Sunday 19 April 2015

ವಿಶ್ವಮಾನವರನ್ನು ಜಾತಿಯಿಂದ ಅಳೆಯದಿರಿ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ
ಮಂಡ್ಯ: ವಿಶ್ವ ಮಾನವರಾಗಿ ಗುರುತಿಸಿಕೊಂಡಿರುವ ಮಹಾನ್ ಮಾನವತಾವಾದಿಗಳನ್ನು ಜಾತಿಯ ಸಂಕೋಲೆಯಿಂದ ಅಳೆಯದಿರಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದರು.
ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನ ಪತ್ರಿಕೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪು-ನಿತ್ಯ ಸಚಿವ ಕೆ.ವಿ. ಶಂಕರಗೌಡ ಸ್ಮರಣಾರ್ಥ 17ನೇ ರಾಜ್ಯ ಮಟ್ಟದ ಕವಿಕಾವ್ಯ ಸಮ್ಮೆಳನÀ, ಕನ್ನಂಬಾಡಿ ಪತ್ರಿಕೆ ವಾರ್ಷಿಕೊತ್ಸವ ಹಾಗೂ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಚೇತನಗಳಾದ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣರನ್ನು ಜಾತಿಯ ಸಂಕೋಲೆಯಿಂದ ನೋಡುವದನ್ನು ಬಡಬೇಕು. ಅಂಬೇಡ್ಕರ್ ಎಂದರೆ ದಲಿತರಿಗೆ ಮೀಸಲಾದ ನಾಯಕ, ಕುವೆಂಪು ಎಂದರೆ ಒಕ್ಕಲಿಗರಿಗೆ ಮೀಸಲಾದ ನಾಯಕ ಹಾಗೆಯೇ ಬಸವಣ್ಣನೆಂದರೆ ವೀರಶೈವರಿಗೆ ಮೀಸಲಾಗಿರುವ ನಾಯಕನೆಂದು ಬಿಂಬಿಸಲಾಗಿದೆ. ಇದರಿಂದಲೇ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ವಿಷಾದಿಸಿದರು.
ಸಾಹಿತ್ಯ ಲೋಕಕ್ಕೆ ಕುವೆಂಪು ವಿಚಾರಧಾರೆಗಳು ಅನನ್ಯವಾಗಿವೆ. ಅಂತಹ ಮಹಾನ್ ನಾಯಕನನ್ನು ಜಾತಿಯಿಂದ ಗುರುತಿಸಲಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಜಾತಿಯತೆ ಹೆಚ್ಚಾಗುವುದರಿಂದಲೇ ಸಮಾಜಕ್ಕೆ ತೊಡಕಾಗಲಿದೆ ಎಂದರು.
ಇಂದು ಮಠಗಳು ಒಂದೊಂದು ಜಾತಿಯಿಂದ ಗುರುತಿಸಿಕೊಳ್ಳುತ್ತಿದೆ. ಯಾವುದಾದರೂ ಒಂದು ಪ್ರತಿಷ್ಟಿತ ಮಠ ವಿಶ್ವ ಮಾನವ ಮಠ ಎಂದು ನಾಮಫಲಕವಾಕಿದರೆ ಆ ಮಠವು ಕೇವಲ ಒಂದು ವರ್ಷದಲ್ಲಿ ಮುಚ್ಚಬೇಕಾಗುವ ಪರಿಸ್ಥಿತಿ ಒದಗಿ ಬಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಶಾಸಕ ಡಿ.ಎಸ್.ವೀರಯ್ಯ, ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಂದ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಡಾ.ಜೀ.ಶಂಪ. ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಕರಾವಳಿ ಒಕ್ಕೂಟದ ಅಧ್ಯಕ್ಷ ಜಗನ್ನಾಥಶೆಟ್ಟಿ, ಕುಶಾಲನಗರ ಪುರಸಭಾಧಿಕಾರಿ ರಮೇಶ್, ಚೆಸ್ಕಾಂ ಎಸ್ಪಿ ಪ್ರಕಾಶ್ ಗೌಡ ಅವರಿಗೆ ನಾಗರೀಕ ಅಭಿನಂದನೆ, ಎಂ.ರಾಮೇಗೌಡ, ಭೀಮಾಶಂಕರ್ ಪಾಟೀಲ್, ಗುರುಮೂರ್ತಿ, ಬನ್ನಂಗಾಡಿ ಸಿದ್ದಲಿಂಗಯ್ಯ, ಹನುಮಂತು, ಯಮದೂರು ಸಿದ್ದರಾಜು, ಮತ್ತೀಕೆರೆ ಜಯರಾಂ, ಟಿ.ಕೃಷ್ಣಪ್ಪ, ಅಪ್ಪಾಜಪ್ಪ, ಗೋಪಾಲನ್, ಯಶೋಧಾ ನಾರಾಯಣ್ ಅವರಿಗೆ ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿ.ಎ.ಕರೆ ಪ್ರಕಾಶ್, ಕೋಣಸಾಲೆ ನರಸರಾಜು, ಬೀಟ್ರೋ, ಶ್ರೀನಿವಾಸಶೆಟ್ಟಿ, ನೀಲಕಂಠ, ಶಂಭುನಹಳ್ಳಿ ಸುರೇಶ್, ಶಿವನಂಜಯ್ಯ, ಶಂಕರ್, ವಿಜಯ್ ಕುಮಾರ್, ನೂರ್ ಸಮ್ಮದ್, ಬಾಲಕೃಷ್ಣ, ನಾಗೇಶ್ ಅವರಿಗೆ ಕನ್ನಂಬಾಡಿ ಪ್ರಶಸ್ತಿ, ಕಾಳೇನಹಳ್ಳಿ ಕೆಂಚೇಗೌಡ, ಲಲಿತಾ ಶರ್ಮಾ, ಸುದರ್ಶನಗೌಡ, ಮರಿಯಯ್ಯ, ನೆಲಮಾಕನಹಳ್ಳಿ ಬಸಪ್ಪ, ಪಂಚಲಿಂಗೇಗೌಡ, ಕೃಷ್ಣೇಗೌಡ, ನಾರಾಯಣ್, ಗಿರೀಶ್, ಮಹೇಂದ್ರ ಸಿಂಗ್ ಕಾಳಪ್ಪ, ನಿವೇದಿತಾ, ಎಸ್.ಕೆ.ಶಿವಪ್ರಕಾಶ್ ಬಾಬು ಅವರಿಗೆ ಕೆವಿಎಸ್ ಪ್ರಶbಸ್ತಿ ನೀಡಿ ಗೌರವಿಸಲಾಯಿತು.


ಪ್ರೀತಿ-ವಿಶ್ವಾಸ, ಕರುಣೆ, ತ್ಯಾಗ, ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕರುನಾಡು
ಸಮ್ಮೇಳನಾಧ್ಯಕ್ಷ ಡಿ.ಎಸ್.ವೀರಯ್ಯ ಅಭಿಮತ
ಮಂಡ್ಯ: ಪ್ರೀತಿ-ವಿಶ್ವಾಸ, ಕರುಣೆ, ತ್ಯಾಗ, ಸಾಮರಸ್ಯ,  ಸ್ತ್ರೀ ಗೌರವ, ಸಾಹಿತ್ಯ, ಸಂಸ್ಕಾರ  ಮತ್ತು ಸೌಹಾರ್ದತೆಗೆ  ಮತ್ತೊಂದು ಹೆಸರೇ ಕನ್ನಡ ನಾಡು ಎಂದು ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯ 17ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳದ ಸಮ್ಮೇಳನಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಬಣ್ಣಿಸಿದರು.
ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನ ಪತ್ರಿಕೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪು-ನಿತ್ಯ ಸಚಿವ ಕೆ.ವಿ. ಶಂಕರಗೌಡ ಸ್ಮರಣಾರ್ಥ 17ನೇ ರಾಜ್ಯ ಮಟ್ಟದ ಕವಿಕಾವ್ಯ ಸಮ್ಮೆಳನÀ, ಕನ್ನಂಬಾಡಿ ಪತ್ರಿಕೆ ವಾರ್ಷಿಕೊತ್ಸವ ಹಾಗೂ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಿಕಾವ್ಯ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.
  ನಮ್ಮ ದೇಶದ ಜಾನಪದ ಸಂಸ್ಕøತಿ, ಸಂಸ್ಕಾರ, ಆಚಾರ-ವಿಚಾರ ಸಿಂಧು ಬಯಲಿನ ಆರಂಭವಾದ ನಾಗರೀಕತೆ ಜನನಿ- ಜನ್ಮಭೂಮಿ ಎಂದು ಕರೆಯಲಾದನಮ್ಮ ಜೀವನದ ಬೆನ್ನೆಲುಬು. ಬುದ್ಧ, ಬಸವ, ಅಂಬೇಡ್ಕರ್ ಹುಟ್ಟಿದ ನಾಡು ನಮ್ಮದು. ಅನೇಕ ಸುಧಾರಕರಿಗೆ, ಋಷಿ ಮುನಿಗಳಿಗೆ, ಮಹಾನ್ ನಾಯಕರಿಗೆ ಜನ್ಮ ಕೊಟ್ಟ ದೇಶ ನಮ್ಮದು. ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮಿಕ ಚಿಂತಕರನ್ನು ಪಡೆದ ದೇಶ ನಮ್ಮದು ಎಂದರು.
ಕನ್ನಡಿಗರು ದೇಶದ ಯಾವುದೇ ಭಾಗದಲ್ಲಿ ನೆಮ್ಮದಿಯಾಗಿ ಬದುಕಬಹುದು. ಸಂತಸದ ಜೀವನ ನಡೆಸಬಹುದು. ಅಲ್ಲಿನ ಭಾಷೆ, ಸಂಸ್ಕøತಿಗೆ ಬೆರೆತು ಬದುಕುವ ಈ ನಾಡಿನ, ಮಣ್ಣಿನ ಗುಣ ಈ ಭಾಷೆಯ ಜೇನಿನಂತರ ಸಿಹಿ ಗುಣ. ನೊಂದವರಿಗೆ, ನಿರಾಶ್ರಿತರಿಗೆ ಸಹಾಯಾಸ್ತ ನೀಡುವ ಸಂಸ್ಕøತಿ ನಮ್ಮದು. ಸಹಬಾಳ್ವೆಯ  ನೆಮ್ಮದಿಯ ಬದುಕಿಗೆ ಒತ್ತು ಕೊಡುವ ಜಿಲ್ಲೆ ನಮ್ಮದು. ಕನ್ನಡ ಭಾಷೆ ಶ್ರೀಮಂತಭಾಷೆ. ಕನ್ನಡ ಕಸ್ತೂರಿ ಎಂದೇ ಹೆಸರಾದ ಭಾಷೆ. ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಲಭಿಸಿರುವುದು ಕನ್ನಡ ಭಾಷೆಗೆ ಹಿಂದಿ ಮತ್ತು ಇಂಗ್ಲೀಷ್ ಪ್ರಭಾವಕ್ಕೆ ಮೈ ಒಡ್ಡಿದ ಭಾಷೆ ಕನ್ನಡ ತನ್ನ ತನವನ್ನು ಉಳಿಸಿಕೊಂಡಿರುವ ಮೇರು ಭಾಷೆ ನಮ್ಮದು ಎಂದು ಹೇಳಿದರು.
ಜಾತಿ, ಮತ, ಪಂಥಕ್ಕಿಂತ ಮೀರಿದ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಸಹೋದರತೆ, ಸಮಾನತೆ, ಸಾಮರಸ್ಯದ ಬದುಕನ್ನು ಮೈಗೂಡಿಸಿಕೊಳ್ಳೋಣ. ಜಾತಿಯ ಜೆಡ್ಡುಗಟ್ಟಿದ ಕೊಳೆಯನ್ನು ಜ್ಞಾನದ ಕಾರಂಜಿಯಲ್ಲಿ ತೊಳೆದು ನೀತಿಯ ಬೀಜವ ಭಿತ್ತಿ ನೆಮ್ಮದಿ ಫಲವ ಪಡೆದು ಫಲವತ್ತಾದ ಮಾನವೀಯತೆಯ ಬೆಳೆಯನ್ನು ಬೆಳೆಯೋಣ. ಅದುವೇ ಬುದ್ಧ ಸಾರಿದ್ದು. ಬಸವಣ್ಣ ಹೇಳಿದ್ದು. ಅಂಬೇಡ್ಕರ್ ಪ್ರತಿಪಾದಿಸಿದ್ದು. ಇದುವೇ ಮಾನವೀಯ ಧರ್ಮ ಪ್ರತಿಷ್ಟಾಪನೆಗೆ ನಾಂದಿ. ನೆಮ್ಮದಿಯ ಜೀವನಕ್ಕೆ ದಾರಿ. ಇದುವೇ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾದ ಹಾದಿಯಾಗಿದೆ ಎಂದು ತಿಳಿಸಿದರು.
ಮಂಡ್ಯ ನನಗೆ ಜನ್ಮ ಕೊಟ್ಟ ಜಿಲ್ಲೆ. ಕೋಲಾರ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ. ಈ ಎರಡೂ ಜಿಲ್ಲೆಯನ್ನು ಪ್ರತಿನಿಧಿಸುವ ಸೌಭಾಗ್ಯ ನನ್ನದು. ನಾನು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ಹುಟ್ಟಿದವನು. ಈ ಜಿಲ್ಲೆಯ ಮಣ್ಣಿನಲ್ಲಿ ಬೆಳೆದವನು. ಈ ಜಿಲ್ಲೆಯ ನೀರು ಕುಡಿದವನು. ಪ್ರಾಥಮಿಕ ಶಿಕ್ಷಣವನ್ನು ಈ ಜಿಲ್ಲೆಯಲ್ಲಿ ಪಡೆದವನು. ಇಲ್ಲಿನ ಅನೇಕ ಗಣ್ಯರ ಪ್ರೀತಿ, ವಿಶ್ವಾಸ ಗಳಿಸಿಕೊಂಡವನು. ಈ ಜಿಲ್ಲೆಯ ಮಣ್ಣಿನ ಋಣ ನನ್ನನ್ನು ಇಂದು ಕವಿಯಾಗಿಸಿದೆ. ಸಾಹಿತಿಯಾಗಿಸಿದೆ. ಒಬ್ಬ ಪತ್ರಕರ್ತನಾಗಿಸಿದೆ. ಶಿಕ್ಷಣ ತಜ್ಞನನ್ನು ಮಾಡಿದೆ ಎಂದು ಸ್ಮರಿಸಿಕೊಂಡರು.
ಮಂಡ್ಯ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕøತಿಗಳ ತವರು. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡವನ್ನು ಮಾತನಾಡುವ ಜಿಲ್ಲೆ ಮಂಡ್ಯ ಎಂಬ ಹೆಗ್ಗಳಿಕೆ ನಮ್ಮದು. ಪುರಾಣ ಕಾಲದಲ್ಲಿ ‘ಮಾಂಡವ್ಯ’ ಎಂಬ ಮುನಿಯೊಬ್ಬ ಇಲ್ಲಿ ತಪ್ಪಸ್ಸು ಮಾಡುತ್ತಿದ್ದ. ‘ಮಾಂಡವ್ಯ’ ತಪೋ ಭೂಮಿಯಾದ್ದರಿಂದ ಈ ಪ್ರದೇಶಕ್ಕೆ ‘ಮಂಡ್ಯ’ ಎಂದಾಯಿತು. ಮೈಸೂರು ವಿಭಾಗಕ್ಕೆ ಸೇರಿದ್ದ ಮಂಡ್ಯ ಜಿಲ್ಲೆ ಜುಲೈ 7, 1939ರಂದು ಸ್ವತಂತ್ರ್ಯ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂತು. ನಾಡಶಿಲ್ಪಿ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ 1911ರಿಂದ 1932ರವರೆಗೆ ಕನ್ನಂಬಾಡಿಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿ ಕಾವೇರಿ ಈ ಪ್ರಾಂತ್ಯದಲ್ಲಿ ಹರಿದು ಬರಡಾಗಿದ್ದ ಮಂಡ್ಯ ಅಚ್ಚ ಹಸಿರಾಯಿತು. ಇಲ್ಲಿ ಭತ್ತ, ರಾಗಿ, ಕಬ್ಬು, ತೆಂಗು ಕಂಗೊಳಿಸಿ ಸಮೃದ್ಧ ಜಿಲ್ಲೆಯಾಯಿತು ಎಂದು ಶ್ಲಾಘಿಸಿದರು.
ಏಷ್ಯಾದಲ್ಲೇ ಪ್ರಪ್ರಥಮ ಬಾರಿಗೆ 1902ರಲ್ಲಿ ಶಿಂಷಾದಲ್ಲಿ ಜಲವಿದ್ಯುತ್ ಕೇಂದ್ರ ಸ್ಥಾಪನೆಗೊಂಡು ನಾಡಿಗೆ ಬೆಳಕು ನೀಡಿದ ಕೀರ್ತಿ ಮಂಡ್ಯ ಜಿಲ್ಲೆಯದ್ದು. ಲೆಸ್ಸಿ. ಸಿ ಕೋಲ್ಮನ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಕಾಳಜಿಯಿಂದ ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡು ಕಬ್ಬು ಬೆಳೆಯಲು ಆರಂಭಿಸಿ ಸಕ್ಕರೆಯ ನಾಡಾಯಿತು. ಪೂರಕವಾಗಿ ವಿ.ಸಿ.ಫಾರಂ ಬಳಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡು ಕೃಷಿಯಲ್ಲಿ ಹತ್ತು ಹಲವು ಆವಿಷ್ಕಾರ ನಡೆದು ‘ಭತ್ತದ ಕಣಜ’ ಎಂಬ ಹಿರಿಮೆಗೆ ಪಾತ್ರವಾಯಿತು. ವಿಶ್ವವಿಖ್ಯಾತ ದಸರಾಗೆ ತವರು ಮಂಡ್ಯ ಜಿಲ್ಲೆ. 1610ರಿಂದ 1799ರವರೆಗೆ ಶ್ರೀರಂಗಪಟ್ಟಣದಲ್ಲಿ ದಸರಾ ವೈಭವಯುತವಾಗಿ ನಡೆಯುತ್ತಿತ್ತು. ಆನಂತರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತು. ಮಂಡ್ಯ ಜಿಲ್ಲೆ ಹೋರಾಟಕ್ಕೆ ಹೆಸರುವಾಸಿ. ಶಿವಪುರದ ಧ್ವಜಸತ್ಯಾಗ್ರಹದ ಸ್ವಾತಂತ್ರ್ಯ ಹೋರಾಟ, ವರುಣಾ ಚಳುವಳಿ, ಕಾವೇರಿ ಚಳುವಳಿ, ರೈತ ಚಳುವಳಿ ಇತ್ಯಾದಿ ಚಳುವಳಿಗಳು ಡಾ. ಜಿ.ಮಾದೇಗೌಡ, ಇಂಡುವಾಳು ಹೊನ್ನಯ್ಯ, ಕೆ.ವಿ. ಶಂಕರಗೌಡ, ಡಾ. ಎಚ್.ಡಿ.ಚೌಡಯ್ಯ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್, ನಂಜುಂಡೇಗೌಡ, ಸುನಂದಾ ಜಯರಾಂ ಹೀಗೆ ಹಲವರ ನೇತೃತ್ವದಲ್ಲಿ ನಡೆದು ರಾಜ್ಯದ ಗಮನ ಸೆಳೆದು. ಬೇಡಿಕೆಗಳು ಈಡೇರಿದ ನಿದರ್ಶನ ನಮ್ಮ ಕಣ್ಣ ಮುಂದೆ ಇವೆÉ ಎಂದರು.
ಚಲನಚಿತ್ರ ರಂಗದ ಅನಭಿಷÀಕ್ತ ದೊರೆ ಡಾ.ಅಂಬರೀಷ್, ನಿರ್ದೇಶಕರಾದ ಬಿ.ಎಸ್.ರಂಗಾ, ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಮಹೇಶ್ ಸುಖಧರೆ, ಯುವ ನಿರ್ದೇಶಕರಾದ ಪ್ರೇಮ್, ಎ.ಪಿ.ಅರ್ಜುನ್ ಇತ್ಯಾದಿ ಮಂಡ್ಯದಲ್ಲಿ ಹುಟ್ಟಿ ಬೆಳೆದು ನಾಡು, ನುಡಿ, ಕಲೆ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದ್ದಾರೆ.  ಪರಮ ಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ಶ್ರೀ ಕ್ಷೇತ್ರ ಆದಿಚುಂಚನಗಿರಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಹಿಮಾಲಯದ ಎತ್ತರಕ್ಕೆ ಏರಿದವರು. ಮಂಡ್ಯ ನಗರದ ಪ್ರಪ್ರಥಮ ಪರಿಶಿಷ್ಟ ಜಾತಿಗೆ ಸೇರಿದ ದಿ.ಎಸ್.ಹೊನ್ನಯ್ಯ, ರಾಷ್ಟ್ರ ರಾಜಕಾರಣದಲ್ಲಿ ಮಿನುಗುತಾರೆಯಾಗಿ ವಿಜೃಂಭಿಸಿದ ಎಸ್.ಎಂ.ಕೃಷ್ಣ ದಾಖಲಾರ್ಹರು ಎಂದರು.
‘ಗೋವಿನ ಹಾಡು’ ಎಂಬ ಪುಣ್ಯಕೋಟಿಯ ಕಥೆಯನ್ನು ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಮಂಡ್ಯ ಜಿಲ್ಲೆಯ ವೈದ್ಯನಾಥಪುರದ ಗೊಲ್ಲಗೌಡನಿಗೆ ಸಲ್ಲುತ್ತದೆ. ಅಲ್ಲದೇ ಕನ್ನಡದ ಪ್ರಪ್ರಥಮ ನಾಟಕ ಮಿತ್ರವೃಂದಾ ಗೋವಿಂದಾ ಕೃತಿಯನ್ನು ಶ್ರೀರಂಗಪಟ್ಟಣದ ಸಿಂಗಾರಾರ್ಯ ರಚಿಸಿದ. ಬೆಳ್ಳಿ ಮೋಡದ ಖ್ಯಾತಿಯ ಕಾದಂಬರಿಗಾರ್ತಿ ತ್ರಿವೇಣಿ ಮಂಡ್ಯ ನಗರದವರು ಎಂಬುದು ನಮ್ಮ ಹೆಗ್ಗಳಿಕೆ. ಮಂಡ್ಯ ಜಿಲ್ಲೆಯ ಸಾಹಿತ್ಯಕವಾಗಿ ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ. ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ ಆರಂಭ ಈ ಪ್ರದೇಶದ ಕವಿಗಳಿಂದ ಆಗಿದೆ. ಯಕ್ಷಗಾನದ ಮೊದಲ ಕವಿ ಕೆಂಪಣ್ಣಗೌಡ ಈ ಪ್ರದೇಶದವರು. ಷೇಕ್ಸ್‍ಪಿಯರ್ ನಾಟಕಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ಭಾಷಾಂತರಿಸಿದ ಕೀರ್ತಿ ಮದ್ದೂರಿನ ಎಂ.ಎಲ್.ಶ್ರೀಕಂಠೇಶಗೌಡ ಅವರಿಗೆ ಸಲ್ಲುತ್ತದೆ. ಆಧುನಿಕ ಕಾವ್ಯಕ್ಕೆ ಮುನ್ನುಡಿಯಾದ ಬಿ.ಎಂ.ಶ್ರೀಕಂಠಯ್ಯ ನಾಗಮಂಗಲದ ಬೆಳ್ಳೂರಿನವರು. ಮೊದಲ ವ್ಯಾಕರಣ ಬರೆದ ಕೃಷ್ಣಮಾಚಾರ್ಯ ಮಂಡ್ಯ ಜಿಲ್ಲೆಯವರು. ಸಂಶೋಧನೆಗೆ ನಾಂದಿಯಾಡಿದ ರಾ.ನರಸಿಂಹಚಾರ್ಯ ಈ ನೆಲದವರು. ಹೀಗೆ ಆಧುನಿಕ ಕನ್ನಡ ಸಾಹಿತ್ಯದ ಮೊದಲುಗಳೆಲ್ಲಾ ಈ ನೆಲದಿಂದ ಆರಂಭವಾಗಿವೆ ಎಂದು ಹೇಳಿದರು.
ಇನ್ನು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ. ಜನಪದ ಕ್ಷೇತ್ರದ ಮೊಟ್ಟ ಮೊದಲ ಕೃತಿ ಎಂದು ಗುರುತಿಸಿಕೊಳ್ಳುವ ‘ಹುಟ್ಟಿದ ಹಳ್ಳಿ ಹಳ್ಳಿ ಹಾಡು’ ಎಂಬ ಕೃತಿ ಕೆ.ಆರ್.ಪೇಟೆಯ ಅರ್ಚಕ ರಂಗಸ್ವಾಮಿ ಅವರು ಸಂಪಾದಿಸಿ ನೀಡಿದ್ದಾರೆ. ಜನಪದ ಲೋಕದ ರೂವಾರಿ ಎಚ್.ಎಲ್.ನಾಗೇಗೌಡ,  ಜಾನಪದ ಕ್ಷೇತ್ರದ ಪಂಪ ಡಾ.ಜೀ.ಶಂ.ಪ. ಈ ನೆಲದವರು. ಕ.ರಾ.ಕೃಷ್ಣಮೂರ್ತಿ ಇವರೆಲ್ಲಾ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಿಕುಪಾಧ್ಯಾಯ, ಸಂಚಿ ಹೊನ್ನಮ್ಮ, ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ, ಎಂ.ಆರ್.ಶ್ರೀನಿವಾಸಮೂರ್ತಿ, ಎ.ಎನ್.ಮೂರ್ತಿರಾವ್, ಬಿ.ಸಿ.ರಾಮಚಂದ್ರಶರ್ಮ, ಡಾ.ರಾಮೇಗೌಡ, ಡಾ.ಲತಾರಾಜಶೇಖರ್, ಡಾ.ಪದ್ಮಾಶೇಖರ್, ನ.ಭದ್ರಯ್ಯ, ಪ್ರೊ.ಸುಜನಾ, ಹ.ಕ.ರಾಜೇಗೌಡ, ಡಾ.ಬೆಸಗರಹಳ್ಳಿ ರಾಮಣ್ಣ, ಹುಲ್ಕೆರೆ ರಮೇಶ್, ಪ್ರೊ.ಡಿ.ಲಿಂಗಯ್ಯ, ಆರ್ಯಾಂಬ ಪಟ್ಟಾಭಿ, ಆ.ರಾ.ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್, ಶಿವಳ್ಳಿ ಕೆಂಪೇಗೌಡ, ಪತ್ರಕರ್ತ ಹಾಗೂ ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ, ಕ್ಯಾತನಹಳ್ಳಿ ರಾಮಣ್ಣ ಹಾಗೂ ನಿಘಂಟು ತಜ್ಞ ಡಾ.ವೆಂಕಟಸುಬ್ಬಯ್ಯ ಮುಂತಾದವರು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಹಿರಿಯರ ಹಾದಿಯಲ್ಲೇ ನೂರಾರು ಮಂದಿ ಕಿರಿಯರು ಸಾಹಿತ್ಯ ಕೃಷಿಯನ್ನು ಮಾಡುತ್ತಾ ನಾಡು, ನುಡಿಯನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದರು.

No comments:

Post a Comment