Wednesday, 15 April 2015

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಚ್ಚುವರಿ ನೋಡಲ್ ಅಧಿಕಾರಿಗಳ ನೇ

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ
  ಹೆಚ್ಚುವರಿ ನೋಡಲ್ ಅಧಿಕಾರಿಗಳ ನೇಮಕ
     ಮೈಸೂರು,ಏ.15. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ  ಪ್ರತಿ ಚಾರ್ಚ್ ಅಧಿಕಾರಿಗಳಿಗೆ ಸಹಕರಿಸಲು ಹಾಗೂ ಅವರ ಕಾರ್ಯ ವೈಖರಿಗಳನ್ನು ಪರಿಶೀಲನೆ ನಡೆಸಲು ಹೆಚ್ಚುವರಿಯಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ  ಪ್ರಧಾನ ಸಮೀಕ್ಷಾಧಿಕಾರಿಗಳಾದ ಅರ್ಚನಾ ಅವರು ತಿಳಿಸಿದರು.
    ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ಚಾರ್ಚ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಮೀಕ್ಷೆ ಕಾರ್ಯದ ಬಗ್ಗೆ ಪ್ರತಿ ದಿವಸ ವರದಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಬೇಕು. ಗಣತಿದಾರರು ನಮೂನೆಯನ್ನು ಭರ್ತಿ ಮಾಡುವಾಗ ಪೆನ್ನಿಲ್ ಉಪಯೋಗಿಸಬಾರದೆಂದು ಚಾರ್ಚ್ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು  ಎಂದು ಹೇಳಿದರು.
    ಸಮೀಕ್ಷೆ ಕಾರ್ಯಕ್ಕೆ ಬೇಕಾಗಾಗುವ ಲೇಖನ ಸಾಮಾಗ್ರಿಗಳು ಮತ್ತು ನಮೂನೆ 1 ರಿಂದ 5 ರವರೆಗಿನ ಅರ್ಜಿ ನಮೂನೆಗಳನ್ನು ಈಗಾಗಲೇ ಎಲ್ಲ ಚಾರ್ಚ್ ಅಧಿಕಾರಿಗಳಿಗೆ ಸರಬರಾಜು ಮಾಡಲಾಗಿದೆ. ದೈನಂದಿನ ಸಮೀಕ್ಷೆ ವರದಿಯನ್ನು ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲು ಡಾಟಾ ಎಂಟ್ರೀಸ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
    ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾ ಅಧಿಕಾರಿ ಸೋಮಶೇಖರ್ ಹಾಗೂ ಇನ್ನಿತರರು ಭಾಗವಹಿಸಿದರು.

                                                      **** ಕರ್ನಾಟಕ ವಾರ್ತೆ ***

No comments:

Post a Comment