Saturday 26 September 2015

ಮೈಸೂರಲ್ಲಿ ಬಂದ್ ಭಾಗಶಃ ಯಶಸ್ವಿ : ಸಾರ್ವಜನಿಕರಿಗೆ ತೊಂದರೆ

ಮೈಸೂರಲ್ಲಿ ಬಂದ್ ಭಾಗಶಃ ಯಶಸ್ವಿ : ಸಾರ್ವಜನಿಕರಿಗೆ  ತೊಂದರೆ


ಮೈಸೂರು, ಸೆ.26- ಕಳಸಾಬಂಡೂರಿ ಕುಡಿಯುವ ನೀರಿನ ಯೋಜನೆಗೆ ಜಾರಿಗೆ ಸಂಬಂಧಿಸಿದಂತೆ ಕೆಲವು ಕನ್ನಡ ಪರ ಸಂಘಟನೆಗಳು ಇಂದು ಕರೆ ನೀಡಿರುವ ಕರ್ನಾಟಕ ಬಂದ್ ಭಾಗಶಃ ಯಶಸ್ವಿಯಾಗಿದೆ.
 ನಗರದ ಹೃದಯಭಾಗ ಹೊರತುಪಡಿಸಿ ಉಳಿದಂತೆ ಎಲ್ಲಾ ಮೊಹಲ್ಲಾಗಳ ಒಳಭಾಗಗಳಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳನ್ನು ತೆರೆದುಕೊಂಡು ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡಿದ್ದರು. ನಗರದ ಎನ್. ಆರ್. ಮೊಲ್ಲಾ, ಮಂಡಿಮೊಹಲ್ಲಾ, ಒಂಟಿಕೊಪ್ಪಲ್, ವಿಜಯನಗರ, ಕುವೆಂಪುನಗರ ಸಿದ್ಧಾರ್ಥ ಲೇಔಟ್ ನಜರ್‍ಬಾದ್, ಉದಯಗಿರಿ, ಶಾಂತಿನಗರ, ರಾಜೀವನಗರ, ಗಾಂಧಿನಗರ,  ಕೆಸರೆ ಸೇರಿದಂತೆ ಇನ್ನೂ ಹಲವಾರು ಭಾಗಗಳಲ್ಲಿ ಬಂದ್‍ಗೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ.  ಕಾರಣ ಇವರುಗಳಿಗೆÀ ಬಂದ್ ಇಷ್ಟವಿರಲಿಲ್ಲ, ಈಗಾಗಲೇ ಎರಡು ಭಾರಿ ಬಂದ್ ಬಿಸಿ ಎದುರಿಸಿರುವ ಸಾರ್ವಜನಿಕರು ಪದೇ ಪದೇ ಬಂದ್‍ಗೆ ಕರೆ ಕೊಡುವುದರಿಂದ ರೋಸಿಹೋಗಿದ್ದಾರೆ, ವ್ಯಾಪಾರ ವಹಿವಾಟುಗಳಲ್ಲಿ ನಷ್ಟ ಅನುಭವಿಸಿದ್ದಾರೆ,  ಈ ಬಗ್ಗೆ  ಸಾರ್ವಜನಿಕರನನ್ನು ಪ್ರಶ್ನಿಸಿದರೆ ಹೋಗ್ರಿ ಯಾರಿಗೆ ಬೇಕು ಬಂದ್, ಇದರಿಂದ ಯಾರಿಗೆ ಲಾಭ, ಕೆಲವು ರಾಜಕೀಯ ಮುಖಂಡರುಗಳು, ಸಂಘ ಸಂಸ್ಥೆಗಳವರು ತಮ್ಮ ತೆವಲಿಗಾಗಿ, ಪ್ರಚಾರಕ್ಕಾಗಿ ಇಂತಹ ಬಂದ್‍ಗೆ ಕರೆ ಕೊಡುತ್ತಾರೆ ಇದರಿಂದ ಯಾರಿಗೇನು ಲಾಭ? ಇದರಿಂದ ಜನರಿಗೆ ತೊಂದರೆ ಹೆಚ್ಚು ಎಂದು ಹೇಳುತ್ತಾರೆ.
 ನಗರದ ಕೆ.ಆರ್. ವೃತ್ತ, ಸಯ್ಯಾಜಿರಾವ್ ರಸ್ತೆ, ದೇವರಾಜ ಅರಸುರಸ್ತೆ,  ಅಶೋಕರಸ್ತೆ,  ನಗರ ಮತ್ತು ಕೇಂದ್ರ ಬಸ್ ನಿಲ್ದಾಣಗಳ ಆಸುಪಾಸು ಸಂಪೂರ್ಣ ಬಂದ್ ಆಗಿತ್ತು. ಬಸ್ ಸಂಚಾರ ಸ್ಥಗಿತವಾಗಿದ್ದರಿಂದ ಪರಸ್ಥಳಗಳಿಗೆ ತೆರಳಬೇಕಾಗಿದ್ದ ಪ್ರಯಾಣಿಕರು ಬಸ್ ನಿಲ್ದಾಣಗಳಲ್ಲಿ ಕಾದು ಕುಳಿತಿದ್ದ ದೃಶ್ಯ ಕಂಡುಬಂತು. ತಿಂಡಿ ಊಟದ ವಿಚಾರಕ್ಕೆ ಬಂದರೆ ದಿನದ ಹೊಟ್ಟೆಪಾಡಿಗಾಗಿ ಸಣ್ಣಪುಟ್ಟ ವ್ಯಾಪಾರ ಮಾಡುವ ಹಣ್ಣುವ್ಯಾಪಾರಿಗಳು ಕಾಫಿ ಟೀ ಮಾರುವವರಿಂದ ಬಸ್‍ಗಳಿಗಾಗಿ ಕಾದು ಕುಳಿತಿದ್ದವರಿಗೆ ಆಹಾರ ಸಿಕ್ಕಂತಾಯಿತು. ಕೆಲ ಕನ್ನಡ ಪರ ಸಂಘಟಕರು ಅಲ್ಲಲ್ಲಿ ಬಲವಂತವಾಗಿ ಅಂಗಡಿಗಳನ್ನು ಮುಚ್ಚಿಸುತ್ತಿದ್ದುದು ಕಂಡುಬಂತು, ಶಾಲಾ ಕಾಲೇಜುಗಳಿಗೆ ರಜೆ ಗೋಷಿಸಲಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಹಾಜರಾತಿ ವಿರಳವಾಗಿತ್ತು. ಸಾರ್ವಜನಿಕರ ಖಾಸಗಿ ವಾಹನಗಳು ಎಂದಿನಂತೆ ಓಡಾಡುತ್ತಿದ್ದವು. ಪೆಟ್ರೋಲ್ ಬಂಕ್‍ಗಳು ಮುಚ್ಚಿದ್ದರಿಂದ ಕೆಲ ವಾಹನಸವಾರರು ಪೆಟ್ರೋಲ್ ಡೀಸಲ್ ಸಿಗದೆ ಪರದಾಡಬೇಕಾಯಿತು. ಎಲ್ಲೂ ಯಾವುದೇ ರೀತಿಯ ಅಹಿತಕರ ಘಟನೆ ಸಂಭವಿಸಲಿಲ್ಲ, ಎಲ್ಲಾ ಕಡೆಯು ವ್ಯಾಪಕ ಪೋಲೀಸ್ ಭದ್ರತೆ ಒದಗಿಸಲಾಗಿತ್ತು.
  ಕನ್ನಡ ಸಂಘಟನೆಯ ಗುಂಪೊಂದು ಜಿಲ್ಲಾಧಿಕಾರಿ ಕಚೇರಿ ಬಳಿ ಮೊಬೈಲ್ ಟವರ್ ಹತ್ತಿ ಪ್ರತಿಭಟಿಸಿದರೆ, ಮತೊಂದು ಸಂಘದ ಗುಂಪು ರೈಲು ನಿಲ್ದಾಣಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಮತೊಂದು ಗುಂಪು ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಿಂದ ಬೈಕ್‍ಗಳಲ್ಲಿ ರ್ಯಾಲಿ ನಡೆಸಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

No comments:

Post a Comment