Friday, 12 September 2014

ಕೃಷ್ಣರಾಜಪೇಟೆ. ಗ್ರಾಮೀಣ ಪ್ರದೇಶದ ಬಡ ಮತ್ತು ಮಧ್ಯಮ ವರ್ಗದ  ಜನರಿಗೆ ಕೈಗೆಟುಕುವ ದರದಲ್ಲಿ ಕಾರುಗಳನ್ನು ನಿರ್ಮಾಣ ಮಾಡಿ ಕಾರು ಹೊಂದಬೇಕೆಂಬ ದೇಶದ ಕೋಟ್ಯಾಂತರ ಜನರ ಕನಸನ್ನು ನನಸು ಮಾಡಿ ಶ್ರೇಷ್ಠ ತಂತ್ರಜ್ಞಾನದಿಂದ ಕೂಡಿರುವ ಗುಣಮಟ್ಟದ ಕಾರುಗಳನ್ನು ನಾಡಿಗೆ ಕೊಟ್ಟ ಸಂಸ್ಥೆಯೆಂದರೆ ಅದು ಮಾರುತಿ ಸಂಸ್ಥೆಯಾಗಿದೆ ಎಂದು ಉಧ್ಯಮಿ ಹೆಚ್.ಆರ್.ವಿಶ್ವನಾಥ್ ಅಭಿಮಾನದಿಂದ ಹೇಳಿದರು.
ಅವರು ಇಂದು ಪಟ್ಟಣದ ಜಯನಗರ ಬಡಾವಣೆಯ ಶ್ರೀರಂಗ ಚಿತ್ರಮಂದಿರದ ಆವರಣದಲ್ಲಿ ಮೈಸೂರಿನ ಫ್ರೆಂಡ್ಲಿ ಮೋಟಾರ್ಸ್  ಇಂಡಿಯಾ ಪ್ರೈವೇಟ್ ಲಿಮಿಟೆಡ್’ ಮಾರುತಿ ಕಾರು ಮಾರಾಟ ಸಂಸ್ಥೆಯು ಆಯೋಜಿಸಿದ್ದ ಗ್ರಾಮೀಣ ಮಹೋತ್ಸವ ವಿಶೇಷ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಸಿಲು ಮಳೆಯೆನ್ನದೇ ಮೋಟಾರು ಬೈಕಿನಲ್ಲಿ ಪ್ರಯಾಣ ಮಾಡುವ ಬಡಕುಟುಂಬವು ಕೈಗೆಟುಕುವ ಸ್ಪರ್ಧಾತ್ಮಕ ದರದಲ್ಲಿ ಕಾರುಕೊಳ್ಳಬೇಕೆಂಬ  ಕನಸನ್ನು ಸಾಕಾರ ಮಾಡಿ ಕಡಿಮೆ ದರದಲ್ಲಿ ಅತ್ಯುನ್ನತ ತಂತ್ರಜ್ಞಾನದ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ ದೇಶದ ಹೆಮ್ಮೆಯ ಸಂಸ್ಥೆಯೆಂಬ ಹೆಗ್ಗಳಿಕೆ ಪಾತ್ರವಾಗಿರುವ ಮಾರುತಿ ಉದ್ಯೋಗ್ ಸಂಸ್ಥೆಯು ದೇಶದ ಕಾರು ಮಾರಾಟದಲ್ಲಿ ಅಗ್ರ ಸ್ಥಾನವನ್ನು ಪಡೆದಿದೆಯಲ್ಲದೇ ಗ್ರಾಮೀಣ ಪ್ರದೇಶದ ಮಧ್ಯಮ ವರ್ಗದ ಜನರು, ಚುನಾಯಿತ ಜನಪ್ರತಿನಿಧಿಗಳು ಹಾಗೂ ರೈತರು ಕಾರು ಕೊಳ್ಳಲು ಸಾಲ ಸೌಲಭ್ಯವನ್ನು ನೀಡಿ ಕಾರಿನ ಮಾಲೀಕರನ್ನಾಗಿ ಮಾಡಹೊರಟಿರುವುದು ಸ್ವಾಗತಾರ್ಹ ಸಂಗತಿಯಾಗಿದೆ ಎಂದು ಹೆಳಿದ ವಿಶ್ವನಾಥ್ ಶ್ರೀಮಂತರಿಗೆ ಸರಿಯಾಗಿ ಸ್ಥಾನಮಾನವನ್ನು ಪಡೆದುಕೊಳ್ಳಬೇಕೆಂಬ ಛಲವಿರುವ ಜನರಿಗೆ ಮಾರುತಿ ಕಾರನ್ನು ಕೊಳ್ಳುವ ನಿರ್ಧಾರವು ಸೂಕ್ತವಾದುದಾಗಿದೆ. ಅಧಿಕ ಮೈಲೇಜ್ ನೀಡುವ ಪೆಟ್ರೋಲ್ ಮತ್ತು ಡೀಸೆಲ್’ನ ವಿವಿಧ ಶ್ರೇಣಿಯ ಮಾರುತಿ ಕಾರನ್ನು ಕೊಂಡುಕೊಳ್ಳುವ ಮೂಲಕ ಮಧ್ಯಮವರ್ಗದ ಜನರೂ ಕಾರಿನ ಮಾಲೀಕರಾಗಲು ಸುವರ್ಣಾವಕಾಶವನ್ನು ಒದಗಿಸಿಕೊಟ್ಟಿರುವ ಫ್ರೆಂಡ್ಲಿ ಮೋಟಾರ್ಸ್ ಸಂಸ್ಥೆಗೆ ಶುಭ ಹಾರೈಸಿದರು.
ತಾಲೂಕಿನ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯಾಧಿಕಾರಿ ಜಿ.ಬಿ.ರಾಮಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಉಧ್ಯಮಿಗಳಾದ ಕೆ.ಎನ್.ಲಿಂಗರಾಜು, ತಾಲೂಕು ವಿದ್ಯುತ್ ಗುತ್ತಿಗೆದಾರರ ಸಂಘದ ಅಧ್ಯಕ್ಷ ಶೀಳನೆರೆ ಸಿದ್ಧೇಶ್, ಕಾರಂತ್ ಫ್ಯೂಯಲ್ ಸ್ಟೇಷನ್ ಮಾಲೀಕ ಅರವಿಂದಕಾರಂತ್, ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಕೆ.ಆರ್.ನೀಲಕಂಠ, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧೀಕ್ಷಕ ಬಳ್ಳೇಕೆರೆ ಮಂಜುನಾಥ್ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಫ್ರೆಂಡ್ಲಿ ಮೋಟಾರ್ಸ್ ಸಂಸ್ಥೆಯ ಮಾರುಕಟ್ಟೆ ಅಧಿಕಾರಿಗಳಾದ ಪ್ರಶಾಂತ್ ಸ್ವಾಗತಿಸಿದರು, ರಾಘವೇಂದ್ರ ವಂದಿಸಿದರು. ಪತ್ರಕರ್ತ ಬೂಕನಕೆರೆ ಪ್ರಕಾಶ್ ಕಾರ್ಯಕ್ರಮ ನಿರೂಪಿಸಿದರು.

ಕೃಷ್ಣರಾಜಪೇಟೆ. ತಾಲೂಕಿನ ಹಿರಿಯ ದಲಿತ ಮುಖಂಡ, ಪುರಸಭೆಯ ಮಾಜಿ ಉಪಾಧ್ಯಕ್ಷರಾದ ಶತಾಯುಷಿ ಕೆ.ಎಂ.ಕರಿಮಾಸ್ತಯ್ಯ ಅವರು ಇಂದು ಅನಾರೋಗ್ಯದಿಂದ ಪಟ್ಟಣದ ಅಂಬೇಡ್ಕರ್ ನಗರದಲ್ಲಿನ ತಮ್ಮ ಸ್ವಗೃಹದಲ್ಲಿ ಇಂದು ನಿಧನರಾದರು, ಮೃತರು ಪತ್ನಿ, ಪುತ್ರರು,ಪುತ್ರಿಯರು ಸೇರಿದಂತೆ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಕರಿಮಾಸ್ತಯ್ಯ ಅವರ ನಿಧನಕ್ಕೆ ಕೇಂದ್ರದ ಮಾಜಿ ಸಚಿವ ಕೆ.ರೆಹಮಾನ್‍ಖಾನ್, ಪುರಸಭೆ ಅಧ್ಯಕ್ಷ ಕೆ.ಗೌಸ್‍ಖಾನ್, ಸದಸ್ಯ ಡಿ.ಪ್ರೇಮಕುಮಾರ್, ಜಿಲ್ಲಾ ಪಂಚಾಯಿತಿ ಮಾಜಿಸದಸ್ಯ ಡಾ.ಎಸ್.ಕೃಷ್ಣಮೂರ್ತಿ, ಜಿಲ್ಲಾ ಛಲವಾಧಿ ಮಹಾಸಭಾ ಅಧ್ಯಕ್ಷ ಮಾಂಬಳ್ಳಿ ಜಯರಾಂ ತೀವ್ರ ಸಂತಾಪ ಸೂಚಿಸಿದ್ದಾರೆ.




No comments:

Post a Comment