Friday 26 June 2015

ಮಂಡ್ಯ: ಮಂಡ್ಯ ತಾಲೂಕು ತಗ್ಗಹಳ್ಳಿಯಲ್ಲಿ ಮೈತ್ರಿ ಯೋಜನೆಯಡಿ ಸಹಾಯಧನದ ಆದೇಶ ಪತ್ರವನ್ನು ಮಂಗಳಮುಖಿ ಶೋಭಾರವರಿಗೆ ಉಪ ತಹಸೀಲ್ದಾರ್ ಶಂಕರೇಗೌಡರವರು ವಿತರಿಸಿದರು.
ನಂತರ ಮಾತನಾಡಿದ ಅವರು, ಕೊತ್ತತ್ತಿ ಹೋಬಳಿಯಲ್ಲಿ ಮೊದಲ ಬಾರಿಗೆ ಮಂಗಳಮುಖಿಯರಿಗೆ ಸಹಾಯಧನ ವಿತರಿಸಲಾಗುತ್ತಿದೆ. ಇಂತಹ ಯೋಜನೆಗಳ ಬಗ್ಗೆ ಸ್ವಯಂ ಸೇವಾ ಸಂಸ್ಥೆಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಅರ್ಹರಿಗೆ ಕೊಡಿಸಲು ಮುಂದಾಗಬೇಕು ಎಂದರು.
ಈ ಯೋಜನೆಗಳ ಬಗ್ಗೆ ಜನರಿಗೆ ಅರಿವು ಇರುವುದಿಲ್ಲ. ಮೈತ್ರಿ ಸೇರಿದಂತೆ ಅನೇಕ ಉಪಯುಕ್ತ ಯೋಜನೆಗಳನ್ನು ಸರ್ಕಾರ ಘೋಷಣೆ ಮಾಡಿದೆ. ಫಲಾನುಭವಿಗಳು ಲಂಚ ನೀಡದೆ ಸೌಲಭ್ಯಗಳನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಜಿಲ್ಲಾ ಯುವ ಪರಿಷತ್ತು ಅಧ್ಯP್ಷ ಮಂಗಲ ಎಂ.ಯೋಗೇಶ್ ಮಾತನಾಡಿ, ಸರ್ಕಾರಗಳು ಜನರ ಸಹಭಾಗಿತ್ವದಲ್ಲಿ ಯೋಜನೆಗಳನ್ನು ರೂಪಿಸಲು ಹಲವು ಮಾರ್ಗೋಪಾಯಗಳನ್ನು ಕಂಡು ಹಿಡಿದಿದೆ. ಪಾರದರ್ಶಕ ನಿಯಮದಡಿಯಲ್ಲಿ ಸರ್ಕಾರಿ ಸವಲತ್ತುಗಳು ಗ್ರಾಮೀಣ ಜನರಿಗೆ ತಲುಪಿಸಬೇಕು ಎಂದರು.
ಸರ್ಕಾರ ದುರ್ಬಲ ವರ್ಗ ಹಾಗೂ ವಿಕಲ ಚೇತನರಿಗೆ ಹಲವು ಸೇವಾ ಸೌಲಭ್ಯಗಲನ್ನು ಒದಗಿಸುತ್ತಿದೆ. ಪ್ರತಿಯೊಬ್ಬರು ಕಂದಾಯ ಸಾP್ಷರತೆ ಹೊಂದಿ ಕಂದಾಯ ಇಲಾಖೆ ಮತ್ತು ಜನಸಮುದಾಯ ಒಗ್ಗಟ್ಟಿನಿಂದ ಯೋಜನೆಗಳನ್ನು ಬಳಸಿಕೊಳ್ಳಬೇಕು ಎಂದು ಹೇಳಿದರು.
ಕಂದಾಯ ನಿರೀP್ಷಕರಾದ ತಮ್ಮಣ್ಣ,ಸತ್ಯಾನಾರಾಯಣ, ಗ್ರಾಮ ಲೆಕ್ಕಾಧಿಕಾರಿ ಗುಣಶೇಖರ್ ಉಪಸ್ಥಿತರಿದ್ದರು.

ಮಂಡ್ಯ :ಸಾಲಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ರೈತರಾದ ರಾಜೇಂದ್ರ ಮತ್ತು ನಿಂಗೇಗೌಡರವರ ಕುಟುಂಬಗಳಿಗೆ ತಲಾ 20 ಲP್ಷ ಪರಿಹಾರ ನೀಡುವಂತೆ ರೈತಸಂಘದ ಸಂಚಾಲನ ಸಮಿತಿ ಅಧಕ್ಷ ಶಂಕರೇಗೌಡ ರಾಜ್ಯಸರ್ಕಾರವನ್ನು ಒತ್ತಾಯಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ರೈತರ ಆತ್ಮಹತ್ಯೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರ ನೇರ ಹೊಣೆಯಾಗಿವೆ. ಕೂಡಲೇ ಮೃತರ ಕುಟುಂಬಗಳಿಗೆ ಪರಿಹಾರ ವಿತರಿಸಬೇಕು ಎಂದರು.
ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆಗಳು ನೀಡಬೇಕಿರುವ ಕಬ್ಬಿನ ಬಾಕಿಯನ್ನು ಸರ್ಕಾರವೇ ಭರಿಸಬೇಕು. ಎಲ್ಲಾ ಬೆಳೆಗಳ ನೆರವಿಗೆ ಸರ್ಕಾರ ತP್ಷಣವೇ ನೆರವಿಗೆ ಬರಬೇಕು ಎಂದು ಆಗ್ರಹಿಸಿದರು.
ಸರ್ಕಾರಗಳು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಕೃಷಿ ಉತ್ಪನ್ನಗಳಿಗೆ ವೈe್ಞÁನಿಕ ಬೆಲೆ ನಿಗದಿ ಮಾಡುವುದು ಹಾಗೂ ಸಕಾಲಕ್ಕೆ ಹಣ ಪಾವತಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ
ಪ್ರಸಕ್ತ ಸಾಲಿನಲ್ಲಿ ಟನ್ ಕಬ್ಬಿಗೆ ಮೂರು ಸಾವಿರ ರುಪಾಯಿ ದರ ನಿಗದಿ ಮಾಡುವುದು ಸೇರಿದಂತೆ ಹಲವಾರು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜೂನ್ 29ರಂದು ಜಿಲ್ಲಾಧಿಕಾರಿಗಳ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲಾಗುವುದು ಎಂದು ತಿಳಿಸಿದರು.
2015-16ನೇ ಸಾಲಿಗೆ ಕೇಂದ್ರ ಸರ್ಕಾರ 2300 ರುಪಾಯಿ ಎಫ್ ಆರ್ ಪಿ ದರ ನಿಗದಿ ಮಾಡಿದ್ದು, ರಾಜ್ಯ ಸರ್ಕಾರ ಕಬ್ಬು ಅರೆಯುವಿಕೆ ಪ್ರಾರಂಭಿಸುವುದಕ್ಕೂ ಮುನ್ನವೇ ಕನಿಷ್ಠ 3 ಸಾವಿರ ರುಪಾಯಿ ಸಲಹಾ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.
2014-15ನೇ ಸಾಲಿನಲ್ಲಿ ಕಬ್ಬು ಅರೆದಿರುವ ಐದು ಸಕ್ಕರೆ ಕಾರ್ಖಾನೆಗಳು ಬಾಕಿ ಉಳಿಸಿಕೊಂಡಿರುವ 200 ಕೋಟಿ ರು.ಗಳನ್ನು  ಕೂಡಲೇ ಪಾವತಿ¸ಬೇಕು. ಪ್ರತಿ ಟನ್ ಗೆ 2200 ರು. ಮಾತ್ರ ಪಾವತಿ ಮಾಡುತ್ತಿದ್ದು, ಸರ್ಕಾರ ಹೇಳಿದಂತೆ 300 ರು. ಬಾಕಿ ಪಾವತಿಗೂ ಕ್ರಮಕೈಗೊಳ್ಲಬೇಕು ಎಂದರು.
ರೇಷ್ಮೆ ಬೆಲೆ ದಿನೇ ದಿನೇ ಕುಸಿಯುತ್ತಿದ್ದು, ಕೆ.ಜಿ.ರೇಷ್ಮೆ ಬೆಲೆ 400 ರುಗಳಿಂದ 150 ರು.ಗಳಿಗೆ ಕುಸಿದಿದೆ. ಇದರಿಂದ ರೈತ ತೀರಾ ಸಂಕಷ್ಟಕ್ಕೆ ಸಿಲುಕಿದ್ದಾನೆ. ಕೂಡಲೇ ಕೇಂದ್ರ ಸರ್ಕಾರ ರೇಷ್ಮೆ ಆಮದು ಸುಂಕವನ್ನು ಶೇ.10ರಿಂದ ಶೇ.30ಕ್ಕೆ ಹೆಚ್ಚಳ ಮಾಡಬೇಕು ಎಂದು ಆಗ್ರಹಿಸಿದರು.
ರಸಗೊಬ್ಬರ ಬೆಲೆ ಟನ್ ಗೆ 9 ಸಾವಿರದಿಂದ 12 ಸಾವಿರ ರುಪಾಯಿಗಳಿಗೆ ಹೆಚ್ಚಳವಾಗಿದೆ. ಇದರಿಂದ ರೈತರಿಗೆ ವ್ಯವಸಾಯದ ಖರ್ಚು ದ್ವಿಗುಣವಾಗಿದ್ದು, ರೈತರು ಕೃಷಿಯಿಂದ ವಿಮುಖರಾಗುವಂತೆ ಮಾಡಿದೆ. ಸರ್ಕಾರ ರಸಗೊಬ್ಬರ ದರ ಕಡಮೆ ಮಾಡಬೇಕು.
ಬತ್ತಕ್ಕೆ 1410 ರಿಂದ 1450 ರು. ಬೆಲೆ ನಿಗದಿ ಮಾಡಿರುವುದು ಅವೈe್ಞÁನಿಕವಾಗಿದೆ. ಕನಿಷ್ಠ 1800 ರು.ಗಳ ಬೆಲೆ ನಿಗದಿ ಮಾಡಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಲು ಸಹಕಾರ ಸಂಘಗಳಲ್ಲಿ ಬತ್ತ ಖರೀದಿ ಮಾಡಬೇಕು ಎಂದು ಒತ್ತಾಯಿಸಿದರು.
ಕೇಂದ್ರ ಸರ್ಕಾರ ಜಾರಿಗೆ ತರಲು ಉz್ದÉೀಶಿಸಿರುವ ಭೂ ಸ್ವಾಧೀನ ಕಾಯ್ದೆ ರೈತರ ಮರಣ ಶಾಸನವಾಗಿದೆ. ಕೃಷಿ ಭೂಮಿಯನ್ನು ಕಸಿದು ಕಾಪೆರ್Çರೇಟ್ ವಲಯಗಳಿಗೆ ನೀಡಲು ತುದಿಗಾಲಲ್ಲಿ ನಿಂತಿದೆ. ಕೂಡಲೇ ಈ ಕಾಯ್ದೆಯನ್ನು ಕೈಬಿಡಬೇಕು ಎಂದು ಶಂಕರೇಗೌಡ ಆಗ್ರಹ ಪಡಿಸಿದರು.
ಸುದ್ದಿಗೋಷ್ಠಿಯಲ್ಲಿ  ಕೆ.ಎಂ.ಉಮೇಶ್ , ಕೆ.ರಾಮಲಿಂಗೇಗೌಡ, ಕೆ.ಎಸ್ .ಸುಧೀರ್ ಕುಮಾರ್ ಇದ್ದರು.

ಮಂಡ್ಯ. : ಮೈಸೂರು ಕೃಷ್ಣಮೂರ್ತಿಪುರಂನ ಶಾರದಾವಿಲಾಸ ಶತಮಾನೋತ್ಸವ ಭವನದಲ್ಲಿ ಜು. 5ರಂದು 26 ಜೂನ್ 1975ರ ತುರ್ತುಸ್ಥಿತಿ - 40 ವರ್ಷಗಳು - ಒಂದು ನೆನಪು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ತೋಂಟದಾರ್ಯ ತಿಳಿಸಿದರು.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುರ್ತುಪರಿಸ್ಥಿತಿಯ ದಿನಗಳಲ್ಲಿ ಜನಜಾಗೃತಿ ಮೂಡಿಸಿದವರ ಶ್ರಮ, ತ್ಯಾಗ ಮಾಡಿದವರನ್ನು ಕೃತಜ್ಞತೆಯಿಂದ ಸ್ಮರಿಸಲು ಹಾಗೂ ಸನ್ಮಾನಿಸಲು ಕರಾಳ ದಿನದ ನೆನಪು ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ಮಾಜಿ ಶಾಸಕ ಎಚ್ .ಗಂಗಾಧರ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕರ್ನಾಟಕ ವಿಧಾನ ಪರಿಷತ್ತು ಸಭಾಪತಿ ಡಿ.ಎಚ್ .ಶಂಕರಮೂರ್ತಿ ಕರಾಳ ದಿನದ ನೆನಪನ್ನು ಹಂಚಿಕೊಳ್ಳಲಿದ್ದಾರೆ.
ಶಾಸಕ ಎಸ್ .ಸುರೇಶ್ ಕುಮಾರ್ ರವರು ಅಟಲ್ ಜೀ - ಅಡ್ವಾಣಿ ಜತೆ ಸೆರೆವಾಸದ ನೆನಪು ಹಾಗೂ ರಾಷ್ಟ್ರೀಯ ಸ್ವಯಂ ಸಂಘದ ಸು.ರಾಮಣ್ಣ ಹೋರಾಟದ ಹಿನ್ನೆಲೆ - ತಯಾರಿ ಭೂಗತ ಚಟುವಟಿಕೆ ಕುರಿತು ಮಾತನಾಡುವರು. ನಂತರ ಸೆರೆಮನೆ ವಾಸ ಅನುಭವಿಸಿದ ಸತ್ಯಾಗ್ರಹಿಗಳನ್ನು ಸನ್ಮಾನಿಸಲಾಗುವುದು ಎಂದು ತೋಂಟದಾರ್ಯ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರಾದ ಡಿ.ರಾಮಲಿಂಗಯ್ಯ, ಬಿ.ಟಿ.ಶ್ರೀನಿವಾಸಗೌಡ, ಶಂಕರರಾವ್ , ರಾಮಚಂದ್ರ, ಚಂದ್ರು ಇದ್ದರು.

No comments:

Post a Comment