ಭೇರ್ಯ,ಏ,06- ಮನೆಯ ಮುಂದೆ ರಂಗೋಲಿಯ ಚಿತ್ತಾರ, ತುಂಬಿರುವ ಹಂಡೆಯಲಿ ಬಣ್ಣ ಬಣ್ಣದ ನೀರು, ಪುಟಾಣಿ ಮಕ್ಕಳು ಸೇರಿದಂತೆ ಯುವಕರು ಒಬ್ಬರಿಗೊಬ್ಬರು ನೀರು ಎರಚಿಕೊಂಡು ಓಕಳಿ ಹಬ್ಬವನ್ನು ಹೊಸಗ್ರಹಾರ ಹೋಬಳಿಯ ಬಟಿಗನಹಳ್ಳಿ ಗ್ರಾಮದಲ್ಲಿ ಬಹಳ ವಿಜೃಂಬಣೆÉಯಿಂದ ಆಚರಿಸಲಾಯಿತು.
ಭೇರ್ಯ ಗ್ರಾಮದಲ್ಲಿ ನಡೆಯುವ ಶ್ರೀದೊಡ್ಡಮ್ಮ ಶ್ರೀಕರಿಯಮ್ಮ ಸಿಡಿ ಮತ್ತು ಜಾತ್ರಾಮಹೋತ್ಸವಕ್ಕೆ ಹಿಂದಿನ ದಿನಗಳಂದು ಬಟಿಗನಹಳ್ಳಿ ಗ್ರಾಮದಲ್ಲಿ ಗ್ರಾಮದ ಎಲ್ಲಾ ಸರ್ವಜನಾಂಗದವರು ಸೇರಿ ಬಹಳ ವಿಜೃಂಬಣೆಯಿಂದ ಓಕಳಿ ಹಬ್ಬವನ್ನು ಆಚರಿಸುವುದರ ಜೊತೆಗೆ ನಮ್ಮ ಪೂರ್ವಿಕ ಕಾಲದಿಂದ ನಡೆದು ಕೊಂಡು ಬಂದಿರುವ ಗ್ರಾಮೀಣ ಕಲೆಗಳು, ಇನ್ನೂ ಜೀವಂತವಾಗಿವೆ ಎಂದು ಗ್ರಾಮಸ್ಥರೊಬ್ಬರ ಅಭಿಪ್ರಾಯ.
ಗ್ರಾಮದಲ್ಲಿ ಬೆಳಗ್ಗೆಯಿಂದಲೇ ಗ್ರಾಮಸ್ಥರು ಎಲ್ಲಾ ರಸ್ತೆಗಳಿಗೂ ತಳಿರು ತೋರಣಗಳನ್ನು ಕಟ್ಟಿ ನಂತರ ಓಕಳಿ ಕೊಂಡವನ್ನು ತೆಗೆಯುತ್ತಾರೆ, ಗ್ರಾಮದ ಮಹಿಳೆಯರು, ಯುವತಿಯರು, ಬಾಲಕಿಯರು ಶೃಂಗಾರಗೊಂಡು ಬಿಂದಿಗೆಯಲ್ಲಿ ನೀರು ತಂದು ಓಕಳಿ ಕೊಂಡಕ್ಕೆ ಸುರಿಯುತ್ತಾರೆ. ಗ್ರಾಮದ ಪ್ರತಿಯೊಂದು ಮನೆಯವರು ತಮ್ಮ ತಮ್ಮ ಮನೆಗಳ ಮುಂದೆ ಹಂಡೆಯಲ್ಲಿ ನೀರನ್ನು ತುಂಬಿಸಿ ಇಡಲಾಗುತ್ತದೆ, ಪ್ರತಿ ಮನೆಗೊಬ್ಬರಂತೆ ಯುವಕರು, ಪುಟಾಣಿ ಮಕ್ಕಳು, ನೆಂಟರಿಷ್ಟರ ಮಕ್ಕಳು ಸೇರಿದಂತೆ ಎಲ್ಲರು ಓಕಳಿ ನೀರು ಒಬ್ಬರಿಗೊಬ್ಬರು ಎರಚ್ಚಾಡಿ ಕೊಂಡು ನಲಿಯುತ್ತಾರೆ ಇದು ಈ ಗ್ರಾಮದ ವೈಶಿಷ್ಟ.

No comments:
Post a Comment