ ಗ್ರಾಮದಲ್ಲಿ ತಮ್ಮ ಜಿಲ್ಲಾ ಪಂಚಾಯಿತಿ ವಿಶೇಷ ಅನುದಾನ 23ಲಕ್ಷರೂಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಕುಡಿಯುವ ನೀರಿನ ಮೇಜರ್ ವಾಟರ್ ಸಫ್ಲೆ ಟ್ಯಾಂಕಿನ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿ ಮಾತನಾಡಿದರು.
ಗ್ರಾಮಗಳ ಚಿತ್ರಣವನ್ನೇ ಸಂಪೂರ್ಣವಾಗಿ ಬದಲಾಯಿಸಿ ವೆಚ್ಚದ ಮಿತಿಯಿಲ್ಲದಷ್ಟು ಕಾಮಗಾರಿಯನ್ನು ಬಡವ-ಶ್ರೀಮಂತ ಎಂಬ ಬೇಧ-ಭಾವವಿಲ್ಲದಂತೆ ಮಾಡಿಸಿಕೊಳ್ಳಲು ಕೇಂದ್ರ ಸಕಾರವು ಜಾರಿಗೆ ತಂದಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯು ವರದಾನವಾಗಿದೆ. ಗ್ರಾಮೀಣ ಜನರು ರಾಜಕೀಯವನ್ನು ಬದಿಗಿತ್ತು ತಮ್ಮ ಗ್ರಾಮಗಳ ಅಭಿವೃಧ್ಧಿಗೆ ಅತೀ ಅವಶ್ಯಕವಾಗಿ ಆಗಲೇಕೇಕಾಗಿರುವ ಕೆಲಸ ಕಾರ್ಯಗಳ ಎಸ್ಟಿಮೇಟ್ ತಯಾರಿಸಿ ಗ್ರಾಮ ಪಂಚಾಯಿತಿಯ ಮೂಲಕ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಮಾಡಿಸಿಕೊಳ್ಳಬಹುದು ಎಂದು ಹೇಳಿದ ಅನುಸೂಯ ಜನಪ್ರತಿನಿಧಿಗಳು ಆಯ್ಕೆಯಾಗುವವರೆಗೆ ಮಾತ್ರ ಪಕ್ಷ. ಚುನಾವಣೆಗಳ ನಂತರ ರಾಜಕೀಯವನ್ನು ಒಂದು ಪಕ್ಕಕ್ಕಿಟ್ಟು ಗ್ರಾಮಾಭಿವೃಧ್ಧಿಯ ಕಡೆಗೆ ಆಲೋಚಿಸಿ ಕೆಲಸ ಮಾಡಬೇಕು. ಗ್ರಾಮದ ಪ್ರತೀ ಕುಟುಂಬದ ಜನರು ಗ್ರಾಮ ಪಂಚಾಯಿತಿಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡು ಕಡ್ಡಾಯವಾಗಿ ಜಾಬ್ ಕಾರ್ಡನ್ನು ಪಡೆದುಕೊಂಡು ಬಡವ- ಶ್ರೀಮಂತ ಎಂಬ ಬೇಧ-ಭಾವವಿಲ್ಲದಂತೆ ಲಕ್ಷಾಂತರ ರೂಗಳ ಕೆಲಸವನ್ನು ಮಾಡಿಸಿಕೊಳ್ಳಿ ಎಂದು ಕರೆ ನೀಡಿದರು.
ಬಳ್ಳೇಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಲಕ್ಷ್ಮೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ತಾಲೂಕು ಪಂಚಾಯಿತಿ ಮಾಜಿಅಧ್ಯಕ್ಷೆ ಮಂಜುಳಾ ಮಂಜುನಾಥ್, ಮುಖಂಡರಾದ ಸಿ.ಆರ್.ನಾಗರಾಜು, ಪಾಪೇಗೌಡ, ಸುರೇಶ್, ಮುರುಳಿ, ದಿನೇಶ್, ಎನ್.ಟಿ.ನಾಗರಾಜು, ಶಂಕರೇಗೌಡ, ತಮ್ಮಣ್ಣೇಗೌಡ, ವೆಂಕಟರಾಮೇಗೌಡ, ಸ್ವಾಮೀಗೌಡ, ಪ್ರದೀಪ್, ಪಿಡಿಓ ಸಿದ್ಧರಾಜು, ಪ್ರಥಮದರ್ಜೆ ಗುತ್ತಿಗೆದಾರ ಬಿ.ಈ.ದಿನೇಶ್ ಮತ್ತಿತರರು ಭಾಗವಹಿಸಿದ್ದರು.
ಯುವಮುಖಂಡ ಸಿ.ಪಿ.ರಘು ಸ್ವಾಗತಿಸಿದರು, ಪ್ರದೀಪ್ ವಂದಿಸಿದರು. ಯೋಗೇಂದ್ರ ಮತ್ತು ಚಂದ್ರೇಗೌಡ ಕಾರ್ಯಕ್ರಮ ನಿರೂಪಿಸಿದರು. ನಾರ್ಗೋನಹಳ್ಳಿ ರವಿ ಪ್ರಾರ್ಥಿಸಿದರು.

 ಭಾರತೀನಗರ ಸಮೀಪದ ಕೊಕ್ಕರೆಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಖೋಖೋ ಪಂದ್ಯಾವಳಿ : ಬೆಳ್ಳೂರು ಸರ್ಕಾರಿ ಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ.

ಭಾರತೀನಗರ.ಸೆ.12- ಪ್ರಸಕ್ತ ಸಾಲಿನ ಜಿಲ್ಲಾ ಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಇಲ್ಲಿಗೆ ಸಮೀಪದ ಕೊಕ್ಕರೆಬೆಳ್ಳೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
    ಪ್ರಸಕ್ತ ಸಾಲಿನ ಜಿಲ್ಲಾಮಟ್ಟದ ಪೈಕಾ ಗ್ರಾಮೀಣ ಕ್ರೀಡಾಕೂಟ ಹಾಗೂ ಸಾರ್ವಜನಿಕ ಕ್ರೀಡಾಕೂಟ ಮಂಡ್ಯ ಇವರ ಸಂಯುಕ್ತಾಶ್ರಯದಲ್ಲಿ ನಡೆದ 14- 17 ವಯೋಮಿತಿಯ ಜಿಲ್ಲಾಮಟ್ಟದ ಖೋಖೋ ಪಂದ್ಯಾವಳಿಯಲ್ಲಿ ಉತ್ತಮ ಆಟದೊಂದಿಗೆ ಪ್ರಥಮ ಸ್ಥಾನಗಳಿಸಿ ರಾಜ್ಯಮಟ್ಟಕ್ಕೆ ಹಾಗೂ ವಿಭಾಗೀಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
  ಬಾಲಕರ ತಂಡ ತೃತೀಯ ಸ್ಥಾನ ಪಡೆದು ತಂಡದ ಮಂದಿ ಕ್ರೀಡಾಪಟುಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  ಕ್ರೀಡಾಪಟುಗಳನ್ನು ಹಾಗೂ ದೈಹಿಕ ಶಿಕ್ಷಣ ಶಿಕ್ಷಕರಾದ ಶಿವಲಿಂಗಯ್ಯ ಹಾಗೂ ಬಾಲಸುಭ್ರಮಣ್ಯರವರನ್ನು ಶಾಲೆಯ ಮುಖ್ಯಶಿಕ್ಷಕರು, ಎಸ್.ಡಿ.ಎಂ.ಸಿ ಅಧ್ಯಕ್ಷರು, ಸಹಶಿಕ್ಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ.
 ========================
 
  ಫೋಟೋ.12ಬಿಟಿಜಿ2- ಭಾರತೀನಗರದ ಮಂಡ್ಯ ರಸ್ತೆಯಲ್ಲಿ ಶ್ರೀ ಚರ್ತುಭುಜ ಗೆಳೆಯರ ಬಳಗ  ಪ್ರತಿಷ್ಟಾಪಿಸಲಾಗಿರುವ ಕೆ.ಎಂ.ದೊಡ್ಡಿಯಲ್ಲೇ ಅತೀ ಎತ್ತರದ ಗಣಪತಿ ಮೂರ್ತಿಗೆ ಶಾಸಕ ಡಿ.ಸಿ.ತಮ್ಮಣ್ಣ ಆಗಮಿಸಿ ಪೂಜೆಸಲ್ಲಿಸಿದರು.

   ಭಾರತೀನಗರ.ಸೆ.12- ಇಲ್ಲಿನ ಮಂಡ್ಯ ರಸ್ತೆಯಲ್ಲಿ  ಶ್ರೀ ಚರ್ತುಭುಜ  ಗೆಳೆಯರ ಬಳಗ  ಪ್ರತಿಷ್ಟಾಪಿಸಲಾಗಿರುವ ಕೆ.ಎಂ.ದೊಡ್ಡಿಯಲ್ಲೇ ಅತೀ ಎತ್ತರದ ಗಣಪತಿ ಮೂರ್ತಿಗೆ ಶಾಸಕ ಡಿ.ಸಿ.ತಮ್ಮಣ್ಣ ಆಗಮಿಸಿ ಪೂಜೆ ಸಲ್ಲಿಸಿದರು.
    ನಂತರ ಮಾತನಾಡಿದ ಅವರು, ಜಾನಪದ ಹಾಗೂ ಸಂಸ್ಕøತಿಯನ್ನು ಪ್ರತಿಬಿಂಬಿಸುವ ದೇವರ ಉತ್ಸವಗಳು ಹೆಚ್ಚಾಗಿ ನಡೆಯಬೇಕು. ಮನಸ್ಸಿನ ನೆಮ್ಮದಿಗೆ ದೇವರಿಗೆ ಪೂಜೆಸಲ್ಲಿಸುವುದು ಅತ್ಯವಶ್ಯಕವಾಗಿದೆ ಎಂದರು.
  ಪ್ರತಿಯೊಂದು ಕಾಲದಲ್ಲಿ ನಡೆಯುವ ಹಬ್ಬ ತನ್ನದೆಯಾದ ಸಂಪ್ರದಾಯ ಮತ್ತು ಇತಿಹಾಸವನ್ನು ಹೊಂದಿದೆ. ಒಡೆದ ಮನಸ್ಸುಗಳ ಹೊಂದುಗೂಡಿಕೆಗೆ ಇಂತಹ ಉತ್ಸವಗಳು ಅತ್ಯವಶ್ಯಕ ಎಂದರು.
    ಇದೇ ಸಂದರ್ಭದಲ್ಲಿ ಅಣ್ಣೂರು ವಿನಯ್,  ಉಮೇಶ್, ನಂದೀಶ, ಪ್ರಶಾಂತ್, ವರುಣ್, ದೀಪು, ಅನಿಲ್, ರಮೇಶ್ ಸೇರಿದಂತೆ ಇತರರಿದ್ದರು.
==============================

No comments:

Post a Comment