Tuesday, 14 April 2015

ಮಂಡ್ಯ: ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ತಾಲೂಕಿನ ಬಸರಾಳು ಚಿಕ್ಕಕೆರೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾಧಿಕಾರಿ ಎಂ.ಎನ್.ಅಜಯ್ ನಾಗಭೂಷಣ್ ಗುದ್ದಲಿ ಪೂಜೆ ನೆರವೇರಿಸಿದರು.
15 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ, 15 ಲಕ್ಷ ರೂ. ವೆಚ್ಚದಲ್ಲಿ ಏರಿ ದುರಸ್ತಿ, 45 ಲಕ್ಷ ರೂ. ವೆಚ್ಚದಲ್ಲಿ ಕಾಲುವೆ ದುರಸ್ತಿ, 3 ಲಕ್ಷ ರೂ. ವೆಚ್ಚದಲ್ಲಿ ಕೋಡಿ ದುರಸ್ತಿ, 4 ಲಕ್ಷ ರೂ. ವೆಚ್ಚದಲ್ಲಿ ಪೆÇೀಷಕ ನಾಲೆ ಮತ್ತು ತೂಬು ದುರಸ್ತಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ. ಕೆರೆ ಹೂಳು ಎತ್ತುವುದರಿಂದ 1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ ಎಂದರು.
ಕೆರೆಯ ನೀರಿನಿಂದ 130 ಎಕರೆಗೆ ನೀರು ಒದಗಿಸುತ್ತಿದ್ದು, ಕೆರೆಯಲ್ಲಿ ಹೂಳು ತುಂಬಿರುವುದರಿಂದ ಕೇವಲ 80 ಎಕರೆಗೆ ಮಾತ್ರ ನೀರು ದೊರೆಯುತ್ತಿತ್ತು. ಇದೀಗ ಹೂಳು ತೆಗೆಯುವುದರಿಂದ ಎಲ್ಲ ರೈತರಿಗೂ ನೀರು ಒದಗಿಸಬಹುದಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ.ಆನಂದ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ವೆಂಕಟೇಶ್, ಸಹಾಯಕ ಎಂಜಿನಿಯರ್ ಸಿ.ದೊಡ್ಡವೀರಯ್ಯ, ಗುತ್ತಿಗೆದಾರ ಕೆಂಗಲ್‍ಗೌಡ, ಮುಖಂಡರಾದ ಪಟೇಲ್ ಲಿಂಗರಾಜು, ಬಿ.ಡಿ.ಶಂಕರ್, ಗರುಡನಹಳ್ಳಿ ಚಂದ್ರಶೇಖರ್, ಯೋಗೇಶ್, ಪ್ರಕಾಶ್ ಇತರರು ಹಾಜರಿದ್ದರು.

No comments:

Post a Comment