ವಿಶೇಷ ವರದಿ : ಲೋಕೇಶ್. ಎಚ್.ಆರ್.
ಕೆ.ಆರ್.ಪೇಟೆ – ತಾಲೂಕಿನ ಗೋವಿಂದನಹಳ್ಳಿಯಲ್ಲಿ ಹೊಯ್ಸಳ ಶಿಲ್ಪಕಲೆಯ ಐದು ಗರ್ಭಗುಡಿಗಳು ಐದು ಶಿವನ ವಿಗ್ರÀಹÀಗಳ ಮುಂದೆ ಐದು ನಂದಿ ವಿಗ್ರಹಗಳನ್ನು ಹೊಂದಿರುವ ಪಂಚಲಿಂಗೇಶ್ವರ ದೇವಾಲಯವು ಗಮನ ಸೆಳೆದುದಾಗಿದೆ. ಈ ಪಂಚಲಿಂಗೇಶ್ವರ ದೇವಾಲಯವನ್ನು ಕೇಂದ್ರ ಸರ್ಕಾರ ಕೋಟ್ಯಾಂತರ ರೂಪಾಯಿಗಳನ್ನು ಖರ್ಚುಮಾಡಿ ಕೇಂದ್ರ ಪ್ರಾಚ್ಯವಸ್ತು ಇಲಾಖೆ ವತಿಯಿಂದ ನವೀಕರಣ ಮಾಡಲಾಗುತ್ತಿದೆ. ಆದರೆ ನವೀಕರಣ ಕಾಮಗಾರಿಯೂ ಆಮೆಗತಿಯಲ್ಲಿ ಸಾಗುತ್ತಿರುವುದರಿಂದ ದೇವಾಲಯ ನಿರ್ಮಾಣಕ್ಕೆ ಬಳಸಿರುವ ಕಲ್ಲುಗಳು ಕಳುವಾಗುವ ಸಂಭವವಿರುವ ಜೊತೆಗೆ ಬಿಸಿಲು ಮತ್ತಿತರ ಕಾರಣಗಳಿಂದ ತೊಂದರೆ ಆಗಿದ್ದು, ಮರು ಜೊಡಣೆ ಮಾಡಲು ಸಾಧ್ಯವಾಗುವುದಿಲ್ಲ ಎಂದು ದೇವಾಲಯದ ಭಕ್ತರು ಆತಂಕ ಪಡುತ್ತಿದ್ದಾರೆ.
ಕೆ.ಆರ್.ಪೇಟೆ ತಾಲೂಕು ಕೇಂದ್ರದಿಂದ 18 ಕಿಮೀ ದೂರದಲ್ಲಿರುವ ಇತಿಹಾಸ ಪ್ರಸಿದ್ಧ ಗೋವಿಂದನಹಳ್ಳಿಯ ಶ್ರೀ ಪಂಚಲಿಂಗೇಶ್ವರ ದೇವಾಲಯದ ಮರು ಜೋಡಣಾ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ ಮಳೆಗಾಲ ಸಮೀಪಿಸುತ್ತಿದ್ದು ಅಷ್ಟರೊಳಗೆ ಕಾಮಗಾರಿ ಪೂರ್ಣಗೂಳ್ಳದಿದ್ದಲ್ಲಿ ದೇವಾಲಯ ಮತ್ತಷ್ಟು ಶಿಥಿಲಗೊಳ್ಳುತ್ತದೆ ಎಂಬ ಆತಂಕ ಜನತೆಗೆ ಕಾಡುತ್ತಿದೆ. ದೇವಾಲಯದ ಮುಖ್ಯ ಭಾಗಗಳನ್ನು ಮರು ಜೋಡಿಸುವ ಕಾರ್ಯಕ್ಕೆ ಪ್ರಾಚ್ಯವಸ್ತು ಇಲಾಖೆ ಮುಂದಾಗಿದ್ದು 2 ವರ್ಷವಾಗುತ್ತಿದ್ದರೂ ಇನ್ನೂ ಪೂರ್ಣ ಗೊಂಡಿಲ್ಲ. ಸಮರ್ಪಕ ನಿರ್ವಹಣೆ ಕೊರತೆಯಿಂದ ಐದು ದೇವಾಲಯ ಗೋಪುರಗಳು ಸೋರುತ್ತಿದೆ.
ಆಮೆಗತಿ:
ದೇವಾಲಯದಲ್ಲಿ ಶಿಥಿಲಗೂಂಡ ಭಾಗವನ್ನು ಮರು ಜೋಡಣೆ ಮಾಡುವ ಕಾರ್ಯ ಆರಂಭವಾಗಿ ಕೆಲವು ವರ್ಷ ಕಳೆಯುತ್ತಾ ಬಂದಿದೆ ಐದು ಪ್ರತ್ಯೇಕ ಗರ್ಭಗುಡಿಗಳಿದ್ದು ಒಂದಕ್ಕೂಂದು ಹೊಂದಿಕೂಂಡಂತೆ ಐದು ದೇವಾಲಯವನ್ನು ನಿರ್ಮಿಸಲಾಗಿದೆ. ಪ್ರಸ್ತುತ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಉತ್ತರ ಭಾಗದಲಿರುವ ಎರಡು ಗರ್ಭ ಗುಡಿಗಳನ್ನು ಕೆಡವಿ ಪುನಹ ಜೋಡಣೆ ಮಾಡಲಾಗುತ್ತಿದೆ. ಕಾಮಗಾರಿ ಕೈಗೂಂಡಿರುವ ಪ್ರಾಚ್ಯವಸ್ತು ಇಲಾಖೆ ದೇವಾಲಯ ನಿರ್ಮಾಣ ಮಾಡಲು ವಿಳಂಬ ನೀತಿ ಅನುಸರಿಸುತ್ತಿದ್ದು ಒಂದು ವರ್ಷದಲ್ಲಿ ಮುಗಿಯಬಹುದಾದ ನವೀಕರಣ ಕಾಮಗಾರಿಯೂ ಎರಡು ವರ್ಷಕಳೆಯುತ್ತಿದ್ದರೂ ಅಪೂರ್ಣವಾಗಿರುವುದು ದೇವಾಲಯದ ಭಕ್ತಾಧಿಗಳಲ್ಲಿ ಆತಂಕವನ್ನುಂಟು ಮಾಡಿದೆ.
ಶಿಲ್ಪಕಲೆಗÀಳಿಗೆ ಕುಂದು:
ಮರು ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಸಂಬಧಿಸಿದ ಇಂಜಿನಿಯರ್, ನುರಿತತಜ್ಞರು ಹಾಗೂ ಇಲಾಖಾ ಅಧಿಕಾರಿಗಳು ಆಗಮಿಸದೇ ಕೇವಲ ಕೆಲಸಗಾರರು ಮರು ನಿರ್ಮಾಣ ಮಾಡುತ್ತಿರುವುದರಿಂದ ದೇವಾಲಯದ ಈ ಹಿಂದಿನ ವೈಭವಕ್ಕೆ ಧಕ್ಕೆಯಾಗಬಹುದು. ಇದರೊಂದಿಗೆ ಮರು ಜೋಡಣೆಗಾಗಿ ಸುಂದರ ಕೆತ್ತನೆಗಳ ವಿಗ್ರಹಗಳನ್ನು ಬಿಚ್ಚಿ ನೆಲದ ಮೇಲೆ ಇಟ್ಟಿರುವುದರಿಂದ ಕೆಲವರು ಕಲ್ಲುಗಳ ಮೇಲೆ ಕೂತು ಶಿಲ್ಪ ಕಲೆಗಳನ್ನು ವಿರೂಪ ಮಾಡುತ್ತಾರೆ. ಒಂದು ವೇಳೆ ಸುಂದರ ಕೆತ್ತನೆಯನ್ನು ಹೊಂದಿರುವ ಕಲ್ಲುಗಳಿಗೆ ಧಕ್ಕೆಯಾದರೆ ಮತ್ತೆ ಮರು ಜೋಡಣೆ ಮಾಡಿದಾಗ ದೇವಾಲಯ ಸೌಂಧರ್ಯಕ್ಕೆ ಧಕ್ಕೆ ಬರುತ್ತದೆ ಎನ್ನುತ್ತಾರೆ ಇಲ್ಲಿನ ನಿವಾಸಿಗಳು.
ಭದ್ರತೆ ಇಲ್ಲ
ಈ ದೇವಾಲಯದಿಂದ ಈಗಾಗಲೇ ಕಿಕ್ಕೇರಿ ಗ್ರಾಮದ ಶ್ರೀ ಬ್ರಹ್ಮೇಶ್ವರ ದೇವಾಲಯದಲ್ಲಿ ಕೆಲವು ದಿನಗಳ ಹಿಂದೆ ನೂರಾರು ವರ್ಷಗಳ ಹಿಂದೆ ಕೆತ್ತಿ ದೇವಾಲಯದಲ್ಲಿ ಅಳವಡಿಸಿದಂತಹ ಹಾಗೂ ಬೆಲೆ ಕಟ್ಟಲಾಗದಂತಹ 6 ಮದನಿಕೆಯರ ವಿಗ್ರಹಗಳು ನಾಪತ್ತೆ ಯಾಗಿವೆ. ಹೊಸಹೊಳಲು ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇಗುಲ, ಅಕ್ಕಿಹೆಬ್ಬಾಳು ಲಕ್ಷ್ಮೀನರಸಿಂಹಸ್ವಾಮಿಯವರ ದೇವಾಲಯಗಳಲ್ಲಿ ಈಗಾಗಲೇ ಕಳ್ಳತನ ನಡೆದಿರುವುದರಿಂದ ಇಲ್ಲಿಯೂ ಕಳ್ಳತನ ನಡೆದೀತು ಎಂದು ಭಕ್ತರ ಆತಂಕವಾಗಿದೆ. ಈ ಬಗ್ಗೆ ಪೋಲಿಸರು ದೂರು ದಾಖಲಿಸಿ ಕೊಂಡು ಸುಮ್ಮನಾಗಿದ್ದಾರೆ, ವಿಗ್ರಹಗಳು ಮಾತ್ರ ಪತ್ತೆಯಾಗಿಲ್ಲ. ಈಗ ನವೀಕರಣವಾಗುತ್ತಿರುವ ಶ್ರೀ ಪಂಚಲಿಗೇಶ್ವರ ದೇವಾಲಯದಲ್ಲಿ ಅಳವಡಿಸಿದ್ದ ಅಮೂಲ್ಯವಾದ ವಿಗ್ರಹಗಳನ್ನು ದೇವಾಲಯದಿಂದ ಬಿಡಿಸಿ ಆವರಣದಲ್ಲಿ ಇಡಲಾಗಿದೆ. ಇವುಗಳ ರಕ್ಷಣೆಗೆ ಭದ್ರತಾ ವ್ಯವಸ್ತೆ ಇಲ್ಲವಾಗಿದೆ ದೇವಾಲಯ ಗ್ರಾಮದಿಂದ ಸ್ವಲ್ಪ ದೂರದಲ್ಲೇ ಇರುವುದರಿಂದ ಏನಾದರು ಕಳ್ಳತನ ನೆಡದಲ್ಲಿ ಯಾರಿಗೂ ತಿಳಿಯುವುದಿಲ್ಲ ಹಾಗಾಗಿ ದೇವಾಲಯಕ್ಕೆ ಭದ್ರತಾ ಸಿಬ್ಬಂದಿಯನ್ನು ಕಾಯಂ ನೇಮಕ ಮಾಡುವ ಮೂಲಕ ದೇವಾಲಯಕ್ಕೆ ಅಳವಡಿಸಿರುವ ಅಮೂಲ್ಯ ವಿಗ್ರಹಗಳನ್ನು ರಕ್ಷಣೆ ಮಾಡಬೇಕು ಎಂಬುದು ಸ್ಥಳಿಯರ ಒತ್ತಾಯ.
---------------------------------------------------
ಚಿತ್ರ ಶೀರ್ಷಿಕೆ 03-ಕೆ.ಆರ್.ಪಿ-01 ಕೆ.ಆರ್.ಪೇಟೆ ತಾಲೂಕಿನ ಗೊವಿಂದನಹಳ್ಳಿಯಲ್ಲಿರುವ ಅಪರೂಪದ ವಿಶ್ವ ಪ್ರಸಿದ್ದ ಶ್ರೀ ಪಂಚಲಿಗೇಶ್ವರ ದೇವಾಲಯದ ಒಂದು ಹೊರ ನೋಟ.
ಚಿತ್ರ ಶೀರ್ಷಿಕೆ 03-ಕೆ.ಆರ್.ಪಿ-01 ಕೆ.ಆರ್.ಪೇಟೆ ತಾಲೂಕಿನ ಗೊವಿಂದನಹಳ್ಳಿಯಲ್ಲಿರುವ ಅಪರೂಪದ ವಿಶ್ವ ಪ್ರಸಿದ್ದ ಶ್ರೀ ಪಂಚಲಿಗೇಶ್ವರ ದೇವಾಲಯವನ್ನು ನವೀಕರಣ ಮಾಡಲು ಕೆವಿರುವುದನ್ನು ಕಾಣಬಹುದು.
ಚಿತ್ರ ಶೀರ್ಷಿಕೆ 03-ಕೆ.ಆರ್.ಪಿ-02 ಕೆ.ಆರ್.ಪೇಟೆ ತಾಲೂಕಿನ ಗೊವಿಂದನಹಳ್ಳಿಯಲ್ಲಿರುವ ಅಪರೂಪದ ವಿಶ್ವ ಪ್ರಸಿದ್ದ ಶ್ರೀ ಪಂಚಲಿಗೇಶ್ವರ ದೇವಾಲಯದ ಹಿಂಭಾಗದಲ್ಲಿ ನವೀಕರಣ ಮಾಡಲು ಕೆವಿರುವುದನ್ನು ಕಾಣಬಹುದು.
ಅಭಿಪ್ರಾಯಗಳು
ನಮ್ಮ ಗ್ರಾಮದ ಸಮೀಪದಲ್ಲಿ ವಿಶ್ವ ವಿಖ್ಯಾತ ಶ್ರೀ ಪಂಚಲಿಂಗೇಶ್ವರ ದೇವಾಲಯವನ್ನು ಸಂರ್ಪೂಣ ಕೆಡವಿ ನೂತನವಾಗಿ ನಿರ್ಮಾಣ ಮಾಡುತ್ತಿರುವುದು ಸಂತೋಷ ಆದರೇ ಆದಷ್ಟು ಬೇಗ ನಿರ್ಮಾಣ ಮಾಡಿದರೆ ಎಲ್ಲರ ಆತಂಕ ಕಡಿಮೆ ಯಾಗುತ್ತದೆ.
ಎಚ್.ಎನ್. ಮುರುಳೀಧರ್. ಸ್ಥಳೀಯ ನಿವಾಸಿ.
ನಮ್ಮ ಹಿಂದೂ ದೇವಾಲಯಗಳಿಂದ ವಾರ್ಷಿಕ ಕೋಟ್ಯಾಂತರ ರೂಪಾಯಿಆದಾಯ ಬರುತ್ತಿದ್ದರೂ ನಮ್ಮ ದೇವಾಲಯಗಳನ್ನು ಅಭಿವೃದ್ಧಿ ಪಡಿಸಲು ನಮ್ಮನಾಳುವ ರಾಜಕಾರಣಿಗಳು ಹಿಂಜಯುತ್ತಾರೆ. ಇದರ ನಡುವೆ ಶ್ರೀ ಪಂಚಲಿಂಗೇಶ್ವರ ದೇವಾಲಯವನ್ನು ಅಭಿವೃದ್ಧಿ ಪಡಿಸಲು ಹಣ ಬಿಡುಗಡೆ ಮಾಡಿದ್ದಾರೆ. ಆದರೆ ಅಧಿಕಾರಿಗಳು ಅಭಿವೃದ್ಧಿ ಪಡಿಸಲು ಮಾಡುತ್ತಿರುವುದನ್ನು ಗಮನಿಸಿದರೆ ಸರ್ಕಾರ ಹಿಂದೂ ದೇವಾಲುಗಳ ಬಗ್ಗೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂಬ ಅನುಮಾನು ನಮ್ಮಲ್ಲಿ ಮೂಡುತ್ತಿದೆ.
ಕೆ.ಎನ್. ಶ್ರೀಧರ್. ಯುವ ಮುಖಂಡರು ಕಿಕ್ಕೇರಿ

No comments:
Post a Comment