ಮೈಸೂರು .೧೮.ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ರವರು ನಿನ್ನೆ 05.45ಕ್ಕೆ ಮೈಸೂರು ನಗರ, ವಾರ್ಡ್ ನಂ:29ರ ಮೇಟಗಳ್ಳಿ ರೈಲ್ವೆ ಕ್ರಾಸಿಂಗ್ ರಸ್ತೆಯ ವಿಸ್ತರಣೆ ಹಾಗೂ ಅಗಲೀಕರಣಕ್ಕೆ ಸಂಬಂಧವಾಗಿ ಮುಡಾ ಆಯುಕ್ತರಾದ ಶ್ರೀ ಪಾಲಯ್ಯ ಎಸ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದೆಗೆ ಭೇಟಿ ನೀಡಿ, ಕುಲಂಕೂಷವಾಗಿ ಸ್ಥಳ ಪರಿಶೀಲನೆ ನಡೆಸಿದರು. ಸದರಿ ರಸ್ತೆಯ ಅಗಲೀಕರಣಕ್ಕೆ ಅಡೆ-ತಡೆಯಾಗಿರುವ ಮನೆಗಳ ತೆರವುಗೊಳಿಸುವ ಹಾಗೂ ಪರಿಹಾರವನ್ನು ನೀಡುವ ಸಂಬಂಧವಾಗಿ ಸಂಸದರು ಮುಡಾ ಆಯುಕ್ತರೊಂದಿಗೆ ಮಾತು ಕತೆ ನಡೆಸಿದರು. ಈ ವಿಷಯದ ಸಂಬಂಧವಾಗಿ ಶೀರ್ಘದಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
No comments:
Post a Comment