ಮುದ್ರಾ ಬ್ಯಾಂಕ್‍ಗೆ ಚಾಲನೆ
ಅರ್ಥ ವ್ಯವಸ್ಥೆ ಬೆಳವಣಿಗೆಗೆ ಸಣ್ಣ ಉದ್ದಿಮೆದಾರರ ಕೊಡುಗೆ ಅಪಾರ: ಪ್ರಧಾನ ಮಂತ್ರಿ
ಅರ್ಥ ವ್ಯವಸ್ಥೆ ಬೆಳವಣಿಗೆಗೆ ಸಣ್ಣ ಉದ್ದಿಮೆದಾರರ ಕೊಡುಗೆ ಅಪಾರ: ಪ್ರಧಾನ ಮಂತ್ರಿ
ದೇಶದ ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ‘ಮುದ್ರಾ ಬ್ಯಾಂಕ್’ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯಲ್ಲಿಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಣ್ಣ ಉದ್ದಿಮೆದಾರರು ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದರು.
ದೇಶದ ಸಣ್ಣ ಉದ್ದಿಮೆಗಳಲ್ಲ್ಲಿ ಸುಮಾರು 12 ಕೋಟಿ ಜನರು ದುಡಿಯುತ್ತಿದ್ದಾರೆ. ಇಂತಹ ಸಣ್ಣ ವ್ಯಾಪಾರಿಗಳು ನಿರಂತರವಾಗಿ ಸಾಲದಾರರಿಂದ ಶೋಷಣೆಗೊಳಗಾಗುತ್ತಿದ್ದಾರೆ. ‘ಮುದ್ರಾ ಬ್ಯಾಂಕ್’ ಮೂಲಕ ಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ .ಈ ಮೂಲಕ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಗುಜರಾತ್‍ನ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ಬಡ ಮುಸಲ್ಮಾನರಿಗೆ ಉದ್ಯೋಗ ಕಲ್ಪಿಸಿದ್ದ ಪರಿಸರ ಸ್ನೇಹಿ ಗಾಳಿಪಟ ಉದ್ದಿಮೆಗೆ ತಾವು ನೀಡಿದ ಬೆಂಬಲವನ್ನು ಪ್ರಧಾನ ಮಂತ್ರಿ ಈ ಸಂದರ್ಭದಲ್ಲಿ ಸ್ಮರಿಸಿದರು.
ಕೃಷಿ ವಲಯದಲ್ಲಿ ಮೌಲ್ಯ ವರ್ಧನೆ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ನಾವು ಸಮುದಾಯ ಮಟ್ಟದಲ್ಲಿ ಕೃಷಿ ಕ್ಷೇತ್ರದ ಮೌಲ್ಯ ವರ್ಧನೆಯಲ್ಲಿ ನಿರತ ರೈತರ ಜಾಲವನ್ನು ಸೃಷ್ಠಿಸಬೇಕು. ಅಕಾಲಿಕ ಮಳೆ ಮತ್ತ ಹವಾಮಾನ ವೈಪರಿತ್ಯಗಳಿಂದ ತೊಂದರೆಗೊಳಗಾಗುತ್ತಿರುವ ದೇಶದ ರೈತರ ಕುರಿತು ನಾವು ಆಲೋಚಿಸಬೇಕು ಎಂದರು.
ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜನಧನ ಯೋಜನೆ ಅನುಷ್ಠಾನದಲ್ಲಿ ದೇಶದ ಬ್ಯಾಂಕ್‍ಗಳ ಪರಿಶ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.
ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ, ಹಣಕಾಸು ಖಾತೆಯ ರಾಜ್ಯ ಸಚಿವ ಶ್ರೀ. ಜಯಂತ್ ಸಿನ್ಹಾ, ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶ್ರೀ ರಘರಾಮ್ ರಾಜನ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು.
No comments:
Post a Comment