ಕೃಷ್ಣರಾಜಪೇಟೆ. ವಿದ್ಯಾರ್ಥಿಗಳು ಏಕಾಗ್ರತೆಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುವ ಮೂಲಕ ರಾಜ್ಯ ಮತ್ತು ದೇಶಧ ಕೀರ್ತಿಯನ್ನು ಬೆಳಗುವ ಅತ್ಯುತ್ತಮವಾದ ಕ್ರೀಡಾಪಟುಗಳಾಗಿ ಹೊರಹೊಮ್ಮಬೇಕು ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷೆ ಪ್ರಭಾವತಿ ಕರೆ ನೀಡಿದರು.
ಅವರು ಇಂದು ಪಟ್ಟಣದ ನಾಲ್ವಡಿ ಕೃಷ್ಣರಾಜಒಡೆಯರ್ ಕ್ರೀಡಾಂಗಣದಲ್ಲಿ ನಡೆದ ತಾಲೂಕಿನ ವಿವಿಧ ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಕ್ರೀಡಾಪಟುಗಳಿಂದ ಧ್ವಜವಂಧನೆ ಸ್ವೀಕರಿಸಿ ಮಾತನಾಡಿದರು.
ಗ್ರಾಮೀಣ ಪ್ರದೇಶದಲ್ಲಿ ಕ್ರೀಡಾಂಗಣಗಳ ಕೊರತೆ ಹಾಗೂ ದೈಹಿಕ ಶಿಕ್ಷಕರ ಸೂಕ್ತವಾದ ಮಾರ್ಗದರ್ಶನವಿಲ್ಲದೇ ವಿದ್ಯಾರ್ಥಿಗಳು ಕ್ರೀಡಾ ಚಟುವಟಿಕೆಗಳಿಂದ ದೂರ ಸರಿಯುತ್ತಿದ್ದಾರೆ. ಸರ್ಕಾರವು ತಾಲೂಕಿಗೊಂದು ಕ್ರೀಡಾ ಶಾಲೆಗಳನ್ನು ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಅತ್ಯುತ್ತಮವಾದ ತರಭೇತಿಯನ್ನು ನೀಡಿ ಭವಿಷ್ಯದ ಭಾರತದ ಉತ್ತಮವಾದ ಕ್ರೀಡಾಪಟುಗಳನ್ನು ಸಜ್ಜುಗೊಳಿಸಿ ಮುನ್ನಡೆಸಲು ಮುಂದಾಗಬೇಕಿದೆ. ವಿದ್ಯಾರ್ಥಿಗಳು ಪಠ್ಯ ಚಟುವಟಿಕೆಗಳಿಗೆ ನೀಡುವಷ್ಟೇ ಮಹತ್ವವನ್ನು ಕ್ರೀಡಾ ಚಟುವಟಿಕೆಗಳಿಗೂ ನೀಡಿ ಉತ್ತಮವಾದ ಕ್ರೀಡಾ ಪಟುಗಳಾಗಿ ಹೊರಹೊಮ್ಮಿ ಸಾಧನೆ ಮಾಡಲು ಧೃಡವಾದ ಸಂಕಲ್ಪ ಮಾಡಬೇಕು. ಕ್ರೀಡೆಯಿಂದ ಮಾನಸಿಕ ಆರೋಗ್ಯ ಮತ್ತು ದೇಹದ ಸದೃಡತೆ ದೊರೆಯುವುದರಿಂದ ವಿದ್ಯಾರ್ಥಿಗಳು ತಮ್ಮ ವ್ಯಕ್ತಿತ್ವವನ್ನು ವಿಕಸಿತಗೊಳಿಸಿಕೊಂಡು ಶ್ರೇಷ್ಠ ಸಾಧನೆ ಮಾಡಿ ಜೀವನದಲ್ಲಿ ಯಶಸ್ಸುಗಳಿಸಬಹುದು. ಆದ್ದರಿಂದ ವಿದ್ಯಾರ್ಥಿಗಳು ಸೋಲು-ಗೆಲುವನ್ನು ಸಮನಾಗಿ ಸ್ವೀಕರಿಸಿ ಅರ್ಜುನನಂತೆ ಏಕಾಗ್ರತೆಯಿಂದ ಅಭ್ಯಾಸ ಮಾಡಿ ದೇಶದ ಕೀರ್ತಿಯನ್ನು ಬೆಳಗುವ ಕ್ರೀಡಾಪಟುಗಳಾಗುವ ಮೂಲಕ ಕ್ರೀಡಾಪಟುಗಳ ಕೊರತೆಯನ್ನು ನೀಗಬೇಕು ಎಂದು ಪ್ರಭಾವತಿ ಕರೆ ನೀಡಿದರು.
ಕ್ರೀಡಾಜ್ಯೋತಿಯನ್ನು ಸ್ವೀಕರಿಸಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಸರ್ವಮಂಗಳ ಮಾತನಾಡಿ ಪೋಷಕರು ಹೆಣ್ಣು-ಗಂಡು ಎಂದು ಬೇಧ-ಭಾವ ಮಾಡದೇ ಮಕ್ಕಳಲ್ಲಿ ಅವ್ಯಕ್ತವಾಗಿರುವ ಪ್ರತಿಭೆಗೆ ಅನುಸಾರವಾಗಿ ಸಾಧನೆ ಮಾಡಿ ಮುನ್ನಡೆಯಲು ಪ್ರೋತ್ಸಾಹ ನೀಡಬೇಕು. ಇಂದು ಹೆಣ್ಣು ಮಕ್ಕಳು ಗಂಡು ಮಕ್ಕಳಿಗೆ ಸರಿ ಸಮಾನರಾಗಿ ಎಲ್ಲಾ ಕ್ಷೇತ್ರಗಳಲ್ಲಿಯೂ ಶ್ರೇಷ್ಠ ಸಾಧನೆ ಮಾಡಿ ದೇಶವನ್ನು ಸುಭದ್ರವಾಗಿ ಕಟ್ಟುವ ಕಾಯಕದಲ್ಲಿ ತಮ್ಮನ್ನು ಸಮರ್ಪಿಸಿಕೊಂಡಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆಯಿಂದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸಿ ಶ್ರೇಷ್ಠ ಸಾಧನೆ ಮಾಡಲು ಪ್ರಾಮಾಣಿಕವಾದ ಪ್ರಯತ್ನವನ್ನು ಮಾಡಬೇಕು. ಕ್ರೀಡೆಯಿಂದ ಧೈಹಿಕ ಮತ್ತು ಮಾನಸಿಕ ಆರೋಗ್ಯವು ವೃಧ್ಧಿಯಾಗಿ ಸಾಧಿಸುವ ಛಲವು ಹೆಚ್ಚಾಗುವುದರಿಂದ ಸೋಲಿಗೆ ಹೆದರಿ ಫಲಾಯನವಾದವನ್ನು ಅನುಸರಿಸದೇ ಕಷ್ಠಪಟ್ಟು ಅಭ್ಯಾಸ ಮಾಡಿ ಉತ್ತಮವಾದ ಕ್ರೀಡಾಪಟುಗಳಾಗಿ ಹುಟ್ಟೂರಿನ ಕೀರ್ತಿಯನ್ನು ಬೆಳಗಲು ಮುಂದಾಗಬೇಕು ಎಂದು ಕರೆ ನೀಡಿದರು.
ಕ್ರೀಡಾಕೂಟದಲ್ಲಿ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಕ್ಷೇತ್ರಶಿಕ್ಷಣಾಧಿಕಾರಿ ಎಸ್.ಜವರೇಗೌಡ, ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ, ತಾಲೂಕು ಸರ್ಕಾರಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಪದ್ಮೇಶ್, ತಾಲೂಕು ಪ್ರೌಢಶಾಲಾ ಸಹಶಿಕ್ಷಕರ ಸಂಘದ ಅಧ್ಯಕ್ಷ ಹೆಚ್.ಎನ್.ಚಂದ್ರಶೇಖರ್, ತಾಲೂಕು ಪ್ರೌಢಶಾಲೆಗಳ ಮುಖ್ಯೋಪಾದ್ಯಾಯರ ಸಂಘದ ಅಧ್ಯಕ್ಷ ಕೆ.ರಾಮೇಗೌಡ, ಸಂಪನ್ಮೂಲ ಶಿಕ್ಷಕರಾದ ನಾಗೇಶ್, ಲೋಕೇಶ್, ಬಲರಾಮು, ತಾಲೂಕು ದೈಹಿಕ ಶಿಕ್ಷಣಾಧಿಕಾರಿ ಟಿ.ಎಸ್.ಮಂಜುನಾಥ ಮತ್ತಿತರರು ಭಾಗವಹಿಸಿದ್ದರು.
ಪಟ್ಟಣದ ಸಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಡಿ.ರಾಜೇಗೌಡ ಸ್ವಾಗತಿಸಿದರು. ಡಿ.ರಮೇಶ್ ವಂದಿಸಿದರು, ಹೆಚ್.ಎನ್.ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಪಾಂಡವಪುರ: ಶಿಕ್ಷಕರು ಪ್ರತಿ ನಿತ್ಯ ನಾಲ್ಕು ಗೋಡೆಗಳ ನಡೆವೆ ಕುಳಿತು ನೂರಾರು ವಿದ್ಯಾರ್ಥಿಗಳಿಗೆ ಪಾಠ-ಪ್ರವಚನ ಮಾಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರು ಮತ್ತು ಶಿಕ್ಷಕಿಯರು ಮತ್ತೋಮ್ಮೆ ತಮ್ಮ ವಿದ್ಯಾರ್ಥಿ ಜೀವನ ನೆನೆಪಿಸಿಕೊಂಡರು.
ಇದಕ್ಕೆ ಕಾರಣವಾದದ್ದು ಶಿಕ್ಷಕರ ಕ್ರೀಡಾಕೂಟ. ಹೌದು, ಶಿಕ್ಷಕರ ದಿನಾಚರಣೆ ಅಂಗವಾಗಿ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಪಟ್ಟಣದ ಪಾಂಡವ ಕ್ರೀಡಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ನೂರಾರು ಶಾಲೆಯ ಶಿಕ್ಷಕರು ಮತ್ತು ಶಿಕ್ಷಕಿಯರು ಭಾಗವಹಿಸಿ ಕ್ರೀಡಾಕೂಟವನ್ನು ಯಶಸ್ವಿಗೊಳಿಸಿದರು.
ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಚಂದ್ರಶೇಖರ್ ಕ್ರೀಡಾಕೂಟಕ್ಕೆ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ನಂತರ ನಡೆದ ಕ್ರೀಡಾಕೂಟದಲ್ಲಿ ಶಿಕ್ಷಕರಿಗಾಗಿ ಗುಂಡು ಎಸೆತ, 100 ಮೀಟರ್ ಓಟ, ವಾಲಿಬಾಲ್, ಮಹಿಳೆಯರಿಗೆ ಥ್ರೋ ಬಾಲ್, ಮ್ಯೂಜಿಕಲ್ ಛೇರ್, ಭರ್ಜಿ ಎಸೆತ, ಸೇರಿದಂತೆ ಹಲವು ಕ್ರೀಡೆಯನ್ನು ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರೇ ಬೇರೆ, ಪ್ರೌಢ ಶಾಲಾ ಶಿಕ್ಷಕರೇ ಬೇರೆಯಾಗಿ ಕ್ರೀಡಾಕೂಟದಲ್ಲಿ ಭಾಗವಹಿಸಿದ್ದರು. ಇಲ್ಲಿ ವಯೋಮಿತಿಯ ಆಧಾರದ ಮೇಲೆ ಕ್ರೀಡಾಕೂಟ ನಡೆಸಲಾಯಿತ್ತು. 40 ವರ್ಷ ದಾಟಿಕ ಶಿಕ್ಷಕ, ಶಿಕ್ಷಕಿಯರಿಗೇ ಬೇರೆಯಾದರೆ, 40 ವರ್ಷ ಕೆಳಪಟ್ಟ ಶಿಕ್ಷಕರೆಯಾಗಿ ಸ್ಪರ್ಧೆಗೆ ಭಾಹವಹಿಸುತ್ತಿದ್ದರು.
40 ವರ್ಷ ಕೆಳಪಟ್ಟ ಶಿಕ್ಷಕ ಮತ್ತು ಶಿಕ್ಷಕಿಯರು ಉತ್ಸಾಹದ ಜೊತೆಗೆ ಲವಲವಿಕೆಯಿಂದ ಕ್ರೀಡಾಕೂಟಲ್ಲಿ ಭಾಗವಹಿಸಿದವರ ಸಂಖ್ಯೆ ಹೆಚ್ಚಾಗಿತ್ತು. ಆದರೆ, 40 ವರ್ಷ ಮೇಲ್ಪಟ್ಟ ಶಿಕ್ಷಕ ಮತ್ತು ಶಿಕ್ಷಕಿಯರ ಉತ್ಸಾಹ ಸ್ವಲ್ಪ ಮಟ್ಟಿಗೆ ಕುಸಿದಿದ್ದರು, ಅಲ್ಪ ಪ್ರಮಾಣದಲ್ಲಾದ್ದರು ಭಾಗವಹಿಸಿದ ಕ್ರೀಡಾಸಾಕ್ತರು ಎಲ್ಲಾ ಕ್ರೀಡೆಯಲ್ಲಿ ಭಾಗವಹಿಸಿ ಕ್ರಿಡಾಕೂಟವನ್ನು ಯಶಸ್ವಿಗೊಳಸಿದರು. ಇದರ ನಡುವೆ ಎಷ್ಟೋ ಮಹಿಳಾ ಶಿಕ್ಷಕಿಯರು ಕ್ರೀಡಾಕೂಟದಲ್ಲಿ ಭಾಗವಹಿಸಲು ಆಸ್ತಕಿ ಇಲ್ಲದೆ, ಕ್ರೀಡಾಂಗಣದ ವೀಕ್ಷಕರ ವೀಕ್ಷಣೀಯ ಸ್ಥಳದಲ್ಲಿ ಕುಳಿತು ಕ್ರೀಡಾಕೂಟವನ್ನು ವೀಕ್ಷಿಸುತ್ತಿದ್ದ ದೃಶ್ಯ ಅಲ್ಲಿ ಕಂಡುಬಂದಿತು.
ಇದೇ ವೇಳೆ ಶಿಕ್ಷಕರಿಗೆ ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಂಸ್ಕøತಿಕ ಕಾರ್ಯಕ್ರಮಗಳ ಸ್ಪರ್ಧೆಯನ್ನು ಕೂಡ ಆಯೋಜಿಸಲಾಗಿತ್ತು. ಕ್ರೀಡಾಕೂಟದಲ್ಲಿ ಭಾಗವಹಿಸದ ಎಷ್ಟೋ ಶಿಕ್ಷಕ-ಶಿಕ್ಷಕಿಯರು ಸಾಂಸ್ಕøತಿಕ ಕಾರ್ಯಕ್ರಮಗಳ ಸ್ಫರ್ಧೆಯಲ್ಲಿ ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆ, ಏಕಾಪಾತ್ರಾಭಿನಯಗಳನ್ನು ಆಯೋಜಿಸಲಾಗಿತ್ತು. ಒಟ್ಟಾರೆ ಮಂಗಳವಾರ ಬೆಳಗ್ಗಿನಿಂದ ಸಂಜೆಯ ವರೆಗೆ ನಡೆದ ಶಿಕ್ಷಕರ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ಶಾಲೆಗಳಿಂದ ಆಗಮಿಸಿದ ಶಿಕ್ಷಕರೂ ಕ್ರೀಡಾಪಟುಗಳಾಗಿ ಕ್ರೀಡಾಶಕ್ತಿ ಮೆರೆದರು.

No comments:
Post a Comment