Wednesday 8 April 2015

ವಿಶ್ವ ಆರೋಗ್ಯ ದಿನ: ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ “ಮಿಷನ್ ಇಂದ್ರಧನುಷ್” ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ



ಈವತ್ತಿನ ಸಮಾಜದಲ್ಲಿ ಜನರಲ್ಲಿ ಆರೋಗ್ಯ ಕುರಿತಾದ ಕಾಳಜಿ ಹೆಚ್ಚಾಗುತ್ತಿದ್ದು ರೋಗ ಬಂದ ಮೇಲೆ ಅದಕ್ಕೆ ಮದ್ದು ಪಡೆಯುವುದಕ್ಕಿಂತ ರೋಗ ತಡೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ: ಕಾವೇರಿ ನಾಣಯ್ಯ ತಿಳಿಸಿದರು. .07: ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿಂದು ಶ್ರೀರಂಗಪಟ್ಟಣ ತಾಲೂಕು ಮೇಳಾಪುರ ಗ್ರಾಮದಲ್ಲಿ ಮಿಷನ್ ಇಂದ್ರ ಧನುಷ್ ಯೋಜನೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮೈಸೂರು-ಮಂಡ್ಯ ಘಟಕ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಶ್ರೀರಂಗಪಟ್ಟಣ ತಾಲೂಕು ಮತ್ತು ಮೇಳಾಪುರ ಗ್ರಾಮ ಪಂಚಾಯತಿ ಸಹಯೋಗ ಒದಗಿಸಿದ್ದವು.
ದೈಹಿಕ ಹಾಗೂ ಮಾನಸಿಕ ಖಾಯಿಲೆಗಳ ಬಗ್ಗೆ ವಿಸ್ತøತ ವಿವರಣೆ ನೀಡಿದ ವೈದ್ಯರು ಅವುಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ವೈದ್ಯರ ಸಲಹೆಯೊಂದಿಗೆ ಉಲ್ಬಣಿಸದಂತೆ ನೋಡಿಕೊಳ್ಳಬೇಕೆಂದು ಡಾ: ಕಾವೇರಿ ಸಲಹೆ ನೀಡಿದರು. ಮೇಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನತೆ ಆರೋಗ್ಯ ಸಂಬಂಧಿಸಿದಂತೆ ಸರ್ಕಾರ ಕೊಡುತ್ತಿರುವ ಸವಲತ್ತುಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ: ಎಚ್. ಪಿ. ಮಂಜುಳಾ ಮಾತನಾಡುತ್ತಾ ಸಾಗುವಳಿಯಿಂದ ಸೇವನೆವರೆಗೆ ಸಮೃದ್ಧ ಆಹಾರ ಎಂಬ ಸೂತ್ರ ಅವಡಿಸಿಕೊಂಡರೆ ಪ್ರತಿಯೊಬ್ಬರ ಆರೋಗ್ಯವೂ ತಂತಾನೆ ಸುಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು. ಉತ್ತಮ ಆರೋಗ್ಯ ಉತ್ತಮ ದೈಹಿಕ ಸಾಮಥ್ರ್ಯವನ್ನು ನಿರ್ಮಿಸುತ್ತದೆ ಎಂದೂ ಅವರು  ಪ್ರತಿಪಾದಿಸಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಮೈಸೂರು-ಮಂಡ್ಯ ವಲಯದ ಮುಖ್ಯಸ್ಥರಾದ ಡಾ: ಟಿ.ಸಿ.ಪೂರ್ಣಿಮಾ ಅವರು ಮಿಷನ್ ಇಂದ್ರಧನುಷ್ ಯೋಜನೆ ಮಕ್ಕಳಲ್ಲಿ 9 ವಿಧದ ರೋಗಗಳನ್ನು ಪ್ರತಿರೋಧಿಸುವಂಥ ಲಸಿಕೆ ಪೂರೈಸುವÀ ಕಾರ್ಯಕ್ರಮವಾಗಿದೆ; ವಾರ್ಷಿಕ 2 ಕೋಟಿಗೂ ಹೆಚ್ಚು ಮಕ್ಕಳಿಗೆ ಚುಚ್ಚುಮದ್ದು ನೀಡುವ ಗುರಿ ಈ ಯೋಜನೆಯಡಿಯಲ್ಲಿದೆ. ಸರ್ಕಾರ ಕೊಡಮಾಡುವ ಯೋಜನೆಗಳ ಲಾಭ ಪಡೆದುಕೊಳ್ಳಲು ಜನತೆ ತುದಿಗಾಲಿನಲ್ಲಿ ನಿಲ್ಲಬೇಕು ಎಂದು ಹೇಳಿದರು.
ಇತ್ತೀಚೆಗೆ ದೊರೆತಿರುವ ಮಾಹಿತಿಯಂತೆ ವರ್ಷದಲ್ಲಿ ಸುಮಾರು 89 ಲಕ್ಷ ಮಕ್ಕಳು ಸಾರ್ವತ್ರಿಕ ಲಸಿಕಾ ವ್ಯವಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಪಡೆಯುವುದೇ ಇಲ್ಲ. ಲಸಿಕೆಗಳನ್ನು ಪಡೆಯದೆ ಅಥವಾ ಭಾಗಶಃ ಪಡೆದ ಮಕ್ಕಳು ಬಾಲ್ಯದಿಂದಲೇ ಉಂಟಾಗುವ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಡಾ: ಟಿ.ಸಿ. ಪೂರ್ಣಿಮಾ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಮೇಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಮಹದೇವಮ್ಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು ಉತ್ತÀಮ ಸಲಹೆಗಳನ್ನು ಜನರಿಗೆ ನೀಡಿದರು. ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಲೀಲಾ, ಗ್ರಾಮದ ಮುಖಂಡರಾದ ಪ್ರಾಣೇಶ್, ಜಯರಾಂ, ಸುಮತಿ, ಲಕ್ಷ್ಮಿ ಮತ್ತಿತರರು ಹಾಜರಿದ್ದರು.


No comments:

Post a Comment