Friday 19 February 2016

:  ವಾಹನಗಳ ಸಂಚಾರ ಮಾರ್ಗ ಬದಲು
ಮೈಸೂರು, ಫೆಬ್ರವರಿ 19- ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲ್ಲೂಕಿನÀಲ್ಲಿ ಫೆಬ್ರವರಿ 20 ರಿಂದ 22ರವರೆಗೆ ನಡೆಯಲಿರುವ 10ನೇ ಮಹಾಕುಂಭಮೇಳ ಮಹೋತ್ಸವದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು, ಪ್ರವಾಸಿಗರು ಮತ್ತು ಗಣ್ಯಾತಿಗಣ್ಯರ ಆಗಮಿಸುವ ಹಿನ್ನಲೆ ಸಂಚಾರ ಹಾಗೂ ಸುರಕ್ಷತೆಗೆ ಆದ್ಯತೆ ನೀಡಬೇಕಾಗಿರುವುದರಿಂದ ಕಾವೇರಿ ನದಿಯ ಸೇತುವೆಯ ಮೇಲೆ ಅತೀ ಗಣ್ಯರ ಮತ್ತು ತುರ್ತು ಸೇವಾ ವಾಹನ ಸಂಚಾರವನ್ನು ಹೊರತುಪಡಿಸಿ ಇತರೆ ವಾಹನಗಳ ಸಂಚಾರ ಮಾರ್ಗವನ್ನು ಬದಲಿಸಲಾಗಿದೆ.
  ಮೈಸೂರಿನಿಂದ ಟಿ. ನರಸಿಪುರಕ್ಕೆ ವಿಶೇಷವಾಗಿ ಕುಂಭಮೇಳಕ್ಕೆ ಬರುವಂತಹ ಬಸ್ಸುಗಳು ಮತ್ತು ಇತರೆ ಸಾರ್ವಜನಿಕ ವಾಹನಗಳನ್ನು ರಾಷ್ಟ್ರೀಯ ಹೆದ್ದಾರಿ 212 ರ ಟಿ.ನರಸಿಪುರ-ಮೈಸೂರು ಮುಖ್ಯ ರಸ್ತೆಯ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ನಿರ್ಮಿಸಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಜನರನ್ನು ಇಳಿಸಿ, ಅಲ್ಲಿಂದಲೇ ಜನರನ್ನು ಕೂರಿಸಿಕೊಂಡು ಅದೇ ಮಾರ್ಗವಾಗಿ ವಾಪಸ್ ಮೈಸೂರಿಗೆ ತೆರಳಬೇಕು.
  ಮೈಸೂರಿನಿಂದ ಚಾಮರಾಜನಗರ, ಕೊಳ್ಳೇಗಾಲ, ತಲಾಕಾಡು ಮತ್ತು ತಮಿಳುನಾಡು ಕಡೆಗಳಿಗೆ ಟಿ.ನರಸಿಪುರ ಮಾರ್ಗವಾಗಿ ಹೋಗುವ ಸರ್ಕಾರಿ ಬಸ್ಸುಗಳು ಮತ್ತು ಕೆ.ಎಸ್.ಆರ್.ಟಿ.ಸಿ.ಬಸ್ಸುಗಳು, ಇತರೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವ ವಾಹನಗಳು ಗರ್ಗೇಶ್ವರಿ ಮತ್ತು ಟಿ. ನರಸಿಪುರ ಟೌನ್‍ಗೆ ಮಧ್ಯೆ ಇರುವ ರಾಷ್ಟ್ರೀಯ ಹೆದ್ದಾರಿ 212 ರ ಟಿ. ನರಸೀಪುರ-ಮೈಸೂರು ಮುಖ್ಯ ರಸ್ತೆಯ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ನಿರ್ಮಿಸಲಿರುವ ತಾತ್ಕಾಲಿಕ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಕುಂಭಮೇಳಕ್ಕೆ ಬರುವಂತಹ ಭಕ್ತಾಧಿಗಳನ್ನು ಹಾಗೂ ಸಾರ್ವಜನಿಕರನ್ನು ಇಳಿಸಿ, ನಂತರ ಹೊಸದಾಗಿ ನಿರ್ಮಿಸಿರುವ ಕಪಿಲಾ ಸೇತುವೆಯ ಮೇಲೆ ಸಂಚರಿಸಿ ಟಿ.ನರಸೀಪುರ ಪಟ್ಟಣಕ್ಕೆ ಆಗಮಿಸುವ ಸಾರ್ವಜನಿಕರನ್ನು ಟಿ.ನರಸೀಪುರ ಟೌನ್‍ನ ಸಂತೇಮಾಳದಲ್ಲಿ ತಾತ್ಕಾಲಿಕವಾಗಿ ನಿರ್ಮಿಸಲಿರು ಬಸ್ ನಿಲ್ದಾಣದಲ್ಲಿ ಇಳಿಸಿ, ನಂತರ ತಲಕಾಡು, ಕೊಳ್ಳೇಗಾಲ, ಚಾಮರಾಜನಗರ ಮತ್ತು ತಮಿಳುನಾಡು ಕಡೆಗಳಿಗೆ ಸಂಚರಿಸಬೇಕು.
  ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡಿನಿಂದ ಟಿ.ನರಸೀಪುರ ಮಾರ್ಗವಾಗಿ ಮೈಸೂರಿಗೆ ಹೋಗುವ ಸರ್ಕಾರಿ ಬಸ್ಸುಗಳು, ಕೆ.ಎಸ್.ಆರ್.ಟಿ.ಸಿ.ಬಸ್‍ಗಳು ಹಾಗೂ ಇತರೆ ಸಾರ್ವಜನಿಕರನ್ನು ಸಾಗಾಣಿಕೆ ಮಾಡುವ ವಾಹನಗಳು, ಟಿ.ನರಸೀಪುರ ಸಂತೇಮಾಳದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಿರು ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ, ನೂತನಾಗಿ ನಿರ್ಮಿಸಿರುವ ಕಪಿಲಾ ಸೇತುವೆಯ ಮೇಲೆ ಸಂಚರಿಸಿ ಟಿ. ನರಸೀಪುರ ಟೌನ್‍ನ ಸಮೀಪ ಇರುವ ಬಿಂದಿಗೆ ಫ್ಯಾಕ್ಟರಿಯ ಬಳಿ ತಾತ್ಕಾಳಿಕವಾಗಿ ನಿರ್ಮಿಸಲಿರುವ ಬಸ್ ನಿಲ್ದಾಣದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ ನಂತರ ಮೈಸೂರಿಗೆ ಸಂಚರಿಸಬೇಕು.
  ಮೈಸೂರಿನಿಂದ ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಮತ್ತು ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಂದ ಮೈಸೂರು ಮಂಡ್ಯ ಕಡೆಗಳಿಗೆ ಹೋಗುವಂತಹ ಎಲ್ಲಾ ರೀತಿಯ ವಾಹನಗಳು ಟಿ.ನರಸೀಪುರ ಟೌನ್‍ನ ಸಂತೇಮಾಳದಿಂದ ಬಿಂದಿಗೆ ಫ್ಯಾಕ್ಟರಿಯವರೆಗೆ ನಿಲುಗಡೆ ಮಾಡುವಂತಿಲ್ಲ.  ವಿಶೇಷವಾಗಿ ಭಾರಿ  ವಾಹನಗಳಾಗಲ್ಲಿ ಅಥವಾ ಇನ್ನಿತರೆ ಯಾವುದೇ ವಾಹನಗಳಾಗಲ್ಲಿ ಟಿ.ನರಸೀಪುರ ಟೌನ್‍ನ  ಶ್ರೀ ಗುಂಜಾನರಸಿಂಹಸ್ವಾಮಿ ದೇವಾಲಯದ ಬಳಿ ನಿಲ್ಲಿಸುವಂತಿಲ್ಲ.
  ಮಂಡ್ಯ, ಮಳವಳ್ಳಿ, ಬನ್ನೂರ ಹಾಗೂ ದೊಡ್ಡೇಬಾಗಿಲು ಕಡೆಗಳಿಂದ  ಟಿ.ನರಸೀಪುರದ ಕಡೆಗೆ ಬರುವ ವಾಹನಗಳು- ಕೆಂಡನಕೊಪ್ಪಲು ಗ್ರಾಮದ ಬಳಿ ತಾತ್ಕಾಲಿಕವಾಗಿ ನಿರ್ಮಿಸಲಿರುವ ತಾತ್ಕಾಲಿಕ ವಾಹನ ನಿಲುಗಡೆ ಜಾಗದಲ್ಲಿ ನಿಲುಗಡೆ ಮಾಡಿ ಸಾರ್ವಜನಿಕರನ್ನು ಹಾಗೂ ಕುಂಭಮೇಳಕ್ಕೆ ಆಗಮಿಸುವ ಭಕ್ತಾಧಿಗಳನ್ನು ಇಳಿಸಿ ಅಲ್ಲಿಂದಲೇ ಸಾರ್ವಜನಿಕರನ್ನು ಹಾಗೂ ಭಕ್ತಾಧಿಗಳನ್ನು ಕೂರಿಸಿಕೊಂಡು ಅದೇ ಮಾರ್ಗವಾಗಿ ವಾಪಸ್ ಹೋಗಬೇಕು.
 ಬನ್ನೂರು, ಮಳವಳ್ಳಿ ಮಂಡ್ಯ ಕಡೆಗಳಿಂದ ನಂಜನಗೂಡಿಗೆ ತೆರಳುವ ಭಾರಿ ಸಾಗಾಣಿಕೆ ವಾಹನಗಳು ಹಾಗೂ ವಿಶೇಷವಾಗಿ ಕಬ್ಬು ಸಾಗಾಣಿಕೆ ಮಾಡುವ ವಾಹನಗಳು ಬನ್ನೂರು ಮೈಸೂರು ಮಾರ್ಗವಾಗಿ ನಂಜನಗೂಡಿಗೆ ತೆರಳುವುದು. ಹಾಗೂ ಅದೇ ಮಾರ್ಗದಲ್ಲಿ ವಾಪಸ್ ಬನ್ನೂರು-ಮಳವಳ್ಳಿ-ಮಂಡ್ಯ ಕಡೆಗಳಿಗೆ ತೆರಳಬೇಕು.
 ಬನ್ನೂರಿನಿಂದ ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಹೋಗುವ ವಾಹನಗಳು ಬನ್ನೂರು-ಸೋಸಲೆ-ಪೂರಿಗಾಲಿ-ಸರಗೂರು ಹ್ಯಾಂಡ್ ಪೋಸ್ಟ್ ಮಾರ್ಗವಾಗಿ ಚಲಿಸುವುದು. ಕೊಳ್ಳೆಗಾಲ,  ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಂದ  ಬನ್ನೂರಿಗೆ ಹೋಗುವ ವಾಹನಗಳು ಸರಗೂರು ಹ್ಯಾಂಡ್ ಪೋಸ್ಟ್-ಪೂರಿಗಾಲಿ-ಸೋಸಲೆ-ಬನ್ನೂರು ಮಾರ್ಗವಾಗಿ ಚಲಿಸುವುದು. ಮಂಡ್ಯ-ಮಳವಳ್ಳಿ-ಬನ್ನೂರು ಕಡೆಯಿಂದ ಟಿ.ನರಸೀಪುರಕ್ಕೆ ಬರುವ (ಕುಂಭಮೇಳ ಹೊರತುಪಡಸಿ)ನರಸೀಪುರ ದಾಟುವ ವಾಹನಗಳು ಇತರೆ ವಾಹನಗಳು ರಂಗಸಮುದ್ರ, ಯಡದೊರೆ ಮಾರ್ಗದಲ್ಲಿ ಬರಬೇಕು.
 ನಂಜನಗೂಡಿನಿಂದ ಟಿ. ನರಸೀಪುರ ಪಟ್ಟಣಕ್ಕೆ ಹಾಗೂ ಕುಂಭಮೇಳಕ್ಕೆ ಆಗಮಿಸುವ ವಾಹನಗಳು, ಖಾಸಗಿ ಬಸ್‍ಗಳು,ಬಾರಿ ವಾಹನಗಳು, ಕೆ.ಎಸ್.ಆರ್.ಟಿ.ಸಿ ಬಸ್‍ಗಳು ಟಿ.ನರಸೀಪುರ ಟೌನ್ ನ ನಂಜನಗೂಡು-ಟಿ.ನರಸೀಪುರ ಮುಖ್ಯ ರಸ್ತೆಯ ಸಮೀಪ ಇರುವ ಎ.ಪಿ.ಎಂ.ಸಿ. ಆವರಣದಲ್ಲಿ ನಿಲುಗಡೆ ಮಾಡಿ ನಂತರ ಅದೇ ಮಾರ್ಗವಾಗಿ ನಂಜನಗೂಡಿಗೆ ತೆರಳಬೇಕು.
 ಮಂಡ್ಯ, ಮೈಸೂರಿನಿಂದ ಕೊಳ್ಳೇಗಾಲ, ಚಾಮರಾಜನಗರ, ತಲಕಾಡು ಹಾಗೂ ತಮಿಳುನಾಡು ಕಡೆಗಳಿಗೆ ಮತ್ತು ತಮಿಳುನಾಡು, ಕೊಳ್ಳೆಗಾಲ, ಚಾಮರಾಜಗರ, ತಲಕಾಡು ಕಡೆಗಳಿಂದ ಮಂಡ್ಯ ಮೈಸೂರಿಗೆ ಹೋಗುವಂತಹ ಎಲ್ಲಾ ರೀತಿಯ ವಾಹನಗಳು ಟಿ.ನರಸೀಪುರ ಟೌನ್ ನ ಕಪಿಲಾ ನದಿಗೆ ಹೊಸದಾಗಿ ನಿರ್ಮಿಸಿರುವ ಸೇತುವೆಯ ಮೂಲಕ ಮುಖ್ಯ ರಸ್ತೆಯಲ್ಲಿ ಸಂಚರಿಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಕುಂಭಮೇಳ: ಜಿಲ್ಲಾಧಿಕಾರಿಯಿಂದ ಸ್ಥಳ ಪರಿಶೀಲನೆ


ಮೈಸೂರು, ಫೆಬ್ರವರಿ 19.ನರಸೀಪುರ ತಾಲ್ಲೂಕಿನ ತಿರುಮಲಕೊಡಲಿನಲ್ಲಿ ಫೆಬ್ರವರಿ 20 ರಿಂದ 22 ರವರೆಗೆ ಜರುಗಲಿರುವ ಮಹಾಕುಂಭಮೇಳ ಮಹೋತ್ಸವದ ಅಂಗವಾಗಿ ಮೈಸೂರು ಜಿಲ್ಲೆಯ ಜಿಲ್ಲಾಧಿಕಾರಿ ಸಿ.ಶಿಖಾ ಅವರು ಗುರುವಾರ ವಿವಿಧ ಇಲಾಖೆಗಳ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾಡಳಿತದಿಂದ ಕೈಗೊಂಡಿರುವ ಕಾಮಗಾರಿಗಳನ್ನು ಪರಿಶೀಲಿಸಿದರು.
   ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯವರು ತಿರುಮಕೋಡಲಿಗೆ ಹೋಗುವ ರಸ್ತೆಯನ್ನು ಮತ್ತಷ್ಟು ಸದೃಢಗೊಳಿಸಲು ಮತ್ತು ವಿ.ಐ.ಪಿ ಪಾರ್ಕಿಂಗ್ ವ್ಯವಸ್ಥೆ ಹೆಚ್ಚುವರಿಯಾಗಿ ಮಾಡಲು, ಬಾಕಿ ಉಳಿದಿರುವ ದೇವಾಲಯಗಳ ಸುಣ್ಣ ಬಣ್ಣ ಪೂರ್ಣಗೊಳಿಸಲು ಹಾಗೂ ನೀರನ್ನು ಶುದ್ಧಗೊಳಿಸಿ ವಿತರಿಸುವ ವ್ಯವಸ್ಥೆಯನ್ನು ಮಾಡಬೇಕು ಎಂದು ನಿರ್ದೇಶಿಸಿದರು.
 ಅಗಸ್ತೇಶ್ವರ ದೇವಾಲಯದ ಬಳಿ ನಿರ್ಮಿಸಿರುವ ತಾತ್ಕಾಲಿಕ ಸೋಪಾನದಲ್ಲಿ ಭದ್ರತೆ ದೃಷ್ಠಿಯಿಂದ ಬ್ಯಾರಿಕೇಡ್,   ನದಿಯಲ್ಲಿ ಭಕ್ತಾಧಿಗಳು ಸ್ನಾನ ಮಾಡಲು ಅನುವಾಗುವಂತೆ ಸೂಚಿಸಲಾದ ಹೆಚ್ಚವರಿ ಪ್ರದೇಶದಲ್ಲಿ ಹೆಚ್ಚುವರಿ ಬ್ಯಾರಿಕೇಡ್ ಮತ್ತು ಗಣ್ಯ ವ್ಯಕ್ತಿಗಳ ಸ್ನಾನ ಮಾಡುವ ಸ್ಥಳವನ್ನು ಶುದ್ಧಗೊಳಿಸಿ ಸ್ನಾನ ಮಾಡಲು ಅನುಕೂಲವಾಗುವಂತೆ ಬ್ಯಾರಿಕೇಡ್ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಸೂಚಿಸಿದರು. ಅಲ್ಲದೆ ತಾತ್ಕಾಲಿಕ ಸೋಪಾಲ ನಿರ್ಮಿಸಲು ಕಾವೇರಿ ನೀರಾವರಿ ನಿಗಮ ಮತ್ತು ಲೋಕೋಪಯೋಗಿ ಇಲಾಖೆಯವರು ಕ್ರಮವಹಿಸಲು ತಿಳಿಸಿದರು.
 ಆರೋಗ್ಯ ದೃಷ್ಠಿಯಿಂದ ಎಲ್ಲಾ ರೀತಿಯ ಮುನ್ನೆಚ್ಚರಿಕಾ ಕ್ರಮಗಳನ್ನು ಆರೋಗ್ಯ ಇಲಾಖೆವಹಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಯವರು ಕಾರ್ಯಕ್ರಮ ನಡೆಯುವ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛಗೊಳಿಸಲು ಪುರಸಭೆವತಿಯಿಂದ  ತಲಾ 10 ಮಂದಿ ಇರುವ 3 ತಂಡಗಳನ್ನು ರಚಿಸಿ 24 ಘಂಟೆಗಳೂ ನಿರಂತರ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗಳಿಗೆ ತಿಳಿಸಿದರು.
 ಯಾವುದೇ ರೀತಿಯ ಅವWಡಗಳು ಸಂಬವಿಸದಂತೆ, ಮುನ್ನೆಚ್ಚರಿಕಾ ಕ್ರಮಗಳನ್ನು ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ವಹಸಿಬೇಕು. ಶುಕ್ರವಾರದೊಳಗೆ ಬಾಕಿ ಉಳಿದಿರುವ ಕಾಮಗಾರಿಗಳು ಪೂರ್ಣಗೊಳಿಸಲು ಎಲ್ಲಾ ಅನುಷ್ಠನಾಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಶಿಖಾ ಹೇಳಿದರು.
 ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಖರೆ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯವಿರ್ನಾಹಕ ಅಧಿಕಾರಿ ಗೋಪಾಲ್ ಹಾಗೂ ಇತರೆ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.
(ಛಾಯಾಚಿತ್ರ ಲಗತ್ತಿಸಿದೆ)
ಶಿವಾಜಿ ದೇಶಕಂಡ ಮಹಾನ್ ವ್ಯಕ್ತಿತ್ವದ ವೀರ ಮಹಾರಾಜ


ಮೈಸೂರು, ಫೆಬ್ರವರಿ 19. ಛತ್ರಪತಿ ಶಿವಾಜಿ ದೇಶಕಂಡ ಮಹಾನ್ ವ್ಯಕ್ತಿತ್ವದ ವೀರ ಮಹಾರಾಜ ಹಾಗೂ ಉತ್ತಮ ಆಡಳಿತಾಧಿಕಾರಿಯಾಗಿದ್ದರು. ಶಿವಾಜಿಯವರ ಆಳ್ವಿಕೆಯಲ್ಲಿ ಎಲ್ಲಾ ಧರ್ಮ ಮತ್ತು ಸಮಾಜದ ಜನರನ್ನು ಸಮಾನ ಗೌರವ ಮತ್ತು ಪ್ರೀತಿಯಿಂದ ನೊಡಲಾಗುತಿತ್ತು ಎಂದು ನಿವೃತ್ತ ಪ್ರಾಧ್ಯಾಪಕಿ ಪ್ರೊ.ಹೆಚ್.ಎಂ. ವಸಂತಮ್ಮ ತಿಳಿಸಿದರು.
 ಇಂದು ಜಿಲ್ಲಾಡಳಿತ ಮತ್ತು ಕನ್ನಡ ಮತ್ತು ಸಂಸ್ಕøತಿ ಇಲಾಖೆವತಿಯಿಂದ ಕಲಾಮಂದಿರ ಮನೆಯಂಗಳದಲ್ಲಿ ನಡೆದ ಛತ್ರಪತಿ ಶಿವಾಜಿಯವರ ಜಯಂತಿ ಕಾರ್ಯಕ್ರಮದಲ್ಲಿ ವಿಷಯ ಉಪನ್ಯಾಸಕಿಯಾಗಿ ಭಾಗವಹಿ ಅವರು ಮಾತನಾಡಿದರು.
 ಅತ್ಯಂತ ಕಿರಿಯ ವಯಸ್ಸಿನಲ್ಲೇ ಛತ್ರಪತಿ ಶಿವಾಜಿಯವರು ತಮ್ಮ ವೀರ ಸಾಮಥ್ರ್ಯವನ್ನು ಮೆರೆದು 40 ಕೋಟೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಶಿವಾಜಿ ತಮ್ಮ ತಾಯಿ ಜೀಜಬಾಯಿ ಅವರು ಮಾಗದರ್ಶನದಲ್ಲಿ ಜ್ಞಾನವನ್ನು ಸಂಪಾದಿಸಿದರು. ದೇಶ ಭಕ್ತಿಯನ್ನು ಮೈಗೊಡಿಕೊಂಡ ಶಿವಾಜಿ ಮಹಾರಾಜರು ತಮ್ಮ ವೀರ ವ್ಯಕ್ತಿತ್ವದಿಂದ ಯುವಜನರಲ್ಲಿ ದೇಶಭಕ್ತಿಯ ಕಿಚ್ಚನ್ನು ತುಂಬಿದರು ಎಂದು ಹೇಳಿದರು.
 ಬೆಟ್ಟ ಗುಡ್ಡದ ಯುದ್ಧ ವ್ಯವಸ್ಥೆಯಲ್ಲಿ ಹೆಚ್ಚು ಕೀರ್ತಿಯನ್ನು ಪಡೆದಿದ್ದ ಮೊಗಲ್ ದೊರೆ ಔರಂಗಜೇಬ್‍ರಿಂದ ಛತ್ರಪತಿ ಶಿವಾಜಿ ಬೆಟ್ಟ ಗುಡ್ಡದ ಯುದ್ಧ ವ್ಯವಸ್ಥೆಯ ಹುಲಿ ಎಂದೇ ಕೀತಿಗಳಿಸಿದ್ದರು. ತಮ್ಮ ಜ್ಞಾನ ಆಡಳಿತ ಹಾಗೂ ಯುದ್ಧ ಕೌಶಲ್ಯದ ಚತುರತನದಿಂದ ಶತ್ರುಗಳಿಗೆ ಸಿಂಹಸ್ವಪ್ನವಾಗಿ ಕಾಡಿದ್ದರು ಛತ್ರಪತಿ ಶಿವಾಜಿ. ಬಡವರಿಗೆ  ಕಲ್ಯಾಣಕಾರ್ಯಕ್ರಮ ಗಳನ್ನು ನೀಡುತ್ತ, ಅನ್ಯಧರ್ಮದವರಿಗೆ ಗೌರವಿಸುತ್ತ ತಮ್ಮ ರಾಜ್ಯವನ್ನು ಉತ್ತಮವಾಗಿ ಅಭಿವೃದ್ಧಿ ಪಡಿಸಿದ್ದರು  ಎಂದು ತಿಳಿಸಿದರು.
  ಶಿವಾಜಿ ಮಹಾರಾಜರು ಯಾವುದೇ ಆರ್ಥಿಕ ಹಾಗೂ ಸಮಾಜಿಕ ಬೆಂಬಲವಿಲ್ಲದೆ ಸಮಾನ್ಯ ಕುಟುಂಬದಲ್ಲಿ ಜನಿಸಿ ಮರಾಠ ಸಾಮಾಜ್ರ್ಯವನ್ನು ಕಟ್ಟಿ ಬೆಳಿಸಿದರು. ಶಿವಾಜಿ ಮಹಾರಾಜರು ತಮ್ಮ ಆಳ್ವಿಕೆಯಲ್ಲಿ 400ಕ್ಕೂ ಹೆಚ್ಚು ಕೋಟೆಯನ್ನು ವಶಪಡಿಸಿಕೊಂಡಿದ್ದರು. ಶತ್ರು ಎಷ್ಟೇ ಬಲಿಷ್ಟವಾಗಿದ್ದರೂ ಎದೆಗುಂದದೆ ದಿಟ್ಟತನದಿಂದ ಹೋರಾಟ ನಡೆಸಿ, ಯುದ್ಧವನ್ನು ಗೆಲ್ಲುವ ಸಾಮಥ್ರ್ಯವನ್ನು ಹೊಂದಿದ್ದ ಮಹಾ ವೀರ ಸೇನಾನಿ ಎಂದು ತಿಳಿಸಿದರು.
    ಶಿವಾಜಿ ಮಹಾರಾಜರು ಪ್ರತಿಯೊಬ್ಬರಿಗೂ ಸ್ಪೂರ್ತಿ. ದೇಶ ಭಕ್ತಿಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವುದಕ್ಕೆ ಉತ್ತಮ ಉದಾಹರಣೆ ಶಿವಾಜಿ ಮಹಾರಾಜರು. ಮರಾಠಿ ಮಾತನಾಡುವ ಸಮಾಜದವರಿಗೆ ಶಿವಾಜಿ ಮಹಾರಾಜರು ಸೀಮಿತವಲ್ಲ. ಪ್ರತಿಯೊಬ್ಬ ಭಾರತ ದೇಶದ ಪ್ರಜೆಗೂ ಶಿವಾಜಿ ಮಹಾರಾಜ ವ್ಯಕ್ತಿತ್ವ ಹಾಗೂ ಆದರ್ಶ ಮಾರ್ಗದರ್ಶನ ಹಾಗೂ ದಾರಿ ದೀಪ ಎಂದು ತಿಳಿಸಿದರು.
  ಜಿಲ್ಲಾಧಿಕಾರಿ ಸಿ.ಶಿಖಾ ಅವರು ಛತ್ರಪತಿ ಶಿವಾಜಿಯವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
  ಅಪರ ಜಿಲ್ಲಾಧಿಕಾರಿ ವೆಂಕಟೇಶ್, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಬಸಪ್ಪ, ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕರಾದ ಪುಟ್ಟು, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕರಾದ ನಿರ್ಮಲ ಮಠಪತಿ ಹಾಗೂ ಇತರರು ಕಾರ್ಯಕ್ರಮದಲ್ಲಿ ಭಾಗವಹಸಿದರು.

    

No comments:

Post a Comment