ಮೈಸೂರು ಏ.೧೭.ದಿನಾಂಕ 18-04-2015 ರಂದು ಬೆ.6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ, ಕುಡಿಯುವ ನೀರು ಹಾಗೂ ವಿದ್ಯುತ್‍ಚ್ಛಕ್ತಿಗಾಗಿ ಕರ್ನಾಟಕ ಸರ್ಕಾರದಿಂದ ಯೋಜಿಸಿರುವ ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ “ಬಂದ್’’ ಮಾಡಲು ಕರೆನೀಡಿರುತ್ತಾರೆ.
ಈ ಸಂಬಂಧ ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಮತ್ತು ನೆಮ್ಮದಿ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರುಗಳ ಗಮನಕ್ಕೆ ಈ ಕೆಳಕಂಡ ಸೂಚನೆಗಳನ್ನು ತರಲಾಗಿದ ಎಂದು ಪೊಲೀಸ್ ಕಮೀಷನರ್‍ರವರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.
ಬಂದ್ ಆಚರಣೆ ಸಂಬಂಧ ಯಾವುದೇ ವ್ಯಕ್ತಿ, ಸಂಘಟನೆ, ಬಲವಂತವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳನ್ನು ಮುಚ್ಚಿಸುವುದನ್ನು ನಿಷೇಧಿಸಲಾಗಿದೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಕಛೇರಿಗಳನ್ನು ಮುಚ್ಚಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.
ಬಂದ್ ಮಾಡುವ ನೆಪದಲ್ಲಿ ಸಾರ್ವಜನಿಕರ ಹಾಗೂ ಯಾವುದೇ ವಾಹನಗಳ ಸಂಚಾರಕ್ಕೆ ತಡೆ ಒಡ್ಡಬಾರದು ಹಾಗೂ ಆಡಚಣೆ ಮಾಡಬಾರದು. ಯಾವುದೇ ಕಾರಣಕ್ಕೂ ರಸ್ತೆಯ ಮಧ್ಯದಲ್ಲಿ ಟೈರ್ ಹಾಗೂ ಇತರೆ ಉರುವಲುಗಳಿಗೆ ಬೆಂಕಿ ಹಚ್ಚಬಾರದು ಮತ್ತು ಕಲ್ಲು ತೂರಾಟ ನಡೆಸಬಾರದು.
ಬಂದ್ ಸಮಯದಲ್ಲಿ ಮೈಕ್ ಲೈಸನ್ಸ್‍ಅನ್ನು ಪಡೆದು ಅಳವಡಿಸುವವರು ಘನ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಧ್ವನಿಯಲ್ಲಿ ಉಪಯೋಗಿಸಬೇಕು. ಧ್ವನಿವರ್ಧಕದಲ್ಲಿ ಆಶ್ಲೀಲ ಸಾಹಿತ್ಯವುಳ್ಳ ಗೀತೆಗಳನ್ನು ಪ್ರಸಾರ ಮಾಡಬಾರದು.
ಈ ಸಂಬಂಧ ಮೆರವಣಿಗೆಗಳನ್ನು ನಡೆÀಯುವ ಬಗ್ಗೆ ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೂರ್ವಾನುಮತಿ ಪಡೆಯುವುದು
ಬಂದ್ ಸಂಬಂಧ ಪ್ರಾರ್ಥನಾ ಸ್ಥಳ/ಚರ್ಚ್/ಮಸೀದಿಗಳ ಬಳಿ ಧಾರ್ಮಿಕ ಭಾವನೆಗೆ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು ಮತ್ತು ವಾದ್ಯಗಳನ್ನು ನುಡಿಸಬಾರದು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮತ್ತು ಸಾರ್ವಜನಿಕರ ಆಸ್ತಿಗಳಿಗೆ ನಷ್ಟ ಉಂಟು ಮಾಡಬಾರದು.
ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ ಪೊಲೀಸ್ ಠಾಣಿಗಳಿಗೆ ಅಥವಾ ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ.100,2418139,2418339 ಗೆ ಮಾಹಿತಿ ನೀಡಲು ಕೋರಲಾಗಿದೆ.
ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರಿಗೆ ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.

No comments:
Post a Comment