ವಿಜಯನಗರ ಪೊಲೀಸರಿಂದ ವೇಶ್ಯಾವಾಟಿಕೆ ಹಾಗೂ ಜೂಜುಕೊರರ ಬಂದಿಸಿ ಹೊರಕ್ಕೆ ತೆಗೆದುಕೊಂಡಿವುದಾಗಿ ಪೋಲೀಸ್ ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ವೇಶ್ಯಾವಾಟಿಕೆ
ದಿನಾಂಕ: 19-04-2015 ರಂದು ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವರಿಗೆ ಬಾತ್ಮಿದಾರರಿಂದ ವಿಜಯನಗರ 4ನೇ ಹಂತ 2ನೇ ಪೇಸ್, ಮರಿಮಲ್ಲಪ್ಪ ಕಾಂಪೌಂಡ್ ಹತ್ತಿರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇನ್ಸ್‍ಪೆಕ್ಟರ್ ಸಿಬ್ಬಂದಿಗಳೊಂದಿಗೆ ಸದರಿ ಮನೆಯ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಂದನಿ ಕೋಂ ದೇವರಾಜು, 26 ವರ್ಷ, ನಂ.7850, ಮರಿಮಲ್ಲಪ್ಪ ಕಾಂಪೌಂಡ್ ಹತ್ತಿರ, ವಿಜಯನಗರ 4ನೇ ಹಂತ, 2ನೇ ಪೇಸ್, ಮೈಸೂರು ಮತ್ತು ಗ್ರಾಹಕ ಮಹೇಶ್ ಕುಮಾರ @ ಮಹೇಶ ಬಿನ್ ಲೇ.ತಮ್ಮಣ್ಣ, 29 ವರ್ಷ, ಲೋಕನಾಯಕನಗರ, ಮೈಸೂರು. ರವರನ್ನು ವಶಕ್ಕೆ ಪಡೆದು ವೇಶ್ಯಾವಾಟಿಕೆಯಲ್ಲಿ ದೂಡಿದ್ದ ಒಂದು ಹುಡುಗಿಯನ್ನು ರಕ್ಷಣೆ ಮಾಡಿ ಆರೋಪಿತೆ ನಂದನಿಯಿಂದ 2400/- ರೂ ಹಣವನ್ನು ವಶಪಡಿಸಿಕೊಂಡಿರುತ್ತದೆ.
ವಿಚಾರಣೆ ಕಾಲದಲ್ಲಿ ನಂದಿನಿ ಪ್ರತಿಷ್ಟಿತ ಬಡಾವಣೆಗಳಲ್ಲಿ ಮನೆಯನ್ನು ಬಾಡಿಗೆ ಪಡೆದು ಅಮಾಯಕ ಹುಡುಗಿಯರನ್ನು ಈ ರೀತಿ ವೇಶ್ಯಾವಾಟಿಕೆಗೆ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾಗಿ ತಿಳಿಸಿರುತ್ತಾಳೆ.
2) ಜೂಜಾಟ
ದಿನಾಂಕ: 19-04-2015 ರಂದು ಹೂಟಗಳ್ಳಿ, ಎಸ್.ಆರ್.ಎಸ್. ಕಾಲೋನಿ, ಕೆ.ಇ.ಬಿ. ಆವರಣದಲ್ಲಿ ದಾಳಿ ಮಾಡಿ ಅಂದರ್‍ಬಾಹರ್ ಜೂಜಾಟ ಆಡುತ್ತಿದ್ದ
1) ಬೈರಪ್ಪ ಬಿನ್ , 33 ವರ್ಷ, ಕೂಲಿ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ, ಮೈಸೂರು.
2) ಬಸವರಾಜು, 38 ವರ್ಷ, ಕೂಲಿ ಕೆಲಸ, ಶಾನಭೋಗನಹಳ್ಳಿ ಪೋಸ್ಟ್, ಹುಣಸೂರು ತಾಲ್ಲೂಕು,
3) ಮಂಜುನಾಥ 27 ವರ್ಷ, ಪೈಂಟ್ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ, ಮೈಸೂರು.
4) ಕುಮಾರ್ ಬಿ 34 ವರ್ಷ, ವೆಲ್ಡಿಂಗ್ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ,
ಎಂಬುವವರನ್ನು ವಶಕ್ಕೆ ಪಡೆದು ಜೂಜಾಟದ ಪಣಕ್ಕೆ ಇಟ್ಟಿದ್ದ ರೂ 1110-00 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರ್ರಕರಣ ದಾಖಲಿಸಲಾಗಿದೆ.
ಈ ಪತ್ತೆ ಕಾರ್ಯವನ್ನು ಮೈಸೂರು ನಗರ ನರಸಿಂಹರಾಜ ವಿಭಾಗದ ಎಸಿಪಿ ಶ್ರೀ ಉಮೇಶ್ ಜಿ. ಸೇಠ್, ರವರ ಮಾರ್ಗದರ್ಶನದಲಿ,್ಲ ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್, ಸಿ.ವಿ ರವಿ, ಹಾಗೂ ಸಿಬ್ಬಂದಿಗಳು ಈ ಕೇಸಿನ ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.
No comments:
Post a Comment