ವಾರಣಾಸಿಯಲ್ಲಿ ಸಹಾಯ ಕೇಂದ್ರ ಸ್ಥಾಪನೆ
ನವದೆಹಲಿ. ಏ. 28: ಭೂಕಂಪ ಸಂಭವಿಸಿದ ಹಿನ್ನೆಲೆಯಲ್ಲಿ ನೇಪಾಳದಿಂದ ಆಗಮಿಸುತ್ತಿರುವ ಕನ್ನಡಿಗರಿಗೆ ನೆರವಾಗಲು ಕರ್ನಾಟಕ ಸರ್ಕಾರವು ವಾರಣಾಸಿಯಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ ಎಂದು ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀಮತಿ ವಂದನಾ ಗುರ್ನಾನಿ ತಿಳಿಸಿದ್ದಾರೆ.
ಈ ಸಹಾಯ ಕೇಂದ್ರದ ಉಸ್ತುವಾರಿಕೆಗಾಗಿ ಐಎಎಸ್ ಅಧಿಕಾರಿ ಶ್ರೀ ರಮಣದೀಪ್ ಚೌದರಿ ಅವರನ್ನು ನಿಯೋಜಿಸಲಾಗಿದೆ. ಸಂಜೆ ವೇಳೆಗೆ ಅವರು ವಾರಣಾಸಿಯನ್ನು ತಲುಪಲಿದ್ದು, ನೇಪಾಳದಿಂದ ಆಗಮಿಸುವ ಕನ್ನಡಿಗರನ್ನು ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದಿಂದ ಕೈಗೊಳ್ಳಲಾಗುತ್ತದೆ. ಅವರ ಮೊಬೈಲ್ ಸಂಖ್ಯೆ 09480683105 ಆಗಿದ್ದು, ನೇಪಾಳದಿಂದ ಕರ್ನಾಟಕಕ್ಕೆ ನಿರ್ಗಮಿಸಲು ಯಾವುದೇ ಮಾಹಿತಿ ಇದ್ದರೆ ಅವರೊಂದಿಗೆ ವಿನಿಯಮ ಮಾಡಿಕೊಳ್ಳಬಹುದಾಗಿದೆ. ಈ ಸಹಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ ಕರ್ನಾಟಕ ಭವನದ ಸ್ವಾಗತಗಾರರಾದ ಶ್ರೀ ಮಂಜೇಗೌಡ ಅವರನ್ನು ನಿಯೋಜಿಸಲಾಗಿದೆ.
ಭಾರತ ಸರ್ಕಾರವು ನೇಪಾಳದಿಂದ ಆಗಮಿಸುವ ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ವಾಹನ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ವಾಹನಗಳು ಕಟ್ಮಂಡು, ಗೋರಕ್ ಪುರ , ವಾರಣಾಸಿ ಮಾರ್ಗವಾಗಿ ದೆಹಲಿಗೆ ಆಗಮಿಸಲಿವೆ. ಈ ವಾಹನಗಳಲ್ಲಿ ಆಗಮಿಸುವ ಕನ್ನಡಿಗರನ್ನು ವಾರಣಾಸಿಯಿಂದ ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
ಈಗಾಗಲೇ ನೇಪಾಳಕ್ಕೆ ತೆರಳಿರುವ ಐಎಎಸ್ ಅಧಿಕಾರಿ ಪಂಕಜ್ ಕುಮಾರ್ ಪಾಂಡೆ ( ಮೊ.ಸಂಖ್ಯೆ09900095440) ಹಾಗು ಐಪಿಎಸ್ ಅಧಿಕಾರಿ ಉಮೇಶ್ ಕುಮಾರ್ (ಮೊ.ಸಂಖ್ಯೆ 09480800029) ನೇಪಾಳ ರಾಯಬಾರಿ ಕಚೇರಿಯಲ್ಲಿ ಸಮನ್ವಯತೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರೆ ಇವರೊಂದಿಗೆ ವಿನಿಮಯ ಮಾಡಿಕೊಳ್ಳಬಹುದಾಗಿದೆ. ನಿನ್ನೆಯಿಂದ 36 ಮಂದಿ ಕನ್ನಡಿಗರು ಕರ್ನಾಟಕ ಭವನಕ್ಕೆ ಆಗಮಿಸಿದ್ದಾರೆ. ಇಂದು ಬೆಳಿಗ್ಗೆ ಆಗಮಿಸಿದ್ದ 10 ಮಂದಿಯನ್ನು ಅವರ ಇಚ್ಚೆಯ ಮೇರೆಗೆ ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ನೇಪಾಳದಿಂದ ಕರ್ನಾಟಕ ಭವನಕ್ಕೆ ಆಗಮಿಸುವ ಕನ್ನಡಿಗರಿಗೆ ವಸತಿ, ಊಟೋಪಚಾರವನ್ನು ಒದಗಿಸಿ, ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿ, ಅವರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ನಿವಾಸಿ ಆಯುಕ್ತರ ಮಾರ್ಗದರ್ಶನದಂತೆ ತಂಡವನ್ನು ರಚಿಸಿ, ಕರ್ನಾಟಕ ಭವನದ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಿಮಾನ ನಿಲ್ದಾಣ, ರೈಲು ನಿಲ್ದಾಣದಲ್ಲಿ ನಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರ್ನಾಟಕ ಭವನದ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದರು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ. ರಾಜ್ಯ ಸರ್ಕಾರ, ವಿದೇಶಾಂಗ ಸಚಿವಾಲಯ, ರಾಜ್ಯದ ನೊಡೆಲ್ ಅಧಿಕಾರಿಗಳು, ಎನ್‍ಡಿಆರ್‍ಎಫ್ ಅವರೊಂದಿಗೆ ಸಮನ್ವಯತೆ ಸಾಧಿಸಲಾಗುತ್ತಿದೆ. ಯಾವುದೇ ಕರೆಗಳು ಬಂದರೂ ಸಂಭಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಜಂಟಿ ನಿವಾಸಿ ಆಯುಕ್ತರಾದ ಶ್ರೀ ರಂಗಸ್ವಾಮಿ ಅವರು ತಿಳಿಸಿದರು.

No comments:
Post a Comment