Wednesday 30 September 2015

ಸಂಚಾರಿ ಪೊಲೀಸರಿಗೆ ರಿಪ್ಲೆಕ್ಸ್ ಜಾಕೆಟ್ ವಿತರಣೆ
ಮೈಸೂರು,ಸೆ.30- ಮೈಸೂರಿನ ಸಾತಗಳ್ಳಿ ರಿಂಗ್ ರಸ್ತೆಯಲ್ಲಿರುವ ನಾರಾಯಣ ಮಲ್ಟಿಸ್ಪೆಷಾಲಿಟಿ ಹೃದಯಾಲಯದ ವತಿಯಿಂದ  ನಗರದ ಸಂಚಾರಿ ಪೊಲೀಸರಿಗೆ  ಕಾರ್ಯ ನಿರ್ವಹಿಸಲು ಅನುಕೂಲವಾಗಲೆಂದು ಹಾಗೂ ಅವರ ಸುರಕ್ಷಾ ದೃಷ್ಟಿಯಿಂದ ರಿಪ್ಲೆಕ್ಸ್ ಜಾಕೆಟ್‍ಗಳನ್ನು ಇಂದು  ಪೊಲೀಸ್ ಆಯುಕ್ತರ ಕಚೇರಿಯಲ್ಲಿ ವಿತರಿಸಲಾಯಿತು.
 ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕ ದತ್ತಾತ್ರೇಯ, ಡಿಸಿಪಿಗಳಾದ ಮಿರ್ಜಿ, ಶೇಖರ್ ಹಾಗೂ ಸಂಚಾರಿ ಎಸಿಪಿ ರವರುಗಳ ಸಮ್ಮುಖದಲ್ಲಿ ನಗರದ ಎಲ್ಲಾ ಸಂಚಾರಿ ಠಾಣೆಗಳ ಪೊಲೀಸ್ ಇನ್ಸ್ ಪೆಕ್ಟರ್‍ಗಳು ಎಎಸ್‍ಐಗಳು, ಪಿಎಸ್‍ಐಗಳು ಸೇರಿದಂತೆ 50 ಮಂದಿಗೆ ಜಾಕೆಟ್‍ಗಳನ್ನು ವಿತರಿಸಲಾಯಿತು.
 ಕಚೇರಿಯಲ್ಲಿ ಸಾಂಖೇತಿಕವಾಗಿ  ಆಯಾ ಠಾಣೆಗಳ ಇನ್ಸ್ ಪೆಕ್ಟರ್‍ಗಳಿಗೆ ವಿತರಿಸಿದರು ನಂತರ ಅವರುಗಳು ಎಲ್ಲಾ ಟ್ರಾಫಿಕ್ ಸಿಬ್ಬಂದಿಗಳಿಗೆ ವಿತರಿಸಲಿದ್ದಾರೆ.
 ಈ ಸಂದರ್ಭದಲ್ಲಿ ನಾರಾಯಣ ಹೃದಯಾಲಯದ ಎಂ.ಡಿ. ದತ್ತಾತ್ರೇಯ ಮಾತನಾಡಿ ನಮ್ಮ ಆಸ್ಪತ್ರೆ ವತಿಯಿಂದ ಸಾರ್ವಜನಿಕ ಕಳಕಳೀಯ ಜವಾಬ್ದಾರಿ ದೃಷ್ಟಿ ಇಟ್ಟುಕೊಂಡು ಈ ಸೇವೆ ಮಾಡಿದೆ, ನಗರದ ರಿಂಗ್ ರಸ್ತೆಗಳಲ್ಲಿ ಅಪಘಾತಗಳು ಹೆಚ್ಚುತ್ತಿದ್ದು, ಅದನ್ನು ತಪ್ಪಿಸುವ ಸಲುವಾಗಿ ಪೊಲೀಸ್ ಇಲಾಖೆ ಬ್ಯಾರಿಕೆಡ್ಗಳನ್ನು ಕೇಳಿದೆ  ಮುಂದಿನ ದಿನಗಳಲ್ಲಿ ಸುಮಾರು 40 ಬ್ಯಾರಿಕೆಡ್‍ಗಳನ್ನು ನೀಡಲು ಒಪ್ಪಿಕೊಂಡಿರುವುದಾಗಿ ತಿಳಿಸಿದರು.  ಇದಲ್ಲದೆ  ಪೊಲೀಸ್ ಇಲಾಖೆ  ಹಗಲಿರುಳು ಸೇವೆ ಸಲ್ಲಿಸುತ್ತಿದೆ ಅವರ ಆರೋಗ್ಯದಲ್ಲಿ ಏರುಪೇರು ಆಗುತ್ತವೆ ಆದ್ದರಿಂದ ಆಸ್ಪತ್ರೆವತಿಯಿಂದ ಪೊಲೀಸ್ ಸಿಬ್ಬಂದಿಗಳಿಗೆ ಯಾವುದೇ ಸಂದರ್ಭದಲ್ಲಿ ಬಮದರೂ ಅವರಿಗೆ ಉಚಿತವಾಗಿ ಆರೋಗ್ಯ ತಪಾಸಣೆ  ನಡೆಸಲಾಗುತ್ತದೆ ಎಂದು ಹೇಳಿದರು.    

No comments:

Post a Comment