ನಾಗಣ್ಣ ವೈನ್ಸ್ ಸ್ಟೋರ್ ವಿರುದ್ಧ ಕಿಡಿಗೇಡಿಗಳ ಕುತಂತ್ರ
ಮಂಡ್ಯ : ನಗರದ ನೂರಡಿ ರಸ್ತೆಯ ಮಧ್ಯಭಾಗದಲ್ಲಿ ಇತ್ತೀಚಿಗೆ ಆರಂಭಗೊಂಡಿರುವ ನಾಗಣ್ಣ ವೈನ್ಸ್ ಸ್ಟೋರ್ ಮುಚ್ಚಲು ಸ್ಥಳೀಯ ನಿವಾಸಿಗಳು ಪರ - ವಿರೋಧ ವ್ಯಕ್ತಪಡಿಸುತ್ತಿರುವುದು ಕಾಣಬಂದಿದೆ.
ವೈನ್ಸ್ ಸ್ಪೋರ್ ಮುಚ್ಚುವಂತೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸುತ್ತಿದ್ದು, ವೈನ್ಸ್ ಸ್ಟೋರ್ ಸುತ್ತಮುತ್ತಲು ಪರಿಶಿಷ್ಟರೇ ಹೆಚ್ಚಾಗಿ ವಾಸಿಸುತ್ತಿದ್ದು, ಇದರಿಂದ ಮದ್ಯವೆಸನಿಗಳು ಹೆಚ್ಚಾಗುತ್ತಾರೆ ಎಂಬುದು ಅವರ ವಾದ.
ಈ ಆರೋಪವನ್ನು ಅಲ್ಲಗೆಳೆದಿರುವ ವೈನ್ಸ್‍ಸ್ಟೋರ್‍ನ ಮಾಲೀಕರಾದ ಹೆಚ್.ಪಿ.ಮಹೇಶ್‍ರವರು, ನಮ್ಮದು ಎಂ.ಎಸ್.ಐ.ಎಲ್ ಹೋಲ್‍ಸೇಲ್ ಅಂಗಡಿ, ಅಂಗಡಿಯಲ್ಲಿಯೇ ಮದ್ಯಪಾನ ಮಾಡಲು ಅವಕಾಶವಿಲ್ಲ. ಇಲ್ಲಿಂದ ಕೊಂಡು ಹೋಗಬಹುದಷ್ಟೆ. ಜೊತೆಗೆ ನಮ್ಮ ನೂತನ ವೈನ್ಸ್‍ಸ್ಟೋರ್ ಪಕ್ಕದಲ್ಲೇ ಮತ್ತೊಂದು ಎಂಎಸ್‍ಐಎಲ್ ಇದ್ದು, ಜೊತೆಗೆ ಈ ರಸ್ತೆಯುದ್ದಕ್ಕೂ ಮೂರ್ನಾಲ್ಕು ನಮ್ಮತರಹದ ಎಂಎಸ್‍ಐಎಲ್‍ಗಳೇ ತೆರೆದಿದೆ. ಇದ್ಯಾವುದಕ್ಕೂ ವಿರೋಧ ತೋರದೇ ನಾಗಣ್ಣ ವೈನ್ಸ್ ಸ್ಪೋರ್‍ಗೆ ಮಾತ್ರ ವಿರೋಧ ತೋರುತ್ತಿರುವುದು ದುರಾದೃಷ್ಠಕರ. ಇದರ ಹಿಂದೆ ಕಾಣದ ಕೈಗಳು ಕೆಲಸ ಮಾಡುತ್ತಿವೆ ಎನ್ನುತ್ತಾರೆ.
ನಾಗಣ್ಣ ವೈನ್ಸ್ ಸ್ಟೋರ್ ಮುಚ್ಚಿಸುವ ಸಲುವಾಗಿ ಕೆಲ ಪಟ್ಟಭದ್ರ ಹಿತಾಶಕ್ತಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದು, ಸಮಾಜ ಸೇವಕರಾಗಿದ್ದ ನಾಗಣ್ಣಅವರ ಹೆಸರಿನಲ್ಲಿ ತೆರೆದಿರುವ ಅಂಗಡಿಯನ್ನು ಮುಚ್ಚಿಸುವುದು, ಜೊತೆಗೆ ಅವರ ಅಂಗಡಿಗಳು ಚನ್ನಾಗಿ ವ್ಯವಹರಿಸಲಿ ಎಂಬ ಕಾರಣಕ್ಕಾಗಿ ಈ ಪಿತೂರಿಯನ್ನು ಮಾಡಿರಬಹುದು ಎನ್ನುತ್ತಾರೆ.
ಒಂದು ವೇಳೆ ನಮ್ಮ ಅಂಗಡಿಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತದೆ ಎನ್ನುವುದೇ ಆದರೆ ಇದೇ ರಸ್ತೆಯಲ್ಲಿ ಸಾಕಷ್ಟು ಅಂಗಡಿಗಳು ತಲೆ ಎತ್ತಿದ್ದು, ಎಲ್ಲವೂ ಕೂಡ ಮುಚ್ಚಲು ಒಪ್ಪುವುದೇ ಆದರೆ ನಾವೂ ಕೂಡ ಬಾಗಿಲು ಮುಚ್ಚುತ್ತೇವೆ. ಸಾರ್ವಜನಿಕರಿಗೆ ತೊಂದರೆಕೊಡುವುದು ನಮ್ಮ ಉದ್ದೇಶವಲ್ಲ. ಮತ್ತೊಬ್ಬರಿಗೆ ಮತ್ತೊಬ್ಬರ ವ್ಯವಹಾರಕ್ಕೆ ತೊಂದರೆ ಕೊಡಬೇಕೆಂದ ಬಯಸುವವರು ಸತ್ಯವನ್ನು ಅರಿಯಲಿ ಎನ್ನುತ್ತಾರೆ.

No comments:
Post a Comment