Saturday 20 June 2015

ಮೈಸೂರು ಸುದ್ದಿಗಳು.


ವಸ್ತುಪ್ರದರ್ಶನ ಆವರಣದಲ್ಲಿ ಮೃಗಾಲಯ ಪಾರ್ಕಿಂಗ್
       ಮೈಸೂರು,ಜೂನ್.20.ಮೃಗಾಲಯದ ಮುಂಭಾಗದ ನಗರಪಾಲಿಕೆಯ ತ್ರಿಕೋನಾಕಾರ ಪಾರ್ಕಿಂಗ್ ಪ್ರದೇಶದಲ್ಲಿ ಬಸ್, ಟೆಂಪೋಗಳು ಹಾಗೂ 10 ಜನ ಸಾಮಥ್ರ್ಯದ ಕಾರು, ದ್ವಿಚಕ್ರ ವಾಹನಗಳಿಗೆ ಮಾತ್ರ ನಿಲುಗಡೆಗೆ ಅವಕಾಶ ಕಲ್ಪಿಸಿ ಇನ್ನುಳಿದ ವಾಹನಗಳಿಗೆ ಮೃಗಾಲಯದಿಂದ ಸುಮಾರು 400 ಮೀ ದೂರವಿರುವ ವಸ್ತುಪ್ರದರ್ಶನ ಪ್ರಾಧಿಕಾರದ ಒಟ್ಟು 12 ಎಕರೆ ಸ್ಥಳದಲ್ಲಿ ಮೃಗಾಲಯ ವೀಕ್ಷಕರ ವಾಹನಗಳಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸುವುದು ಅಗತ್ಯವಾಗಿದ್ದು ಇನ್ನೊಂದು ತಿಂಗಳಲ್ಲಿ ಈ ಕಾಮಗಾರಿ ಆರಂಭಕ್ಕೆ ಕ್ರಮವಹಿಸಲಾಗುವುದು ಎಂದು  ಜಿಲ್ಲಾಧಿಕಾರಿ ಸಿ.ಶಿಖಾ ಅವರು ತಿಳಿಸಿದರು.
      ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಮೃಗಾಲಯ ಪಾರ್ಕಿಂಗ್ ವ್ಯವಸ್ಥೆಗೆ ಸಂಬಂಧಿಸಿದ ಸಭೆಯಲ್ಲಿ ಮಾತನಾಡಿ ಈ ಉದ್ದೇಶಕ್ಕಾಗಿ ಪ್ರವಾಸೋದ್ಯಮ ಇಲಾಖೆಯಿಂದ 1.6 ಕೋಟಿ ರೂ. ಬಿಡುಗೆಯಾಗಿದ್ದು ನಿರ್ಮಿತಿ ಕೇಂದ್ರದಿಂದ ಈ ಕೆಲಸವನ್ನು ಆರಂಭಿಸಲಾಗುವುದು ಎಂದು ಅವರು ತಿಳಿಸಿದರು.
     ಮೈಸೂರಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು ಪ್ರಮುಖವಾಗಿ ಮೃಗಾಲಯದ ಬಳಿ ಸಂಚಾರಕ್ಕೆ ಹಾಗೂ ವಾಹನ ನಿಲುಗಡೆಗೆ ಅಡಚಣೆ ಉಂಟಾಗುತ್ತಿದೆ. ಈ ಸಮಸ್ಯೆಯನ್ನು ತ್ವರಿತವಾಗಿ ನಿವಾರಿಸಬೇಕಾಗಿದೆ ಅಲ್ಲದೆ ಪ್ರವಾಸಿಗರಿಗೆ ಒಂದೇ ಕಡೆ ವಿವಿಧ ಪ್ರವಾಸಿ ಸ್ಥಳಗಳ ಟಿಕೆಟ್ ನೀಡುವ ವ್ಯವಸ್ಥೆಯನ್ನು ದಸರಾ ವೇಳೆಯಲ್ಲಿ ಮಾತ್ರ ಮಾಡುತ್ತಿದ್ದು ವರ್ಷಪೂರ್ತಿ ಈ ವ್ಯವಸ್ಥೆ ಮುಂದುವರಿಸಬೇಕಾಗಿದೆ ಎಂದರು.
     ಮೈಸೂರು ಮೃಗಾಲಯಕ್ಕೆ ಪ್ರತಿ ವರ್ಷ ಅಂದಾಜು 33 ಲಕ್ಷ ಪ್ರವಾಸಿಗರು ಭೇಟಿ ನೀಡುತ್ತಿದ್ದು, 201-11ರಲ್ಲಿ 26.07 ಲಕ್ಷ, 2011-12ರಲ್ಲಿ 30.34 ಲಕ್ಷ, 2012-13ರಲ್ಲಿ 30.26 ಲಕ್ಷ, 2013-14ರಲ್ಲಿ 30.49 ಲಕ್ಷ ಹಾಗೂ 2014-15ರಲ್ಲಿ 31.63 ಲಕ್ಷ ಪ್ರವಾಸಿಗರು ಭೇಟಿ ನೀಡಿದ್ದಾರೆ. ಆಗಮಿಸುವ ಪ್ರವಾಸಿಗರಿಗೆ ವಾಹನ ನಿಲ್ಲುಗಡೆಗಾಗಿ ಮೃಗಾಲಯದ ಪಾರ್ಕಿಂಗ್ ಆವರಣದಲ್ಲಿ ಸ್ಥಳಾವಕಾಶದ ಕೊರತೆ ಇದೆ ಎಂದು ಮೈಸೂರು  ಮೃಗಾಲಯ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಪಿ. ರವಿ ವಿವರ ನೀಡಿದರು.
    ಮೃಗಾಲಯ ವೀಕ್ಷಣೆಗಾಗಿ ಆಗಮಿಸುವ ಪ್ರವಾಸಿಗರು ವಾರ್ಷಿಕ ಅಂದಾಜು 12 ಸಾವಿರ ಬಸ್, 15,500 ಟೆಂಪೋ, 2 ಲಕ್ಷ ಕಾರು/ಜೀಪ್ 80 ಸಾವಿರ ದ್ವಿಚಕ್ರವಾಹನ ಹಾಗೂ 100 ಬೈಸಿಕಲ್ ನಲ್ಲಿ ಆಗಮಿಸುತ್ತಿದ್ದು, 2014-15ರಲ್ಲಿ 8041 ಬಸ್, 13041 ಟೆಂಪೋ, 139360 ಕಾರು/ಜೀಪ್, 46196 ದ್ವಿಚಕ್ರವಾಹನ ಹಾಗೂ 47 ಬೈಸಿಕಲ್‍ಗಳಿಗೆ ಮಾತ್ರ ಮೃಗಾಲಯ ಪಾರ್ಕಿಂಗ್ ಆವರಣದಲ್ಲಿ ವಾಹನ ನಿಲುಗಡೆ ಮಾಡಲು ಸಾಧ್ಯವಾಗಿದ್ದು, ಇನ್ನುಳಿದ ವಾಹನಗಳು ಸಾರ್ವಜನಿಕ ಸ್ಥಳಗಳಲ್ಲಿ ನಿಲುಗಡೆಯಾಗಿರುತ್ತದೆ ಎಂದರು.
    ವಾಹನ ನಿಲುಗಡೆಯ ಸಮಸ್ಯೆ ಪರಿಹರಿಸಲು ಬಹು ಮಹಡಿ ಪಾರ್ಕಿಂಗ್ ಸಂಕೀರ್ಣ ನಿರ್ಮಿಸಲು ಯೋಜಿಸಲಾಗಿದ್ದು, ಬಹು ಮಹಡಿ ಪಾರ್ಕಿಂಗ್ ನಿರ್ಮಾಣ ಕಟ್ಟಡ ಪಾರಂಪರಿಕ ಕಟ್ಟಡಕ್ಕಿಂತ ಹೆಚ್ಚು ಎತ್ತರವಾಗಿರುವುದರಿಂದ ನಿರ್ಮಾಣವನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.
       ವಸ್ತುಪ್ರದರ್ಶನ ಪ್ರಾಧಿಕಾರದ ಪ್ರದೇಶದಲ್ಲಿ ಗುರುತಿಸಿರುವ 12 ಎಕರೆ ಪ್ರದೇಶದಲ್ಲಿ ನುರಿತ ವಾಸ್ತುಶಿಲ್ಪಿಗಳಿಂದ  ನಕ್ಷೆ ಮಾಡಿಸಿ, ಪಾರ್ಕಿಂಗ್ ಪ್ರದೇಶವನ್ನು ಅಭಿವೃದ್ಧಿಪಡಿಸಿ 1000 ಸಾವಿರ ಕಾರುಗಳಿಗೆ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವುದು. ಪಾರ್ಕಿಂಗ್ ವ್ಯವಸ್ಥೆ ಕಾಮಗಾರಿಯ ವೆಚ್ಚವನ್ನು ವಸ್ತುಪ್ರದರ್ಶನ ಪ್ರಾಧಿಕಾರವೇ ಭರಿಸಿ ನಿರ್ವಹಣೆ ಸಂಪೂರ್ಣ ಜವಾಬ್ದಾರಿ ವಹಿಸಿಕೊಳ್ಳಬಹುದಾಗಿದೆ ಎಂದರು.
    ಮೃಗಾಲಯ ಹಾಗೂ ವಸ್ತುಪ್ರದರ್ಶನ ಪ್ರಾಧಿಕಾರದೊಂದಿಗೆ ಪಾರ್ಕಿಂಗ್ ಸೌಲಭ್ಯ ಕಲ್ಪಿಸಲು ಒಡಂಬಡಿಕೆ ಮಾಡಿಕೊಳ್ಳಬಹುದಾಗಿದೆ.    ಒಂದೇ ಪ್ರದೇಶದಲ್ಲಿ ಸಮೂಹ ವಾಹನ ನಿಲುಗಡೆ ಮಾಡಬಹುದಾಗಿದೆ. ಈ ಪ್ರದೇಶದಿಂದ ಪ್ರವಾಸಿಗರು ಮೃಗಾಲಯ ಹಾಗೂ ಅರಮನೆಗೆ ಭೇಟಿ ನೀಡಲು ಉಚಿತ ಮಿನಿ ಬಸ್ ಸಾರಿಗೆ ವ್ಯವಸ್ಥೆ ಚಾಮುಂಡಿಬೆಟ್ಟಕ್ಕೆ ಭೇಟಿ ನೀಡಲು ಕೆ.ಎಸ್.ಆರ್.ಟಿ.ಸಿ. ಸಹಯೋಗದೊಂದಿಗೆ ಸಮಗ್ರ ಸಾರಿಗೆ ಸೌಲಭ್ಯ ಪಡೆಯಬಹುದಾಗಿದೆ. ಚಾಮುಂಡಿ ಬೆಟ್ಟ, ಮೃಗಾಲಯ ಹಾಗೂ ಅರಮನೆ 3 ಪ್ರವಾಸಿ ತಾಣಗಳಲ್ಲಿ ವಾಹನ ನಿಲುಗಡೆಯಲ್ಲಿ ಪದೇಪದೇ ಉದ್ಬವಾಗಿರುತ್ತಿರುವ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಹಾಗೂ 3 ಪ್ರವಾಸಿ ತಾಣಗಳಲ್ಲಿ ಪಾರ್ಕಿಂಗ್ ಸಂಕೀರ್ಣ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು ತಗ್ಗಿಸಬಹುದಾಗಿದೆ. ಮುಂದಿನ ದಿನಗಳಲ್ಲಿ ಚಾಮುಂಡಿ ಬೆಟ್ಟಕ್ಕೆ ರೊಪ್ ವೇ ಸೌಲಭ್ಯ ಕೂಡ ಕಲ್ಪಿಸಬಹುದಾಗಿದೆ ಎಂದರು.
     ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಶಾಸಕ ವಾಸು, ಅರಮನೆ ಮಂಡಳಿಯ ಉಪನಿರ್ದೇಶಕ ಸುಬ್ರಮಣ್ಯ, ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಜಿ. ಬೆಟಸೂರ ಮಠ್ ಇನ್ನಿತರ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಕಾಪಾಡಲು ಸೂಚನೆ



ಮೈಸೂರು,ಜೂನ್.20.ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆ ಹಾಗೂ ಆರೋಗ್ಯ ಸ್ನೇಹಿ ವಾತಾವರಣಕ್ಕೆ ಹೆಚ್ಚಿನ ಆದ್ಯತೆ ನೀಡಲು ಆರೋಗ್ಯ ಇಲಾಖೆ ಮುಂದಾಗಬೇಕು ಎಂದು ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಡಾ. ಬಿ.ಪುಷ್ಪ ಅಮರನಾಥ್ ತಿಳಿಸಿದರು.
ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಜಿಲ್ಲಾ ಪಂಚಾಯತ್ ಕೆ.ಡಿ.ಪಿ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಸಾಕಷ್ಟು ಅನುದಾನವು ಸರ್ಕಾರದಿಂದ ಮಂಜೂರಾದರೂ ಜಿಲ್ಲೆಯ ಬಹಳಷ್ಟು ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ. ಸಾರ್ವಜನಿಕರು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡುವುದರ ಬದಲು  ಖಾಸಗಿ ಆಸ್ಪತ್ರೆಗಳಿಗೆ ಹೆಚ್ಚಾಗಿ ಭೇಟಿ ನೀಡುತ್ತಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಶುದ್ಧ್ದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ, ಆರೋಗ್ಯಕರ ವಾತಾವರಣ ಕಾಪಾಡದಿರುವುದು ಮುಖ್ಯ ಕಾರಣಗಳಾಗಿವೆ ಎಂದರು.
     ಆರೋಗ್ಯ ರಕ್ಷಾ ನಿಧಿಯಡಿ ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗಾಗಿ ಹಿಂದೆ ಮೀಸಲಿದ್ದ 2 ಲಕ್ಷ ರೂ ಅನುದಾನವನ್ನು 5 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಹೆಚ್ಚಿನ ಹಣವನ್ನು ಆಸ್ಪತ್ರೆ ಆವರಣದಲ್ಲಿ ಶುಚಿತ್ವ ಕಾಪಾಡಲು ಒತ್ತು ನೀಡಬೇಕು. ಆಸ್ಪತ್ರೆ ಆವರಣದಲ್ಲಿ ಅರೋಗ್ಯ ಸ್ನೇಹಿ ಸಸಿಗಳನ್ನು ನೆಡಬೇಕು ಮತ್ತು ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಅನುಕೂಲಕ್ಕಾಗಿ ಕ್ಯಾಂಟೀನ್‍ಗಳನ್ನು ತೆರೆಯಬೇಕು ಎಂದು ತಿಳಿಸಿದರು.
    ಜಿಲ್ಲೆಯಲ್ಲಿರುವ 108 ವಾಹನ ಸೇವೆಯ ಬಗ್ಗೆ ಬಹಳಷ್ಟು ದೂರಗಳು ಸಾರ್ವಜನಿಕ ವಲಯಗಳಲ್ಲಿ ಕೇಳಿಬಂದಿದ್ದು, ಆರೋಗ್ಯ ತುರ್ತು ವಾಹನದ ಸೇವೆಯ ವ್ಯವಸ್ಥೆಯನ್ನು ಶೀಘ್ರ ಸರಿಪಡಿಸಿಕೊಳ್ಳಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಆರೋಗ್ಯ ಇಲಾಖೆಯಿಂದ ಅಗತ್ಯ ಕ್ರಮವಹಿಸಬೇಕು ಎಂದರು.
    ಜಿಲ್ಲೆಯಲ್ಲಿ ಕ್ಷೀರ ಭಾಗ್ಯ ಯೋಜನೆಯ ಸೌಲಭ್ಯ ಅರ್ಹರ ಪಾಲಾಗುತ್ತಿಲ್ಲದಿರುವುದರ ಬಗ್ಗೆ ಅನೇಕ ಘಟನೆಗಳು  ಸಾಕ್ಷಿಕರಿಸಿದೆ. ಈ ಯೋಜನೆಗೆ ಸೇರಿದ ಹಾಲು ಪುಡಿಯ ಪ್ಯಾಕೆಟ್‍ಗಳು ಹೋಟೆಲ್‍ಗಳಲ್ಲಿ ಲಭ್ಯವಾಗಿವೆ. ಶಾಲೆ ಹಾಗೂ ಅಂಗನವಾಡಿ ಕೇಂದ್ರಗಳಲ್ಲಿ ಕ್ಷೀರ ಭಾಗ್ಯ ಯೋಜನೆಯಲ್ಲಿ ನಡೆಯುವ ಅವ್ಯವಹಾರವನ್ನು ತಡೆಗಟ್ಟಲು ನಿರಂತರ ದಾಳಿಗಳು ನಡೆಯಬೇಕು ಎಂದು ಅಧ್ಯಕ್ಷರು ಸೂಚಿಸಿದರು.
   ರೈತರಿಗೆ ಸರ್ಕಾರದ ಸೌಲಭ್ಯಗಳ ಕುರಿತು ಹೆಚ್ಚು ಮಾಹಿತಿಗಳನ್ನು ನೀಡುವ ವ್ಯವಸ್ಥೆಯಾಗಬೇಕು. ಮಳೆ ಆರಂಭವಾಗಿರುವುದರಿಂದ ಕೃಷಿ ಚಟುವಟಿಕೆಗಳು ಪ್ರಾರಂಭಗೊಂಡಿವೆ. ರಸಗೊಬ್ಬರ, ಬಿತ್ತನೆ ಬೀಜ ಹಾಗೂ ರೈತರಿಗೆ ಬೇಕಾಗುವ ಅಗತ್ಯ ಸೌಲಭ್ಯ ನೀಡುವುದರಲ್ಲಿ ಕೃಷಿ ಇಲಾಖೆ ಪ್ರಮುಖ ಪಾತ್ರವಹಿಸಬೇಕು. ರೈತರು ಕೃಷಿ ಚಟುವಟಿಕೆಗಳ ಬಗ್ಗೆ ಹೆಚ್ಚು ಜಾಗೃತರಾಗಲು ಅರಿವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಹೇಳಿದರು.
    ರಾಜ್ಯ ಗ್ರಾಮೀಣಾಭಿವೃದ್ಧಿ ಸಂಸ್ಥೆಯಲ್ಲಿ ಗ್ರಾಮಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಪ್ರತ್ಯೇಕವಾಗಿ ಎರಡು ಹಂತಗಳಲ್ಲಿ ತರಬೇತಿಯನ್ನು ನೀಡಲಾಗುವುದು. ಆದರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಇಲಾಖೆಗಳ ಮಾಹಿತಿಯು ಅಷ್ಟೇ ಮಹತ್ವ ಹೊಂದಿರುತ್ತದೆ. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಎಲ್ಲಾ ಇಲಾಖೆಗಳ ಅಧಿಕಾರಿಗಳು ತಮ್ಮಗೆ ಸಂಬಂಧಪಟ್ಟ ಮಾಹಿತಿಯನ್ನು ನೀಡಲು ಕ್ರಮವಹಿಸಬೇಕು ಎಂದು ತಿಳಿಸಿದರು.
    ಸರ್ಕಾರದಿಂದ ನೀಡಲಾಗುವ ಸೌಲಭ್ಯಗಳಿಂದ ಯಾವುದೇ ವಿದ್ಯಾರ್ಥಿಗಳು ವಂಚಿತರಾಗಬಾರದು. ಸಾರ್ವಜನಿಕ ಕಲ್ಯಾಣ, ಹಿಂದುಳಿದ ವರ್ಗಗಳ ಕಲ್ಯಾಣ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಗಳ ಬಹುತೇಕ ವಿದ್ಯಾರ್ಥಿನಿಲಯಗಳು ಶೈಕ್ಷಣಿಕ ವರ್ಷ ಆರಂಭಗೊಂಡು ತಿಂಗಳು ಕಳೆಯುತ್ತ ಬಂದರೂ ತೆರೆದಿರುವುದಿಲ್ಲ. ಶೀಘ್ರ ಎಲ್ಲಾ ತಾಲ್ಲೂಕುಗಳ ಅಧಿಕಾರಿಗಳಿಗೆ ಈ ಸಂಬಂಧ ಕ್ರಮ ಕೈಗೊಂಡು ವಿದ್ಯಾರ್ಥಿಗಳಿಗೆ ಶೈಕ್ಷಣಿ ಬೆಳವಣಿಗೆಗಾಗಿ ಮುಂದಾಗಬೇಕು ಎಂದು ಸೂಚಿಸಿದರು.
      ಜಿಲ್ಲೆಯ ಎಲ್ಲಾ ಸರ್ಕಾರಿ ಶಾಲೆ ಹಾಗೂ ವಿದ್ಯಾರ್ಥಿ ನಿಲಯಗಳಲ್ಲಿ ಮಕ್ಕಳ ಆರೋಗ್ಯವನ್ನು ಬಲಪಡಿಸುವ ಹಣ್ಣು ತರಕಾರಿ ಗಿಡಗಳನ್ನು ನಡಲು ಕ್ರಮಕೈಗೊಳ್ಳಬೇಕು. ಸಾಮಾಜಿ ಅರಣ್ಯವನ್ನು ಹೆಚ್ಚಿಸಲು ಶಾಲಾ, ಸರ್ಕಾರಿ ಕಚೇರಿ ಹಾಗೂ ಪ್ರಮುಖ ಸ್ಥಳಗಳ ಆವರಣವನ್ನು ಬಳಸಿಕೊಳ್ಳಬೇಕು ಎಂದು ಬಿ.ಪುಷ್ಪ ಅಮರನಾಥ್ ತಿಳಿಸಿದರು.
     ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಿ.ಎ.ಗೋಪಾಲ್, ಉಪಾಧ್ಯಕ್ಷರಾದ ಎಲ್ ಮಾದಪ್ಪ, ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳಾದ ರಾಜಣ್ಣ, ರಾಜಯ್ಯ, ಜವರೇ ಗೌಡ್ರು, ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ ಹಾಗೂ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದರು.  

ರೇಷ್ಮೆ ಬೋರ್ಡ್ ಸದಸ್ಯ ಕಾರ್ಯದರ್ಶಿಯಾಗಿ ಡಾ. ಹೆಚ್. ನಾಗೇಶ್ ಪ್ರಭು
 

   ಮೈಸೂರು,ಜೂನ್.20.ಕೇಂದ್ರೀಯ ರೇಷ್ಮೆ ಬೋರ್ಡ್ ಸದಸ್ಯ
ಕಾರ್ಯದರ್ಶಿಯಾಗಿ ಡಾ. ಹೆಚ್. ನಾಗೇಶ್ ಪ್ರಭು ಐ.ಎಫ್.ಎಸ್ ಇವರು ಬೆಂಗಳೂರಿನಲ್ಲಿ ಇತ್ತೇಚಿಗೆ ಅಧಿಕಾರ ಸ್ವೀಕರಿಸಿದರು.
    ಇವರು 1984ನೇ ಸಾಲಿನ ಎ.ಎಫ್.ಎಸ್ ಅಧಿಕಾರಿಯಾಗಿದ್ದು ಧಾರವಾಡದ ಕೃಷಿ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿರುತ್ತಾರೆ. ಈ ಹಿಂದೆ ಇವರು ಭಾರತ ಸರ್ಕಾರದ ಆರೋಗ್ಯ ಸಂಶೋಧನೆ ಇಲಾಖೆಯಲ್ಲಿ ಜಂಟಿಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿರುತ್ತಾರೆ.

ಜೂನ್ 23 ರಂದು ನೂತನ ಮೆಗಾ ಡೇರಿ ಶಂಕುಸ್ಥಾಪನೆ
     ಮೈಸೂರು,ಜೂನ್.20.ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ವತಿಯಿಂದ ನೂತನ ಮೆಗಾ ಡೇರಿ ಶಂಕುಸ್ಥಾಪನಾ ಸಮಾರಂಭ ಜೂನ್ 23 ರಂದು ಮಧ್ಯಾಹ್ನ 2-45 ಗಂಟೆಗೆ ಮೈಸೂರಿನ ಆಲನಹಳ್ಳಿಯಲ್ಲಿ ನಡೆಯಲಿದೆ.
     ಮುಖ್ಯಮಂತ್ರಿ ಸಿದ್ದಾರಾಮಯ್ಯ ಅವರು ಶಂಕುಸ್ಥಾಪನೆ ಹಾಗೂ ಭೂಮಿ ಪೂಜೆ ನೆರವೇರಿಸುವರು. ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್ ಅವರು ಕಾರ್ಯಕ್ರಮ ಉದ್ಘಾಟಿಸುವರು. ಕಾನೂನು ಮತ್ತು ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ ಅವರು ಮೆಗಾ ಡೇರಿ ನಕ್ಷೆ ಅನಾವರಣಗೊಳಿಸುವರು. ಶಾಸಕ ಎಂ.ಕೆ. ಸೋಮಶೇಖರ್ ಅವರು ಅಧ್ಯಕ್ಷತೆ ವಹಿಸುವರು.
     ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಲೋಕೋಪಯೋಗಿ ಸಚಿವ ಡಾ|| ಎಸ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ಲೋಕಸಭಾ ಸದಸ್ಯರುಗಳಾದ ಪ್ರತಾಪಸಿಂಹ, ಆರ್. ಧ್ರುವನಾರಾಯಣ್, ಸಿ.ಎಸ್. ಪುಟ್ಟರಾಜು, ಬೆಂಗಳೂರಿನ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳಿ ಅಧ್ಯಕ್ಷ ಪಿ. ನಾಗರಾಜು, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಡಾ. ಹರ್ಷಕುಮಾರ್ ಭನವಾಲ, ವಿಧಾನಸಭಾ ಸದಸ್ಯ ತನ್ವೀರ್ ಸೇಠ್, ವಾಸು, ಜಿ.ಟಿ.ದೇವೇಗೌಡ, ಕೆ.ವೆಂಕಟೇಶ್, ಹೆಚ್.ಪಿ. ಮಂಜುನಾಥ್, ಸಾ.ರಾ.ಮಹೇಶ್, ಎಸ್. ಚಿಕ್ಕಮಾದು, ವಿಧಾನ ಪರಿಷತ್ ಸದಸ್ಯರುಗಳಾದ ಸಿ.ಹೆಚ್.ವಿಜಯಶಂಕರ್, ಗೋ. ಮಧುಸೂಧನ್, ಮರಿತಿಬ್ಬೇಗೌಡ, ಎಸ್. ನಾಗರಾಜು, ಆರ್. ಧರ್ಮಸೇನ, , ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಕರ್ನಾಟಕ ರಾಜ್ಯ ಬೀಜ ನಿಗಮದ ಅಧ್ಯಕ್ಷ ಡಿ.ಸುಂದರ ದಾಸ್, ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಸ್.ಸಿ. ಬಸವರಾಜು, ನಗರಪಾಲಿಕೆ ಸದಸ್ಯೆ ಸಿ.ಎಸ್. ರಜಿನಿ ಅಣ್ಣಯ್ಯ ಅವರುಗಳು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.  

                            ಧನಸಹಾಯಕ್ಕೆ ಅರ್ಜಿ ಆಹ್ವಾನ
ಮೈಸೂರು,ಜೂ.20.ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಕನ್ನಡ ಭಾಷೆ, ಸಾಹಿತ್ಯ, ಸಂಗೀತ, ನೃತ್ಯ, ಜಾನಪದ, ನಾಟಕ, ಯಕ್ಷಗಾನ, ಚಿತ್ರಕಲೆ, ಶಿಲ್ಪಕಲೆ ಮುಂತಾದ  ಸೃಜನಶೀಲಾ ಕಲಾಪ್ರಕಾರಗಳಲ್ಲಿ ನಿರಂತರ ಚಟುವಟಿಕೆ ನಡೆಸುತ್ತಿರುವ ಸಂಘ ಸಂಸ್ಥೆ ಹಾಗೂ ಅಸಂಘಟಿತ ಕಲಾವಿದರಿಗೆ ವಾದ್ಯಪರಿಕರ, ವೇಷಭೂಷಣಕ್ಕೆ ಸಹಾಯಧನ ನೀಡಲಾಗುವುದು. ಚಿತ್ರಕಲಾ/ಶಿಲ್ಪಕಲಾವಿದರಿಗೆ ಕಲಾಕೃತಿ ಪ್ರದರ್ಶನಕ್ಕಾಗಿ ಪ್ರೋತ್ಸಾಹ ಧನ ನೀಡಲಾಗುವುದು.
ಆಸಕ್ತ ಕಲಾವಿದರು/ ಸಂಘ ಸಂಸ್ಥೆಗಳು ತಿತಿತಿ.ಞಚಿಟಿಟಿಚಿಜಚಿsiಡಿi.ಛಿo.iಟಿ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕ ಜುಲೈ 15 ರೊಳಗಾಗಿ  ಅರ್ಜಿ ಸಲ್ಲಿಸುವುದು.
ಅರ್ಜಿ ಸಲ್ಲಿಸುವಾಗ ದಾಖಲೆಗಳ ಮೂಲ ಪ್ರತಿಗಳನ್ನು ಸ್ಕ್ಯಾನ್ ಮಾಡಿ ಸಲ್ಲಿಸಬೇಕು. ಧನಸಹಾಯ ಪಡೆದ ಸಂಸ್ಥೆಗಳು ಸಾಮಾಜಿಕ ತಪಾಸಣೆಗೆ ಒಳಪಡುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2513225 ಮೊಬೈಲ್ ಸಂಖ್ಯೆ 9844980291 ನ್ನು ಸಂಪರ್ಕಿಸುವುದು.

ಪ್ರತಿಭಾ ಪುರಸ್ಕಾರ ಅರ್ಜಿ ಆಹ್ವಾನ
      ಮೈಸೂರು,ಜೂನ್.20.ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ಏಪ್ರಿಲ್ 2015ರಲ್ಲಿ ನಡೆದ ಎಸ್.ಎಸ್.ಎಲ್.ಸಿ/ಪಿ.ಯು.ಸಿ ವಾರ್ಷಿಕ ಪರೀಕ್ಷೆಯಲ್ಲಿ ಶೇಕಡ 90ಕ್ಕಿಂತ ಹೆಚ್ಚು ಅಂಕ ಗಳಿಸಿರುವ ರಾಜ್ಯದ ಹಿಂದುಳಿದ ವರ್ಗಗಳ ಪ್ರವರ್ಗ-1, 2ಎ, 3ಎ ಹಾಗೂ 3ಬಿ ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ``ಡಿ.ದೇವರಾಜ ಅರಸು ಪ್ರತಿಭಾ ಪುರಸ್ಕಾರ’’ ನೀಡಲು ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಿದೆ.
     ಅರ್ಜಿ ಸಲ್ಲಿಸುವ ಪ್ರವರ್ಗ-1ರ ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯ ಮಿತಿ 2.50 ಲಕ್ಷ, 2ಎ, 3ಎ ಹಾಗೂ 3ಬಿಗೆ ಸೇರಿದ ವಿದ್ಯಾರ್ಥಿಗಳ ಕುಟುಂಬದ ಒಟ್ಟು ವಾರ್ಷಿಕ ಆದಾಯ ರೂ. 1.00 ಲಕ್ಷ ದೊಳಗೆ ಇರಬೇಕು.
     ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಲು ಜುಲೈ 15 ಕೊನೆಯ ದಿನಾಂಕವಾಗಿದ್ದು, ಅರ್ಜಿ ಸಲ್ಲಿಸಲು ಹಾಗೂ ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ದೂರವಾಣಿ ಸಂಖ್ಯೆ: 080-44554444 ಹಾಗೂ ಮೊಬೈಲ್ ಸಂಖ್ಯೆ: 9480818013, 9480818010 ಸಂಪರ್ಕಿಸಬಹುದು.
ಸಾಂಕ್ರಮಿಕ ರೋಗ ತಡೆಗಟ್ಟಲು ಸಾರ್ವಜನಿಕರು ಸಹಕರಿಸುವಂತೆ ಮನವಿ
     ಮೈಸೂರು,ಜೂನ್.20.ಮೈಸೂರು ನಗರ ಮತ್ತು ಜಿಲ್ಲೆಯಾದ್ಯಂತ ರೋಗವಾಹಕ ಆಶ್ರಿತ ರೋಗಗಳಾದ ಮಲೇರಿಯಾ, ಡೆಂಗ್ಯೂ, ಚಿಕುಂಗುನ್ಯ, ಮೆದಳುಜ್ವರ, ಇತರೆ ಸೊಳ್ಳೆ, ಮತ್ತು ಇತರೆ ಕೀಟಗಳಿಂದ ಹರಡುವ ರೋಗ ಪ್ರಕರಣಗಳು ವರದಿಯಾಗುತ್ತಿದ್ದು, ಈ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡು ಕಾರ್ಯೊನ್ಮುಕವಾಗಿದೆ ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಚಿದಂಬರ್ ಎಸ್.  ಅವರು ತಿಳಿಸಿದ್ದಾರೆ.
    ಜೂನ್-2015 ಮಾಹೆಯನ್ನು ಮಲೇರಿಯಾ ವಿರೋಧಿ ಮಾಹೆಯಾಗಿ ಆಚರಿಸಲಾಗುತ್ತಿದೆ. ಸಾಂಕ್ರಮಿಕ ರೋಗ ನಿಯಂತ್ರಿಸಲು  ಸಾರ್ವಜನಿಕರ ಸಹಕಾರ ಅತಿ ಮುಖ್ಯವಾಗಿರುತ್ತದೆ.
        ಮಲೇರಿಯಾ ಹರಡುವ ಅನಾಫಿಲಿಸ್ ಸೊಳ್ಳೆ ಹಾಗೂ ಡೆಂಗ್ಯು, ಚಿಕುಂಗುನ್ಯ ಹರಡುವ ಈಡಿಸ್ ಸೊಳ್ಳೆ ಉತ್ಪತ್ತಿ ತಡೆಗಟ್ಟಲು ಮನೆಯ ಸುತ್ತಮುತ್ತ ಮಳೆ ನೀರು ನಿಲ್ಲದಂತೆ ಮಾಡಿರಿ. ನೀರು ಶೇಖರಿಸುವ ಸಿಮೆಂಟ್ ತೊಟ್ಟಿ, ಬ್ಯಾರಲ್, ಡ್ರಮ್ಮುಗಳನ್ನು ಸದಾಕಾಲ ಮುಚ್ಚಿಡಿ. ಮನೆಯ ಸುತ್ತಮುತ್ತ ಬಿಸಾಡಿದ ಹಳೆಯ ಟೈರು, ಎಳನೀರ ಚಿಪ್ಪು, ಇತರೆ ತ್ಯಾಜ್ಯ ವಸ್ತುಗಳಲ್ಲಿ ನೀರು ಸಂಗ್ರಹವಾಗದಂತೆ ಸೂಕ್ತ ವಿಲೇವಾರಿ ಮಾಡುವುದು. ಸಾರ್ವಜನಿಕರು ಸೊಳ್ಳೆ ಕಡಿತದಿಂದ ಪಾರಾಗಲು ಸೊಳ್ಳೆ ಪರದೆ, ಸೊಳ್ಳೆ ನಿರೋಧಕ ಬಳಸುವುದು
    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆರೋಗ್ಯ ಕಾರ್ಯಕರ್ತರು ಮನೆಗೆ ಭೇಟಿ ನೀಡಿ ಸೊಳ್ಳೆ ಉತ್ಪತ್ತಿ ತಾಣಗಳ ಬಗ್ಗೆ ಹಾಗೂ ರೋಗ ಹರಡದಂತೆ ವಹಿಸಬೇಕಾದ ಎಚ್ಚರಿಕೆ ಬಗ್ಗೆ ತಿಳುವಳಿಕೆ ನೀಡಲಿದ್ದಾರೆ. ಸಾರ್ವಜನಿಕರು ಆರೋಗ್ಯ ಕಾಯಕರ್ತರೊಂದಿಗೆ ಸಹಕಾರ ನೀಡಿ, ಸೊಳ್ಳೆ ಮತ್ತು ಸೊಳ್ಳೆ ಲಾರ್ವ ಮೂಲೋತ್ಪಾಟನೆ ಮಾಡುವುದರ ಮೂಲಕ ರೋಗಗಳ ನಿಯಂತ್ರಣಕ್ಕೆ ಸಹಕರಿಸುವಂತೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಪರಿಚಿತÀ ಹೆಂಗಸಿನ ಶವÀ ಪತ್ತೆಗಾಗಿ ಮನವಿ
ಮೈಸೂರು,ಜೂನ್.20.ಪಾಂಡವಪುರ-ಶ್ರೀರಂಗಪಟ್ಟಣ  ಮೈಸೂರು ರೈಲು ನಿಲ್ದಾಣಗಳ ಮಧ್ಯ ರೈಲ್ವೆ ಕಿ.ಮೀ.ನಂ. 120/100ರಲ್ಲಿ ಹೊಸದಾಗಿ ನಿರ್ಮಿಸುತ್ತಿರುವ ರೈಲು ಮಾರ್ಗದಲ್ಲಿ ಜೂನ್ 19 ರಂದು   ಸುಮಾರು 25 ವರ್ಷ ಅಪರಿಚಿತ ಹೆಂಗಸನ್ನು ಕೊಲೆ ಮಾಡಿ ಮೃತ ದೇಹವನ್ನು ಹೊಸದಾಗಿ ನಿರ್ಮಾಣವಾಗುತ್ತಿರುವ ರೈಲ್ವೆ ಹಳಿಯ ಮೇಲೆ ತಂದು ಮಲಗಿಸಿದ್ದುದರಿಂದ ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
 ಅಪರಿಚಿತ ಮಹಿಳೆ 5 ಅಡಿ ಎತ್ತರ, ಸಾಧಾರಣ ಮೈಕಟ್ಟು, ಗೋಧಿ ಮೈಬಣ್ಣ, ತಲೆಯಲ್ಲಿ ಸುಮಾರು 1 ಅಡಿ ಉದ್ದದ ಕಪ್ಪು ಕೂದಲು ಬಲಗೈ ಮೇಲೆ ಆದರ್ಶ  ಎಂಬ ಹಚ್ಚೆ ಗುರುತು ಇರುತ್ತದೆ. ಕಪ್ಪು-ಬಿಳಿ ಬಣ್ಣದ ಮಿಶ್ರಿತ ಹೂಗಳ ಚಿತ್ರವಿರುವ ತುಂಬು ತೋಳಿನ ಚೂಡಿದಾರ್ ಟಾಪ್, ಕಪ್ಪು ಬಣ್ಣದ ಲೆಗ್ಗಿನ್ಸ್ ಪ್ಯಾಂಟ್, ಪಾಚಿ ಮತ್ತು ಕಪ್ಪು ಬಣ್ಣದ ಚೂಡುದಾರ್ ಪಾಲಿಸ್ಟಾರ್ ವೇಲ್, ಬಗೈಲೆಯಲ್ಲಿ ಹಸಿರು ಗಾಜಿನ ಬಳೆಗಳು, ಎಡ ಮೂಗಿನಲ್ಲಿ ಹಿತ್ತಾಳೆ ಮಾದರಿಯ ಸಣ್ಣ ಮೂಗುತಿ, ಕಿವಿಯಲ್ಲಿ ಬಿಳಿ ಹರಳಿನ ಫ್ಯಾನ್ಸಿ ಓಲೆ ಜುಮುಕಿ  ಧರಿಸಿರುತ್ತಾರೆ.
ಮೃತ ಹೆಂಗಸಿನ ದೇಹವÀನ್ನು ಮೈಸೂರಿನ ಮೆಡಿಕಲ್ ಕಾಲೇಜಿನ ಆಸ್ಪತ್ರೆಯ  ಶವಾಗಾರದಲ್ಲಿಡಲಾಗಿದೆ. ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.

No comments:

Post a Comment