ಮೈಸೂರು,ಏ.01-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 7 ಹಾಗೂ 8 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಏಪ್ರಿಲ್ 7 ರಂದು ಬೆಳಿಗ್ಗೆ 10-50ಕ್ಕೆ ಹೆಲಿಕಾಪ್ಟರ್ ಮೂಲಕ ಮೈಸೂರು ಲಲಿತ ಮಹಲ್ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಮೈಸೂರು ತಾಲ್ಲೂಕಿನ ಉದ್ಬೂರು ಗ್ರಾಮದಲ್ಲಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ತಳೂರು ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆ ಉದ್ಘಾಟಿಸುವರು. ಮಧ್ಯಾಹ್ನ 2-30 ಗಂಟೆಗೆ ನರಸಿಂಹರಾಜ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. ಸಂಜೆ 5-30 ಗಂಟೆಗೆ ಮೈಸೂರಿನ ಯಾದವಗಿರಿ ಶ್ರೀ ರಾಮಕೃಷ್ಣ ಆಶ್ರಮದಲ್ಲಿ ಆಯೋಜಿಸಿರುವ ಸ್ವಾಮಿ ಅದ್ಭುತಾನಂದರ ಜೀವನ ಚರಿತ್ರೆ ಕುರಿತ ಸದ್ಗ್ರಂಥ ಅದ್ಭುತ ಸಂತ ಹಾಗೂ ಸೇವೆ ಎಂಬ ಕಿರುಹೊತ್ತಿಗೆ ಲೋಕಾರ್ಪಣೆ ಮತ್ತು ಸಾರ್ವಜನಿಕ ಸಮಾರಂಭ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವರು. ಸಂಜೆ 6-30 ಗಂಟೆಗೆ ಜೀವರಾಯನ ಕಟ್ಟೆ ಅಮೃತೋತ್ಸವ ಭವನದ ಶ್ರೀ ಪ. ಮಲ್ಲೇಶ್ ಅವರ ಗಾಂಧಿ ಪ್ರಣೀತ ಧರ್ಮದರ್ಶಿತ್ವ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 8 ರಂದು ಬೆಳಿಗ್ಗೆ 10 ಗಂಟೆಗೆ ಮೈಸೂರಿನ ಗೋಕುಲಂನ ಮೈಸೂರು 1 ಕೇಂದ್ರದಲ್ಲಿ ಇ-ಆಡಳಿತ ಇಲಾಖೆಯ ವತಿಯಿಂದ ಆಯೋಜಿಸಿರುವ “ಶಾಶ್ವತ ಆಧಾರ್ ನೋಂದಣಿ” ಕೇಂದ್ರ ಉದ್ಘಾಟಿಸುವರು. ಬೆಳಿಗ್ಗೆ 10-30 ಗಂಟೆಗೆ ಊಟಿ ರಸ್ತೆಯಲ್ಲಿರುವ ಜೆ.ಎಸ್.ಎಸ್. ಸಂಸ್ಥೆಯಲ್ಲಿ ಆಯೋಜಿಸಿರುವ ಜೆ.ಎಸ್.ಎಸ್. ಕಾಲೇಜಿನ ಸುವರ್ಣ ಮಹೋತ್ಸವ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸುವರು.
ಮಧ್ಯಾಹ್ನ 12-30 ಗಂಟೆಗೆ ಲಲಿತಮಹಲ್ ಹೆಲಿಪ್ಯಾಡ್‍ನಿಂದ ಹೆಲಿಕಾಪ್ಟರ್ ಮೂಲಕ ಹೊಸಕೋಟೆಗೆ ತೆರಳಲಿದ್ದಾರೆ.
ಪ್ರವಾಸ ಕಾರ್ಯಕ್ರಮ
ಮೈಸೂರು,ಏ.01.ಮೂಲ ಸೌಲಭ್ಯ ಅಭಿವೃದ್ಧಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಹಾಗೂ ಹಜ್ ಸಚಿವರಾದ ಆರ್. ರೋಷನ್ ಬೇಗ್ ಅವರು ಏಪ್ರಿಲ್ 2 ಹಾಗೂ 3 ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
ಏಪ್ರಿಲ್ 2 ರಂದು ರಾತ್ರಿ 9-30ಕ್ಕೆ ಮೈಸೂರು ಸಕ್ರ್ಯೂಟ್‍ಹೌಸ್ ಆಗಮಿಸಿ ವಾಸ್ತವ್ಯ ಹೂಡಲಿದ್ದಾರೆ. ಏಪ್ರಿಲ್ 3 ರಂದು ಬೆಳಿಗ್ಗೆ 10-30ಕ್ಕೆ ನಂಜನಗೂಡಿನಲ್ಲಿ ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಯ ಸಾರ್ವಜನಿಕರೊಂದಿಗೆ ಹಜ್ ಯಾತ್ರೆ ಕುರಿತಂತೆ ಚರ್ಚೆ ನಡೆಸಲಿದ್ದಾರೆ. ಮಧ್ಯಾಹ್ನ 12-30ಕ್ಕೆ ಮೈಸೂರಿಗೆ ಆಗಮಿಸಲಿದ್ದಾರೆ. ಮಧ್ಯಾಹ್ನ 2-30ಕ್ಕೆ ಮೈಸೂರಿನಿಂದ ಬೆಂಗಳೂರಿಗೆ ತೆರಳಲಿದ್ದಾರೆ.
ಲಕ್ಷ್ಮಮ್ಮ ಅವರಿಗೆ ಪಿಎಚ್.ಡಿ. ಪದವಿ
ಮೈಸೂರು,ಏ.1-ಮೈಸೂರು ವಿಶ್ವವಿದ್ಯಾಲಯವು ಲಕ್ಷ್ಮಮ್ಮ ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಡಿ. ನಾಗರಾಜು ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “ಉಡಿouಟಿಜತಿಚಿಣeಡಿ ಖeಛಿhಚಿಡಿge ಂssessmeಟಿಣ iಟಿ ಉuಟಿಜಚಿಟ Wಚಿಣeಡಿsheಜ ಉuಟಿಜಟuಠಿeಣ ಖಿಚಿಟuಞ, ಅhಚಿmಚಿಡಿಚಿರಿಚಿಟಿಚಿgಚಿಡಿ ಆisಣಡಿiಛಿಣ, ಏಚಿಡಿಟಿಚಿಣಚಿಞಚಿ, Iಟಿಜiಚಿ Usiಟಿg ಖemoಣeseಟಿsiಟಿg ಚಿಟಿಜ ಉIS” ಕುರಿತು ಸಾದರಪಡಿಸಿದ ಭೂ ವಿಜ್ಞಾನ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಲಕ್ಷ್ಮಮ್ಮ ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.
ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗೆ ಅರ್ಜಿ ಆಹ್ವಾನ
ಮೈಸೂರು,ಏ.01-ತಿ. ನರಸೀಪುರ ತಾಲ್ಲೂಕಿನ ಮೂಡಲಹುಂಡಿ, ಅಲಸ್ತ್ರೀಕಟ್ಟೆಹುಂಡಿ, ವ್ಯಾಸರಾಜಪುರ-2, ಕೈಯಂಬಳ್ಳಿ-1, ಕರಿಹುರಳಿಕೊಪ್ಪಲು, ಹುನುಗನಹಳ್ಳಿ-1 ಗ್ರಾಮಗಳಲ್ಲಿ ಖಾಲಿ ಇರುವ 6 ಅಂಗನವಾಡಿ ಕಾರ್ಯಕರ್ತೆ ಹಾಗೂ ಮಾದೇಗೌಡನಹುಂಡಿ, ಕುರುಬೂರು-2 ಹಾಗೂ ಹಳೇಕುಕ್ಕೂರು-1 ಖಾಲಿ ಇರುವ 03 ಅಂಗನವಾಡಿ ಸಹಾಯಕಿಯರ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆಸಕ್ತ ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಏಪ್ರಿಲ್ 27 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ಮಾಹಿತಿಗಾಗಿ ತಿ.ನರಸೀಪುರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಅಥವಾ ದೂರವಾಣಿ ಸಂ. 08227-261267ನ್ನು ಸಂಪರ್ಕಿಸಲು ಕೋರಿದೆ.
ಅಪರಿಚಿತÀ ವ್ಯಕ್ತಿಯ ಶವÀ ಪತ್ತೆಗಾಗಿ ಮನವಿ
ಮೈಸೂರು,ಏ.01.(ಕ.ವಾ)-ಮೈಸೂರು ತಾಲೂಕಿನ ಶ್ರೀರಂಗಪಟ್ಟಣ-ನಾಗನಹಳ್ಳಿ ರೈಲು ನಿಲ್ದಾಣಗಳ ಮಧ್ಯೆ ರೈಲ್ವೆ ಕಿ.ಮೀನಂ-126/700-800ರಲ್ಲಿ ಮಾರ್ಚ್ 31 ರಂದು ಸುಮಾರು 25 ವರ್ಷ ಅಪರಿಚಿತ ವ್ಯಕ್ತಿಯು ಮೃತಪಟ್ಟಿದ್ದಾರೆ. ಈ ಕುರಿತು ಅಸಹಜ ಮರಣ ಪ್ರಕರಣ ದಾಖಲಾಗಿದೆ ಹಾಗೂ ತನಿಖೆ ಕೈಗೊಂಡಿದ್ದು, ತನಿಖಾ ಕಾಲದಲ್ಲಿ ಮೃತರÀÀ ವಾರಸುದಾರರು ಪತ್ತೆಯಾಗಿರುವುದಿಲ್ಲ.
ಈ ಅಪರಿಚಿತ ವ್ಯಕ್ತಿಯು 5.5 ಅಡಿ ಎತ್ತರ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕುರುಚಲು ಗಡ್ಡ ಮೀಸೆ ಬಿಟ್ಟಿರುತ್ತಾರೆ. ನೀಲಿ ಬಣ್ಣದದ ತುಂಬು ತೋಳಿನ ಟಿ ಶರ್ಟ್, ನೀಲಿ ಬಣ್ಣದ ಜೀನ್ಸ್ ಪ್ಯಾಂಟ್, ಕಪ್ಪು ಬಣ್ಣದ ಜರ್ಕಿನ್, ಕಾಲಿನಲ್ಲಿ ನೀಲಿ ಹಸಿರು ಬಣ್ಣದ ಕ್ಯಾನ್‍ವಾಸ್ ಶೂ ಧರಿಸಿರುತ್ತಾರೆ.
ಮೃತರÀ ವಾರಸುದಾರರ ಬಗ್ಗೆ ಮಾಹಿತಿ ದೊರೆತಲ್ಲಿ ಠಾಣಾಧಿಕಾರಿಗಳು, ಮೈಸೂರು ರೈಲ್ವೆ ಪೊಲೀಸ್ ಠಾಣೆ ಅವರನ್ನು ಅಥವಾ ದೂರವಾಣಿ ಸಂಖ್ಯೆ 0821-2516579 ಸಂಪರ್ಕಿಸಬಹುದಾಗಿದೆ.
No comments:
Post a Comment