ಅಗತ್ಯ ಸರಕುಗಳ ವ್ಯವಸ್ಥಿತ ವಿತರಣೆಗೆ ಸಂಸದ ಶ್ರೀ ಚಂದ್ರಪ್ಪ ಒತ್ತಾಯ
ನವದೆಹಲಿ. ಏ. 23.
ಅಗತ್ಯ ಸರಕುಗಳನ್ನು ವ್ಯವಸ್ಥಿತವಾಗಿ ವಿತರಣೆಯಾಗಬೇಕು. ಯಾವುದೇ ಕಪ್ಪು ಮಾರುಕಟ್ಟೆಯಲ್ಲಿ ಮಾರಾಟವಾಗದಂತೆ ಕೇಂದ್ರ ಸರ್ಕಾರವು ಕ್ರಮಕೈಗೊಳ್ಳಬೇಕು ಎಂದು ಸಂಸದ ಶ್ರೀ ಬಿ.ಎಂ. ಚಂದ್ರಪ್ಪ ಒತ್ತಾಯಿಸಿದ್ದಾರೆ.
ಅಗತ್ಯ ಸರಕುಗಳ ಸೇವೆಯು ಅತ್ಯಗತ್ಯವಾಗಿದ್ದು, ಸುರಕ್ಷಿತವಾಗಿ ಸಂಗ್ರಹಿಸಬೇಕು. ಅಕ್ರಮವಾಗಿ ಸಂಗ್ರಹಿಸಿ, ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಪದೇ ಪದೇ ದಾಳಿ ನಡೆಸಿ ವ್ಯವಸ್ಥಿತವಾಗಿ ಮಾರಾಟ ಮಾಡಲು ಕ್ರಮಕೈಗೊಳ್ಳಬೇಕು.ಕೇಂದ್ರ ಸರ್ಕಾರವು ಕೈಗೊಂಡ ಕ್ರಮದ ಬಗ್ಗೆ ವಿವರ ನೀಡುವಂತೆ ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಒತ್ತಾಯಿಸಿದ್ದಾರೆ.
ಅಗತ್ಯ ಸರಕು ಕಾಯ್ದೆ 1955 , ಪಿಬಿಎಂಎಂಎಸ್‍ಇಸಿ ( ಪ್ರಿವೆನ್‍ಷನ್ ಆಫ್ ಬ್ಲಾಕ್ ಮಾರ್ಕೆಟಿಂಗ್ ಅಂಡ ಮೇಟೆನೆಸ್ ಆಫ್ ಸಪ್ಲೇಸ್ ಆಫ್ ಎಸೆನ್ಸಿಯಲ್ ಕಮಾಡಿಟಿಸ್ ಆಕ್ಟ್ 1980 ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಅಗತ್ಯ ಸರಕುಗಳ ಅಕ್ರಮ ಸಂಗ್ರಹಣೆ, ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ, ಕೃತಕ ಕೊರತೆಯನ್ನು ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ ಅಧಿಕಾರವನ್ನು ವಿಕೇಂದ್ರಿಕರಿಸಲಾಗಿದೆ ಎಂದು ಕೇಂದ್ರ ಆಹಾರ ನಾಗರಿಕ ಸರಬರಾಜು ಹಾಗು ಗ್ರಾಹಕರ ವ್ಯಾಜ್ಯಗಳ ಪರಿಹಾರ ಸಚಿವಾಲಯವು ಉತ್ತರಿಸಿದೆ.
ರಾಷ್ಟ್ರದಲ್ಲಿ 2014 ನೇ ಸಾಲಿನಲ್ಲಿ 131384 ದಾಳಿಗಳನ್ನು ನಡೆಸಲಾಗಿದ್ದು, 11978 ಮಂದಿಯನ್ನು ದಸ್ತುಗಿರಿ ಮಾಡಲಾಗಿದೆ. 3175 ಕಾನೂನು ಕ್ರಮ ಜರುಗಿಸಲಾಗಿದೆ. ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ 2074 ಮಂದಿಯನ್ನು ಶಿಕ್ಷೆಗೆ ಒಪಡಿಸಲಾಗಿದೆ ಎಂದು ಅವರು ಸಚಿವಾಲಯವು ಉತ್ತರಿಸಿದೆ.

No comments:
Post a Comment