Saturday 26 September 2015

ಪರಿಸರ ಸಂರಕ್ಷಣೆ ಇಂದಿನ ಅಗತ್ಯ .

ಪರಿಸರ ಸಂರಕ್ಷಣೆ ಇಂದಿನ ಅಗತ್ಯ
ಮಂಡ್ಯ, ಸೆ.26- ಇತ್ತೀಚಿನ ದಿನಗಳಲ್ಲಿ ಜನಮಾನಸದಲ್ಲಿ ಪರಿಸರ ಸಂರಕ್ಷಣೆ ಬಗ್ಗೆ ಅನಾದರ ಹೆಚ್ಚುತ್ತಿದ್ದು ಇದರಿಂದಾಗಿ ಪ್ರಕೃತಿಯಲ್ಲಿ ಏರುಪೇರಾದ ಸ್ಥಿತಿ ಉಂಟಾಗುತ್ತಿದೆ. ಪ್ರತಿದಿನವೂ ನೂರಾರು ರೀತಿಯ ಕಸ, ವಿಷಾನಿಲಗಳು ಪರಿಸರಕ್ಕೆ ಸೇರುತ್ತಿದ್ದು, ಪರಿಣಾಮವಾಗಿ ಓಜೋನ್ ಪದರಕ್ಕೆ ಧಕ್ಕೆ ಉಂಟಾಗಿದೆ. ಜನಸಮೂಹ ಹಸಿರೆಡೆಗೆ ನಡೆದಾಗ ಮಾತ್ರ ಈ ರೀತಿಯ ಅನಾಹುತಗಳನ್ನು ತಪ್ಪಿಸಬಹುದಾಗಿದೆ. ಗಿಡಮರಗಳನ್ನು ಬೆಳೆಸುವ, ಪೆÇೀಷಿಸುವ ಮತ್ತು ಅವುಗಳನ್ನು ಉಳಿಸುವ ಮನೋಭಾವ ಎಲ್ಲರಲ್ಲೂ ಮೂಡಬೇಕೆಂದು ಮಂಡ್ಯ ರೋಟರಿ ಕ್ಲಬ್ ಅಧ್ಯಕ್ಷ ಅನಂತಕುಮಾರ್ ತಿಳಿಸಿದರು.
ಪೆÇಲೀಸ್ ಕಾಲೋನಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಸಿರೆಡೆಗೆ ನಡೆಯೋಣ ಕಾರ್ಯಕ್ರಮದ ಅಂಗವಾಗಿ ಶಾಲಾವರಣದಲ್ಲಿ ಸಸಿಗಳನ್ನು ನೆಟ್ಟು ಮಾತನ್ನಾಡುತ್ತಿದ್ದರು.
ವಿದ್ಯಾರ್ಥಿಗಳು ಈಗಿನಿಂದಲೇ ಈ ಬಗ್ಗೆ ಗಮನ ನೀಡಿ ವನ್ಯಸಂಪತ್ತನ್ನು ವನ್ಯಮೃಗಗಳ ಸಂಪತ್ತನ್ನು ಉಳಿಸುವತ್ತ ಕಾರ್ಯ ಯೋಜನೆ ಹಾಕಿಕೊಳ್ಳಬೇಕೆಂದು ತಿಳಿಸುತ್ತ ಶಾಲಾಶಿಕ್ಷಕರು ಮಕ್ಕಳಲ್ಲಿ ಈ ಪ್ರವೃತ್ತಿ ಬೆಳೆಸಲು ಸಹಕರಿಸಲು ಕೋರಿದರು.
ಕಾರ್ಯಕ್ರಮದಲ್ಲಿ ರಾಷ್ಟ್ರಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯ ಶಿಕ್ಷಕ ಶಿವಚಿದಂಬರ್, ರೋಟರಿ ಕಾರ್ಯದರ್ಶಿ ರಾಜೀವ್, ಅರವಿಂದ್ ಹಾಗೂ ಶಾಲಾಶಿಕ್ಷಕರು ಭಾಗವಹಿಸಿದ್ದರು. ಶಾಲಾ ಮುಖ್ಯ ಶಿಕ್ಷಕ ಸುರೇಶ್ ಸ್ವಾಗತಿಸಿ, ನಂಜುಂಡಸ್ವಾಮಿ ವಂದಿಸಿದರು.

No comments:

Post a Comment