ಇಬ್ಬರು ಜೇಬುಗಳ್ಳರ ಬಂಧನ: 3 ಮೊಬೈಲ್ ಫೋನ್‍ಗಳ ವಶ
ಮೈಸೂರು : ಇಬ್ಬರು ಜೇಬುಗಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 30 ಸಾವಿರ ರೂ ಬೆಲೆ ಬಾಳುವ ಮೂರು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ವಸೀಂ ಅಕ್ರಂ , ಶಾಂತಿನಗರದ ನಿವಾಸಿ ಮಹಮದ್ ಅಮೀರ್ ಬಂಧಿತರು.
ಸಿ.ಸಿ.ಬಿ. ಪೊಲೀಸರು ಗಸ್ತಿನಲ್ಲಿದ್ದಾಗ ಶಾಂತಿನಗರ 1ನೇ ಹಂತ 1ನೇ ಮುಖ್ಯ ರಸ್ತೆ 3ನೇ ಕ್ರಾಸ್‍ನಲ್ಲಿರುವ ನಗರಪಾಲಿಕೆ ಪಾರ್ಕ್ ಬಳಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮೊಬೈಲ್ ಕಳುವು ಮಾಡಿರುವುದಾಗಿ ಒಪ್ಪಿಕೊಂಡರು. ಬಂಧಿತರಿಂದ ಮೊಬೈಲ್ ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಮನೆಗಳ್ಳನ ಬಂಧನ : 1 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ವಶ
ಮೈಸೂರು : ಮನೆಕಳ್ಳನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ 1 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕಿನ ಕೆ.ಎನ್. ಹುಂಡಿಯ ನಿವಾಸಿ ಸಿದ್ದರಾಮ ಬಂಧಿತನು. ಈತ ಪೊಲೀಸರು ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿಅನುಮಾನಸ್ಪದವಾಗಿ ನಿಂತಿದ್ದಾಗ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ
ವಿಜಯನಗರ ಪೊಲೀಸ್ ಠಾಣೆಯ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 1ಲಕ್ಷ ರೂ ಬೆಲೆಯ ಒಟ್ಟು 37 ಗ್ರಾಂ ತೂಕದ ಚಿನ್ನದ ಆಭರಣಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
No comments:
Post a Comment