Saturday 13 June 2015

ಪ್ರಜಾಪ್ರಭುತ್ವದ ನಾಲ್ಕು ಅಂಗಗಳಲ್ಲೂ ಭ್ರಷ್ಠಾಚಾರ ತಾಂಡವವಾಡುತ್ತಿದೆ-ಎಸ್.ಆರ್.ಹೀರೆಮಠ್
ಮೈಸೂರು, ಜೂ. 13- ಪ್ರಜಾಪ್ರಭುತ್ವದ ಆಧಾರಸ್ತಂಭಗಳಾದ ನ್ಯಾಯಾಂಗ, ಶಾಸಕಾಂಗ, ಕಾರ್ಯಾಂಗ ಮತ್ತು ಪತ್ರಿಕಾರಂಗÀಳಲ್ಲೂ ಭ್ರಷ್ಟಾಚಾರ ವ್ಯಾಪಕವಾಗಿ ತಾಂಡವವಾಡುತ್ತಿದೆ ಎಂದು ಜನ ಸಂಗ್ರಾಮ ಪರಿಷತ್ತಿನ ಅಧ್ಯಕ್ಷ ಎಸ್.ಆರ್. ಹೀರೇಮಠ್ ಆರೋಪಿಸಿದರು.
  ಇಂದು ಮೈಸೂರಿನ ಪತ್ರಕತ್ರ ಭವನದಲ್ಲಿ  ಸುದ್ಧಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಭ್ರಷ್ಟರನ್ನು ರಕ್ಷಣೆ ಮಾಡುವ ಕೆಲಸ  ನಡೆಯುತ್ತಿದೆ, ರಾಜ್ಯದ ಲೋಕಾಯುಕ್ತ, ನ್ಯಾಯಾಂಗ ವ್ಯವಸ್ಥೆಯಲ್ಲಿ ಹಾಗೂ ಕಾರ್ಯಾಂಗಗಳಲ್ಲಿ ಭ್ರಷ್ಟರನ್ನು ರಕ್ಷಿಸುವ ಕೆಲಸ ನಡೆಯುತ್ತಿದೆ ಇದನ್ನು ಮಟ್ಟ ಹಾಕಲು ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಹೇಳಿದರು.
   ಅಕ್ರಮ ಗಣಿಗಾರಿಕೆಗಿಂತಲೂ ಮಿಗಿಲಾಗಿ  ಭೂಮಾಫಿಯಾ ದಂಧೆ ನಡೆಯುತ್ತಿದೆ ಎಂದ ಅವರು ಗೃಹಸಚಿವ ಜಾರ್ಜ್ ಹಾಗೂ ಇಂಧನ ಸಚಿವ  ಡಿ.ಕೆ. ಶಿವಕುಮಾರ್ ಅವರುಗಳು ಭ್ರಷ್ಟಾಚಾರದ ಕೂಪಗಳಾಗಿದ್ದಾರೆ  ಎಂದು ಗಂಭೀರ ಆರೋಪ ಮಾಡಿದರು.
  ಇವರುಗಳ ವಿರುದ್ಧ ಅಗೆದಷ್ಟು  ಭ್ರಷ್ಟಾಚಾರ ಕಂಡುಬರುತ್ತಿದೆ ಎಂದರು.  ಈ ಹಿಂದೆ ಜಾಯ್ ಐಸ್‍ಕ್ರಿಮ್ ಸಂಸ್ಥೆಗೆ ಗೋಮಾಳದ ಭೂಮಿಯನ್ನು ನೀಡುವಾಗಲೇ ಆ ಸಂಸ್ಥೆಯಿಂದ  ಜಾರ್ಜ್ ಪತ್ರವನ್ನು ಬರೆಸಿಕೊಂಡಿದ್ದರು. ಅದರಂತೆ ಈಗ ಆ ಸ್ಥಳವನ್ನು ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಗೆ ಮಾರಾಟ ಮಾಡಿದ್ದಾರೆ ಎಂದು ಹೇಳಿದರು.
ಪ್ರೆಸ್ಟೀಜ್ ಗ್ರೂಪ್ ಸಂಸ್ಥೆಯಿಂದ ವಶಪಡಿಸಿಕೊಂಡಿರುವ ಭೂಮಿಯನ್ನು ಅದೇ ಸಂಸ್ಥೆಗೆ ನೀಡಬಾರದೆಂದು ಅವರು  ಆಗ್ರಹಿಸಿದರು.
 ಈ ವಿಷಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗಮನಹರಿಸಿ ಸರ್ಕಾರ  ವಶಪಡಿಸಿಕೊಂಡಿರುವ ಭೂಮಿ ಪ್ರೆಸ್ಟೀಜ್ ಸಂಸ್ಥೆಯ ಪಾಲಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
 ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಶೇ. 30ರಷ್ಟು ಭ್ರಷ್ಟಾಚಾರ ಇದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
    ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಆವರು ಮುಖ್ಯಮಂತ್ರಿ ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ತೊಡಗಿಲ್ಲ, ಅವರ ಹಿಂಬಾಲಕರು  ಅಕ್ರಮಗಳನ್ನು ನಡೆಸುತ್ತಿದ್ದು ಅದು  ಸಿದ್ದರಾಮಯ್ಯ ಅವರನ್ನು ಸಂಕಟಕ್ಕೆ ಸಿಲುಕಿಸಿದೆ,  ಹಾಗಾಗಿ ಸಿ.ಎಂ. ರವರು  ಎಚ್ಚರಿಕೆ ಹೆಜ್ಜೆ ಇಡಬೇಕೆಂದು ಹೇಳಿದರು.
 ಲೋಕಾಯುಕ್ತದಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಎಸ್‍ಪಿ ಸೋನಿಯಾ ನಾರಂಗ್ ಈಗ ಬಹಿರಂಗಪಡಿಸಿದ್ದಾರೆ. ನಾನು ಈ ಹಿಂದೆಯೇ ಲೋಕಾಯುಕ್ತರಾದ ಭಾಸ್ಕರ್ ರಾವ್ ಅವರನ್ನು ಭೇಟಿ ಮಾಡಿ ತಮ್ಮ ಸಂಸ್ಥೆಯಲ್ಲಿ ಭ್ರಷ್ಟಾಚಾರ ನಡಯುತ್ತಿದೆ ಕಡಿವಾಣ ಹಾಕಿ ಎಂದು ತಿಳಿಸಿದ್ದೆ.
ಆದರೆ ಅವರು ಯಾವುದೇ ಕ್ರಮ ಜರುಗಿಸಿಲ್ಲ. ಆರಂಭದಲ್ಲೇ ಚಿವುಟಿ ಹಾಕಿದ್ದರೆ ಇಂದು ಬೃಹತ್ ಅಗಿ ಬೆಳೆಯುತ್ತಿರಲಿಲ್ಲ ಎಂದರು.
ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಅವರು ಆಗ್ರಹಿಸಿದರು.
ಸಚಿವರುಗಳಾದ ಡಿಕೆ ಶಿವಕುಮಾರ್, ಜಾರ್ಜ್ ಮತ್ತು ದಿನೇಶ್ ಗುಂಡುರಾವ್ ಅವರು ಭ್ರಷ್ಟಾಚಾರ ಮಾಡಿ ರಾಜ್ಯವನ್ನು ವಿನಾಶದತ್ತ ಕೊಂಡೂಯ್ಯುತ್ತಿದ್ದಾರೆ. ಹಾಗಾಗಿ ಮುಖ್ಯಮಂತ್ರಿಗಳು ಕುರ್ಚಿ ಉಳಿಸಿಕೊಳ್ಳಲು ಮುಂದಾಗದೆ ಕುರ್ಚಿ ಬಳಸಿಕೊಂಡು ಉತ್ತಮ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ನಾನು ಭ್ರಷ್ಟಾಚಾರ ಆರೋಪ  ಮಾಡಿರುವ ವ್ಯಕ್ತಿಗಳೊಂದಿಗೆ ಬಹಿರಂಗ ಚರ್ಚೆಗೆ ಸಿದ್ಧ ಎಂದು ಹಿರೇಮಠ್ ಸವಾಲು ಹಾಕಿದರು.
 _

No comments:

Post a Comment