Monday 3 November 2014

    
  ಮುಖ್ಯಮಂತ್ರಿ ಸಿದ್ದರಾಮಯ್ಯರವರ  ಪ್ರವಾಸ ಕಾರ್ಯಕ್ರಮ.
    ಮೈಸೂರು.ನ.03.ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನವೆಂಬರ್4 ಹಾಗೂ 5 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
    ನವೆಂಬರ್ 4 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರಿಗೆ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ನವೆಂಬರ್ 5 ಬೆಳಿಗ್ಗೆ 11 ಗಂಟೆಗೆ ಹೊಸ ಸಯ್ಯಾಜಿರಾವ್ ರಸ್ತೆಯಲ್ಲಿರುವ ಧರ್ಮಪ್ರಕಾಶ ಡಿ. ಬನುಮಯ್ಯ ವಿದ್ಯಾಸಂಸ್ಥೆಯ ನೂತನ ಸ್ನಾತಕೋತ್ತರ ವಿಭಾಗವನ್ನು ಉದ್ಘಾಟಿಸುವರು. ಮಧ್ಯಾಹ್ನ 2 ಗಂಟೆಗೆ ಜಗನ್ಮೋಹನ ಪ್ಯಾಲೇಸ್‍ನಲ್ಲಿ ಮೈಸೂರು ಜಿಲ್ಲೆ ಮತ್ತು ಮಂಡ್ಯ ಜಿಲ್ಲೆ ವಿಭಜನೆಯ 75 ವರ್ಷ ತುಂಬಿರುವ ಸಂದರ್ಭದಲ್ಲಿ ಆಯೋಜಿಸಿರುವ ವಜ್ರ ಮಹೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳುವರು. ಸಂಜೆ 4 ಗಂಟೆಗೆ ಮೈಸೂರು ವಕೀಲರ ಸಂಘದ ಕಟ್ಟಡದ ಶಂಕುಸ್ಥಾಪನೆಯಲ್ಲಿ ಭಾಗವಹಿಸಿದ ನಂತರ ರಾತ್ರಿ 7 ಗಂಟೆಗೆ  ಬೆಂಗಳೂರಿಗೆ  ತೆರಳುವರು.
  ದೌರ್ಜನ್ಯ ಪ್ರಕರಣ: ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರಕ್ಕೆ ಜಿಲ್ಲಾಧಿಕಾರಿ ಸೂಚನೆ


ಮೈಸೂರು.ನ.03.ದೌರ್ಜನ್ಯ ಪ್ರಕರಣಗಳಲ್ಲಿ ನೊಂದ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಸಂತ್ರಸ್ಥರಿಗೆ ಸಕಾಲದಲ್ಲಿ ಪರಿಹಾರ ವಿತರಣೆಯಾಗಬೇಕು. ಇಲ್ಲದಿದ್ದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ಸಿ.ಶಿಖಾ ಸೂಚಿಸಿದರು.
     ನಗರದ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಅನುಸೂಚಿತ ಜಾತಿ ಮತ್ತು ಪಂಗಡಗಳ ವರ್ಗಕ್ಕೆ ಸೇರಿದ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
 ಯಾವುದೇ ಕಾರಣಕ್ಕೂ ಪರಿಹಾರ ವಿಳಂಬವಾಗದಂತೆ ಅಧಿಕಾರಿಗಳು ಎಚ್ಚರವಹಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಜನರ ಮೇಲೆ ನಡೆಯುವ ದೌರ್ಜನ್ಯ ಗಂಭೀರವಾದುದು.  ದೌರ್ಜನ್ಯ ಪ್ರಕರಣದಡಿ ದಾಖಲಾದ ಅಪರಾಧಗಳಲ್ಲಿ ಸಂತ್ರಸ್ಥರಿಗೆ ಮಂಜೂರು ಮಾಡಬೇಕಾದ ಪರಿಹಾರ ಮೊತ್ತವನ್ನು ನಿಯಮಾನುಸಾರ ಮಂಜೂರು ಮಾಡಬೇಕು ಮತ್ತು ರೂ. 60000 ವರೆಗೆ ಪರಿಹಾರ ಮಂಜೂರು ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದ ಜಿಲ್ಲಾಧಿಕಾರಿ ದೌರ್ಜನ್ಯ ಪ್ರಕರಣ ದಾಖಲಿಸಿ ಚಾರ್ಜ್‍ಶೀಟ್ ಕಳುಹಿಸಿದ ಕೊಡಲೇ ಮಂಜೂರು ಮಾಡಬೇಕಾದ ಒಟ್ಟು ಮೊತ್ತದಲ್ಲಿ ಶೇ.25 ಪರಿಹಾರ ಮೊತ್ತವನ್ನು ಸಂತ್ರಸ್ಥರಿಗೆ ನೀಡಬೇಕು ಮತ್ತು ಪ್ರಕರಣ ನ್ಯಾಯಾಲಯದಲ್ಲಿ ಇತ್ಯರ್ಥವಾಗಿ ಅರೋಪಿಗೆ ಶಿಕ್ಷೆ ಆದಲ್ಲಿ ಉಳಿಕೆ ಶೇ.75 ಪರಿಹಾರ ಹಣವನ್ನು ಮಂಜೂರು ಮಾಡಬೇಕು ಎಂದರು.
      ದೌರ್ಜನ್ಯಕೊಳ್ಳಗಾದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸಂತ್ರಸ್ಥರು, ಸಾಕ್ಷಿದಾರರಿಗೆ ಹಾಗೂ ಇನ್ನಿತರರು ನ್ಯಾಯಾಲಯದ ವಿಚಾರಣೆಗೆ ಹಾಗೂ ತನಿಖೆ ಸಮಯದಲ್ಲಿ ಹಾಜರಾದಗ ಪ್ರಯಾಣಭತ್ಯೆ, ದಿನಭತ್ಯೆ, ಆಹಾರ ಭತ್ಯೆ ಮತ್ತು  ವೈದ್ಯಕೀಯ ವೆಚ್ಚಗಳನ್ನು ಮಂಜೂರು ಮಾಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ತಹಸೀಲ್ದಾರ್ ಹಾಗೂ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು ನಿಯಾಮನುಸಾರ ಅಗತ್ಯ ಕ್ರಮ ಕೈಗೊಳ್ಳಬೇಕು ತಿಳಿಸಿದರು. 
 ಅಸ್ಪøಶ್ಯತೆ ಆಚರಣೆ ಮತ್ತು ದೌರ್ಜನ್ಯ ಪ್ರಕರಣ ವಿಷಯಕ್ಕೆ ಸಂಬಂಧಿಸಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಅರಿವಿನ ಕೊರತೆ ಇರುವುದರಿಂದ ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು ಹಾಗೂ ಸರ್ಕಾರೇತರ ಸಂಸ್ಥೆಗಳಿಗೆ ಒಟ್ಟಾಗಿ ಒಂದು ದಿನದ ಕಾರ್ಯಗಾರವನ್ನು ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಹಮ್ಮಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಹೇಳಿದರು.
ದೌರ್ಜನ್ಯಕ್ಕೆ ಸಂಬಂಧಪಟ್ಟ ಪ್ರಕರಣಗಳನ್ನು ಪರಿಶಿಷ್ಟ ಜಾತಿ ಮತ್ತು ವರ್ಗಗಳ ಕೇಂದ್ರ ಹಾಗೂ ರಾಜ್ಯ ಆಯೋಗ್ಯಗಳು ಗಂಭೀರವಾಗಿ ಪರಿಗಣಿಸುತ್ತಿದೆ. ಇಂತಹ ಪ್ರಕರಣಗಳಲ್ಲಿ ತಪ್ಪುವೆಸಗಿದವರಿಗೆ ಹೆಚ್ಚಿನ ಸಂಖ್ಯೆಯಲ್ಲಿ ಶಿಕ್ಷೆಯಾಗಬೇಕು. ಆಗಾದರೆ ಮಾತ್ರ ದೌರ್ಜನ್ಯಕ್ಕೊಳಗಾದವರಿಗೆ ಕಾನೂನಿನ ಮೇಲೆ ನಂಬಿಕೆ ಹೆಚ್ಚಾಗುತ್ತದೆ ಎಂದರು. 
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಭಿನವ್ ಕರೆ ಮಾತನಾಡಿ ಪೊಲೀಸ್ ಇಲಾಖೆÀಯು ದೌರ್ಜನ್ಯ, ಅಸ್ಪøಶ್ಯತೆ ಹಾಗೂ ಸಮಾಜದಲ್ಲಿರುವ ಕಾನೂನು ಬಾಹಿರವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗಕ್ಕೆ ಸೇರಿದ ಜನರ ವಿರುದ್ದ ಆಚರಿಸುವ ಅನಿಷ್ಟ ಪದ್ದತಿ ವಿರುದ್ದ ದೂರು ಬಂದಲ್ಲಿ ನಿದ್ರ್ಯಾಕ್ಷಿಣ್ಯವಾಗಿ ಕ್ರಮವಹಿಸುತ್ತಿದೆ. ಪ್ರಕರಣ ದಾಖಲೆ ಮಾಡುವಲ್ಲಿ ಯಾವುದೇ ವಿಳಂಬಕ್ಕೆ ಅವಕಾಶವಿಲ್ಲ. ಪರಿಶಿಷ್ಟ ಜಾತಿ ಮತ್ತು ಪರಿಶೀಷ್ಟ ವರ್ಗದ ಜನರ ದೌರ್ಜನ್ಯ ಗಂಭೀರವಾದ ವಿಷಯ ಎಂದರು. 
ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸರಸ್ವತಿ ಮಾತನಾಡಿ ಮೈಸೂರು ಜಿಲ್ಲೆಯಲ್ಲಿ ಜನವರಿ 1, 2014 ರಿಂದ ಅಕ್ಟೋಬರ್ 31, 2014ರ ವರೆಗೆ ಒಟ್ಟು 94 ದೌರ್ಜನ್ಯ ಪ್ರಕರಣಗಳು ದಾಖಲಾಗಿವೆÉ. ಅದರಲ್ಲಿ 2 ಕೊಲೆ, 3 ಅತ್ಯಾಚಾರ, 7 ಮಹಿಳೆಯ ಮರ್ಯಾದೆಗೆ ಭಂಗ ಉಂಟು ಮಾಡಿರುವುದು, 82 ಹಲ್ಲೆ, ಜಾತಿ ನಿಂದನೆಯಾಗಿದ್ದು, 5 ಪ್ರಕರಣಗಳಲ್ಲಿ ಬಿ ವರದಿ ಬಂದಿವೆÉ ಎಂದರು.
ಕಂದಾಯ ಉಪ ವಿಭಾಗದ ಮಟ್ಟದಲ್ಲಿ ಉಪ ವಿಭಾಗಾಧಿಕಾರಿಯವರ ಅಧ್ಯಕ್ಷತೆಯಲ್ಲಿ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ರಚನೆಯಾಗಿಬೇಕು ಮತ್ತು ಸಮಿತಿಯು ಪ್ರತಿ ಮೂರು ತಿಂಗಳಿಗೊಮ್ಮೆ ಸಭೆಯನ್ನು ನಡೆಸಬೇಕು ಎಂದು ತಿಳಿಸಿದರು.
ಶಾಸಕರಾದ ಚಿಕ್ಕಮಾದು, ಸಾ.ರಾ.ಮಹೇಶ್, ಮಂಜುನಾಥ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ನಿಂಗರಾಜು ಮಲ್ಲಾಡಿ, ಗಾಯಿತ್ರಿ ಮೋಹನ್, ದೇವಳ್ಳಿ ಸೋಮಶೇಖರ್, ಪ್ರಸನ್ನ, ಎಸ್.ರಾಮು. ಡಿ.ಸಿ.ಪಿ ರಾಜಣ್ಣ, ಉಪ ವಿಭಾಗಾಧಿಕಾರಿ ಜಗದೀಶ್ ಹಾಗೂ ಇತರೆ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.        
ಪರವಾನಗಿ ಪಡೆಯದ ಪ್ಯಾಕೇಜ್ ಕುಡಿಯುವ ನೀರಿನ ಘಟಕ ವಿರುದ್ದ ಕ್ರಮ
ಮೈಸೂರು.ನ.03. ಮೈಸೂರು ಮಹಾನಗರಪಾಲಿಕೆ ವ್ಯಾಪ್ತಿ ಮತ್ತು ಮೈಸೂರು ಜಿಲ್ಲೆಯಲ್ಲಿ ISI ಮತ್ತು ಈSSಂ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ) ಪರವಾನಗಿ ಪಡೆಯದೇ ಪ್ಯಾಕೇಜ್ ಕುಡಿಯುವ ನೀರಿನ ವ್ಯಾಪಾರ ವಹಿವಾಟು ನಡೆಸುವವರ ವಿರುದ್ದ ಕ್ರಮವಹಿಸಲಾಗುವುದು.  ಈಗಾಗಲೇ ದೂರಿನ ಹಿನ್ನೆಲ್ಲೆಯಲ್ಲಿ 12 ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳನ್ನು ಮುಚ್ಚÀಲಾಗಿದೆ.
   ಯಾವುದೇ ಪ್ಯಾಕೇಜ್ ಕುಡಿಯುವ ನೀರಿನ ಘಟಕವು ISI ಮತ್ತು ಈSSಂ (ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ) ಪರವಾನಗಿ ಪಡೆಯದೇ ನೀರಿನ ವ್ಯಾಪಾರ ನಡೆಸುವಂತಿಲ್ಲ. ISI ಮತ್ತು ಈSSಂ ನಿಯಮಾನುಸಾರ ಸ್ವಚ್ಚತೆ ಮತ್ತು ನೀರಿನ ಗುಣಮಟ್ಟ ಕಾಯ್ದುಕೊಂಡು ವಹಿವಾಟು ನಡೆಸುವುದು ಕಡ್ಡಾಯವಾಗಿದೆ. ಗುಣಮಟ್ಟ ಕಾಯ್ದುಕೊಳ್ಳದೇ ವ್ಯಾಪಾರ ವಹಿವಾಟು ನಡೆಸಿದ್ದಲ್ಲಿ ನಿಯಮಾನುಸಾರ ಕಟ್ಟುನಿಟ್ಟಿನ ಕ್ರಮಜರುಗಿಸಲಾಗುವುದು.
    ಸಾರ್ವಜನಿಕರಿಗೆ ಯಾವುದಾದರೂ ISI ಮತ್ತು ಈSSಂ ಪರವಾನಗಿ ಇಲ್ಲದ ಪ್ಯಾಕೇಜ್ ಕುಡಿಯುವ ನೀರಿನ ಘಟಕಗಳು ಕಂಡುಬಂದಲ್ಲಿ, ಅಂಕಿತ ಅಧಿಕಾರಿಗಳ ಕಛೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ, ಎನ್.ಪಿ.ಸಿ. ಆಸ್ಪತ್ರೆ ಆವರಣ, ನಜರ್‍ಬಾದ್, ಮೈಸೂರು-10 ಇಲ್ಲಿಗೆ ಲಿಖಿತ ದೂರನ್ನು ನೇರವಾಗಿ, ದೂರವಾಣಿ ಸಂಖ್ಯೆ: 0821- 2438144, ಅಥವಾ (
ಜomಛಿಛಿಚಿ2013@gmಚಿiಟ.ಛಿom)  ಈ ಮೇಲ್  ಮೂಲಕ ನೀಡಬಹುದು ಎಂದು ಪ್ರಕಟಣೆ ತಿಳಿಸಿದೆ
   
ನವೆಂಬರ್ 7 ರಿಂದ ಕರ್ನಾಟಕ ವೈಭವ ಧ್ವನಿ ಬೆಳಕು ಕಾರ್ಯಕ್ರಮ:ಸಿದ್ದತೆ ಚುರುಕು
      ಮೈಸೂರು.ನ.03.ಜಿಲ್ಲೆಗೆ ಪ್ರವಾಸಿಗರನ್ನು ಆಕರ್ಷಿಸಲು ಜಿಲ್ಲಾಡಳಿತವು ಹಲವಾರು ಕಾರ್ಯಕ್ರಮವನ್ನು ಆಯೋಜಿಸುತ್ತಿದೆ. ವಿಶ್ವವಿಖ್ಯಾತ ದಸರಾ ಮುಗಿಯುತ್ತಿದ್ದಂತೆ ವಾರಾಂತ್ಯ  ಸಾಂಸ್ಕøತಿಕ ಕಾರ್ಯಕ್ರಮವನ್ನು ಪ್ರಾರಂಭಿಸಿತು. ಇದರ ಜೊತೆಯಲ್ಲಿ ನವೆಂಬರ್ 7 ರಿಂದ 11 ರವರೆಗೆ ಪ್ರತಿ ದಿನ ಸಂಜೆ 6-30 ರಿಂದ ರಾತ್ರಿ 9 ಗಂಟೆಯವರೆಗೆ ಮಹಾರಾಜ ಕಾಲೇಜಿನ ಮೈದಾನದಲ್ಲಿ ಕರ್ನಾಟಕ ವೈಭವ ಧ್ವನಿ ಬೆಳಕು ಕಾರ್ಯಕ್ರಮ ನಡೆಯಲಿದೆ.
     ಈ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸಿದವರಿಗೆ ಸಂದರ್ಶನ ನಡೆಸಿ 85 ಮಂದಿ ನುರಿತ ಕಲಾವಿದರನ್ನು ಆಯ್ಕೆ ಮಾಡಿ ನಂಜರಾಜ್ ಬಹದ್ದೂರ್ ಛತ್ರದಲ್ಲಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ತರಬೇತಿ ನೀಡಲಾಗುತ್ತಿದೆ.
    ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಸಂಗೀತ ಮತ್ತು ನಾಟಕವಿಭಾಗ ಬೆಂಗಳೂರು ಘಟಕ ನಡೆಸುತ್ತಿರುವ ಈ ಬೃಹತ್ ಧ್ವನಿ ಬೆಳಕು ಕಾರ್ಯಕ್ರಮವನ್ನು ಜಿ.ವಿ.ಜಿತೇಂದ್ರ ಪಾನ್‍ಪಾಟೀಲ್ ನಿರ್ದೇಶಿಸಿದ್ದಾರೆ. ಎಂ. ಮನೋಹರ್-ಸಹನಿರ್ದೇಶನ, ಡಾ| ಎನ್.ಎನ್.ಜಾ-ನಿರ್ವಹಣೆ, ಸಂಗೀತ-ಸರಳಾ ರಾವ್, ನೃತ್ಯ-ಶ್ರೀಲಕ್ಷ್ಮೀ, ಬೆಳಕು-ರವೀಂದ್ರ, ಪ್ರದೀಪ್, ಕಿಶನ್‍ಲಾಲ್, ಧ್ವನಿ-ಮಂದಾರ ಮತ್ತು ಅವಿನಾಶ್.
    ಇಂದಿನ ವಿದ್ಯಾರ್ಥಿಗಳಿಗೆ ಯುವ ಪೀಳಿಗೆಗೆ ಹಾಗೂ ಸಾರ್ವಜನಿಕರಿಗೆ ಭಾರತ ಹಾಗೂ ಕರ್ನಾಟಕದ ಇತಿಹಾಸ, ಕ್ವಿಟ್ ಇಂಡಿಯಾದಂತಹ ಐತಿಹಾಸಿಕ ಘಟನೆಗಳನ್ನು ಸಂಗೀತ, ನೃತ್ಯ ಹಾಗೂ ಕಥೆಯ ರೂಪದಲ್ಲಿ ಪರಿಚಯಿಸಿ ಕೊಡಲಿದೆ ಬೃಹತ್ ಧ್ವನಿ ಬೆಳಕು ಕಾರ್ಯಕ್ರಮ
    ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಬಲಿದಾನ ನೀಡಿದ ಭಗತ್‍ಸಿಂಗ್, ಸಂಗೊಳ್ಳಿ ರಾಯಣ್ಣ, ಟಿಪ್ಪುಸುಲ್ತಾನ್, ಕಿತ್ತೂರುರಾಣಿ ಚೆನ್ನಮ್ಮ ಮುಂತಾದವರ ಬಗ್ಗೆ ತಿಳಿಸುವುದರ ಜೊತೆ ಸ್ವಾತಂತ್ರ್ಯ ಪೂರ್ವದಲ್ಲಿ ಕರ್ನಾಟಕವನ್ನು ಆಳಿದ ರಾಜ ಮಹಾರಾಜರ ಜೀವನವನ್ನು ರೂಪಕಗಳು ಪ್ರಸ್ತುತಗೊಳ್ಳಲಿದೆ.
     ಕೆ.ಎಂ.ದೊರೆಸ್ವಾಮಿ, ಸುಬ್ಬಶೆಟ್ಟಿ, ಶೇಷಾಚಲ, ವೆಂಕಟೇಶ್ ಪ್ರಕಾಶ್, ನಾಗೇಶ್ ಸೇರಿದಂತೆ ಹಲವಾರು ಕಲಾವಿದರು ಭಾಗವಹಿಸಿ ನೋಡುಗರ ಕಣ್ಮನ ಸೆಳೆಯಲಿದ್ದಾರೆ. ಪ್ರವೇಶ ಉಚಿತವಾಗಿದ್ದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ಕೋರಿದೆ.
ನವೆಂಬರ್ 5 ರಂದು ನವೀಕೃತ ಶಿಕ್ಷಕರ ಸದನದ ಉದ್ಘಾಟನೆ
 ಮೈಸೂರು.ನ.03.ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ(ರಿ), ಬೆಂಗಳೂರು, ಜಿಲ್ಲಾ ಶಾಖೆ ಮೈಸೂರು ಸಹಭಾಗಿತ್ವದಲ್ಲಿ ನವೀಕೃತ ಶಿಕ್ಷಕರ ಸದನದ ಉದ್ಘಾಟನೆ ಅನ್ನಪೂರ್ಣ ಭವನದ ಭೂಮಿ ಪೂಜೆ ಹಾಗೂ ಜಿಲ್ಲಾ ಶೈಕ್ಷಣಿಕ ವಿಚಾರ ಸಂಕಿರಣ ನವೆಂಬರ್ 5 ರಂದು ಬೆಳಿಗ್ಗೆ 10 ಗಂಟೆಗೆ ಬನ್ನೂರು ರಸ್ತೆಯ ಸಿದ್ದಾರ್ಥನಗರದ ಜಿಲ್ಲಾ ಶಿಕ್ಷಕರ ಸದನದಲ್ಲಿ ನಡೆಯಲಿದೆ.
     ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಭೂಮಿ ಪೂಜೆ ನೆರವೇರಿಸುವರು. ವಿಧಾನಸಭಾ ಸದಸ್ಯ ತನ್ವೀರ್ ಸೇಠ್ ಅವರು ಅಧ್ಯಕ್ಷತೆ ವಹಿಸುವರು.
     ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ರಾಜ್ಯ ಸಚಿವ ಕಿಮ್ಮನೆ ರತ್ನಾಕರ್, ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ಎಂ.ಕೆ. ಸೋಮಶೇಖರ್, ವಾಸು ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ. ಲೋಕಮಣಿ ಭಾಗವಹಿಸುವರು.
    ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಡಾ| ರಾಜಕುಮಾರ್ ಖತ್ರಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಮೊಹಮದ್ ಮೊಹಸಿನ್, ಜಿಲ್ಲಾಧಿಕಾರಿ ಸಿ.ಶಿಖಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ. ಗೋಪಾಲ್, ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯಾಧ್ಯಕ್ಷ ಬಸವರಾಜ್ ಗುರಿಕಾರ್, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಕೆ. ರಾಮು ಅವರುಗಳು ವಿಶೇಷ ಆಹ್ವಾನಿತರಾಗಿ ಭಾಗವಹಿಸುವರು.                              
ನವೆಂಬರ್ 8 ರಂದು ಕನಕದಾಸರ ಜಯಂತಿ
     ಮೈಸೂರು,ನ.3.ಜಿಲ್ಲಾಡಳಿತ ವತಿಯಿಂದ ನವೆಂಬರ್ 8 ರಂದು ಬೆಳಗ್ಗೆ 11-30 ಗಂಟೆಗೆ ಕಲಾಮಂದಿರದಲ್ಲಿ ಕನಕದಾಸರ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
     ಸುತ್ತೂರು ಶ್ರೀಕ್ಷೇತ್ರದ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಪೀಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಕಾಗಿನೆಲೆ ಮಹಾಸಂಸ್ಥಾನ ಕನಕಗುರು ಪೀಠದ ಶ್ರೀ ಶಿವಾನಂದಪುರಿ ಸ್ವಾಮೀಜಿ ಹಾಗೂ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಸೋಮನಾಥನಂದ ಸ್ವಾಮೀಜಿ ಅವರುಗಳು ದಿವ್ಯ ಸಾನಿಧ್ಯದಲ್ಲಿ ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್ ಅವರು ಕಾರ್ಯಕ್ರಮದ ಉದ್ಘಾಟಿಸಿ ಕನಕಮೂರ್ತಿಗೆ ಮಾಲಾರ್ಪಣೆ ಮಾಡುವರು. ಶಾಸಕ ವಾಸು ಅವರು ಅಧ್ಯಕ್ಷತೆ ವಹಿಸುವರು.
     ಲೋಕೋಪಯೋಗಿ ಸಚಿವ ಡಾ.ಹೆಚ್.ಸಿ. ಮಹದೇವಪ,್ಪ ಮಹಾನಗರಪಾಲಿಕೆ ಮಹಾಪೌರರಾದ ಆರ್.ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ| ಬಿ.ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯ ಪ್ರತಾಪ ಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್.ಪುಟ್ಟರಾಜು, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ಜಿ.ಟಿ.ದೇವೇಗೌಡರು, ಚಿಕ್ಕಮಾದು, ಸಾ.ರಾ. ಮಹೇಶ್, ಹೆಚ್.ಪಿ. ಮಂಜುನಾಥ್, ಕೆ.ವೆಂಕಟೇಶ್, ವಿಧಾನಪರಿಷತ್ ಸದಸ್ಯ ಸಿ.ಹೆಚ್.ವಿಜಯಶಂಕರ್, ಗೋ.ಮಧುಸೂದನ್, ಮರಿತಿಬ್ಬೇಗೌಡ, ಎಸ್.ನಾಗರಾಜು, ಆರ್. ಧರ್ಮಸೇನ, ಮಹಾನಗರಪಾಲಿಕೆಯ ಉಪ ಮಹಾಪೌರರಾದ ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಎ. ಲೋಕಮಣಿ ಭಾಗವಹಿಸುವರು ಹಾಗೂ ಮೈಸೂರಿನ ಪ್ರೊ|| ಅರವಿಂದ ಮಾಲಗತ್ತಿ ಅವರು ಮುಖ್ಯ ಭಾಷಣಕಾರರಾಗಿ ಭಾಗವಹಿಸುವರು.
   ಅಂದು ಬೆಳಗ್ಗೆ 9-30 ಗಂಟೆಗೆ ಪೂಜ್ಯ ಮಹಾ ಪೌರರು ಮೆರವಣಿಗೆಗೆ ಚಾಲನೆ ನೀಡುವರು. ಮೆರವಣಿಗೆಯು ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ ಆವರಣದ ಮುಂಭಾಗದಿಂದ ಹೊರಟು ಕೆ.ಆರ್.ವೃತ್ತ, ಸಯ್ಯಾಜಿರಾವ್ ರಸ್ತೆ, ಸಂಸ್ಕøತ ಪಾಠಶಾಲೆ, ನೂರಡಿ ರಸ್ತೆ, ನಾರಾಯಣ ಶಾಸ್ತ್ರಿ ರಸ್ತೆ, ಡಿ. ದೇವರಾಜಅರಸು ರಸ್ತೆ, ಮೆಟ್ರೊಪೋಲ್ ವೃತ್ತ, ವಿನೋಬ ರಸ್ತೆ ಮಾರ್ಗವಾಗಿ  ಕಲಾಮಂದಿರ ತಲುಪುವುದು.
     ಮೈಸೂರಿನ ವಿದ್ವಾನ್ ಎಂ.ಎಸ್. ನವೀನ್ ಮತ್ತು ತಂಡದಿಂದ ಕನಕದಾಸರ ಪದಗಳ ಕಾರ್ಯಕ್ರಮ ಮೈಸೂರಿನ ಕಲಾಮಂದಿರದಲ್ಲಿ ಬೆಳಗ್ಗೆ 11 ಗಂಟೆಗೆ ನಡೆಯಲಿದೆ.
ನವೆಂಬರ್ 7 ರಂದು ಮೈಸೂರು ನಗರ, ತಾಲೂಕು ಕಲಾಶ್ರೀ ಆಯ್ಕೆ
     ಮೈಸೂರು,ನ.3.ಬೆಂಗಳೂರಿನ ಬಾಲ ಭವನ ಸೂಸೈಟಿ ಆಶ್ರಯದಲ್ಲಿ ನಡೆಯಲಿರುವ ಜಿಲ್ಲಾ ಮಟ್ಟದ ಕಲಾಶ್ರೀ ಸ್ಪರ್ಧೆಯಲ್ಲಿ ಭಾಗÀವಹಿಸಲು 9 ರಿಂದ 16 ವರ್ಷದೊಳಗಿನ ಸೃಜನಾತ್ಮಕ ಪ್ರತಿಭೆಯನ್ನು ಹೊಂದಿರುವ ಮಕ್ಕಳನ್ನು ಆಯ್ಕೆ ಮಾಡಲು ಬನ್ನಿಮಂಟಪದಲ್ಲಿರುವ ಜಿಲ್ಲಾ ಜವಾಹರ ಬಾಲ ಭವನದಲ್ಲಿ  ನವೆಂಬರ್ 7 ರಂದು ಬೆಳಗ್ಗೆ 11 ಗಂಟೆಗೆ ಬನ್ನಿಮಂಟಪದಲ್ಲಿ ಮೈಸೂರು ನಗರ ಮತ್ತು  ತಾಲೂಕು ಮಟ್ಟದ ಕಲಾಶ್ರೀ ಆಯ್ಕೆ ಹಮ್ಮಿಕೊಳ್ಳಲಾಗಿದೆ.
 ಆಯ್ಕೆಯಲ್ಲಿ ಭಾಗವಹಿಸುವ ಮಕ್ಕಳು ತಮಗೆ ಬೇಕಾಗುವ ಅಗತ್ಯ ಸಾಮಗ್ರಗಳನ್ನು ತರÀಬೇಕು ಹಾಗೂ ಅಕ್ಟೋಬರ್ 30ರ ಸಂಜೆ 5:30ಗಂಟೆಯೊಳಗೆ ಹೆಸರನ್ನು ನೊಂದಾಯಿಸಿಕೊಳ್ಳಬೇಕು.
      ಕಲಾ ಪ್ರಕಾರಗಳು: ರಚನಾ ಕಲೆಯಲ್ಲಿ ಚಿತ್ರ ಬಿಡಿಸುವುದು, ಕರಕುಶಲ ಕಲೆ, ಮತ್ತು ಕ್ಲೇ ಮಾಡಲಿಂಗ್. ಪ್ರದರ್ಶನ ಕಲೆಯಲ್ಲಿ ಶಾಸ್ತ್ರೀಯ ನೃತ್ಯ, ಜಾನಪದ ನೃತ್ಯ, ಸಂಗೀತ, ವಾದ್ಯ ಸಂಗೀತ, ಯಕ್ಷಗಾನ ಮತ್ತು  ಅಭಿನಯಕ್ಕೆ ಸಂಬಂಧಿಸಿದ ಕಲೆಗಳು. ಸೃಜನಾತ್ಮಕ ಬರವಣಿಗೆಯಲ್ಲಿ ಕಥೆ, ಕವನ, ಪ್ರಬಂಧ ರಚನೆ ಹಾಗೂ ವಿಜ್ಞಾನದ ನೂತನ ಅವಿಷ್ಕಾರ ವಿಭಾಗದಲ್ಲಿ ವಿಜ್ಞಾನ ವಿಷಯದಲ್ಲಿ ಮಾದರಿ ಪ್ರದರ್ಶನ, ವಿವರಣೆ ವಿಜ್ಞಾನಕ್ಕೆ ಸಂಬಂಧಿಸಿದ ಲೇಖನೆ ಮತ್ತು ಇತ್ಯಾದಿಗಳು.  
      ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 0821-2495486 ಸಂರ್ಪಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.



















No comments:

Post a Comment