Tuesday, 30 September 2014

ವೃದ್ದಾಪ್ಯದಲ್ಲಿ ಆರೋಗ್ಯ ರಕ್ಷಣೆ ಅತಿಮುಖ್ಯ-ಡಾ.ಸುಭಾಷ್
ಮಂಡ್ಯ,ಸೆ.30-ವೃದ್ಧರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಈ ಸಂಧರ್ಭದಲ್ಲಿ ಕಾಯಿಲೆಗಳು ಸಹಜವಾಗೇ ಹೆಚ್ಚಾಗುತ್ತವೆ. ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಜಾಗೃತಿಯಿಂದ ಬದುಕಬೇಕು ಎಂದು ಮಿಮ್ಸ್ ವಿಭಾಗೀಯ ಆರೋಗ್ಯಾಧಿಕಾರಿ ಡಾ.ಸುಭಾಷ್ ಬಾಬು ಕರೆ ನೀಡಿದರು.
ವಿಕಲಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ ವತಿಯಿಂದ ಜ್ಞಾನ ಸಿಂಧು ವೃದ್ಧಾಶ್ರಮದ ಆಶ್ರಿತರಿಗೆ ಆಯೋಜಿಸಿದ್ದ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ವರ್ಷ ವರ್ಷ ಕಳೆದಂತೆ ಆಯಸ್ಸಿಗೆ ನಾವು ಜೀವ ತುಂಬುವ ಕೆಲಸ ಮಾಡಬೇಕು. ವಯಸ್ಸಾದ ನಂತರ ಮಾನಸಿಕ ಆರೋಗ್ಯವನ್ನೂ ದೈಹಿಕ ಆರೋಗ್ಯದ ಜೊತೆಗೆ ಜೋಪಾನ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಡಾ.ರೇಖಾ ಮಾತನಾಡಿ, ವೃದ್ಧಾಶ್ರಮದಲ್ಲಿ ಬದುಕುತ್ತಿರುವ ನೀವು ಕೌಟುಂಬಿಕ ಚಿಂತನೆಗಳನ್ನು ದೂರವಿಟ್ಟು ವೈಯಕ್ತಿಕ ಶುಚಿತ್ವ ಮತ್ತು ಆರೋಗ್ಯದ ಕಡೆ ಗಮನಹರಿಸಬೇಕು. ಆಗಾಗ್ಗೆ ರಕ್ತದೊತ್ತಡ, ಮಧುಮೇಹ ಪರೀಕ್ಷೆಗಳನ್ನು ಮಾಡಿಸಿಕೊಂಡು ವೈದ್ಯರ ಸಲಹೆಯಂತೆ ನಡೆದುಕೊಳ್ಳಬೇಕೆಂದು ತಿಳಿಸಿದರು.
ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೇವಣೇಶ್ ಮಾತನಾಡಿ, ಜೀವನದಲ್ಲಿ ಕಂಡುಂಡ ನೋವುಗಳನ್ನು ಬದಿಗಿಟ್ಟು ಆರೋಗ್ಯದ ಕಡೆ ಗಮನ ಹರಿಸಿ. ನೋವಿಲ್ಲದ ಕುಟುಂಬ ಯಾವುದೂ ಇಲ್ಲ. ದೇವರು ನಮಗೆ ಮುಂಭಾಗದಲ್ಲಿ ಕಣ್ಣು ಕೊಟ್ಟಿರುವುದು ಮುಂದಿನದನ್ನು ನೋಡಿಕೊಂಡು ಬದುಕಿ ಎಂದು. ದಿನನಿತ್ಯ ಹುಟ್ಟುವ ಸೂರ್ಯನನ್ನು ಹೊಸದಾಗಿ ಕಾಣುವ ಪ್ರಯತ್ನ ಮಾಡಿದಾಗ ಬದುಕು ಸುಂದರವಾಗಿ ಕಾಣುತ್ತದೆ. ಶರೀರ ರೋಗಮಯ, ಸಂಸಾರ ದುಃಖಮಯ ಇದು ಸಹಜವಾದುದು. ಚಿಂತೆ ಬಿಟ್ಟು ಬದುಕುವುದನ್ನು ಕಲಿಯಿರಿ ಎಂದರು.
ನಿವೃತ್ತ ಅಧಿಕಾರಿ ಮುಕುಂದ್ ಮಾತನಾಡಿ, ಬದುಕಿನ ನೂರಾರು ಕಷ್ಟಗಳನ್ನು ಸಹಿಸಿ, ನೋವನ್ನು ಅನುಭವಿಸಿ ಮಾಗಿರುವ ನೀವು ಈಗಲಾದರೂ ನೆಮ್ಮದಿಯಾಗಿ ಬದುಕುವಂತಾಗಬೇಕು. ಆರೋಗ್ಯವನ್ನು ಜೋಪಾನದಿಂದ ಕಾಯ್ದುಕೊಂಡು ಅಂತಿಮ ದಿನಗಳನ್ನು ನೆಮ್ಮದಿಯಿಂದ ಕಳೆಯಿರಿ ಎಂದರು.
ಸಮಾರಂಭವನ್ನುದ್ದೇಶಿಸಿ ಪರ್ತಕರ್ತ ದೇವರಾಜ್ ಕೊಪ್ಪ ಮಾತನಾಡಿದರು. ಜ್ಞಾನಸಿಂಧು ಸಂಸ್ಥೆಯ ವ್ಯವಸ್ಥಾಪಕ ಕಾರ್ಯದರ್ಶಿ ವಿಜಯ್ ಕುಮಾರ್ ಉಪಸ್ಥಿತರಿದ್ದರು. ಆಶ್ರಮದ ಮೇಲ್ವಿಚಾರಕಿ ನಿರ್ಮಲಾ ಸ್ವಾಗತಿಸಿದರು. ಶಿಕ್ಷಕ ಅಶ್ವಥ್ ನಾರಾಯಣ್ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕಿ ವರಲಕ್ಷ್ಮಿ ವಂದಿಸಿದರು.

ಚಿನ್ನದ ಅಂಬಾರಿಗೆ 15.5 ಕೋಟಿ ರೂ ವಿಮೆ
*ಮೂರು ದಿನದ ವಿಮೆಯ ಕಂತಿನ ಹಣವಾಗಿ 93.888 ರೂ ಪಾವತಿ
ಮೈಸೂರು: ವಿಶ್ವ ಪ್ರಸಿದ್ಧ ದಸರಾದ ಕೊನೆ ದಿನ ನಡೆಯುವ ಜಂಬೂ ಸವಾರಿಯಲ್ಲಿ ನಾಡ ಶಕ್ತಿ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವ ಚಿನ್ನದ ಅಂಬಾರಿಗೆ ಈಗ 15.5 ಕೋಟಿ ರೂ ವಿಮೆ ಮಾಡಿಸಲಾಗಿದೆ. ಅದು ಕೇಲವ ಮೂರು ದಿನದ ಮಟ್ಟಿಗೆ.
750 ಕೆ.ಜಿ. ತೂಕವನ್ನು ಹೊಂದಿರುವ ಚಿನ್ನದ ಅಂಬಾರಿಯ ಮೊತ್ತ ಸದ್ಯದ ಮಾರುಕಟ್ಟೆಯ ದರದಲ್ಲಿ 20 ಕೋಟಿರೂಗೂ ಹೆಚ್ಚು ಮೌಲ್ಯವನ್ನು ಹೊಂದಿದೆ. ಪುರಾತನ ಪ್ರಸಿದ್ಧವಾಗಿರುವ ಈ ಚಿನ್ನದ ಅಂಬಾರಿಗೆ ಪ್ರತಿ ವರ್ಷವೂ ಜಂಬೂ ಸವಾರಿಯ ವೇಳೆಗೆ ವಿಮೆ ಮಾಡಿಸಲಾಗುತ್ತದೆ. ಕಳೆದ ವರ್ಷವೂ ಕೂಡ 10 ಕೋಟಿ ರೂ ವಿಮೆ ಮಾಡಿಸಲಾಗಿತ್ತು, ಆದರೆ ಈಗ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಹೆಚ್ಚಳವಾಗಿರುವ ಹಿನ್ನಲೆಯಲ್ಲಿ ಅಂಬಾರಿಯ ಮೌಲ್ಯವೂ ಹೆಚ್ಚಳವಾಗಿದೆ. ಹಾಗಾಗಿ ಈ ಬಾರಿ 15.5 ಕೋಟಿ ರೂಗಳಿಗೆ ವಿಮೆ ಮಾಡಿಸಲಾಗಿದೆ. ಇಂಡಿಯಾ ಇನ್ಸೂರೆನ್ಸ್ ಕಂಪನಿಯಲ್ಲಿ ಜಿಲ್ಲಾಡಳಿತ ವಿಮೆಯನ್ನು ಮಾಡಿಸಿದ್ದು, ವಿಮೆ ಕಂತಾಗಿ ಒಟ್ಟು 93.888 ರೂಗಳನ್ನು ಪಾವತಿ ಮಾಡಿದೆ. ಈ ವಿಮೆ ಅ.2 ರಿಂದ 5 ರ ತನಕ ಜಾರಿಯಲ್ಲಿರುತ್ತದೆ.
ಈಗಾಗಲೇ ದಸರಾ ಗಜಪಡೆಗಳಿಗೆ ಹಾಗೂ ಅದರ ಮಾವುತರಿಗೆ ಜಿಲ್ಲಾಡಳಿತ ಅ.5 ರ ತನಕ ವಿಮೆಯನ್ನು ಇದೇ ಕಂಪನಿಯಲ್ಲಿ ಮಾಡಿಸಿದೆ.
ಮಹಿಂದ್ರಾ ಫಸ್ರ್ಟ್ ಚಾಯ್ಸ್ ವ್ಹೀಲ್ಸ್‍ನಿಂದ 2014 ಪ್ರಶಸ್ತಿ ಪುರಸ್ಕಾರ
ಮೈಸೂರು,ಸೆ.30,  ಭಾರತದ ನಂ.1 ಮಲ್ಟಿ ಬ್ರಾಂಡ್ ಸರ್ಟಿಫೈಡ್ ಯೂಸ್ಡ್ ಕಾರ್ ಕಂಪನಿ ಮಹಿಂದ್ರಾ ಫಸ್ರ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್(ಎಂಎಫ್‍ಸಿಡಬ್ಲ್ಯೂಎಲ್) ದಿನಾಂಕ 24 ರಂದು ದೇಶಾದ್ಯಂತ ಎಲ್ಲಾ ಡೀಲರ್‍ಗಳಿಗೆ ತನ್ನ ವಾರ್ಷಿಕ ಡೀಲರ್ ಪರ್ಫಾಮೆನ್ಸ್ ಎಕ್ಸೆಲೆನ್ಸ್ ಅವಾಡ್ರ್ಸ್ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಎಮದು ಮಹಿಂದ್ರಾ ಕಂಪನಿ ಮುಖ್ಯಸ್ಥ ಆನಂದ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ, ಮಹಿಂದ್ರಾ ಅಂಡ್ ಮಹಿಂದ್ರಾ ಲಿಮಿಟೆಡ್ ಗ್ರೂಪ್ ಎಚ್‍ಆರ್ ರಾಜೀವ್ ದುಬೇ, ಮಹಿಂದ್ರಾ ಫಸ್ರ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್ ಸಿಇಒ ಡಾ.ನಾಗೇಂದ್ರ ಪಲ್ಲೆ ಮತ್ತು ಮಹಿಂದ್ರಾ ಫಸ್ರ್ಟ್ ಚಾಯ್ಸ್ ವ್ಹೀಲ್ಸ್ ಲಿಮಿಟೆಡ್ ಎಸ್‍ವಿಪಿ ಯತಿನ್ ಚಂದ್ರ ಈ ಸಂದರ್ಭದಲ್ಲಿ ಹಾಜರಿದ್ದರು.
ಎಂಎಫ್‍ಸಿಡಬ್ಲ್ಯೂಎಲ್‍ನ ಡೀಲರ್ ಪರ್ಫಾಮೆನ್ಸ್ ಎಕ್ಸೆಲೆನ್ಸ್ ಪ್ರೋಗ್ರಾಮ್ ತನ್ನ ಡೀಲರ್‍ಗಳನ್ನು ಅವರ ವಹಿವಾಟಿನ ಒಟ್ಟಾರೆ ಕಾರ್ಯ ನಿರ್ವಹಣೆಯನ್ನು ಗಮನಿಸಿ ಅವರನ್ನು ಸನ್ಮಾನಿಸುವ ಕಾರ್ಯಕ್ರಮ. ಡಿಪಿಇಪಿ 2010ರಿಂದಲೂ ನಡೆಸಲಾಗುತ್ತಿರುವ ಎಂಎಫ್‍ಸಿಡಬ್ಲ್ಯೂಎಲ್ ಪ್ರಕ್ರಿಯೆಯ ಅಂಗವಾಗಿದೆ. ಡಿಪಿಇಪಿ ಗ್ರಾಹಕರಿಗೆ ಡೀಲರ್ ಕಾರ್ಯ ನಿರ್ವಹಣೆಯಲ್ಲಿ ಐದು ಅಂಶಗಳ ಆಧಾರದಲ್ಲಿ ಅವರ ಶ್ರೇಷ್ಠತೆಯನ್ನು ನಿರ್ಧರಿಸುತ್ತದೆ.
ವಾಣಿಜ್ಯ ಕಾರ್ಯ ನಿರ್ವಹಣೆ, ಜನರು ಮತ್ತು ಪ್ರಕ್ರಿಯೆಗಳು, ಮೂಲಸೌಕರ್ಯಗಳು, ಹಣಕಾಸು ಕಾರ್ಯ ನಿರ್ವಹಣೆ, ಕಾರ್ಪೊರೇಟ್ ಸುಸ್ಥಿರತೆ. ಹೊಂದಿದೆ ಎಂದಿದ್ದಾರೆ.
  ಈ ಪ್ರಶಸ್ತಿ ಸ್ವೀಕರಿಸಿದ ನಮ್ಮ ಎಲ್ಲಾ  ಡೀಲರ್‍ಗಳಿಗೂ ನನ್ನ ಅಭಿನಂದನೆಗಳು. ಎಂಎಫ್‍ಸಿಡಬ್ಲ್ಯೂಎಲ್ ತನ್ನದೇ ಆದ ಬೆಳವಣಿಗೆಯ ಹಾದಿಯನ್ನು ನಿರ್ಮಿಸಿಕೊಂಡು ಬಳಕೆಯಾದ ಕಾರುಗಳ ಮಾರುಕಟ್ಟೆಯಲ್ಲಿ ಮುನ್ನಡೆದಿದೆ. ಕಂಪನಿ ಅತ್ಯಂತ ಸವಾಲಿನ ಪರಿಸರದಲ್ಲಿ ಬೆಳೆದಿರುವುದು ಅದರ ಮೌಲ್ಯ ಪ್ರತಿಪಾದನೆ ಮತ್ತು ವಾಣಿಜ್ಯ ಮಾದರಿಗೆ ಸ್ಪಷ್ಟ ನಿದರ್ಶನ. ತಂತ್ರಜ್ಞಾನ ಮತ್ತು ಆನ್‍ಲೈನ್ ಉತ್ಪನ್ನಗಳಲ್ಲಿ ತನ್ನ ಸತತ ಹೂಡಿಕೆಯ ಮೂಲಕ ಎಂಎಫ್‍ಸಿಡಬ್ಲ್ಯೂಎಲ್ ಹೊಸ ಮಾರುಕಟ್ಟೆಗಳನ್ನು ಸೃಷ್ಟಿಸುತ್ತಿದೆ’ ಎಂದು ಮಹಿಂದ್ರಾ ಗ್ರೂಪ್ ಅಧ್ಯಕ್ಷ ಆನಂದ್ ಮಹಿಂದ್ರಾ ಹೇಳಿದರು.
`ಡಿಪಿಇಪಿ ಪ್ರಕ್ರಿಯೆ ನಮ್ಮ ಉದ್ಯಮದ ಮೂಲಾಧಾರವಾಗಿದ್ದು ನಮ್ಮ ಡೀಲರ್ ಪಾಲುದಾರರೊಂದಿಗೆ ಅವರು ನಮ್ಮ ಗ್ರಾಹಕರಿಗೆ ಎಷ್ಟು ಮೌಲ್ಯಯುತ ಸೇವೆ ನೀಡುತ್ತಿದ್ದಾರೆ ಎಂದು ಅಳೆಯುತ್ತದೆ. ಮಹಿಂದ್ರಾ ಫಸ್ರ್ಟ್ ಚಾಯ್ಸ್ ವ್ಹೀಲ್ಸ್ ತೀವ್ರವಾಗಿ ವೃದ್ಧಿಸುತ್ತಿದ್ದು ಭಾರತದಾದ್ಯಂತ 400 ಮಳಿಗೆಗಳನ್ನು ಹೊಂದಿದೆ. ಗ್ರಾಹಕರ ನಿರೀಕ್ಷೆಗೆ ಮೀರಿದ ಸೇವೆ ನೀಡುತ್ತಿದೆ. ಒಟ್ಟಿಗೆ ನಾವು ಸಾಧಿಸಿದ ಪ್ರಗತಿಯಿಂದ ನನಗೆ ಥ್ರಿಲ್ ಆಗಿದೆ. ಮುಂದುನ ವರ್ಷಗಳಲ್ಲಿ ಈ ಬಾಂಧವ್ಯ ಮತ್ತಷ್ಟು ಉನ್ನತ ಮಟ್ಟಕ್ಕೆ ಏರುತ್ತದೆ ಎಂಬ ನಿರೀಕ್ಷೆ ನನ್ನದು’ ಎಂದು ಮಹಿಂದ್ರಾ ಅಂಡ್ ಮಹಿಂದ್ರಾ ಲಿಮಿಟೆಡ್‍ನ ಗ್ರೂಪ್ ಎಚ್‍ಆರ್, ಕಾರ್ಪೊರೇಟ್ ಸರ್ವೀಸಸ್ ಮತ್ತು ಆಫ್ಟರ್ ಮಾರ್ಕೆಟ್‍ನ ಅಧ್ಯಕ್ಷ ರಾಜೀವ್ ದುಬೇ ವಿವರಿಸಿದರು.
ಈ ವರ್ಷ ಎಂಎಫ್‍ಸಿಡಬ್ಲ್ಯೂಎಲ್ 2014ರ ಹಣಕಾಸು ವರ್ಷವನ್ನು 31 ಡೀಲರ್‍ಗಳಿಗೆ ಸನ್ಮಾನಿಸುವ ಮೂಲಕ ಆಚರಿಸಿತು. ಈ ಪ್ರಶಸ್ತಿಗಳು ಅತ್ಯುತ್ತಮ ಗುಣಮಟ್ಟದ ಕಾರ್ಯಕ್ಷಮತೆಗೆ ಸಾಕ್ಷಿಯಾಗಿವೆ. ಎಂದರು.
ಹಲವಾರು ವಲಯಗಳ 31 ಡೀಲರ್‍ಗಳು ಪ್ರಶಸ್ತಿಗಳನ್ನು ಸ್ವೀಕರಿಸಿದ್ದು ಉದ್ಯಮದ ಅನುಭವ ಮತ್ತು ರಾಷ್ಟ್ರೀಯ ಎಕ್ಸ್-ಮಾರ್ಟ್ ಪರ್ಫಾಮೆನ್ಸ್ ಆಧರಿಸಿದೆ. ಕೊಚ್ಚಿಯ ಫೋಕಸ್ ಕಾರ್ ಮಾರ್ಟ್ ಅತ್ಯುತ್ತಮ ಡೀಲರ್ ಆಗಿ ಹೊರಹೊಮ್ಮಿತು. ಆಟೊಮ್ಯಾಕ್ಸ್, ಮುಂಬೈ, ವಶು ಮುಝಾಫರ್‍ಪುರ್ ಮತ್ತು ದೆಹಲಿಯ ಕಾರ್ ಚಾಯ್ಸ್ ರನ್ನರ್ಸ್ ಅಪ್ ಪ್ರಶಸ್ತಿ ಪಡೆದರು. ಶ್ರೇಷ್ಠ 4 ಅಖಿಲ ಭಾರತ ಡೀಲರ್‍ಗಳು ವಿವಿಧ ವಲಯಗಳ ಪ್ರಶಸ್ತಿಗಳನ್ನೂ ಪಡೆದರು.
ಭಾರತದಲ್ಲಿ ಇಂದು ಬಳಕೆಯಾದ ಕಾರುಗಳ ಮಾರಾಟ ಹೊಸ ಕಾರುಗಳಿಗಿಂತ ಹೆಚ್ಚಾಗಿದ್ದು 1.2:1 ಅನುಪಾತದಲ್ಲಿದೆ. ಬಳಕೆಯಾದ ಕಾರುಗಳ ಮಾರುಕಟ್ಟೆ 22% ಸಿಎಜಿಆರ್‍ನಂತೆ ವೃದ್ಧಿಸುತ್ತಿದ್ದು 2017ಕ್ಕೆ 8 ಮಿಲಿಯನ್ ಯೂನಿಟ್‍ಗಳಾಗುವ ನಿರೀಕ್ಷೆಯಿದೆ. ಈ ಪ್ರಗತಿಯ ದರದಲ್ಲಿ ಹೊಸ ಕಾರುಗಳ ಮಾರುಕಟ್ಟೆಗಿಂತ 1.8 ಪಟ್ಟು ನಿಧಾನಗತಿಯಲ್ಲಿದ್ದು ಅಮೆರಿಕಾ ಮತ್ತು ಯೂರೋಪ್‍ಗಳಿಗೆ ಹೋಲಿಸಿದರೂ ನಿಧಾನಗತಿಯಲ್ಲಿದೆ.
ಎಂಎಫ್‍ಸಿಡಬ್ಲ್ಯೂಎಲ್ ಭಾರತದಲ್ಲಿ ಬಳಕೆಯಾದ ಕಾರುಗಳ ವ್ಯವಸ್ಥೆಯನ್ನು ರೂಪಿಸುವ ಮೂಲಕ ಸಗಟು ಮತ್ತು ರೀಟೇಲ್ ಚಾನಲ್‍ಗಳ ನಡುವಿನ ಅಂತರವನ್ನು ಭೌತಿಕ ಮತ್ತು ಆನ್‍ಲೈನ್ ಮೂಲಸೌಕರ್ಯ ಸೃಷ್ಟಿಸುವ ಮೂಲಕ ಭರ್ತಿ ಮಾಡುವ ಉದ್ದೇಶ ಹೊಂದಿದೆ. ಇದು ಭಾರತದ ನಂ.1 ಮಲ್ಟಿಬ್ರಾಂಡ್ ಸರ್ಟಿಫೈಡ್ ಯೂಸ್ಡ್ ಕಾರು ಕಂಪನಿಯಾಗಿದ್ದು ದೇಶದಲ್ಲಿ ಆಗಸ್ಟ್ 31, 2014ಕ್ಕೆ 380 ಯೂಸ್ಡ್ ಕಾರು ಮಳಿಗೆಗಳಿವೆ ಮತ್ತು ಅತಿದೊಡ್ಡ ಮುಂಚೂಣಿಯ ಬಿ2ಬಿ ಹರಾಜು ಸೈಟ್ ಆಗಿದೆ.
ಕಂಪನಿ 2014ರ ವರ್ಷದಲ್ಲಿ 99 ಡೀಲರ್‍ಗಳ ಸೇರ್ಪಡೆಯಾಗಿದ್ದು 220 ನಗರಗಳಲ್ಲಿ ವಿಸ್ತರಿಸಿದೆ. 2016ಕ್ಕೆ 500 ಮಳಿಗೆಗಳಿಗೆ ವಿಸ್ತರಿಸುವ ಉದ್ದೇಶ ಹೊಂದಿದೆ. ಕಂಪನಿ ಬಳಕೆಯಾದ ಕಾರುಗಳ ವ್ಯವಸ್ಥೆಯನ್ನು ರೂಪಿಸಲು ಬಯಸಿದ್ದು ಡೀಲರ್‍ಗಳು, ಗ್ರಾಹಕರು ಮತ್ತು ಸಾಲ ನೀಡುವವರನ್ನು ಸನ್ನದ್ಧಗೊಳಿಸಲಿದೆ. ಇದರಲ್ಲಿ ಇಂಡಿಯನ್ ಬ್ಲೂ ಬುಕ್ ಮತ್ತು ಆಟೊಇನ್ಸ್‍ಪೆಕ್ಟ್ ಒಳಗೊಂಡಿವೆ. ಐಬಿಬಿ ಮೊದಲ ವಹಿವಾಟು ಆಧರಿತ ಯೂಸ್ಡ್ ಕಾರು ಬೆಲೆಯ ಮಾರ್ಗದರ್ಶಿಯಾಗಿದೆ. ಆಟೊಇನ್ಸ್‍ಪೆಕ್ಟ್ ಕ್ಲೌಡ್ ಆಧರಿತ ಇನ್ಸ್‍ಪೆಕ್ಷನ್ ಸರ್ವೀಸ್ ಆಗಿದ್ದು ಸಂಭವನೀಯ ಸಾಲ ನೀಡುವವರು, ಕೊಳ್ಳುಗರು ಮತ್ತು ಮಾರಾಟಗಾರರಿಗೆ ವಿವರವಾದ ವಾಹನ ವರದಿ ನೀಡುತ್ತದೆ. ಕಂಪನಿ ಸರ್ಟಿಫಸ್ರ್ಟ್ ಮತ್ತು ವಾರೆಂಟಿಫಸ್ರ್ಟ್ ಎಂಬ ಉತ್ಪನ್ನಗಳನ್ನೂ ಹೊಂದಿದೆ.
ಮುಖ್ಯ ಪ್ರಾಧ್ಯಾಪಕರಿಂದ ಶಾಲಾ ಬಾಲಕಿಗೆ ಲೈಂಗಿಕ ಕಿರುಕುಳ
ಪಾಂಡವಪುರ,ಸೆ.30- ತಾಲ್ಲೂಕಿನ ವೀರಶೆಟ್ಟಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠ ಶಾಲೆ ಮುಖ್ಯ ಪ್ರಾಧ್ಯಾಪಕ ರಾಮಕೃಷ್ಣೇಗೌಡ ಎಂಬಾತ ತಮ್ಮ ಶಾಲೆಯಲ್ಲಿನ ವಿದ್ಯಾರ್ಥಿನಿಗೆ ಲೈಂಗಿಕವಾಗಿ ಕಿರುಕುಳ ನೀಡಿದಂತಹ ಘಟನೆ ಜರುಗಿದೆ.
ಸುಮಾರು 12 ವರ್ಷದ ಅಪ್ರಾಪ್ತ ಬಾಲಕಿಯು ಮುಸ್ಲಿಂ ಸಮುದಾಯದ ಹುಡುಗಿಯಾಗಿದ್ದು, ಬಾಲಕಿಯ ಪೋಷಕರು ಇದೇ ಗ್ರಾಮದಲ್ಲಿನ ಎನ್.ಎಂ ರಸ್ತೆಯಲ್ಲಿನ ನಿವಾಸಿಗಳಾಗಿದ್ದು, ವಿಷಯ ತಿಳಿದ ಪೋಷಕರು ಹಾಗೂ  ಸಮುದಾಯದ ಜನರು ಇದಕ್ಕೆ ತೀವ್ರ ಆಕ್ರೋಷ ವ್ಯಕ್ತಪಡಿಸಿದರು.
ಬಾಲಕಿಯ ಹೇಳಿಕೆಯಂತೆ ಬಾಲಕಿಗೆ ರಾಮಕೃಷ್ಣೇಗೌಡ ಎಂಬಾತನು ದೈಹಿಕವಾಗಿ ವಿನಾಃ ಕಾರಣ ಹಿಂಸೆ ನೀಡುತ್ತಿದ್ದು, ಬಾಲಕಿಯ ಕೆಲವು ಅಂಗಗಳನ್ನು ಸ್ಪರ್ಶಿಸಿ ಕಿರುಕುಳ ನೀಡುತ್ತಲಿದ್ದನಂಬ ವಿಷಯ ತಿಳಿದ ಪೋಷಕರು ಸಮುದಾಯದವರು ಠಾಣೆಯ ಎದುರು ಜಮಾಯಿಸಿ ರಾಮಕೃಷ್ಣೇಗೌಡ ಎಂಬಾತನಿಗೆ ಕಾನೂನು ಕ್ರಮಗ ಜರುಗಿಸಿ ಶಿಕ್ಷೆನೀಡುವಂತೆ ಒತ್ತಾಯಿಸಿದರು.
ಶಾಲೆಯ ಮುಖ್ಯಸ್ಥರು ಹಾಗೂ ಗ್ರಾಮದ ಕೆಲ ಮುಖಂಡರು ಬಾಲಕಿಯ ಕುಟುಂಬಕ್ಕೆ 2 ಲಕ್ಷ ಪರಿಹಾರ ಕೊಡಿಸಿ, ಕೇಸು ದಾಖಲಿಸದಂತೆ ಪ್ರಯತ್ನಿಸಿದ್ದಾರೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ.
ಪೊಲೀಸರು ಆರೋಪಿಯನ್ನು ಬಂಧಿಸಿದ್ದು, ಬಾಲಕಿಯನ್ನು ತಪಾಸಣೆಗೆಂದು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಯಿಂದ ರಿಪೋರ್ಟ್ ಬಂದನಂತರವಷ್ಟೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಪೊಲೀಸರು ಪತ್ರಿಕೆಗೆ ತಿಳಿಸಿದ್ದಾರೆ.

ಮೈಸೂರು ಸುದ್ದಿಗಳು




ರಾಷ್ಟ್ರೀಯ ಏಕತೆಗೆ ಹಿಂದಿ ಭಾಷೆ ಸಹಕಾರಿ : ಡಾ.ನಾರಾಯಣಶೆಟ್ಟಿ
   ಮೈಸೂರು,ಸೆ.30.ಭಾರತದಲ್ಲಿ ಹಿಂದಿ ಭಾಷೆಗೆ ಮಹತ್ವದ ಪಾತ್ರವಿದ್ದು, ರಾಷ್ಟ್ರೀಯ ಏಕತೆಗೆ ಹಿಂದಿ ಭಾಷೆ ಸಹಕಾರಿಯೆಂದು ಮೈಸೂರು ಪ್ರಾದೇಶಿಕ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕ ಡಾ.ನಾರಾಯಣಶೆಟ್ಟಿ ಅಭಿಪ್ರಾಯಪಟ್ಟಿದ್ದಾರೆ.
    ಹಿಂದಿಯನ್ನು ಸಂಪರ್ಕ ಭಾಷೆಯಾಗಿ, ರಾಷ್ಟ್ರದಲ್ಲಿ ಬಳಕೆ ಮಾಡಲು ಎಲ್ಲರಲ್ಲಿ ಒಂದು ಮನೋಭಾವ ಬದಲಾಗಬೇಕಾಗಿದೆ. ಇಲ್ಲಿ ಅನೇಕ ಭಾಷೆಗಳಿದ್ದು ಹಿಂದಿಯನ್ನು ರಾಷ್ಟ್ರ ಭಾಷೆಯಾಗಿ ಬಳಕೆ ಮಾಡಲಾಗುತ್ತಿದೆ. ಜೊತೆಗೆ ಇದನ್ನು ಸಂಸದೀಯ ಭಾಷೆಯಾಗಿ ಭಾರತ ಸಂವಿಧಾನ ಘೋಷಿಸಿದ್ದು, ಸರ್ಕಾರಿ, ಅರೆ ಸರ್ಕಾರಿ, ಕಾರ್ಯಾಲಯಗಳಲ್ಲಿ ಕಡ್ಡಾಯಗೊಳಿಸಿದೆ ಎಂದು ತಿಳಿಸಿದರು.
    ಇತ್ತೀಚೆಗೆ ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಮೈಸೂರು ಹಾಗೂ ವಿಜಯವಿಠ್ಠಲ ಪದವಿಪೂರ್ವ ಮಹಾವಿದ್ಯಾಲಯದ ಸಹಯೋಗದೊಂದಿಗೆ ಇತ್ತೀಚೆಗೆ ಮೈಸೂರಿನಲ್ಲಿ ಜರುಗಿದ ಹಿಂದಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿಶುಪಾಲ ಗಾಂಧಿ ಹಿಂದಿ ಪ್ರಾಧ್ಯಾಪಕ, ಜೆ.ಎಸ್.ಎಸ್. ಮಹಿಳಾ ಕಾಲೇಜು, ಮೈಸೂರು ಮಾತನಾಡಿ ಆಂಗ್ಲರು ನಮ್ಮ ದೇಶವನ್ನು ಆಳಿದ್ದರು, ಇಲ್ಲಿ ಬಂದು ನಮ್ಮ ಸಂಸ್ಕøತಿಯನ್ನು ಕಲಿತಿದ್ದಾರೆ. ಆದರೆ ನಾವು ಭಾರತೀಯರು ಇಂದು ಅದೇ ಸಂಸ್ಕøತಿಯನ್ನು ಆಳಿಸಲು ಮುಂದಾಗಿದ್ದೇವೆ ಆದು ವಿಪರ್ಯಾಸ. ಇಂದಿನ ಪೀಳಿಗೆಗೆ ಹಿಂದಿ ಬಗ್ಗೆ ತಿಳುವಳಿಕೆ ನೀಡುವುದು ಅನಿವಾರ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.
ಕೇಂದ್ರ ವಾರ್ತಾ ಸೇವಾಧಿಕಾರಿ ಡಾ. ಟಿ.ಸಿ. ಪೂರ್ಣಿಮ ಮಾತನಾಡಿ ಇಂದಿನ ವಿದ್ಯಾರ್ಥಿಗಳೆಲ್ಲರೂ ಒಂದು ನಿರ್ಧಿಷ್ಟ ಭಾಷೆಯ ಮೇಲೆ ಪ್ರಭುತ್ವ ಸಾಧಿಸಿ, ಆ ಭಾಷೆಯ ಮೂಲಕ ಹಿಂದಿ ಭಾಷೆಯನ್ನು ಸರಳವಾಗಿ ಕಲಿತುಕೊಂಡು ತಮ್ಮ ಭವಿಷ್ಯವನ್ನು ರೂಪಿಸಿಕೊಳ್ಳುವಂತೆ ಕರೆ ನೀಡಿದರು.
ಕಾಲೇಜಿನ ಪ್ರಾಚಾರ್ಯ ಪ್ರೊ. ಸತ್ಯಪ್ರಸಾದ್ ಹಿಂದಿ ವಿಭಾಗದ ಉಪನ್ಯಾಸಕಿ ಶೋಭಾರಾಣಿ ಹಾಗೂ ಕ್ಷೇತ್ರ ಪ್ರಚಾರ ಸಹಾಯಕ ಮುರಳೀಧರ ಮತ್ತು ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆದಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಚರ್ಚಾಸ್ಪರ್ಧೆ, ಹಿಂದಿ ಪ್ರಬಂಧ ಸ್ಪರ್ಧೆ ಏರ್ಪಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 
ಅಕ್ಟೋಬರ್ 1 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.30.(ಕ.ವಾ.)-ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಅಕ್ಟೋಬರ್ 1 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಸೆಂಚುರಿ ಆಫ್ ಇಂಡಿಯಾ, ಬೆಳಿಗ್ಗೆ 11 ಗಂಟೆಗೆ  ಬಣ್ಣದ ಕೊಡೆ, ಮಧ್ಯಾಹ್ನ 2-30 ಗಂಟೆಗೆ ಸುವರ್ಣಪಥ ಸಾಕ್ಷ್ಯಚಿತ್ರ ಮಧ್ಯಾಹ್ನ 3 ಗಂಟೆಗೆ ಚೋಮನದುಡಿ.
       ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಆಚಾರ್ಯ ಜಗದೀಶ್,  ಬೆಳಗ್ಗೆ 11 ಗಂಟೆಗೆÀ ಶಬ್ಧೋ, ಮಧ್ಯಾಹ್ನ 2-30 ಗಂಟೆಗೆ  ದ.ರಾ ಬೇಂದ್ರೆ ಹಾಗೂ ಮಧ್ಯಾಹ್ನ 3 ಗಂಟೆಗೆ ಶಹೀದ್ ಚಲನಚಿತ್ರ ಪ್ರದರ್ಶಿಸಲಾಗುವುದು.
      ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀÉ ಚೆರಿ ಬ್ಲಾಸಮ್, ಮಧ್ಯಾಹ್ನ 1-30 ಗಂಟೆಗೆ ಮ್ಯೂಸಿಕ್ ಇನ್ ಡಾರ್ಕ್‍ನೆಸ್, ಮಧ್ಯಾಹ್ನ 3 ಗಂಟೆಗೆ ಉಮನ್ ಆನ್ ದ ಸಿಕ್ಸ್ತ್ ಫ್ಲೋರ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಲಕ್ಷ್ಮೀ-ಪರಾರಿ, ತಿಬ್ಬಾದೇವಿ-ಗುಂಡೇ(ಹಿಂದಿ),  ಒಲಂಪಿಯಾ-ಕೂರ್ಮಾವತಾರ, ಡಿ.ಆರ್.ಸಿ- ಬಚ್ಚನ್, ಸತ್ಯಂ- ರಾಜಾಹುಲಿ ಚಲನಚಿತ್ರಗಳು ಪ್ರದರ್ಶಿಸಲಾಗುವುದು.
    ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  15 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
      ಕೆ.ಆರ್.ನಗರದ ಶ್ರೀವೆಂಕಟೇಶ್ವರ-ಕೂರ್ಮಾವತಾರ, ನಂಜನಗೂಡಿನ ಲಲಿತ-ಆಟೋರಾಜ, ಟಿ.ನರಸೀಪುರದ ಮುರುಗನ್-ಪರಾರಿ, ಪಿರಿಯಾಪಟ್ಟಣದ ಮಹದೇಶ್ವರ-ಬಚ್ಚನ್, ಹುಣಸೂರಿನ ಲೀಲಾ- ಮೈನಾ ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ- ಬ್ರೇಕಿಂಗ್ ನ್ಯೂಸ್.
    ಪ್ರದರ್ಶನದ ಸಮಯ ಪ್ರತಿದಿನ ಸಂಜೆ  4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.
ಅಕ್ಟೋಬರ್ 1 ರಂದು ದಸರಾ ಮಹೋತ್ಸವದ ಕಾರ್ಯಕ್ರಮಗಳು
    ಮೈಸೂರು,ಸೆ.29.ಅಕ್ಟೋಬರ್ 1 ರಂದು ಬೆಳಿಗ್ಗೆ 10-30 ಗಂಟೆಗೆ ಮೈಸೂರಿನ ಜಗನ್ಮೋಹನ ಅರಮನೆಯಲ್ಲಿ ಪ್ರಧಾನಗೋಷ್ಠಿಗೆ ಪ್ರಸಿದ್ಧ ಕವಿ ಎಸ್.ಜಿ.ಸಿದ್ದರಾಮಯ್ಯ ಅವರು  ಚಾಲನೆ ನೀಡುವರು.
ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಅಕ್ಟೋಬರ್ 1 ರಂದು  ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಪಿ. ಮಲ್ಲೇಶ್ ಅವರಿಂದ ಸುಗಮ ಸಂಗೀತ, ಸಂಜೆ 6 ರಿಂದ 7-30 ಗಂಟೆಯವರೆಗೆ  ಮೈಸೂರಿನ ಕೊಳಲು-ಡಾ.ಎ.ವಿ.ಪ್ರಕಾಶ್, ವೀಣೆ-ಎಂ.ಕೆ.ಸರಸ್ವತಿ, ಮೃದಂಗ-ಹನುಮಂತರಾಜು ಅವರುಗಳಿಂದ ಜುಗಲ್‍ಬಂದಿ, ಜನಾರ್ಧನ್ ಹಾಗೂ  ಸಂಜೆ 7-30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಸಂಗೀತ ಕಟ್ಟಿ ಕುಲಕರ್ಣಿ ಮತ್ತು ತಂಡದಿಂದ ಅವರಿಂದ ಗೀತನಿನಾದ.
ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ತ್ರಿಪುರ- ಸಂಗ್ರಿ ಮೋಘ್, ಮಾರ್ಗಂಕಲಿ-ಕೇರಳ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಶಾರದಾ ಭರತ್ ಅವರಿಂದ ಹಿಂದೂಸ್ತಾನಿ ಸಂಗೀತ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಧಾರವಾಡ ವಿಶ್ವಾಂಬರಿ ನೃತ್ಯ ಶಾಲೆಯ ಅಂಕಿತಾ ರಾವ್ ಅವರಿಂದ ನೃತ್ಯ ರೂಪಕ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಕೇರಳ- ಮಾರ್ಗಂಕಲಿ, ಸಂಜೆ 6 ರಿಂದ 7-30 ಗಂಟೆಯವರೆಗೆ ಮೈಸೂರಿನ ಶ್ರೇಯಾ ಭಟ್ ಅವರಿಂದ ಸುಗಮ ಸಂಗೀತ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಭುವನೇಶ್ವರ್ ಪದ್ಮಶ್ರೀ ಡಾ|| ಇಲಿನಾ ಅವರಿಂದ  ಒಡಿಸ್ಸಿ ನೃತ್ಯ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬೆಂಗಳೂರಿನ ದುರ್ಗಾ ಪರಮೇಶ್ವರಿ ಕೃಪಾಪೋಷಿತ ಯಕ್ಷಗಾನ ಕೇಂದ್ರದಿಂದ ಯಕ್ಷಗಾನ, ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಚನ್ನಪಟ್ಟಣದ ಡಾ|| ರಾಜ್ ಕಲಾಬಳಗದಿಂದ ಪೌರಾಣಿಕ ನಾಟಕ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಬೆಂಗಳೂರಿನ ಸಾಯಿ ಕಲಾಕೇಂದ್ರದ ನಿಶಾ ಗಂಗಾಧರ್ ನಾಟಕ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಚಿಕ್ಕಬಳ್ಳಾಪುರ ಮುನಿವೆಂಕಟಪ್ಪ ಅವರಿಂದ ತಮಟೆ ವಾದನ ಹಾಗೂ ಆಂಧ್ರಪ್ರದೇಶದಿಂದ ಕೂಚುಪುಡಿ,  ಸಂಜೆ 6 ರಿಂದ 7-30 ಗಂಟೆಯವರೆಗೆ ಸಾಗರ ಕುಮಾರಿ ಪಿ.ಜಿ. ಸಹನ ಅವರಿಂದ ಸುಗಮಸಂಗೀತ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಮೈಸೂರಿನ ವಿದುಷಿ ರಾಧಾ ನಾಗರಾಜ ಅವರಿಂದ ಕರ್ನಾಟಕ ಸಂಗೀತ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಹರಿಯಾಣ-ಬೈಗಾ ಕರ್ಮ ನೃತ್ಯ, ಸಂಜೆ 6 ರಿಂದ 6-30 ಗಂಟೆಯವರೆಗೆ ಚಿಕ್ಕಮಗಳೂರು ಸವಿತಾ ಮತ್ತು ತಂಡದಿಂದ ಮಹಿಳಾ ವೀರಗಾಸೆ ಹಾಗೂ ಸಂಜೆ 6-30 ರಿಂದ 7 ಗಂಟೆಯವರೆಗೆ ದಕ್ಷಿಣ ಕನ್ನಡದ ಯಡಪದವು ಗೋಪಾಲಗೌಡ ಮತ್ತು ತಂಡದಿಂದ ಗುಮಟೆ ಪಾಂಗ ಕಾರ್ಯಕ್ರಮ ನಡೆಯಲಿವೆ. 
      ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಅಕ್ಟೋಬರ್ 1 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪೈಲ್ವಾನರಿಗೆ ಮೊಟ್ಟೆ ತಿನ್ನುವ ಸ್ಪರ್ಧೆ ಹಾಗೂ ಸಾರ್ವಜನಿಕರಿಗೆ ಕಡ್ಲೆಕಾಯಿ ತಿನ್ನುವ ಸ್ಪರ್ಧೆ.  ಮಧ್ಯಾಹ್ನ 3 ರಿಂದ 6 ಗಂಟೆಯವರೆಗೆ ಮೈಸೂರಿನ ವಿದ್ವಾನ್ ಜಯರಾಮ್ ಅವರಿಂದ ಕ್ಲಾರಿಯೋನೇಟ್ ವಾದನ್, ಚಿಕ್ಕಮಂಡ್ಯ ಶರತ್ ಕುಮಾರ್ ತಂಡದಿಂದ ಹುಲಿವೇó ಕುಣೀತ, ಮೈಸೂರಿನ ವಿದ್ಯಾರಣ್ಯಪುರಂ ಆಲ್ಬರ್ಟ್ ಕಲಾವೃಂದದಿಂದ ಹಾಸ್ಯಲಾಸ್ಯ, ಸಂಜೆ 6 ರಿಂದ 6-30 ಗಂಟೆಯವರೆಗೆ ಪಿರಿಯಾಪಟ್ಟಣ ತಾಲ್ಲೂಕು ಅನ್ನಭಾಗ್ಯ ಯಾತ್ರೆ ಕಾರ್ಯಕ್ರಮ  ಅವರಿಂದ ಜಾನಪದ ವೈವಿದ್ಯ,  ಸಂಜೆ 6-30 ರಿಂದ 7 ಗಂಟೆಯವರೆಗೆ ಮಂಡ್ಯಜಿಲ್ಲೆಯ ಬಿ.ಎಸ್. ನಾಗಲಿಂಗೇಗೌಡ ಯದುಗಿರಿ ಕಲಾಸಂಘದಿಂದ ಜನಪದ ಸಂಗೀತ, ರಾತ್ರಿ 7 ರಿಂದ 9 ಗಂಟೆಗೆ ಯುವ ಸಂಭ್ರಮದಲ್ಲಿ ವಿಜೇತ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 9 ರಿಂದ  10 ಗಂಟೆಗೆ ಮೈಸೂರಿನ ರಘು ಎಂ. ಮೆಲೋಡೀಸ್ ಅವರಿಂದ  ವಿಶೇಷ ಕಾರ್ಯಕ್ರಮ ಚಲನಚಿತ್ರ ಸಂಗೀತ.
     ಕವಿಗೋಷ್ಠಿ: ಅಕ್ಟೋಬರ್ 1 ರಂದು ಬೆಳಿಗ್ಗೆ 10-30 ಗಂಟೆಗೆ ಜಗನ್ಮೋಹನ ಅರಮನೆಯ ಸಭಾಂಗಣದಲ್ಲಿ ಪ್ರಧಾನ ಕವಿಗೋಷ್ಠಿ ಬೆಂಗಳೂರಿನ ಪ್ರಸಿದ್ಧ ಕವಿ ಪ್ರೊ. ಎಸ್.ಜಿ. ಸಿದ್ಧರಾಮಯ್ಯ, ಮುಖ್ಯ ಅತಿಥಿ ಕೋಲಾರದ ಪ್ರಸಿದ್ಧ ಕವಿ ಕೋಟಿಗಾನಹಳ್ಳಿ ರಾಮಯ್ಯ, ಭಾಗವಹಿಸುವ ಕವಿಗಳು  ಅಗ್ರಹಾರ ಕೃಷ್ಣಮೂರ್ತಿ, ಬಾನು ಮುಷ್ತಾಕ್, ಸತೀಶ ಕುಲಕರ್ಣಿ, ಶೂದ್ರ ಶ್ರೀನಿವಾಸ, ಎಲ್. ಹನುಮಂತಯ್ಯ, ಪ್ರತಿಭಾ ನಂದಕುಮಾರ್, ಧರಣೇಂದ್ರ ಕುರಿಕರಿ, ಕಾಶೀನಾಥ  ಅಂಬಲಗೆ, ಜಿ.ಪಿ. ಬಸವರಾಜು, ಸಿದ್ದನಗೌಡ ಪಾಟೀಲ, ಮೊಗಳ್ಳಿ ಗಣೇಶ್, ಜಿ.ವಿ.ಆನಂದಮೂರ್ತಿ ಸುಬ್ಬು ಹೊಲೆಯಾರ್, ಮಹ ಜಬೀನ್(ಉರ್ದು), ಶಂಕರ ಕಟಗಿ, ವಿಲಿಯಂ, ಮಂಜುನಾಥ್ ಲತಾ, ಹೊರೆಯಾಲ ದೊರೆಸ್ವಾಮಿ, ಹರಿಯಪ್ಪ ಪೇಜಾವರ, ಬಿ.ಆರ್.ಜೋಯಪ್ಪ(ಅರೆಭಾಷೆ), ಎಂ.ಆರ್. ಕಮಲ, ಜಯಶ್ರೀ ರಾಜು(ಕೊಂಕಣಿ), ಎನ್. ಜಗದೀಶ್ ಕೊಪ್ಪ, ಪ್ರಹ್ಲಾದ ಅಗಸನಕಟ್ಟೆ, ನಟರಾಜ ಬೂದಾಳು, ವಿನಯಾ ವಕ್ಕುಂದ, ಅತ್ರಾಡಿ ಅಮೃತಾ ಶೆಟ್ಟಿ (ತುಳು), ಶ್ರೀಪಾದ ಶೆಟ್ಟಿ, ಮೂವೇರಾ ರೇಖಾ ಪ್ರಕಾಶ್ (ಕೊಡವ) ಹಾಗೂ ಆರಿಫ್ ರಾಜಾ.
    ಕುಸ್ತಿ:- ಅಕ್ಟೋಬರ್ 1 ರಂದು ಮಧ್ಯಾಹ್ನ 3ರ ನಂತರ ಸಮಾರೋಪ ಸಮಾರಂಭ ಮತ್ತು ಬಹುಮಾನ ವಿತರಣಾ ಸಮಾರಂಭ ಮತ್ತು ಅಂತಿಮ ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.
   ತೋಟಗಾರಿಕೆ ಇಲಾಖೆ:- ಅಕ್ಟೋಬರ್ 1 ರಂದು ಸಾಲಾಡ್ ತಯಾರಿಕೆ ಸ್ಪರ್ಧೆ (ತರಕಾರಿ, ಹಣ್ಣು-ಹಂಪಲುಗಳ ಮತ್ತು ಡ್ರೈಪೋಟ್ಸ್) ಸ್ಪರ್ಧೆ ಮತ್ತು ಬಹುಮಾನ ವಿತರಣೆ.
    ಅಕ್ಟೋಬರ್ 2 ರಂದು ಗಾಂಧಿಜಯಂತಿ
     ಮೈಸೂರು,ಸೆ.30.ಮೈಸೂರು ಮಹಾನಗರ ಪಾಲಿಕೆ ವತಿಯಿಂದ ಅಕ್ಟೋಬರ್ 2 ರಂದು ಬೆಳಿಗ್ಗೆ 8-30 ಗಂಟೆಗೆ ಶ್ರೀ ರಂಗಚಾರ್ಲು ಸ್ಮಾರಕ ಪುರಭವನದಲ್ಲಿ ಮಹಾತ್ಮ ಗಾಂಧಿಜಯಂತಿ ಅಂಗವಾಗಿ ಪ್ರಾರ್ಥನಾ ಸಭೆ ನಡೆಯಲಿದೆ.
    ಅಕ್ಟೋಬರ್ 2 ರಂದು ಗಾಂಧಿಜಯಂತಿ
     ಮೈಸೂರು,ಸೆ.30.ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಅಕ್ಟೋಬರ್ 2 ರಂದು ಬೆಳಿಗ್ಗೆ 9-30 ಗಂಟೆಗೆ ಸೆನೆಟ್ ಭವನದಲ್ಲಿ ಗಾಂಧಿ ಜಯಂತಿ ಆಚರಿಸಲಾಗುವುದು.
    ರಘುಲೀಲಾ ಸಂಗೀತ ಶಾಲಾ ವಿದ್ಯಾರ್ಥಿಗಳು ಪ್ರಾರ್ಥನಾ ಗೀತೆಗಳು ಹಾಗೂ ಎನ್.ಕೆ.ಕೇಶವಮೂರ್ತಿ ಅವರು ಗಾಂಧಿ ಸ್ಮøತಿ ವಾಚನ ಮಾಡಲಿದ್ದಾರೆ.
   ಚಾಮರಾಜನಗರ ಜಿಲ್ಲೆಯ ಕೊತ್ತಲವಾಡಿ ಗ್ರಾಮದ ಕೃಷಿಕ ಎಂ. ಮಹೇಶ್ ಹಾಗೂ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ರೇವಣ್ಣ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. 

ಸೆನೆಟ್ ಭವನ: ಸಿನಿಮಾದಲ್ಲಿ ಬದಲಾವಣೆ
     ಮೈಸೂರು,ಸೆ.30.ಮಾನಸಗಂಗೋತ್ರಿಯ ಸೆನೆಟ್ ಭವನದಲ್ಲಿ ದಿನಾಂಕ 01-10-2014 ರಂದು ಮಧ್ಯಾಹ್ನ 3 ಗಂಟೆಗೆ ಪ್ರದರ್ಶಿಸಲು ಯೋಜಿಸಲಾಗಿದ್ದ ರಸಋಷಿ ಕುವೆಂಪು ಚಲನಚಿತ್ರಕ್ಕೆ ಬದಲು ಚೋಮನದುಡಿ ಹಾಗೂ ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಸಾಕ್ಷ್ಯಚಿತ್ರದ ಬದಲು ಸುವರ್ಣಪಥ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಚಲನಚಿತ್ರ ಸಮಿತಿ ಪ್ರಕಟಣೆ ತಿಳಿಸಿದೆ.
   ತಾಂತ್ರಿಕ ತೊಂದರೆ ಕಾರಣಗಳಿಗಾಗಿ ಪ್ರದರ್ಶನದಲ್ಲಿ ಬದಲಾವಣೆಯಾಗಿದ್ದು, ಸಾರ್ವಜನಿಕರು ಸಹಕರಿಸಲು ವಿನಂತಿಸಲಾಗಿದೆ.

ಪ್ರವಾಸ ಕಾರ್ಯಕ್ರಮ
    ಮೈಸೂರು,ಸೆ.30.ನಗರಾಭಿವೃದ್ಧಿ ಸಚಿವ ವಿನಯ್‍ಕುಮಾರ್  ಅವರು ಅಕ್ಟೋಬರ್ 7 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು ಬೆಳಗ್ಗೆ 10 ಗಂಟೆಗೆ ಟಿ.ನರಸೀಪುರ ತಾಲ್ಲೂಕಿನಲ್ಲಿ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆಯ ಕಾಮಗಾರಿ ಸ್ಥಳ ಪರಿಶೀಲಿಸುವರು. ನಂತರ  ಬೆಳಗ್ಗೆ 11 ಗಂಟೆಗೆ ಟಿ.ನರಸೀಪುರ ದಿಂದ ಕುಶಾಲನಗರಕ್ಕೆ ತೆರಳುವರು.
ಅಕ್ಟೋಬರ್ 1 ರಂದು ಉದ್ಘಾಟನೆ ಮತ್ತು ಶಿಲಾನ್ಯಾಸ ಕಾರ್ಯಕ್ರಮ
    ಮೈಸೂರು,ಸೆ.30.ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ವಿವಿಧ ಕಾಮಗಾರಿಗಳ ಉದ್ಘಾಟನೆ ಹಾಗೂ ಶಿಲಾನ್ಯಾಸವನ್ನು ಅಕ್ಟೋಬರ್ 1 ರಂದು ಮಧ್ಯಾಹ್ನ 12 ಗಂಟೆಗೆ ಹೆಗ್ಗಡದೇವನಕೋಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಆಯೋಜಿಸಲಾಗಿದೆ.
    ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮವನ್ನು ಉದ್ಘಾಟಿಸುವರು. ಶಾಸಕ ಎಸ್. ಚಿಕ್ಕಮಾದು ಅಧ್ಯಕ್ಷತೆ ವಹಿಸುವರು.
  ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಪಯೋಗಿ ಸಚಿವ ಡಾ| ಹೆಚ್.ಸಿ. ಮಹದೇವಪ್ಪ, ಪೌರಾಡಳಿತ ಮತ್ತು ಸಾರ್ವಜನಿಕ ಉದ್ದಿಮೆ ಸಚಿವ ಖಮರುಲ್ಲಾ ಇಸ್ಲಾಂ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಹೆಚ್.ಕೆ. ಪಾಟೀಲ್, ಸಹಕಾರ ಸಚಿವ ಹೆಚ್.ಎಸ್.ಮಹದೇವ ಪ್ರಸಾದ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ.ಖಾದರ್, ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಹೆಚ್.ಆಂಜನೇಯ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅರಮನಾಥ್. ಲೋಕಸಭಾ ಸದಸ್ಯರಾದ ಆರ್. ಧ್ರುವನಾರಾಯಣ್, ಪ್ರತಾಪ ಸಿಂಹ, ಸಿ.ಎಸ್. ಪುಟ್ಟರಾಜು,  ವಿಧಾನಸಭಾ ಸದಸ್ಯರಾದ ವಾಸು ತನ್ವೀರ್ ಸೇಠ್, ಎಂ.ಕೆ.ಸೋಮಶೇಖರ್, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಸಾ.ರಾ.ಮಹೇಶ್, ಹೆಚ್.ಪಿ. ಮಂಜುನಾಥ್, ವಿಧಾನಪರಿಷತ್ ಸದಸ್ಯರಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್. ಮಾದಪ್ಪ ಹಾಗೂ  ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ.
ದಸರಾ ಮಹೋತ್ಸವ ಗಾಳಿಪಟ ಸ್ಪರ್ಧೆ
 






ಮೈಸೂರು,ಸೆ.30.ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಪ್ರಚಾರ ಮತ್ತು ಗಾಳಿ  ಪಟ ಸ್ಫರ್ಧೆ ಉಪ ಸಮಿತಿಯಿಂದ ಗಾಳಿಪಟ ಹಾರಿಸುವ  ಸ್ಪರ್ಧೆ ನಗರದ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ಇಂದು  ಏರ್ಪಡಿಸಲಾಗಿತ್ತು.
     ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎಸ್.ಆರ್. ಪಾಟೀಲ್ ಅವರು ಗಾಳಿಪಟ ಹಾರಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್, ಸಹಕಾರ ಸಚಿವ ಹೆಚ್.ಎಸ್.ಮಹದೇವಪ್ರಸಾದ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ, ನರಸಿಂಹ ರಾಜ ವಿಧಾನ ಸಭಾ ಶಾಸಕ ತನ್ವೀರ್ ಸೇಠ್, ದಸರಾ ಪ್ರಚಾರ ಮತ್ತು ಗಾಳಿಪಟ ಸ್ಪರ್ಧೆ ಉಪಸಮಿತಿ ಅಧ್ಯಕ್ಷ ಕೆ.ದೀಪಕ್, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ, ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.   
           ಮೈಸೂರು ನಗರ ಹಾಗೂ ಸುತ್ತಮುತ್ತಲಿನÀ ಪ್ರದೇಶಗಳಿಂದ ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಗಾಳಿಪಟ ಸ್ಪರ್ಧೆಯಲ್ಲಿ
        ಭಾಗವಹಿಸಿ ಚಾಮುಂಡೇಶ್ವರಿ, ಹುಲಿ, ಹಾವು, ಗರುಡ, ರಾಕ್ಷಸ ಚಿತ್ರ ಹಾಗೂ ಆಕಾರ ಸೇರಿದಂತೆ ವಿವಿಧ ಬಣ್ಣ ಬಣ್ಣದ
         ಗಾಳಿಪಟಗಳನ್ನು ಗಾಳಿಯಲ್ಲಿ ಹಾರಿಬಿಡುತ್ತಿದ್ದುದು ವಿಶೇಷವಾಗಿತ್ತು. ಉತ್ಸಾಹದಿಂದ ಪುರುಷರು, ಮಹಿಳೆಯರು ಹಾಗೂ 
       ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಅತಿ ಎತ್ತರಕ್ಕೆ ಗಾಳಿಪಟವನ್ನು ಹಾರಿಸಿದ ಮೂರು ಸ್ಪರ್ಧಿಗಳಿಗೆ 
       ಬಹುಮಾನ  ನೀಡಲಾಯಿತು.
ಮಹಿಳೆಯರಿಗೆ ಪೋಸ್ಟ್ ಡಾಕ್ಟರಲ್ ಫೆಲೋಶಿಪ್
      ಮೈಸೂರು,ಸೆ.30.ವಿಶ್ವವಿದ್ಯಾನಿಲಯ ಧನ ಸಹಾಯ ಆಯೋಗ(Uಉಅ ),ನವದೆಹಲಿ ಇವರು 2014-15ನೇ ಸಾಲಿಗೆ 200 ಪೋಸ್ಟ್ ಡಾಕ್ಟರಲ್ ಫೆಲೋಶಿಪ್ ನೀಡಲು ಅರ್ಹ ಮಹಿಳಾ  ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸುವವರು ಪಿಹೆಚ್.ಡಿ., ಪದವಿ ಹೊಂದಿದ್ದು, ಪೋಸ್ಟ್ ಡಾಕ್ಟರಲ್ ಸಂಶೋಧನೆ ಮಾಡುವ ಆಸಕ್ತಿ ಹೊಂದಿರಬೇಕು.ಖಾಯಂ ನೌಕರಿ ಹೊಂದಿರಬಾರದು.
        ತಿತಿತಿ.ugಛಿ.ಚಿಛಿ.iಟಿ/ಠಿಜಜಿತಿ ಇಲ್ಲಿ ಅನ್‍ಲೈನ್ ಮೂಲಕ ಅಕ್ಟೋಬರ್ 15 ರೊಳಗಾಗಿ ಅರ್ಜಿ ಸಲ್ಲಿಸಬೇಕು.
  ಹೆಚ್ಚಿನ ಮಾಹಿತಿಗೆ ಉಪ ಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ , ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ,  ಮೈಸೂರು ವಿಶ್ವವಿದ್ಯಾನಿಲಯ, ಮೈಸೂರು ದೂರವಾಣಿ ಸಂಖ್ಯೆ 0821-2516844, ಮೊಬೈಲ್ ಸಂಖ್ಯೆ 9449686641 ನ್ನು ಸಂಪರ್ಕಿಸಬಹುದು.

ಮೈಸೂರು ದಸರಾ ವಸ್ತುಪ್ರದರ್ಶನ ಉಪಸಮಿತಿಗಳಿಗೆ ಅಧ್ಯಕ್ಷರು ಹಾಗೂ ಸದಸ್ಯರ ನೇಮಕ
     ಮೈಸೂರು,ಸೆ.30.ದಸರಾ ವಸ್ತುಪ್ರದರ್ಶನದ ಉಪಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರುಗಳನ್ನು ಜಿಲ್ಲಾಧಿಕಾರಿ ಸಿ.ಶಿಖಾ ಅವರು ನೇಮಕ ಮಾಡಿರುತ್ತಾರೆ ಅವರುಗಳು ವಿವರ ಇಂತಿದೆ.
     ಮಹಿಳಾ ಉದ್ದಿಮೆ (ದಸರಾ ವಸ್ತುಪ್ರದರ್ಶನ):-ಅಧ್ಯಕ್ಷರು ಲತಾಮೋಹನ್, ಉಪಾಧ್ಯಕ್ಷ ಡಾ|ಮಹದೇವಮ್ಮ, ಸದಸ್ಯರು-ಚಂದ್ರಶೇಖರ್ ಎಸ್.ಕೆ, ಡಿ. ಪರಮೇಶ, ಆರ್. ಎನ್. ವೆಂಕಟೇಶ್, ಎನ್. ಸುರೇಶ್ ಕುಮಾರ್, ಸಮೀಯುಲ್ಲ, ಎಂ. ರಾಜೀವ್, ಪಿ. ರಾಜೀವ್ ಕುಮಾರ್, ಸುಶೀಲ ಶಶಿಧರ್, ಕಲ್ಪನ ಪಿ., ಸುವರ್ಣ ಆರಾಧ್ಯ, ಶಾಂತಕುಮಾರಿ,  ನಿಂಗರಾಜು, ಬಿ.ಟಿ., ನರಸಿಂಹಮೂರ್ತಿ, ಎಂ.ಸಿ. ನಂಜಪ್ಪ, ನೂರ್ ಅಹಮದ್, ಪರಶಿವಮೂರ್ತಿ, ಗಿರೀಶ್, ರಾಧಾಕೃಷ್ಣ, ಅಣ್ಣಾದೊರೆ, ಮಂಜುಳ, ಲೀಲಾ ಪಂಪಾವತಿ, ನಾಗರತ್ನ, ಶಾಂತ, ಶಾಂತಾ.
    ಆರೋಗ್ಯ ಸಮಿತಿ:- ಅಧ್ಯಕ್ಷ ಎಂ.ಎನ್.ಮಹದೇವ್, ಉಪಾಧ್ಯಕ್ಷ ಶಕೀಲ್ ಅಹಮದ್, ಸದಸ್ಯರು-ರಮೀಜ ಬೇಗಂ, ಮಂಜುನಾಥ್, ಎಂ.ಆರ್. ರಮೇಶ್, ರಾಚಪ್ಪ, ಸೋಮಾಚಾರಿ, ಶ್ರೀನಿವಾಸ್, ಪುಟ್ಟಸ್ವಾಮಿ, ನಾಗರಾಜು, ನಟರಾಜು, ದಿನೇಶ ಎಂ, ಶಿವರಾಜು, ಲಿಂಗಪ್ಪ, ಆರ್. ಹೆಚ್. ಕುಮಾರ್, ಎಸ್. ಪ್ರತಾಪ್, ಅಯೂಬ್ ಶರೀಫ್, ಸೈಯ್ಯದ್ ಸರ್ ತಾಜ್, ಹುಲಿ ಚಾಮುಂಡನಾಯಕ, ಶಫೀರ್ ಅಹಮದ್, ಗುರುಸ್ವಾಮಿ, ವಿನಯ್ ಕುಮಾರ್ ಕೆ.ಎಸ್., ಮಹೇಶ್, ರವಿ, ಹೆಚ್.ಪಿ. ರಾಜಶೇಖರ ಮೂರ್ತಿ, ಎಸ್. ಗೋವಿಂದ ನಾಯಕ, ಬಸಪ್ಪ,     

     ಮಹಿಳಾ ಮತ್ತು ಮಕ್ಕಳ ಸಮಿತಿ:- ಅಧ್ಯಕ್ಷ ಡಾ. ಶೈಲಾ ಬಾಲರಾಜ್, ಉಪಾಧ್ಯಕ್ಷ ವಿಜಯಲಕ್ಷ್ಮಮ್ಮ, ಸದಸ್ಯರು-ಸುಜಾತ, ರಾಜೇಂದ್ರ, ಗಾಯತ್ರಿ ನಾರಾಯಣ ಗೌಡ, ನಳಿನಿರಾಜೇ ಅರಸ್, ಸರೋಜಾ ಕೃಷ್ಣಮೂರ್ತಿ, ತಾಜ್ ಉನ್ನೀಸ, ಲೂರ್ದ್ ಮೇರಿ, ಸಿ.ಎಂ. ಮಹದೇವಮ್ಮ, ಲಕ್ಷ್ಮೀನಾಯ್ಡು, ವೆಂಕಟಲಕ್ಷ್ಮಿ, ಸುವರ್ಣ ಆರಾಧ್ಯ, ಮಂಜುಳ ಮಲ್ಲೇಗೌಡ, ವೆಂಕಟಲಕ್ಷ್ಮಮ್ಮ, ನಾಜನಿ ಬೇಗಂ, ವಿಜಯಕುಮಾರಿ, ಕಮಲ, ನಾಗರತ್ನ, ರಜನಿ, ಮಂಜುಳ ರಮೇಶ್, ಚಾಮುಂಡಮ್ಮ, ಅಜಿಯಾ ಶಕೀರ ಬೇಗಂ, ರಾಣಿ ಎನ್., ರೂಪಾ, ಪ್ಯಾರಿಜಾನ್,  ವೆಂಕಟಮ್ಮ.
     ಸಾಂಸ್ಕøತಿಕ ಸಮಿತಿ: ಅಧ್ಯಕ್ಷ ಆರ್. ಮೂರ್ತಿ, ಉಪಾಧ್ಯಕ್ಷ ಹೆಚ್.ಕೆ. ಅನಂತ, ಮೈ.ನಾ. ಗೋಪಾಲ ಕೃಷ್ಣ, ಸಿ.ಎಸ್. ರಘು, ಸದಸ್ಯರು-ಸಿದ್ದರಾಜು, ಎಂ. ಪುಟ್ಟಸ್ವಾಮಿ, ರಾಜಶೇಖರ್, ಎನ್. ನಂಜುಂಡ, ಹೆಚ್. ತೇಜಸ್ವಿ, ರಮೇಶ್ ಕೆ., ಎಂ. ಮಲ್ಲರಾಜೇ ಅರಸ್, ಸೈಯದ್ ಅಬ್ಬಾಸ್ ಮೆಹದಿ, ಎಂ. ಮಹದೇವ್, ಕುಮಾರ್, ಪ್ರಕಾಶ್, ಡಿ.ಎಂ. ದಿವಾಕರ್, ಸುರೇಶ್, ಎಂ.ಡಿ. ಹ್ಯಾರಿಸ್, ಚಂದ್ರು, ಎಂ.ಎಲ್. ಮಂಜುನಾಥ್, ಎಂ.ಎಲ್. ನಾಗಣ್ಣ, ಬಿ. ಸುರೇಶ್, ಸೋಮಶೇಖರ್, ಮಹೇಶ್, ರವಿಚಂದ್ರು ಪಿ.,  ಎಂ.ಎಲ್. ರಾಜು, ಆರ್. ಎಲ್. ಅನಂತನಾರಾಯಣ, ಗುರುಸ್ವಾಮಿ, ಮೊಹಮ್ಮದ್ ರಫೀ,  ಅಬ್ದುಲ್ ಕುದ್ದೂಸ್, ಮಹಮ್ಮದ್ ಶಫಿ, ಸಯ್ಯದ್ ಅಬ್ದುಲ್ ವಲಿ, ಮಹದೇವನಾಯಕ, ಖದೀರ್ ಅಹಮದ್, ಎಂ. ಶ್ರೀಧರ್, ಬಿ. ಎಸ್. ರಾಮು, ಕುಮಾರ್, ಗಿರಿಶ್, ಕೆ. ಬಿ. ಸೌಮ್ಯ.

Monday, 29 September 2014

  
ಸೆಪ್ಟೆಂಬರ್  30 ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.29.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಸೆಪ್ಟೆಂಬರ್ 30 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಹೊಯ್ಸಳ ಅಂಡ್ ಚಾಲುಕ್ಯನ್ ಆರ್ಕಿಟೆಕ್ಚರ್ ಆಫ್ ಕರ್ನಾಟಕ, ಬೆಳಿಗ್ಗೆ 11 ಗಂಟೆಗೆ  ಕಬ್ಬಡಿ, ಮಧ್ಯಾಹ್ನ 2-30 ಗಂಟೆಗೆ ಡಿ.ದೇವರಾಜ ಅರಸ್, ಮಧ್ಯಾಹ್ನ 3 ಗಂಟೆಗೆ ಕಳವು.
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಭಗತ್ ಸಿಂಗ್,  ಬೆಳಗ್ಗೆ 11 ಗಂಟೆಗೆ ಅಸ್ತು, ಮಧ್ಯಾಹ್ನ 2-30 ಗಂಟೆಗೆ  ದೇ. ಜವರೇಗೌಡ ಹಾಗೂ ಮಧ್ಯಾಹ್ನ 3 ಗಂಟೆಗೆ ಮಂಜಾಡಿಕುರು ಚಲನಚಿತ್ರ ಪ್ರದರ್ಶಿಸಲಾಗುವುದು.
    ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆÀ ಲೋಲಾ, ಮಧ್ಯಾಹ್ನ 1-30 ಗಂಟೆಗೆ ಚಂಗ್ ಕಿಂಗ್ ಎಕ್ಸ್‍ಪ್ರೆಸ್, ಮಧ್ಯಾಹ್ನ 3 ಗಂಟೆಗೆ ಪಿಕ್ ಪಾಕೆಟ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಲಕ್ಷ್ಮೀ-ಲೂಸಿಯಾ, ತಿಬ್ಬಾದೇವಿ-ಕ್ವೀನ್ (ಹಿಂದಿ),  ಒಲಂಪಿಯಾ-ಬೃಂದಾವನ, ಡಿ.ಆರ್.ಸಿ-ವಿಕ್ಟರಿ, ಸತ್ಯಂ- ಬುಲ್‍ಬುಲ್ ಚಲನಚಿತ್ರಗಳು ಪ್ರದರ್ಶಿಸಲಾಗುವುದು.
    ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  15 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
     ಕೆ.ಆರ್.ನಗರದ ಶ್ರೀವೆಂಕಟೇಶ್ವರ-ಬೃಂದಾವನ, ನಂಜನಗೂಡಿನ ಲಲಿತ-ಎದೆಗಾರಿಕೆ, ಟಿ.ನರಸೀಪುರದ ಮುರುಗನ್-ಲೂಸಿಯಾ, ಪಿರಿಯಾಪಟ್ಟಣದ ಮಹದೇಶ್ವರ-ವಿಕ್ಟರಿ, ಹುಣಸೂರಿನ ಲೀಲಾ- ಬುಲ್‍ಬುಲ್  ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ- ಅದ್ಧೂರಿ.
    ಪ್ರದರ್ಶನದ ಸಮಯ ಪ್ರತಿದಿನ ಸಂಜೆ  4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.

ಸೆಪ್ಟೆಂಬರ್ 30 ರ ದಸರಾ ಮಹೋತ್ಸವದ ಕಾರ್ಯಕ್ರಮಗಳು
    ಮೈಸೂರು,ಸೆ.29.ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಲಲಿತಮಹಲ್ ಹೆಲಿಪ್ಯಾಡ್‍ನಲ್ಲಿ ದಸರಾ ಗಾಳಿಪಟ ಸ್ಪರ್ಧೆಗೆ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಯೋಜನೆ ಮತ್ತು ಸಾಂಖ್ಯಿಕ ಇಲಾಖೆ ಸಚಿವ ಎಸ್.ಆರ್. ಪಾಟೀಲ್, ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಅಧ್ಯಕ್ಷ ಎಂ. ಶಿವಣ್ಣ ಹಾಗೂ ಮೈಸೂರು ಮಹಾನಗರಪಾಲಿಕೆ ಮಹಾಪೌರರಾದ ಎನ್.ಎಂ.ರಾಜೇಶ್ವರಿ ಸೋಮು ಅವರುಗಳು  ಚಾಲನೆ ನೀಡುವರು.
ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಸೆಪ್ಟೆಂಬರ್ 30 ರಂದು  ಸಂಜೆ 5-30 ರಿಂದ 6 ಗಂಟೆಯವರೆಗೆ ನಂಜನಗೂಡಿನ ಗಾನಸುಧಾ ಅವರಿಂದ ಸುಗಮ ಸಂಗೀತ, ಸಂಜೆ 6 ರಿಂದ 7-30 ಗಂಟೆಯವರೆಗೆ  ಅಪ್ಪಗೆರೆ ತಿಮ್ಮರಾಜು, ಜನಾರ್ಧನ್, ಜೋಗಿಲ ಸಿದ್ದರಾಜು, ಸವಿತಾ ಗಣೇಶ್‍ಪ್ರಸಾದ್, ಶಾಂತ ಕುಲಕರ್ಣಿ, ಕೋಲಾರ ರಾಜಪ್ಪ, ರತ್ನ  ವಿನುತ ಬೂದಿಹಾಳ ರಾಮಕೃಷ್ಣ ಪೂಜಾರ, ಪಿಚ್ಚಳ್ಳಿ ಶ್ರೀನಿವಾಸ್ ಅವರುಗಳಿಂದ ಜಾನಪದ ಝೇಂಕಾರ ಹಾಗೂ  ಸಂಜೆ 7-30 ರಿಂದ 9 ಗಂಟೆಯವರೆಗೆ ಕದ್ರಿ ಗೋಪಾಲನಾಥ್ ಮತ್ತು ಪಂಡಿತ್ ಪ್ರವೀಣ್ ಗೋಡ್ಖಿಂಡಿ ಅವರಿಂದ ಜುಗಲ್‍ಬಂದಿ.
ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ದಾವಣಗೆರೆ ಎಲಿನಪ್ಪ ಜಾನಪದ ತಂಡದ ಶೈಲಜಾ ಬಾಯಿ ಅವರಿಂದ ಲಂಬಾಣಿ ನೃತ್ಯ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಅನುರಾಧ ಮಧುಸೂದನ್ ಅವರಿಂದ ವೀಣೆ  ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಕೊಪ್ಪಳ ಚೇತನ್ ಸಾಂಸ್ಕøತಿಕ ಕಲಾಸಂಸ್ಥೆಯಿಂದ ಗೀತ  ರೂಪಕ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಚಿಕ್ಕಮರಿಯಪ್ಪ ತಂಡದಿಂದ ಬೀಸುಕಂಸಾಳೆ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ಚೈತನ್ಯ ಕುಮಾರ ಅವರಿಂದ ಕೊಳಲು ವಾದನ ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಮೈಸೂರಿನ ರಾಜೇಶ್ ಪಡಿಯಾರ್ ಅವರಿಂದ ಸುಗಮ ಸಂಗೀತ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಬಳ್ಳಾರಿ ಕೆ. ಹೊನ್ನೂರ ಸ್ವಾಮಿ ಅವರಿಂದ ತೊಗಲುಗೊಂಬೆ, ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಬೈಲಹೊಂಗಲ ಮಲ್ಲವ್ವ ಮ್ಯಾಗೇರಿ ಅವರಿಂದ ಕೃಷ್ಣ ಪಾರಿಜಾತ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಮೈಸೂರಿನ ಪರಿವರ್ತನ ತಂಡದಿಂದ ರಾವಿ ನದಿದಂಡೆ ಮೇಲೆ ನಾಟಕ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಬನಹಟ್ಟಿ ಜಯದೇವ ಮಹದೇವ ಬಣಕಾರ್ ಅವರಿಂದ ಝಾಂಜ್ ಪಥಕ್,  ಸಂಜೆ 6 ರಿಂದ 7-30 ಗಂಟೆಯವರೆಗೆ ಧಾರವಾಡದ ಶಿವಕುಮಾರ್ ಪಾಟೀಲ್ ಅವರಿಂದ ವಚನ ಗಾಯನ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಬೆಂಗಳೂರಿನ ವಿದುಷಿ ಶಿಲ್ಪಾ ಅರವಿಂದ ಅವರಿಂದ ಕೂಚುಪುಡಿ ನೃತ್ಯ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ತ್ರಿಪುರ-ಸಂಗ್ರೀಮೋಫ್, ಸಂಜೆ 6 ರಿಂದ 6-30 ಗಂಟೆಯವರೆಗೆ ಮುಧೋಳ್ ವಿಠಲ ಬಲವಂತರಾವ್ ಸಿಂಧೆ ಹಾಗೂ ಸಂಜೆ 6-30 ರಿಂದ 7 ಗಂಟೆಯವರೆಗೆ ಟಿ.ನರಸೀಪುರದ ಸಾಯಿನಾಥ ಸಾಂಸ್ಕøತಿಕ ಸಂಸ್ಥೆಯಿಂದ ಕೋಲಾಟ ಕಾರ್ಯಕ್ರಮ ನಡೆಯಲಿವೆ. 
    ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸೆ. 30 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಪಾಕಶಾಲೆಯಲ್ಲಿ ಸ್ಟಾರ್ ಹೊಟೇಲ್ ವಿಭಾಗದಲ್ಲಿ ಚಿಕನ್ ಬಿರಿಯಾನಿ ಹಾಗೂ ಕೇಟರರ್/ಚಿಕ್ಕ ಹೊಟೇಲ್ ವಿಭಾಗದಲ್ಲಿ ಅಕ್ಕಿ ಶ್ಯಾವಿಗೆ ಮತ್ತು ನಾಟಿ ಕೋಳಿ ಸಾರು ಏರ್ಪಡಿಸಲಾಗಿದೆ.  ಮಧ್ಯಾಹ್ನ 3 ರಿಂದ 5-30 ಗಂಟೆಯವರೆಗೆ ಮಂಡ್ಯ ಬೂತನಹೊಸಹಳ್ಳಿಯ ಸತೀಶ್ ಅವರಿಂದ ಸೋಮನಕುಣಿತ, ಮೈಸೂರಿನ ವಿದ್ವಾನ್ ಹನುಮಂತರಾಜು ಮತ್ತು ವೃಂದದವರಿಂದ ಲಯನಾದ ತರಂಗ, ಮೈಸೂರಿನ ಸುಮಂಗಲಾ ಜಂಗಮಶೆಟ್ಟಿ ಅವರಿಂದ ಸುಗಮ ಸಂಗೀತ ಸಂಜೆ 5-30 ರಿಂದ 6 ಗಂಟೆಯವರೆಗೆ ಕೆ.ಆರ್.ನಗರ ತಾಲ್ಲೂಕಿನ ಅನ್ನಭಾಗ್ಯ ಯಾತ್ರೆ ಕಾರ್ಯಕ್ರಮ, ಸಂಜೆ 6 ರಿಂದ 7 ಗಂಟೆಗೆ ಮೇಲುಕೋಟೆ ರತ್ನಂ ಮತ್ತು ಸಂಗಡಿಗರು ಸ್ಯಾಕ್ಸೊಪೋನ್ ವಾದನ ರಾತ್ರಿ 7 ರಿಂದ 7-30 ಗಂಟೆಗೆ ಯುವ ಸಂಭ್ರಮದಲ್ಲಿ ವಿಜೇತ ಕಾಲೇಜು ವಿದ್ಯಾರ್ಥಿಗಳಿಂದ ನೃತ್ಯ ವೈವಿಧ್ಯ, ರಾತ್ರಿ 7-30 ರಿಂದ  8-30 ಗಂಟೆಗೆ ಮೈಸೂರಿನ ಗೋಕುಲಂ ಪ್ರಮೋದ್ ಶೆಟ್ಟಿ, ನಿರಂತರ ನೃತ್ಯ ಕಾರ್ಟೂನ್ ವಿಶೇಷ ಕಾರ್ಯಕ್ರಮ ಸಮಕಾಲಿನ ನೃತ್ಯ.
     ಮಹಿಳಾ ದಸರಾ:- ಸೆಪ್ಟೆಂಬರ್ 30 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಜೆ.ಕೆ.ಗ್ರೌಂಡ್‍ನಲ್ಲಿ ವಿಶೇಷ ಮಕ್ಕಳು ಹಾಗೂ ವಿಕಲಚೇತನರಿಗಾಗಿ  ಆಟೋಟ ಸ್ಪರ್ಧೆಗಳು ಹಾಗೂ ಸಾಂಸ್ಕøತಿಕ ಕಾರ್ಯಕ್ರಮ, ಮಧ್ಯಾಹ್ನ  3  ರಿಂದ 4 ಗಂಟೆಯವರೆಗೆ ಸ್ತ್ರೀಸೇವಾ ನಿಕೇತನ (ರಾಜ್ಯ ಮಹಿಳಾ ನಿಲಯ) ಮೈಸೂರು ಸಂಸ್ಥೆಯ ನಿವಾಸಿಗಳಿಂದ ಮಹಿಳಾ ದೌರ್ಜನ್ಯ ತಡೆ ಕುರಿತು ರೂಪಕ ಹಾಗೂ ಇತರೆ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ ಹಾಗೂ ಸಂಜೆ 4 ರಿಂದ 6 ಗಂಟೆಯವರೆಗೆ ಸಮಾರೋಪ ಸಮಾರಂಭ ಕಾರ್ಯಕ್ರಮ. ಸ್ಥಳ: ಜೆ.ಕೆ.ಗ್ರೌಂಡ್ಸ್
     ಮಕ್ಕಳ ದಸರಾ:- ಸೆ. 30 ರಂದು ಬೆಳಿಗ್ಗೆ 9 ರಿಂದ 9-30 ಗಂಟೆಯವರೆಗೆ  ಮೈಸೂರಿನ ಶಾಂಭವಿ ಸಂಗೀತ ಶಾಲಾ ಮಕ್ಕಳಿಂದ ಸುಗಮ ಸಂಗೀತ, ಬೆಳಿಗ್ಗೆ 9-30 ರಿಂದ 10-30 ಗಂಟೆಯವರೆಗೆ  ಮೈಸೂರಿನ ಕುಕ್ಕರಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮಕ್ಕಳಿಂದ ಡಾ| ಚಂದ್ರಶೇಖರ ಕಂಬಾರ ವಿರಚಿತ ನಾಟಕ ಪುಷ್ಪರಾಣಿ, ಬೆಳಿಗ್ಗೆ 10-30 ರಿಂದ 1-30 ಗಂಟೆಯವರೆಗೆ ಬೆಂಗಳೂರಿನ ಗೋಪಿಮಾಧವ್ ಕ್ವಿಜ್ ಮಾಸ್ಟರ್ ಅವರಿಂದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿಭಾಗದಲ್ಲಿ 8 ರಿಂದ 10 ತರಗತಿ ಮಕ್ಕಳಿಗೆ, ಮಧ್ಯಾಹ್ನ 2 ರಿಂದ 3-30 ಗಂಟೆಯವರೆಗೆ ಮೈಸೂರು ತಾಲ್ಲೂಕಿನ ಡಿ.ಎಂ.ಜಿ.ಹಳ್ಳಿಯ ನವೋದಯ ಶಾಲೆ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಹಾಗೂ ಮಧ್ಯಾಹ್ನ 3-30 ರಿಂದ 4-30 ಗಂಟೆಯವರೆಗೆ 2013-14ನೇ ಸಾಲಿನಲ್ಲಿ ರಾಜ್ಯ/ರಾಷ್ಟ್ರಮಟ್ಟದಲ್ಲಿ ಇನ್‍ಸ್ಪೈರ್/ಎನ್.ಟಿ.ಎಸ್.ಇ/ಪ್ರತಿಭಾ ಕಾರಂಜಿ/ಎನ್.ಸಿ.ಸಿ./ಕ್ರೀಡಾ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಪಡೆದ ಹಾಗೂ ಯುವ ವಿಜ್ಞಾನಿ ಪ್ರಶಸ್ತಿ ವಿಜೇತ ಮೈಸೂರು ಜಿಲ್ಲೆಯ ವಿದ್ಯಾರ್ಥಿಗಳಿಗೆ ಅಭಿನಂದನೆ, ಮಹಿಳಾ ಮತ್ತು ಮಕ್ಕಳ ದೌರ್ಜನ್ಯ ತಡೆ ಬಗ್ಗೆ ಜಿಲ್ಲಾ ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ಹಾಗೂ ಸಮಾರೋಪ ಸಮಾರಂಭ, ಸ್ಥಳ: ಜಗನ್ಮೋಹನ ಅರಮನೆ.   
     ಕವಿಗೋಷ್ಠಿ: ಸೆಪ್ಟೆಂಬರ್ 30 ರಂದು ಬೆಳಿಗ್ಗೆ 11-30 ಗಂಟೆಗೆ ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಯುವ ಕವಿಗೋಷ್ಠಿ ಬೆಂಗಳೂರಿನ ಕನ್ನಡ ಪುಸ್ತಕ ಪ್ರಾಧಿಕಾರ ಅಧ್ಯಕ್ಷ ಡಾ|| ಬಂಜಗೆರೆ ಜಯಪ್ರಕಾಶ, ಮುಖ್ಯ ಅತಿಥಿ ಡಾ|| ಎಚ್.ಎಲ್. ಪುಷ್ಪ ಪ್ರಸಿದ್ಧ ಕವಿಗಳು, ಭಾಗವಹಿಸುವ ಕವಿಗಳು  ಚಂದ್ರು ತುರುವಿನಹಾಳ, ಚ.ಹ.ರಘುನಾಥ, ಸಂಗಮೇಶ್ ಕೋಟೆ, ಹನಸೋಗೆ ಸೋಮಶೇಖರ್, ಮರಿಯಪ್ಪ ನಾಟೇಕರ್, ರವಿಕುಮಾರ್ ನೀಹ, ಮಹೇಶ್ ಬಳ್ಳಾರಿ, ಅಲ್ಲಾ ಗಿರಿರಾಜ್, ಸಿ.ವಿ.ಶೇಷಾದ್ರಿ ಹೊಳವನಹಳ್ಳಿ, ಎಂ.ಡಿ.ಗೋಗೇರಿ, ಕೆ.ಪಿ. ವೀರಲಿಂಗನಗೌಡ, ಸೋಸಲೆ ಗಂಗಾಧರ, ನಿಜಲಿಂಗಪ್ಪ ಮಟ್ಟಿಹಾಳ, ನೆಲ್ಲಿಕಟ್ಟೆ ಸಿದ್ದೇಶ್, ಎಸ್. ಮಂಜುನಾಥ್, ಪ್ರವರ ಕೊಟ್ಟೂರು, ಬಸವರಾಜ ಸೂಳಿಬಾವಿ, ಸರ್ಜಾಶಂಕರ ಹರಳೀಮಠ, ಮಂಜುನಾಥ ಅದ್ದೆ, ಶಿವರಾಜ ಬೆಟ್ಟದೂರು, ಸೈಫ್ ಜಾನ್ಸೆ, ಅರ್ಥ ಪೆರ್ಲ, ಕೈದಾಳ ಕೃಷ್ನಮೂರ್ತಿ, ಮಿತಾ ದೇವನೂರು, ರವಿ ಅಜ್ಜೀಪುರ, ಮಲ್ಲು ಸಿ. ಕೂತ್ನೂರು, ಅಶೋಕ ನರೋಡೆ, ವೆಂಕಟೇಶ್ ಇಂದ್ವಾಡಿ, ವಿಠಲ್ ಆರ್. ಜಾಂಬಾಳ, ರೇಷ್ಮಾ ಶೇಖ್, ಸತ್ಯಮಂಗಲ ಮಹಾದೇವ, ಲೋಕೇಶ್ ಎಸ್., ಸುರೇಶ್ ಕಾಂತರಾಜಪುರ.
    ಮಧ್ಯಾಹ್ನ 2-30 ಗಂಟೆಗೆ  ಮಾನಸಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ನಡೆಯಲಿರುವ ಕನ್ನಡ ಕಾವ್ಯ ಸುಧೆಗೆ ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಡಾ|| ಹಿ.ಚಿ. ಬೋರಲಿಂಗಯ್ಯ ಅವರಿಂದ ಕಾವ್ಯ ಸುಧೆಗೆ ಚಾಲನೆ ನೀಡುವರು. ಅಧ್ಯಕ್ಷತೆ ಮೈಸೂರಿನ ಪ್ರಸಿದ್ಧ ಸಂಗೀತಗಾರರಾದ ಪಂಡಿತ್ ಇಂದೂಧರ ನಿರೋಡಿ, ಮುಖ್ಯ ಅತಿಥಿ ಪ್ರೊ|| ಆರ್. ರಾಮಕೃಷ್ಣ, ಮೈಸೂರಿನ ಪಂಡಿತ್ ವೀರಭದ್ರಯ್ಯ ಹಿರೇಮಠ ಮತ್ತು ತಂಡದಿಂದ ವಚನ ಗಾಯನ, ಮೈಸೂರಿನ ಪಿ. ಸುರಭಿ ಮತ್ತು ತಂಡದಿಂದ ಕೀರ್ತನೆ ಗಾಯನ, ಮಂಡ್ಯ ಹುರಗಲವಾಡಿ ರಾಮಯ್ಯ ಮತ್ತು ತಂಡದಿಂದ ತತ್ವಪದ ಗಾಯನ, ಮೈಸೂರಿನ ನಿತಿನ್ ರಾಜಾರಾಮಶಾಸ್ತ್ರಿ ಮತ್ತು ತಂಡದಿಂದ ಭಾವಗೀತೆ ಗಾಯನ ಹಾಗೂ ಮೈಸೂರಿನ ಜಯಶಂಕರ ಮೇಸ್ತ್ರಿ ಮತ್ತು ತಂಡ ಹಾಗೂ ರಾಮಚಂದ್ರ ತಂಡದಿಂದ ಜನಪದ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ.
    ಕುಸ್ತಿ:- ಸೆ. 30 ರಂದು ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಕುಸ್ತಿ ಪಂದ್ಯಾವಳಿಗಳನ್ನು ಮತ್ತು ದಿನಾಂಕ 01-10-2014 ರಂದು ರಾಜ್ಯ ರಾಷ್ಟ್ರಮಟ್ಟದ ಪುರುಷರ ಮತ್ತು ಮಹಿಳೆಯರ ಅಂತಿಮ  ಕುಸ್ತಿ ಪಂದ್ಯಾವಳಿಗಳು ನಡೆಯಲಿದೆ.
ಪ್ರವಾಸ ಕಾರ್ಯಕ್ರಮ
    ಮೈಸೂರು,ಸೆ.29.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಕ್ಟೋಬರ್ 1 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ಅಂದು ಮಧ್ಯಾಹ್ನ 1-35 ಗಂಟೆಗೆ ವಿಶೇಷ ವಿಮಾನದ ಮೂಲಕ ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸುವರು. ಮಧ್ಯಾಹ್ನ 3 ಗಂಟೆಗೆ ಹೆಚ್.ಡಿ.ಕೋಟೆಯ ವಿಧಾನಸಭಾ ಕ್ಷೇತ್ರದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ನಂತರ ಸಂಜೆ 6 ಗಂಟೆಗೆ ಮೈಸೂರು ವಿಮಾನ ನಿಲ್ದಾಣದಿಂದ ವಿಶೇಷ ವಿಮಾನದ ಮೂಲಕ ಬೆಂಗಳೂರಿಗೆ  ತೆರಳುವರು.
ಏರೋ ಮಾಡೆಲಿಂಗ್ ಪ್ರದರ್ಶನಕ್ಕೆ ಚಾಲನೆ
       ಮೈಸೂರು,ಸೆ.29.ನಾಡ ಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ ಜಿಲ್ಲಾಡಳಿತ ಹಾಗೂ ಮೈಸೂರು ಫ್ಲಲಿಂಗ್ ಅಸೋಸಿಯೇಷನ್ ವತಿಯಿಂದ ನಗರದ  ಬನ್ನಿಮಂಟದ ಕವಾಯತು ಮೈದಾನದಲ್ಲಿ ಏರ್ಪಡಿಸಲಾದ ಏರೋ ಮಾಡೆಲಿಂಗ್ ಕಾಯಕ್ರಮಕ್ಕೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್ ಅವರು ರಿಮೋಟ್ ಕಂಟ್ರೋಲ್ ಒತ್ತುವ ಮೂಲಕ ಇಂದು ಚಾಲನೆ ನೀಡಿದರು.
       ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ಸುತ್ತಮುತ್ತÀಲ್ಲಿನ ವೃತ್ತಿಪರ ರಿಮೋಟ್ ನಿಯಂತ್ರಣ ವಿಮಾನ ಫ್ಲೈಯರ್‍ಗಳು ಏರೋ ಮಾಡೆಲಿಂಗ್ ಕಾಯಕ್ರಮದಲ್ಲಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದರು. ಒಟ್ಟು 15 ರಿಮೋಟ್ ನಿಯಂತ್ರಣ ವಿಮಾನಗಳು ಆಕಾಶದಲ್ಲಿ ಹಾರಾಡುವ ಮೂಲಕ ವೀಕ್ಷಿಸಲು ಆಗಮಿಸಿದ ಜನರ ಮನ ಸೂರೆಗೊಳಿಸಿತು.
 40ಕ್ಕೂ ಹೆಚ್ಚು ಪ್ರದರ್ಶನವನ್ನು ನೀಡಿರುವ ಭಾರತದಲ್ಲೇ ಅತಿ ಕಿರಿಯ ರೇಡಿಯೋ ನಿಯಂತ್ರಣ ಪೈಲೆಟ್ ಎಂಬ ಹೆಗ್ಗಳಿಕೆಗೆ ಪಾತ್ರರಾದ ಬೆಂಗಳೂರಿನ ಏಳು ವರ್ಷದ ಆದಿತ್ಯ ಆರ್ ಪವಾರ್ ಅವರು ಕಾಯಕ್ರಮದ ಮುಖ್ಯ ಆಕರ್ಷಕÀರಾಗಿದ್ದರು. 
      ರೇಡಿಯೋ ನಿಯಂತ್ರಣ ಪೈಲೆಟ್‍ಗಳಾದ ಅಲೆಕ್ಸ್ ಪ್ರವೀಣ್, ಅಭೈಯ್ ಪವಾರ್, ಸಾಗರ್, ಸ್ಯಾಮ್ಯಯೆಲ್, ಜಯಪ್ರಕಾಶ್, ರಾಜಿ, ಶಿವಕುಮಾರ್, ರಾಕೇಶ್ ಹಾಗೂ ಶಶಿ ಕಾರ್ಯಕ್ರಮದಲ್ಲಿ ಪ್ರತಿಭೆ ಪ್ರದರ್ಶಿಸಿದರು.  
    ಜಿಲ್ಲಾಧಿಕಾರಿ ಸಿ.ಶಿಖಾ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪಾಲಯ್ಯ, ತಹಶೀಲ್ದಾರ್ ನವೀನ್ ಜೋಸೆಫ್, ಮೈಸೂರು ಫ್ಲಲಿಂಗ್ ಅಸೋಸಿಯೇಷನ್‍ನ ಅಧ್ಯಕ್ಷೆ ಜೆರ್ರಿ ಆರೋಕ್ಯ ಮೇರಿ, ಉಪಾಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಅರುಣ್ ಕುಮಾರ್ ಹಾಗೂ ಇತರೆ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಮೌಢ್ಯ ವಿರೋಧಿ ಕಾಯ್ದೆ ಜಾರಿಗೆ ಸಿದ್ದಲಿಂಗಯ್ಯ ಒತ್ತು
    ಮೈಸೂರು,ಸೆ.29.ರಾಜ್ಯ ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನು ಜಾರಿಗೆ ತಂದಲ್ಲಿ, ಇಡೀ ವೈಚಾರಿಕ ಜಗತ್ತಿಗೆ ಗೌರವ ಸಲ್ಲಿಸಿದಂತೆ ಎಂದು ಪ್ರಸಿದ್ಧ ಕವಿ ಹಾಗೂ ಚಿಂತಕರಾದ ಡಾ. ಸಿದ್ದಲಿಂಗಯ್ಯ ಅವರು ಹೇಳಿದರು.
     ನಗರದ ಮಾನಸ ಗಂಗೋತ್ರಿಯ ಮಾನವಿಕ ಸಭಾಂಗಣದಲ್ಲಿ ಮೈಸೂರು ದಸರಾ ಮಹೋತ್ಸವದ ಪ್ರಯಕ್ತ  ದಸರಾ ಕವಿಗೋಷ್ಠಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಪರಂಪರೆ ಬಗ್ಗೆ ಗೌರವ ಇರಲಿ. ಯಾರೂ ಪರಂಪರೆ ವಿರೋಧಿಯಲ್ಲಿ. ಆದರೆ ಅದರಲ್ಲಿನ ಮೌಢ್ಯವನ್ನೂ ವಿರೋಧಿಸಬೇಕಾಗಿದೆ. ಸರ್ಕಾರ ಮೌಢ್ಯ ವಿರೋಧಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕೆಂದು ಹೇಳಿದರು.
     ಕವಿಗಳಲ್ಲಿ ಮುಗ್ಧತೆ ಕಾಣೆಯಾಗುತ್ತಿರುವ ಕಾರಣ ಜನಪದ ಸಾಹಿತ್ಯದ ಮರು ಓದು ಅಗತ್ಯವಾಗಿದೆ. ಜಾಗತೀಕರಣವನ್ನು ಜಾನಪದೀಕರಣದೊಡನೆ ಎದುರಿಸಬೇಕಾಗಿದೆ. ಇದರಿಂದ ಸಮಾಜ ಸಮಾನತೆಯತ್ತ ಸಾಗುತ್ತದೆ ಎಂದು ತಿಳಿಸಿದರು.
     ಕವಿ ಅನವಶ್ಯಕ ಗೊಂದಲ, ಅಳುಕು, ಸಂಕೋಚಗಳಿಗೆ ಸಿಲುಕಿಕೊಳ್ಳಬಾರದು. ಮುಕ್ತ ಕವಿ, ವೈಚಾರಿಕ ಕವಿ ಆಗಬೇಕು. ಕಿರಿಯ ಕವಿಗಳಿಗೆ ಹಿರಿಯ ಕವಿಗಳ ಬಗ್ಗೆ ಗೌರವ ಇರಬೇಕು. ಸತತ ಕಾವ್ಯ ಕೃಷಿಯನ್ನು ಮಾಡಬೇಕು ಹಾಗೂ ಅಧ್ಯಯನ ಶೀಲರಾಗಿರÀಬೇಕು ಎಂದು ಸಲಹೆ ನೀಡಿದರು.
    ಖ್ಯಾತ ವಿಮರ್ಶಕ ಡಾ. ಗಿರಡ್ಡಿ ಗೋವಿಂದರಾಜು ಮಾತನಾಡಿ ಕವಿಗಳು ಎನ್ನುವವರು ಅರ್ಥವಾಗದಂತೆ   ಗದ್ಯಗಳನ್ನು ಬರೆಯುತ್ತಿದ್ದಾರೆ. ಕವಿಯಾಗಬೇಕಾದರೆ ಸಾಮಾನ್ಯರಿಗೂ ಅರ್ಥವಾಗುವಂತೆ ಸಾಧ್ಯತೆ ಹುಡುಕಿಕೊಳ್ಳಬೇಕು. ಕವಿಯೋ, ಅಲ್ಲವೋ ಎಂಬುದನ್ನೂ ಗಟ್ಟಿಯಾಗಿ ಕಂಡುಕೊಳ್ಳಬೇಕಾದ ಅಗತ್ಯವಿದೆ ಎಂದು ಹೇಳಿದರು.
    ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್, ದಸರಾ ಕವಿಗೋಷ್ಠಿ ಉಪ ಸಮಿತಿ ಅಧ್ಯಕ್ಷ ಶೇಖರ್, ಡಾ.ಸಿ. ನಾಗಣ್ಣ, ಡಾ.ಸರ್ವಮಂಗಳಾ, ಡಾ. ಲತಾ ರಾಜಶೇಖರ್, ಶ್ರೀನಿವಾಸ ಯಾದವ್ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.
ಅಕ್ಟೋಬರ್ 9 ರಂದು ಪ್ರಗತಿ ಪರಿಶೀಲನೆ ಸಭೆ
    ಮೈಸೂರು,ಸೆ.29.ಮೈಸೂರು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಜಿ. ಕುಮಾರ್ ಅವರ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 9 ರಂದು ಬೆಳಿಗ್ಗೆ 11 ಗಂಟೆಗೆ ಮೈಸೂರು ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳು ಸೇರಿದಂತೆ) ಮಾಸಿಕ ಪ್ರಗತಿ ಪರಿಶೀಲನೆ ಸಭೆ ಕರೆಯಲಾಗಿದೆ ಎಂದು ತಾಲ್ಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೈಸೂರು ವಿಶ್ವವಿದ್ಯಾನಿಲಯ ಪರೀಕ್ಷೆ: ನವೆಂಬರ್ 12 ರಿಂದ ಆರಂಭ
     ಮೈಸೂರು,ಸೆ.29.ಮೈಸೂರು ವಿಶ್ವ ವಿದ್ಯಾನಿಲಯದ 1, 3 ಮತ್ತು 5ನೇ ಸೆಮಿಸ್ಟರ್‍ನ ಬಿ.ಎ., ಬಿ.ಎಸ್ಸಿ, ಬಿ.ಕಾಂ, ಬಿ.ಬಿ.ಎಂ, ಬಿ ಎಸ್.ಡಬ್ಲ್ಯೂ, ಬಿ.ಎಸ್ಸಿ (ಈ.ಅ.Sಛಿ), ಬಿ.ಟಿ.ಹೆಚ್, ಬಿ.ಎಸ್ಸಿ (ವಾಕ್ ಮತ್ತು ಶ್ರವಣ), ಬಿ.ಎಸ್.ಎಡ್, (ಊ&I) ಬಿ.ಎಚ್.ಎಂ, (ಐ.ಎಸ್.ಎಸ್.ಸ್ಕೀಂ), ಬಿ.ಪಿಎ, ಬಿ.ಎಫ್.ಎ, ಬಿ.ಸಿ.ಎಸ್ ಮತ್ತು ಬಿ.ಸಿ.ಎ ಪದವಿಗಳ ಪರೀಕ್ಷೆಗಳು ನವೆಂಬರ್ 12 ರಿಂದ ಆರಂಭವಾಗಲಿವೆ.
     ವಿದ್ಯಾರ್ಥಿಗಳು ತಮ್ಮ ಕಾಲೇಜುಗಳಲ್ಲಿ ಅರ್ಜಿಗಳನ್ನು ಪಡೆದು, ಪರೀಕ್ಷಾ ಶುಲ್ಕ ಪಾವತಿಸಿ, ಭರ್ತಿ ಮಾಡಿದ ಅರ್ಜಿಗಳನ್ನು ಕಾಲೇಜಿಗೆ ಸಲ್ಲಿಸಲು ಅಕ್ಟೋಬರ್ 15 ಕೊನೆಯ ದಿನ.
     ಪರೀಕ್ಷೆ ತೆಗೆದುಕೊಳ್ಳುವ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ ಕಾಲೇಜುಗಳಲ್ಲಿಯೇ ಪರೀಕ್ಷಾ ಶುಲ್ಕವನ್ನು ಕಟ್ಟಬೇಕು ಮತ್ತು ಪರೀಕ್ಷೆಯ ಅಭ್ಯರ್ಥನಾ ಪತ್ರವನ್ನು ಸಹ ಸಲ್ಲಿಸಬೇಕು. ವಿಶ್ವವಿದ್ಯಾನಿಲಯಕ್ಕೆ ನೇರವಾಗಿ ಸಲ್ಲಿಸುವ ಅರ್ಜಿಗಳನ್ನು ತಿರಸ್ಕರಿಸಲಾಗುವುದು.
     ವಿದ್ಯಾರ್ಥಿಗಳು ಇತ್ತೀಚಿನ ಭಾವಚಿತ್ರದ ಮೇಲೆ ಪೂರ್ತಿ ಸಹಿ ಮಾಡಿ ವಿದ್ಯಾರ್ಥಿಯನ್ನು ಗುರುತಿಸಲಾಗಿದೆ ಎಂದು ಬರೆಯಿಸಿ ಪ್ರಾಂಶುಪಾಲರಿಂದ ಸಹಿ ಮಾಡಿಸಿ ಅವರ ಪ್ರವೇಶ ಪತ್ರಿಕೆಗೆ ಅಂಟಿಸಬೇಕು ಹಾಗೂ ಪರೀಕ್ಷಾ ಅರ್ಜಿಯ ಜೊತೆಗೆ ತಾವು ತೆಗೆದುಕೊಂಡಿರುವ ಆಯಾ ಸೆಮಿಸ್ಟರ್‍ಗೆ ಸಂಬಂಧಪಟ್ಟ ಪರೀಕ್ಷೆಗಳ ಅಂಕ ಪಟ್ಟಿಗಳ ಜೆರಾಕ್ಸ್ ಪತ್ರಿಗಳನ್ನು ಮಾತ್ರ ಕಡ್ಡಾಯವಾಗಿ ಲಗತ್ತಿಸ ತಮ್ಮ ಕಾಲೇಜುಗಳಲ್ಲಿ ಸಲ್ಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.
ರಾಘವೇಂದ್ರ ಬಿ.ಎಸ್. ಅವರಿಗೆ  ಡಾಕ್ಟರೇಟ್ ಪದವಿ
    ಮೈಸೂರು,ಸೆ.29.ಮೈಸೂರು ವಿಶ್ವವಿದ್ಯಾಲಯವು ರಾಘವೇಂದ್ರ ಬಿ.ಎಸ್. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ|| ವಿ.ಎ. ವಿಜಯನ್ ಅವರ ಮಾರ್ಗದರ್ಶನದಲ್ಲಿ  ಸಂಶೋಧನೆ ನಡೆಸಿದ “ ಇಜಿಜಿiಛಿಚಿಛಿಥಿ oಜಿ ಇugeಟಿiಚಿ ಎಚಿmboಟಚಿಟಿಚಿ ಐiಟಿಟಿ ಚಿಟಿಜ Soಟiಜಚಿgo  ಅಚಿಟಿಚಿಜeಟಿsis ಐiಟಿಟಿ ಐeಚಿಜಿ ಇxಣಡಿಚಿಛಿಣs iಟಿ ಣhe ಐಚಿಡಿvಚಿe oಜಿ ಂeಜes ಂegಥಿಠಿಣi ಐiಟಿಟಿ ಚಿಣ ಒಥಿsoಡಿe” ಎಂಬ ಮಹಾಪ್ರಬಂಧವನ್ನು Zooಟogಥಿ ವಿಷಯದಲ್ಲಿ ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ರಾಘವೇಂದ್ರ ಬಿ.ಎಸ್. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಪರಾಂಪರಿಕ ನಡಿಗೆಗೆ ಉಪಮೇಯರ್ ಶೈಲೇಂದ್ರಕುಮಾರ್ ಅವರಿಂದ ಚಾಲನೆ
ಮೈಸೂರು,ಸೆ.29.ದಸರಾ ಮಹೋತ್ಸವ2014 ರ ಅಂಗವಾಗಿ  ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ  ಮೈಸೂರಿನ ಮಹಾನಗರಪಾಲಿಕೆಯ ಸದಸ್ಯರು, ಮಹಾಜನ ಹಾಗು ಟೆರೇಷಿಯನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ವಿದೇಶಿ ವಿದ್ಯಾರ್ಥಿಗಳಿಗೆ ಹಾಗೂ ಆಡಳಿತ ತರಬೇತಿ ಸಂಸ್ಥೆಯ ತರಬೇತಿನಿರತರಿಗೆ  ಮೈಸೂರಿನಲ್ಲಿರುವ ಪಾರಂಪರಿಕ ಕಟ್ಟಡಗಳ ಇತಿಹಾಸ, ಕಲೆ ವಾಸ್ತುಶಿಲ್ಪ, ಪರಂಪರೆ ಮತ್ತು ಸಂಸ್ಕøತಿಗಳ ಕುರಿತು ಅರಿವು ಮೂಡಿಸಲು ಪಾರಂಪರಿಕ ನಡಿಗೆ ಕಾರ್ಯಕ್ರಮವನ್ನು ಇಂದು ಏರ್ಪಡಿಸಲಾಗಿತ್ತು.
ಪುರಭವನದ ಆವರಣದಲ್ಲಿ ಉಪ ಮೇಯರ್ ಶೈಲೇಂದ್ರಕುಮಾರ್ ಇವರಿಂದ ಚಾಲನೆಗೊಂಡು, ದೊಡ್ಡಗಡಿಯಾರ, ಚಾಮರಾಜೇಂದ್ರ ವೃತ್ತ, ಅಂಬಾವಿಲಾಸ ಅರಮನೆ, ಕೆ ಆರ್ ಸರ್ಕಲ್, ದೇವರಾಜ ಮಾರುಕಟ್ಟೆ, ಮೆಡಿಕಲ್ ಕಾಲೇಜ್, ಆಯುರ್ವೇದಿಕ್ ಆಸ್ಪತ್ರೆ, ಕಾವಾ ಕಟ್ಟಡದ ಬಳಿ ಕೊನೆಗೊಂಡಿತು. ಮೈಸೂರು ವಿಶ್ವವಿದ್ಯಾನಿಲಯದ ಪ್ರಾಚೀನ ಇತಿಹಾಸ ವಿಭಾಗದ ವಿಶ್ರಾಂತ ಪ್ರಾದ್ಯಾಪಕರಾದ ಡಾ. ರಂಗರಾಜು ಮತ್ತು ಈಚನೂರ್ ಕುಮಾರ್ ಇವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ, ಮೈಸೂರು ಮಹಾರಾಜ ಇತಿಹಾಸ ಮತ್ತು ಪರಂಪರೆ ಕುರಿತು ಮಾಹಿತಿಯನ್ನು ತಿಳಿಸಿಕೊಟ್ಟರು.
ಈ ನಡಿಗೆ ಕಾರ್ಯಕ್ರಮದಲ್ಲಿ ಇಲಾಖೆ ಆಯುಕ್ತರಾದ ಡಾ. ಸಿ.ಜಿ. ಬೆಟಸೂರು ಮಠ, ಪೂಜ್ಯ ಮಹಾಪೌರರಾದ ರಾಜೇಶ್ವರಿ, ಉಪ ನಿರ್ದೇಶಕರಾದ ಶ್ರೀ ಗವಿಸಿದ್ದಯ್ಯ ಮತ್ತು ಇಲಾಖೆ ಅಧಿಕಾರಿಗಳು  ಭಾಗವಹಿಸಿದ್ದರು.

Thursday, 25 September 2014

ಮೈಸೂರು ಸುದ್ದಿಗಳು.

ಸೆಪ್ಟೆಂಬರ್  26ರಂದು ಚಲನಚಿತ್ರೋತ್ಸವದಲ್ಲಿ ಪ್ರದರ್ಶಿತವಾಗುವ ಚಲನಚಿತ್ರಗಳು
ಮೈಸೂರು,ಸೆ.25.ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2014ರ ಅಂಗವಾಗಿ ಮೈಸೂರು ನಗರದ ಮೂರು ವೇದಿಕೆಗಳಲ್ಲಿ ಸೆಪ್ಟೆಂಬರ್ 26 ರಂದು ನಡೆಯುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದ ಅಂಗವಾಗಿ ಪ್ರದರ್ಶಿತವಾಗುವ ಚಲನಚಿತ್ರಗಳ ವಿವರ ಇಂತಿದೆ.
ದಸರಾ ಚಲನಚಿತ್ರೋತ್ಸವ ಅಂಗವಾಗಿ ಮಾನಸ ಗಂಗೋತ್ರಿಯ ಸೆನೆಟ್ ಭವನ: ಬೆಳಿಗ್ಗೆ 10-30 ಗಂಟೆಗೆ ಕೊನಾರ್ಕ್, ಬೆಳಿಗ್ಗೆ 11 ಗಂಟೆಗೆ ಸಂಸ್ಕಾರ, ಮಧ್ಯಾಹ್ನ 2-30 ಗಂಟೆಗೆ ನಾಲ್ವಡಿ ಕೃಷ್ಣ ರಾಜ ಒಡೆಯರ್, ಮಧ್ಯಾಹ್ನ 3 ಗಂಟೆಗೆ ಭಗವತಿಕಾಡು.
    ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ಕಾವೇರಿ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆ ನೇತಾಜಿ, ಬೆಳಿಗ್ಗೆ 11 ಗಂಟೆಗೆ ಅಸ್ತು,  ಮಧ್ಯಾಹ್ನ 2-30 ಗಂಟೆಗೆ ಡಿವಿ. ಗುಂಡಪ್ಪ ಹಾಗೂ ಮಧ್ಯಾಹ್ನ 3 ಗಂಟೆಗೆ ಕಣ್ಣತ್ತಿಲ್ ಮುತ್ತಮಿಟ್ಟಾಲ್ ಚಲನಚಿತ್ರದ ಬದಲಾಗಿ ಫಂಡ್ರಿ ಚಲನಚಿತ್ರ ಪ್ರದರ್ಶಿಸಲಾಗುವುದು.
    ಮಾನಸ ಗಂಗೋತ್ರಿಯ ರಾಣಿ ಬಹದ್ದೂರ್ ಸಭಾಂಗಣ: ಬೆಳಿಗ್ಗೆ 10-30 ಗಂಟೆಗೆ ಷೂ  ಶೈನ್, ಮಧ್ಯಾಹ್ನ 1-30ಕ್ಕೆ ಕೇಪ್ ನಂ. ಸೆವೆನ್, ಮಧ್ಯಾಹ್ನ 3 ಗಂಟೆಗೆ ಬ್ರೀಫ್ ಎನ್ ಕೌಂಟರ್ ಚಲನಚಿತ್ರಗಳು ಪ್ರದರ್ಶನಗಳು ಉಚಿತ ಪ್ರವೇಶ.
    ಲಕ್ಷ್ಮೀ-ಒಗ್ಗರಣೆ, ತಿಬ್ಬಾದೇವಿ-ಸವಾರಿ2,  ಒಲಂಪಿಯಾ-ದೃಶ್ಯ, ಡಿ.ಆರ್.ಸಿ.-ಗಜಕೇಸರಿ, ಸತ್ಯಂ-ಮಾಣಿಕ್ಯ.
    ಪ್ರದರ್ಶನದ ಸಮಯ ಪ್ರತಿದಿನ ಬೆಳಿಗ್ಗೆ 10 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ ನೆಲ ಅಂತಸ್ತಿಗೆ 10 ರೂ. ಹಾಗೂ ಬಾಲ್ಕನಿಗೆ  15 ರೂ.  ಹಾಗೂ ಮಲ್ಟಿಫ್ಲೆಕ್ಸ್ ರೂ. 25 ನಿಗದಿಪಡಿಸಿದೆ.
     ಕೆ.ಆರ್.ನಗರದ ಶ್ರೀವೆಂಕಟೇಶ್ವರ-ದೃಶ್ಯ, ನಂಜನಗೂಡಿನ ಲಲಿತ-ಸವಾರಿ2, ಟಿ.ನರಸೀಪುರದ ಮುರುಗನ್-ಒಗ್ಗರಣೆ, ಪಿರಿಯಾಪಟ್ಟಣದ ಮಹದೇಶ್ವರ-ಗಜಕೇಸರಿ, ಹುಣಸೂರಿನ ಲೀಲಾ-ಮಾಣಿಕ್ಯ, ಹಾಗೂ ಹೆಚ್.ಡಿ.ಕೋಟೆಯ ಮಂಜುನಾಥ-ಎದೆಗಾರಿಕೆ.
    ಪ್ರದರ್ಶನದ ಸಮಯ ಪ್ರತಿದಿನ ಸಂಜೆ  4 ಗಂಟೆಗೆ ಚಿತ್ರ ಪ್ರದರ್ಶನವಾಗುವ ಚಿತ್ರಮಂದಿರಗಳಲ್ಲಿ ರಿಯಾಯಿತಿ ಪ್ರವೇಶ ದರ 10 ರೂ.

ಸೆಪ್ಟೆಂಬರ್ 26 ರ ದಸರಾ ಮಹೋತ್ಸವದ ಕಾರ್ಯಕ್ರಮಗಳು
    ಮೈಸೂರು,ಸೆ.25.ಬೆಳಿಗ್ಗೆ 7 ಗಂಟೆಗೆ ನಗರದ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕ ನಡಿಗೆ ಕಾರ್ಯಕ್ರಮಕ್ಕೆ  ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಅವರು ಚಾಲನೆ ನೀಡುವರು.
    ಬೆಳಿಗ್ಗೆ 7 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ದಸರಾ ಸೈಕ್ಲೋಥಾನ್ ಕಾರ್ಯಕ್ರಮಕ್ಕೆ ಲೋಕಸಭಾ ಸದಸ್ಯ ಪ್ರತಾಪ್ ಸಿಂಹ, ಮೈಸೂರು ವಿಶ್ವವಿದ್ಯಾಲಯ ಉಪ ಕುಲಪತಿ ಪ್ರೊ| ಕೆ.ಎಸ್. ರಂಗಪ್ಪ ಹಾಗೂ ಪ್ರಥಮ ನ್ಯಾಷನಲ್ ರಿಯಾಲಿಟಿ ಶೋ ವಿಜೇತರಾದ ಸುನಾಮಿ ಕಿಟ್ಟಿ ಅವರುಗಳಿಂದ ಚಾಲನೆ. ನಂತರ ಸಂಜೆ 6-30 ಗಂಟೆಗೆ  ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಕೆ.ಮರಿಗೌಡ ಅವರು ದೇಹದಾಢ್ರ್ಯ ಸ್ಪರ್ಧೆ ಉದ್ಘಾಟಿಸುವರು.
    ಬೆಳಿಗ್ಗೆ 10 ಗಂಟೆಗೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಆವರಣದಿಂದ ದಸರಾ ದರ್ಶನಕ್ಕೆ ಸಾರಿಗೆ ಸಚಿವ ರಾಮಲಿಂಗರೆಡ್ಡಿ ಅವರು ಚಾಲನೆ ನೀಡುವರು.
    ಬೆಳಿಗ್ಗೆ 11 ಗಂಟೆಗೆ ಜೆ.ಕೆ.ಮೈದಾನದ ಅಲ್ಯುಮಿನಿ ಅಸೋಸಿಯೇಷನ್ ಅಮೃತ ಮಹೋತ್ಸವ ಭವನದಲ್ಲಿ ಮಹಿಳಾ ದಸರಾ ಕಾರ್ಯಕ್ರಮವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಸಚಿವೆ ಉಮಾಶ್ರೀ ಅವರು ಉದ್ಘಾಟಿಸುವರು.
    ಮಧ್ಯಾಹ್ನ 1 ಗಂಟೆಗೆ ಜೆ.ಕೆ.ಮೈದಾನದ ಅಲ್ಯುಮಿನಿ ಅಸೋಸಿಯೇಷನ್ ಅಮೃತ ಮಹೋತ್ಸವ ಭವನದಲ್ಲಿ ಮಹಿಳಾ ಉದ್ಯಮಿಗಳು ಸ್ವಸಹಾಯ ಸಂಘಗಳು ತಯಾರಿಸಿರುವ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳ ಮಾನಸ ಅವರು ಉದ್ಘಾಟಿಸುವರು.
    ಮಧ್ಯಾಹ್ನ 3-30 ಗಂಟೆಗೆ ವಸ್ತುಪ್ರದರ್ಶನ ಪ್ರಾಧಿಕಾರ ಆವರಣದಲ್ಲಿರುವ ಡಿ. ದೇವರಾಜ ಅರಸ್ ವಿವಿದೋದ್ದೇಶ ಕ್ರೀಡಾಂಗಣದಲ್ಲಿ 33ನೇ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿ ನಡೆಯಲಿದೆ.
 ದಸರಾ ಮಹೋತ್ಸವದ ಸಾಂಸ್ಕøತಿಕ ಕಾರ್ಯಕ್ರಮ:
ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಮೈಸೂರಿನ ಜಾನಕಿರಾಂ ಅವರಿಂದ ಮ್ಯಾಂಡೋಲಿನ್ ವಾದನ,  ಸಂಜೆ 6 ರಿಂದ 7-30 ಗಂಟೆಯವರೆಗೆ ಚೆನ್ನೈನ ಲಾಲಗುಡಿ ಕೃಷ್ಣ ಮತ್ತು ವಿಜಯಲಕ್ಷ್ಮಿ ಅವರಿಂದ ದ್ವಂದ್ವ ವಯೋಲಿನ್ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಶ್ರೀಮತಿ ಬಿ.ಆರ್. ಛಾಯಾ ಅವರಿಂದ ಭಾವಗೀತೆÀ.
ಕಲಾಮಂದಿರ ವೇದಿಕೆ: ಸಂಜೆ  5-30 ರಿಂದ 6 ಗಂಟೆಯವರೆಗೆ ಒಡಿಸ್ಸಿ ನೃತ್ಯ,  ಸಂಜೆ 6 ರಿಂದ 7-30 ಗಂಟೆಯವರೆಗೆ ಗುಲ್ಬರ್ಗಾ ಬಸವರಾಜ ಸಾಲಿ ಅವರಿಂದ  ದಾಸವಾಣಿ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆಗೆ ಮೈಸೂರಿನ ಶ್ರೀಮತಿ ಪ್ರಮಿತಾ ರಮೇಶ್  ಅವರಿಂದ ಭರತನಾಟ್ಯ.
ಜಗನ್ಮೋಹನ ಅರಮನೆ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಶಿಕಾರಿಪುರ ಮಾರುತಿ ವಾಲ್ಮೀಕಿ ಡೊಳ್ಳಿನ ಯುವಕ ಸಂಘದ ವತಿಯಿಂದ ಡೊಳ್ಳು ಕುಣಿತ, ಕೊಲ್ಕತ್ತಾ ಸಂಭಲ್‍ಪುರಿ,  ಸಂಜೆ 6 ರಿಂದ 7-30 ಗಂಟೆಯವರೆಗೆ ಧಾರವಾಡದ ಡಿ. ಕುಮಾರದಾಸ ಅವರಿಂದ ಹಿಂದುಸ್ತಾನಿ ಸಂಗೀತ  ಹಾಗೂ ಸಂಜೆ 7 ರಿಂದ 9 ಗಂಟೆಯವರೆಗೆ ಬೆಂಗಳೂರಿನ ಆನಂದಿತ ರೆಡ್ಡಿ ಮತ್ತು ತಂಡದವರಿಂದ ಭರತನಾಟ್ಯ.
ಪುರಭವನ ವೇದಿಕೆ: ಬೆಳಿಗ್ಗೆ 11 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರಿನ ಶ್ರೀ ಭುವನೇಶ್ವರಿ ಕನ್ನಡ ಕಲಾಸಂಘದಿಂದ ಐತಿಹಾಸಿಕ ನಾಟಕ. ಮಧ್ಯಾಹ್ನ 2-30 ರಿಂದ 4-30 ಗಂಟೆಯವರೆಗೆ ಮೈಸೂರಿನ ಜಿಲ್ಲಾ ವೃತ್ತಿ ಕಲಾವಿದರ ಸಂಘ ಹಾಗೂ ಸಂಜೆ 6-30 ರಿಂದ 8-30 ಗಂಟೆಯವರೆಗೆ ಬೆಂಗಳೂರಿನ ಡಿಂಗ್ರಿ ನಾಗರಾಜ್ ಮತ್ತು ತಂಡದಿಂದ ನಾಟಕ ಏರ್ಪಡಿಸಲಾಗಿದೆ.
ಗಾನಭಾರತಿ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಕೊಪ್ಪಳ ಜಿಲ್ಲೆಯ ಯಲ್ಬುರ್ಗಾದ ಶ್ರೀ ಮಾರುತಿ ಶಹನಾಯಿ ಮತ್ತು ಹಲಗೆ ಮೇಳ ಕಲಾ ಸಂಘದಿಂದ ಶಹನಾಯಿ ವಾದನ, ಹರಿಯಾಣದ ಭೈಗಾ ಕರ್ಮಾ ಮತ್ತು ಪಾಲಕ್ಕಾಡ್ ಅವರಿಂದ ಮೋಹಿನಿ ಅಟ್ಟಂ, ಸಂಜೆ 6 ರಿಂದ 7-30 ಗಂಟೆಯವರೆಗೆ ಬೆಂಗಳೂರಿನ ದೇವರಾಜು ಅವರಿಂದ ಹರಿಕಥೆ ಹಾಗೂ ಸಂಜೆ 7-30 ರಿಂದ 9 ಗಂಟೆಯವರೆ ಮೈಸೂರಿನ ವಾಸವಿ ವನಿತಾ ಟ್ರಸ್ಟ್ ಅವರಿಂದ ಸುಗಮ ಸಂಗೀತ.
ಚಿಕ್ಕ ಗಡಿಯಾರ ವೇದಿಕೆ: ಸಂಜೆ 5-30 ರಿಂದ 6 ಗಂಟೆಯವರೆಗೆ ಉತ್ತರಾಖಂಡದ ದೌಡಿಯಾ ಚಾವ್ಲಾ, ಸಂಜೆ 6 ರಿಂದ 6-30 ಗಂಟೆಯವರೆಗೆ  ತಾ: ಹುನಗುಂದ ಸಂತೋಷ್ ಹುಚ್ಚಪ್ಪ ಹೋಟಿ ಅವರಿಂದ ಪುರವಂತಿಕೆ ಹಾಗೂ ದಾವಣಗೆರೆಯ ಯುಗಧರ್ಮ ರಾಮಣ್ಣ ಅವರಿಂದ ತತ್ವಪದಗಳ ಕಾರ್ಯಕ್ರಮ ನಡೆಯಲಿವೆ. 
    ಆಹಾರ ಮೇಳ:- ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಆವರಣದಲ್ಲಿ ಸೆ. 26 ರಂದು ಮಧ್ಯಾಹ್ನ 3 ರಿಂದ 4 ಗಂಟೆಯವರೆಗೆ ಅತ್ತೆ ಮತ್ತು ಸೊಸೆಯರಿಗೆ ರಾಗಿ ಮುದ್ದೆ ಮತ್ತು ಉಪ್ಪುಸಾರ ತಯಾರಿಸುವ ಸ್ಪರ್ಧೆ ಏರ್ಪಡಿಸಲಾಗಿದೆ. ಸಂಜೆ 4 ಗಂಟೆಗೆ ಆಹಾರ ಭದ್ರತಾ ಕಾಯಿದೆ ಹಾಗೂ ಅನ್ನಭಾಗ್ಯ ಯೋಜನೆ ಕುರಿತು ವಿಚಾರ ಸಂಕಿರಣ ಕಾರ್ಯಕ್ರಮ ನಡೆಯಲಿದೆ.
  ಮಹಿಳಾ ದಸರಾ:- ಸಂಜೆ 4 ರಿಂದ 4-30 ರವರೆಗೆ ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಕ್ಷೀರಾ ಸಾಗರ ಮಹಿಳಾ ಕಲಾವಿದರಿಂದ ಪೂಜ ಕುಣಿತ, ಸಂಜೆ 4-30ಕ್ಕೆ ವೇಷಭೂಷಣ ಸ್ಪರ್ಧೆ, ಸಂಜೆ 6 ಗಂಟೆಗೆ ಮಂಡ್ಯ ಜಿಲ್ಲೆಯ ಹೊಸಹಳ್ಳಿಯ ಮಾಂಡವ್ಯ ಹವ್ಯಾಸಿ ಮಹಿಳಾ ಕಲಾವಿದರ ಸಂಘದಿಂದ ಶ್ರೀ ಕೃಷ್ಣ ಸಂಧಾನ ವಿಫಲ  ನಾಟಕ ಪ್ರದರ್ಶನ ನಡೆಯಲಿದೆ. ಸ್ಥಳ: ಜೆ.ಕೆ. ಗ್ರೌಂಡ್ಸ್

ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ
    ಮೈಸೂರು,ಸೆ.25.ದಸರಾ ಹಬ್ಬದ ಪ್ರಯುಕ್ತ ಮೈಸೂರು ದಿವಾನ್ಸ್ ರಸ್ತೆಯಲ್ಲಿರುವ ವಿಭಾಗೀಯ ಮೌಲ್ಯವರ್ಧಿತ ತೆರಿಗೆ ಕಚೇರಿಯ ಶೇಷಾದ್ರಿ ಭವನದಲ್ಲಿ ಸೆಪ್ಟೆಂಬರ್ 26 ರಿಂದ ಅಕ್ಟೋಬರ್ 1 ರವರೆಗೆ ಪಾರಂಪರಿಕ ಕಟ್ಟಡಗಳ ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ
     ಸಾರ್ವಜನಿಕರಿಗೆ ಪ್ರತಿ ದಿನ ಬೆಳಿಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ದಸರಾ ಮಹೋತ್ಸವದ ಅಂಗವಾಗಿ ಪ್ರಾಚ್ಯವಸ್ತುಪ್ರದರ್ಶನ .


ಮೈಸೂರು,ಸೆ.26-2014ನೇ ಸಾಲಿನ ದಸರಾ ಮಹೋತ್ಸವ ಅಂಗವಾಗಿ ವಸ್ತು ಪ್ರದರ್ಶನದ ಪ್ರಾಧಿಕಾರದಲ್ಲಿರುವ ಪ್ರಾಚ್ಯವಸ್ತು ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ವತಿಯಿಂದ ಏರ್ಪಡಿಸಿದ ಪ್ರದರ್ಶನವನ್ನು ಕನ್ನಡ ಮತ್ತು ಸಂಸ್ಕೃತಿ ಹಾಗೂ ಮಹಿಳಾ ಮತ್ತು ಮಕ್ಕಳ  ಕಲ್ಯಾಣ ಸಚಿವೆ ಶ್ರೀಮತಿ ಉಮಾಶ್ರೀಯವರು  ಉದ್ಘಾಟಿಸಿ ಪ್ರಶಂಸೆಯನ್ನು ವ್ಯಕ್ತಪಡಿಸಿದರು.
 ಈ ಪ್ರದರ್ಶನದಲ್ಲಿ  ಮೌರ್ಯರು, ಸಾತವಾಹನರು, ಕದಂಬರು, ಅಳುಪರು ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು ಕಲಚೂರಿಗಳು ಹೋಯ್ಸಳರು ಹಾಗೂ ಮೈಸೂರು ಒಡೆಯರ ತನಕ ಕರ್ನಾಟಕವನ್ನು ಆಳಿದ ರಾಜ ಮನೆತನೆಗಳ ಸಮಗ್ರ ಚಿತ್ರಣವನ್ನು ಹಾಗೂ ರಾಜ್ಯದ ಪ್ರಾಚೀನ ಸಾಮ್ರಾಜ್ಯಗಳ  ರಾಜಧಾನಿಗಳು ಹಾಗೂ ಪಾರಂಪರಿಕ ಪ್ರದೇಶಗಳ ಬಗ್ಗೆ ಛಾಯಚಿತ್ರಗಳನ್ನೊಳಗೊಂಡ  ಸಮಗ್ರ ಮಾಹಿತಿ ನೀಡಲಾಗಿದೆ, ಇದಲ್ಲದೆ ಇಲಾಖೆಯ ವತಿಯಿಂದ ನಡೆದ ಉತ್ಖನನದಲ್ಲಿ ದೊರೆತ ಪ್ರಾಚ್ಯ ಅವಶೇಷಗಳನ್ನು  ಕೂಡ ಪ್ರದರ್ಶಿಸಲಾಗಿದೆ  ಪಾರಂಪರಿಕ ಕಲಾಕೃತಿಗಳು, ಸ್ಮಾರಕಗಳನ್ನು ರಕ್ಷಿಸುವ ಬಗ್ಗೆ ಜಾಗೃತಿಯನ್ನು ಮೂಡಿಸುವ ಪ್ರಾಚ್ಯ ಪ್ರಜ್ಞೆ ಕುರಿತಾದ ರೇಖಾ ಚಿತ್ರಗಳನ್ನು ಪ್ರದರ್ಶಿಸಲಾಗಿದೆ.
 ಪರಂಪರೆ ಕುರಿತ ಸಾಕ್ಷ್ಯ ಚಿತ್ರಗಳ ಪ್ರದರ್ಶನ ಸಹ ಏರ್ಪಡಿಸಿದ್ದು ಇದು ಪ್ರತಿ ದಿನ ಸಂಜೆ 5.00, 6.00 ಮತ್ತು 7.00 ಗಂಟೆಗೆ ಪ್ರದರ್ಶನವು ಸಾರ್ವಜನಿಕರಿಗೆ ಉಚಿತವಾಗಿ ಪ್ರದರ್ಶಿಸಲಾಗುವುದು.
 ಈ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಡಾ. ಶಾಲಿನ ರಜನೀಶ್‍ರವರು,  ಆಯುಕ್ತರಾದ ಡಾ.ಸಿ.ಜಿ.ಬೆಟಸೂರಮಠ ಹಾಗೂ  ಹಿರಿಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಹಾಜರಿದ್ದರು.

Wednesday, 24 September 2014

ಸೆ.25 ರಂದು ಪ್ರಶಸ್ತಿ ಪ್ರದಾನ ಸಮಾರಂಭ
ಮಂಡ್ಯ,ಸೆ.23- ಡಾ.ಎಚ್.ಡಿ.ಚೌಡಯ್ಯ ಪ್ರತಿಷ್ಠಾನದ ವತಿಯಿಂದ ಸೆಪ್ಟೆಂಬರ್ 25ರಂದು ನಗರದ ಪಿ.ಇ.ಎಸ್ ಇಂಜಿನಿಯರಿಂಗ್ ಕಾಲೇಜಿನ ಪ್ಲೇಸ್‍ಮೆಂಟ್ ಸಭಾಂಗಣದಲ್ಲಿ ಬೆಳಿಗ್ಗೆ 11ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರತಿಷ್ಠಾನದ ಖಜಾಂಚಿ ಡಾ.ರಾಮಲಿಂಗಯ್ಯ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ಕಳೆದ 12 ವರ್ಷದಿಂದ ಡಾ.ಎಚ್.ಡಿ ಚೌಡಯ್ಯ ಪ್ರತಿಷ್ಠಾನದಿಂದ ವಿವಿಧ ಕ್ಷೇತ್ರಗಳಲ್ಲಿ ಘಣನೀಯ ಸಾಧನೆ ಮಾಡಿದವರಿಗೆ ಸನ್ಮಾನ ಮಾಡುತ್ತಿದ್ದು, ಪ್ರತಿ ವರ್ಷದಂತೆ ಈ ವರ್ಷವು ಸಹಕಾರ, ಶಿಕ್ಷಣ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದೆಂದು ಹೇಳಿದರು.
ಸೆ.25 ರಂದು ಎಚ್.ಡಿ.ಚೌಡಯ್ಯರವರ ಹುಟ್ಟುಹಬ್ಬವಾಗಿದ್ದು, ಅವರಿಗೆ 86 ವರ್ಷಗಳು ಪೂರ್ಣಗೊಂಡು 87 ನೇ ವಸಂತಕ್ಕೆ ಕಾಲಿಡುತ್ತಿದ್ದಾರೆ. ಇಂತಹ ಸುಸಮಯದಲ್ಲಿ ಬೆಳಗಾವಿಯ ಅಣ್ಣಾಸಾಹೇಬ ಜೊಲ್ಲೆ ರವರಿಗೆ ಡಾ.ಎಚ್.ಡಿ.ಚೌಡಯ್ಯ ಸಹಕಾರ ಪ್ರಶಸ್ತಿ, ಶಶಿಕಲಾ ಜೊಲ್ಲೆ ರವರಿಗೆ ಶಿಕ್ಷಣ ಪ್ರಶಸ್ತಿ, ಹಾಗೂ ಕೆ.ಆರ್.ನಗರದ ಕಾ.ತ.ಚಿಕ್ಕಣ್ಣನವರಿಗೆ ಸಾಹಿತ್ಯ ಪ್ರಶಸ್ತಿ ನೀಡಲಾಗುತ್ತಲಿದೆ ಎಂದರು.
ಇದರೊಂದಿಗೆ ಹೊಳಲು ಸರ್ಕಾರಿ ಪ್ರೌಢಶಾಲೆ ಹಾಗೂ ವೆಂಕಟೇಶ್ವರ ವಿದ್ಯಾ ನಿಕೇತನ ಪ್ರೌಢಶಾಲೆಯಲ್ಲಿ ಎಸ್.ಎಸ್.ಎಲ್.ಸಿ ಹೆಚ್ಚು ಅಂಕಗಳಿಸಿದಂತಹ ನಾಲ್ಕು ಮಂದಿ ವಿದ್ಯಾರ್ಥಿಗಳಿಗೆ 1000ರೂ. ನಗದು ಬಹುಮಾನ ನೀಡಿ ಪ್ರತಿಭಾ ಪುರಸ್ಕಾರ ಮಾಡಲಾಗುವುದೆಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾಜಿ ಶಾಸಕರು ಹಾಗೂ ಡಾ.ಎಚ್.ಡಿ.ಚೌಡಯ್ಯ ಪ್ರತಿಷ್ಠಾನದ ಅಧ್ಯಕ್ಷ ಎಚ್.ಹೊನ್ನಪ್ಪ, ಹಾಗೂ ಮಾಚಿ.ಸಂಸದ ಜಿ.ಮಾದೇಗೌಡ ಇತರರು ಭಾಗವಹಿಸಲಿದ್ದಾರೆ ಎಂದರು.
ಗೋಷ್ಠಿಯಲ್ಲಿ ಪ್ರತಿಷ್ಠಾನದ ಉಪಾಧ್ಯಕ್ಷ ಕಂ.ಸಿಂಗ್ರಿಗೌಡ, ಕಾರ್ಯದರ್ಶಿ ಸುಬ್ಬೇಗೌಡ ಇದ್ದರು.


ಸೆ.25 ರಿಂದ ಸ್ಪರ್ಧಾತ್ಮಕ ಪರೀಕ್ಷೆಗಳ ತರಬೇತಿ
ಮಂಡ್ಯ,ಸೆ.23- ಸೆಪ್ಟೆಂಬರ್ 25 ರಿಂದ ಮಂಡ್ಯ ಕೃಷಿಕ್ ಸರ್ವೋದಯ ಟ್ರಸ್ಟ್ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿಷಯ ತಜ್ಞರಿಂದ ತರಬೇತಿಯನ್ನು ಆಯೋಜಿಸಲಾಗಿದೆ ಎಂದು ಟ್ರಸ್ಟ್‍ನ ಕಾರ್ಯದರ್ಶಿ ರಾಮಲಿಂಗಯ್ಯ ತಿಳಿಸಿದರು.
ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ವಿವಿಧ ವೃಂದದ 304 ಸಬ್‍ಇನ್ಸ್‍ಪೆಕ್ಟರ್ ಹುದ್ದೆಗಳ ನೇಮಕಾತಿಗೆ ಅದಿಸೂಚನೆ ಹೊರಡಿಸಿದ್ದು, ಸೆ.25 ರಿಂದ ಎರಡು ತಿಂಗಳ ಕಾಲ ತರಬೇತಿಯನ್ನು, ಈಗಾಗಲೇ ಕಾನ್ಸ್‍ಟೇಬಲ್ ಹುದ್ದೆಗಳಿಗೆ ದೈಹಿಕ ಸಾಮಥ್ರ್ಯ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಅಭ್ಯರ್ಥಿಗಳಿಗೆ ಸೆ.28 ರಿಂದ 45 ದಿನಗಳ ತರಬೇತಿಯನ್ನು ನೀಡಲಾಗುವುದು ಎಂದರು.
ಅತಿ ಶೀಘ್ರದಲ್ಲಿ ಕೆ.ಎ.ಎಸ್. ಪೂರ್ವಭಾವಿ ಪರೀಕ್ಷೆಗಳಿಗೆ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರ ನೇಮಕ ಪರೀಕ್ಷೆ ಮತ್ತು ಶಿಕ್ಷಕರ ಅರ್ಹತಾ ಪರೀಕ್ಷೆ  ತರಬೇತಿ ಪ್ರಾರಂಭಿಸಲಾಗುವುದೆಂದು ಹೇಳಿದ ಅವರು ತರಬೇತಿ ಅವಧಿಯಲ್ಲಿ ಪರೀಕ್ಷಾರ್ಥಿಗಳಿಗೆ ಮಾದರಿ ಪರೀಕ್ಷೆಗಳನ್ನು ನಡೆಸಲಾಗುವುದು, ರಾಜ್ಯದ ವಿವಿಧ ಭಾಗಗಳಿಂದ ವಿಷಯ ತಜ್ಞ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ಉತ್ಕøಷ್ಟ ಮಟ್ಟದ ತರಬೇತಿ ನೀಡಲಾಗುವುದೆಂದು ಹೇಳಿದರು.
ಹೆಚ್ಚಿನ ಮಾಹಿತಿಗೆ ದೂರವಾಣಿ:08232-231140, ಕಾರ್ಯದರ್ಶಿ ರಾಮಲಿಂಗಯ್ಯ-9845054593, ವ್ಯವಸ್ಥಾಪಕ ಲಕ್ಷ್ಮಣ – 9902241722 ಸಂಖ್ಯೆಗಳಿಗೆ ಸಂಪರ್ಕಿಸಬಹುದಾಗಿದೆ.
ಗೋಷ್ಠಿಯಲ್ಲಿ ವ್ಯವಸ್ಥಾಪಕ ಲಕ್ಷ್ಮಣ್ ಇದ್ದರು.

 ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ಮುಷ್ಕರ
ಮಂಡ್ಯ,ಸೆ.23- ಬಿ.ಎಸ್.ಎನ್.ಎಲ್ ಅಧಿಕಾರೇತರ ನೌಕರರ ನ್ಯಾಯ ಸಮ್ಮತ ಹಾಗೂ ಬಹುದಿನಗಳ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಒಂದು ದಿನದ ಧರಣಿ ಮುಷ್ಕರ ನಡೆಸಿದರು.
ನಗರದ ಬಿ.ಎಸ್.ಎನ್.ಎಲ್ ಕಛೇರಿಯ ಎದುರು ಪ್ರತಿಭಟನೆ ನಡೆಸಿದ ನೌಕರರು ದಿನಾಂಕ 27-06-2014 ರಂದು ಬಿ.ಎಸ್.ಎನ್.ಎಲ್ ಆಡಳಿತ ಮಂಡಳಿ ಮತ್ತು ಅಧಿಕಾರೇತರ ನೌಕರರ ಜಂಟಿಕ್ರಿಯಾ ಸಮಿತಿಯ ನಡುವಿನ ಸಭೆ ವಿಫಲವಾಗಿದ್ದು, ಕಂಪನಿಯು ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು.
ಬಹುದಿನಗಳ ಬೇಡಿಕೆಗಳಾದ ಆರ್.ಎಂ.ಮತ್ತು ಟಿ.ಎಂ. ನೌಕರರ ಸ್ಟಾಗ್ನೇಷನ್ ನಿವಾರಣೆ , ಎಲ್ಲಾ ನೌಕರರಿಗೆ ಒಂದು ತಿಂಗಳ ವೇತನದಷ್ಟು ತಾತ್ಕಾಲಿಕ ಬೋನಸ್, ದಿನಾಂಕ 1-1-2007 ರ ಪೂರ್ವ ಮತ್ತು ನಂತರ ನಿವೃತ್ತರಾದವರಿಗೆ ವಿಳಂಬವಾಗುತ್ತಲಿರುವ ಶೇ.78.2 ರಷ್ಟು ಐ.ಡಿ.ಎ ಯನ್ನು ಮೂಲ ವೇತನದಲ್ಲಿ ಸೇರಿಸಿ ನಿವೃತ್ತಿ ವೇತನ ನೀಡುವುದು, ನೂತನ ಭಡ್ತಿ ನೀತಿಯಲ್ಲಾದ ಲೋಪದೋಷಗಳನ್ನು ಸರಿಪಡಿಸುವುದು, 2007ರ ನಂತರ ಇಲಾಖೆಗೆ ಸೇರಿದ ನೌಕರರ ವೇತನವನ್ನು ಕಡಿತ ಗೊಳಿಸುವುದನ್ನು ನಿಲ್ಲಿಸುವುದು, ಹಾಗೂ ಬಾಕಿ ಇರುವ ಸುಮಾರು 25 ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದರು.
ಧರಣಿಯಲ್ಲಿ ಜಿಲ್ಲಾ ಕಾರ್ಯದರ್ಶಿಗಳಾದ ಕಾಂ.ಪುಟ್ಟಸ್ವಾಮಿ, ಕಾಂ.ಕೆ.ರಾಮೇಗೌಡ, ಕಾಂ.ಜಯರಾಜ್, ಕಾಂ.ಜೆ.ಎಸ್.ಮೂರ್ತಿ ಗೋವಿಂದರಾಜು ಇತರರಿದ್ದರು.

 ಇಬ್ಬರು ಜೇಬುಗಳ್ಳರ ಬಂಧನ:  3 ಮೊಬೈಲ್ ಫೋನ್‍ಗಳ ವಶ
 ಮೈಸೂರು : ಇಬ್ಬರು ಜೇಬುಗಳ್ಳರನ್ನು ಬಂಧಿಸಿರುವ ಸಿಸಿಬಿ ಪೊಲೀಸರು 30 ಸಾವಿರ ರೂ ಬೆಲೆ ಬಾಳುವ ಮೂರು ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ಗೌಸಿಯಾ ನಗರದ ನಿವಾಸಿ ವಸೀಂ ಅಕ್ರಂ , ಶಾಂತಿನಗರದ ನಿವಾಸಿ ಮಹಮದ್ ಅಮೀರ್ ಬಂಧಿತರು. 
 ಸಿ.ಸಿ.ಬಿ. ಪೊಲೀಸರು ಗಸ್ತಿನಲ್ಲಿದ್ದಾಗ ಶಾಂತಿನಗರ 1ನೇ ಹಂತ 1ನೇ ಮುಖ್ಯ ರಸ್ತೆ 3ನೇ ಕ್ರಾಸ್‍ನಲ್ಲಿರುವ ನಗರಪಾಲಿಕೆ ಪಾರ್ಕ್ ಬಳಿ ಇವರುಗಳನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮೊಬೈಲ್ ಕಳುವು ಮಾಡಿರುವುದಾಗಿ ಒಪ್ಪಿಕೊಂಡರು. ಬಂಧಿತರಿಂದ ಮೊಬೈಲ್ ಗಳನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

 ಮನೆಗಳ್ಳನ ಬಂಧನ :  1 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣ ವಶ
 ಮೈಸೂರು : ಮನೆಕಳ್ಳನೊಬ್ಬನನ್ನು ಬಂಧಿಸಿರುವ ಸಿಸಿಬಿ ಪೊಲೀಸರು ಆತನಿಂದ 1 ಲಕ್ಷ ರೂ ಬೆಲೆ ಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.
ಮೈಸೂರು ತಾಲೂಕಿನ ಕೆ.ಎನ್. ಹುಂಡಿಯ ನಿವಾಸಿ ಸಿದ್ದರಾಮ ಬಂಧಿತನು. ಈತ  ಪೊಲೀಸರು   ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಲ್ಲಿಅನುಮಾನಸ್ಪದವಾಗಿ ನಿಂತಿದ್ದಾಗ ಸಿಸಿಬಿ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದಾಗ
 ವಿಜಯನಗರ ಪೊಲೀಸ್ ಠಾಣೆಯ ಮನೆಗಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ 1ಲಕ್ಷ ರೂ  ಬೆಲೆಯ ಒಟ್ಟು 37 ಗ್ರಾಂ ತೂಕದ ಚಿನ್ನದ ಆಭರಣಗಳನ್ನು  ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಮೈಸೂರು ದಸರಾ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಶ್ರೀಸಿದ್ದರಾಮಯ್ಯ ರವರನ್ನ ದಸರಾ ಆಚರಣಾ ಸಮಿತಿಯ ಸದಸ್ಯರು ಆಹ್ವಾನ ಪತ್ರಿಕೆ ನೀಡಿ ಸ್ವಾಗತಿಸಿದರು.ಸಂದರ್ಭದಲ್ಲಿ ದೃವರಾಜು,ನಾರಾಯಣಮೂರ್ತಿ,ಬಾಲಕೃಷ್ಣ,ರಮೇಶ್ ಕುಮಾರ್ ಜೈನ್,ಸಂತೋಷ್ ಕುಮಾರ್ ಉಪಸ್ತಿತರಿದ್ದರು.
ಬಾಲಗಂಗಾಧರ ಶ್ರೀಗಳ ದೂರದೃಷ್ಠಿಯ ಫಲ ಶ್ರೀಮಠ : ಸೊರಕೆ
ಆದಿಚುಂಚನಗಿರಿ,ಸೆ.23-ಬಾಲಗಂಗಾಧರರ ದೂರದೃಷ್ಟಿಯ ಫಲವಾಗಿಯೇ ಇಂದು ಶ್ರೀಮಠ ಕಂಗೊಳಿಸುತ್ತಿದೆ. ಶಿಕ್ಷಣ, ಆರೋಗ್ಯ, ಸಮಾಜಸೇವೆಯಲ್ಲಿ ಬಹುದೊಡ್ಡದಾದ ಕೊಡುಗೆ ನೀಡುತ್ತಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ್‍ಕುಮಾರ್ ಸೊರಕೆ ಶ್ಲಾಘಿಸಿದರು.
ಶ್ರೀಕ್ಷೇತ್ರದಲ್ಲಿ ಇಂದಿನಿಂದ ಆರಂಭವಾಗಿರುವ 36ನೇ ರಾಜ್ಯಮಟ್ಟದ ಶ್ರೀ ಕಾಲಭೈರವೇಶ್ವರ ಜಾನಪದ ಮೇಳ ಮತ್ತು ಗುರುಸ್ಮರಣೆ ಸಮಾರಂಭದಲ್ಲಿ ಡಾ.ಎಚ್.ಎಲ್.ನಾಗೇಗೌಡ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ಭೈರವೈಕ್ಯ ಬಾಲಗಂಗಾಧರನಾಥಶ್ರೀಗಳು ಕೆಳಹಂತದ ಬಡವರೊಂದಿಗೆ ಉತ್ತಮ ಸಂಪರ್ಕ ಹೊಂದಿ ಅವರಿಗೆ ಎಲ್ಲಾ ರೀತಿಯ ಸಹಾಯವನ್ನು ಮಾಡುತ್ತಾ ಅವರನ್ನು ಮೇಲ್ಪಂಕ್ತಿಗೆ ತರಲು ದುಡಿದ ಮಹಾನ್ ಸಂತರು ಎಂದು ಬಣ್ಣಿಸಿದರು.
ಬಡ ಮಕ್ಕಳಿಗೆ ಶಿಕ್ಷಣ ನೀಡುವ ಉತ್ತಮ ಕಾರ್ಯವನ್ನು ಶ್ರೀಮಠ ಮಾಡುತ್ತಾ ಬಂದಿದೆ. ಇದು ಸದಾ ಕಾಲ ಹೀಗೆ ಮುಂದುವರೆಯಲಿ ಎಂದು ಆಶಿಸಿದರು.
ಮಾನವರಲ್ಲಿ ಮೂಡನಂಬಿಕೆ, ಅಜ್ಞಾನ ತೊಲಗಬೇಕೆಂದರೆ ವಿದ್ಯಾಭ್ಯಾಸ ಅತ್ಯಗತ್ಯವಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಮೂಡನಂಬಿಕೆ, ಅಜ್ಞಾನಕ್ಕೆ ಮಾರು ಹೋಗುತ್ತಿದ್ದಾರೆ. ಇದನ್ನು ತಡೆಯಬೇಕೆಂದರೆ ವಿದ್ಯೆಯಿಂದ ಮಾತ್ರ ಸಾಧ್ಯವಿದ್ದು, ಶ್ರೀಮಠ ವಿದ್ಯೆ ನೀಡುವ ಕೆಲಸ ಮಾಡುತ್ತಿರುವುದು ಉತ್ತಮ ಕಾರ್ಯ ಎಂದರು.
ಶ್ರೀಕ್ಷೇತ್ರದಲ್ಲಿ ನಡೆಯುವ ಜಾನಪದ ಕಲಾಮೇಳ ರಾಜ್ಯದಲ್ಲೇ ಹೆಸರುವಾಸಿಯಾಗಿದೆ. ಜಾನಪದ ಕಲಾಮೇಳ, ನಾಡಹಬ್ಬ ದಸರಾ ಸೇರಿದಂತೆ ವಿವಿಧ ಕಾರ್ಯಕ್ರಮಗಳು ರಾಜ್ಯದಲ್ಲಿ ಜರುಗುವ ಮೂಲಕ ನಮ್ಮ ನೆಲದ ಕಲೆ, ಸಾಹಿತ್ಯ, ಸಂಸ್ಕøತಿಯನ್ನು ಪಸರಿಸುವ ಕೆಲಸಗಳು ಜರುಗುತ್ತಿರುವುದು ಶ್ಲಾಘನೀಯ ಎಂದರು.
ಪಾಶ್ಚಿಮಾತ್ಯ ಸಂಸ್ಕøತಿಯಿಂದ ಕಲೆ, ಸಂಸ್ಕøತಿಗೆ ಧಕ್ಕೆಯುಂಟಾಗುತ್ತಿದ್ದು, ಪಾಶ್ಚಿಮಾತ್ಯ ಕಲೆಗಳ ಹಾವಳಿಯನ್ನು ತಡೆಯಬೇಕೆಂದರೆ, ನಮ್ಮ ಕಲೆ, ಸಾಹಿತ್ಯ, ಸಂಸ್ಕøತಿಗೆ ಹೆಚ್ಚಿನ ಒತ್ತು ನೀಡಬೇಕೆಂದರು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ ಅಧ್ಯಕ್ಷ ಟಿ.ತಿಮ್ಮೇಗೌಡ, ಕಲಾವಿದರಿಗೆ ಸರ್ಕಾರದಿಂದ ಬರಬೇಕಾದ ಮಾಶಾಸನದಲ್ಲಿ ತೊಡಕಾಗುತ್ತಿದ್ದು, ರಾಜ್ಯ ಸರ್ಕಾರ ಸಮರ್ಪಕ ಮಾಶಾಸನ ಒದಗಿಸುವಲ್ಲಿ ಪ್ರಯತ್ನಿಸಬೇಕೆಂದು ಮನವಿ ಮಾಡಿದರು.
ಸಮಾರಂಭದ ದಿವ್ಯ ಸಾನಿಧ್ಯವನ್ನು ಶ್ರೀಕ್ಷೇತ್ರದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ವಹಿಸಿದ್ದರು. ವೇದಿಕೆಯಲ್ಲಿ ಮಾಜಿ ಸಚಿವ ಎಚ್.ಟಿ.ಕೃಷ್ಣಪ್ಪ, ಮಾಜಿ ಶಾಸಕರಾದ ಎಲ್.ಆರ್.ಶಿವರಾಮೇಗೌಡ, ಕೆ.ಸುರೇಶ್‍ಗೌಡ, ತಾ.ಪಂ. ಅಧ್ಯಕ್ಷ ಮೂಡ್ಲಿಗಿರಿಗೌಡ, ಗ್ರಾ.ಪಂ. ಅಧ್ಯಕ್ಷ ನಿಂಗೇಗೌಡ, ಜಾನಪದ ಪರಿಷತ್‍ನ ಇಂದಿರಾಬಾಲಕೃಷ್ಣ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಇಂದಿರಾಬಾಲಕೃಷ್ಣ, ಜಯಮ್ಮ, ರಾಮಮೂರ್ತಿ ಅವರಿಗೆ ಎಚ್.ಎಲ್.ನಾಗೇಗೌಡ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಾವುತರ ಶೆಡ್ ಗಳಿಗೆ ನೀರು; ಪರದಾಟ
ಮಯಸೂರು,ಸೆ. 23- ದಸರಾ ಆನೆಗಳೊಂದಿಗೆ  ಆಗಮಿಸಿ ಅರಮನೆ ಆವರಣದಲ್ಲಿ ಬೀಡುಬಿಟ್ಟಿರುವ ಮಾವುತರು ಕಾವಾಡಿಗಳ  ಕುಟುಮಬ ತಂಗಲು ತಾತ್ಕಾಲಿಕ ಶೆಡ್‍ಗಳನ್ನು ನಿರ್ಮಿಸಿಕೊಡಲಾಗಿದೆ.    
  ಕಳೆದ ಒಂದು ತಿಂಗಳಿನಿಂದಲೂ ಮಾವುತರ ಕುಟುಂಬ ಅಲ್ಲೇ ಕಾಲ ಕಳೆದರು.  ಕಳೆದರಾತ್ರಿ ಮೈಸೂರು ನಗರದಾದ್ಯಂತ ಬಾರಿ ಸುರಿದ ಪರಿಣಾಮ  ಮಾವುತರು  ತಂಗಿದ್ದ ನಾಲ್ಕು ಶೆಡ್‍ಗಳಿಗೆ  ನೀರು ನುಗ್ಗಿ ಮಾವುತರ ಕುಟುಂಬ  ಮಲಗಿ ನಿದ್ರಿಸಲು ಆಗದೆ,  ಅವರ ಬಟ್ಟೆ ಬರೆ ,ವಸ್ತುಗಳೆಲ್ಲಾ  ನೀರಿನಿಂದ ನೆನೆದು ಪರದಾಡುವಂತಾಯಿತು.
  ಇಂದು ಬೆಳಿಗ್ಗೆ ಸಚಿವರು ಮತ್ತು ಅಧಿಕಾರಿಗಳ  ಗಮನಕ್ಕೆ  ತಂದಾಗ ಅವರನ್ನು  ಬೇರೆ ಶೆಡ್‍ಗಳಿಗೆ  ವರ್ಗಾಯಿಸಿ  ತಾತ್ಕಾಲಿಕ  ವ್ಯವಸ್ಥೆ ಮಾಡಿಕೊಡಲಾಯಿತು.

 ಅರಮನೆ ಆವರಣದಲ್ಲಿ ಬ್ಯಾಟ್ರಿ ಚಾಲಿತ ವಾಹನ
ಮೈಸೂರು,sಸೆ.23-ಮೈಸೂರು ಅರಮನೆ ಆವರಣದಲ್ಲಿ ಸುತ್ತಲು ಬ್ಯಾಟ್ರಿ ಚಾಲಿತ  ವಾಗನಳನ್ನು  ತರಿಸಲಾಗಿದ್ದು, ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ  ವಿ. ಶ್ರೀನಿವಾಸಪ್ರಸಾದ್ ರವರು ಚಾಲನೆ ನೀಡಿದರು.
  ಗ್ರೀಂಡ್ಜೈನ್ ಟೆಕ್ನಾಲಜಿ ಕಂಪನಿ ಯವರ ಸಹಯೋಗದೊಂದಿಗೆ ಪ್ರವಾಸಿಗರ ಅನುಕೂಲಕ್ಕಾಗಿ ಈ ಸ್ವಯಂ ಚಾಲಿತ ವಾಹನ ಬಿಡುಗಡೆ ಮಾಡಲಾಗಿದ್ದು, ಪ್ರಯೋಗಾರ್ತವಾಗಿ ಇಂದು 5 ವಾಹನಗಳನ್ನು  ಬಿಡಿಗಡೆಮಾಡಲಾಯಿತು. ನಡೆಯಲಾಗದ ವಯಸ್ಕರು ಈ ವಾಹನ ಏರಿ ನಿಂತು  ಕೈ ಭಟನ್  ಒತ್ತುವ ಮೂಲಕ  ಆರಮನೆ ಆವರಣದಲ್ಲಿ ಸುತ್ತಬಹುದಾಗಿದೆ.
ಅರ್ಹ ಪೌರಕಾರ್ಮಿಕರಿಗೆ ನಿವೇಶನ
ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಜಿಲ್ಲಾಧಿಕಾರಿ
ಮಂಡ್ಯ-ಅರ್ಹ ಪೌರಕಾರ್ಮಿಕರಿಗೆ ನಿವೇಶನ ನೀಡುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಅಜಯ್‍ನಾಗಭೂಷಣ್ ತಿಳಿಸಿದರು.
ನಗರದ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ನಡೆದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಾರ್ವಜನಿಕರ ಸಹಕಾರವಿಲ್ಲದೇ ನಗರದ ಸ್ವಚ್ಛತೆ ಕಷ್ಟಸಾಧ್ಯ, ಅಂತೆಯೇ ಸ್ವಚ್ಛತೆಯಲ್ಲಿ ಸಾರ್ವಜನಿಕರು ಜವಾಬ್ದಾರಿಯೂ ಇದ್ದು, ಪೌರಕಾರ್ಮಿಕರಿಗೆ ಸಹಕರಿಸಬೇಕು ಎಂದು ನುಡಿದರು.
ನಾಗರೀಕರು ತಮ್ಮ ಸುತ್ತಮುತ್ತಲಿನ ಪರಿಸರದ ಸ್ವಚ್ಛತೆ ಕಾಪಾಡಿದರೆ ಅದೇ ಪೌರಕಾರ್ಮಿಕರಿಗೆ ನೀಡುವ ಗೌರವವಾಗಿದೆ ಎಂದು ಹೇಳಿದರು.
ಪೌರಕಾರ್ಮಿಕರು ಹಲವಾರು ವರ್ಷಗಳಿಂದ ನಿವೇಶನಕ್ಕೆ ಮನವಿ ಮಾಡುತ್ತಿದ್ದು, ಹಾಗೆಯೇ ನಗರದ ವಿವೇಕಾನಂದ ಬಡಾವಣೆಯ ಬಳಿ 12 ಎಕರೆ ಭೂಮಿಯನ್ನು ಗುರುತಿಸಲಾಗಿದ್ದು, ಅರ್ಹ ಪೌರಕಾರ್ಮಿಕರಿಗೆ ನಿವೇಶನ ನೀಡಲು ತಕ್ಕ ಕ್ರಮ ವಹಿಸಲಾಗಿದೆ ಎಂದು ಹೇಳಿದರು.
ಜಿಲ್ಲಾ ಪೆÇೀಲಿಸ್ ವರಿಷ್ಠಾಧಿಕಾರಿ ಭೂಷಣ್ ರಾವ್ ಬೊರಸೆ ಮಾತನಾಡಿ, ನಗರದ ಸ್ವಚ್ಛತೆ ಮತ್ತು ಸೌಂದರ್ಯ ಕಾಪಾಡುವಲ್ಲಿ ಪೌರಕಾರ್ಮಿಕರ ಪಾತ್ರ ಅನನ್ಯ. ಅಂತೆಯೇ ಪೌರಕಾರ್ಮಿಕರು ಆರೋಗ್ಯದ ಬಗ್ಗೆ ಕಾಳಜಿವಹಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯP್ಷÀತೆಯನ್ನು ನಗರಸಭೆ ಅಧ್ಯP್ಷÀ ಸಿದ್ದರಾಜು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ವೃತ್ತಿ ವ್ಯಕ್ತಿ ಅಳೆಯ ಬೇಡಿ
ಪೌರಕಾರ್ಮಿಕರ ದಿನಾಚರಣೆಯಲ್ಲಿ ನಗರಸಭೆ ಅಧ್ಯP್ಷÀ ಸಿದ್ದರಾಜು
ಮಂಡ್ಯ-ವೃತ್ತಿಯಿಂದ ವ್ಯಕ್ತಿಯನ್ನು ಅಳೆಯಬಾರದು, ವ್ಯಕ್ತಿತ್ವದಿಂದ ವ್ಯಕ್ತಿಯನ್ನು ಅಳೆಯಬೇಕು ಎಂದು ನಗರಸಭೆ ಅಧ್ಯP್ಷÀ ಸಿದ್ದರಾಜು ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ನಗರಸಭೆ ವತಿಯಿಂದ ಜರುಗಿದ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮದ ಅಧ್ಯP್ಷÀತೆ ವಹಿಸಿ ಅವರು ಮಾತನಾಡಿದರು.
ಯಾರೇ ಆದರೂ ಅವರ ವೃತ್ತಿಯನ್ನು ಗೌರವಿಸಬೇಕು, ವೃತ್ತಿಯ ಮೂಲಕ ವ್ಯಕ್ತಿಯನ್ನು ಅಳೆಯಬಾರದು ಎಂದು ನುಡಿದರು.
ವೃತ್ತಿಗೆ ತಕ್ಕ ಸೌಲಭ್ಯಗಳನ್ನು ಸರ್ಕಾರ ಮತ್ತು ನಗರಸಭೆ ನೀಡುವಂತಾಗಬೇಕು, ವೃತ್ತಿಗೆ ತಕ್ಕ ಹಾಗೆ ಸಂಬಳ ನೀಡುವುದು ಆಡಳಿತದ ಕರ್ತವ್ಯವಾಗಿದೆ. ಹಾಗಾಗಿ ಅವರವರ ವೃತ್ತಿಗೆ ಗೌರವ ನೀಡಿದಂತಾಗುತ್ತದೆ. ಅಂತೆಯೇ ಸಂವಿಧಾನದ ಪ್ರಕಾರ ಕಾನೂನುಗಳು ಜಾರಿಯಾಗಬೇಕು, ಅಲ್ಲದೇ ಇದು ಪೌರಕಾರ್ಮಿಕರಿಗೆ ತಲುಪಬೇಕು ಎಂದು ಹೇಳಿದರು.
ನಾಗರೀಕರ ಆರೋಗ್ಯ ನೋಡಿಕೊಳ್ಳುವ ಜವಾಬ್ದಾರಿ ಪೌರಕಾರ್ಮಿಕರ ಮೇಲಿದೆ. ಅವರ ಬಗ್ಗೆ ಕಾಳಜಿ ವಹಿಸುವುದು ನಮ್ಮ ಜವಾಬ್ದಾರಿಯಾಗಿದೆ. ಹಾಗಾಗಿ ವರ್ಷಕ್ಕೆ ಮೂರು ಭಾರಿ ನಗರಸಭೆ ವತಿಯಿಂದ ಪೌರಕಾರ್ಮಿಕರು ಸೇರಿದಂತೆ ಅವರ ಕುಟುಂಬಗಳಿಗೆ ಆರೋಗ್ಯ ಶಿಬಿರವನ್ನು ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಪೌರಕಾರ್ಮಿಕರು ಕ್ರೀಡಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡು ತಮ್ಮ ಕೌಶಲ್ಯವನ್ನು ಮೆರೆಯುವಂತಹ ಅವಕಾಶ ಈಗ ಸಿಕ್ಕಿದೆ. ಪೌರಕಾರ್ಮಿಕರ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ನೆರವು ಮತ್ತು ಪೆÇ್ರೀತ್ಸಾಹವನ್ನು ನಗರಸಭೆ ವತಿಯಿಂದ ನೀಡಲಾಗುವುದು, ಅಲ್ಲದೇ ಈಗಾಗಲೇ ಪೌರಕಾರ್ಮಿಕರ ಅನಾರೋಗ್ಯದ ಬಗ್ಗೆ ಪರಿಹಾರ ನೀಡುವ ಬಗ್ಗೆ ಚಿಂತನೆ ನಡೆಸಲಾಗಿದೆಯಲ್ಲದೇ 120 ಪೌರಕಾರ್ಮಿಕರ ಕುಟುಂಬಗಳಿಗೆ 15,500 ರೂ. ಸಹಾಯ ಧನ ನೀಡಲಾಗಿದೆ ಎಂದು ತಿಳಿಸಿದರು.
ವಸತಿ ಸಚಿವರು 12 ಎಕರೆಯಲ್ಲಿ 500 ಮನೆ ನಿರ್ಮಿಸುವ ಪ್ರಕ್ರಿಯೆಗೆ ಚಾಲನೆ ನೀಡಿದ್ದಾರೆ. ಇದರಲ್ಲಿ ಪೌರಕಾರ್ಮಿಕರಿಗೆ ಆದ್ಯತೆ ನೀಡುವ ಬಗ್ಗೆ ನಿಗಾವಹಿಸಲಾಗುವುದು ಎಂದು ನುಡಿದರು.
ಈಗಾಗಲೇ ಪೌರಕಾರ್ಮಿಕರ ಕಾಲೋನಿಯಲ್ಲಿ ಭವನ ನಿರ್ಮಿಸಿ ಗ್ರಂಥಾಲಯ ಸ್ಥಾಪಿಸಲಾಗಿದೆ. ಮುಂದಿನ ದಿನಗಳಲ್ಲಿಯೂ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದು ತಿಳಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉದ್ಘಾಟಿಸಿದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ದುಡಿಯುವ ವರ್ಗ ಗೌರವಿಸುವ ಆಡಳಿತ ಮಂಡಳಿ ಸುಭಿP್ಷÀ
ನಗರಸಭೆ ವತಿಯಿಂದ ಪೌರಕಾರ್ಮಿಕರಿಗೆ ತಿಂಡಿ ವ್ಯವಸ್ಥೆಗೆ ಸೋಮಶೇಖರ್ ಕೆರಗೋಡು ಮನವಿ
ಮಂಡ್ಯ-ದುಡಿಯುವ ವರ್ಗಗಳನ್ನು ಗೌರವಿಸುವಂತಹ ಆಡಳಿತ ಮಂಡಳಿಗಳು ಸುಭಿP್ಷÀವಾಗಿರುತ್ತವೆ ಎಂದು ನಗರಸಭಾ ಸದಸ್ಯ ಸೋಮಶೇಖರ್ ಕೆರಗೋಡು ಅಭಿಪ್ರಾಯಪಟ್ಟರು.
ನಗರದ ಕಲಾಮಂದಿರದಲ್ಲಿ ಜಿಲ್ಲಾಡಳಿ ಮತ್ತು ನಗರಸಭೆ ವತಿಯಿಂದ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಪೌರಕಾರ್ಮಿಕರು ಪ್ರತಿ ನಿತ್ಯ ಬೆಳಿಗ್ಗಿನಿಂದಲೂ ನಗರದ ಸ್ವಚ್ಛತೆಯತ್ತ ಗಮನಹರಿಸಿ ಸಮಾಜದ ಆರೋಗ್ಯ ಕಾಪಾಡುತ್ತಿದ್ದಾರೆ. ಆದರೆ ಅವರಿಗೆ ಇಷ್ಟೇ ಗಂಟೆಗೆ ಹೋಗಬೇಕು ಮತ್ತು ಬರಬೇಕು ಎಂಬ ಕಾಲಮಿತಿಯನ್ನು ಹೇರಲಾಗುತ್ತಿದೆ. ಇದರಿಂದ ಪೌರಕಾರ್ಮಿಕರು ಕಾರ್ಯನಿರ್ವಹಿಸುವಲ್ಲಿ ತುಂಬಾ ತೊಂದರೆಯಾಗುತ್ತಿದೆ. ಆದ್ದರಿಂದ ಇಂತಹ ಅವೈಜ್ಞಾನಿಕ ಕ್ರಮವನ್ನು ಕೈ ಬಿಡಬೇಕು ಎಂದು ನುಡಿದರು.
ಹಗಲಿರುಳು ಎನ್ನದೇ ಸಮಾಜಕ್ಕಾಗಿ ದುಡಿಯುವ ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದಲೇ ತಿಂಡಿಯ ವ್ಯವಸ್ಥೆ ಮಾಡಬೇಕು ಇದು ಅವರ ವೃತ್ತಿಗೆ ನೀಡುವ ಗೌರವವಾಗುತ್ತದೆ ಎಂದು ಹೇಳಿದರು.
ಪೌರ ಕಾರ್ಮಿಕರು ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸಾವನ್ನಪ್ಪಿದ್ದರೆ, ಅವರ ಕುಟುಂಬ ವರ್ಗ ಬೀದಿಪಾಲಾಗುತ್ತದೆ. ಆದ್ದರಿಂದ ಪೌರಕಾರ್ಮಿಕರಿಗೆ 5 ಲP್ಷÀ ರೂ.ವರೆಗೆ ಗುಂಪು ವಿಮೆ ಮಾಡಿಸಬೇಕು ಎಂದು ಸಲಹೆ ನೀಡಿದರು.
ಇತರ ಇಲಾಖೆಗಳಲ್ಲಿ ಬ್ಯಾಕ್ ಲಾಗ್ ಮೂಲಕ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆದರೆ ನಗರಸಭೆ, ನಗರಪಾಲಿಕೆ, ಪುರಸಭೆ, ಪಟ್ಟಣ ಪಂಚಾಯಿತಿಗಳಲ್ಲಿ ಶೇ.100 ರಷ್ಟು ಪೌರಕಾರ್ಮಿಕರ ಹುದ್ದೆ ಮೀಸಲಾಗಿರುತ್ತದೆ. ಅವರಿಗೆ ದಿನಕ್ಕೆ ಕೇವಲ 200 ರೂ. ಸಂಬಳ ನೀಡಿ ದುಡಿಸಿಕೊಳ್ಳಲಾಗುತ್ತಿದೆ. ಹಾಗಾಗಿ ಅವರಿಗೆ ಉತ್ತಮ ಸಂಬಳ ನೀಡುವ ಮೂಲಕ ಅವರನ್ನು ಗೌರವಿಸುವ ಕೆಲಸ ಆಗಬೇಕಿದೆ ಎಂದರು.
ಒಮ್ಮೆ ತಮ್ಮ ಮನೆಯ ಶೌಚಾಲಯ ಕೆಟ್ಟಿತ್ತು. ಆ ಸಂದರ್ಭದಲ್ಲಿ ತಾವೇ ತಮ್ಮ ಮಕ್ಕಳು ಮಾಡಿದ್ದ ಮಲ ವಿಸರ್ಜನೆಯನ್ನು ಎತ್ತುವುದರಲ್ಲಿ ತಪ್ಪಿಲ್ಲ ಎಂದು ಕೊಂಡು ಶೌಚಾಲಯಕ್ಕೆ ಕೈ ಹಾಕಿ ಸ್ಚಚ್ಛಗೊಳಿಸಿದ್ದೆ, ಅಂತೆಯೇ ಪೌರಕಾರ್ಮಿಕರು ತಮ್ಮ ಮಕ್ಕಳು ಎಂದುಕೊಂಡು ನಗರದ ಸ್ವಚ್ಛತೆಯಲ್ಲಿ ತೊಡಗಿಕೊಂಡಿದ್ದಾರೆ. ಇಂತಹ ತಂದೆ-ತಾಯಿಗಳನ್ನು ನೆನೆಯುವ ಕಾರ್ಯ ನಿರಂತರವಾಗಿ ನಡೆಯಬೇಕು ಎಂದು ತಮ್ಮ ಅನುಭವವನ್ನು ಇದೇ ಸಂದರ್ಭದಲ್ಲಿ ಹಂಚಿಕೊಂಡರು.
ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್ ಉದ್ಘಾಟಿಸಿದರು. ಅಧ್ಯP್ಷÀತೆಯನ್ನು ನಗರಸಭೆ ಅಧ್ಯP್ಷÀ ಸಿದ್ದರಾಜು ವಹಿಸಿದ್ದರು.
ವೇದಿಕೆಯಲ್ಲಿ ಉಪಾಧ್ಯಕ್ಷೆ ಚಂದ್ರಕಲಾ, ಸ್ಥಾಯಿ ಸಮಿತಿ ಅಧ್ಯP್ಷÀ ರಾಮಲಿಂಗಯ್ಯ, ಪೌರಾಯುಕ್ತ  ಶಶಿಕುಮಾರ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಉಪ ನಿರ್ದೇಶಕ ಅಣ್ಣೇಗೌಡ, ನಗರಸಭಾ ಸದಸ್ಯರಾದ ಸೋಮಶೇಖರ್ ಕೆರಗೋಡು, ಹೊಸಹಳ್ಳಿ ಬೋರೇಗೌಡ, ಮಹೇಶ್, ಸುಜಾತಮಣಿ, ಅನಂತಪದ್ಮನಾಭ, ಶಶಿಕುಮಾರ್, ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯP್ಷÀ ಎಂ.ಬಿ.ನಾಗಣ್ಣ, ವಿಷಕಂಠ, ಇತರರಿದ್ದರು.
ಇದೇ ಸಂದರ್ಭದಲ್ಲಿ ಕೆಲ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಬೇಡಿಕೆ ಈಡೇರಿಕೆಗೆ ಪೌರಕಾರ್ಮಿಕರಿಂದ ಮನವಿ
ಮಂಡ್ಯ-ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಪೌರಕಾರ್ಮಿಕರು ಜಿಲ್ಲಾಧಿಕಾರಿ ಅಜಯ್ ನಾಗಭೂಷಣ್, ಯೋಜನಾ ನಿರ್ದೇಶಕ ವೆಂಕಟರಮಣರೆಡ್ಡಿ ಹಾಗೂ ನಗರಸಭೆ ಅಧ್ಯP್ಷÀ ಸಿದ್ದರಾಜು ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಪೌರಕಾರ್ಮಿಕರ ದಿನಾಚರಣೆಯಲ್ಲಿ ಮನವಿ ಸಲ್ಲಿಸಿದ ಪೌರಕಾರ್ಮಿಕರಾದ ವಿಷಕಂಠ, ಪಳನಿಸ್ವಾಮಿ ಸೇರಿದಂತೆ ಇತರರು ಪೌರಕಾರ್ಮಿಕರಿಗೆ ಆರೋಗ್ಯ ಸೌಲಭ್ಯ ನೀಡಲು ಉತ್ತಮವಾದ ನರ್ಸಿಂಗ್ ಹೋಂ ಗುರುತಿಸಿ ಉಚಿತ ಆರೋಗ್ಯ ಸೌಲಭ್ಯ ಒದಗಿಸಬೇಕು, ಪೌರಕಾರ್ಮಿಕರಿಗೆ ನಿವೇಶನ ನೀಡಬೇಕು, ಪೌರಕಾರ್ಮಿಕರ ಮಕ್ಕಳಿಗೆ ನಗರಸಭೆಯಿಂದ ಕಂಪ್ಯೂಟರ್ ವಿತರಿಸಿ ಶಾಲಾ ಕಾಲೇಜಿನ ವಾರ್ಷಿಕ ಶುಲ್ಕವನ್ನು ಭರಿಸಿಕೊಡಬೇಕು, ಖಾಯಂ ಮತ್ತು ಗುತ್ತಿಗೆ ಪೌರಕಾರ್ಮಿಕರಿಗೆ ಪ್ರತಿತಿಂಗಳ 5ನೇ ತಾರೀಖಿನೊಳಗೆ ವೇತನ ಪಾವತಿಸಬೇಕು, ಅಲ್ಲದೇ ವಿಜಯ ಬ್ಯಾಂಕಿನಲ್ಲಿ ವೇತನ ಆಧಾರದ ಮೇಲೆ ಸಾಲ ಪಡೆದು ಮರು ಪಾವತಿ ಮಾಡಿದ ನೌಕರರಿಗೆ ಮತ್ತೆ ಸಾಲ ಪಡೆಯಲು ಪೌರಾಯುಕ್ತರು ಬ್ಯಾಂಕಿಗೆ ಶಿಫಾರಸ್ಸು ಮಾಡಬೇಕೆಂದು ಮನವಿ ಮಾಡಿದರು.

ಸೆಪ್ಟೆಂಬರ್ 27 ರಿಂದ ರೈತ ದಸರಾ
ಮೈಸೂರು, ಸೆಪ್ಟೆಂಬರ್ 24  ಮೈಸೂರು ದಸರಾ ಪ್ರಯುಕ್ತ ರೈತ ದಸರಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 27 ರಿಂದ 29ರ ವರೆಗೆ ರೈತ ದಸರಾ ಉಪ ಸಮಿತಿ ವತಿಯಿಂದ ಆಯೋಜಸಲಾಗಿದೆ.
 ಸೆಪ್ಟೆಂಬರ್ 27 ರಂದು ಬೆಳಿಗ್ಗೆ 9:30 ಗಂಟೆಗೆ ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನ ಬಳಿ ರೈತ ದಸರಾ ಮೆರವಣಿಗೆ ಉದ್ಘಾಟನೆಗೊಂಡು, ಜೆ.ಕೆ.ಗ್ರೌಂಡ್ ಮೈದಾನಕ್ಕೆ ಮುಕ್ತಾಯಗೊಳ್ಳಲಿದೆ. ನಂತರ 11:30 ಗಂಟೆಗೆ ರೈತ ದಸರಾದ ವಸ್ತು ಪ್ರದರ್ಶನ ಹಾಗೂ 11:45ದಕ್ಕೆ ವೇದಿಕೆ ಕಾರ್ಯಕ್ರಮ ಉದ್ಘಾಟನೆಯಾಗಳಿದೆ. ಮಧ್ಯಾಹ್ನ 3 ಗಂಟೆಗೆ ರೈತರೂಡನೆ ಸಂವಾದ.
 ಸೆಪ್ಟೆಂಬರ್ 28 ರಂದು ಬೆಳಿಗ್ಗೆ 6:30 ಗಂಟೆಯಿಂದ ಸಂಜೆ 5:30ರ ವರೆಗೆ ರಾಜ್ಯ ಮಟ್ಟದ ಹಾಲು ಕರೆಯು ಸ್ಪರ್ಧೆಯನ್ನು ಜೆ.ಕೆ.ಗ್ರೌಂಡ್ ಮೈದಾನದಲ್ಲಿ ಏರ್ಪಡುಮಾಡಲಾಗಿದೆ. ಸ್ಪರ್ಧೆಯಲ್ಲಿ ಮೊದಲನೆಯ ಸ್ಥಾನ ಪಡೆದವರಿಗೆ ರೂ. 50,000, ಎರಡನೆ ರೂ. 40,000, ಮೂರನೆ 30,000 ಹಾಗೂ ನಾಲ್ಕನೆಯ ಸ್ಥಾನ ಗಳಿಸಿದವರಿಗೆ ರೂ. 20,000 ಬಹುಮಾನವಾಗಿ ನೀಡಲಾಗುವುದು.
  ಸೆಪ್ಟೆಂಬರ್ 29 ರಂದು ಬೆಳಿಗ್ಗೆ 9 ಗಂಟೆಗೆ ಮೈಸೂರು ತಾಲೂಕಿನ ವರುಣಾ ಗ್ರಾಮದಲ್ಲಿ ರೈತರಿಗೆ ಕೆಸರು ಗದ್ದೆ ಓಡುವ ಸ್ಪರ್ಧೆ, ಬೆಳಿಗ್ಗೆ 11:30 ಗಂಟೆಗೆ ನಗರದ ಜೆ.ಕೆ. ಗ್ರೌಂಡ್ ಮೈದಾನದಲ್ಲಿ ರೈತರಿಗೆ ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ. ಅಂದು ಮಧ್ಯಾಹ್ನ 12:30 ಗಂಟೆಗೆ ಜೆ.ಕೆ. ಗ್ರೌಂಡ್ ಮೈದಾನದಲ್ಲಿ ರೈತರಿಗೆ 50 ಕೆ.ಜಿ.ಗೊಬ್ಬರ ಮೂಟೆ ಹೊತ್ತು ಓಡುವ ಸ್ಪರ್ಧೆ, ಮಧ್ಯಾಹ್ನ 1 ಗಂಟೆಗೆ ರೈತ ಮಹಿಳೆಯರಿಗೆ ನೀರು ತುಂಬಿದ ಬಿಂದಿಗೆ ಹೊತ್ತು ಓಟ, ಹಗ್ಗ-ಜಗ್ಗಾಟ, ಚಮಚದಲ್ಲಿ ನಿಂಬೆ ಹಣ್ಣು ಇಟ್ಟು ಓಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಪುಪ್ಷಾ ಅಮರನಾಥ್ ಅವರು ಇದ್ದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಪ್ರತಿಕಾ ಗೋಷ್ಠಿಯಲ್ಲಿ ತಿಳಿಸಿದರು.
 ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಆಧ್ಯಕ್ಷರಾದ ಪುಷ್ಪಾ ಅಮರನಾಥ್ ಅವರು ರೈತ ದಸರಾ ಭಿತ್ತಿ ಚಿತ್ರವನ್ನು ಬಿಡುಗಡೆಗೊಳಿಸಿದರು. 
 ಜಂಟಿ ಕೃಷಿ ನಿರ್ದೇಶಕ ಹಾಗೂ ರೈತ ದಸರಾ ಉಪ ಸಮಿತಿ ಕಾರ್ಯಾಧ್ಯಕ್ಷರಾದ  ಮಹಂತೇಶಪ್ಪ, ರೈತ ದಸರಾ ಉಪ ಸಮಿತಿ ಉಪಾಧ್ಯಕ್ಷರಾದ ವಸಂತಕುಮಾರ್ ತಿಮಕಾಪುರ ಹಾಗೂ ಸಮಿತಿ ಇತರೆ ಸದಸ್ಯರು ಭಾಗವಹಿಸಿದರು. 

ಸೆಪ್ಟೆಂಬರ್ 25 ರಿಂದ ಆರೋಗ್ಯ ದಸರಾ
ಮೈಸೂರು, ಸೆಪ್ಟೆಂಬರ್ 23 . ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಂಗವಾಗಿ ದಸರಾ ವ್ಯವಸ್ಥೆ ಮತ್ತು ಸ್ವಚ್ಛತೆ ಹಾಗೂ ಆರೋಗ್ಯ ಉಪಸಮಿತಿಯಿಂದ ಸೆಪ್ಟೆಂಬರ್ 25 ರಂದು ಬೆಳಿಗ್ಗೆ 11:30 ಗಂಟೆÉಗೆ ಮೈಸೂರು ಮಹಾನಗರಪಾಲಿಕೆ ಸಭಾಂಗಣದಲ್ಲಿ ‘ಸರ್ವರಿಗೂ ಆರೋಗ್ಯ ಪೂರ್ಣ ಜೀವನ’ ಘೋಷಣೆಯಡಿ ಆರೋಗ್ಯ ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. 
 ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರ ಉಪಸ್ಥಿತಿಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ.ಖಾದರ್ ಅವರು ಆರೋಗ್ಯ ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡುವರು. ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಎನ್.ಎಂ.ರಾಜೇಶ್ವರಿ ಸೋಮು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
 ಸ್ವಾಮಿ ವಿವೇಕಾನಂದ ಯೂತ್ ಮೂವ್‍ಮೆಂಟ್‍ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎ.ಬಾಲಸುಬ್ರಹ್ಮಣ್ಯ ಆರೋಗ್ಯ ಮತ್ತು ನೈರ್ಮಲ ಪ್ರಚಾರ ವಾಹಿನಿಗೆ ಚಾಲನೆ ನೀಡುವರು. ಸಾಹಿತಿಗಳು ಹಾಗೂ ಚಿಂತಕರಾದ ಪ್ರೊ: ಜಿ.ಕೆ.ಗೋವಿಂದರಾವ್, ದಸರಾ ವಿಶೇಷ ಆರೋಗ್ಯ ಸಹಾಯವಾಣಿಗೆ ಚಾಲನೆ ಮಾಡುವರು.
  ದಸರಾ ಆರೋಗ್ಯ ಸೇವಾ ಕೇಂದ್ರಗಳ ಪ್ರಾರಂಭಕ್ಕೆ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ, ಶ್ರೀ ಚಾಮರಾಜೇಂದ್ರ ಮೃಗಾಲಯದಲ್ಲಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂಕೆ.ಸೋಮಶೇಖರ್, ವಸ್ತು ಪ್ರರ್ದಶನ ಪ್ರಾಧಿಕಾರದ ಎದುರು ತನ್ವೀರ್ ಸೇಠ್ ಹಾಗೂ ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನದಲ್ಲಿನ ಆಹಾರ ಮೇಳದಲ್ಲಿ ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಾಸು ಚಾಲನೆ ನೀಡಲಿದ್ದರೆ. 
ಸಮಾರಂಭದ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪಾ ಅಮರನಾಥ್, ಮೈಸೂರು-ಕೊಡಗು ಲೋಕ ಸಭಾ ಸದಸ್ಯರಾದ ಪ್ರತಾಪ ಸಿಂಹ, ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಆರ್.ಧ್ರುವನಾರಾಯಣ, ಮಂಡ್ಯ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಸಿ.ಎಸ್.ಪುಟ್ಟರಾಜು, ತಿ.ನರಸೀಪುರ ವಿಧಾನ ಸಭಾ ಕ್ಷೇತ್ರದ ಶಾಸಕರು ಹಾಗೂ ಲೋಕೋಯೋಗಿ ಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ವೆಂಕಟೇಶ್, ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್, ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಸಿ.ಮಂಜುನಾಥ್, ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಳಾದ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂಧನ್, ಮರಿತಿಬ್ಬೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಮೈಸೂರು ಮಹಾನಗರ ಪಾಲೀಕೆ ಉಪ ಮಹಾ ಪೌರರಾದ ವಿ.ಶೈಲೇಂದ್ರ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್.ಮಾದಪ್ಪ ಮೈಸೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಿ.ಕುಮಾರ್, ತಾ.ಪಂ.ಉಪಾಧ್ಯಕ್ಷರಾದ ಲೋಕಮಣಿ, ದಸರಾ ವಿಶೇಷಾಧಿಕಾರಯಾದ ಸಿ.ಶಿಖಾ, ದಸರಾ ಉಪ ವಿಶೇಷಾಧಿಕಾರಿಯಾದ ಸಿ.ಜಿ.ಬೆಟಸೂರಮಠ, ಆರೋಗ್ಯ ದಸರಾ ಉಪಸಮಿತಿ ಅಧ್ಯಕ್ಷರಾದ ಟಿ.ಹೇಮಾವತಿ, ಉಪಾಧ್ಯಕ್ಷರುಗಳಾದ ಅನ್ವರ್‍ಬೇಗ್, ಎಂ.ಎಸ್.ಎಸ್.ಕುಮಾರ್, ಅಶೋಕ್ ಕುಮಾರ್, ಕಾರ್ಯಾಧ್ಯಕ್ಷರಾದ ಎಂ.ವಿ.ಸುಧಾ, ಕಾರ್ಯದರ್ಶಿಯಾದ ಡಾ. ಜಿ.ಎಂ. ವಾಮದೇವ ಹಾಗೂ ಸಮಿತಿಯ ಸದಸ್ಯರುಗಳು ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ. .          
ದಸರಾ ಚಲನಚಿತ್ರೋತ್ಸವಕ್ಕೆ ತಾರೆಯರ ದಂಡು
ಮೈಸೂರು, ಸೆಪ್ಟೆಂಬರ್ 23 .ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಆಕರ್ಷಕ ಕಾರ್ಯಕ್ರಮವಾದ ನಗರದ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗಿರುವ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭಕ್ಕೆ ಸೆಪ್ಟೆಂಬರ್ 25 ರಂದು ಕನ್ನಡ ಚಿತ್ರರಂಗದ ಪ್ರಖ್ಯಾತ ತಾರೆಯರ ದಂಡು ಆಗಮಿಸಲಿದೆ.
  ಕನ್ನಡ ಚಲನ ಚಿತ್ರದ ಕನಸುಗಾರನೆÉಂದೇ ಹೆಸರುವಾಸಿಯಾಗಿರು ಕ್ರೇಜಿ ಸ್ಟಾರ್ ರವಿಚಂದ್ರನ್, ದುನಿಯಾ ಚಲನ ಚಿತ್ರದ ಖ್ಯಾತಿಯ ವಿಜಯ್, ಹಿರಿಯ ಕಲಾವಿದರಾದ ಸಾಹುಕಾರ್ ಜಾನಕಿ, ಭಾರತಿ ವಿಷ್ಣುವರ್ಧನ್, ಪ್ರಣಯರಾಜ ಶ್ರೀನಾಥ್, ಜಯಮಾಲಾ, ಖ್ಯಾತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಟ.ಎನ್.ಸೀತರಾಮ್, ಕೆ.ಶಿವರುದ್ರಯ್ಯ, ಕಲಾವಿದರಾದ ತಾರ, ಶ್ರೀಮುರಳಿ, ಶರಣ್, ಚೆನ್ನೇಗ್ವಾಡ, ರಾಗಿಣಿ, ರೂಪಿಕಾ, ಸಾಧುಕೋಕಿಲ, ಪೂಜಾ ಗಾಂಧಿ, ಮೇಘನಾ ರಾಜ್, ಭವ್ಯ, ಸುಂದರ್‍ರಾಜ್, ಪ್ರಮೀಳಾ ಜೋಷಾಯ್, ಮಾಸ್ಟರ್ ಚಿರಂಜೀವಿ, ಹಾಗೂ ಮುಂತಾದವರು ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು.
  ಹಿರಿಯ ಕಲಾವಿದೆಯಾದ ಭಾರತಿ ವಿಷ್ಣುವರ್ಧನ್ ಅವರು ಚಿತ್ರರಂಗಕ್ಕೆ ಬಂದು 50 ವರ್ಷ ಪೂರ್ಣಗೊಂಡ  ಹಿನ್ನಲೆಯಲ್ಲಿ ದಸರಾ ಚಲನಚಿತ್ರೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ವಿಶೇಷವಾಗಿ ಸನ್ಮಾನಿ ಗೌರವಿಸಲಾಗವುದು.
  ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್ ಅವರು ತಮ್ಮ ಗೃಹ ಕಚೇರಿಯಲ್ಲಿ ಇಂದು ದಸರಾ ಚಲನಚಿತ್ರ ಉಪ ಸಮಿತಿಯ ದಸರಾ ಚಲನಚಿತ್ರೋತ್ಸವಕ್ಕೆ ಸಂಬಂಧಿಸಿದ ಮಡಿಕೆಪತ್ರವನ್ನು ಬಿಡುಗಡೆ ಮಾಡಿದರು. ದಸರಾ ಚಲನಚಿತ್ರ ಉಪ ಸಮಿತಿಯ ಅಧ್ಯಕ್ಷರಾದ ಕೆ.ಮಹಮ್ಮದ್ ಅಕ್ಬರ್ ಅಲೀಂ, ಕಾರ್ಯಧ್ಯಕ್ಷರಾದ ಎ.ಆರ್.ಪ್ರಕಾಶ್, ಕಾರ್ಯದರ್ಶಿ ಕೆ.ಕುಬೇರಪ್ಪ, ಸದಸ್ಯರಾದ ಎನ್.ನೀಲಕಂಠ ಹಾಗೂ ಬೋರಪ್ಪ ಈ ಸಂದರ್ಭದಲ್ಲಿ ಭಾಗವಹಿಸಿದರು.   
          


25 ರಂದು ವಾರ್ತಾ ಸಚಿವರ ಮೈಸೂರು ಜಿಲ್ಲಾ ಪ್ರವಾಸ
ಮೈಸೂರು, ಸೆಪ್ಟೆಂಬರ್ 23. ಮೂಲಸೌಲಭ್ಯ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರಾದ ರೋಷನ್ ಬೇಗ್ ಅವರು ಸೆಪ್ಟೆಂಬರ್ 25 ಮೈಸೂರು ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
 ಅಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ಮಾರ್ಗವಾಗಿ ಮೈಸೂರು ನಗರಕ್ಕೆ ಆಗಮಿಸುವ ಸಚಿವರಾದ ರೋಷನ್ ಬೇಗ್ ಅವರು ದಸರಾ ಚಲನಚಿತ್ರ ಉಪ ಸಮಿತಿಯಿಂದ ಕಲಾಮಂದಿರಲ್ಲಿ ಹಮ್ಮಿಕೊಂಡಿರುವ ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6:30 ಗಂಟೆಗೆ ಮಂಡ್ಯ ಹಾಗೂ ರಾಮನಗರ ಜಿಲ್ಲೆಗಳ ಮಾರ್ಗವಾಗಿ ಬೆಂಗಳೂರಿಗೆ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ. 
ಸೆಪ್ಟೆಂಬರ್ 24, 25 ಇಂಧನ ಸಚಿವರ ಜಿಲ್ಲಾ ಪ್ರವಾಸ
ಮೈಸೂರು, ಸೆಪ್ಟೆಂಬರ್ 23. ಇಂಧನ ಹಾಗೂ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಕೆ.ಶಿವಕುಮಾರ್ ಅವರು ಸೆಪ್ಟೆಂಬರ್ 24 ಹಾಗೂ 25 ರಂದು ಮೈಸೂರು ಜಿಲ್ಲೆ ಪ್ರವಾಸ ಕೈಗೊಂಡಿದ್ದಾರೆ.
 ಸೆಪ್ಟೆಂಬರ್ 24 ರಂದು ಮೈಸೂರಿಗೆ ರೈಲು ಮೂಲಕ ರಾತ್ರಿ 7 ಗಂಟೆಗೆ ಸಚಿವರು ಆಗಮಿಸಿ ವ್ಯಾಸ್ತವ್ಯ ಹೂಡುವರು.
 ಸೆಪ್ಟೆಂಬರ್ 25 ರಂದು ಬೆಳಿಗ್ಗೆ 8:30 ಗಂಟೆಗೆ ರಸ್ತೆ ಮೂಲಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ  ಶ್ರೀ ಕ್ಷೇತ್ರ ಆದಿಚುಂಚನಗಿರಿಗೆ ತೆರಳಿ 10:30 ಗಂಟೆಗೆ ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ವತಿಯಿಂದ ರಾಜ್ಯ ಮಟ್ಟದ ಜಾನಪದ ಮೇಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸುವರು. ನಂತರ ಮಧ್ಯಾಹ್ನ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ದಸರಾ ಕ್ರೀಡಾಕೊಟಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಸಂಜೆ 6:30 ಗಂಟೆಗೆ ಮೈಸೂರು ನಗರ ವಿದ್ಯುದೀಕರಣ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.
ಸೆಪ್ಟೆಂಬರ್ 26 ರಂದು ಬೆಳಿಗ್ಗೆ 10 ಗಂಟೆಗೆ ರಸ್ತೆ ಮೂಲಕ ಮಂಡ್ಯಕ್ಕೆ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.
    ಸೆ. 24 ರಿಂದ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವ ಜಿಲ್ಲಾ ಪ್ರವಾಸ
ಮೈಸೂರು, ಸೆಪ್ಟೆಂಬರ್ 23.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಚಿವರಾದ ಉಮಾಶ್ರೀ ಅವರು ಸೆಪ್ಟೆಂಬರ್ 24, 25 ಹಾಗೂ 26 ರಂದು 3 ದಿನಗಳ ಕಾಲ ಮೈಸೂರು ಜಿಲ್ಲಾ ಪ್ರವಾಸ ಕೈಗೊಂಡಿದ್ದಾರೆ.
 ಸೆಪ್ಟೆಂಬರ್ 24 ಮೈಸೂರಿಗೆ ರೈಲು ಮೂಲಕ ರಾತ್ರಿ 7:30 ಗಂಟೆಗೆ ಸಚಿವರು ಆಗಮಿಸಿ ವ್ಯಾಸ್ತವ್ಯ ಹೂಡುವರು. ಸೆಪ್ಟೆಂಬರ್ 25 ರಂದು ಬೆಳಿಗ್ಗೆ 8:15 ಗಂಟೆಗೆ ಮೈಸೂರು ದಸರಾ ಮಹೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ನಂತರ 10 ಗಂಟೆಗೆ ನಗರದ ಕಲಾಮಂದಿರದಲ್ಲಿ ನಡೆಯಲಿರುವ ಮೈಸೂರು ದಸರಾ ಚಲನಚಿತೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಹ್ನಾ 3:30 ಗಂಟೆÉಗೆ ಮೈಸೂರು ದಸರಾ ಕುಸ್ತಿ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಕಾಡಾ ಕಚೇರಿಯಲ್ಲಿ  ಕನ್ನಡ ಪುಸ್ತಕ ಮೇಳವನ್ನು ಉದ್ಘಾಟಿಸಲಿದ್ದಾರೆ. 6 ಗಂಟೆಗೆ ಅರವನೆ ಆವರಣದಲ್ಲಿ ರಾಜ್ಯ ಸಂಗೀತ ವಿದ್ವಾನ್ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಪಾಲ್ಗೂಳ್ಳುವರು. 
  ಸೆಪ್ಟೆಂಬರ್ 26 ರಂದು ಬೆಳಿಗ್ಗೆ 7 ಗಂಟೆಗೆ ರಂಗಚಾರ್ಲು ಪುರಭವನದಲ್ಲಿ ಪಾರಂಪರಿಕೆ ನಡಿಗೆ ಕಾಯಕ್ರಮದಲ್ಲಿ ಭಾಗವಹಿಸುವರು. ನಂತರ 11 ಗಂಟೆಗೆ ಅಮೃತ ಮಹೋತ್ಸವ ಭವನದ ಅಲ್ಯುಮಿನಿ ಅಸೋಸಿಯೇಷನ್ ಹಾಲ್‍ನಲ್ಲಿ ನಡೆಯುವ ಮಹಿಳಾ ದಸರಾ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 6 ಗಂಟೆಗೆ ಮೈಸೂರಿನಿಂದ ನಿರ್ಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.        




ಸೆಪ್ಟೆಂಬರ್ 26ರಂದು ಸಾಹಸಯೋಗ
ಮೈಸೂರು, ಸೆಪ್ಟೆಂಬರ್ 23. ನಾಡಹಬ್ಬ ಮೈಸೂರು ದಸರಾ ಪ್ರಯುಕ್ತ ಯೋಗ ದಸರಾ ಉಪಸಮಿತಿಯಿಂದ ಸೆಪ್ಟೆಂಬರ್ 26ರಂದು ಬೆಳಿಗ್ಗೆ 6 ಗಂಟೆಗೆ ಸಾಹಸಯೋಗ ಕಾರ್ಯಕ್ರಮವುವನ್ನು  ಹಮ್ಮಿಕೊಳ್ಳಲಾಗಿದೆ.
ಸಾಹಸಯೋಗವು ಚಾಮುಂಡಿ ಬೆಟ್ಟದ ತಪ್ಪಲಿನಿಂದ ಚಾಮುಂಡಿ ಬೆಟ್ಟ ಹತ್ತುವುದರ ಮೂಲಕ ಪ್ರಾರಂಭಗೊಂಡು ಬೆಟ್ಟದ ಮೇಲೆ ಪತಂಜಲಿ ಯೋಗ ಸೂತ್ರಗಳ ಪಠಣ ಮಾಡುವುದರ ಮೂಲಕ ಮುಕ್ತಾಯಗೊಳ್ಳಲಿದೆ ಎಂದು ಪ್ರಕಟಣೆ ತಿಳಿಸಿದೆ.

ಸೆಪ್ಟೆಂಬರ್ 27ರಂದು ಯೋಗ ನೃತ್ಯರೂಪಕ
ಮೈಸೂರು, ಸೆಪ್ಟೆಂಬರ್ 23. ನಾಡಹಬ್ಬ ದಸರಾ ಪ್ರಯುಕ್ತ ಯೋಗ ದಸರಾ ಉಪಸಮಿತಿಯಿಂದ ಸೆಪ್ಟೆಂಬರ್ 27ರಂದು ಬೆಳಿಗ್ಗೆ 9.30ಗಂಟೆಯಿಂದ ಸಂಜೆ 4ರ ವರೆಗೆ ಯೋಗ ನೃತ್ಯರೂಪಕ ಕಾರ್ಯಕ್ರಮವನ್ನು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಜಿಲ್ಲೆಯ ಸರ್ಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಳ್ಳಲಾಗಿದೆ.
  ಯೋಗದ ಬಗ್ಗೆ ಅರಿವು ಮೂಡಿಸಿ ಜನ ಸಾಮಾನ್ಯರಲ್ಲಿ ಯೋಗದ ಮಹತ್ವವನ್ನು ಪ್ರಚುರಪಡಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದು ಪ್ರಕಟಣೆ ತಿಳಿಸಿದೆÉ.

ಸೆಪ್ಟೆಂಬರ್ 27 ರಿಂದು ಅಂತರರಾಜ್ಯ ದಕ್ಷಿಣ ವಲಯ ಯೋಗಾಸನ ಸ್ಪರ್ಧೆ
ಮೈಸೂರು, ಸೆಪ್ಟೆಂಬರ್ 23 .     ನಾಡಹಬ್ಬ ದಸರಾ ಅಂಗವಾಗಿ ಸೆಪ್ಟೆಂಬರ್ 27 ರಂದು  ಸಂಜೆ 5 ರಿಂದ 28ರ ಸಂಜೆ 4 ರವರೆಗೆ ಅಂತರರಾಜ್ಯ ದಕ್ಷಿಣ ವಲಯ ಯೋಗಾಸನ ಸ್ಪರ್ಧೆ”ಯನ್ನು ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗ ಜಿಲ್ಲೆಯ ಸರ್ಕಾರಿ, ಅನುದಾನಿತ  ಅನುದಾನ ಶಾಲೆಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗಿದೆ.
  ಹೊರರಾಜ್ಯದ ಜನರಿಗೆ ಯೋಗದ ಮಹತ್ವನ್ನು ಅರಿವು ಮೂಡಿಸುವ ಉದ್ದೇಶ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಪ್ರಕಟಣೆ ತಿಳಿಸಿದೆ
   
ಸೆಪ್ಟೆಂಬರ್ 25 ರಿಂದ ದಸರಾ ಚಲನಚಿತ್ರೋತ್ಸವ
ಮೈಸೂರು, ಸೆಪ್ಟೆಂಬರ್ 23 . ವಿಶ್ವ ಪ್ರಸಿದ್ಧ ಮೈಸೂರು ದಸರಾ ಮಹೋತ್ಸವದ ಪ್ರಯುಕ್ತ  ದಸರಾ ಚಲನಚಿತ್ರೋತ್ಸವ ಕಾರ್ಯಕ್ರಮವು ಸೆಪ್ಟೆಂಬರ್ 25 ರಂದು ಬೆಳಿಗ್ಗೆ 10 ಗಂಟೆÉಗೆ ಮೈಸೂರು ನಗರದ ಕಲಾಮಂದಿರದಲ್ಲಿ ಉದ್ಘಾಟನೆಗೊಳ್ಳಲಿದೆ. 
  ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ಘನ ಉಪಸ್ಥಿತಿಯಲ್ಲಿ ವಾರ್ತಾ, ಮೂಲಸೌಲಭ್ಯ ಹಾಗೂ ಹಜ್ ಸಚಿವರಾದ ಆರ್.ರೋಷನ್ ಬೇಗ್ ಅವರು ದಸರಾ ಚಲನಚಿತೋತ್ಸವದ ಕಾರ್ಯಕ್ರಮವನ್ನು ಉದ್ಘಾಟಿಸುವರು.  ಚಾಮರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ವಾಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
  ಕಂದಾಯ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ವಿ.ಶ್ರೀನಿವಾಸ್ ಪ್ರಸಾದ್, ಲೋಕೋಯೋಗಿ ಲಾಖೆ ಸಚಿವರಾದ ಡಾ. ಹೆಚ್.ಸಿ.ಮಹದೇವಪ್ಪ, ಸಹಕಾರ ಹಾಗೂ ಸಕ್ಕರೆ ಸಚಿವರಾದ ಮಹದೇವ ಪ್ರಸಾದ್, ವಸತಿ ಸಚಿವರಾದ ಎಂ.ಹೆಚ್.ಅಂಬರೀಶ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಲಾಖೆ ಸಚಿವರಾದ ಉಮಾಶ್ರೀ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪಾ ಅಮರನಾಥ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಹೆಚ್.ಡಿ.ಗಂಗರಾಜು, ಲೋಕ ಸಭಾ ಸದಸ್ಯರಾದ ಪ್ರತಾಪ ಸಿಂಹ, ಚಾಮರಾಜನಗರ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಆರ್.ಧ್ರುವನಾರಾಯಣ, ಮಂಡ್ಯ ಲೋಕ ಸಭಾ ಕ್ಷೇತ್ರದ ಸದಸ್ಯರಾದ ಸಿ.ಎಸ್.ಪುಟ್ಟರಾಜು,   ನರಸಿಂಹರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ತನ್ವೀರ್ ಸೇಠ್, ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಜಿ.ಟಿ.ದೇವೇಗೌಡ, ಪಿರಿಯಾಪಟ್ಟಣ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಕೆ.ವೆಂಕಟೇಶ್, ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಎಂಕೆ.ಸೋಮಶೇಖರ್,  ಕೆ.ಆರ್.ನಗರ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಸಾ.ರಾ.ಮಹೇಶ್, ಹುಣಸೂರು ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹೆಚ್.ಸಿ.ಮಂಜುನಾಥ್, ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂಧನ್, ಮರಿತಿಬ್ಬೇಗೌಡ, ಎಸ್.ನಾಗರಾಜು (ಸಂದೇಶ್ ನಾಗರಾಜು), ಆರ್.ಧರ್ಮಸೇನ, ಮೈಸೂರು ಮಹಾನಗರ ಪಾಲೀಕೆ ಉಪ ಮಹಾ ಪೌರರಾದ ವಿ.ಶೈಲೇಂದ್ರ, ಮೈಸೂರು ತಾಲೂಕು ಪಂಚಾಯತ್ ಅಧ್ಯಕ್ಷರಾದ ಜಿ.ಕುಮಾರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷರಾದ ಎಲ್.ಮಾದಪ್ಪ ಹಾಗೂ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಲೋಕಮಣಿ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವರು.
 ವಿಶೇಷ ಆಹ್ವಾನಿತರಾಗಿ ಹಿರಿಯ ಕಲಾವಿದರಾದ ಭಾರತಿ ವಿಷ್ಣುವರ್ಧನ್, ಸಾಹುಕಾರ್ ಜಾನಕಿ, ಶ್ರೀನಾಥ್, ಜಯಮಾಲಾ, ಖ್ಯಾತ ನಿರ್ದೇಶಕರಾದ ಟಿ.ಎಸ್.ನಾಗಾಭರಣ, ಟ.ಎನ್.ಸೀತರಾಮ್, ಕೆ.ಶಿವರುದ್ರಯ್ಯ, ಕಲಾವಿದರಾದ ದುನಿಯಾ ವಿಜಯ್, ಪ್ರಮೀಳಾ ಜೋಷಾಯ್, ಶರಣ್, ರಾಗಿಣಿ, ರೂಪಿಕಾ, ಭವ್ಯ, ಸುಂದರ್‍ರಾಜ್, ಸಾಧುಕೋಕಿಲ, ಪೂಜಾ ಗಾಂಧಿ, ಮೇಘನಾ ರಾಜ್ ಮಾಸ್ಟರ್ ಚಿರಂಜೀವಿ ಭಾಗವಹಿಸುವರು ಎಂದು ಪ್ರಕಟಣೆ ತಿಳಿಸಿದೆ.           

ವಿಶೇಷ ಲೇಖನ : ಎನ್.ಕೃಷ್ಣೇಗೌಡ ಪಾಂಡವಪುರ.
ಪಾಂಡವಪುರ : ಪಾಂಡವಪುರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಅಂಗವಾಗಿ ತಾಲೂಕಿನ ಹರಳಹಳ್ಳಿ ಗ್ರಾಮದಲ್ಲಿರುವ ಪುಸ್ತಕ ಪ್ರೇಮಿ ಅಂಕೇಗೌಡರ ಪುಸ್ತಕ ಮನೆಯಲ್ಲಿ ಎರಡು ಸಾವಿರಕ್ಕೂ ಅಧಿಕ ಪತ್ರಿಕೆಗಳನ್ನು ಪ್ರದರ್ಶನಕ್ಕೀಡಲಾಗಿತ್ತು.
ಗಾಂಧೀಜಿ ಅವರ ಅಪರೂಪದ ಕೃತಿಗಳಾದ 1942ರ `ಹರಿಜನ’ ಪತ್ರಿಕೆ, 1934ರ `ತಾಯಿನಾಡು’ ಪತ್ರಿಕೆ, 1949ರಲ್ಲಿನ `ಜನವಾಣಿ’ ಪತ್ರಿಕೆ, 1946ರ ವಯಸ್ಕರ ಶಿಕ್ಷಣ ಸಮಿತಿಯ ಮೊದಲ ಸಂಚಿಕೆ `ಪುಸ್ತಕ ಪ್ರಪಂಚ’, 1907ರ `ಎಪಿಫಾನಿ’ ಇಂಗ್ಲಿಷ್ ಪತ್ರಿಕೆ, 1917ರ `ಕರ್ನಾಟಕ ನಂದಿನಿ’ ಪತ್ರಿಕೆ, 1917ರ `ಪರಮಾರ್ಥ’ ಮಾಸ ಪತ್ರಿಕೆ, ಗಾಂಧೀಜಿ ಅವರ ಅಪರೂಪದ ಕೃತಿಯಾಧಾರಿತ 1921ರ `ಯಂಗ್ ಇಂಡಿಯಾ’ ಪತ್ರಿಕೆ, 1923ರ `ಜಯಕರ್ನಾಟಕ’ ಮಾಸ ಪತ್ರಿಕೆ, 1924ರ ಕುಸುಮಾಂಜಲಿ ಗ್ರಂಥಮಾಲೆಯ `ಭಗೀರಥ’ ಮಕ್ಕಳ ಮಾಸಿಕ ಪತ್ರಿಕೆ, 1925ರ ಕನ್ನಡ ಸಹಕಾರಿ ಶಿಕ್ಷಣದ `ಶಿಕ್ಷಣ ಪುರವಾಣಿ’ ಪತ್ರಿಕೆ, 1930ರ `ಪ್ರಾಣಿದಯ’ ಮಾಸ ಪತ್ರಿಕೆ, 1934ರ `ಪ್ರಬುದ್ಧ ಕರ್ನಾಟಕ’ ಸಾಹಿತ್ಯ ಪತ್ರಿಕೆ, 1938 ಹಾಗೂ 1944ರ ಕನ್ನಡ ಸಾಹಿತ್ಯ ಪರಿಷತ್ ಪ್ರಕಟಿತ `ಕನ್ನಡ ನುಡಿ’ ಪತ್ರಿಕೆ, 1946ರ `ಮೈಸೂರು ಪತ್ರಿಕೆ’ಗಳನ್ನು ಪ್ರದರ್ಶನದಲ್ಲಿ ಇಡಲಾಗಿದೆ.
1925ರ `ಆರೋಗ್ಯ ಚಂದ್ರಿಕೆ’ ಮಾಸ ಪತ್ರಿಕೆ, 1927ರ `ಪರಶುರಾಮ’ ಸಚಿತ್ರ ಮಾಸ ಪತ್ರಿಕೆ, 1929ರ `ದಿ ಮೈಸೂರು ಎಕಾನಮಿಕ್ ಜರ್ನಲ್’ ಪತ್ರಿಕೆ, 1931ರ `ಕರ್ತವ್ಯ’ ಸಚಿತ್ರ ಮಾಸ ಪತ್ರಿಕೆ, 1932ರ `ಅರ್ಥ ಸಾಧಕ’ ಪತ್ರಿಕೆ, 1936ರ `ಶ್ರೀ ಪೂರ್ಣ ಬೋಧ’ ಮಾಸ ಪತ್ರಿಕೆ, 1938ರ `ವಿದ್ಯಾದಾಯಿನಿ’ ಮಾಸ ಪತ್ರಿಕೆ, 1950ರ ದೇವುಡು ಸಂಪಾದಕತ್ವದ `ನಮ್ಮ ಪುಸ್ತಕ’ ಮಾಸ ಪತ್ರಿಕೆ, 1951ರ `ಬಾಲಮಿತ್ರ’ ಪತ್ರಿಕೆ ಮೊದಲ ಸಂಪುಟದ 4ನೇ ಸಂಚಿಕೆ, 1953ರ `ವಿಶ್ವಕರ್ಮ’ ಮಾಸ ಪತ್ರಿಕೆ, 1954ರ ಧರ್ಮರಾಜ್ಯ’ ಮಾಸ ಪತ್ರಿಕೆ, 1957ರ `ನವೀನ ಶಿಕ್ಷಕ’ ಮಾಸ ಪತ್ರಿಕೆ, 1960ರ `ಲೈಫ್’ ಪತ್ರಿಕೆ ಮಾಕ್ಸಿನ್ ಇಂಟರ್‍ನ್ಯಾಷನಲ್ ಸಂಪುಟಗಳು, 1969ರ ಜಿ.ಬಿ.ಜೋಶಿಯವರ `ಮನ್ವಂತರ’ ಸಾಹಿತ್ಯ ಪತ್ರಿಕೆ, 1970ರ `ಸಾವಧಾನ’ ಪಾಕ್ಷಿಕ ಪತ್ರಿಕೆ, 1976ರ `ತರಳಬಾಳು’ ಪತ್ರಿಕೆ ಹಾಗೂ `ರಾಷ್ಟ್ರೋತ್ಥಾನ ವಾರ್ತಾ’ ಪತ್ರಿಕೆ, 1981ರ ಯು.ಆರ್.ಅನಂತಮೂರ್ತಿ ಅವರ `ರುಜುವಾತು’ ಸಾಹಿತ್ಯ ಪತ್ರಿಕೆ, 1983ರ ವಯಸ್ಕರ ಶಿಕ್ಷಣ ಸಮಿತಿಯ `ಬೆಳಕು’ ಪತ್ರಿಕೆಗಳಿವೆ. 
ದಿನಾಂಕ 4. 11. 1967ರಲ್ಲಿ ಪ್ರಾರಂಭಗೊಂಡ `ಕನ್ನಡ ಪ್ರಭ’ ದಿನಪತ್ರಿಕೆಯ ಮೊದಲ ಸಂಚಿಕೆ, ಲೋಕ ಕಲ್ಯಾಣ ಟ್ರಸ್ಟ್‍ನ ಪ್ರಕಟಿತ 1959ರ `ಕರ್ಮವೀರ’ ದೀಪಾವಳಿ ವಿಶೇಷ ಸಂಚಿಕೆ, 1962ರ `ಕಸ್ತೂರಿ’ ಮಾಸ ಪತ್ರಿಕೆ, 1964ರ `ಕರ್ಮವೀರ’ ವಾರ ಪತ್ರಿಕೆ, `ಪ್ರಜಾವಾಣಿ ಪತ್ರಿಕೆಯ ಪ್ರಕಟಿತ 1965ರ `ಸುಧಾ’ ಹಾಗೂ 1968ರ `ಮಯೂರ’ ಮೊದಲ ಸಂಚಿಕೆಗಳು, ಮೈಸೂರಿನ ಅರಸ ಜಯಚಾಮರಾಜ ಒಡೆಯರ್ ನಿಧನರಾದ ಸಂದರ್ಭದ 1974ರ `ಪ್ರಜಾವಾಣಿ’ ದಿನಪತ್ರಿಕೆಗಳನ್ನು ಪ್ರದರ್ಶನಕ್ಕೀಟ್ಟಿದ್ದಾರೆ ಅಂಕೇಗೌಡರು. ಜತೆಗೆ ರಾಷ್ಟ್ರಕವಿ ಕುವೆಂಪುರವರ ನಿಧನರಾದ ಸಂದರ್ಭದಲ್ಲಿನ ಕೆ.ಶಾಮರಾವ್ ಸಂಪಾದಕತ್ವದ `ಸಂಯುಕ್ತ ಕರ್ನಾಟಕ’ ದಿನಪತ್ರಿಕೆ, `ಉದಯವಾಣಿ’, `ಕನ್ನಡ ಪ್ರಭ’, `ಪ್ರಜಾವಾಣಿ’ ಇತರೆ ಪತ್ರಿಕೆಗಳು ಇವೆ.
ತಮ್ಮ ಪ್ರಗತಿಪರ ಬರವಣಿಗೆಗಳ ಮೂಲಕ ಪತ್ರಿಕಾ ರಂಗದಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಠಿಸಿದ ಪಿ.ಲಂಕೇಶ್ ಅವರ `ಲಂಕೇಶ್ ಪತ್ರಿಕೆ’, ರವಿಬೆಳಗೆರೆ ಅವರ `ಹಾಯ್‍ಬೆಂಗಳೂರು’, ಕೆ.ಬಿ.ಗಣಪತಿ ಸಂಪಾದಕತ್ವದ 1982ರ `ಸ್ಟಾರ್ ಆಫ್ ಮೈಸೂರು’ ಇಂಗ್ಲಿಷ್ ಪತ್ರಿಕೆ ಹಾಗೂ ರಾಜಶೇಖರ ಕೋಟಿ ಸಂಪಾದಕತ್ವದ 1996ರ `ಆಂದೋಲನ’ ಮಂಡ್ಯ ಆವೃತ್ತಿ ಪತ್ರಿಕೆ, ಹಾಗೂ  ಮಂಡ್ಯದ `ಕನ್ನಂಬಾಡಿ’, `ಶಿಂಷಾಪ್ರಭ’, `ನುಡಿ ಭಾರತಿ’, `ಪೌರವಾಣಿ’, `ಪ್ರಜಾವಾರ್ತೆ’, `ಉದಯಕಾಲ’, `ಮಂಡ್ಯ ಸುದ್ದಿ’, `ಮಧುರ ಮಂಡ್ಯ’, `ಮಂಡ್ಯ ಮಾತು’, `ಸ್ಟಾರ್ ಆಫ್ ಮಂಡ್ಯ’, `ಮಂಡ್ಯ ಮಾರ್ನಿಂಗ್’, `ಮಂಡ್ಯ ಪ್ರೆಸ್’, `ಸಂಜೆ ಸಮಾಚಾರ’, `ಸಂಜೆ ಇಂಪು’, `ಕೆಮ್ಮುಗಿಲು’, `ಸಂಜೆಮಿತ್ರ’, `ಜನೋದಯ’, `ಮಂಡ್ಯ ಎಕ್ಸ್‍ಪ್ರೆಸ್’, `ಕೊಳಲು’, ಲಿಂಗಣ್ಣ ಬಂಧುಕಾರ್ ಸಂಪಾದಕತ್ವದ `ಗಾಂಧಿ ಭವನ ವಾರ್ತೆ’ ಪತ್ರಿಕೆಗಳು ಸೇರಿದಂತೆ ಸಾವಿರಾರು ಪತ್ರಿಕೆಗಳು ಪ್ರದರ್ಶನಗೊಂಡವು.

Sunday, 21 September 2014

ಮಂಡ್ಯ: ಬುದ್ಧ ಮತ್ತು ಅಂಬೇಡ್ಕರ್ ಅವರನ್ನು ಅನುಸರಿಸಿದವರು ಜಾತಿ ಮಾನವರಲ್ಲ, ವಿಶ್ವಮಾನವರು ಎಂದು ಲೋಕೋಪಯೋಗಿ ಸಚಿವ ಎಚ್.ಸಿ. ಮಹದೇವಪ್ಪ ತಿಳಿಸಿದರು.
ತಾಲ್ಲೂಕಿನ ಕೊಮ್ಮೇರಹಳ್ಳಿ ಗ್ರಾಮದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಯುವಕರ ಸಂಘ, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ನಿರ್ಮಿಸಿರುವ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನವನ್ನು ಉದ್ಘಾಟಿಸಿ,  ನಂತರ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಬುದ್ಧ ಅಂಬೇಡ್ಕರ್ ಅವರು ಸಮಾನತೆ, ಪ್ರೀತಿ, ಬದುಕಿನ ಮಾರ್ಗ ಮತ್ತು ಶಾಂತಿಯನ್ನು ಜನತೆಗೆ ತಿಳಿಸಿದ್ದಾರೆ. ಅವರ ಬರಹಗಳು, ಸಮಾಜಕ್ಕೆ ದಾರಿದೀಪವಾಗಿವೆ.
ಕಾನೂನಿನ ಮುಂದೆ ಎಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದಾರೆ. ದೇಶದಲ್ಲಿ ಬಡವ, ಶ್ರೀಮಂತ ಯಾರೇ ಆದರೂ, ಎಲ್ಲರಿಗೂ ಒಂದೇ ಕಾನೂನು. ಸಮಾನ ಅವಕಾಶಗಳನ್ನು ಒದಗಿಸಿಕೊಟ್ಟಿದ್ದಾರೆ.
ಎಸ್ಸಿ, ಎಸ್ಟಿಯವರಿಗೆ ಜನಸಂಖ್ಯೆಗನುಗುಣವಾಗಿ ಎಸ್‍ಇಪಿ, ಟಿಎಸ್‍ಪಿ ಯೋಜನೆಯಡಿ 15,308 ಕೋಟಿ ರೂ. ಹಣವನ್ನು ನಿಗದಿಮಾಡಿದ್ದಾರೆ. ಯಾವುದೇ ಸರ್ಕಾರ ಮಾಡಿಲ್ಲ. ನಮಮ್ ಸರ್ಕಾಋ ಮಾಡಿದೆ.
ಮಂಡ್ಯ-ಗುಬ್ಬಿ ಮಾರ್ಗದ 110 ಕಿ.ಮೀ. ರಸ್ತೆಯ ಅಭಿವೃದ್ಧಿಗೆ ಟೆಂಡರ್ ಪ್ರಕ್ರಿಯೆ ಮುಗಿದಿದು,ಬರುವ ಜನವರಿ ವೇಳೆಗೆ ಆರಂಭವಾಗಲಿದೆ.
ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಗ್ರಾಪಂ ಅಧ್ಯಕ್ಷೆ ರೇಖಾ ದೇವರಾಜು, ಸದಸ್ಯರಾದ ಲಕ್ಷ್ಮಮ್ಮ, ರೇಣುಕಾ, ದ್ವಾರಕ, ಅಂಬೇಡ್ಕರ್ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎ.ಆರ್.ಕೃಷ್ಣಮೂರ್ತಿ, ಕಾಂಗ್ರೆಸ್ ಮುಖಂಡ ಅಮರಾವತಿ ಚಂದ್ರಶೇಖgದಸಂಸ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಸುಂಡಹಳ್ಳಿ ನಾಗರಾಜು, ವಿಜಯಲಕ್ಷ್ಮಿ ರಘುನಂದನ್, ಡಾ. ಬಿ.ಆರ್. ಅಂಬೇಡ್ಕರ್ ಯುವಕ ಸಂಘದ ಅಧ್ಯಕ್ಷ ಕೆ.ಬಿ.ಮೋಹನ್, ಉಪಾಧ್ಯಕ್ಷರಾದ ಕೆ.ವಿ.ನಾರಾಯಣಸ್ವಾಮಿ, ಎಸ್. ವಿಜಯಕುಮಾರ್, ಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.


ಪ್ರಸ್ತುತ ದಿನಗಳಲ್ಲಿ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ.
 ಪ್ರಸ್ತುತ ದಿನ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ ,ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಕರಣ ಮಾಡಬೇಕು ಎಂದು  ಪಿಇಟಿ ಅಧ್ಯಕ್ಷ ಡಾ. ಎಚ್.ಡಿ. ಚೌಡಯ್ಯ ಕಾರ್ಯಕ್ರಮ ಉದ್ಘಾಟಿಸಿ ಹೇಳಿದರು. ಅವರ ಅನುಕರಣ ಸಾರ್ವಕಾಲಿಕವಾದದ್ದು. ಅಭಿವೃದ್ಧಿಗೆ ಮತ್ತು ಸಾಧನೆಗೆ ಕೊನೆ ಇಲ್ಲ. ನಿಂತ ನೀರಲ್ಲ. ಇದು ಸದಾ ಹರಿಯುವ ನೀರು. ಪ್ರತಿಯೊಬ್ಬರೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ನಗರದ ಗಾಂಧಿ ಭವನದಲ್ಲಿ ಚೈತನ್ಯ ಬಳಗದ ವತಿಯಿಂದ ನಡೆದ ಇಂಜಿನಿಯರ್ಸ್ ದಿನ ಮತ್ತು ಶಿಕ್ಷಕರ ದಿನಾಚರಣೆ ಸಮಾರಂಭ ನಡೆಯಿತು.
ಪ್ರಸ್ತುತ ದಿನ ಗುರು ಶಿಷ್ಯರ ಸಂಬಂಧ ಕ್ಷೀಣಿಸುತ್ತಿದೆ. ಸರ್.ಎಂ.ವಿಶ್ವೇಶ್ವರಯ್ಯ ಹಾಗೂ ಡಾ. ಸರ್ವಪಲ್ಲಿ ರಾಧಾಕೃಷ್ಣ ಅವರ ಆದರ್ಶಗಳನ್ನು ಪ್ರತಿಯೊಬ್ಬರೂ ಅನುಕರಣ ಮಾಡಬೇಕು. ಅವರ ಅನುಕರಣ ಸಾರ್ವಕಾಲಿಕವಾದದ್ದು. ಅಭಿವೃದ್ಧಿಗೆ ಮತ್ತು ಸಾಧನೆಗೆ ಕೊನೆ ಇಲ್ಲ. ನಿಂತ ನೀರಲ್ಲ. ಇದು ಸದಾ ಹರಿಯುವ ನೀರು. ಪ್ರತಿಯೊಬ್ಬರೂ ಸಮಯಪ್ರಜ್ಞೆ ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಇಂಜಿನಿಯರ್‍ಗಳಾದ ಲಯನ್ ಜಿ.ಎ. ರಮೇಶ್. ಜಿ.ಪಿ. ಶಿವಶಂಕರ್, ಡಾ. ಬಿ.ಎಸ್. ಶಿವಕುಮಾರ್, ಶಿಕ್ಷಕರಾದ ಕೆ. ಸುನೀಲ್, ಲಿಂಗರಾಜು, ಸರ್ವಮಂಗಳಾ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಟಿ. ಶ್ರೀಕಂಠೇಗೌಡ ಅಭಿನಂದಿತರನ್ನು ಕುರಿತು ಅಭಿನಂದನಾ ನುಡಿಯನ್ನಾಡಿ, ಇಂದಿನಿಯರುಗಳು ಮತ್ತು ಶಿಕ್ಷಕರು ಇಬ್ಬರು ಮಹನೀಯರ ಹೆಸರಿನಲ್ಲಿ ಸಾಧಕರನ್ನು ಗುರುತಿಸಿ ಬೆನ್ನು ತಟ್ಟುವ ಕೆಲಸ ಮಾಡುತ್ತಿರುವುದು ಅಭಿನಂದನೀಯ ಎಂದು ಹೇಳಿದರು.
ಚೈತನ್ಯ ಬಳಗದ ಅಧ್ಯಕ್ಷ  ಕೆ.ಎನ್. ನಾಗರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಎಲ್. ಶಿವಪ್ರಸಾದ್, ನಗರಸಭಾ ಸದಸ್ಯ ಎಸ್.ಕೆ. ಶಿವಪ್ರಕಾಶಬಾಬು, ಪತ್ರಕರ್ತ ಗೋವಿಂದಯ್ಯ ಕೋರೇಗಾಲ ಅವರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ: ನಗರದ ಯುವಜನ ಮತ್ತು ಕ್ರೀಡಾ ಇಲಾಖೆ ಆವರಣದಲ್ಲಿ ಮಂಡ್ಯ ನಗರ ಬ್ಯಾಂಕ್ ನೌಕರರ ಗೃಹ ನಿರ್ಮಾಣ ಸಹಕಾರ ಸಂಘದ 17ನೇ ವರ್ಷದ ಸರ್ವ ಸದಸ್ಯರ ಸಭೆ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಂ.ವಿ. ಧರಣೇಂದ್ರಯ್ಯ ವಹಿಸಿ ಮಾತನಾಡಿ, ಸಂಘವು 17 ವರ್ಷಗಳನ್ನು ಪೂರೈಸಿದೆ. ಕಳೆದ ಸಾಲಿನಲ್ಲಿ ಸರ್ವ ಸದಸ್ಯರ ತೀರ್ಮಾನದಂತೆ ನಿವೇಶನ ಹೊಂದಿರುವ ಸದಸ್ಯರು ತಮ್ಮ ತಮ್ಮ ನಿವೇಶನಗಳ ಸ್ವಚ್ಚತೆಯನ್ನು ತಾವೇ ಮಾಡಿಕೊಂಡು ನಿವೇಶನದ ಭದ್ರತೆ ಕಾಪಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದರು.
ಸಂಘದ ಕೆಲಸಗಳಿಗೆ ಆಡಳಿತ ಮಂಡಳಿ ಸದಸ್ಯರು ಬೆಂಬಲ ನೀಡುತ್ತಿರುವುದನ್ನು ಸ್ಮರಿಸಿಕೊಂಡು ಇನ್ನು ಮುಂದೆ ಸಂಘದ ಅಭಿವೃದ್ಧಿಗೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.
ಉಪಾಧ್ಯಕ್ಷ ಪಿ.ವಿ. ಪರಶುರಾಮ್, ನಿರ್ದೇಶಕರಾದ ಐ. ಬರ್ನಾಡಪ್ಪ, ಸತ್ಯನಾರಾಯಣ, ಎಸ್.ಎಸ್. ಮರೀಗೌಡ, ಎಸ್.ಕೆ. ಚಂದ್ರಶೇಖರ್, ಬಾಲಾಜಿ ಸಿಂಗ್, ರಾಜಮ್ಮ, ಗೀತಾಂಜಲಿ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಮಂಡ್ಯ : ಖಾಸಗಿ ಶಾಲಾ ಶಿಕ್ಷಕರು ಒಗ್ಗಟ್ಟಾಗಿ ಸಂಘದ ಹಿತ ಕಾಯಬೇಕು. ಸಂಘ ನಿಮ್ಮ ಹಿತ ಕಾಯುತ್ತದೆ ಎಂದು ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಶ್ರೀ ಪುರುಷೋತ್ತಮನಂದನಾಥ ಸ್ವಾಮೀಜಿ ತಿಳಿಸಿದರು.
ಕರ್ನಾಟಕ ಸಂಘದ ಆವರಣದಲ್ಲಿ ಜಿಲ್ಲಾ ಖಾಸಗಿ ಶಾಲಾ ನೌಕರರ ಸಂಘದ 2013-14ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ, ಸಮಾಜದ ಅಭಿವೃದ್ಧಿಯಾಗಬೇಕಾದಲ್ಲಿ ಸದಸ್ಯರು ಒಗ್ಗಟ್ಟಾಗಿ ಸಂಘದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ನಿವೃತ್ತ ಸದಸ್ಯರುಗಳನ್ನು ಸನ್ಮಾನಿಸಲಾಯಿತು. ಸದಸ್ಯರ ಮಕ್ಕಳಿಗೆ ಪುರತಿಭಾ ಪುರಸ್ಕಾರ ನೀಡಿ ಪೆÇ್ರೀ
ನೌಕರರ ಸಂಘದ ಅಧ್ಯಕ್ಷ ಆರ್.ಟಿ. ಬಸವರಾಜು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಕೆ.ಟಿ. ಶ್ರೀಕಂಠೇಗೌಡ ಕರ್ನಾಟಕ ಸಂಘದ ಅಧ್ಯಕ್ಷ ಪೆÇ್ರ ಜಯಪ್ರಕಾಶಗೌಡ, ನೌಕರರ ಸಂಘದ ಸ್ವಾಮಿ, ಚಂದ್ರು ಇತರರು ಸಮಾರಭದಲ್ಲಿ ಭಾಗವಹಿಸಿದ್ದರು.

Saturday, 20 September 2014

ಕೆ.ಆರ್.ಪೇಟೆ,ಸೆ.19-ತಾಲೂಕಿನ ಮುರುಕನಹಳ್ಳಿ ಗ್ರಾಮ ಪಂಚಾಯಿತಿಯ ನೂತನ ಅಧ್ಯಕ್ಷರಾಗಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಎ.ಎನ್.ಗೋವಿಂದರಾಜು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷ ಹೆಚ್.ಎ.ಕೃಷ್ಣೇಗೌಡ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಅಧ್ಯಕ್ಷ ಸ್ಥಾನ ಬಯಸಿ ಎ.ಎನ್.ಗೋವಿಂದರಾಜು ಹೊರತುಪಡಿಸಿ ಬೇರೆ ಯಾರೂ ಸಹ ಸ್ಪರ್ಧೆ ಮಾಡದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ತಾ.ಪಂ. ಇಒ ಕೆಂಚಪ್ಪ ಅವರು ಅವಿರೋಧ ಆಯ್ಕೆಯನ್ನು ಪ್ರಕಟಿಸಿದರು. ನೂತನ ಅಧ್ಯಕ್ಷರನ್ನು ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಕೆ.ಬಿ.ರವಿಕುಮಾರ್, ಜಿ.ಪಂ.ಮಾಜಿ ಉಪಾಧ್ಯಕ್ಷ ಎಸ್.ಅಂಬರೀಷ್, ಮನ್‍ಮುಲ್ ನಿರ್ದೇಶಕರಾದ ಡಾಲುರವಿ, ಗ್ರಾ.ಪಂ.ಸದಸ್ಯರಾದ ಎಚ್.ವಿ.ಸತೀಶ್, ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಉಪಾಧ್ಯಕ್ಷೆ ರತ್ನಮ್ಮ, ಮತ್ತಿತರರು ಅಭಿನಂದಿಸಿದರು. ಸಹ ಚುನಾವಣಾಧಿಕಾರಿಯಾಗಿ ತಾ.ಪಂ. ವ್ಯವಸ್ಥಾಪಕ ಶಿವಕುಮಾರ್, ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ ತಿಲಕ್‍ಕುಮಾರ್ ಕಾರ್ಯನಿರ್ವಹಿಸಿದರು.  ನೂತನ ಅಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗ್ರಾ.ಪಂ.ಆವರಣದಲ್ಲಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಣೆ ಮಾಡಿದರು.
ಅಧಿಕಾರ ಸ್ವೀಕಾರ ಮಾಡಿ ಮಾತನಾಡಿದ ನೂತನ ಗ್ರಾಮ ಪಂಚಾಯಿತಿ ಅಧ್ಯಕ್ಷ ಎ.ಎನ್.ಗೋವಿಂದರಾಜು ಮಾತನಾಡಿ ಸದಸ್ಯರು ತಮ್ಮ ಮೇಲೆ ವಿಶ್ವಾಸವಿಟ್ಟು ಅವಿರೋಧವಾಗಿ ಆಯ್ಕೆ ಮಾಡಿದ್ದಾರೆ ಇದಕ್ಕೆ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಅನುಧಾನವನ್ನು ಸಮಾನವಾಗಿ ಹಂಚಿಕೆ ಮಾಡಿ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ.  ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಗ್ರಾಮಗಳಲ್ಲಿ ಆಗಬೇಕಾದ ಶೌಚಾಲಯ ನಿರ್ಮಾಣ, ಚರಂಡಿಗಳ ನಿರ್ಮಾಣ, ರಸ್ತೆಗಳ ಅಭಿವೃದ್ಧಿ ಕೈಗೊಂಡು ಜನತೆ ತಮ್ಮ ಮೇಲೆ ಇಟ್ಟಿರುವ ಪ್ರೀತಿ ವಿಶ್ವಾಸಕ್ಕೆ ದಕ್ಕೆ  ಕ್ರಿಯಾಶೀಲವಾಗಿ ಕೆಲಸ ಮಾಡುವುದಾಗಿ ಗೋವಿಂದರಾಜು ಹೇಳಿದರು. ಸಾರ್ವಜನಿಕರು ಗ್ರಾಮ ಪಂಚಾಯಿತಿ ವತಿಯಿಂದ ಆಗಬೇಕಾದ ಯಾವುದೇ ಕೆಲಸಕ್ಕೆ  ಅಲೆಯದಂತೆ ಗ್ರಾ.ಪಂ.ಅಧಿಕಾರಿಗಳು ಕೆಲಸ ಮಾಡಿಕೊಡಬೇಕು. ಫಲಾನುಭವಿಗಳನ್ನು ಆಯ್ಕೆಮಾಡುವಾಗ ಬಡ ಅರ್ಹ ಫಲಾನುಭವಗಳನ್ನು ಮಾತ್ರ ಆಯ್ಕೆ ಮಾಡಬೇಕು ಯಾವುದೇ ಕಾರಣಕ್ಕೂ ತಾವು ಬಡವರ ವಿರೋಧಿ ಆಡಳಿತ ಮಾಡಲು ಬಯಸುವುದಿಲ್ಲ. ಬಡವರ ಸೇವೆಯೇ ತಮ್ಮ ಆಡಳಿತದ ಧ್ಯೇಯವಾಗಿದೆ.  ನನ್ನನ್ನು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಲು ಸಹಕರಿಸಿದ ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್, ಮಾಜಿ ಸ್ಪೀಕರ್ ಕೃಷ್ಣ, ತಾಲೂಕು ಕಾಂಗ್ರೆಸ್ ಉಪಾಧ್ಯಕ್ಷ ಕೆ.ಬಿ.ರವಿಕುಮಾರ್, ಮನ್‍ಮುಲ್ ನಿರ್ದೇಶಕರಾದ ಎಸ್.ಅಂಬರೀಷ್ ಮತ್ತಿತರರಿಗೆ ಕೃತಜ್ಞತೆ ಸಲ್ಲಿಸುವುದಾಗಿ ನೂತನ ಅಧ್ಯಕ್ಷ ಗೋವಿಂದರಾಜು ಹೇಳಿದರು.  
ಹೆಚ್ಚು ರಪ್ತು ವಹಿವಾಟುಗಳಿಂದ ದೇಶದ ಅಭಿವೃದ್ಧಿ ಸಾಧ್ಯ
ಮಂಡ್ಯ ಸೆ.20-ದೇಶದ ಅಭಿವೃದ್ಧಿಯಲ್ಲಿ ಸಾಗಲು ನಮ್ಮಲ್ಲಿರುವ ಉತ್ಪನ್ನಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುವುದರಿಂದ ಸಾಧ್ಯವಾಗುತ್ತದೆ ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ  ಮಂಜುಳ ಪರಮೇಶ್ ಅವರು ತಿಳಿಸಿದರು.
ಅವರು  ವಿಶ್ವೇಶ್ವರಯ್ಯ ವ್ಯಾಪಾರ ಉತ್ತೇಜನ ಕೇಂದ್ರ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ, ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ, ಮಂಡ್ಯ, ಸಣ್ಣ ಕೈಗಾರಿಕೆಗಳ ಸಂಘ, ಸೋಮನಹಳ್ಳಿ ಮತ್ತು ತೂಬಿನಕೆರೆ ಇವರುಗಳ ಸಂಯುಕ್ತ ಆಶ್ರಯದಲ್ಲಿ ಶನಿವಾರ ಹರಿಪ್ರಿಯಾ ಹೋಟೆಲ್‍ನಲ್ಲಿ ನಡೆದ ರಫ್ತು ಜಾಗೃತಿ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಪ್ತುದಾರರಿಗೆ ಸರ್ಕಾರದಿಂದ ದೊರೆಯುವ ಸೌಲಭ್ಯಗಳು, ವಹಿವಾಟುವಿನಲ್ಲಿ ತೊಂದರೆಗಳ ನಿವಾರಣಾ ಹಾಗೂ ರಪ್ತು ಅವಕಾಶಗಳ ಬಗ್ಗೆ  ಶಿಬಿರಗಳಲ್ಲಿ ಅರಿವು ಮೂಡಿಸಬೇಕು ಹಾಗೂ ಉದ್ಯಮಗಳಲ್ಲಿ ಯಶಸ್ವಿಯಾಗಲು ಮಾಡಬೇಕಾದ ಕ್ರಮಗಳ ಬಗ್ಗೆ ತಿಳಿಸಿ ಉದ್ದಿಮೆದಾರರನ್ನು ಪ್ರೋತ್ಸಾಹಿಸಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಎಫ್.ಕೆ.ಸಿ.ಸಿ.ಐ. ಜಿಲ್ಲಾ ಸಮನ್ವಯ ಸಮಿತಿಯ ಅಧ್ಯಕ್ಷರಾದ ಸುಧಾಕರ ಎಸ್. ಶೆಟ್ಟಿಯವರು ಮಾತನಾಡಿ ಕೈಗಾರಿಕೋದ್ಯಮಿಗಳು ತಮ್ಮ ಉತ್ಪನ್ನದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕು ಹಾಗೂ ಕೆಲವು ನಿಯಮಗಳನ್ನು ಪಾಲಿಸಬೇಕು. ಇದರಿಂದ ಉತ್ಪನ್ನಗಳಿಗೆ ಹೆಚ್ಚು ಬೆಲೆ ಸಿಗುತ್ತದೆ ಎಂದು ಹೇಳಿದ ಅವರು ವ್ಯಾಪಾÀರಸ್ಥರಿಗೆ ಸರ್ಕಾರದಿಂದ ಬೇಕಾಗುವ ಎಲ್ಲಾ ನೆರವು ಹಾಗೂ ಪೂರಕವಾದ ವಾತಾವರಣ ನೀಡಲಿದೆ ಎಂದು ತಿಳಿಸಿದರು.
 ಜಿಲ್ಲಾಧಿಕಾರಿಗಳಾದ ಡಾ|| ಅಜಯ್‍ನಾಗಭೂಷಣ್ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ರಫ್ತಿ ವಹಿವಾಟಿನಲ್ಲಿ ತೊಂದರೆಗಳ ನಿವಾರಣೆ ಹಾಗೂ ಪರಿಹಾರದ ಬಗ್ಗೆ ಅರಿವು ಅಗತ್ಯವಾಗಿದ್ದು, ಕೈಗಾರಿಕೋದ್ಯಮಿಗಳಿಗೆ ಪ್ರೋತ್ಸಾಹಿಸಿ ಅವರಿಗೆ ಆಗಬೇಕಾದಂತಹ ಕೆಲಸಗಳನ್ನು ಅಧಿಕಾರಿಗಳು ಮಾಡಲು ಕ್ರಮ ವಹಿಸಲು ಮುಂದಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರಾದ ಎ. ಆನಂದ್, ಮಂಡ್ಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷರಾದ ಮಹೇಂದ್ರ ಬಾಬು, ಜಿಲ್ಲಾ ಕೈಗಾರಿಕಾ ಕೇಂದ್ರದ ಲಕ್ಷ್ಮೀನಾರಾಯಣ್, ವಿ.ಟಿ.ಪಿ.ಸಿ. ಉಪನಿರ್ದೇಶಕರಾದ ಮಹಮ್ಮದ್ ಅತೀಕುಲ್ಲಾ ಷರೀಫ್ ಹಾಗೂ ಇತರರು ಉಪಸ್ಥಿತರಿದ್ದರು.
ಡಿ. ದೇವರಾಜ ಅರಸು ರವರ 99ನೇ ಜನ್ಮ ದಿನಾಚರಣೆ
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಹಿಂದುಳಿದ ವರ್ಗಗಳ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ವತಿಯಿಂದ ಸೆಪ್ಟೆಂಬರ್ 22 ರಂದು ಬೆಳಿಗ್ಗೆ 11.00 ಗಂಟೆಗೆ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಕಲಾಮಂದಿರದಲ್ಲಿ ಸಾಮಾಜಿಕ ಪರಿವರ್ತನೆಯ ಹರಿಕಾರ, ಕರ್ನಾಟಕ ರಾಜ್ಯದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ರವರ 99ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುವುದು.
ವಸತಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ|| ಎಂ.ಹೆಚ್. ಅಂಬರೀಷ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಮಂಜುಳ ಪರಮೇಶ್ ಅವರು ಜ್ಯೋತಿ ಬೆಳಗಿಸಲಿದ್ದು, ಲೋಕಸಭಾ ಸದಸ್ಯರಾದ ಸಿ.ಎಸ್.ಪುಟ್ಟರಾಜು ಅವರು ಸವಲತ್ತುಗಳ ವಿತರಣೆ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಪ್ರಶಿಕ್ಷಣಾರ್ಥಿಗಳ ಮದ್ದು ಗುಂಡು ಗುರಿ ಇಡುವ ಪರೀಕ್ಷೆ
 ಪಾಂಡವಪುರ ತಾಲ್ಲೂಕಿನ ದೊಡ್ಡಬ್ಯಾಡರಹಳ್ಳಿ ಫೈರಿಂಗ್ ರೇಂಜ್ ಇಲ್ಲಿ ಮದ್ದು ಗುಂಡು ಗುರಿ ಇಡುವ ಪರೀಕ್ಷೆಯನ್ನು ಸೆಪ್ಟೆಂಬರ್ 22 ಹಾಗೂ 23 ರಂದು ಬೆಳಿಗ್ಗೆ 5.30 ರಿಂದ 11.30 ರವರೆಗೆ ನಡೆಸುತ್ತಿದ್ದು, ಈ ಅವಧಿಯಲ್ಲಿ ಸಾರ್ವಜನಿಕರು ಸಂಚಾರ ಮಾಡಬಾರದೆಂದು ಮೈಸೂರಿನ ಕಾರಾಗೃಹ ಸಿಬ್ಬಂದಿ ತರಬೇತಿ ಸಂಸ್ಥೆಯ ಪ್ರಾಚಾರ್ಯರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 ಕಂಪ್ಯೂಟರ್ ಡಿ.ಟಿ.ಪಿ, ಬ್ಯೂಟಿಪಾರ್ಲರ್, ವಸ್ತ್ರ ವಿನ್ಯಾಸ ತರಬೇತಿ
       ಮಂಡ್ಯ ಜಿಲ್ಲೆಯ ನಿರುದ್ಯೋಗಿ ಮಹಿಳೆಯರಿಗೆ ವಿಜಯಾ ಬ್ಯಾಂಕ್ ಸ್ವ ಉದ್ಯೋಗ ತರಬೇತಿ ಸಂಸ್ಥೆ, ಕಾರಸವಾಡಿ ರಸ್ತೆ, ಹೊಸಹಳ್ಳಿ, ಕೆ.ಹೆಚ್.ಬಿ. ಕಾಲೋನಿ, ಆದರ್ಶ ಶಾಲೆ ಹತ್ತಿರ, ಮಂಡ್ಯ ವತಿಯಿಂದ ಕಂಪ್ಯೂಟರ್ ಡಿ.ಟಿ.ಪಿ.  ವಸ್ತ್ರವಿನ್ಯಾಸ (ಟೈಲರಿಂಗ್) ಬ್ಯೂಟಿಪಾರ್ಲರ್ ತರಬೇತಿಯನ್ನು ಅಕ್ಟೋಬರ್ ತಿಂಗಳಿನಲ್ಲಿ ಪ್ರಾರಂಭವಾಗುತ್ತಿದ್ದು ತರಬೇತಿ ಹೊಂದಲು  ಇಚ್ಛೆಯುಳ್ಳ  ಕನ್ನಡ ಭಾಷೆ ಓದಲು ಮತ್ತು ಬರೆಯಲು ಬರುವಂತಹ 18 ರಿಂದ 45 ವರ್ಷದೊಳಗಿರುವ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.  7. ಅಥವಾ 8. 9. ಎಸ್.ಎಸ್.ಎಲ್.ಸಿ. ಇವುಗಳಲ್ಲಿ ಯಾವುದಾದರೂ ಅಂಕಪಟ್ಟಿ, ಮತ್ತು ರೇಷನ್ ಕಾರ್ಡ್ eóÉರಾಕ್ಸ್‍ನೊಂದಿಗೆ ಸೆಪ್ಟೆಂಬರ್ 30 ರ ಸಂಜೆ 5.00 ಗಂಟೆಯೊಳಗೆ ತರಬೇತಿ ಸಂಸ್ಥೆಗೆ ಅರ್ಜಿಯನ್ನು ಸಲ್ಲಿಸುವುದು. ತರಬೇತಿಯು ಉಚಿತವಾಗಿದ್ದು ಆಯ್ಕೆಯಾದ ಅಭ್ಯರ್ಥಿಗಳಿಗೆ ಉಚಿತ ಊಟ ಮತ್ತು ವಸತಿ ವ್ಯವಸ್ಥೆಯನ್ನು ಒದಗಿಸಲಾಗುವುದು.  ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯನ್ನು ಖುದ್ದಾಗಿ ಅಥವಾ ದೂರವಾಣಿ 231497 / 231293 ಮೂಲಕ ಸಂಪರ್ಕಿಸಲು ಪ್ರಕಟಣೆಯಲ್ಲಿ ಕೋರಿದೆ.
         ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದ ಉದ್ಘಾಟನಾ ಸಮಾರಂಭ
ಸೆಪ್ಟೆಂಬರ್ 21ರಂದು ಬೆಳಿಗ್ಗೆ 11 ಗಂಟೆಗೆ ಕೊಮ್ಮೇರಹಳ್ಳಿಯಲ್ಲಿ ಡಾ.ಅಂಬೇಡ್ಕರ್ ಯುವಕರ ಸಂಘ ಹಾಗೂ ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಇವರ ವತಿಯಿಂದ ನೂತನವಾಗಿ ನಿರ್ಮಿಸಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ವಿಕಲಚೇತನರ ಶಾಲೆಗೆ ಶ್ರಮಿಸುತ್ತಿರುವ ಎನ್.ಜಿ.ಓ ಸಂಸ್ಥೆಗೆ ಸಹಾಯಧನಕ್ಕೆ ಅರ್ಜಿ ಆಹ್ವಾನ
  ಮದ್ದೂರು ಪುರಸಭಾ ವ್ಯಾಪ್ತಿಯಲ್ಲಿ ವಿಕಲಚೇತನರ ಶಾಲೆ ಅಥವಾ ಅವರ ಅಭಿವೃದ್ಧಿಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಸ್ಥೆಗೆ( ಎನ್.ಜಿ.ಓ) ಸಹಾಯಧನವನ್ನು ನೀಡಲು 2013-14ನೇ ಹಾಗೂ 2014-15ನೇ ಸಾಲಿನ ಎಸ್.ಎಫ್.ಸಿ. ನಿಧಿಯಲ್ಲಿ ತಲಾ ರೂ 15000/-ಗಳನ್ನು ಮೀಸಲಿರಿಸಲಾಗಿರುತ್ತದೆ. ವಿಕಲಚೇತನರಿಗೆ ಶಾಲೆ ನಡೆಸುತ್ತಿರುವವರು ಅಥವಾ ಅವರ ಅಭಿವೃದ್ಧಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೇತರ ಸಂಸ್ಥೆಯವರು ತಮ್ಮ ಸಂಸ್ಥೆಯ ನೊಂದಣಿ ಪ್ರಮಾಣ ಪತ್ರ, ಬೈಲಾ 2013-14ರ ಆಡಿಟ್ ವರದಿ,ವಾರ್ಷಿಕ ವರದಿಗಳ ಪ್ರತಿಯನ್ನು ಸ್ವಯಂ ದೃಡೀಕರಿಸಿ ಹಾಗೂ ವಿಕಲಚೇತನರಿಗಾಗಿ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಛಾಯಾ ಚಿತ್ರಗಳನ್ನು ಲಗತ್ತಿಸಿ ಸೆಪ್ಟೆಂಬರ್ 30 ಪುರಸಭಾ ಕಚೇರಿಗೆ ಮನವಿ ಸಲ್ಲಿಸಲು ಕೋರಿದೆ. ಹೆಚ್ಚಿನ ಮಾಹಿತಿಗಾಗಿ ಪುರಸಭಾ ಕಾರ್ಯಾಲಯದ ಬಡತನ ನಿರ್ಮೂಲನಾ ಕೋಶವನನ್ನು ಸಂಪರ್ಕಿಸಲು ಪುರಸಭೆ ಮುಖ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪಾಂಡವಪುರ: ತಾಲೂಕಿನ ಚಂದ್ರೆ ಗ್ರಾಮದಲ್ಲಿ ಸುಮಾರು 1.60 ಕೋಟಿ ಅಂದಾಜು ವೆಚ್ಚದ ರಸ್ತೆ ಮತ್ತು ಸೇತುವೆ ಅಭಿವೃದ್ದಿ ಕಾಮಗಾರಿಗೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಭೂಮಿ ಪೂಜೆ ನೆರವೇರಿಸಿದರು.
ಪಾಂಡವಪುರ-ಚಂದ್ರೆ-ಸಂಕನಹಳ್ಳಿ-ಕೋಡಳ್ಳಿಹೊಸೂರು ಮಾರ್ಗಾವಾಗಿ ಶ್ರೀರಂಗಪಟ್ಟಣ-ಜೇವರ್ಗಿ(ಬೀದರ್) ಮುಖ್ಯ ರಸ್ತೆಗೆ ಸೇರುವ ರಸ್ತೆಯ ಸರಪಳಿ 4.70 ಕಿ.ಮೀ ನಲ್ಲಿ ಸುಮಾರು 80 ಲಕ್ಷದ ಅಂದಾಜು ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ಹಾಗೂ ಪಾಂಡವಪುರದಿಂದ ಚಂದ್ರೆ-ಸಂಕನಹಳ್ಳಿ-ಕೋಡಳ್ಳಿ ಹೊಸೂರು ಮಾರ್ಗವಾಗಿ ಶ್ರೀರಂಗಪಟ್ಟಣ-ಜೇವರ್ಗಿ(ಬೀದರ್) ಮುಖ್ಯ ರಸ್ತೆಗೆ ಸೇರುವ ರಸ್ತೆಯ ಅಭಿವೃದ್ದಿ ಕಾಮಗಾರಿಗೆ ಶಾಸಕ ಪುಟ್ಟಣ್ಣಯ್ಯ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ. ಮೇಲುಕೋಟೆ ಕ್ಷೇತ್ರದಾದ್ಯಂತ ಎಲ್ಲ ಗ್ರಾಮೀಣ ಸಂಪರ್ಕ ರಸ್ತೆ ಅಭಿವೃದ್ದಿ ಹಾಗೂ ಮುಖ್ಯ ರಸ್ತೆಗಳ ಅಭಿವೃದ್ದಿಯನ್ನು ಮಾಡಲು ಸಂಬಂಧಿಸಿದ ಎಂಜಿನಿಯರ್‍ಗಳು ಅಂದಾಜು ವೆಚ್ಚ ತಯಾರಿಸಿದ್ದಾರೆ. ಈ ಎಲ್ಲ ರಸ್ತೆ ಅಭಿವೃದ್ದಿಗೆ ಹಣ ಬಿಡುಗಡೆಗಾಗಿ ಈಗಾಗಲೇ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಹೇಳಿದರು.
ಭೂಮಿ ಪೂಜೆ ನೆರವೇರಿಸಿರುವ ರಸ್ತೆ ಮತ್ತು ಸೇತುವೆ ಅಭಿವೃದ್ದಿ ಕಾಮಗಾರಿಯಲ್ಲಿ ಗುತ್ತಿಗೆದಾರರು ಗುಣಮಟ್ಟ ಕಾಯ್ದುಕೊಳ್ಳಬೇಕು. ಕಾಮಗಾರಿ ನಡೆಯುವ ವೇಳೆ ಎಂಜಿನಿಯರ್‍ಗಳು ಸ್ಥಳದಲ್ಲಿದ್ದು ಪರಿಶೀಲನೆ ನಡೆಸಬೇಕೆಂದು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ಎಇಇ ರಾಜೇಶ್ ಕ ಮುನ್ಸಿ, ಎಇ ಲೋಕೇಶ್, ಗುತ್ತಿಗೆದಾರರಾದ ಯೋಗೇಶ್, ಧನಂಜಯ, ಗ್ರಾ.ಪಂ.ಸದಸ್ಯರಾದ ಸುನಂದಮ್ಮ, ಟಿ.ಆರ್.ಲೋಕೇಶ್, ಲೋಕೇಶ್, ರೈತ ಮುಖಂಡ ಮರಿದೇವೇಗೌಡ, ಚಂದ್ರಶೇಖರ್, ರಮೇಶ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.

ಮೈಸೂರು-ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ.

ಮೈಸೂರು-ಮಹರ್ಷಿ ವಾಲ್ಮೀಕಿ ಜಯಂತಿ: ಅದ್ದೂರಿ ಆಚರಣೆಗೆ ಜಿಲ್ಲಾಡಳಿತ ನಿರ್ಧಾರ.
ಮೈಸೂರು, ಸೆಪ್ಟೆಂಬರ್ 20.ಜಿಲ್ಲಾಡಳಿತ ಹಾಗೂ ವಿವಿಧ ಸಂಘಟನೆಗಳ ಸಹಕಾರದೊಂದಿಗೆ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಅಕ್ಟೋಬರ್ 8 ರಂದು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ.
 ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಸಿ.ಶಿಖಾ ಅವರ ಅಧ್ಯಕ್ಷತೆಯಲ್ಲಿ ಕರೆಯಲಾದ ವಾಲ್ಮೀಕಿ ಜಯಂತಿ ಅಚರಣೆ ಕುರಿತ ಪೂರ್ವಭಾವಿ ಸಭೆಯಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾ ಕೇಂದ್ರದಲ್ಲಿ ಅದ್ದೂರಿಯಾಗಿ ಆಚರಿಸಲು ನಿರ್ಧಾರ ಕೈಗೊಳ್ಳಲಾಯಿತು.
ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವನ್ನು ತಾಲೂಕು ಕೇಂದ್ರಗಳಲ್ಲಿ ಆಚರಿಸಲು ಅನುದಾನ ನಿಗಧಿಯಾಗಿದ್ದು, ಆಯಾ ತಾಲೂಕುಗಳ ತಹಶೀಲ್ದಾರ್‍ಗಳು ಶಾಸಕರುಗಳ ಸಮ್ಮುಖದಲ್ಲಿ ಸÀಭೆಯನ್ನು ಕರೆದು ಜಯಂತಿ ಆಚರಣೆ ಸಂಬಂಧ ಕ್ರಮವಹಿಸಲು ಸಭೆಯಲ್ಲಿ ನಿರ್ಧರಿಸಲಾಯಿತು.
ಜಿಲ್ಲಾಧಿಕಾರಿ ಸಿ.ಶಿಖಾ ಅವರು ಮಾತನಾಡಿ ಈ ಬಾರಿಯೂ ವೇದಿಕೆ ಸಮಾರಂಭಕ್ಕೂ ಮೊದಲು ನಗರದ ಕೋಟೆ ಆಂಜನೇಯ ದೇವಸ್ಥಾನದ ಮುಂಭಾಗದಿಂದ ವಿವಿಧ ಕಲಾ ತಂಡಗಳೊಂದಿಗೆ ಅಲಂಕಾರÀಗೊಂಡ ವಾಹನದಲ್ಲಿ ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರವನ್ನು ಮೆರವಣಿಗೆ ಮಾಡಲಾಗುವುದು ಹಾಗೂ ವೇದಿಕೆ ಕಾರ್ಯಕ್ರಮವನ್ನು ಕಲಾಮಂದಿರದಲ್ಲಿ ನಡೆಸಲಾಗುವುದು. ಅಲ್ಲದೇ ಗಣ್ಯರು, ಅತಿಥಿಗಳು ಹಾಗೂ ಮುಖಂಡರನ್ನು ಶಿಷ್ಠಾಚಾರದಂತೆ ಆಹ್ವಾನಿಸಲಾಗುವುದು ಎಂದು ತಿಳಿಸಿದರು. 
ಮೈಸೂರು ಮಹಾನಗರ ಪಾಲಿಕೆಯಿಂದ ಕಾರ್ಯಕ್ರಮದಂದು ನಗರದ ಸ್ವಚ್ಚತೆಗೆ ವಿಶೇಷ ಆಸಕ್ತಿ ವಹಿಸಲಾಗುವುದು. ಮೆರಗಣಿಗೆ ಸಾಗುವ ಮಾರ್ಗಗಳು, ಪ್ರಮುಖ ವೃತ್ತಗಳನ್ನು ಸ್ವಚ್ಛಗೊಳಿಸಲಾಗವುದು. ಮಹರ್ಷಿ ವಾಲ್ಮೀಕಿ ಅವರ ಜೀವನ ವಿಚಾರಧಾರೆ ಹಾಗೂ ಆದರ್ಶಗಳ ಬಗ್ಗೆ ತಿಳಿಸಿಕೊಡಲು ಮುಖ್ಯ ಭಾಷಣಕಾರರನ್ನು ಆಹ್ವಾನಿಸಲಾಗುವುದು. ಸಮಾರಂಭದ ಆಹ್ವಾನಪತ್ರಿಕೆಗಳನ್ನು ಗಣ್ಯರು, ಮುಖಂಡರಿಗೆ ವಿತರಿಸಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಹೆಚ್.ಡಿ.ಕೋಟೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಚಿಕ್ಕಮಾದು ಮಾತನಾಡಿ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮವು ನಿಗಧಿತ ಸಮಯದಲ್ಲಿ ಪೂರ್ಣಗೊಳ್ಳಬೇಕು. ಬೆಳಿಗ್ಗೆ 10:30 ಗಂಟೆಗೆ ಸರಿಯಾಗಿ ಮೆರವಣಿಗೆ ಆರಂಭಗೊಂಡು ಮಧ್ಯಾಹ್ನ 2 ಗಂಟೆಯೊಳಗಾಗಿ ಶಿಷ್ಠಾಚಾರದ ಪ್ರಕಾರ ಯಾವುದೇ ಗೊಂದಲಗಳಿಗೆ ಅವಕಾಶ ನೀಡದೆ ವೇದಿಕೆ ಕಾರ್ಯಕ್ರಮವು ಮುಕ್ತಾಯಗೊಳ್ಳಬೇಕು ಎಂದು ಸಲಹೆ ನೀಡಿದರು.  
ಮೈಸೂರು ಮಹಾನಗರ ಪಾಲಿಕೆ ಆಯುಕ್ತÀ ಬೆಟ್‍ಸೂರಮಠ, ಅಪರ ಜಿಲ್ಲಾಧಿಕಾರಿ ಅರ್ಚನಾ, ಉಪ ವಿಭಾಗಾಧಿಕಾರಿ ಸಯಿದ ಅಯಿಷ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಭಾರತಿ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರುಗಳು ಸಭೆಯಲ್ಲಿ ಹಾಜರಿದ್ದರು.
ಕಂಪ್ಯೂಟರ್ ತರಬೇತಿಗೆ ಅರ್ಜಿ ಆಹ್ವಾನ
      ಮೈಸೂರು, ಸೆಪ್ಟೆಂಬರ್ 20- ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು ಮಹಿಳಾ ತರಬೇತಿ ಯೋಜನೆಯಡಿ 18-35 ವರ್ಷ  ವಯೋಮಿತಿಯೊಳಗಿನ ಪಿ.ಯು.ಸಿ ಹಾಗೂ ಅದಕ್ಕಿಂತ ಹೆಚ್ಚಿನ ವಿದ್ಯಾರ್ಹತೆ  ಹೊಂದಿರುವ ತಿ. ನರಸೀಪುರ  ತಾಲ್ಲೂಕಿನ ನಿರುದ್ಯೋಗಿ ಮಹಿಳೆಯರಿಗೆ ಉಚಿತವಾಗಿ ಕಂಪ್ಯೂಟರ್ ಪ್ರೋಗ್ರಾಮರ್,  ಅಕೌಂಟಿಂಗ್ ಮತ್ತು ಕಂಪ್ಯೂಟರ್, ಡೆಸ್ಕ್ ಟಾಪ್ ಪಬ್ಲಿಷಿಂಗ್ ವಿಥ್ ಕನ್ನಡ ನುಡಿ ಹಾಗೂ ವೆಬ್ ಡಿಸೈನಿಂಗ್ ಕಂಪ್ಯೂಟರ್ ತರಬೇತಿ ಯನ್ನು ನೀಡಲು ಅರ್ಜಿ ಆಹ್ವಾನಿಸಿದೆ.
ತರಬೇತಿ ಪಡೆಯಲು ಇಚ್ಚಿಸುವ ಅಭ್ಯರ್ಥಿಗಳು ಸ್ವವಿವರಗಳನ್ನೊಳಗೊಂಡ ಅರ್ಜಿಯೊಂದಿಗೆ  ಅಗತ್ಯ ದಾಖಲಾತಿಗಳನ್ನು ಲಗತ್ತಿಸಿ  ದಿನಾಂಕ:25-09-2014ರ ರ ಸಂಜೆ 5-30 ಗಂಟೆಯೊಳಗಾಗಿ ಶಿಶು ಅಭಿವೃದ್ಧಿ ಯೋಜನೆ, ಹಳೇ ಕುರುಬರಬೀದಿ, ತಿ. ನರಸೀಪುರ ಇಲ್ಲಿಗೆ ಸಲ್ಲಿಸುವುದು..  ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : 08227-261267 ಸಂಪರ್ಕಿಸಬಹುದಾಗಿದೆ. 
ಅಂಗನವಾಡಿ ಕಾರ್ಯಕರ್ತೆ ಹಾಗೂ ಅಂಗನವಾಡಿ ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ತಿ. ನರಸೀಪುರ  ತಾಲ್ಲೂಕಿನ  ಶಿಶು ಅಭಿವೃದ್ಧಿ ಯೋಜನೆಯಲ್ಲಿ ಖಾಲಿ ಇರುವ  05 ಅಂಗನವಾಡಿ ಕಾರ್ಯಕರ್ತೆ ಹಾಗೂ 05 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಸ್ಥಳೀಯ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿಯನ್ನು  ದಿನಾಂಕ:20-10-2014 ರ ಸಂಜೆ 5-30 ಗಂಟೆಯೊಳಗೆ ಸಲ್ಲಿಸಬೇಕಿದ್ದು, ನಿಗಧಿತ ನಮೂನೆ ಹಾಗೂ  ಹೆಚ್ಚಿನ ಮಾಹಿತಿಗೆ  ಶಿಶು ಅಭಿವೃದ್ಧಿ ಯೋಜನೆ, ಹಳೇ ಕುರುಬರಬೀದಿ, ತಿ. ನರಸೀಪುರ ದೂರವಾಣಿ ಸಂಖ್ಯೆ : 08227-261267 ಸಂಪರ್ಕಿಸಬಹುದಾಗಿದೆ. 

                    ಏರ್‍ಮನ್ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ಭಾರತೀಯ ವಾಯು ದಳದಲ್ಲಿ    ಏರ್‍ಮನ್  ‘ಎಕ್ಸ್' ಗ್ರೂಪ್  ತಾಂತ್ರಿಕ ಮತ್ತು  ‘ವೈ ‘ ಗ್ರೂಪ್ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಮೂಲಕ  ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ತಾಂತ್ರಿಕ ‘ಎಕ್ಸ್' ಗ್ರೂಪ್ ಹುದ್ದೆಗಳಿಗೆ ಪಿ.ಯು.ಸಿ ಯನ್ನು  ಭೌತಶಾಸ್ರ್ತ & ಗಣಿತ ವಿಷಯಗಳಲ್ಲಿ ಸರಾಸರಿ ಶೇ.50 ಅಂಕಗಳೊಂದಿಗೆ  ತೇರ್ಗಡೆ ಹೊಂದಿರಬೇಕು ಹಾಗೂ ಇಂಗ್ಲೀಷ್ ನಲ್ಲಿ ಶೇಕಡ 50 ಅಂಕ ಪಡೆದಿರಬೇಕು ಅಥವಾ ಮೂರು ವರ್ಷದ ತಾಂತ್ರಿಕ ಡಿಪ್ಲೋಮ ಇಂಜಿನಿಯರಿಂಗ್ ನಲ್ಲಿ ಶೇಕಡ ಸರಾಸರಿ 50 ಅಂಕಗಳೊಂದಿಗೆ ತೇರ್ಗಡೆ ಹೊಂದಿರಬೇಕು.
‘ವೈ ‘ ಗ್ರೂಪ್ ಹುದ್ದೆಗಳಿಗೆ ಯಾವುದೇ ವಿಷಯಗಳಲ್ಲಿ ಪಿ.ಯು.ಸಿ.,ಯಲ್ಲಿ ಸರಾಸರಿ ಶೇ. 50 ಅಂಕಗಳೊಂದಿಗೆ ತೇರ್ಗಡೆಯಾಗಿರಬೇಕು & ಇಂಗ್ಲೀಷ್‍ನಲ್ಲಿ ಕನಿಷ್ಠ ಶೇ.50 ಅಂಕಗಳನ್ನು ಗಳಿಸರಬೇಕು.
1-8-1995 ರಿಂದ 30-11-1998ರೊಳಗೆ ಜನಿಸಿರಬೇಕು ಹಾಗೂ ಎತ್ತರ:-  152.5 ಸೆಂ.ಮೀ. ಎತ್ತರ ಇರಬೇಕು.
ತಿತಿತಿ.iಟಿಜiಚಿಟಿಚಿiಡಿಜಿoಡಿಛಿe.ಟಿiಛಿ.iಟಿ ನಲ್ಲಿ ದೊರೆಯುವ ಅರ್ಜಿ ನಮೂನೆ ಮುದ್ರಿಸಿಕೊಂಡು ಭÀರ್ತಿಮಾಡಿದ ಅರ್ಜಿಯನ್ನು ದಿನಾಂಕ:22-9-2014ರೊಳಗೆ ಸಾಮಾನ್ಯ ಅಂಚೆ ಮೂಲಕ
ನವದೆಹಲಿಯ ಏರ್‍ಮನ್ ಕೇಂದ್ರ ಕಛೇರಿಗೆ ಸಲ್ಲಿಸಬೇಕು.
       ಹೆಚ್ಚಿನ ಮಾಹಿತಿಗಾಗಿ ಉಪಮುಖ್ಯಸ್ಥರು,ವಿಶ್ವವಿದ್ಯಾನಿಲಯ ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಮಾನಸಗಂಗೋತ್ರಿ, ಮೈಸೂರು ದೂರವಾಣಿ ಸಂಖ್ಯೆ : 0821-2516844 ಇವರನ್ನು ಸಂಪರ್ಕಿಸುವುದು.

ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನ
    ಮೈಸೂರು, ಸೆಪ್ಟೆಂಬರ್ 20-ಮೈಸೂರು ವಿಶ್ವವಿದ್ಯಾನಿಲಯದ ತೋಟಗಾರಿಕಾ ವಿಭಾಗದಿಂದ ಸೆಪ್ಟೆಂಬರ್ 25 ರಿಂದ ಅಕ್ಟೋಬರ್ 5 ರವರಗೆ ಬೆಳಗ್ಗೆ 9 ಗಂಟೆಯಿಂದ ಸಂಜೆ 7 ರವರೆಗೆ ಕುಕ್ಕರಹಳ್ಳಿ ಕೆರೆ ದಂಡೆಯಲ್ಲಿ ದಸರಾ ಫಲಪುಷ್ಪ ಪ್ರದರ್ಶನವನ್ನು ಆಯೋಜಿಸಿದೆ. ಸೆಪ್ಟೆಂಬರ್ 25 ರಂದು ಸಂಜೆ  5 ಗಂಟೆಗೆ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ|| ಕೆ.ಎಸ್ ರಂಗಪ್ಪ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಪ್ರದರ್ಶನದಲ್ಲಿ ವಿವಿಧ ಪುಷ್ಪಗಳು, ಮಾದರಿ ಎಲೆ ಗಿಡಗಳು ಹಾಗೂ ವೈವಿಧ್ಯಮಯ ತರಕಾರಿ ಗಿಡಗಳನ್ನು ಪ್ರದರ್ಶಿಸಲಾಗುವುದು. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ತೋಟಗಾರಿಕಾ ವಿಭಾಗದ ಸಹಾಯಕ ನಿರ್ದೇಶಕ ಎಸ್.ಕೆಮುಜಾವರ್ ಕೋರಿದ್ದಾರೆ.






ಮೈಸೂರು ದಸರಾ ಪುಸ್ತಕ ಮೇಳ
ಮೈಸೂರು, ಸೆಪ್ಟೆಂಬರ್ 20- ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಸಂಸ್ಕøತಿ ಇಲಾಖೆ ಹಾಗೂ ಮೈಸೂರು ದಸರಾ ಉತ್ಸವ ಸಮಿತಿ, ಮೈಸೂರು ಇವರ ಸಂಯುಕ್ತ ಆಶ್ರಯದಲ್ಲಿ ಆಗಸ್ಟ್ 24 ರಿಂದ ಅಕ್ಟೋಬರ್ 3ರವರೆಗೆ ಮೈಸೂರಿನ ಕಾಡಾ ಮೈದಾನದಲ್ಲಿ ದಸರಾ ಕನ್ನಡ ಪುಸ್ತಕ ಮೇಳವನ್ನು ಏರ್ಪಡಿಸಲಾಗಿದೆ.
    ಮೇಳದಲ್ಲಿ ಭಾಗವಹಿಸಲು ಇಚ್ಚಿಸುವ ಕನ್ನಡ ಪುಸ್ತಕ ಪ್ರಕಾಶಕರು ಅರ್ಜಿನಮೂನೆಗಳನ್ನು ಕನ್ನಡ ಪುಸ್ತಕ ಪ್ರಾಧಿಕಾರ ವೆಬ್ ಸೈಟ್ ತಿತಿತಿ.ಞಚಿಟಿಟಿಚಿಜಚಿಠಿusಣhಚಿಞಚಿಠಿಡಿಚಿಜhiಞಚಿಡಿಚಿ.ಛಿom ಅಥವಾ ಕನ್ನಡ ಪುಸ್ತಕ ಪ್ರಾಧಿಕಾರದ ಕಛೇರಿ, ಜೆ ಸಿ ರಸ್ತೆ ಬೆಂಗಳೂರಿನಲ್ಲಿ ದಿನಾಂಕ : 22-09-2014ರೊಳಗೆ ಅರ್ಜಿ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ಆಡಳೀತಾಧಿಕಾರಿಗಳು , ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ ರಸ್ತೆ, ಬೆಂಗಳೂರು – 560002 ದೂರವಾಣಿ ಸಂಖ್ಯೆ : 080-22484516, 22107704 ಅನ್ನು ಸಂಪರ್ಕಿಸಬಹುದಾಗಿದೆ.

   
ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿಗೆ ಕೌನ್ಸಿಲಿಂಗ್
ಮೈಸೂರು, ಸೆಪ್ಟೆಂಬರ್ 20- ಸರ್ಕಾರಿ ಪ್ರಾಥಮಿಕ ಶಾಲಾ ಸಹಶಿಕ್ಷಕರ ಹುದ್ದೆಯಿಂದ ಮುಖ್ಯ ಶಿಕ್ಷಕರ ಹುದ್ದೆಗೆ ಬಡ್ತಿ ನೀಡುವ ಸಂಬಂಧ ದಿನಾಂಕ: 23.09.2014 ರಂದು ಪೂರ್ವಾಹ್ನ 09.00 ಗಂಟೆಯಿಂದ ಎನ್.ಟಿ.ಎಂ.ಶಾಲೆ, ನಾರಾಯಣ ಶಾಸ್ತ್ರಿ ರಸ್ತೆ, ಮೈಸೂರು ಇಲ್ಲಿ ಕೌನ್ಸಿಲಿಂಗ್ ನಡೆಯಲಿದೆ. ದಿನಾಂಕ: 19.09.2014 ರಂದು ಅಂತಿಮ ಸೇವಾ ಜೇಷ್ಠತಾ ಪಟ್ಟಿಯನ್ನು ಜಿಲ್ಲಾ ಉಪನಿರ್ದೇಶಕರ ಕಛೇರಿ ಹಾಗೂ ಜಿಲ್ಲೆಯ ಎಲ್ಲಾ ತಾಲ್ಲೂಕು ಕ್ಷೇತ್ರಶಿಕ್ಷಣಾಧಿಕಾರಿಗಳ ಕಛೇರಿಯಲ್ಲಿ ಪ್ರಕಟಿಸಲಾಗಿರುತ್ತದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಒಲೆರಹಿತ ಅಡುಗೆ ಸ್ಪರ್ಧೆ

ಮೈಸೂರು, ಸೆಪ್ಟೆಂಬರ್ 20- ಮಹಿಳಾ ದಸರಾ 2014 ಅಂಗವಾಗಿ 18 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಒಲೆರಹಿತ ಅಡುಗೆ ಸೆಪ್ಟೆಂಬರ್ 27 ರಂದು ಬೆ:11.30 ರಿಂದ ಮ:1.30ಗಂಟೆ  ಸ್ಪರ್ಧೆಯನ್ನು ಜೆ.ಕೆ.ಮೈದಾನದಲ್ಲಿ ಏರ್ಪಡಿಸಿದ್ದು, ಆಸಕ್ತ ಮಹಿಳೆಯರು ದಿನಾಂಕ:27.09.2014 ರೊಳಗಾಗಿ ಹೆಸರು  ನೊಂದಾಯಿಸಿಕೊಳ್ಳುವುದು.
      ಹೆಚ್ಚಿನ ಮಾಹಿತಿಗೆ ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ- 0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742 ಹಾಗೂ ಟಿ.ನರಸೀಪುರ-08227-261267 ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು 0821-2495432, 0821-2498031 ನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



ಅರ್ಜಿ ಸರಿಪಡಿಸಿ ಸಲ್ಲಿಸಿ
    ಮೈಸೂರು, ಸೆಪ್ಟೆಂಬರ್ 20 -  2013-14ನೇ ಸಾಲಿನ ಎಸ್.ಸಿ./ಎಸ್.ಟಿ. ವಿದ್ಯಾರ್ಥಿ ವೇತನ ಕೋರಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ಅರ್ಜಿ ಸಲ್ಲಿಸಿರುವ 176 ತಾಲ್ಲೂಕಿನ ವಿದ್ಯಾರ್ಥಿಗಳ ಅರ್ಜಿಯನ್ನು  ಆಯಾಯಾ ತಾಲ್ಲೂಕಿನ ಸಮಾಜ ಕಲ್ಯಾಣ ಅಧಿಕಾರಿಗಳ ಕಛೇರಿಗೆ ಕಳುಹಿಸಲಾಗಿದೆ.
       ತಪ್ಪಾದ ಔಟಿಟiಟಿe ಓumbeಡಿ ನೀಡಿದ, ಭಾವಚಿತ್ರವನ್ನು ನೀಡದ, ಖಿhumb Imಠಿಡಿessioಟಿ ನೀಡದ ಮತ್ತು          ಸರಿಯಾದ ಮಾಹಿತಿ ನೀಡದ ವಿದ್ಯಾರ್ಥಿಗಳ ಅರ್ಜಿಗಳನ್ನು ಆಯಾಯಾ ವಿದ್ಯಾರ್ಥಿಗಳ ವಿಳಾಸಕ್ಕೆ ವಾಪಸ್ಸು ಕಳುಹಿಸಲಾಗಿದೆ. ವಿದ್ಯಾರ್ಥಿಗಳು ತಪ್ಪುಗಳನ್ನು ಸರಿಪಡಿಸಿ, ಸರಿಯಾದ ಮಾಹಿತಿಯೊಂದಿಗೆ ಸಂಬಂಧಪಟ್ಟ ತಾಲ್ಲೂಕಿನ ಸಮಾಜ ಕಲ್ಯಾಣ ಇಲಾಖೆಯ ಕಛೇರಿಯಲ್ಲಿ ವಿದ್ಯಾರ್ಥಿ ವೇತನಕ್ಕೆ ಸಂಬಂಧಿಸಿದಂತೆ ಕ್ರಮವಹಿಸುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತರಬೇತಿ ಶಿಬಿರ ಶುಭಹಾರೈಕೆ
    ಮೈಸೂರು, ಸೆಪ್ಟೆಂಬರ್ 20-ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರವು ಸೆಪ್ಟೆಂಬರ್ 22 ರಂದು  ಬೆಳಿಗ್ಗೆ 11 ಗಂಟೆಗೆ ಕಾವೇರಿ ಸಭಾಂಗಣದಲ್ಲಿ ಬ್ಯಾಂಕಿಂಗ್ ಹುದ್ದೆಗಳ ನೇಮಕಾತಿ ಪರೀಕ್ಷೆ ತರಬೇತಿ ಶಿಬಿರದ ಶುಭಹಾರೈಕೆ ಮತ್ತು  ಅಧ್ಯಯನ ಪುಸ್ತಕ ಬಿಡುಗಡೆ ಸಮಾರಂಭ ನಡೆಯಲಿದೆ.      
      ಮಂಗಳೂರು ವಿಶ್ವ ವಿದ್ಯಾನಿಲಯದ  ಕುಲಪತಿ ಪ್ರೊ. ಕೆ. ಭೈರಪ್ಪ ಅಧ್ಯಯನ ಪುಸ್ತಕ ಬಿಡುಗಡೆ ಮಾಡಲಿದ್ದು ಕರಾಮುವಿ ಕುಲಪತಿ ಪ್ರೊ. ಎಂ.ಜಿ. ಕೃಷ್ಣನ್ ಅಧ್ಯಕ್ಷತೆ ವಹಿಸಲಿದ್ದಾರೆ.

ಪ್ರಾಣಿ ಮಿತ್ರ ಪ್ರಶಸ್ತಿಗೆ ಅರ್ಜಿ ಆಹ್ವಾನ
ಮೈಸೂರು, ಸೆಪ್ಟೆಂಬರ್ 20-ಕೇಂದ್ರ ಸರ್ಕಾರದ ಅನಿಮಲ್ ವೆಲಫೇರ್ ಬೋರ್ಡ್ ನವರು ಪ್ರಾಣಿಗಳ ರಕ್ಷಣೆಗೋಸ್ಕರ ಅಸಾಧಾರಣ ಕೊಡುಗೆ ನೀಡಿರುವ  ವ್ಯಕ್ತಿಗಳಿಗೆ ಪ್ರಾಣಿ ಮಿತ್ರ ಪ್ರಶಸ್ತಿ ಹಾಗೂ ಜೀವ ದಯಾ ಪುರಸ್ಕಾರ ನೀಡಲು ಪ್ರಾಣಿ ಕಲ್ಯಾಣಕ್ಕಾಗಿ ಆಸಾಧಾರಣ ಸೇವೆ ಸಲ್ಲಿಸುತ್ತಿರುವ ವ್ಯಕ್ತಿಗಳಿಂದ ಅರ್ಜಿ ಆಹ್ವಾನಿಸಿದೆ.  ಅರ್ಜಿಯನ್ನು ಉಪ ನಿರ್ದೇಶಕರವರ ಕಛೇರಿ, ಪಶುಪಾಲನಾ ಇಲಾಖೆ, ಮೈಸೂರು ಇವರಿಗೆ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂ: 0821-2420606, ಅನ್ನು ಸಂಪರ್ಕಿಸುವುದು ಎಂದು ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಹಿಳೆಯರಿಗೆ ಆಟೋಟ ಸ್ಫರ್ಧೆಗಳು
ಮೈಸೂರು, ಸೆಪ್ಟೆಂಬರ್ 20-ಮಹಿಳಾ ದಸರಾ-2014 ಕಾರ್ಯಕ್ರಮದ ಅಂಗವಾಗಿ ಮಹಿಳೆಯರಿಗೆ, ಲಿಂಗತ್ವ  ಅಲ್ಪಸಂಖ್ಯತರಿಗೆ ಹಾಗೂ ಹಿರಿಯ ನಾಗರೀಕರಿಗೆ ಜೆ.ಕೆ. ಮೈದಾನ, ರೈಲ್ವೆ ನಿಲ್ದಾಣದ ಎದುರು, ಮೈಸೂರು ಇಲ್ಲಿ ವಿವಿಧ ಸ್ಫರ್ಧೆಯನ್ನು ಆಯೋಜಿಸಿದೆ.
ಮಹಿಳೆಯರಿಗೆ ದಿನಾಂಕ: 27.09.2014 ರಂದು ಮಧ್ಯಾಹ್ನ 2.00 ರಿಂದ 5.00 ಗಂಟೆಯವರೆಗೆ 100 ಮೀಟರ್ ಓಟ, ಬಾಲ್ ಇನ್ ದಿ ಬಕೆಟ್,  ನಿಂಬೆಹಣ್ಣು ಮತ್ತು ಚಮಚ  ಸ್ಪರ್ಧೆ, ದಿನಾಂಕ:28.09.2014 ರಂದು ಮಧ್ಯಾಹ್ನ 2.00 ರಿಂದ 5.30 ಗಂಟೆಯವರೆಗೆ ಮಡಿಕೆ ಒಡೆಯುವುದು, ಗುಂಡು ಎಸೆತ, ಮ್ಯೂಸಿಕಲ್ ಚೇರ್ ಸ್ಪರ್ಧೆ ನಡೆಯಲಿದೆ.
ಲಿಂಗತ್ವ ಅಲ್ಪಸಂಖ್ಯಾತರಿಗೆ ದಿನಾಂಕ:29.09.2014 ರಂದು ಬೆಳಿಗ್ಗೆ 10.00 ರಿಂದ 1.00 ಗಂಟೆಯವರೆಗೆ ಬಾಲ್ ಇನ್‍ದಿ ಬಕೆಟ್, ಮಡಿಕೆ ಒಡೆಯುವುದು, ಓಟದ ಸ್ಪರ್ಧೆ, ಮ್ಯೂಸಿಕಲ್ ಚೇರ್ ಸ್ಫರ್ಧೆ ನಡೆಯಲಿದೆ.
ಹಿರಿಯ ನಾಗರೀಕರಿಗೆ ಮಡಿಕೆ ಒಡೆಯುವುದು, ಮ್ಯೂಸಿಕಲ್ ಚೇರ್, ಬಾಲ್ ಇನ್ ದಿ ಬಕೆಟ್, ಸ್ಪರ್ಧೆಗಳನ್ನು ದಿನಾಂಕ:29.09.2014 ರಂದು ಬೆಳಿಗ್ಗೆ10.00 ರಿಂದ 1.00 ಗಂಟೆಯವರೆಗೆ ಏರ್ಪಡಿಸಲಾಗಿರುತ್ತದೆ.  ವಿಶೇಷ ಮಕ್ಕಳು ಹಾಗೂ ವಿಕಲಚೇತನರಿಗೆ  ವಿವಿಧ ಆಟೋಟ ಸ್ಫರ್ಧೆಗಳನ್ನು ದಿನಾಂಕ:30.09.2014 ರಂದು ಬೆಳಿಗ್ಗೆ 10.00 ರಿಂದ ಮ:3.00 ಗಂಟೆಯವರೆಗೆ ಆಯೋಜಿಸಿದೆ.
ಹೆಚ್ಚಿನ ಮಾಹಿತಿಗೆ ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ- 0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742 ಹಾಗೂ ಟಿ.ನರಸೀಪುರ-08227-261267 ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು 0821-2495432, 0821-2498031 ನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಮಹಿಳೆಯರಿಗೆ ಕರಾಟೆ ಕಲಿಕಾ ಶಿಬಿರ
ಮೈಸೂರು, ಸೆಪ್ಟೆಂಬರ್ 20-ಮಹಿಳಾ ದಸರಾ-2014 ಕಾರ್ಯಕ್ರಮದ ಪ್ರಯುಕ್ತ ದಿನಾಂಕ:26.09.2014 ರಿಂದ 30.09.2014ರವರಗೆ ಪ್ರತಿದಿನ ಸಂಜೆ 4.30 ರಿಂದ 6.00 ಗಂಟೆಯವರೆಗೆ ಮಹಿಳೆಯರಿಗೆ         “ಸ್ವಯಂ ರಕ್ಷಣೆಗಾಗಿ ಕರಾಟೆ “ ಕಲಿಕಾ ಶಿಬಿರವನ್ನು ಜೆ.ಕೆ.ಮೈದಾನ, ರೈಲ್ವೆ ನಿಲ್ದಾಣದ ಎದುರು, ಮೈಸೂರು ಇಲ್ಲಿ ಏರ್ಪಡಿಸಲಾಗಿರುತ್ತದೆ. 
         ಹೆಚ್ಚಿನ ಮಾಹಿತಿಗೆ ಹೆಚ್.ಡಿ.ಕೋಟೆ-08228-255320, ಹುಣಸೂರು-08222-252254, ಕೆ.ಆರ್.ನಗರ-08228-262714, ಮೈಸೂರು ಗ್ರಾಮಾಂತರ-0821-2567940, ಮೈಸೂರು ನಗರ- 0821-2491962, ನಂಜನಗೂಡು-08221-226168, ಪಿರಿಯಾಪಟ್ಟಣ-08223-274742 ಹಾಗೂ ಟಿ.ನರಸೀಪುರ-08227-261267 ಹಾಗೂ ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮೈಸೂರು 0821-2495432, 0821-2498031 ಅನ್ನು ಸಂಪರ್ಕಿಸುವುದು ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆದರ್ಶ ಶಾಲೆಯ ಶಂಕುಸ್ಥಾಪನೆ
    ಮೈಸೂರು, ಸೆಪ್ಟೆಂಬರ್ 20-ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಇವರ ಸಂಯುಕ್ತಾಶ್ರಯದಲ್ಲಿ ಸೆಪ್ಟೆಂಬರ್ 22 ರಂದು ಬೆಳಿಗ್ಗೆ: 10  ಗಂಟೆಗೆ ಕೆ.ಎ.ಆರ್.ಪಿ.ಬಾಡಿಗಾರ್ಡ್‍ಲೈನ್    
       ಶಾಲಾವರಣದಲ್ಲಿ ಆದರ್ಶಶಾಲೆಯ ನೂತನ ಕಟ್ಟಡದ ಶಂಕುಸ್ಥಾಪನಾ ಸಮಾರಂಭ ನಡೆಯಲಿದೆ, ಶಾಸಕ  ಎಂ.ಕೆ. ಸೋಮಶೇಖರ್  ಶಂಕುಸ್ಥಾಪನೆ ನೆರವೇರಿಸಲಿದ್ದು,   ಮಹಾನಗರ ಪಾಲಿಕೆ ಸದಸ್ಯೆ ವನಿತ ಪ್ರಸನ್ನ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ  ಹೆಚ್. ಆರ್.ಬಸಪ್ಪ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.