Saturday 20 June 2015

ಪಠ್ಯಕ್ರಮದಲ್ಲಿ ‘ಯೋಗ’ ಸೇರ್ಪಡೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ

ಪಠ್ಯಕ್ರಮದಲ್ಲಿ ‘ಯೋಗ’ ಸೇರ್ಪಡೆಗೆ ಚಿಂತನೆ: ಮುಖ್ಯಮಂತ್ರಿ ಸಿದ್ದರಾಮಯ್ಯ
ಬೆಂಗಳೂರು ಜೂನ್ 21.
ಮನುಷ್ಯನ ದೈಹಿಕ ಹಾಗೂ ಮಾನಸಿಕ ಆರೋಗ್ಯವನ್ನು ಉತ್ತಮಗೊಳಿಸುವ, ಯಾವುದೇ ಪ್ರತಿಕೂಲ ಪ್ರಭಾವಗಳಿಲ್ಲದ, ಔಷಧಿರಹಿತ ನೈಸರ್ಗಿಕ ಚಿಕಿತ್ಸಾವಿಧಾನವಾದ ಯೋಗಾಭ್ಯಾಸವನ್ನು ಶಾಲಾ ಪಠ್ಯಕ್ರಮದಲ್ಲಿ ಸೇರಿಸಲು ಸರ್ಕಾರ ಚಿಂತಿಸಿದೆ ಎಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಇಂದು ಮುಂಜಾನೆ ವಿಧಾನಸೌಧದ ಆವರಣದಲ್ಲಿ ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ನೂರಾರು ಎನ್‍ಸಿಸಿ ವಿದ್ಯಾರ್ಥಿಗಳು ಪಾಲ್ಗೊಂಡ ಯೋಗಾಭ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿದ ಮುಖ್ಯಮಂತ್ರಿಗಳು, ಎಲ್ಲ ವಯೋಮಾನದವರು ಅಭ್ಯಾಸ ಮಾಡಬಹುದಾದ ಯೋಗದಿಂದ ಬಹಳಷ್ಟು ರೋಗಗಳನ್ನು ನಿಯಂತ್ರಿಸಬಹುದಲ್ಲದೇ ಕಿರಿಯ ವಯಸ್ಸಿನಲ್ಲೇ ಪ್ರಾರಂಭಿಸಿದಲ್ಲಿ ಯೋಗಾಭ್ಯಾಸದಿಂದ ಹಲವು ರೋಗಗಳನ್ನು ಬಾರದಂತೆ ತಡೆಯಬಹುದು ಎಂದು ಅಭಿಪ್ರಾಯ ಪಟ್ಟರು. ಆದ್ದರಿಂದ, ಮಕ್ಕಳಿಗೆ ಯೋಗದ ಕುರಿತು ಶಾಲಾ ಪಠ್ಯಕ್ರಮದಲ್ಲಿ ಯೋಗ ಅಳವಡಿಸಲು ಸರ್ಕಾರ ಚಿಂತಿಸಿದೆ ಎಂದು ಅವರು ಹೇಳಿದರು. ಅಲ್ಲದೇ, ಶಾಲಾ ಮಕ್ಕಳಿಗೆ ಯೋಗ ಕಲಿಸಲು ಆಯುಶ್ ಇಲಾಖೆಯ ವತಿಯಿಂದ ಈಗಾಗಲೇ ಸುಮಾರು 12 ಸಾವಿರ ಉಪಾಧ್ಯಾಯರಿಗೆ ಯೋಗ ತರಬೇತಿ ನೀಡಲಾಗುತ್ತಿದೆ ಎಂದು ತಿಳಿಸಿದರು.
ಅನೇಕ ಮಾನಸಿಕ ಹಾಗೂ ದೈಹಿಕ ಒತ್ತಡಗಳಿಗೆ ಪ್ರತಿನಿತ್ಯ ನಾವು ಗುರಿಯಾಗುತ್ತರುತ್ತೇವೆ. ಆರೋಗ್ಯಕ್ಕೆ ಬಹುಪಾಲು ಕೆಡಕು ಮಾಡುವ ಈ ಒತ್ತಡಗಳಿಂದ ಮುಕ್ತಗೊಳ್ಳಲು ಯೋಗವೊಂದೇ ರಾಮಬಾಣ ಎಂದ ಅವರು, ದಿನವೂ ಕನಿಷ್ಠ ಒಂದು ತಾಸು ಪ್ರತಿಯೊಬ್ಬರೂ ಯೋಗ ಅಭ್ಯಾಸ ಮಾಡುವುದು ಒಳ್ಳೆಯದು ಎಂದರು. ನಾವೆಲ್ಲರೂ ಆರೋಗ್ಯವಾಗಿದ್ದರೆ, ದೇಶವು ಸದೃಢವಾಗಿರುತ್ತದೆ, ಸಮಾಜ ಆರೋಗ್ಯವಂತವಾಗುತ್ತದೆ. ಯೋಗದ ಮೂಲಕ ದೇಶದಲ್ಲಿ ಶಾಂತಿ ಸೌಹಾರ್ದತೆಯ ಸಂದೇಶವನ್ನು ಇಂದು ನೀಡಲಾಗಿದೆ ಎಂದರು.
ಕರ್ನಾಟಕ ರಾಜ್ಯವು ಯೋಗ ಹಾಗೂ ನ್ಯಾಚುರೋಪತಿ ಕಾಲೇಜು ನಡೆಸುತ್ತಿರುವ ಏಕೈಕ ರಾಜ್ಯವಾಗಿದೆ. ಮೈಸೂರಿನಲ್ಲಿರುವ ಈ ಮಹಾವಿದ್ಯಾಲಯವು ಯೋಗದಲ್ಲಿ ಪದವಿ ನೀಡುತ್ತಿರುವ ಮೊಟ್ಟಮೊದಲನೆಯ ಸಂಸ್ಥೆಯಾಗಿದೆ. ಅಲ್ಲದೇ, ನಮ್ಮ ರಾಜ್ಯದ ಅನೇಕ ಮಹನೀಯರು ಯೋಗಕ್ಕೆ ವಿಶ್ವಮಾನ್ಯತೆ ನೀಡುವಲ್ಲಿ ಕೊಡುಗೆ ನೀಡಿದ್ದಾರೆ ಎಂದ ಮುಖ್ಯಮಂತ್ರಿಗಳು ಬಿ ಕೆ ಎಸ್ ಅಯ್ಯಂಗಾರ್, ಮೈಸೂರಿನ ಪಟ್ಟಾಭಿ ಜೋಯಿಸ್, ಕೃಷ್ಣಮಾಚಾರ್ ಅವರುಗಳನ್ನು ಸ್ಮರಿಸಿದರು.
ಭಾರತ ದೇಶದ ಸಂಸ್ಕøತಿಯ ಅಂಗವಾಗಿರುವ ಯೋಗ ಧರ್ಮಾತೀತ ಹಾಗೂ ಜಾತ್ಯಾತೀತ ಎಂದ ಮುಖ್ಯಮಂತ್ರಿಗಳು ಯೋಗವನ್ನು ಜಗತ್ತಿನಾದ್ಯಂತ ಒಪ್ಪಿಕೊಂಡು ಸುಮಾರು 177 ದೇಶಗಳು ಇಂದು ಯೋಗ ದಿನವಾಗಿ ಆಚರಣೆ ಮಾಡುತ್ತಿರುವುದು ಶ್ಲಾಘನೀಯ ಸಂಗತಿ ಎಂದರು. ರಾಜ್ಯದ ಎಲ್ಲ ಜಿಲ್ಲೆಗಳಲ್ಲೂ ಆಯುಶ್ ಇಲಾಖೆಯಿಂದ ಇಂದು ಯೋಗ ದಿನ ಆಚರಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಸಚಿವ ಅನಂತಕುಮಾರ್ ಅವರು ರಾಜ್ಯ ಸರ್ಕಾರವು ಪ್ರಾಥಮಿಕ, ಪ್ರೌಢ ಹಾಗೂ ಪದವಿ ಪೂರ್ವ ಪಠ್ಯಕ್ರಮದಲ್ಲಿ ಯೋಗವನ್ನು ಅಳವಡಿಸಲಿ ಎಂದು ಮನವಿ ಮಾಡಿದರು.
ಜೀವನಶೈಲಿ ಸಂಬಧಿತ ಹಲವಾರು ರೋಗಗಳಿಗೆ ಭಾರತ ದೇಶವು ಕೇಂದ್ರವಾಗಿ ಪರಿರ್ವತನೆಗೊಳ್ಳುತ್ತಿದೆ. ಹಾಗಾಗಿ, ಯೋಗದೊಂದಿಗೆ ಜೀವನಶೈಲಿ ಸುಧಾರಣೆ ಹಾಗೂ ಉತ್ತಮ ಅಭ್ಯಾಸಗಳ ಬಗ್ಗೆಯೂ ಪಠ್ಯಕ್ರಮ ತಯಾರಾಗಬೇಕು ಎಂದು ಸಲಹೆ ನೀಡಿದರು.
ಆರೋಗ್ಯ ಸಚಿವ ಯು ಟಿ ಖಾದರ್ ಅವರು ಮಾತನಾಡಿ ಸತತ ಯೋಗ ಅಭ್ಯಾಸದಿಂದ ಮನಸ್ಸಿನ ಮೇಲೆ ಹಿಡಿತ ಸಾದಿಸಬಹುದು. ಹಾಗಾಗಿ ಯೋಗ ಎಲ್ಲರ ಜೀವನದ ಮೊದಲ ಗುರಿಯಾಗಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಡಿ ಹೆಚ್ ಶಂಕರಮೂರ್ತಿ, ಸಚಿವರಾದ ಆರ್ ವಿ ದೇಶಪಾಂಡೆ, ಉಮಾಶ್ರೀ, ಎಸ್ ಆರ್ ಪಾಟೀಲ್, ರಾಮಲಿಂಗಾ ರೆಡ್ಡಿ, ಶಾಸಕ ಪಿ ಸಿ ಮೋಹನ್, ತಾರಾ ಅನುರಾದ ಹಾಗೂ ಇತರೆ ಗಣ್ಯರು ಉಪಸ್ಥಿತರಿದ್ದರು.

4 comments:


  1. tweakbit-fixmypc-crackis a program used to update the driver. It is specially designed to detect and solve computer problems. This program checks for corrupted or incorrect window files to find all computer problems and solve all computer problems.
    freeprokeys

    ReplyDelete


  2. fileviewpro-crackcan be an application made by Solvusoft Corporation, which lets most files open with one certificate. The applications save you the requirement to get apps like others, a Picture viewer, business office document scanning,
    new crack

    ReplyDelete
  3. It is your absolute best aide to get Spotify tunes, convert Spotify tracks to MP3, order Spotify library, and so forth On a note, it gives an incredible across the board answer for fulfill your necessities of saving and downloading Spotify sound for practically any contraption. Abelssoft CheckDrive 4.1 Crack

    ReplyDelete