ನೂತನ ನಿರ್ದೇಶಕರಾಗಿ ಡಾ. ಎಮ್ .ಎಸ್ ಶ್ಯಾಮಸುಂದರ್
ಬೆಂಗಳೂರು, ಏಪ್ರಿಲ್ 21, 2015
ರಾಷ್ಟ್ರೀಯ ಮಾನ್ಯತೆ ಮತ್ತು ಪ್ರಮಾಣೀಕರಣ ಸಂಸ್ಥೆ (ನ್ಯಾಕ್) ಸಲಹೆಗಾರರಾಗಿರುವ ಡಾ. ಎಮ್ .ಎಸ್ ಶ್ಯಾಮಸುಂದರ್ ಸಂಸ್ಥೆಯ ನೂತನ ನಿರ್ದೇಶಕರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಪ್ರೋ. ಎ. ಎನ್ ರೈ ಅವರಿಂದ ಅಧಿಕಾರ ಸ್ವೀಕರಿಸಿದ ಡಾ. ಎಮ್ .ಎಸ್ ಶ್ಯಾಮಸುಂದರ್ ನ್ಯಾಕ್‍ನ ಹಿರಿಯ ಸಲಹೆಗಾರರಾಗಿದ್ದು, ಎರಡು ದಶಕಗಳ ಕಾಲ ಸಂಸ್ಥೆಗಾಗಿ ಸೇವೆ ಸಲ್ಲಿಸಿದ್ದಾರೆ. ಈ ಮೊದಲು ಡಾ. ಎಮ್ .ಎಸ್ ಶ್ಯಾಮಸುಂದರ್ ಅವರು ನ್ಯಾಕ್‍ನ ಕಾರ್ಯಕಾರಿಣಿ ಸಮಿತಿ, ಸಾಮಾನ್ಯ ಮಂಡಳಿ ಮತ್ತು ಹಣಕಾಸು ಸಮಿತಿಗಳಲ್ಲೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.
ಸಂಸ್ಥೆಗೆ ಖಾಯಂ ನಿರ್ದೇಶಕರ ನೇಮಕಾತಿ ನಡೆಯುವವರೆಗೆ ಡಾ. ಶ್ಯಾಮಸುಂದರ್ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.
--
No comments:
Post a Comment