Tuesday, 28 April 2015

ವಾರಣಾಸಿಯಲ್ಲಿ ಸಹಾಯ ಕೇಂದ್ರ ಸ್ಥಾಪನೆ

ವಾರಣಾಸಿಯಲ್ಲಿ ಸಹಾಯ ಕೇಂದ್ರ ಸ್ಥಾಪನೆ
ನವದೆಹಲಿ. ಏ. 28:  ಭೂಕಂಪ ಸಂಭವಿಸಿದ  ಹಿನ್ನೆಲೆಯಲ್ಲಿ ನೇಪಾಳದಿಂದ   ಆಗಮಿಸುತ್ತಿರುವ ಕನ್ನಡಿಗರಿಗೆ ನೆರವಾಗಲು ಕರ್ನಾಟಕ ಸರ್ಕಾರವು ವಾರಣಾಸಿಯಲ್ಲಿ ಸಹಾಯ ಕೇಂದ್ರವನ್ನು ಸ್ಥಾಪಿಸಿದೆ    ಎಂದು ಕರ್ನಾಟಕ ಭವನದ ನಿವಾಸಿ ಆಯುಕ್ತರಾದ ಶ್ರೀಮತಿ ವಂದನಾ ಗುರ್ನಾನಿ ತಿಳಿಸಿದ್ದಾರೆ.
ಈ ಸಹಾಯ ಕೇಂದ್ರದ ಉಸ್ತುವಾರಿಕೆಗಾಗಿ ಐಎಎಸ್ ಅಧಿಕಾರಿ ಶ್ರೀ ರಮಣದೀಪ್ ಚೌದರಿ ಅವರನ್ನು ನಿಯೋಜಿಸಲಾಗಿದೆ. ಸಂಜೆ ವೇಳೆಗೆ  ಅವರು ವಾರಣಾಸಿಯನ್ನು ತಲುಪಲಿದ್ದು, ನೇಪಾಳದಿಂದ ಆಗಮಿಸುವ ಕನ್ನಡಿಗರನ್ನು ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದಿಂದ  ಕೈಗೊಳ್ಳಲಾಗುತ್ತದೆ.   ಅವರ ಮೊಬೈಲ್ ಸಂಖ್ಯೆ 09480683105 ಆಗಿದ್ದು, ನೇಪಾಳದಿಂದ ಕರ್ನಾಟಕಕ್ಕೆ   ನಿರ್ಗಮಿಸಲು ಯಾವುದೇ ಮಾಹಿತಿ ಇದ್ದರೆ ಅವರೊಂದಿಗೆ  ವಿನಿಯಮ ಮಾಡಿಕೊಳ್ಳಬಹುದಾಗಿದೆ. ಈ ಸಹಾಯ ಕೇಂದ್ರದಲ್ಲಿ ಕಾರ್ಯನಿರ್ವಹಿಸುವಂತೆ   ಕರ್ನಾಟಕ ಭವನದ ಸ್ವಾಗತಗಾರರಾದ ಶ್ರೀ ಮಂಜೇಗೌಡ ಅವರನ್ನು ನಿಯೋಜಿಸಲಾಗಿದೆ.
ಭಾರತ ಸರ್ಕಾರವು ನೇಪಾಳದಿಂದ ಆಗಮಿಸುವ ಭಾರತೀಯರಿಗೆ ಸಾಕಷ್ಟು ಪ್ರಮಾಣದಲ್ಲಿ ವಾಹನ ವ್ಯವಸ್ಥೆಯನ್ನು ಕಲ್ಪಿಸಿದೆ. ಈ ವಾಹನಗಳು ಕಟ್ಮಂಡು, ಗೋರಕ್ ಪುರ , ವಾರಣಾಸಿ ಮಾರ್ಗವಾಗಿ ದೆಹಲಿಗೆ ಆಗಮಿಸಲಿವೆ. ಈ ವಾಹನಗಳಲ್ಲಿ ಆಗಮಿಸುವ ಕನ್ನಡಿಗರನ್ನು  ವಾರಣಾಸಿಯಿಂದ ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆಯನ್ನು ಈ ಸಹಾಯ ಕೇಂದ್ರದ ಮೂಲಕ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು.
 ಈಗಾಗಲೇ ನೇಪಾಳಕ್ಕೆ ತೆರಳಿರುವ  ಐಎಎಸ್ ಅಧಿಕಾರಿ  ಪಂಕಜ್ ಕುಮಾರ್ ಪಾಂಡೆ ( ಮೊ.ಸಂಖ್ಯೆ09900095440) ಹಾಗು ಐಪಿಎಸ್ ಅಧಿಕಾರಿ  ಉಮೇಶ್ ಕುಮಾರ್ (ಮೊ.ಸಂಖ್ಯೆ 09480800029) ನೇಪಾಳ ರಾಯಬಾರಿ ಕಚೇರಿಯಲ್ಲಿ ಸಮನ್ವಯತೆಯೊಂದಿಗೆ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ. ನೇಪಾಳದಲ್ಲಿ ಸಿಲುಕಿರುವ ಕನ್ನಡಿಗರಿಗೆ  ಸಂಬಂಧಿಸಿದಂತೆ ಯಾವುದೇ ಮಾಹಿತಿ ಇದ್ದರೆ ಇವರೊಂದಿಗೆ  ವಿನಿಮಯ ಮಾಡಿಕೊಳ್ಳಬಹುದಾಗಿದೆ. ನಿನ್ನೆಯಿಂದ 36 ಮಂದಿ ಕನ್ನಡಿಗರು ಕರ್ನಾಟಕ ಭವನಕ್ಕೆ   ಆಗಮಿಸಿದ್ದಾರೆ.  ಇಂದು ಬೆಳಿಗ್ಗೆ ಆಗಮಿಸಿದ್ದ  10 ಮಂದಿಯನ್ನು ಅವರ ಇಚ್ಚೆಯ ಮೇರೆಗೆ  ನೇರವಾಗಿ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
 ನೇಪಾಳದಿಂದ ಕರ್ನಾಟಕ ಭವನಕ್ಕೆ ಆಗಮಿಸುವ ಕನ್ನಡಿಗರಿಗೆ ವಸತಿ,  ಊಟೋಪಚಾರವನ್ನು ಒದಗಿಸಿ, ಅಗತ್ಯವಿದ್ದವರಿಗೆ ಚಿಕಿತ್ಸೆ ನೀಡಿ, ಅವರನ್ನು ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.   ನಿವಾಸಿ ಆಯುಕ್ತರ ಮಾರ್ಗದರ್ಶನದಂತೆ ತಂಡವನ್ನು ರಚಿಸಿ, ಕರ್ನಾಟಕ ಭವನದ ಸಿಬ್ಬಂದಿಯನ್ನು ನೇಮಿಸಲಾಗಿದೆ. ವಿಮಾನ ನಿಲ್ದಾಣ,  ರೈಲು ನಿಲ್ದಾಣದಲ್ಲಿ ನಿಬ್ಬಂದಿಯನ್ನು ನಿಯೋಜಿಸಲಾಗಿದೆ. ಕರ್ನಾಟಕ ಭವನದ ಅಧಿಕಾರಿಗಳು ಹಾಗು ಸಿಬ್ಬಂದಿ ವರ್ಗದರು ಸಮನ್ವಯತೆಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ.  ರಾಜ್ಯ ಸರ್ಕಾರ, ವಿದೇಶಾಂಗ ಸಚಿವಾಲಯ, ರಾಜ್ಯದ ನೊಡೆಲ್ ಅಧಿಕಾರಿಗಳು, ಎನ್‍ಡಿಆರ್‍ಎಫ್    ಅವರೊಂದಿಗೆ ಸಮನ್ವಯತೆ ಸಾಧಿಸಲಾಗುತ್ತಿದೆ. ಯಾವುದೇ ಕರೆಗಳು ಬಂದರೂ ಸಂಭಂಧಿಸಿದ ಅಧಿಕಾರಿಗಳೊಂದಿಗೆ ಸಮನ್ವಯ ಸಾಧಿಸಲಾಗುತ್ತಿದೆ ಎಂದು ಜಂಟಿ ನಿವಾಸಿ ಆಯುಕ್ತರಾದ ಶ್ರೀ ರಂಗಸ್ವಾಮಿ ಅವರು ತಿಳಿಸಿದರು.  

ಮೈಸೂರು

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ 
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.  
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.

ಶಾಸಕ ಎಂ.ಕೆ. ಸೋಮಶೇಖರ್ ರಿಂದ ಘನ ತ್ಯಾಜ್ಯ ಘಟಕ ವೀಕ್ಷಣೆ
ಮೈಸೂರು, ಏ. 28- ಮೈಸೂರಿನ ಕೃಷ್ಣರಾಜ ಕ್ಷೇತ್ರದ ಶಾಕ ಎಂ.ಕೆ. ಸೋಮಶೇಖರ್ ರವರು ಇಂದು ತಮ್ಮ ಕಷೇತ್ರದ ವೀಕ್ಷಣೆಕಾರ್ಯದಲ್ಲಿ ತೊಡಗಿಕೊಂಡಿದ್ದು, ಅಲ್ಲಿನ ಪರಿಸ್ಥಿತಿಗಳನ್ನು ಅವಲೋಕಿಸಿದರು.
 ನತಂರ ಅವುಗಳನ್ನು ಸರಿಪಡಿಸುವಂತೆ ಸಂಬಂಧಿಸಿದ ಪಾಲಿಕೆ ಅಧಿಕಾರಿಗಳಿಗೆ  ಸೂಚಿಸಿದರು.
 ನಂತರ ಶಾಸಕರು ವಿದ್ಯಾರಣ್ಯಪ್ಮರಂ ವ್ಯಾಪ್ತಿಗೊಳಪಡುವ  ಸೂಯೇಜ್ ಫಾರಂ ಬಳಿಯ ಘನತ್ಯಾಜ್ಯ ಸಂಘ್ರಹ ಘಟಕ್ಕೆ ತೆರಳಿ ಅವಲೋಕಿಸಿದರು.
ದಿನೇ ದಿನೇ ನಗರದಲ್ಲಿ ಕಸ ಉತ್ಪತ್ತಿ ಹೆಚ್ಚುತ್ತಿದ್ದು, ಇದನ್ನು ವಿಲೆವಾರಿ ಮಾಡಲು ಕಷ್ಟಸಾದ್ಯವಾಗಿದೆ ಎಂದು ಬಂದ  ದೂರುಗಳ ಹಿನ್ನೆಲೆಯಲ್ಲಿ ಕಸ ಬೇರ್ಪಡಿಸಲು ಬೇಕಾದ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಚಿದರ್ಭದಲ್ಲಿ ತಿಳಿಸಿದರು.
 ಕಸ ವಿಂಗಡಿಸಿ   ಇದರಿಂದ ಗೊಬ್ಬರ ಹಾಗೂ ಇಂದ£ ತಯಾರಿಕೆಗೆ  ಸರ್ಕಾರ ಯೋಜನೆ ಹಾಕಿಕೊಂಡಿದೆ  ಎಂದು ಶಾಸಕರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. ಇವರೊಂದಿಗೆ ನಗರಪಾಲಿಕೆಯ ಅಧಿಕಾರಿಗಳು ಇದ್ದರು.
ಬೇಡಿಕೆಗಳ ಈಡೇರಿಕೆಗಾಗಿ ನಾಳೆ ಗ್ರಾಮ ಪಂಚಾಯಿತಿ ಪೌರಕಾರ್ಮಿಕರ ಪ್ರತಿಭಟನೆ
ಮೈಸೂರು,ಏ.28- ಮೈಸೂರು ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಸ್ವಚ್ಚತಾ ಕಾರ್ಯ ಕೆಲಸ ಮಾಡುತ್ತಿರುವ  ಪೌರಕಾರ್ಮಿಕರ  ಸ್ಥಿತಿ ಅತಂತ್ರವಾಗಿದೆ, ಅವರ ಬದುಕು  ಇನ್ನು ಹಸನಗಿಲ್ಲ ಸರ್ಕಾರದ  ಸೌಲಭ್ಯಗಳಿಂದ ವಚಿಚಿತರಾಗಿದ್ದಾರೆ.
 ಅವರಿಗೆ ಕೆಲಸ ಖಾಯಂ ಇಲ್ಲ, ಸಸರಿಯಾದ ಸಮಯಕ್ಕೆ ಸಂಬಳ ಸಿಗುತ್ತಿಲ್ಲ, ಇಎಸ್‍ಐ, ಪಿಎಫ್ ಔಲಭ್ಯಗಳು ಸಿಗಿತ್ತಿಲ್ಲ   ಇನ್ನೂ ಹಲವಾರು ಸವಲತ್ತುಗಳಿಂದ ವಂಚಿತರಾಗಿರುವ  ಇವರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ, ಸರ್ಕಾರದ ಗಮನ ಸೆಳೆಯುವ ಸಲುವಾಗಿ  ನಾಳೆ ಎಲ್ಲಾ ಗ್ರಾಮ ಪಂಚಾಯಿತಿಗಳ ಪೌರಕಾರ್ಮಿಕರೊಡಗೂಡಿ ಜಿಲ್ಲಾಧಿಕಾರಿ ಕಚೇರಿಯಿಂದ  ಜಿಲ್ಲಾ ಪಂಚಾಯಿತಿ ಕಚೇರಿವರೆಗೆ  ಪ್ರತಿಭಟನೆ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಆರ್ಟಿಸ್ಟ್ ನಾಗರಾಜು  ಪತ್ರಿಕಾ ಘೋಷ್ಟಿಯಲ್ಲಿ ತಿಳಿಸಿದರು.
 ಪತ್ರಿಕಾ ಘೋಷ್ಟಿಯಲ್ಲಿ ಪರಮೇಶ್, ರಾಮಮ್ಮ,ಕುಮಾರಯ್ಯ, ಮಹದೇವು, ಮಾಳಿಗಯ್ಯ ಉಪಸ್ಥಿತರಿದ್ದರು.   

 ಅಂಗಡಿಯಲ್ಲಿ ಸೀರೆ ಕದಿಯುತ್ತಿದ್ದ ಕಳ್ಳಿಯರ ಬಂಧನ
ಮೈಸೂರು, ಏ. 28-ಮೈಸೂರಿನ ಸೀರೆ ಮಳಿಗೆಯೊದರಲ್ಲಿ ವ್ಯಾಪಾರಕ್ಕೆ ಬಂದು ಸೀರೆಗಳನ್ನು ಕದಿಯುತ್ತಿದ್ದ ಇಬ್ಬರು ಕಳ್ಳಿಯರನ್ನು ನಜರ್‍ಬಾದ್ ಪೊಲೀಸರು ಮಾಲು ಸಮೇತ ಬಂಧಿಸಿದ್ದಾರೆ.
 ನಗರದ ಮೃಗಾಲಯ ಬಳಿಯಿರುವ ಕರ್ನಾಟಕ ಸ್ಯಾರಿಸ್ ಸೆಂಟರ್ ಎಂಬ ಅಂಗಡಿಯಗೆ ಬಂದ ಕಳ್ಳಿಯರು ಸೀರೆಗಳನ್ನು ಕೊಳ್ಳುವವರಂತೆ ನಟಿಸಿ ಸ್ಯಾರಿಗಳನ್ನು ವೀಕ್ಷಿಸುತ್ತಿದ್ದರು, ವೀಕ್ಷಿಸುತ್ತಿದ್ದಂತೆ ಅಂಗಡಿಯ ನೌಕರರ ಗಮನವನ್ನು ಬೇರೆಡೆ ಸೆಳೆದು ತಾವು ತಂದಿದ್ದ ಬ್ಯಾಗ್‍ಗಳಿಗೆ ಬೆಲೆಬಾಳುವ  5 ಸ್ಯಾರಿಗಳನ್ನು ತುರುಕಿದ್ದರು ಇದು ಅಲ್ಲಿ ಅಳವಡಿಸಲಾಗಿದ್ದ  ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು.
 ಸೀರೆ ಕದಿಯಲು 5 ಮಂದಿ ಕಳ್ಳಿಯರು ಬಂದಿದ್ದು, ಅವರಲ್ಲಿ ಇಬ್ಬರುಮಾತ್ರ ಸಿಕ್ಕಿಹಾಕಿಕೊಂಡಿದ್ದಾರೆ, ಉಳಿದ ಮೂವರು ಪರಾರಿ ಯಾದರೆಂದು ಹೇಳಲಾಗಿದೆ. ಸಿಕ್ಕಿಕೊಂಡ ಇಬ್ಬರನ್ನು ನಜರ್‍ಬಾದ್ ಪೊಲೀಸರು ಮಾಲುಸಮೇತ ವಶಕ್ಕೆ ತೆಗೆದುಕೊಂಡು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದಿದ್ದಾರೆ.
 ಅಂಗಡಿ ಮಾಲೀಕರು ಹೇಳುವ ಪ್ರಕಾರ ಇವರುಗಳು ಈ ಹಿಂದೆಯೇ ಇದೇ ಅಂಗಡಿಗೆ ಬಂದು ಸೀರೆಗಳನ್ನು ಕದ್ದಿದ್ದರು, ಆಗ ಸಿಕ್ಕಿಕೊಂಡಾಗ ಈ ಬ್ಯಾಗ್ ನಮ್ಮದಲ್ಲ ಎಂದು ಹೇಳಿ ತಪ್ಪಿಸಿಕೊಂಡರು. ಆಗ ಪೊಲೀಸರಿಗೆ ವಿಷಯತಿಳಿಸಿದ್ದೆವು ಅದರಂತೆ ಈ ಮಹಿಳೆಯರು ಇಂದು ಅಂಗಡಿಗೆ ಬಂದಾಗ ಪೊಲೀಸರಿಗೆ ಮಾಹಿತಿ ನೀಡಿದ್ದೆವು, ಅದರಂತೆ ಪೊಲೀಸರು ಚಾಮುಂಡಿ ಎಂಬ ಪಡೆಯನ್ನು ಮಪ್ತಿ ಉಡುಪಿನಲ್ಲಿ ಕಳುಹಿಸಿ ಇವರ ವ್ಯಾಪಾರದ ನಡವಳಿಕೆಯನ್ನು ಸಿಸಿ ಕ್ಯಾಮರಾ ಮೂಲಕ ವೀಕ್ಷಿಸುತ್ತಿದ್ದಾಗ ರೇಷ್ಮೆ ಸೀರೆಗಳನ್ನು ಬ್ಯಾಗ್‍ಗಳಿಗೆ ಸೇರಿಸುತ್ತಿದ್ದುದನ್ನು ಕಂಡು ತಕ್ಷಣ ಅವರನ್ನು ಮಾಲುಸಮೇತ ಹಿಡಿದಿದ್ದಾರೆ ಎನ್ನಲಾಗಿದೆ.
ಕಳ್ಳೀಯರು ಮೈಸೂರಿನ ಎಸ್.ಆರ್. ನಾಯ್ಡುನಗರ ವಾಸಿಗಳಾಗಿದ್ದು, ತಪ್ಪಿಸಿಕೊಂಡಿರುವ ಇತರ ಕಳ್ಳಿಯರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
 ಕಳ್ಳಿಯರನ್ನು ಬಂಧಿಸಿ ಶಿಕ್ಷೆ ಕೊಡಿಸುವ ಉದ್ದೇಶ ನಮಗಿಲ್ಲ ಆದರೆ ಇನ್ನು ಮುಂದೆ ಯರೂ, ಎಲ್ಲೂ ಈರೀತಿ ಕಳ್ಳತನಮಾಡದಿರಲಿ, ಬುದ್ಧಿ ಕಲಿಯಲಿ ಎಂದು  ಪೊಲೀಸರಿಗೆ  ತಿಳಿಸಿರುವುದಾಗಿ ಅಂಗಡಿ ಮಾಲೀಕರು ತಿಳಿಸಿದ್ದಾರೆ.
   

ಮಂಡ್ಯ: ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ಶೋಷಣೆಗೆ ಒಳಗಾಗಿ ಒಳ್ಳೆಯ ಶಿಕ್ಷಣ ಪಡೆದು ಈ ದೇಶದಲ್ಲಿ ಮಹಾನ್ ಜ್ಞಾನಿಯಾದ ಮಹಾ ಮಾನವತಾವಾದಿ ಎಂದು ಜಿ.ಪಂ. ಮಾಜಿ ಅಧ್ಯಕ್ಷ ಸುರೇಶ್ ಕಂಠಿ ತಿಳಿಸಿದರು.
ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಪ್ರಾಥಮಿಕ ಹಾಗೂ ಮಾಧ್ಯಮಿಕ ಪರಿಶಿಷ್ಟ ಜಾತಿ, ಪಂಗಡದ ಶಾಲಾ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ನಡೆದ ಸಂವಿಧಾನ ಶಿಲ್ಪಿ ಡಾ. ಂಬೇಡ್ಕರ್ ಅವರ 124ನೇ ಜಯಂತ್ಯೋತ್ಸವ ಹಾಗೂ ಬಸವಣ್ಣ, ಬಾಬು ಜಗಜೀವನರಾಂ ಜಯಂತ್ಯೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಭಾರತದಲ್ಲಿ ಅನಿಷ್ಠ ಪದ್ಧತಿಯನ್ನು ಹೋಗಲಾಡಿಸಲು ಅಂಬೇಡ್ಕರ್ ಅವರು ಪಟ್ಟ ಶ್ರಮ ಅಷ್ಟಿಷ್ಟಲ್ಲಾ, ದೇಶ ವಿದೇಶಗಳಿಗೆ ಹೋಗಿ ಜ್ಞಾನ ಸಂಪಾದನೆ ಮಾಡಿ ಅನಿಷ್ಠ ಪದ್ಧತಿ ವಿರುದ್ಧ ಹೋರಾಟ ಮಾಡಿದರು ಎಂದು ಬಣ್ಣಿಸಿದರು.
ಪ್ರತಿಯೊಂದು ಇಲಾಖೆಯೂ ಇಂದು ಖಾಸಗೀಕರಣಗೊಳ್ಳುತ್ತಿದೆ. ಇದರಿಂದ ಎಚ್ಚಗೊಳ್ಳುವುದು ಅಗತ್ಯವಿದೆ. ಎಚ್ಚರಗೊಳಿಸುವ ಶಕ್ತಿ ಶಿಕ್ಷಕರಲ್ಲಿದೆ. ಸಮಾಜದ ಯುವ ಪೀಳಿಗೆಗೆ ದೇಶದ ಸ್ಥಿತಿಗತಿಗಳನ್ನು ಅರ್ಥ ಮಾಡಿಸುವುದು ಶಿಕ್ಷಕರ ಜವಾಬ್ದಾರಿಯಾಗಿದೆ ಎಂದು ಹೇಳಿದರು.
12ನೇ ಶತಮಾನದಲ್ಲಿ ಬಸವಣ್ಣನವರು ಸಮಾನತೆಗಾಗಿ ಹೋರಾಟ ನಡೆಸಿದರು. ಹಸಿರು ಕ್ರಾಂತಿಯ ಹರಿಕಾರ ಬಾಬು ಜಗಜೀವನರಾಂ ಅವರು ದೇಶದ ಉಪ ಪ್ರಧಾನಿಯಾಗಿ ಆಹಾರ ಭದ್ರತೆಯಲ್ಲಿ ಕ್ರಾಂತಿಕಾರಿ ಬದಲಾವಣೆ ಮಾಡಿದರು. ಇಂತಹ ಮಹನೀಯರ ತತ್ವಾದರ್ಶಗಳನ್ನು ಪ್ರತಿಯೊಬ್ಬರೂ ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಸಂಘದ ಅಧ್ಯಕ್ಷ ಎಲ್.ಜೆ. ಶಂಕರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್. ಶಿವಲಿಂಗಯ್ಯ, ಖಜಾಂಚಿ ಶಿವಣ್ಣ, ಜಿ.ಪಂ. ಸದಸ್ಯ ಶಿವಣ್ಣ, ಡಯಟ್ ಪ್ರಾಂಶುಪಾಲರಾದ ಭಾರತಿ, ನಾಗಮಂಗಲ ಬಿಇಓ ಅಂತರಾಜು, ಕಾಂಗ್ರೆಸ್ ಮುಖಂಡ ಆನಂದ್‍ಕುಮಾರ್ ಇತರರು ಸಮಾರಂಭದಲ್ಲಿ ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕರು ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.

Monday, 27 April 2015

ವೃದ್ದಾಪ್ಯದಲ್ಲಿರುವವರಿಗೆ ಸರ್ಕಾರ ಸವಲತ್ತು ಕಲ್ಪಿಸಬೇಕು- ಪುಷ್ಪ ಮರ್‍ನಾಥ್
ಮೈಸೂರು,ಏ.27- ಮನುಷ್ಯನಿಗೆ 55 ರಿಂದ 60 ವರ್ಷ ವಯಸ್ಸು ಮೀರಿದ ಕೂಡಲೇ  ವೃದ್ಧರು ಎಂಬ ಕಾರಣಕ್ಕೆ ಮಕ್ಕಳಿಮದ, ಸೊಸೆಯಂದಿರಿಂದ ನಿರ್ಲಕ್ಷ್ಯಕ್ಕೊಳಗಾಗುತ್ತಾರೆ ಅಚಿಥ ಸಂದರ್ಭದಲ್ಲಿ  ಅವರಿಗೆ ಒಂಟಿತನ ಕಾಡುತ್ತಿರುತ್ತದೆ, ಯಾರಾದರೂ ಆಶ್ರಯಕ್ಕೆ ಬರಬಹುದೆಂದು ವೃದ್ಧ ಜೀವಗಳು ಹಂಬಲಿಸುತ್ತಿರುತ್ತವೆ ಆದ್ದರಿಂದ ಸರ್ಕಾರ ಇಂಥವರ ನೆರವಿಗೆ ಬರಲು ಸರ್ಕಾರ ಯೋಜೆ ರೂಪಿಸಬೆಕು ಎಂದು  ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ಅಮರ್‍ನಾಥ್ ತಿಳಿಸಿದರು.
 ಮೈಸೂರಿನ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವತಿಯಿಂದ  ಜಗನ್ಮೋಹನ ಅರಮನೆಯಲ್ಲಿ ಆಯೋಜಿಸಿದ್ದ, ವೃದ್ಧಾಪ್ಯದಲ್ಲಿ ಆರೋಗ್ಯ ನಿರ್ವಹಣೆ ಎಂಬ ಕಾರ್ಯಾಗಾರ ಕಾರ್ಯಕ್ರಮ  ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ತಮ್ಮ ಮಕ್ಕಳಿಂದ ನಿರ್ಲಕ್ಷಿಸಲ್ಪಟ್ಟ ತಂದೆ ತಾಯಿಗಳು  ಆಶ್ರಯ ಕಾಣದೆ ಪರಿತಪಿಸುವಾಗ ಅವರ ಸಹಾಯಕ್ಕೆ ವ್ಯದ್ಧಾಶ್ರಮಗಳು ಬರುತ್ತವೆ, ಇವುಗಳ ನಿರ್ವಹಣೆಗೆ ದಾನಿಗಳು ಇರುತತಾರೆ ಆದರೆ ಅದು ಶಾಶ್ವತವಗಿರುವುದಿಲ್ಲ, ಆದಕಾರಣ ಸರ್ಕಾರ ಇವರ ನೆರವಿಗೆ ಬರಬೇಕು ಎಂದರು.
 ಸರ್ಕಾರ ಈಗಾಗಲೇ  ಮಕ್ಕಳ ಕಲ್ಯಾಣಕ್ಕೆ , ಮಹಿಳೇಯರ ಹಿತಕಾಯಲು, ವಿಕಲಚೇತನರ,  ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ತಂದಿದೆ  ಆದರೆ ಮಕ್ಕಳಿಂದ ಹೊರಹಾಕಿ ಬಂದ  ವೃದ್ಧರ ಏಳಿಗೆಗಾಗಿ  ಸಕಾರ ಯಾವುದೇ  ಯೋಜನೆ ಹಾಕಿಕೊಂಡಿಲ್ಲ ಆದ್ದರಿಂದ  ಇಚಿತಹ ನಿರ್ಗತಿಕರ ಕಲ್ಯಾಣಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು, ಅವರಿಗೂ  ಅವರ ಜೀವಿತಾವಧಿವರೆಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸುವಂತಾಗಬೇಕು ಎಂದು  ಹೇಳಿದರು.
   ವೃದ್ಧಾಪ್ಯದಲ್ಲಿ ಆರೋಗ್ಯದಲ್ಲಿ ವ್ಯತ್ಯಾಸಗಳಾಗುವುದು ಸಹಜ, ಆದ್ದರಿಂದ ಅವರ ಆರೋಗ್ಯ ಸುಧಾರಣೆ ಅಗತ್ಯ, ಈ ಬಗ್ಗೆ ತಿಳಿಸಿಕೊಡಲು ಬ್ರಹ್ಮಕುಮಾರಿ ಸಂಸ್ಥೆ ಈ ಕಾರ್ಯಗಾರ ಏರ್ಪಡಿಸಿರುವುದು ಶ್ಲಾಘನೀಯ ಹಾಗೂ ಸ್ಮರಿಸತಕ್ಕದ್ದು  ಎಂದರು.
 ಹಿಂದೆ ಹಿರಿಯರಿಗೆ  ವೃದ್ಧರಿಗೆ ಹೆಚ್ಚು ಗೌರವ ಕೊಡುತ್ತಿದ್ದರು, ಆದರೆ ಈಗಿನ ಯುವಕರು ಹಿರಿಯರನ್ನು ಗೌರವಿಸದೇ ಅಸಗೌರವದಿಮದ ಕಾಣುತ್ತಿದ್ದಾರೆ ಈರೀತಿ ಯಾಕೆ ಆಗುತ್ತಿದೆ  ಎಂದು ಚಿಂತಿಸಿ ಯುವಕರಲ್ಲಿ ಜಾಗೃತಿಮೂಡಿಸಬೇಕಿದೆ ಎಂದು ವಿಷಾದ ವ್ಯಕ್ತಪಡಿಸಿದರು.
 ವಿದ್ಯವಚಿತ ಹೆಣುಮಕ್ಕಳು ಕೂಡ ವಯಸ್ಸಾದ ತಮ್ಮ ಅತ್ತೆ ಮಾವಂದಿರ ಬಳಿ ತಮ್ಮ ಮಕ್ಕಳನ್ನು ಸೇರಲು ಬಿಡುವುದಿಲ್ಲ, ಕಾರಣ ಅವರ ಆರೋಗ್ಯದ ಮೇಲಿನ ಪರಿಣಾಮವಾಗಿರುತ್ತದೆ ಆದ್ದರಿಂದ ವೃದ್ಧಾಪ್ಯದಲ್ಲಿ ಅವರ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಅತಿ ಅವಶ್ಯ, ಅಲ್ಲದೇ ಮಕ್ಕಳು ತಾತ ಅಜ್ಜಿಯರೊಂದಿಗೆ  ಬೆರೆತರೆ ಮೊಮ್ಮಕ್ಕಳಿಗೆ ಪ್ರೀತಿಯಿಂದ  ಒಳ್ಳೆಯ ಸಂಸ್ಕøತಿ ಕಲಿಸುತ್ತಾರೆ, ಒಳ್ಳೆತನವನ್ನು ಹೇಳಿಕೊಡುತ್ತಾರೆ ಆದ್ದರಿಂದ ಹಿರಿಯರಿಗೆ ಪೂರಕ ಬೆಂಬಲ ಸ್ರಚಿಸುವುದು ಅಗತ್ಯ ಎಂದರಲ್ಲದೇ, ಆರೋಗ್ಯವಚಿತ ಸಮಾಜ ಪ್ರತೀ ಮನೆಯಲ್ಲೂ ಬರಬೇಕು, ಒಂಟಿತನವನ್ನು ಮೀರಿ ಜೀವನ ನಡೆಸುವುದನ್ನು ಬೆಳೆಸಿಕೊಳ್ಳಬೇಕು, 55 ಆದತಕ್ಷಣ ನನಗೆ ವಯಸ್ಸಾಯಿತು ಎಂದು ಭಾವಿಸಬಾರದು, ಆರೋಗ್ಯದಕಡೆ ಗಮನಹರಿಸಬೇಕು, ಅದಕ್ಕಾಗಿ ಇಂಥಹ ಕಾರ್ಯಗಾರಗಳು ಆಗಾಗ ನಡೆಯುತ್ತಿರಬೇಕು ಸಲಹೆ ನೀಡಿದರು.
 ಕಾರ್ಯಕ್ರಮದಲ್ಲಿ  ಗ್ಲೋಬಲ್ ಆಸ್ಪತ್ರೆಯ ವೃದ್ಧರೋಗ ತಜ್ಞ ಹಾಗೂ ಚಿಕಿತ್ಸಕ ಡಾ. ಮಹೇಶ್ ಹೇಮಾದ್ರಿ, ಬ್ರಹ್ಮಕುಮಾರಿ ವಿವಿಯ ಮುಖ್ಯಸ್ಥೆ ರಾಜಯೋಗಿನಿ ಬಿ.ಕೆ. ಲಕ್ಷೀಜಿ, ಕಾರ್ಯದರ್ಶಿ ರಂಗನಾಥ್ ಉಪಸ್ಥಿತರಿದ್ದರು.

Sunday, 26 April 2015

ಸಾಮಾಜಿಕ ಮತ್ತುಶೈಕ್ಷಣಿಕ ಸಮೀಕ್ಷೆ: ಸಮಾಜ ಕಲ್ಯಾಣ ಇಲಾಖೆ ಸಚಿವರಿಂದ ಪರಿಶೀಲನೆ
ಮಂಡ್ಯ.ಏ.26.ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಅಲೆಮಾರಿ ಜನಾಂಗದವರನ್ನು ನಿರ್ಲಕ್ಷ ವಹಿಸಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಚಿವ ಎಚ್.ಆಂಜನೇಯ ಅವರು ಶ್ರೀರಂಗಪಟ್ಟಣ ತಾಲೂಕಿನ ಗಾಮನಹಳ್ಳಿಯಲ್ಲಿ ಅಲೆಮಾರಿ ಜನರನ್ನು ಭೇಟಿ ಮಾಡಿ ಮಾಹಿತಿ ಪಡೆದರು.

  ಗಣತಿದಾರರು ಬಂದು ಮಾಹಿತಿ ಪಡೆದರು ಎಂದು ಅಲೆಮಾರಿಗಳು ಸಚಿವರಿಗೆ ತಿಳಿಸಿದರು. ಬಳಿಕ ಗಣತಿದಾರರಿಗೆ ಸೂಚನೆ ನೀಡಿದ ಸಚಿವರು, ಅಲೆಮಾರಿಗಳು ಯಾವ ಜಾತಿಗೆ ಸೇರಿದವರು ಎಂಬುದನ್ನು ನಿಖರ ಮಾಹಿತಿ ದಾಖಲು ಮಾಡಬೇಕು ಎಂದರು.

   ಅಲೆಮಾರಿ ಮತ್ತು ಹಕ್ಕಿಪಿಕ್ಕಿ ಜನಾಂಗದವರ ಶೈP್ಷÀಣಿಕ ಮಟ್ಟ, ಕುಡಿವ ನೀರಿನ ಸ್ಥಿತಿ ಬಗ್ಗೆ ಮಾಹಿತಿ ಇರಬೇಕು. ರೈಲ್ವೆ, ಬಸ್ ನಿಲ್ದಾಣ ಹಾಗೂ ರಸ್ತೆ ಬದಿಗಳಲ್ಲಿ ಭಿಕ್ಷೆ ಬೇಡುವವರನ್ನು ಸಮೀಕ್ಷೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು ಎಂದರು.

    . ಗಾಮನಹಳ್ಳಿಯ ಕೆರೆ ದಡದಲ್ಲಿ ವಾಸಿಸುತ್ತಿರುವ ಅಲೆಮಾರಿ ಜನಾಂಗದವರು ಕುಡಿವ ನೀರು ಸೇರಿದಂತೆ ಯಾವೊಂದು ಸೌಲಭ್ಯಗಳಿಲ್ಲದೆ ನೆಲೆಸಿz್ದÁರೆ ಎಂದು ಬೇಸರ ವ್ಯಕ್ತಪಡಿಸಿದ ಅವರು ಗ್ರಾಮದಲ್ಲಿರುವ 10 ಕುಟುಂಬಗಳಿಗೆ ತP್ಷÀಣವೇ ನಿವೇಶನ ಗುರುತಿಸಿ ನಿರ್ಮಿತಿ ಕೇಂದ್ರ ಅಥವಾ ಭೂ ಸೇನಾ ನಿಗಮದ ವತಿಯಿಂದ ಮನೆಗಳನ್ನು ನಿರ್ಮಿಸಿಕೊಡುವಂತೆ ಜಿಲ್ಲಾಕಾರಿಗಳಿಗೆ ಸೂಚಿಸಿದ್ದರು.

 . ಅಲೆಮಾರಿ ಜನಾಂಗದವರಿಗೆ ಮನೆ ನಿರ್ಮಿಸಲು ಹಿಂದುಳಿದ ವರ್ಗಗಳ ಇಲಾಖೆಯಿಂದ ವಿಶೇಷ ಅನುದಾನ ನೀಡಲಾಗುತ್ತಿದೆ. ಸಾಮಾನ್ಯ ಬಡವರಿಗೆ 1.20 ಲಕ್ಷ ರೂ ನೀಡಲಾಗುತ್ತದೆ. ಆದರೆ ಅಲೆಮಾರಿ ಜನಾಂಗದವರಿಗೆ ವಿಶೇಷವಾಗಿ 1.50 ಲಕ್ಷ ರೂ ಅನುದಾನವನ್ನು ನೀಡಲಾಗುವುದು ಎಂದರು.

ಅಲೆಮಾರಿ ಜನಾಂಗದವರು ವ್ಯವಸಾಯ ಮಾಡಲು ಇಚ್ಛಿಸಿದರೆ ಬೇಸಾಯಕ್ಕೆ ಅವಶ್ಯವಿರುವ ಭೂಮಿ ಕೊಡುವಂತೆ, ಅದಕ್ಕೆ ಸೂಕ್ತವಾದ ಭೂಮಿ ಗುರುತಿಸುವ ಕೆಲಸಕ್ಕೆ ಮುಂದಾಗುವಂತೆಯೂ ಸಚಿವ ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಡಾ.ಎಂ.ಎನ್.ಅಜಯ್ ನಾಗಭೂಷಣ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಾಲತಿ, ಜಿಪಂ ಮಾಜಿ ಅಧ್ಯP್ಷÀ ಲಿಂಗಯ್ಯ ಹಾಜರಿದ್ದರು.

Friday, 24 April 2015

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ ಮತ್ತೊಂದು ರಾಷ್ಟ್ರಮಟ್ಟದ ಪ್ರಶಸ್ತಿ ಪ್ರದಾನ

ನವದೆಹಲಿ.24 ಗ್ರಾಮೀಣಾಭಿವೃದ್ಧಿ ಮತ್ತುಪಂಚಾಯತ್ ರಾಜ್ ವ್ಯವಸ್ಥೆಯಲ್ಲಿ  ವಿಶೇಷ ಸಾಧನೆಗೈದ ಕರ್ನಾಟಕ ರಾಜ್ಯದಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಗೆ     ರಾಷ್ಟ್ರ ಮಟ್ಟದ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು
ನವದೆಹಲಿಯ ವಿಜ್ಞಾನ ಭವನದಲ್ಲಿಂದು ನಡೆದ ಪಂಚಾಯತ್ ದಿನಾಚಣೆಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಂದ ಗ್ರಾಮೀಣಾಭಿವೃದ್ಧಿ ಹಾಗು ಪಂಚಾಯತ್ ರಾಜ್ ಇಲಾಖೆಯ ಸಚಿವರಾದ ಶ್ರೀಹೆಚ್ಕೆ.ಪಾಟೀಲ್  ಅವರು ಪ್ರಶಸ್ತಿಯನ್ನು  ಸ್ವೀಕರಿಸಿದ ನಂತರಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.  ಕರ್ನಾಟಕ ರಾಜ್ಯದ ಗ್ರಾಮೀಣಾಭಿವೃದ್ಧಿಮತ್ತು  ಪಂಚಾಯತ್ ರಾಜ್ ಇಲಾಖೆಯು ಹಣಕಾಸು ನಿರ್ವಹಣೆ ವಿಭಾಗದಲ್ಲಿ ಪ್ರಥಮ ಸ್ಥಾನ,   ಪಾಲಿಸಿ ಡೆವಲೂಷನ್ ಸೂಚ್ಯಾಂಕ ವಿಭಾಗದಲ್ಲಿ   2 ನೇಸ್ಥಾನವನ್ನು ಪಡೆದಿದೆ.  ಎಲ್ಲಾ ಕ್ಷೇತ್ರಗಳ ಸರಾಸರಿ ವಿಭಾಗದಲ್ಲಿ  3 ನೇ ಸ್ಥಾನಪಡೆದಿದೆ.  ವಿಕೇಂದ್ರಿಕಣದ ಮೂಲಕ  ಯೋಜನೆಗಳ ಅನುಷ್ಠಾನ ವಿಭಾಗದಲ್ಲಿ 2ನೇ ಸ್ಥಾನ ಪಡೆದಿದೆ.  ಕೇರಳ ರಾಜ್ಯವು ಪ್ರಥಮ ಸ್ಥಾನದಲ್ಲಿದೆಪ್ರಧಾನ ಮಂತ್ರಿಗಳು ರಾಜ್ಯದ ಸಾಧನೆಗೆ  ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.  ಎಲ್ಲಾ ಪಂಚಾಯತ್ ಸಂಸ್ಥೆಗಳು ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಹಿನ್ನೆಲೆಯಲ್ಲಿ ಪ್ರಶಸ್ತಿಯುಸಂದಿದೆ.  ಎಲ್ಲಾ ಪಂಚಾಯತ್ ಸಂಸ್ಥೆಗಳ ಅಧ್ಯಕ್ಷರುಪದಾಧಿಕಾರಿಗಳನ್ನು ಅಭಿನಂದಿಸಿದರು
ರಾಜ್ಯದ ಆರ್ಡಿಪಿಆರ್ ಇಲಾಖೆಯು ಅತ್ಯುತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದು,ಕುಡಿಯುವ ನೀರುನೈರ್ಮಲ್ಯರಸ್ತೆ ನಿರ್ಮಾಣ ,  ರುದ್ರಭೂಮಿ ನಿರ್ಮಾಣರೈತರ ಕಣ ನಿರ್ಮಾಣ ಸೇರಿದಂತೆ ಅನೇಕ ಯೋಜನೆಗಳನ್ನು ಯಶಸ್ವಿಯಾಗಿಅನುಷ್ಠಾನಗೊಳಿಸುತ್ತಿದೆವೈಯಕ್ತಿಕ  ಹಾಗು ಸಮುದಾಯದ ವಿಭಾಗದಡಿಯೋಜನೆಗಳನ್ನು ಸಮರ್ಪಕವಾಗಿ  ಅನುಷ್ಠಾನಗೊಳಿಸುತ್ತಿದೆಸಾಕ್ಷರತಾ ಪ್ರಮಾಣಹೆಚ್ಚಾಗಿರುವ    ಕೇರಳ ರಾಜ್ಯದೊಂದಿಗೆ ಆರೋಗ್ಯಕರ ಹಾಗು ಸ್ಪರ್ಧಾತ್ಮಕವಾಗಿಕಾರ್ಯನಿರ್ವಹಿಸಲಾಗುತ್ತದೆಜಿಲ್ಲಾ ಪಂಚಾಯತ್ , ತಾಲೂಕ ಪಂಚಾಯತ್ ,ಗ್ರಾಮ ಪಂಚಾಯತ್ ವಿಭಾಗದಲ್ಲೂ  ಅತ್ಯುತ್ತಮ ಪ್ರಶಸ್ತಿಯನ್ನು ಪಡೆದಿದೆ.ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ.ಲೋಪದೋಷಗಳನ್ನು ಸರಿಪಡಿಸಿ ಯಾವುದೇ ದುರುಪಯೋಗವಾಗದಂತೆಕ್ರಮಕೈಗೊಳ್ಳಲಾಗುತ್ತಿದೆ ಎಂದು ಅವರು ತಿಳಿಸಿದರು.   

Thursday, 23 April 2015

ಅಗತ್ಯ ಸರಕುಗಳ   ವ್ಯವಸ್ಥಿತ ವಿತರಣೆಗೆ  ಸಂಸದ ಶ್ರೀ ಚಂದ್ರಪ್ಪ  ಒತ್ತಾಯ

ನವದೆಹಲಿ. ಏ. 23.
ಅಗತ್ಯ ಸರಕುಗಳನ್ನು  ವ್ಯವಸ್ಥಿತವಾಗಿ  ವಿತರಣೆಯಾಗಬೇಕು.   ಯಾವುದೇ ಕಪ್ಪು ಮಾರುಕಟ್ಟೆಯಲ್ಲಿ  ಮಾರಾಟವಾಗದಂತೆ ಕೇಂದ್ರ ಸರ್ಕಾರವು  ಕ್ರಮಕೈಗೊಳ್ಳಬೇಕು ಎಂದು ಸಂಸದ ಶ್ರೀ ಬಿ.ಎಂ. ಚಂದ್ರಪ್ಪ ಒತ್ತಾಯಿಸಿದ್ದಾರೆ.
ಅಗತ್ಯ ಸರಕುಗಳ ಸೇವೆಯು ಅತ್ಯಗತ್ಯವಾಗಿದ್ದು,  ಸುರಕ್ಷಿತವಾಗಿ ಸಂಗ್ರಹಿಸಬೇಕು. ಅಕ್ರಮವಾಗಿ ಸಂಗ್ರಹಿಸಿ, ಕಾಳಸಂತೆಯಲ್ಲಿ ಮಾರಾಟವಾಗದಂತೆ ಕ್ರಮಕೈಗೊಳ್ಳಬೇಕು. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು.  ಪದೇ ಪದೇ ದಾಳಿ ನಡೆಸಿ ವ್ಯವಸ್ಥಿತವಾಗಿ ಮಾರಾಟ  ಮಾಡಲು ಕ್ರಮಕೈಗೊಳ್ಳಬೇಕು.ಕೇಂದ್ರ ಸರ್ಕಾರವು ಕೈಗೊಂಡ ಕ್ರಮದ ಬಗ್ಗೆ ವಿವರ ನೀಡುವಂತೆ  ಚುಕ್ಕೆ ಗುರುತಿನ ಪ್ರಶ್ನೆಯಲ್ಲಿ ಒತ್ತಾಯಿಸಿದ್ದಾರೆ.
ಅಗತ್ಯ ಸರಕು ಕಾಯ್ದೆ 1955 , ಪಿಬಿಎಂಎಂಎಸ್‍ಇಸಿ ( ಪ್ರಿವೆನ್‍ಷನ್ ಆಫ್ ಬ್ಲಾಕ್ ಮಾರ್ಕೆಟಿಂಗ್ ಅಂಡ ಮೇಟೆನೆಸ್ ಆಫ್ ಸಪ್ಲೇಸ್ ಆಫ್ ಎಸೆನ್ಸಿಯಲ್ ಕಮಾಡಿಟಿಸ್ ಆಕ್ಟ್ 1980 ಅನ್ನು ಅನುಷ್ಠಾನಗೊಳಿಸಲಾಗುತ್ತಿದೆ.  ಅಗತ್ಯ ಸರಕುಗಳ ಅಕ್ರಮ ಸಂಗ್ರಹಣೆ, ಕಪ್ಪು ಮಾರುಕಟ್ಟೆಯಲ್ಲಿ ಮಾರಾಟ, ಕೃತಕ ಕೊರತೆಯನ್ನು ನಿರ್ಮೂಲನೆ ಮಾಡಲು ಕ್ರಮಕೈಗೊಳ್ಳಲಾಗುತ್ತಿದೆ.   ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಗಳಿಗೆ  ಅಧಿಕಾರವನ್ನು ವಿಕೇಂದ್ರಿಕರಿಸಲಾಗಿದೆ ಎಂದು ಕೇಂದ್ರ ಆಹಾರ  ನಾಗರಿಕ ಸರಬರಾಜು ಹಾಗು ಗ್ರಾಹಕರ ವ್ಯಾಜ್ಯಗಳ ಪರಿಹಾರ  ಸಚಿವಾಲಯವು ಉತ್ತರಿಸಿದೆ.
ರಾಷ್ಟ್ರದಲ್ಲಿ 2014 ನೇ ಸಾಲಿನಲ್ಲಿ 131384 ದಾಳಿಗಳನ್ನು ನಡೆಸಲಾಗಿದ್ದು, 11978 ಮಂದಿಯನ್ನು ದಸ್ತುಗಿರಿ ಮಾಡಲಾಗಿದೆ. 3175 ಕಾನೂನು ಕ್ರಮ ಜರುಗಿಸಲಾಗಿದೆ. ಅಪರಾಧ ಸಾಭೀತಾದ ಹಿನ್ನೆಲೆಯಲ್ಲಿ  2074  ಮಂದಿಯನ್ನು ಶಿಕ್ಷೆಗೆ   ಒಪಡಿಸಲಾಗಿದೆ ಎಂದು ಅವರು  ಸಚಿವಾಲಯವು ಉತ್ತರಿಸಿದೆ.

ಶಾಸಕ ಎಂ.ಕೆ.ಸೋಮಶೇಖರ್ ಸಭೆ.

 ಏ.೨೩. ಕೃಷಣರಾಜ ವಿಧಾನಸಭಾ ಕ್ಷೇತ್ರದ ಶಾಸಕರಾದ                ಶ್ರೀ ಎಂ.ಕೆ. ಸೋಮಶೇಖರ್‍ರವರ ಅಧ್ಯಕ್ಷತೆಯಲ್ಲಿ ಏ 24ರಂದು ಬೆಳಿಗ್ಗೆ 11:30 ಗಂಟೆಗೆ ಮೈಸೂರು ಮಹಾನಗರ ಪಾಲಿಕೆಯ ಹಳೆ ಕೌನ್ಸಿಲ್ ಸಭಾಂಗಣದಲ್ಲಿ ಕೃಷ್ಣರಾಜ ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ನೀರಿನ ಸಮಸ್ಯೆಯ ಬಗ್ಗೆ ಸಭೆ ಕರೆಯಲಾಗಿದೆ. ಈ ಸಭೆಯಲ್ಲಿ ಪೂಜ್ಯ ಮಹಾಪೌರರು, ಉಪಮೇಯರ್, ಆಯುಕ್ತರು, ಕೆ.ಆರ್. ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಎಲ್ಲಾ ನಗರ ಪಾಲಿಕೆ ಸದಸ್ಯರು, ಜೆಸ್ಕೋ ಅಧಿಕಾರಿಗಳು, ಚೆಸ್ಕಾಂ ಅಧಿಕಾರಿಗಳು ಹಾಗೂ ವಾಣಿವಿಲಾಸ ಅಧಿಕಾರಿಗಳು ಭಾಗವಹಿಸಲಿದ್ದಾರೆ.
      

Tuesday, 21 April 2015

       

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಗೆ ಶ್ರೀ ಗುರು ಬಸವೇಶ್ವರರ ಭಾವಚಿತ್ರ ಸಲ್ಲಿಕೆ
ನವದೆಹಲಿ. ಏ.21. ಮಹಾ ಮಾನವತಾವಾದಿ  ಶ್ರೀ   ಬಸವೇಶ್ವರ ಅವರ  ಜಯಂತಿ ಅಂಗವಾಗಿ   ಬಸವೇಶ್ವರರ ಭಾವಚಿತ್ರವನ್ನು ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಸಂಸತ್ ಕಚೇರಿಯಲ್ಲಿಂದು  ಕರ್ನಾಟಕ ರಾಜ್ಯದ  ಕೇಂದ್ರ ಸಚಿವರ ನೇತೃತ್ವದ  ಸಂಸದರ ನಿಯೋಗವು  ಸಲ್ಲಿಸಿತು.  
ಸಂಸತ್ ಆವರಣದಲ್ಲಿರುವ ಶ್ರೀ ಬಸವೇಶ್ವರ ಪ್ರತಿಮೆಗೆ ಕೇಂದ್ರ ರಸಾಯನ ಮತ್ತು ರಸಗೊಬ್ಬರ ಸಚಿವರಾದ ಶ್ರೀ ಅನಂತ ಕುಮಾರ್, ಕಾನೂನು ಸಚಿವರಾದ ಶ್ರೀ ಸದಾನಂದಗೌಡ, ಮಧ್ಯಮ ಕೈಗಾರಿಗೆ ಸಚಿವರಾದ ಶ್ರೀ ಜಿ.ಎಂ. ಸಿದ್ದೇಶ್ವರ ಅವರು ಮಾಲಾರ್ಪಣೆ ಸಲ್ಲಿಸಿ ಗೌರವ ಸಲ್ಲಿಸಿದರು.
ನಿಯೋಗದಲ್ಲಿ ಸಂಸದರಾದ ಶ್ರೀ  ಪ್ರಹಲ್ಲಾದ ಜೋಶಿ, ಶ್ರೀ  ಬಿ.ಎಸ್. ಯಡಿಯೂರಪ್ಪ, ಕು. ಶೋಭಾ ಕರಂದ್ಲಾಜೆ, ಶ್ರೀ ಪ್ರತಾಪ್‍ಸಿಂಹ, ಶ್ರೀ  ಪಿ.ಸಿ. ಗದ್ದಿಗೌಡರ್, ಶ್ರೀ  ಕಟಿಲು ನಳಿನ ಕುಮಾರ್, ಶ್ರೀ  ಶಿವಕುಮಾರ್  ಉದಾಸಿ,ಶ್ರೀ  ಕರಡಿಸಂಗಣ್ಣ, ಶ್ರೀ ಪಿ.ಸಿ. ಮೋಹನ್, ಶ್ರೀ ಸುರೇಶ್ ಅಂಗಡಿ ಮತ್ತಿತರರು ಭಾಗವಹಿಸಿದ್ದರು.

 ನೂತನ ನಿರ್ದೇಶಕರಾಗಿ ಡಾ. ಎಮ್ .ಎಸ್ ಶ್ಯಾಮಸುಂದರ್
ಬೆಂಗಳೂರು, ಏಪ್ರಿಲ್ 21, 2015  
ರಾಷ್ಟ್ರೀಯ ಮಾನ್ಯತೆ ಮತ್ತು ಪ್ರಮಾಣೀಕರಣ ಸಂಸ್ಥೆ (ನ್ಯಾಕ್) ಸಲಹೆಗಾರರಾಗಿರುವ ಡಾ. ಎಮ್ .ಎಸ್ ಶ್ಯಾಮಸುಂದರ್  ಸಂಸ್ಥೆಯ ನೂತನ ನಿರ್ದೇಶಕರಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ. ಪ್ರೋ. ಎ. ಎನ್ ರೈ ಅವರಿಂದ ಅಧಿಕಾರ ಸ್ವೀಕರಿಸಿದ ಡಾ. ಎಮ್ .ಎಸ್ ಶ್ಯಾಮಸುಂದರ್ ನ್ಯಾಕ್‍ನ ಹಿರಿಯ ಸಲಹೆಗಾರರಾಗಿದ್ದು, ಎರಡು ದಶಕಗಳ ಕಾಲ ಸಂಸ್ಥೆಗಾಗಿ ಸೇವೆ ಸಲ್ಲಿಸಿದ್ದಾರೆ.  ಈ ಮೊದಲು ಡಾ. ಎಮ್ .ಎಸ್ ಶ್ಯಾಮಸುಂದರ್ ಅವರು ನ್ಯಾಕ್‍ನ ಕಾರ್ಯಕಾರಿಣಿ ಸಮಿತಿ, ಸಾಮಾನ್ಯ ಮಂಡಳಿ ಮತ್ತು ಹಣಕಾಸು ಸಮಿತಿಗಳಲ್ಲೂ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಸಂಸ್ಥೆಗೆ ಖಾಯಂ ನಿರ್ದೇಶಕರ ನೇಮಕಾತಿ ನಡೆಯುವವರೆಗೆ ಡಾ. ಶ್ಯಾಮಸುಂದರ್ ನಿರ್ದೇಶಕರಾಗಿ ಮುಂದುವರೆಯಲಿದ್ದಾರೆ.



-- 

Monday, 20 April 2015


ವಿಜಯನಗರ ಪೊಲೀಸರಿಂದ ವೇಶ್ಯಾವಾಟಿಕೆ ಹಾಗೂ ಜೂಜುಕೊರರ ಬಂದಿಸಿ ಹೊರಕ್ಕೆ ತೆಗೆದುಕೊಂಡಿವುದಾಗಿ ಪೋಲೀಸ್ ಆಯುಕ್ತರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

ವೇಶ್ಯಾವಾಟಿಕೆ
       ದಿನಾಂಕ: 19-04-2015 ರಂದು ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್ ರವರಿಗೆ ಬಾತ್ಮಿದಾರರಿಂದ ವಿಜಯನಗರ 4ನೇ ಹಂತ 2ನೇ ಪೇಸ್, ಮರಿಮಲ್ಲಪ್ಪ ಕಾಂಪೌಂಡ್ ಹತ್ತಿರದ ಮನೆಯೊಂದರಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಬಗ್ಗೆ ಖಚಿತ ಮಾಹಿತಿ ಬಂದ ಮೇರೆಗೆ ಪೊಲೀಸ್ ಇನ್ಸ್‍ಪೆಕ್ಟರ್ ಸಿಬ್ಬಂದಿಗಳೊಂದಿಗೆ ಸದರಿ ಮನೆಯ ಮೇಲೆ ದಾಳಿ ಮಾಡಿ ವೇಶ್ಯಾವಾಟಿಕೆ ನಡೆಸುತ್ತಿದ್ದ ನಂದನಿ ಕೋಂ ದೇವರಾಜು, 26 ವರ್ಷ, ನಂ.7850, ಮರಿಮಲ್ಲಪ್ಪ ಕಾಂಪೌಂಡ್ ಹತ್ತಿರ, ವಿಜಯನಗರ 4ನೇ ಹಂತ, 2ನೇ ಪೇಸ್, ಮೈಸೂರು  ಮತ್ತು ಗ್ರಾಹಕ ಮಹೇಶ್ ಕುಮಾರ @ ಮಹೇಶ ಬಿನ್ ಲೇ.ತಮ್ಮಣ್ಣ, 29 ವರ್ಷ, ಲೋಕನಾಯಕನಗರ, ಮೈಸೂರು. ರವರನ್ನು ವಶಕ್ಕೆ ಪಡೆದು ವೇಶ್ಯಾವಾಟಿಕೆಯಲ್ಲಿ ದೂಡಿದ್ದ ಒಂದು ಹುಡುಗಿಯನ್ನು ರಕ್ಷಣೆ ಮಾಡಿ ಆರೋಪಿತೆ ನಂದನಿಯಿಂದ 2400/- ರೂ ಹಣವನ್ನು ವಶಪಡಿಸಿಕೊಂಡಿರುತ್ತದೆ.
          ವಿಚಾರಣೆ ಕಾಲದಲ್ಲಿ ನಂದಿನಿ ಪ್ರತಿಷ್ಟಿತ ಬಡಾವಣೆಗಳಲ್ಲಿ ಮನೆಯನ್ನು ಬಾಡಿಗೆ ಪಡೆದು ಅಮಾಯಕ ಹುಡುಗಿಯರನ್ನು ಈ ರೀತಿ ವೇಶ್ಯಾವಾಟಿಕೆಗೆ ಬಳಸಿ ಹಣ ಸಂಪಾದನೆ ಮಾಡುತ್ತಿದ್ದಾಗಿ ತಿಳಿಸಿರುತ್ತಾಳೆ.    
2) ಜೂಜಾಟ                                    
       ದಿನಾಂಕ: 19-04-2015 ರಂದು ಹೂಟಗಳ್ಳಿ, ಎಸ್.ಆರ್.ಎಸ್. ಕಾಲೋನಿ, ಕೆ.ಇ.ಬಿ. ಆವರಣದಲ್ಲಿ ದಾಳಿ ಮಾಡಿ ಅಂದರ್‍ಬಾಹರ್ ಜೂಜಾಟ ಆಡುತ್ತಿದ್ದ
1)   ಬೈರಪ್ಪ ಬಿನ್  , 33 ವರ್ಷ, ಕೂಲಿ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ, ಮೈಸೂರು.
2)  ಬಸವರಾಜು, 38 ವರ್ಷ, ಕೂಲಿ ಕೆಲಸ, ಶಾನಭೋಗನಹಳ್ಳಿ ಪೋಸ್ಟ್, ಹುಣಸೂರು ತಾಲ್ಲೂಕು,
3)  ಮಂಜುನಾಥ  27 ವರ್ಷ, ಪೈಂಟ್ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ, ಮೈಸೂರು.
4)  ಕುಮಾರ್ ಬಿ 34 ವರ್ಷ, ವೆಲ್ಡಿಂಗ್ ಕೆಲಸ, ಎಸ್,ಆರ್.ಎಸ್ ಕಾಲೋನಿ, ಹೂಟಗಳ್ಳಿ,
ಎಂಬುವವರನ್ನು ವಶಕ್ಕೆ ಪಡೆದು ಜೂಜಾಟದ ಪಣಕ್ಕೆ ಇಟ್ಟಿದ್ದ ರೂ 1110-00 ರೂ ನಗದು ವಶಪಡಿಸಿಕೊಳ್ಳಲಾಗಿದೆ. ಪ್ರ್ರಕರಣ ದಾಖಲಿಸಲಾಗಿದೆ.

        ಈ ಪತ್ತೆ ಕಾರ್ಯವನ್ನು ಮೈಸೂರು ನಗರ ನರಸಿಂಹರಾಜ ವಿಭಾಗದ ಎಸಿಪಿ ಶ್ರೀ ಉಮೇಶ್ ಜಿ. ಸೇಠ್, ರವರ ಮಾರ್ಗದರ್ಶನದಲಿ,್ಲ ವಿಜಯನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‍ಪೆಕ್ಟರ್, ಸಿ.ವಿ ರವಿ,  ಹಾಗೂ ಸಿಬ್ಬಂದಿಗಳು  ಈ ಕೇಸಿನ ಪತ್ತೆ ಕಾರ್ಯದಲ್ಲಿ ಶ್ರಮಿಸಿರುತ್ತಾರೆ.

Sunday, 19 April 2015

ವಿಶ್ವಮಾನವರನ್ನು ಜಾತಿಯಿಂದ ಅಳೆಯದಿರಿ: ಶಾಸಕ ಕೆ.ಎಸ್.ಪುಟ್ಟಣ್ಣಯ್ಯ
ಮಂಡ್ಯ: ವಿಶ್ವ ಮಾನವರಾಗಿ ಗುರುತಿಸಿಕೊಂಡಿರುವ ಮಹಾನ್ ಮಾನವತಾವಾದಿಗಳನ್ನು ಜಾತಿಯ ಸಂಕೋಲೆಯಿಂದ ಅಳೆಯದಿರಿ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಕರೆ ನೀಡಿದರು.
ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನ ಪತ್ರಿಕೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪು-ನಿತ್ಯ ಸಚಿವ ಕೆ.ವಿ. ಶಂಕರಗೌಡ ಸ್ಮರಣಾರ್ಥ 17ನೇ ರಾಜ್ಯ ಮಟ್ಟದ ಕವಿಕಾವ್ಯ ಸಮ್ಮೆಳನÀ, ಕನ್ನಂಬಾಡಿ ಪತ್ರಿಕೆ ವಾರ್ಷಿಕೊತ್ಸವ ಹಾಗೂ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಾನ್ ಚೇತನಗಳಾದ ಡಾ.ಬಿ.ಆರ್.ಅಂಬೇಡ್ಕರ್, ಕುವೆಂಪು, ಬಸವಣ್ಣರನ್ನು ಜಾತಿಯ ಸಂಕೋಲೆಯಿಂದ ನೋಡುವದನ್ನು ಬಡಬೇಕು. ಅಂಬೇಡ್ಕರ್ ಎಂದರೆ ದಲಿತರಿಗೆ ಮೀಸಲಾದ ನಾಯಕ, ಕುವೆಂಪು ಎಂದರೆ ಒಕ್ಕಲಿಗರಿಗೆ ಮೀಸಲಾದ ನಾಯಕ ಹಾಗೆಯೇ ಬಸವಣ್ಣನೆಂದರೆ ವೀರಶೈವರಿಗೆ ಮೀಸಲಾಗಿರುವ ನಾಯಕನೆಂದು ಬಿಂಬಿಸಲಾಗಿದೆ. ಇದರಿಂದಲೇ ಸಮಾಜದ ಸ್ವಾಸ್ತ್ಯ ಹಾಳಾಗುತ್ತಿದೆ ಎಂದು ವಿಷಾದಿಸಿದರು.
ಸಾಹಿತ್ಯ ಲೋಕಕ್ಕೆ ಕುವೆಂಪು ವಿಚಾರಧಾರೆಗಳು ಅನನ್ಯವಾಗಿವೆ. ಅಂತಹ ಮಹಾನ್ ನಾಯಕನನ್ನು ಜಾತಿಯಿಂದ ಗುರುತಿಸಲಾಗುತ್ತಿದೆ. ಇದು ಆರೋಗ್ಯಕರ ಬೆಳವಣಿಗೆಯಲ್ಲ. ಜಾತಿಯತೆ ಹೆಚ್ಚಾಗುವುದರಿಂದಲೇ ಸಮಾಜಕ್ಕೆ ತೊಡಕಾಗಲಿದೆ ಎಂದರು.
ಇಂದು ಮಠಗಳು ಒಂದೊಂದು ಜಾತಿಯಿಂದ ಗುರುತಿಸಿಕೊಳ್ಳುತ್ತಿದೆ. ಯಾವುದಾದರೂ ಒಂದು ಪ್ರತಿಷ್ಟಿತ ಮಠ ವಿಶ್ವ ಮಾನವ ಮಠ ಎಂದು ನಾಮಫಲಕವಾಕಿದರೆ ಆ ಮಠವು ಕೇವಲ ಒಂದು ವರ್ಷದಲ್ಲಿ ಮುಚ್ಚಬೇಕಾಗುವ ಪರಿಸ್ಥಿತಿ ಒದಗಿ ಬಂದಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷ ಹಾಗೂ ಶಾಸಕ ಡಿ.ಎಸ್.ವೀರಯ್ಯ, ವಿಧಾನ ಪರಿಷತ್ ಸದಸ್ಯ ಬಿ.ರಾಮಕೃಷ್ಣ, ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯಾನಂದ, ಕನ್ನಡ ಸೇನೆ ಜಿಲ್ಲಾಧ್ಯಕ್ಷ ಮಂಜುನಾಥ್, ಡಾ.ಜೀ.ಶಂಪ. ಸಾಹಿತ್ಯ ವೇದಿಕೆ ಅಧ್ಯಕ್ಷ ಎಸ್.ಕೃಷ್ಣ ಸ್ವರ್ಣಸಂದ್ರ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಕರಾವಳಿ ಒಕ್ಕೂಟದ ಅಧ್ಯಕ್ಷ ಜಗನ್ನಾಥಶೆಟ್ಟಿ, ಕುಶಾಲನಗರ ಪುರಸಭಾಧಿಕಾರಿ ರಮೇಶ್, ಚೆಸ್ಕಾಂ ಎಸ್ಪಿ ಪ್ರಕಾಶ್ ಗೌಡ ಅವರಿಗೆ ನಾಗರೀಕ ಅಭಿನಂದನೆ, ಎಂ.ರಾಮೇಗೌಡ, ಭೀಮಾಶಂಕರ್ ಪಾಟೀಲ್, ಗುರುಮೂರ್ತಿ, ಬನ್ನಂಗಾಡಿ ಸಿದ್ದಲಿಂಗಯ್ಯ, ಹನುಮಂತು, ಯಮದೂರು ಸಿದ್ದರಾಜು, ಮತ್ತೀಕೆರೆ ಜಯರಾಂ, ಟಿ.ಕೃಷ್ಣಪ್ಪ, ಅಪ್ಪಾಜಪ್ಪ, ಗೋಪಾಲನ್, ಯಶೋಧಾ ನಾರಾಯಣ್ ಅವರಿಗೆ ಕುವೆಂಪು ವಿಶ್ವಮಾನವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಡಿ.ಎ.ಕರೆ ಪ್ರಕಾಶ್, ಕೋಣಸಾಲೆ ನರಸರಾಜು, ಬೀಟ್ರೋ, ಶ್ರೀನಿವಾಸಶೆಟ್ಟಿ, ನೀಲಕಂಠ, ಶಂಭುನಹಳ್ಳಿ ಸುರೇಶ್, ಶಿವನಂಜಯ್ಯ, ಶಂಕರ್, ವಿಜಯ್ ಕುಮಾರ್, ನೂರ್ ಸಮ್ಮದ್, ಬಾಲಕೃಷ್ಣ, ನಾಗೇಶ್ ಅವರಿಗೆ ಕನ್ನಂಬಾಡಿ ಪ್ರಶಸ್ತಿ, ಕಾಳೇನಹಳ್ಳಿ ಕೆಂಚೇಗೌಡ, ಲಲಿತಾ ಶರ್ಮಾ, ಸುದರ್ಶನಗೌಡ, ಮರಿಯಯ್ಯ, ನೆಲಮಾಕನಹಳ್ಳಿ ಬಸಪ್ಪ, ಪಂಚಲಿಂಗೇಗೌಡ, ಕೃಷ್ಣೇಗೌಡ, ನಾರಾಯಣ್, ಗಿರೀಶ್, ಮಹೇಂದ್ರ ಸಿಂಗ್ ಕಾಳಪ್ಪ, ನಿವೇದಿತಾ, ಎಸ್.ಕೆ.ಶಿವಪ್ರಕಾಶ್ ಬಾಬು ಅವರಿಗೆ ಕೆವಿಎಸ್ ಪ್ರಶbಸ್ತಿ ನೀಡಿ ಗೌರವಿಸಲಾಯಿತು.


ಪ್ರೀತಿ-ವಿಶ್ವಾಸ, ಕರುಣೆ, ತ್ಯಾಗ, ಸಾಮರಸ್ಯಕ್ಕೆ ಮತ್ತೊಂದು ಹೆಸರೇ ಕರುನಾಡು
ಸಮ್ಮೇಳನಾಧ್ಯಕ್ಷ ಡಿ.ಎಸ್.ವೀರಯ್ಯ ಅಭಿಮತ
ಮಂಡ್ಯ: ಪ್ರೀತಿ-ವಿಶ್ವಾಸ, ಕರುಣೆ, ತ್ಯಾಗ, ಸಾಮರಸ್ಯ,  ಸ್ತ್ರೀ ಗೌರವ, ಸಾಹಿತ್ಯ, ಸಂಸ್ಕಾರ  ಮತ್ತು ಸೌಹಾರ್ದತೆಗೆ  ಮತ್ತೊಂದು ಹೆಸರೇ ಕನ್ನಡ ನಾಡು ಎಂದು ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆಯ 17ನೇ ರಾಜ್ಯ ಮಟ್ಟದ ಕವಿಕಾವ್ಯ ಮೇಳದ ಸಮ್ಮೇಳನಾಧ್ಯಕ್ಷ ಹಾಗೂ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಬಣ್ಣಿಸಿದರು.
ಡಾ.ಜೀ.ಶಂ.ಪ ಸಾಹಿತ್ಯ ವೇದಿಕೆ, ಕನ್ನಂಬಾಡಿ ದಿನ ಪತ್ರಿಕೆ ಇವರ ವತಿಯಿಂದ ರಾಷ್ಟ್ರಕವಿ ಕುವೆಂಪು-ನಿತ್ಯ ಸಚಿವ ಕೆ.ವಿ. ಶಂಕರಗೌಡ ಸ್ಮರಣಾರ್ಥ 17ನೇ ರಾಜ್ಯ ಮಟ್ಟದ ಕವಿಕಾವ್ಯ ಸಮ್ಮೆಳನÀ, ಕನ್ನಂಬಾಡಿ ಪತ್ರಿಕೆ ವಾರ್ಷಿಕೊತ್ಸವ ಹಾಗೂ ಅಭಿನಂದನಾ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕವಿಕಾವ್ಯ ಸಮ್ಮೇಳನಾಧ್ಯಕ್ಷರ ಭಾಷಣ ಮಾಡಿದರು.
  ನಮ್ಮ ದೇಶದ ಜಾನಪದ ಸಂಸ್ಕøತಿ, ಸಂಸ್ಕಾರ, ಆಚಾರ-ವಿಚಾರ ಸಿಂಧು ಬಯಲಿನ ಆರಂಭವಾದ ನಾಗರೀಕತೆ ಜನನಿ- ಜನ್ಮಭೂಮಿ ಎಂದು ಕರೆಯಲಾದನಮ್ಮ ಜೀವನದ ಬೆನ್ನೆಲುಬು. ಬುದ್ಧ, ಬಸವ, ಅಂಬೇಡ್ಕರ್ ಹುಟ್ಟಿದ ನಾಡು ನಮ್ಮದು. ಅನೇಕ ಸುಧಾರಕರಿಗೆ, ಋಷಿ ಮುನಿಗಳಿಗೆ, ಮಹಾನ್ ನಾಯಕರಿಗೆ ಜನ್ಮ ಕೊಟ್ಟ ದೇಶ ನಮ್ಮದು. ಸ್ವಾಮಿ ವಿವೇಕಾನಂದರಂತಹ ಆಧ್ಯಾತ್ಮಿಕ ಚಿಂತಕರನ್ನು ಪಡೆದ ದೇಶ ನಮ್ಮದು ಎಂದರು.
ಕನ್ನಡಿಗರು ದೇಶದ ಯಾವುದೇ ಭಾಗದಲ್ಲಿ ನೆಮ್ಮದಿಯಾಗಿ ಬದುಕಬಹುದು. ಸಂತಸದ ಜೀವನ ನಡೆಸಬಹುದು. ಅಲ್ಲಿನ ಭಾಷೆ, ಸಂಸ್ಕøತಿಗೆ ಬೆರೆತು ಬದುಕುವ ಈ ನಾಡಿನ, ಮಣ್ಣಿನ ಗುಣ ಈ ಭಾಷೆಯ ಜೇನಿನಂತರ ಸಿಹಿ ಗುಣ. ನೊಂದವರಿಗೆ, ನಿರಾಶ್ರಿತರಿಗೆ ಸಹಾಯಾಸ್ತ ನೀಡುವ ಸಂಸ್ಕøತಿ ನಮ್ಮದು. ಸಹಬಾಳ್ವೆಯ  ನೆಮ್ಮದಿಯ ಬದುಕಿಗೆ ಒತ್ತು ಕೊಡುವ ಜಿಲ್ಲೆ ನಮ್ಮದು. ಕನ್ನಡ ಭಾಷೆ ಶ್ರೀಮಂತಭಾಷೆ. ಕನ್ನಡ ಕಸ್ತೂರಿ ಎಂದೇ ಹೆಸರಾದ ಭಾಷೆ. ಹೆಚ್ಚು ಜ್ಞಾನ ಪೀಠ ಪ್ರಶಸ್ತಿ ಲಭಿಸಿರುವುದು ಕನ್ನಡ ಭಾಷೆಗೆ ಹಿಂದಿ ಮತ್ತು ಇಂಗ್ಲೀಷ್ ಪ್ರಭಾವಕ್ಕೆ ಮೈ ಒಡ್ಡಿದ ಭಾಷೆ ಕನ್ನಡ ತನ್ನ ತನವನ್ನು ಉಳಿಸಿಕೊಂಡಿರುವ ಮೇರು ಭಾಷೆ ನಮ್ಮದು ಎಂದು ಹೇಳಿದರು.
ಜಾತಿ, ಮತ, ಪಂಥಕ್ಕಿಂತ ಮೀರಿದ ಬದುಕನ್ನು ನಮ್ಮದಾಗಿಸಿಕೊಳ್ಳೋಣ. ಸಹೋದರತೆ, ಸಮಾನತೆ, ಸಾಮರಸ್ಯದ ಬದುಕನ್ನು ಮೈಗೂಡಿಸಿಕೊಳ್ಳೋಣ. ಜಾತಿಯ ಜೆಡ್ಡುಗಟ್ಟಿದ ಕೊಳೆಯನ್ನು ಜ್ಞಾನದ ಕಾರಂಜಿಯಲ್ಲಿ ತೊಳೆದು ನೀತಿಯ ಬೀಜವ ಭಿತ್ತಿ ನೆಮ್ಮದಿ ಫಲವ ಪಡೆದು ಫಲವತ್ತಾದ ಮಾನವೀಯತೆಯ ಬೆಳೆಯನ್ನು ಬೆಳೆಯೋಣ. ಅದುವೇ ಬುದ್ಧ ಸಾರಿದ್ದು. ಬಸವಣ್ಣ ಹೇಳಿದ್ದು. ಅಂಬೇಡ್ಕರ್ ಪ್ರತಿಪಾದಿಸಿದ್ದು. ಇದುವೇ ಮಾನವೀಯ ಧರ್ಮ ಪ್ರತಿಷ್ಟಾಪನೆಗೆ ನಾಂದಿ. ನೆಮ್ಮದಿಯ ಜೀವನಕ್ಕೆ ದಾರಿ. ಇದುವೇ ಪ್ರಸ್ತುತ ಸಂದರ್ಭದಲ್ಲಿ ಅಗತ್ಯವಾದ ಹಾದಿಯಾಗಿದೆ ಎಂದು ತಿಳಿಸಿದರು.
ಮಂಡ್ಯ ನನಗೆ ಜನ್ಮ ಕೊಟ್ಟ ಜಿಲ್ಲೆ. ಕೋಲಾರ ರಾಜಕೀಯವಾಗಿ ಜನ್ಮಕೊಟ್ಟ ಜಿಲ್ಲೆ. ಈ ಎರಡೂ ಜಿಲ್ಲೆಯನ್ನು ಪ್ರತಿನಿಧಿಸುವ ಸೌಭಾಗ್ಯ ನನ್ನದು. ನಾನು ಮಂಡ್ಯ ಜಿಲ್ಲೆ ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿಯಲ್ಲಿ ಹುಟ್ಟಿದವನು. ಈ ಜಿಲ್ಲೆಯ ಮಣ್ಣಿನಲ್ಲಿ ಬೆಳೆದವನು. ಈ ಜಿಲ್ಲೆಯ ನೀರು ಕುಡಿದವನು. ಪ್ರಾಥಮಿಕ ಶಿಕ್ಷಣವನ್ನು ಈ ಜಿಲ್ಲೆಯಲ್ಲಿ ಪಡೆದವನು. ಇಲ್ಲಿನ ಅನೇಕ ಗಣ್ಯರ ಪ್ರೀತಿ, ವಿಶ್ವಾಸ ಗಳಿಸಿಕೊಂಡವನು. ಈ ಜಿಲ್ಲೆಯ ಮಣ್ಣಿನ ಋಣ ನನ್ನನ್ನು ಇಂದು ಕವಿಯಾಗಿಸಿದೆ. ಸಾಹಿತಿಯಾಗಿಸಿದೆ. ಒಬ್ಬ ಪತ್ರಕರ್ತನಾಗಿಸಿದೆ. ಶಿಕ್ಷಣ ತಜ್ಞನನ್ನು ಮಾಡಿದೆ ಎಂದು ಸ್ಮರಿಸಿಕೊಂಡರು.
ಮಂಡ್ಯ ಜಿಲ್ಲೆ ಕಲೆ, ಸಾಹಿತ್ಯ, ಸಂಸ್ಕøತಿಗಳ ತವರು. ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಕನ್ನಡವನ್ನು ಮಾತನಾಡುವ ಜಿಲ್ಲೆ ಮಂಡ್ಯ ಎಂಬ ಹೆಗ್ಗಳಿಕೆ ನಮ್ಮದು. ಪುರಾಣ ಕಾಲದಲ್ಲಿ ‘ಮಾಂಡವ್ಯ’ ಎಂಬ ಮುನಿಯೊಬ್ಬ ಇಲ್ಲಿ ತಪ್ಪಸ್ಸು ಮಾಡುತ್ತಿದ್ದ. ‘ಮಾಂಡವ್ಯ’ ತಪೋ ಭೂಮಿಯಾದ್ದರಿಂದ ಈ ಪ್ರದೇಶಕ್ಕೆ ‘ಮಂಡ್ಯ’ ಎಂದಾಯಿತು. ಮೈಸೂರು ವಿಭಾಗಕ್ಕೆ ಸೇರಿದ್ದ ಮಂಡ್ಯ ಜಿಲ್ಲೆ ಜುಲೈ 7, 1939ರಂದು ಸ್ವತಂತ್ರ್ಯ ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂತು. ನಾಡಶಿಲ್ಪಿ ರಾಜರ್ಷಿ ಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿಯ ಫಲವಾಗಿ 1911ರಿಂದ 1932ರವರೆಗೆ ಕನ್ನಂಬಾಡಿಯ ಬಳಿ ಕಾವೇರಿ ನದಿಗೆ ಅಡ್ಡಲಾಗಿ ಅಣೆಕಟ್ಟೆ ಕಟ್ಟಲಾಗಿ ಕಾವೇರಿ ಈ ಪ್ರಾಂತ್ಯದಲ್ಲಿ ಹರಿದು ಬರಡಾಗಿದ್ದ ಮಂಡ್ಯ ಅಚ್ಚ ಹಸಿರಾಯಿತು. ಇಲ್ಲಿ ಭತ್ತ, ರಾಗಿ, ಕಬ್ಬು, ತೆಂಗು ಕಂಗೊಳಿಸಿ ಸಮೃದ್ಧ ಜಿಲ್ಲೆಯಾಯಿತು ಎಂದು ಶ್ಲಾಘಿಸಿದರು.
ಏಷ್ಯಾದಲ್ಲೇ ಪ್ರಪ್ರಥಮ ಬಾರಿಗೆ 1902ರಲ್ಲಿ ಶಿಂಷಾದಲ್ಲಿ ಜಲವಿದ್ಯುತ್ ಕೇಂದ್ರ ಸ್ಥಾಪನೆಗೊಂಡು ನಾಡಿಗೆ ಬೆಳಕು ನೀಡಿದ ಕೀರ್ತಿ ಮಂಡ್ಯ ಜಿಲ್ಲೆಯದ್ದು. ಲೆಸ್ಸಿ. ಸಿ ಕೋಲ್ಮನ್ ಮತ್ತು ಸರ್ ಮಿರ್ಜಾ ಇಸ್ಮಾಯಿಲ್ ಕಾಳಜಿಯಿಂದ ಮೈಷುಗರ್ ಸಕ್ಕರೆ ಕಾರ್ಖಾನೆ ಸ್ಥಾಪನೆಗೊಂಡು ಕಬ್ಬು ಬೆಳೆಯಲು ಆರಂಭಿಸಿ ಸಕ್ಕರೆಯ ನಾಡಾಯಿತು. ಪೂರಕವಾಗಿ ವಿ.ಸಿ.ಫಾರಂ ಬಳಿ ಸಂಶೋಧನಾ ಕೇಂದ್ರ ಸ್ಥಾಪನೆಗೊಂಡು ಕೃಷಿಯಲ್ಲಿ ಹತ್ತು ಹಲವು ಆವಿಷ್ಕಾರ ನಡೆದು ‘ಭತ್ತದ ಕಣಜ’ ಎಂಬ ಹಿರಿಮೆಗೆ ಪಾತ್ರವಾಯಿತು. ವಿಶ್ವವಿಖ್ಯಾತ ದಸರಾಗೆ ತವರು ಮಂಡ್ಯ ಜಿಲ್ಲೆ. 1610ರಿಂದ 1799ರವರೆಗೆ ಶ್ರೀರಂಗಪಟ್ಟಣದಲ್ಲಿ ದಸರಾ ವೈಭವಯುತವಾಗಿ ನಡೆಯುತ್ತಿತ್ತು. ಆನಂತರ ರಾಜಧಾನಿ ಮೈಸೂರಿಗೆ ಸ್ಥಳಾಂತರಗೊಂಡಿತು. ಮಂಡ್ಯ ಜಿಲ್ಲೆ ಹೋರಾಟಕ್ಕೆ ಹೆಸರುವಾಸಿ. ಶಿವಪುರದ ಧ್ವಜಸತ್ಯಾಗ್ರಹದ ಸ್ವಾತಂತ್ರ್ಯ ಹೋರಾಟ, ವರುಣಾ ಚಳುವಳಿ, ಕಾವೇರಿ ಚಳುವಳಿ, ರೈತ ಚಳುವಳಿ ಇತ್ಯಾದಿ ಚಳುವಳಿಗಳು ಡಾ. ಜಿ.ಮಾದೇಗೌಡ, ಇಂಡುವಾಳು ಹೊನ್ನಯ್ಯ, ಕೆ.ವಿ. ಶಂಕರಗೌಡ, ಡಾ. ಎಚ್.ಡಿ.ಚೌಡಯ್ಯ, ಕೆ.ಎಸ್.ಪುಟ್ಟಣ್ಣಯ್ಯ, ವಿ.ಅಶೋಕ್, ನಂಜುಂಡೇಗೌಡ, ಸುನಂದಾ ಜಯರಾಂ ಹೀಗೆ ಹಲವರ ನೇತೃತ್ವದಲ್ಲಿ ನಡೆದು ರಾಜ್ಯದ ಗಮನ ಸೆಳೆದು. ಬೇಡಿಕೆಗಳು ಈಡೇರಿದ ನಿದರ್ಶನ ನಮ್ಮ ಕಣ್ಣ ಮುಂದೆ ಇವೆÉ ಎಂದರು.
ಚಲನಚಿತ್ರ ರಂಗದ ಅನಭಿಷÀಕ್ತ ದೊರೆ ಡಾ.ಅಂಬರೀಷ್, ನಿರ್ದೇಶಕರಾದ ಬಿ.ಎಸ್.ರಂಗಾ, ಖ್ಯಾತ ಸಾಹಿತಿ ಹಾಗೂ ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಮಹೇಶ್ ಸುಖಧರೆ, ಯುವ ನಿರ್ದೇಶಕರಾದ ಪ್ರೇಮ್, ಎ.ಪಿ.ಅರ್ಜುನ್ ಇತ್ಯಾದಿ ಮಂಡ್ಯದಲ್ಲಿ ಹುಟ್ಟಿ ಬೆಳೆದು ನಾಡು, ನುಡಿ, ಕಲೆ ಸಾಹಿತ್ಯವನ್ನು ಶ್ರೀಮಂತಗೊಳಿಸುತ್ತಿದ್ದಾರೆ.  ಪರಮ ಪೂಜ್ಯ ಶ್ರೀ ಡಾ. ಬಾಲಗಂಗಾಧರನಾಥ ಸ್ವಾಮೀಜಿಗಳು ಶ್ರೀ ಕ್ಷೇತ್ರ ಆದಿಚುಂಚನಗಿರಿಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿ ಹಿಮಾಲಯದ ಎತ್ತರಕ್ಕೆ ಏರಿದವರು. ಮಂಡ್ಯ ನಗರದ ಪ್ರಪ್ರಥಮ ಪರಿಶಿಷ್ಟ ಜಾತಿಗೆ ಸೇರಿದ ದಿ.ಎಸ್.ಹೊನ್ನಯ್ಯ, ರಾಷ್ಟ್ರ ರಾಜಕಾರಣದಲ್ಲಿ ಮಿನುಗುತಾರೆಯಾಗಿ ವಿಜೃಂಭಿಸಿದ ಎಸ್.ಎಂ.ಕೃಷ್ಣ ದಾಖಲಾರ್ಹರು ಎಂದರು.
‘ಗೋವಿನ ಹಾಡು’ ಎಂಬ ಪುಣ್ಯಕೋಟಿಯ ಕಥೆಯನ್ನು ಸಾರಸ್ವತ ಲೋಕಕ್ಕೆ ನೀಡಿದ ಕೀರ್ತಿ ಮಂಡ್ಯ ಜಿಲ್ಲೆಯ ವೈದ್ಯನಾಥಪುರದ ಗೊಲ್ಲಗೌಡನಿಗೆ ಸಲ್ಲುತ್ತದೆ. ಅಲ್ಲದೇ ಕನ್ನಡದ ಪ್ರಪ್ರಥಮ ನಾಟಕ ಮಿತ್ರವೃಂದಾ ಗೋವಿಂದಾ ಕೃತಿಯನ್ನು ಶ್ರೀರಂಗಪಟ್ಟಣದ ಸಿಂಗಾರಾರ್ಯ ರಚಿಸಿದ. ಬೆಳ್ಳಿ ಮೋಡದ ಖ್ಯಾತಿಯ ಕಾದಂಬರಿಗಾರ್ತಿ ತ್ರಿವೇಣಿ ಮಂಡ್ಯ ನಗರದವರು ಎಂಬುದು ನಮ್ಮ ಹೆಗ್ಗಳಿಕೆ. ಮಂಡ್ಯ ಜಿಲ್ಲೆಯ ಸಾಹಿತ್ಯಕವಾಗಿ ಶ್ರೀಮಂತವಾದ ಇತಿಹಾಸವನ್ನು ಹೊಂದಿದೆ. ಆಧುನಿಕ ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳ ಆರಂಭ ಈ ಪ್ರದೇಶದ ಕವಿಗಳಿಂದ ಆಗಿದೆ. ಯಕ್ಷಗಾನದ ಮೊದಲ ಕವಿ ಕೆಂಪಣ್ಣಗೌಡ ಈ ಪ್ರದೇಶದವರು. ಷೇಕ್ಸ್‍ಪಿಯರ್ ನಾಟಕಗಳನ್ನು ಮೊದಲ ಬಾರಿಗೆ ಕನ್ನಡಕ್ಕೆ ಭಾಷಾಂತರಿಸಿದ ಕೀರ್ತಿ ಮದ್ದೂರಿನ ಎಂ.ಎಲ್.ಶ್ರೀಕಂಠೇಶಗೌಡ ಅವರಿಗೆ ಸಲ್ಲುತ್ತದೆ. ಆಧುನಿಕ ಕಾವ್ಯಕ್ಕೆ ಮುನ್ನುಡಿಯಾದ ಬಿ.ಎಂ.ಶ್ರೀಕಂಠಯ್ಯ ನಾಗಮಂಗಲದ ಬೆಳ್ಳೂರಿನವರು. ಮೊದಲ ವ್ಯಾಕರಣ ಬರೆದ ಕೃಷ್ಣಮಾಚಾರ್ಯ ಮಂಡ್ಯ ಜಿಲ್ಲೆಯವರು. ಸಂಶೋಧನೆಗೆ ನಾಂದಿಯಾಡಿದ ರಾ.ನರಸಿಂಹಚಾರ್ಯ ಈ ನೆಲದವರು. ಹೀಗೆ ಆಧುನಿಕ ಕನ್ನಡ ಸಾಹಿತ್ಯದ ಮೊದಲುಗಳೆಲ್ಲಾ ಈ ನೆಲದಿಂದ ಆರಂಭವಾಗಿವೆ ಎಂದು ಹೇಳಿದರು.
ಇನ್ನು ಜಾನಪದ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಮಂಡ್ಯ ಜಿಲ್ಲೆಯ ಕೊಡುಗೆ ಅನನ್ಯವಾಗಿದೆ. ಜನಪದ ಕ್ಷೇತ್ರದ ಮೊಟ್ಟ ಮೊದಲ ಕೃತಿ ಎಂದು ಗುರುತಿಸಿಕೊಳ್ಳುವ ‘ಹುಟ್ಟಿದ ಹಳ್ಳಿ ಹಳ್ಳಿ ಹಾಡು’ ಎಂಬ ಕೃತಿ ಕೆ.ಆರ್.ಪೇಟೆಯ ಅರ್ಚಕ ರಂಗಸ್ವಾಮಿ ಅವರು ಸಂಪಾದಿಸಿ ನೀಡಿದ್ದಾರೆ. ಜನಪದ ಲೋಕದ ರೂವಾರಿ ಎಚ್.ಎಲ್.ನಾಗೇಗೌಡ,  ಜಾನಪದ ಕ್ಷೇತ್ರದ ಪಂಪ ಡಾ.ಜೀ.ಶಂ.ಪ. ಈ ನೆಲದವರು. ಕ.ರಾ.ಕೃಷ್ಣಮೂರ್ತಿ ಇವರೆಲ್ಲಾ ಜಾನಪದ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಚಿಕುಪಾಧ್ಯಾಯ, ಸಂಚಿ ಹೊನ್ನಮ್ಮ, ಪು.ತಿ.ನ., ಕೆ.ಎಸ್.ನರಸಿಂಹಸ್ವಾಮಿ, ಎಂ.ಆರ್.ಶ್ರೀನಿವಾಸಮೂರ್ತಿ, ಎ.ಎನ್.ಮೂರ್ತಿರಾವ್, ಬಿ.ಸಿ.ರಾಮಚಂದ್ರಶರ್ಮ, ಡಾ.ರಾಮೇಗೌಡ, ಡಾ.ಲತಾರಾಜಶೇಖರ್, ಡಾ.ಪದ್ಮಾಶೇಖರ್, ನ.ಭದ್ರಯ್ಯ, ಪ್ರೊ.ಸುಜನಾ, ಹ.ಕ.ರಾಜೇಗೌಡ, ಡಾ.ಬೆಸಗರಹಳ್ಳಿ ರಾಮಣ್ಣ, ಹುಲ್ಕೆರೆ ರಮೇಶ್, ಪ್ರೊ.ಡಿ.ಲಿಂಗಯ್ಯ, ಆರ್ಯಾಂಬ ಪಟ್ಟಾಭಿ, ಆ.ರಾ.ಮಿತ್ರ, ನಾಗತಿಹಳ್ಳಿ ಚಂದ್ರಶೇಖರ್, ಶಿವಳ್ಳಿ ಕೆಂಪೇಗೌಡ, ಪತ್ರಕರ್ತ ಹಾಗೂ ಸಾಹಿತಿ ಎಸ್.ಕೃಷ್ಣಸ್ವರ್ಣಸಂದ್ರ, ಕ್ಯಾತನಹಳ್ಳಿ ರಾಮಣ್ಣ ಹಾಗೂ ನಿಘಂಟು ತಜ್ಞ ಡಾ.ವೆಂಕಟಸುಬ್ಬಯ್ಯ ಮುಂತಾದವರು ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ಹಿರಿಯರ ಹಾದಿಯಲ್ಲೇ ನೂರಾರು ಮಂದಿ ಕಿರಿಯರು ಸಾಹಿತ್ಯ ಕೃಷಿಯನ್ನು ಮಾಡುತ್ತಾ ನಾಡು, ನುಡಿಯನ್ನು ಶ್ರೀಮಂತಗೊಳಿಸುತ್ತಿದ್ದಾರೆ ಎಂದರು.

Friday, 17 April 2015

 ಮೈಸೂರು ಏ.೧೭.ದಿನಾಂಕ 18-04-2015 ರಂದು ಬೆ.6.00 ಗಂಟೆಯಿಂದ ಸಂಜೆ 6.00 ಗಂಟೆಯವರೆಗೆ  ಕನ್ನಡಪರ ಸಂಘಟನೆಗಳ ಒಕ್ಕೂಟದ ವತಿಯಿಂದ, ಕುಡಿಯುವ ನೀರು  ಹಾಗೂ ವಿದ್ಯುತ್‍ಚ್ಛಕ್ತಿಗಾಗಿ  ಕರ್ನಾಟಕ ಸರ್ಕಾರದಿಂದ ಯೋಜಿಸಿರುವ  ಮೇಕೆದಾಟು ಯೋಜನೆಗೆ ತಮಿಳುನಾಡು ಸರ್ಕಾರ ಅಡ್ಡಗಾಲು ಹಾಕುತ್ತಿರುವುದನ್ನು ಖಂಡಿಸಿ ರಾಜ್ಯಾದ್ಯಂತ “ಬಂದ್’’  ಮಾಡಲು ಕರೆನೀಡಿರುತ್ತಾರೆ.
ಈ ಸಂಬಂಧ ನಗರದಲ್ಲಿ ಶಾಂತಿ, ಸುವ್ಯವಸ್ಥೆಯನ್ನು ಮತ್ತು ನೆಮ್ಮದಿ ಕಾಪಾಡುವ ದೃಷ್ಟಿಯಿಂದ ಸಾರ್ವಜನಿಕರುಗಳ ಗಮನಕ್ಕೆ ಈ ಕೆಳಕಂಡ ಸೂಚನೆಗಳನ್ನು ತರಲಾಗಿದ ಎಂದು ಪೊಲೀಸ್ ಕಮೀಷನರ್‍ರವರ ಕಛೇರಿಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದಾರೆ.

     ಬಂದ್ ಆಚರಣೆ ಸಂಬಂಧ ಯಾವುದೇ ವ್ಯಕ್ತಿ, ಸಂಘಟನೆ, ಬಲವಂತವಾಗಿ ಯಾವುದೇ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಿ, ಅರೆ ಸರ್ಕಾರಿ ಕಚೇರಿಗಳನ್ನು  ಮುಚ್ಚಿಸುವುದನ್ನು ನಿಷೇಧಿಸಲಾಗಿದೆ. ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು, ವಾಣಿಜ್ಯ ಸಂಕೀರ್ಣಗಳನ್ನು, ಕೇಂದ್ರ ಮತ್ತು ರಾಜ್ಯ ಸರ್ಕಾರಿ, ಅರೆ ಸರ್ಕಾರಿ  ಕಛೇರಿಗಳನ್ನು ಮುಚ್ಚಿಸುವುದು ಶಿಕ್ಷಾರ್ಹ ಅಪರಾಧವಾಗಿರುತ್ತದೆ.

    ಬಂದ್ ಮಾಡುವ ನೆಪದಲ್ಲಿ ಸಾರ್ವಜನಿಕರ ಹಾಗೂ ಯಾವುದೇ ವಾಹನಗಳ ಸಂಚಾರಕ್ಕೆ ತಡೆ ಒಡ್ಡಬಾರದು ಹಾಗೂ ಆಡಚಣೆ ಮಾಡಬಾರದು. ಯಾವುದೇ ಕಾರಣಕ್ಕೂ ರಸ್ತೆಯ ಮಧ್ಯದಲ್ಲಿ  ಟೈರ್ ಹಾಗೂ ಇತರೆ ಉರುವಲುಗಳಿಗೆ  ಬೆಂಕಿ ಹಚ್ಚಬಾರದು ಮತ್ತು ಕಲ್ಲು ತೂರಾಟ ನಡೆಸಬಾರದು.
 ಬಂದ್ ಸಮಯದಲ್ಲಿ ಮೈಕ್ ಲೈಸನ್ಸ್‍ಅನ್ನು ಪಡೆದು ಅಳವಡಿಸುವವರು ಘನ  ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ  ಬೆಳಿಗ್ಗೆ 06-00 ಗಂಟೆಯಿಂದ ರಾತ್ರಿ 10-00 ಗಂಟೆಯವರೆಗೆ ಮಾತ್ರ ಧ್ವನಿವರ್ಧಕವನ್ನು ಸಾರ್ವಜನಿಕರಿಗೆ ತೊಂದರೆಯಾಗದಂತೆ ಕಡಿಮೆ ಧ್ವನಿಯಲ್ಲಿ ಉಪಯೋಗಿಸಬೇಕು.  ಧ್ವನಿವರ್ಧಕದಲ್ಲಿ ಆಶ್ಲೀಲ ಸಾಹಿತ್ಯವುಳ್ಳ ಗೀತೆಗಳನ್ನು ಪ್ರಸಾರ ಮಾಡಬಾರದು.
 ಈ ಸಂಬಂಧ  ಮೆರವಣಿಗೆಗಳನ್ನು ನಡೆÀಯುವ ಬಗ್ಗೆ ಮುಂಚಿತವಾಗಿ ಸಂಬಂಧಪಟ್ಟ ಪೊಲೀಸ್ ಠಾಣೆಗೆ ಮಾಹಿತಿ ನೀಡಿ, ಪೂರ್ವಾನುಮತಿ ಪಡೆಯುವುದು
 ಬಂದ್ ಸಂಬಂಧ  ಪ್ರಾರ್ಥನಾ ಸ್ಥಳ/ಚರ್ಚ್/ಮಸೀದಿಗಳ ಬಳಿ ಧಾರ್ಮಿಕ  ಭಾವನೆಗೆ ನೋವುಂಟು ಮಾಡುವ ಘೋಷಣೆಗಳನ್ನು ಕೂಗಬಾರದು ಮತ್ತು ವಾದ್ಯಗಳನ್ನು ನುಡಿಸಬಾರದು
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದ ಮತ್ತು ಸಾರ್ವಜನಿಕರ ಆಸ್ತಿಗಳಿಗೆ ನಷ್ಟ ಉಂಟು ಮಾಡಬಾರದು.
ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಕಂಡು ಬಂದಲ್ಲಿ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು.
ಮೇಲ್ಕಂಡ ನಿಬಂಧನೆಗಳನ್ನು ಉಲ್ಲಂಘಿಸಿರುವುದು ಸಾರ್ವಜನಿಕರ ಗಮನಕ್ಕೆ ಬಂದಲ್ಲಿ ಕೂಡಲೇ ಸಂಬಂಧಪಟ್ಟ  ಪೊಲೀಸ್ ಠಾಣಿಗಳಿಗೆ ಅಥವಾ  ಪೊಲೀಸ್ ಕಂಟ್ರೋಲ್ ರೂಂಗೆ ದೂರವಾಣಿ ಸಂಖ್ಯೆ.100,2418139,2418339 ಗೆ ಮಾಹಿತಿ ನೀಡಲು ಕೋರಲಾಗಿದೆ.
 ನಗರದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಮೈಸೂರು ನಗರ ಪೊಲೀಸರಿಗೆ  ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ. 

ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ -ಜಿಲ್ಲಾಧಿಕಾರಿ ಸಿ.ಶಿಖಾ ಸೂಚನೆ

 ಲೋಕಸೇವಾ ಆಯೋಗ ಪೂರ್ವಭಾವಿ ಪರೀಕ್ಷೆ
         ಅಕ್ರಮ ತಡೆಗಟ್ಟಲು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ      
      ಮೈಸೂರು,ಏ.18 ಕರ್ನಾಟಕ ಲೋಕಸೇವಾ ಆಯೋಗ 2014 ನೇ ಸಾಲಿನ ಗೆಜೆಟೆಡ್ ಪ್ರೊಬೇಷನರ್ಸ್ ಪೂರ್ವಭಾವಿ ಪರೀಕ್ಷೆ ಮೈಸೂರು ನಗರದ 105 ಉಪಕೇಂದ್ರಗಳಲ್ಲಿ ಏಪ್ರಿಲ್ 19 ರ ಭಾನುವಾರ ನಡೆಯುತ್ತಿದ್ದು ಪರೀಕ್ಷಾ ಸಮಯದಲ್ಲಿ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ಕಟ್ಟೆಚ್ಚರ ವಹಿಸುವಂತೆ ಜಿಲ್ಲಾಧಿಕಾರಿ ಸಿ.ಶಿಖಾ ಇಂದು ಸೂಚನೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ವೀಕ್ಷಕರು, ಮಾರ್ಗಾಧಿಕಾರಿಗಳು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳ ಸಭೆ ನಡೆಸಿದ ಅವರು ಪರೀಕ್ಷೆಯನ್ನು ಸುವ್ಯವಸ್ಥಿತವಾಗಿ ಹಾಗೂ ಯಾವುದೇ ಅಕ್ರಮಗಳಿಗೆ ಅವಕಾಶವಾಗದಂತೆ ನಡೆಸಲು ಅಗತ್ಯ ಮುನ್ನೆಚ್ಚರಿಕೆ ವಹಿಸಲು ಸೂಚಿಸಿದರು.
ಏಪ್ರಿಲ್ 19 ರಂದು ಭಾನುವಾರ ಬೆಳಿಗ್ಗೆ 10 ರಿಂದ 12 ಘಂಟೆಯವರೆಗೆ ಹಾಗೂ ಮಧ್ಯಾಹ್ನ 2 ರಿಂದ  4 ಘಂಟೆಯವರೆಗೆ ಪರೀಕ್ಷೆ ನಡೆಯಲಿದೆ.
ಯಾವುದೇ ಅಭ್ಯರ್ಥಿ ಪರೀಕ್ಷಾ ಅಕ್ರಮದಲ್ಲಿ ತೊಡಗಿರುವುದು ಕಂಡು ಬಂದಲ್ಲಿ ತಕ್ಷಣವೇ ಅಂತಹ ಅಭ್ಯರ್ಥಿಯನ್ನು ಪರೀಕ್ಷಾ ಕೇಂದ್ರದಿಂದ ಹೊರಹಾಕಲಾಗುವುದು ಹಾಗೂ ಇಂತಹ ಅಭ್ಯರ್ಥಿ ಭವಿಷ್ಯದಲ್ಲಿ ಪುನ: ಪರೀಕ್ಷೆ ತೆಗೆದುಕೊಳ್ಳದಂತೆ ಲೋಕಸೇವಾ ಆಯೋಗವು ನಿಷೇದ ಹೇರಲಿದೆ.ಆದ್ದರಿಂದ ಅಭ್ಯರ್ಥಿಗಳು ಸಹ ಯಾವುದೇ ರೀತಿಯ ಪರೀಕ್ಷಾ ಅಕ್ರಮದಲ್ಲಿ ತೊಡಗಬಾರದು ಎಂದು ಜಿಲ್ಲಾಧಿಕಾರಿಗಳು ಹೇಳಿದರು.
ಮೊಬೈಲ್ ಪೋನ್‍ಗಳಿಗೆ ಅವಕಾಶ ಇಲ್ಲ : ಪರೀಕ್ಷಾ ಕೇಂದ್ರದ ಒಳಗೆ ಹಾಗೂ ಆವರಣದಲ್ಲಿ ಮೊಬೈಲ್ ಪೋನ್‍ಗಳಿಗೆ ಅವಕಾಶ ಇರುವುದಿಲ್ಲ . ಹಾಗೂ ಮೊಬೈಲ್ ಪೋನ್‍ಗಳನ್ನು ಇರಿಸುವ ವ್ಯವಸ್ಥೆಯು ಇರುವುದಿಲ್ಲ ಆದ್ದರಿಂದ ಆಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಆವರಣದೊಳಗೆ ಮೊಬೈಲ್ ಪೋನ್‍ಗಳನ್ನು ತರಬಾರದು ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
      ಮಾಧ್ಯಮ ಪ್ರತಿನಿಧಿಗಳಿಗೂ ಸಹ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶದ ಅವಕಾಶ ಇರುವುದಿಲ್ಲ. ಪರೀಕ್ಷಾ ಕೇಂದ್ರಗಳಲ್ಲಿ ಛಾಯಾಚಿತ್ರ ಅಥವಾ ವಿಡಿಯೋ ತೆಗೆಯಲು ಮಾಧ್ಯಮ ಪ್ರತಿನಿಧಿಗಳಿಗೆ ಅವಕಾಶ ಇರುವುದಿಲ್ಲ ಎಂದು ತಿಳಿಸಿದ ಜಿಲ್ಲಾಧಿಕಾರಿಗಳು ಈ ದಿಶೆಯಲ್ಲಿ ಮಾಧ್ಯಮ ಪ್ರತಿನಿಧಿಗಳು ಸಹಕರಿಸಬೇಕು ಎಂದು ಕೋರಿದರು.
     ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪರೀಕ್ಷಾ ಸಿಬ್ಬಂದಿಗಳೂ ಸಹ ಪರೀಕ್ಷಾ ಕೇಂದ್ರದ ಒಳಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ ಎಂದು ಜಿಲ್ಲಾಧಿಕಾರಿಗಳು ಸೂಚಿಸಿದರು.
5 ಪರೀಕ್ಷಾ ಉಪಕೇಂದ್ರಗಳಿಗೆ ಒಬ್ಬರಂತೆ ವೀಕ್ಷಕರು, 3 ರಿಂದ 5 ಉಪಕೇಂದ್ರಗಳಿಗೆ ಒಬ್ಬರಂತೆ ಫ್ಲೈಯಿಂಗ್ ಸ್ಕ್ವಾಡ್ 4 ರಿಂದ 5 ಉಪಕೇಂದ್ರಗಳಿಗೆ ಒಬ್ಬರಂತೆ ಮಾರ್ಗಾಧಿಕಾರಿಗಳನ್ನು ನೇಮಿಸಲಾಗಿದೆ ಅಲ್ಲದೆ ಪ್ರತಿ ಉಪಕೇಂದ್ರಕ್ಕೂ ಶಸ್ರ್ತಸಜ್ಜಿತ ಆರಕ್ಷಕ ಸಿಬ್ಬಂದಿ ನಿಯೋಜಿಸಲಾಗಿದೆ. ಎಲ್ಲ ಹಂತದ ಅಧಿಕಾರಿ ಹಾಗೂ ಸಿಬ್ಬಂದಿಗಳು ದಕ್ಷತೆಯಿಂದ ಕಾರ್ಯನಿರ್ವಹಿಸಿ ಲೋಪದೋಷಗಳಿಗೆ ಅವಕಾಶವಾಗದಂತೆ ಎಚ್ಚರಿಕೆ ವಹಿಸಬೇಕಂದು ಜಿಲ್ಲಾಧಿಕಾರಿ ಸಿ.ಶಿಖಾ ತಿಳಿಸಿದರು.
ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಗಳು ಹಿಂದಿನ ದಿನವೇ ತಮಗೆ ಹಂಚಿಕೆ ಮಾಡಲಾಗಿರುವ ಪರೀಕ್ಷಾ ಕೇಂದ್ರಗಳಿಗೆ ಭೇಟಿ ನೀಡಬೇಕು.ಪರೀಕ್ಷೆ ನಡೆಸಲು ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆಯೇ ಎಂದು ಪರಿಶೀಲಿಸಬೇಕು,ಪರೀಕ್ಷಾ ಉಪಕೆಂದ್ರಗಳ ಬಳಿ ಒರ್ವ ಮಹಿಳಾ ಆರಕ್ಷಕರನ್ನು ಒಳಗೊಂಡಂತೆ ನಾಲ್ವರು ಆರಕ್ಷಕರನ್ನು ನೇಮಿಸಲಾಗಿದೆಯೇ ಎಂಬುದನ್ನು ಪರಿಶೀಲಿಸಿ ಯಾವುದೇ ನ್ಯೂನತೆ ಇದ್ದಲ್ಲಿ ವರದಿ ಮಾಡಬೇಕು ಎಂದು ಅವರು ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಅರ್ಚನಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್, ಮುಡಾ ಆಯುಕ್ತ ಪಾಲಯ್ಯ, ಹೆಚ್ಚುವರಿ ಪ್ರಾದೇಶಿಕ ಆಯುಕ್ತೆ ಗಾಯಿತ್ರಿ ಸೇರಿದಂತೆ ಪರೀಕ್ಷಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ವಿವಿಧ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. 

ಮೈಸೂರು ಸಂತಸದಿಂದ ಮೇಟಗಳ್ಳಿ ರೈಲ್ವೆ ಕ್ರಾಸಿಂಗ್ ಪರಿಶೀಲನೆ.

ಮೈಸೂರು .೧೮.ಲೋಕಸಭಾ ಸದಸ್ಯರಾದ ಶ್ರೀ ಪ್ರತಾಪ್ ಸಿಂಹ ರವರು ನಿನ್ನೆ 05.45ಕ್ಕೆ ಮೈಸೂರು ನಗರ, ವಾರ್ಡ್ ನಂ:29ರ ಮೇಟಗಳ್ಳಿ ರೈಲ್ವೆ ಕ್ರಾಸಿಂಗ್ ರಸ್ತೆಯ ವಿಸ್ತರಣೆ ಹಾಗೂ ಅಗಲೀಕರಣಕ್ಕೆ ಸಂಬಂಧವಾಗಿ ಮುಡಾ ಆಯುಕ್ತರಾದ ಶ್ರೀ ಪಾಲಯ್ಯ ಎಸ್, ಹಾಗೂ ಸಂಬಂಧಪಟ್ಟ ಅಧಿಕಾರಿಗಳೊಂದೆಗೆ ಭೇಟಿ ನೀಡಿ, ಕುಲಂಕೂಷವಾಗಿ ಸ್ಥಳ ಪರಿಶೀಲನೆ ನಡೆಸಿದರು. ಸದರಿ ರಸ್ತೆಯ ಅಗಲೀಕರಣಕ್ಕೆ ಅಡೆ-ತಡೆಯಾಗಿರುವ ಮನೆಗಳ ತೆರವುಗೊಳಿಸುವ ಹಾಗೂ ಪರಿಹಾರವನ್ನು ನೀಡುವ ಸಂಬಂಧವಾಗಿ  ಸಂಸದರು ಮುಡಾ ಆಯುಕ್ತರೊಂದಿಗೆ ಮಾತು ಕತೆ ನಡೆಸಿದರು. ಈ ವಿಷಯದ ಸಂಬಂಧವಾಗಿ ಶೀರ್ಘದಲ್ಲಿ ಮುಂದಿನ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಮಂಡ್ಯ: ಬಯಲು ಮಲವಿಸರ್ಜನೆ ಸ್ಥಳಗಳಲ್ಲಿ ಸೀಟಿ ಹಾಕುವ ಮೂಲಕ ಬಯಲಲ್ಲಿ ಮಲ ವಿಸರ್ಜನೆ ಮಾಡುವುದನ್ನು ತಡೆಯಲು ಜಿಲ್ಲಾ ಪಂಚಾಯತ್ ಮುಂದಾಗಿದೆ. ಶುಕ್ರವಾರ (ಏ. 17) ಮುಂಜಾನೆ 5 ಗಂಟೆ ವೇಳೆಗೆ ಗ್ರಾಮ ಕಣ್ಗಾವಲು ಸಮಿತಿ ನೆರವಿನೊಂದಿಗೆ ಬಯಲಲ್ಲಿ ಸೀಟಿ ಹಾಕಲಿದ್ದಾರೆ.
ಇದಕ್ಕಾಗಿ ಒಟ್ಟು 15 ತಂಡಗಳನ್ನು ರಚಿಸಲಾಗಿದ್ದು, ಜಿಲ್ಲೆಯಾದ್ಯಂತ ಈ ತಂಡಗಳು ಸಂಚರಿಸಲಿವೆ. ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ, ಉಪ ಕಾರ್ಯದರ್ಶಿ (ಆಡಳಿತ) ಎನ್.ಡಿ. ಪ್ರಕಾಶ್ ಸೇರಿದಂತೆ ಹಲವರ ನೇತೃತ್ವದಲ್ಲಿ ತಂಡಗಳು ಕಾರ್ಯ ನಿರ್ವಹಿಸಲಿವೆ.
ಪ್ರತಿ ದಿನ ಬೆಳಿಗ್ಗೆ ಮತ್ತು ಸಂಜೆ ಸಮಿತಿಯ ಸದಸ್ಯರು ಗ್ರಾಮದಲ್ಲಿ ಬಯಲು ಬಹಿದೆರ್ಸೆಗೆ ತೆರಳುವ ವ್ಯಕ್ತಿಗಳನ್ನು ಮನವೊಲಿಸಿ ಅವರನ್ನು ಶೌಚಾಲಯ ನಿರ್ಮಿಸಿಕೊಂಡು ಬಳಸುವಂತೆ ಒತ್ತಾಯಿಸಲಿದೆ.
ಸ್ವಚ್ಛ್ ಭಾರತ್ ಮಿಷನ್ (ಗ್ರಾಮೀಣ) ಅಡಿಯಲ್ಲಿ 2015ರ ಜುಲೈ ತಿಂಗಳಾಂತ್ಯಕ್ಕೆ ಬಯಲು ಶೌಚ ಮುಕ್ತ ಜಿಲ್ಲೆಯನ್ನಾಗಿಸಲು ಮುಂದಾಗಿರುವ ಮಂಡ್ಯ ಜಿಲ್ಲಾ ಪಂಚಾಯತ್ ಈ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
‘ಸಕ್ಕರೆ ಜಿಲ್ಲೆ’ ಎನ್ನುವ ವಿಶೇಷಣ ಹೊಂದಿರುವ ಮಂಡ್ಯ ಜಿಲ್ಲೆ ‘ನಿರ್ಮಲ ಜಿಲ್ಲೆ’ ಎನ್ನುವ ಹೆಗ್ಗಳಿಕೆಗೂ ಪಾತ್ರ ಆಗಬೇಕು. ಅದು ಜಿಲ್ಲಾ ಪಂಚಾಯತ್ ಆಶಯವಾಗಿದ್ದು, ನಮ್ಮೊಂದಿಗೆ ಎಲ್ಲರೂ ಕೈಜೋಡಿಸಬೇಕು. ಸೀಟಿ ಹಾಕುವ ಮೂಲಕ ಯಾರಿಗೂ ಮುಜುಗರ ಮಾಡಬೇಕು ಎನ್ನುವುದು ಜಿಲ್ಲಾ ಪಂಚಾಯತ್ ಉದ್ದೇಶವಲ್ಲ ಎಂದು ಸಿಇಒ ರೋಹಿಣಿ ಸಿಂಧೂರಿ ಪ್ರತಿಕ್ರಿಯಿಸಿದ್ದಾರೆ.
ಸಿಇಒ ರೋಹಿಣಿ ಸಿಂಧೂರಿ ಅವರು , ಶುಕ್ರವಾರ (ಏ. 17) ಬೆಳಗಿನ ಜಾವಾ 6ಕ್ಕೆ ಮಂಡ್ಯ ತಾಲ್ಲೂಕಿನ ಹಳುವಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಪುರ, ಹಳುವಾಡಿ, ತಗ್ಗಹಳ್ಳಿ ಗ್ರಾಮಗಳೂ ಸೇರಿದಂತೆ ಇನ್ನಿತರೆಡೆ ಸಂಚರಿಸಲಿದ್ದಾರೆ.

Thursday, 16 April 2015


ಮಂಡ್ಯ:  ನಕಲಿ ಕ್ಲಿನಿಕ್‍ಗಳ ಮೇಲೆ ದಾಳಿ ಮಾಡಿ ಕಠಿಣ ಕಾನೂನು ಕ್ರಮಜರುಗಿಸುವಂತೆ ಆರೋಗ್ಯಧಿಕಾರಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರೋಹಿಣಿ ಸಿಂಧೂರಿ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಮಟ್ಟದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿ ಸಭೆಯಲ್ಲಿ ಮಾತನಾಡಿದ ಅವರು, ನಕಲಿ ಕ್ಲಿನಿಕ್‍ಗಳ ಮೇಲೆ ತೀವ್ರ ನಿಗಾವಹಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನೋಂದಣಿ ಕಾಯ್ದೆ -2007ರಡಿಯಲ್ಲಿ (ಕೆಪಿಎಂಇ –ಕಾಯ್ದೆ) ನೋಂದಣಿ ಮಾಡಿಸದೇ ಅನಧಿಕೃತ ಕ್ಲಿನಿಕ್ ನಡೆಸುತ್ತಿರುವ ವೈದ್ಯರ ವಿರುದ್ಧ ಕಠಿಣ ಕಾನೂನು ಕ್ರಮಜರುಗಿಸಬೇಕು. ಅಲ್ಲದೆ, ಸ್ಥಳೀಯ ಪೊಲೀಸ್ ಠಾಣೆಯಲ್ಲೂ ದೂರು ದಾಖಲು ಮಾಡುವಂತೆ ಸೂಚಿಸಿದರು.
ಜಿಲ್ಲೆಯಲ್ಲಿ, ಕೆಪಿಎಂಇ–ಕಾಯ್ದೆಯಡಿ ನೋಂದಣಿ ಆಗಿರುವ ಹಾಗೂ ಆಗದಿರುವ ಕ್ಲಿನಿಕ್‍ಗಳ ಪಟ್ಟಿಯನ್ನು ಕೂಡಲೇ ಸಲ್ಲಿಸುವಂತೆ ವೈದ್ಯಾಧಿಕಾರಿಗಳಿಗೆ ಸೂಚಿಸಿದರು.
ತಂಡ ರಚನೆ: ನಕಲಿ ಕ್ಲಿನಿಕ್‍ಗಳನ್ನು ಪತ್ತೆ ಹಚ್ಚಲು ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ತಂಡ ರಚಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಜಿಲ್ಲಾ ಆರೋಗ್ಯಾಧಿಕಾರಿ, ಜಿಲ್ಲಾ ಆಯುಷ್ ಅಧಿಕಾರಿ, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷರನ್ನು ಒಳಗೊಂಡ ತಂಡ ರಚಿಸಲಾಗಿದೆ.
ಸಾರ್ವಜನಿಕರಿಗೆ ನಕಲಿ ಕ್ಲಿನಿಕ್‍ಗಳ ಬಗ್ಗೆ ಮಾಹಿತಿ ದೊರೆತಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳಿಗೆ ಮಾಹಿತಿ (ದೂ.ಸಂ. 08232-220417) ನೀಡುವಂತೆ ತಿಳಿಸಿದರು.
ಮೇಲ್ದರ್ಜೆಗೆ: ಕೆ.ಆರ್.ಎಸ್., ಬೀರುವಳ್ಳಿ, ಸಂತೇಬಾಚಹಳ್ಳಿ ಹಾಗೂ ಕ್ಯಾತನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24*7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲು ಅನುಮೋದಿಸಲಾಯಿತು. ಈವರೆವಿಗೂ 24*7 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನಾಗಿ ಕಾರ್ಯ ನಿರ್ವಹಿಸುತ್ತಿದ್ದ ಶಿವಳ್ಳಿ, ಕೀಲಾರ, ಬೂಕನಕೆರೆ ಮತ್ತು ಕಿರುಗಾವಲು ಆರೋಗ್ಯ ಕೇಂದ್ರಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳನ್ನಾಗಿ ಮೇಲ್ದರ್ಜೆಗೆ ಏರಿಸಲಾಗಿದೆ.
ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ. ಮಂಚೇಗೌಡ, ಜಿಲ್ಲಾ ಆಯುಷ್ ಅಧಿಕಾರಿ ಡಾ.ಬಿ.ಎಸ್. ಸೀತಾಲಕ್ಷ್ಮಿ, ಜಿಲ್ಲಾ ಯೋಜನಾ ನಿರ್ವಹಣಾಧಿಕಾರಿ ಡಾ.ಕೆ. ಮೋಹನ್, ಆರ್‍ಸಿಎಚ್‍ಒ ಡಾ. ಎಂ.ಎನ್. ಗೀತಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಪಿ. ಮಾರುತಿ, ಭಾರತೀಯ ವೈದ್ಯಕೀಯ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಬಿ.ಎಸ್. ಕಕ್ಕಿಲಾಯ ಮತ್ತಿತರರು ಹಾಜರಿದ್ದರು.
I

Wednesday, 15 April 2015













ಮೈಸೂರು-ಮುಖ್ಯ ಮಂತ್ರಿಗಳ ಕಾರ್ಯಕ್ರಮ.

ಪ್ರವಾಸ ಕಾರ್ಯಕ್ರಮ
   
 ಮೈಸೂರು,ಏ.15.-ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಪ್ರಿಲ್ 16 ರಂದು ಮೈಸೂರು ಜಿಲ್ಲೆಯಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.
      ಅಂದು ಬೆಳಿಗ್ಗೆ  10-30ಕ್ಕೆ  ಹೆಲಿಕಾಪ್ಟರ್ ಮೂಲಕ ಸುತ್ತೂರಿನ ರೆಸಿಡೆನ್ಸಿಯಲ್ ಸ್ಕೂಲ್ ಮೈದಾನ ಹೆಲಿಪ್ಯಾಡ್‍ಗೆ ಆಗಮಿಸಿ ನಂತರ ಬೆಳಿಗ್ಗೆ 11-30ಕ್ಕೆ ಮೈಸೂರು ತಾಲ್ಲೂಕಿನ ಸುತ್ತೂರಿನ ಬಿಳಿಗೆರೆ ಗ್ರಾಮದಲ್ಲಿ ವರುಣ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ 70 ಗ್ರಾಮಗಳಿಗೆ ಬಹು ಗ್ರಾಮಗಳ ಕುಡಿಯುವ ನೀರಿನ ಯೋಜನೆಗೆ ಶಿಲಾನ್ಯಾಸ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಿಲಾನ್ಯಾಸ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸುವರು.      ಮಧ್ಯಾಹ್ನ 2-20 ಗಂಟೆಗೆ ತಿ. ನರಸೀಪುರ ತಾಲ್ಲೂಕಿನ ವಿದ್ಯೋದಯ ಕಾಲೇಜು ಆವರಣದಲ್ಲಿ ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 124ನೇ ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಸಂಜೆ 5 ಗಂಟೆಗೆ ಬಲ್ಲಾಳ್ ವೃತ್ತದಲ್ಲಿರುವ ಭಾರತ ರತ್ನ, ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ಅವರ 124ನೇ ಜಯಂತೋತ್ಸವ ಕಾರ್ಯಕ್ರಮ ಭಾಗವಹಿಸುವರು. ನಂತರ ರಾತ್ರಿ 7-30 ಗಂಟೆಗೆ ಮೈಸೂರು ರಸ್ತೆಯ ಮೂಲಕ ಬೆಂಗಳೂರಿಗೆ ತೆರಳಲಿದ್ದಾರೆ.
ಅನ್ನಭಾಗ್ಯ ಯೋಜನೆ  ಅಕ್ಕಿ ದುರಪಯೋಗಯಾಗದಂತೆ ಎಚ್ಚರ ವಹಿಸಲು ಸೂಚನೆ

      ಮೈಸೂರು,ಏ.15. ಅನ್ನ ಭಾಗ್ಯ ಯೋಜನೆ ಸೇರಿದ ಅಕ್ಕಿಯ ದುರುಪಯೋಗ ಸಂಬಂಧ ಈಗಾಗಲೇ ಎರಡು ಪ್ರಕರಣಗಳು ದಾಖಲಾಗಿದ್ದು, ಮುಂದೆ ಇಂತಹ ಪ್ರಕರಣಗಳು ಮರುಕಳಿಸದಂತೆ ವರ್ತಕರು ಎಚ್ಚರವಹಿಸಬೇಕು ಎಂದು ಆಹಾರ ಹಾಗೂ ನಾಗರೀಕರ ಸರಬರಾಜು ಇಲಾಖೆ ಹಿರಿಯ ಉಪ ನಿರ್ದೇಶಕರಾದ ರಾಮೇಶ್ವರಪ್ಪ ಅವರು ತಿಳಿಸಿದ್ದಾರೆ.
      ಇಂದು ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ನಡೆದ ಧಾನ್ಯ ವ್ಯಾಪಾರಿ ಸಂಘ, ಅಕ್ಕಿ ಗಿರಣಿ ಸಂಘ, ಎ.ಪಿ.ಎಂ.ಸಿ ಹಾಗೂ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಕರ್ನಾಟಕವನ್ನು ಹಸಿವು ಮುಕ್ತ ರಾಜ್ಯವನ್ನಾಗಿಸಲು ಸರ್ಕಾರ ಅನ್ನ ಭಾಗ್ಯ ಯೋಜನೆಯನ್ನು ಜಾರಿಗೆ ತಂದಿದ್ದು,   ಇದ್ದರಿಂದ ರಾಜ್ಯದ ಬಡ ಜನರು ಹೊಟ್ಟೆ ತುಂಬ ಊಟ ಮಾಡುವಂತ್ತಾಗಿದೆ. ಆದರೆ ಹಣ ಗಳಿಸುವ ದುರಾಶೆಯಿಂದ ಕೆಲವರು ಬಡವರಿಗೆ ಸೇರಬೇಕಾದ ಅಕ್ಕಿಯನ್ನು ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ. ವರ್ತಕರ, ಧಾನ್ಯ ವ್ಯಾಪಾರಿಗಳ ಹಾಗೂ ಸಂಬಂಧಿಸಿದ ಸಂಘಗಳಿಗೆ ಅಕ್ಕಿ ದುರುಪಯೋಗದ ಪ್ರಕರಣಗಳು ಗಮನಕ್ಕೆ ಬಂದಲ್ಲಿ ಜಿಲ್ಲಾಡಳಿತಕ್ಕೆ  ದೂರು ನೀಡಬೇಕು ಹಾಗೂ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಿಳಿಸಿದರು.
     ಆಹಾರ ಧ್ಯಾನ, ತರಕಾರಿ ಹಾಗೂ ಹಣ್ಣುಗಳಿಗೆ ಕೃತಕ ಬಣ್ಣವನ್ನು ಮಿಶ್ರಣ ಮಾಡುವ ಬಗ್ಗೆ ಜಿಲ್ಲಾಡಳಿತ ಎಚ್ಚರ ವಹಿಸುತ್ತಿದೆ. ಕೃತಕ ಬಣ್ಣಗಳು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ ಎಂದು ತಿಳಿದಿದ್ದರೂ ಕೆಲವು ವ್ಯಾಪರಸ್ಥರು ಹಣಕ್ಕಾಗಿ ಈ ದಂಧೆಯಲ್ಲಿ ಪಾಲುದಾರರಾಗಿದ್ದಾರೆ. ಅಂತಹ ವಹಿವಾಟುಗಳು ಜಿಲ್ಲೆಯಲ್ಲಿ ನಡೆಯದಂತೆ ಈಗಾಗಲೇ ಜಿಲ್ಲಾಡಳಿತ ಕ್ರಮವಹಿಸಿದೆ ಎಂದರು.
    ಜಿಲ್ಲೆಯಲ್ಲಿ ಅಕ್ಕಿ ಸರಬರಾಜಿನಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಬಳ್ಳಾರಿ, ರಾಯಚೂರು, ತುಮುಕೂರು ಜಿಲ್ಲೆಗಳಿಂದ ಸಾಕಾಷ್ಟು ಪ್ರಮಾಣದಲ್ಲಿ ಅಕ್ಕಿ ಸರಬರಾಜು ಆಗುತ್ತಿದೆ ಎಂದು ತಿಳಿಸಿದರು.
     ಕೃಷಿ ಉತ್ಪನ್ನ ಮಾರುಕಟ್ಟೆ ಸಹಾಯಕ ನಿರ್ದೇಶಕರಾದ ಶ್ರೀನಿವಾಸ್ ರೆಡ್ಡಿ, ಧಾನ್ಯ ವ್ಯಾಪಾರಿ ಸಂಘ, ಅಕ್ಕಿ ಗಿರಣಿ ಸಂಘದ ಪದಾಧಿಕಾರಿಗಳು  ಹಾಗೂ ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.
(ಛಾಯಾಚಿತ್ರ ಲಗತ್ತಿಸಿದೆ).
ಏಪ್ರಿಲ್ 25 ರಂದು  ಶ್ರೀ ಭಗೀರಥ ಜಯಂತಿ

     ಮೈಸೂರು,ಏ.15. ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಜಿಲ್ಲಾಡಳಿತ ಹಾಗೂ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಏಪ್ರಿಲ್  25 ರಂದು ಅದ್ದೂರಿಯಾಗಿ ಆಚರಿಸಲು ಅಪರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.
    ಸರ್ಕಾರದ ವತಿಯಿಂದ ಮೊಟ್ಟ ಮೊದಲ ಭಾರಿಗೆ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುತ್ತಿದ್ದು,  ಏಪ್ರಿಲ್ 25 ರಂದು ಬೆಳಿಗ್ಗೆ 9-30 ಗಂಟೆಗೆ ಕೋಟೆ ಆಂಜನೇಯ ದೇವಸ್ಥಾನ ಆವರಣದ ಮುಂಭಾಗ ಶ್ರೀ ಭಗೀರಥ ಭಾವಚಿತ್ರದೊಂದಿಗೆ ಮೆರವಣಿಗೆ ನಡೆಸಲು ಹಾಗೂ ಮೆರವಣಿಗೆಯಲ್ಲಿ ಕಲಾತಂಡಗಳು ಭಾಗವಹಿಸಲು ಅಗತ್ಯ ಸಿದ್ಧತೆ ಕೈಗೊಳ್ಳಲು ಅಧಿಕಾರಿಗಳಿಗೆ ಅಪರ ಜಿಲ್ಲಾಧಿಕಾರಿ ಅರ್ಚನಾ ತಿಳಿಸಿದರು.
      ವೇದಿಕೆ ಕಾರ್ಯಕ್ರಮವು ಬೆಳಿಗ್ಗೆ 11-00 ಗಂಟೆಗೆ ಕಲಾಮಂದಿರದಲ್ಲಿ ನಡೆಯಲಿದ್ದು, ಶಿಷ್ಠಾಚಾರದ ಪ್ರಕಾರ ಗಣ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು. ಅಲ್ಲದೇ ಸಂಘ ಸಂಸ್ಥೆಗಳ ಮುಖ್ಯಸ್ಥರಿಗೆ ಆಹ್ವಾನ ಪತ್ರಿಕೆಗಳನ್ನು ತಲುಪಿಸಲು ಕ್ರಮ ವಹಿಸಬೇಕು. ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ಸರ್ಕಾರದ ಎಲ್ಲ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಕಾರ್ಯಕ್ರಮದಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು ಎಂದರು.
ಜಿಲ್ಲಾ ಕೇಂದ್ರದಲ್ಲಿ ಶ್ರೀ ಭಗೀರಥ ಜಯಂತಿ ಕಾರ್ಯಕ್ರಮಕ್ಕೆ ರೂ. 50 ಸಾವಿರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಆಚರಣೆಗಾಗಿ ತಲಾ ರೂ. 25 ಸಾವಿರ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಜಯಂತಿ ಮೆರವಣಿಗೆ ಸಾಗುವ ದಾರಿಯಲ್ಲಿ ಹಾಗೂ ವೇದಿಕೆ ಕಾರ್ಯಕ್ರಮಕ್ಕೆ ಪೊಲೀಸ್ ಇಲಾಖೆ ವತಿಯಿಂದ ಸೂಕ್ತ ಭದ್ರತಾ ವ್ಯವಸ್ಥೆಗೆ ಕ್ರಮವಹಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿಗಳು ತಿಳಿಸಿದರು.
ಸಭೆಯಲ್ಲಿ ಜ್ಞಾನ ಸಾಗರ ಮಠದ ಸ್ವಾಮಿಜೀ ಚಿನ್ನಸ್ವಾಮಿ, ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಶಾಸಕ ಪುಟ್ಟರಂಗಶೆಟ್ಟಿ,  ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜು, ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಹೆಚ್.ಕೆ.ರಾಮು, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ರಾಜಪ್ಪ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು  ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಬೇಸಿಗೆ ಕಾಲ: ಮೈಸೂರು ಮಹಾನಗರ ಪಾಲಿಕೆಯಿಂದ ಮುನ್ನೆಚ್ಚರಿಕೆ ಕ್ರಮ
  ಮೈಸೂರು,ಏ.15. ಬೇಸಿಗೆ ಕಾಲದಲ್ಲಿ ಕಾಲರ/ ಕರುಳುಬೇನೆಯಂತಹ ಸಾಂಕ್ರಾಮಿಕ ರೋಗಗಳು ಹರಡದಂತೆ ಮೈಸೂರು ಮಹಾನಗರ ಪಾಲಿಕೆಯಿಂದ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಮೈಸೂರು ಮಹಾನಗರ ಪಾಲಿಕೆ ಆಯುಕ್ತ ಡಾ| ಸಿ.ಜಿ. ಬೆಟಸೂರ್ ಮಠ್ ಅವರು ತಿಳಿಸಿದ್ದಾರೆ.
 ಹೋಟಲ್, ಕ್ಯಾಂಟಿನ್, ಫಾಸ್ಟ್ ಪುಡ್ ಹುದ್ದಿಮೆದಾರರು ಗ್ರಾಹಕರಿಗೆ ಬಿಸಿಯಾದ ನೀರು, ಶುಚಿಯಾದ ಆಹಾರವನ್ನು ಸರಬರಾಜು ಮಾಡಬೇಕು. ತಟ್ಟೆ ಮತ್ತು ಲೋಟ್‍ಗಳನ್ನು ಸೋಪಿನ ನೀರು ಮತ್ತು ಬಿಸಿ ನೀರಿನಲ್ಲಿ ತೊಳೆಯಬೇಕು. ನೆಲ ಮತ್ತು ಟೇಬಲ್‍ಗಳನ್ನು ಕ್ರಿಮಿನಾಶಕ ಉಪಯೋಗಿ ಶುಚಿಗೊಳಿಸಬೇಕು. ಅಡಿಗೆ ಮನೆ ಹಾಗೂ ಹೋಟಲ್‍ನ ಸುತ್ತಮುತ್ತ ಆವರಣವನ್ನು ಶುಚಿಯಾಗಿರಿಸಬೇಕು. ಆಹಾರ ಪಾದಾರ್ಥ ಉತ್ತಮ ಗುಣಮಟ್ಟದಾಗಿರಬೇಕು. ಸಪ್ಲೆಯರ್ ಆರೋಗ್ಯವಂತರಾಗಿರಬೇಕು ಹಾಗೂ ಅವರು ಗ್ರಾಹಕರಿಗೆ ಊಟ ತಿಂಡಿ ಸರಬರಾಜು ಮಾಡುವ ಸಂದರ್ಭಗಳಲ್ಲಿ ಕಡ್ಡಾಯವಾಗಿ ಎಪ್ರಾನ್ ಮತ್ತು ಗ್ಲೋಸ್ ಹಾಕಿ ಕೊಂಡಿರಬೇಕು.
ಶೌಚಾಲಯ ವ್ಯವಸ್ಥೆ ಉತ್ತಮವಾಗಿರಬೇಕು. ಸಿದ್ದಪಡಿಸಿದ ತಿಂಡಿ ಪದಾರ್ಥಗಳನ್ನು ಕಡ್ಡಾಯವಾಗಿ ಗ್ಲಾಸ್ ಕೇಸ್‍ನಲ್ಲಿ ಇಡಬೇಕು. ಪುಟ್‍ಪಾತ್‍ನಲ್ಲಿ  ತಿಂಡಿ ಪದಾರ್ಥ ಮಾರಾಟ ಮಾಡುವವರು ಕೊಯ್ದು ಹಣ್ಣು ಹಂಪಲುಗಳನ್ನು ಸೊಳ್ಳೆ, ನೊಣ ಬೀಳದಂತೆ ಗಾಜಿನ ಪಟ್ಟಿಗೆಯಲ್ಲಿಟ್ಟು ಮಾರಾಟ ಮಾಡಬೇಕು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ನವೋದಯ ವಿದ್ಯಾಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
     ಮೈಸೂರು,ಏ.15. ಮೈಸೂರು ಜಿಲ್ಲೆಯ ಡಿ.ಎಂ.ಜಿ. ಹಳ್ಳಿಯ ಜವಾಹರ ನವೋದಯ ವಿದ್ಯಾಲಯದಲ್ಲಿ 9ನೇ ತರಗತಿ ಪ್ರವೇಶಕ್ಕಾಗಿ ಅರ್ಜಿ ಆಹ್ವಾನಿಸಿದೆ.
     2014-15ನೇ ಸಾಲಿನ 8ನೇ ತರಗತಿಯಲ್ಲಿ ಉತ್ತೀರ್ಣವಾಗಿರುವ ಎಲ್ಲಾ ವಿದ್ಯಾರ್ಥಿ/ವಿದ್ಯಾರ್ಥಿನಿಯರು  ಅರ್ಜಿ ಸಲ್ಲಿಸಬಹುದು. ಪ್ರವೇಶ ಪರೀಕ್ಷೆಯು ಜೂನ್  7 ರಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮೈಸೂರಿನ ಡಿ.ಎಂ.ಜಿ. ಹಳ್ಳಿಯ ಜವಾಹರ್ ನವೋದಯ ವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ನಡೆಸಲಾಗುವುದು.
          ಅರ್ಜಿಯು ಮೇ  15 ರೊಳಗೆ  ಮೈಸೂರು ಜಿಲ್ಲೆಯ ಡಿ.ಎಂ.ಜಿ. ಹಳ್ಳಿ ಜವಾಹರ್ ನವೋದಯ ವಿದ್ಯಾಲಯದಲ್ಲಿ ಉಚಿತವಾಗಿ ದೊರೆಯುತ್ತದೆ. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2905068ನ್ನು ಸಂಪರ್ಕಿಸಬಹುದು.
ಏಪ್ರಿಲ್ 17 ರಂದು  ಜಿ.ಪಂ. ಕೆ.ಡಿ.ಪಿ ಸಭೆ

      ಮೈಸೂರು,ಏ.15.-ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶಗಳ ಕಾರ್ಯಕ್ರಮಗಳು ಸೇರಿದಂತೆ) ಪ್ರಗತಿ ಪರಿಶೀಲನಾ ಸಭೆಯು ಜಿಲ್ಲಾ ಪಂಚಾಯತ್ ಅಧ್ಯಕ್ಷರ ಅಧ್ಯಕ್ಷತೆಯಲ್ಲಿ ಏಪ್ರಿಲ್ 17 ರಂದು ಬೆಳಿಗ್ಗೆ 11 ಗಂಟೆಗೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಏಪ್ರಿಲ್ 17 ರಂದು 95ನೇ ವಾರ್ಷಿಕ ಘಟಿಕೋತ್ಸವ
      ಮೈಸೂರು,ಏ.15.ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳು, ಸಿಂಡಿಕೇಟ್ ಮತ್ತು ಶಿಕ್ಷಣ ಮಂಡಳಿಯ ಸದಸ್ಯರು ಏಪ್ರಿಲ್ 17 ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಫರ್ಡ್ ಭವನದಲ್ಲಿ 95ನೇ ವಾರ್ಷಿಕ ಘಟಿಕೋತ್ಸವ ನಡೆಯಲಿದೆ.
     ಭಾರತೀಯ ವಿಜ್ಞಾನ ಸಂಸ್ಥೆ ಹಾಗೂ ರಾಷ್ಟ್ರೀಯ ಸಂಶೋಧನಾ ಪ್ರಾಧ್ಯಾಪಕರು ರಾಸಾಯನಶಾಸ್ತ್ರ ಶಾಖೆಯ ವಿಶ್ರಾಂತ ನಿರ್ದೇಶಕ ಪ್ರೊ|| ಗೋವರ್ಧನ್ ಮೆಹತ ಅವರು ಘಟಿಕೋತ್ಸವ ಭಾಷಣ ಮಾಡುವರು.
    ರಾಜ್ಯಪಾಲರು ಹಾಗೂ ವಿಶ್ವವಿದ್ಯಾನಿಲಯದ ಕುಲಾಧಿಪತಿಗಳು ಘನತೆವೆತ್ತ ವಾಜುಬಾಯಿ ವಾಲ್ ಅವರು ಅಧ್ಯಕ್ಷತೆ ವಹಿಸುವರು.
     ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್.ವಿ. ದೇಶಪಾಂಡೆ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು.

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಹೆಚ್ಚುವರಿ ನೋಡಲ್ ಅಧಿಕಾರಿಗಳ ನೇ

ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ
  ಹೆಚ್ಚುವರಿ ನೋಡಲ್ ಅಧಿಕಾರಿಗಳ ನೇಮಕ
     ಮೈಸೂರು,ಏ.15. ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಕಾರ್ಯದಲ್ಲಿ ತೊಡಗಿರುವ  ಪ್ರತಿ ಚಾರ್ಚ್ ಅಧಿಕಾರಿಗಳಿಗೆ ಸಹಕರಿಸಲು ಹಾಗೂ ಅವರ ಕಾರ್ಯ ವೈಖರಿಗಳನ್ನು ಪರಿಶೀಲನೆ ನಡೆಸಲು ಹೆಚ್ಚುವರಿಯಾಗಿ ಒಬ್ಬ ನೋಡಲ್ ಅಧಿಕಾರಿಯನ್ನು ನೇಮಕ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಹೆಚ್ಚುವರಿ  ಪ್ರಧಾನ ಸಮೀಕ್ಷಾಧಿಕಾರಿಗಳಾದ ಅರ್ಚನಾ ಅವರು ತಿಳಿಸಿದರು.
    ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಎಲ್ಲ ಚಾರ್ಚ್ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿ ಸಮೀಕ್ಷೆ ಕಾರ್ಯದ ಬಗ್ಗೆ ಪ್ರತಿ ದಿವಸ ವರದಿಯನ್ನು ಸಂಬಂಧಪಟ್ಟವರಿಗೆ ಕಳುಹಿಸಬೇಕು. ಗಣತಿದಾರರು ನಮೂನೆಯನ್ನು ಭರ್ತಿ ಮಾಡುವಾಗ ಪೆನ್ನಿಲ್ ಉಪಯೋಗಿಸಬಾರದೆಂದು ಚಾರ್ಚ್ ಅಧಿಕಾರಿಗಳು ಸೂಕ್ತ ಮಾರ್ಗದರ್ಶನ ನೀಡಬೇಕು  ಎಂದು ಹೇಳಿದರು.
    ಸಮೀಕ್ಷೆ ಕಾರ್ಯಕ್ಕೆ ಬೇಕಾಗಾಗುವ ಲೇಖನ ಸಾಮಾಗ್ರಿಗಳು ಮತ್ತು ನಮೂನೆ 1 ರಿಂದ 5 ರವರೆಗಿನ ಅರ್ಜಿ ನಮೂನೆಗಳನ್ನು ಈಗಾಗಲೇ ಎಲ್ಲ ಚಾರ್ಚ್ ಅಧಿಕಾರಿಗಳಿಗೆ ಸರಬರಾಜು ಮಾಡಲಾಗಿದೆ. ದೈನಂದಿನ ಸಮೀಕ್ಷೆ ವರದಿಯನ್ನು ಆಯಾಯ ತಾಲ್ಲೂಕು ಕೇಂದ್ರಗಳಲ್ಲಿ ಅಂಕಿಅಂಶಗಳನ್ನು ಸಂಗ್ರಹಿಸಲು ಡಾಟಾ ಎಂಟ್ರೀಸ್ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ ಎಂದು ತಿಳಿಸಿದರು.
    ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣಾ ಅಧಿಕಾರಿ ಸೋಮಶೇಖರ್ ಹಾಗೂ ಇನ್ನಿತರರು ಭಾಗವಹಿಸಿದರು.

                                                      **** ಕರ್ನಾಟಕ ವಾರ್ತೆ ***
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಿಂದ ಏ.16 ರಂದು ಮಾಹಿತಿ ಸಂಗ್ರಹ
ಮಂಡ್ಯ ಏ.15. ಕರ್ನಾಟಕ ವಿಧಾನ ಪರಿಷತ್ತಿನ ವಿರೋಧ ಪಕ್ಷದ ನಾಯಕರಾದ ಕೆ.ಎಸ್.ಈಶ್ವರಪ್ಪ ಅವರು ದಿನಾಂಕ 16-4-2015 ರಂದು ಮಧ್ಯಾಹ್ನ 12.00 ಗಂಟೆಗೆ ಮಂಡ್ಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲೆಯಲ್ಲಿ ಕುಡಿಯುವ ನೀರಿನ  ಸಮಸ್ಯೆಗೆ ಸೇರಿದಂತೆ ವಿವಿಧ ಯೋಜನೆಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆಯುವರು ಎಂದು ಅವರ ಪ್ರವಾಸ ಕಾರ್ಯಕ್ರಮದಲ್ಲಿ ತಿಳಿಸಲಾಗಿದೆ.
******

Tuesday, 14 April 2015

ಮಂಡ್ಯ-ಡಾ.ಬಿ.ಆರ್.ಅಂಬೇಡ್ಕರ್ ೧೨೪ನೇ ಕುಂತಿಯನ್ನು ಅಂಗವಾಗಿ ಚ ಹಾಗೂ ಜಿಲ್ಲಾ ಉಸ್ತುವಾರಿಸಚಿವ ಅಂಬರೀಶ್ ರವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.
ಮಂಡ್ಯ: ಕೆರೆಗಳ ದುರಸ್ತಿ ಮತ್ತು ಪುನಶ್ಚೇತನ ಯೋಜನೆಯಡಿ ಸಣ್ಣ ನೀರಾವರಿ ಇಲಾಖೆ ವತಿಯಿಂದ 1 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿರುವ ತಾಲೂಕಿನ ಬಸರಾಳು ಚಿಕ್ಕಕೆರೆ ಅಭಿವೃದ್ಧಿ ಕಾಮಗಾರಿಗೆ ಜಿಲ್ಲಾಧಿಕಾರಿ ಎಂ.ಎನ್.ಅಜಯ್ ನಾಗಭೂಷಣ್ ಗುದ್ದಲಿ ಪೂಜೆ ನೆರವೇರಿಸಿದರು.
15 ಲಕ್ಷ ರೂ. ವೆಚ್ಚದಲ್ಲಿ ಕೆರೆ ಹೂಳು ಎತ್ತುವ ಕಾಮಗಾರಿ, 15 ಲಕ್ಷ ರೂ. ವೆಚ್ಚದಲ್ಲಿ ಏರಿ ದುರಸ್ತಿ, 45 ಲಕ್ಷ ರೂ. ವೆಚ್ಚದಲ್ಲಿ ಕಾಲುವೆ ದುರಸ್ತಿ, 3 ಲಕ್ಷ ರೂ. ವೆಚ್ಚದಲ್ಲಿ ಕೋಡಿ ದುರಸ್ತಿ, 4 ಲಕ್ಷ ರೂ. ವೆಚ್ಚದಲ್ಲಿ ಪೆÇೀಷಕ ನಾಲೆ ಮತ್ತು ತೂಬು ದುರಸ್ತಿ ಸೇರಿದಂತೆ ಅಭಿವೃದ್ಧಿ ಕಾಮಗಾರಿಗೆ ಕೈಗೆತ್ತಿಕೊಳ್ಳಲಾಗಿದೆ. ಕೆರೆ ಹೂಳು ಎತ್ತುವುದರಿಂದ 1 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಹೆಚ್ಚಲಿದೆ ಎಂದರು.
ಕೆರೆಯ ನೀರಿನಿಂದ 130 ಎಕರೆಗೆ ನೀರು ಒದಗಿಸುತ್ತಿದ್ದು, ಕೆರೆಯಲ್ಲಿ ಹೂಳು ತುಂಬಿರುವುದರಿಂದ ಕೇವಲ 80 ಎಕರೆಗೆ ಮಾತ್ರ ನೀರು ದೊರೆಯುತ್ತಿತ್ತು. ಇದೀಗ ಹೂಳು ತೆಗೆಯುವುದರಿಂದ ಎಲ್ಲ ರೈತರಿಗೂ ನೀರು ಒದಗಿಸಬಹುದಾಗಿದೆ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಅರುಳ್‍ಕುಮಾರ್, ಜಿಲ್ಲಾ ಕಾಂಗ್ರೆಸ್ ಖಜಾಂಚಿ ಅಮರಾವತಿ ಚಂದ್ರಶೇಖರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಿ.ಸಿ.ಆನಂದ್, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕೆ.ವೆಂಕಟೇಶ್, ಸಹಾಯಕ ಎಂಜಿನಿಯರ್ ಸಿ.ದೊಡ್ಡವೀರಯ್ಯ, ಗುತ್ತಿಗೆದಾರ ಕೆಂಗಲ್‍ಗೌಡ, ಮುಖಂಡರಾದ ಪಟೇಲ್ ಲಿಂಗರಾಜು, ಬಿ.ಡಿ.ಶಂಕರ್, ಗರುಡನಹಳ್ಳಿ ಚಂದ್ರಶೇಖರ್, ಯೋಗೇಶ್, ಪ್ರಕಾಶ್ ಇತರರು ಹಾಜರಿದ್ದರು.

ಮಂಡ್ಯ, ಏ.14- ಹಾಲಹಳ್ಳಿ ಸ್ಲಂ ಬೋರ್ಡ್ ನಿವಾಸಿಗಳಿಗೆ ಆರ್‍ಎವೈ ಮಾರ್ಗದರ್ಶಿ ಅನ್ವಯ ನೆಲಮಹಡಿ+1 (ಜಿ+1)  ಮನೆ ನಿರ್ಮಿಸುವುದಾಗಿ ವಸತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ಮಂಡ್ಯ ಸ್ಲಂ ನಿವಾಸಿಗಳು ನಡೆಸುತ್ತಿದ್ದ ಆಹೋರಾತ್ರಿ ಧರಣಿ ಅಂತ್ಯ ಗೊಂಡಿದೆ.
ಹಾಲಹಳ್ಳಿ ಸ್ಲಂಬೋರ್ಡ್ ನಿವಾಸಿಗಳಿಗೆ ರಾಜೀವ್ ಆವಾಸ್ ಯೋಜನೆಯಡಿ ಜಿ+3 ಮನೆಗಳನ್ನು ನಿರ್ಮಿಸುವುದಾಗಿ ತಿಳಿಸಿದ್ದ ಕೊಳಗೇರಿ ಅಭಿವøದ್ಧಿ ಮಂಡಳಿ ನಾಲ್ಕು ದಿನಗಳ ಹಿಂದಷ್ಟೆ ಮನೆ ತೆರವುಗೊ ಳಿಸುವಂತೆ ನೋಟೀಸ್ ನೀಡಿದ್ದ ಹಿನ್ನೆಲೆಯಲ್ಲಿ ನಿನ್ನೆಯಿಂದ ಮಂಡ್ಯ ಸ್ಲಂ ಒಕ್ಕೂಟದ ನೇತøತ್ವದಲ್ಲಿ ಆಹೋರಾತ್ರಿ ಪ್ರತಿಭಟನೆ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದಿತ್ತು. ಅಂಬೇ ಡ್ಕರ್ ಜನ್ಮದಿನವಾದ ಇಂದು ಸಹಾ ಪ್ರತಿಭಟನೆ ಮುಂದು ವರೆದಿತ್ತು. ಅಂಬೇಡ್ಕರ್ ಜಯಂತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಸ್ಲಂ ನಿವಾಸಿಗಳ ಬೇಡಿಕೆಗಳನ್ನು ಆಲಿಸಲು ಸಚಿವ ಅಂಬರೀಶ್ ಪ್ರತಿಭಟನಾ ಸ್ಥಳಕ್ಕೆ ಬಂದರು.
ಕರ್ನಾಟಕ ಜನಶಕ್ತಿಯ ರಾಜ್ಯ ಪ್ರಧಾನ ಸಂಚಾಲಕ ಡಾ.ವಾಸು, ಹಾಲಹಳ್ಳಿ ಸ್ಲಂ ಬೋರ್ಡ್‍ನಲ್ಲಿ ನಿರ್ಮಿಸಲಾ ಗುವ ಮನೆಗಳನ್ನು ಅಲ್ಲಿರುವ ನಿವಾಸಿಗಳಿಗೆ ಕೊಡಬೇಕು. ಹೊರಗಿನವರಿಗೆ ನೀಡಬಾರದು. ಕೊಳಗೇರಿ ಅಭಿವøದ್ಧಿ ಮಂಡಳಿ ಮನೆ ತೆರುವುಗೊಳಿಸುವಂತೆ ಸ್ಲಂ ನಿವಾಸಿಗಳಿಗೆ ನೀಡಿರುವ ನೋ ಟೀಸ್‍ನ್ನು ಮಾನ್ಯ ಮಾಡ ಬಾರದು. ಅಲ್ಲಿಯೇ ನಿವಾಸಿ ಗಳಿಗೆ ಸ್ಥಳಾವಕಾಶ ಮಾಡಿ ಕೊಡಬೇಕು. ಜಿ+3 ಮನೆ ನಿರ್ಮಿಸುವ ಬದಲು ಈಗಿರು ವಂತೆ ಜಿ+1 ಮನೆಗಳನ್ನೇ ನಿರ್ಮಿಸಬೇಕು ಎಂದು ತಿಳಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಅಂಬರೀಶ್ ಖಂಙ ಮಾರ್ಗದರ್ಶಿ ಅನ್ವಯ ನಿವಾಸಿಗಳ ಅಭಿಪ್ರಾಯದಂತೆ ಜಿ+1 ಮನೆ ನಿರ್ಮಿಸಿಕೊಡುತ್ತೇವೆ. ಯಾವುದೇ ಕಾರಣಕ್ಕೂ ಹೊರಗಿನವರಿಗೆ ಇಲ್ಲಿ ಮನೆ ಹಂಚಿಕೆ ಮಾಡುವುದಿಲ್ಲ. ಹಾಗೆಯೇ ಮನೆ ನಿರ್ಮಿಸುವ ಸಂದರ್ಭದಲ್ಲಿ ನಿವಾಸಿಗಳಿಗೆ ಪಕ್ಕದಲ್ಲಿ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಿಕೊಡಲಾಗುವುದು. ನಿವಾಸಿಗಳ ಆಗ್ರಹದಂತೆ ಅವರ ಸಹಬಾಗಿತ್ವದಲ್ಲಿ ಮನೆ ನಿರ್ಮಿಸುವುದಾಗಿ ಸಚಿವ ಅಂಬರೀಶ್ ಭರವಸೆ ನೀಡಿದ ನಂತರ ಆಹೋರಾತ್ರಿ ಧರಣಿಯನ್ನು ಅಂತ್ಯಗೊಳಿಸಲಾಯಿತು.
ಮಾಜಿ ಸಚಿವ ಆತ್ಮಾನಂದ, ದಸಂಸ ಮುಖಂಡರಾದ ಗುರುಪ್ರಸಾದ್ ಕೆರಗೋಡು, ಎಂ.ಬಿ.ಶ್ರೀನಿವಾಸ್, ಮಹದೇವು ಸ್ಲಂ ನಿವಾಸಿಗಳಿಗೆ ಬೆಂಬಲ ಸೂಚಿಸಿ ಮಾತನಾಡಿದರು. ಕರ್ನಾಟಕ ಜನಶಕ್ತಿಯ ಜಿಲ್ಲಾಧ್ಯಕ್ಷ ಕøಷ್ಣಪ್ರಕಾಶ್, ಸಂತೋಷ್, ಮಲ್ಲಿಗೆ, ಕಮಲಾ, ಸ್ಲಂ ಒಕ್ಕೂಟದ ನಾಗೇಶ್,ಸಿದ್ದರಾಜು, ಬಾಬು, ಕøಷ್ಣಪ್ಪ, ಗುಂಡ, ಮಹದೇವ, ಸೋಮಣ್ಣ, ಮುರುಳಿ, ಗವಿ, ಚೆನ್ನಮ್ಮ, ಮಂಜುಳಮ್ಮ, ಪವಿತ್ರ ಸೇರಿದಂತೆ ಸಾವಿರಾರು ಸಂಖ್ಯೆಯಲ್ಲಿ ಸ್ಲಂ ನಿವಾಸಿಗಳು ಭಾಗವಹಿಸಿದ್ದರು.

Monday, 13 April 2015

ಮೈಸೂರು ವಿಶ್ವವಿದ್ಯಾನಿಲಯದ ಶತಮಾನೋತ್ಸವ ಸಮಾರಂಭಕ್ಕೆ ಆಗಮಿಸುವಂತೆ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರನ್ನು ಶನಿವಾರ ಹೊಸದಿಲ್ಲಿಯ ರಾಷ್ಟ್ರಪತಿ ಭವನದಲ್ಲಿ  ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು  ಹೂ ಗುಚ್ಛ ನೀಡಿ ಆಹ್ವಾನಿಸಿದರು. 

Friday, 10 April 2015

ಏಪ್ರಿಲ್ 21 ರಂದು ಬಸವ ಜಯಂತಿ ಆಚರಣೆ ಸಿದ್ಧತೆಗೆ ಸೂಚನೆ

ಏಪ್ರಿಲ್ 21 ರಂದು ಬಸವ ಜಯಂತಿ ಆಚರಣೆ ಸಿದ್ಧತೆಗೆ ಸೂಚನೆ
ಮೈಸೂರು,ಏ.09.ಮೈಸೂರು ಜಿಲ್ಲಾಡಳಿತ ಹಾಗೂ  ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ್ಲ ಜಗಜ್ಯೋತಿ ಬಸವಣ್ಣ ಅವರ ಜನ್ಮಾದಿನಾಚರಣೆಯನ್ನು ಏಪ್ರಿಲ್ 21 ರಂದು ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಹಾಗೂ ಪ್ರಭಾರ ಜಿಲ್ಲಾಧಿಕಾರಿ ಅರ್ಚನಾ ಅವರು ತಿಳಿಸಿದರು.
ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಬಸವಜಯಂತಿ ಆಚರಣೆ ಸಂಬಂಧ ಹಮ್ಮಿಕೊಳ್ಳಲಾದ ಪೂರ್ವಸಿದ್ದತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಭಾರ ಜಿಲ್ಲಾಧಿಕಾರಿಯವರು ಬಸವ ಜಯಂತ್ರೋತ್ಸವದ ಅಂಗವಾಗಿ ಏಪ್ರಿಲ್ 21 ರಂದು ಬೆಳಿಗ್ಗೆ 10-30 ಗಂಟೆಗೆ ನಗರದ ಬಸವೇಶ್ವರದ ವೃತ್ತದಲ್ಲಿರುವ ಬಸವಣ್ಣ ಅವರ ಪುತ್ಥಳಿಗೆ ಮಾರ್ಲಾಪಣೆ ಮಾಡಿದ ನಂತರ ಬೆಳಿಗ್ಗೆ 11 ಗಂಟೆಗೆ ಕಲಾಮಂದಿರದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ  ಎಂದರು.
ಇದೇ ವೇಳೆ ಮಾತನಾಡಿದ ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷರಾದ ಮೂಗೂರು ನಂಜುಂಡಸ್ವಾಮಿ ಅವರು ಒಕ್ಕೂಟದ ವತಿಯಿಂದ ಪ್ರತ್ಯೇಕವಾಗಿ ಏಪ್ರಿಲ್ 21 ರಿಂದ 23 ರವರೆಗೆ ಬಸವ ಜಯಂತಿ ಕಾರ್ಯಕ್ರಮವನ್ನು
ಆಯೋಜಿಸಲಾಗುವುದು. ಏಪ್ರಿಲ್ 20 ರಂದು ಸಂಜೆ ಬಸವೇಶ್ವರ ವೃತ್ತದಲ್ಲಿರುವ ಬಸವಣ್ಣನವರ ಪುತ್ಥಳಿಗೆ ಮಾರ್ಲಾಪಣೆ ಹಾಗೂ ವಿವಿಧ ಕಲಾತಂಡಗಳನ್ನೊಳಗೊಂಡ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ಅಲ್ಲದೇ ಏಪ್ರಿಲ್ 21 ರಂದು ಜಿಲ್ಲಾಡಳಿತದ ವತಿಯಿಂದ ಹಮ್ಮಿಕೊಳ್ಳಲಾಗುವ ಬಸವ ಜಯಂತಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಯವರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು.
     ಬಸವಣ್ಣನವರ ಕುರಿತು ಉಪನ್ಯಾಸ ನೀಡಲು ಮಲಿಯೂರು ಗುರುಸ್ವಾಮಿ ಅವರನ್ನು ಸಭೆಯಲ್ಲಿ ಆಯ್ಕೆ ಮಾಡಲಾಯಿತು. ಬಿಜಾಪುರದ ಸಿದ್ದೇಶ್ವರ ಸ್ವಾಮಿಜೀಯವರು ಕಾರ್ಯಕ್ರಮದ ದಿವ್ಯಸಾನ್ನಿಧ್ಯ ವಹಿಸಲು ಹಾಗೂ  ಏಪ್ರಿಲ್ 21 ಹಾಗೂ 22 ರಂದು ಕಲಾಮಂದಿರವನ್ನು ದೀಪಾದಿಂದ ಅಲಂಕರಿಸಲು ಸಭೆಯಲ್ಲಿ ನಿರ್ಣಯಿಸಲಾಯಿತು.
     ಅಧಿಕಾರಿ/ಸಿಬ್ಬಂದಿ ವರ್ಗದವರು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ಹಾಗೂ ಸಂಘ ಸಂಸ್ಥೆಗಳು ಕಾರ್ಯಕ್ರಮದ ಯಶಸ್ವಿಗೆ ಸಹಕರಿಸಬೇಕಾಗಿ ಪ್ರಭಾರ ಜಿಲ್ಲಾಧಿಕಾರಿ ಅರ್ಚನಾ ಅವರು ತಿಳಿಸಿದರು


ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಕುರಿಮಂಡಿ ಕಸಾಯಿಖಾನೆ ಬಂದ್
ಮೈಸೂರು,ಏ.10.ಮೈಸೂರು ಮಹಾನಗರ ಪಾಲಿಕೆ ವ್ಯಾಪ್ತಿಗೊಳಪಡುವ ಕುರಿ, ಮೇಕೆ ಕಸಾಯಿಖಾನೆ ಮತ್ತು ಇತರೆ ಎಲ್ಲ ಮಾಂಸದ ಅಂಗಡಿಗಳನ್ನು ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಪ್ರಯುಕ್ತ 2015 ರ ಏಪ್ರಿಲ್ 14 ರಂದು ಭಾನುವಾರ ಮುಚ್ಚಲಾಗುತ್ತದೆ. ಮೈಸೂರು ನಗರದಲ್ಲಿ ಸದರಿ ದಿನದಂದು ಮಾಂಸದ ವ್ಯಾಪಾರವನ್ನು ಕಡ್ಡಾಯವಾಗಿ ನಿಷೇದಿಸಲಾಗಿದೆ ಹಾಗೂ ಎಲ್ಲ ಮಾರುಕಟ್ಟೆ ಮಾಂಸದ ಅಂಗಡಿಗಳನ್ನು ಮುಚ್ಚುವಂತೆ ಮೈಸೂರು ಮಹಾನಗರ ಪಾಲಿಕೆಯ ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಕೈಗೊಳ್ಳುತ್ತಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಸಂಬಂಧ ಏಪ್ರಿಲ್ 10 ರಂದು ಬೆಳಿಗ್ಗೆ  11 ಗಂಟೆಗೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಚುನಾಯಿತ ಪ್ರತಿನಿಧಿಗಳಿಗೆ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ.
ಏಪ್ರಿಲ್ 17 ರಂದು ಮೈಸೂರು ವಿ.ವಿ 95ನೇ ವಾರ್ಷಿಕ ಘಟಿಕೋತ್ಸವ
 ಮೈಸೂರು,ಏ.09-ಮೈಸೂರು ವಿಶ್ವವಿದ್ಯಾನಿಲಯದ 95ನೇ ವಾರ್ಷಿಕ ಘಟಿಕೋತ್ಸವ ಕಾರ್ಯಕ್ರಮವು ಏಪ್ರಿಲ್ 17 ರಂದು ಬೆಳಿಗ್ಗೆ 11 ಗಂಟೆಗೆ ಕ್ರಾಫರ್ಡ್‍ಭವನದಲ್ಲಿ ನಡೆಯಲಿದೆ.
     ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ ಮತ್ತು ರಾಷ್ಟ್ರೀಯ ಸಂಶೋಧನಾ ಮತ್ತು ಹೈದರಾಬಾದ್ ವಿಶ್ವವಿದ್ಯಾನಿಲಯದ ರಸಾಯನಶಾಸ್ತ್ರ ಶಾಲೆಯ ಸಂಶೋಧನಾ ಪ್ರಾಧ್ಯಾಪಕರಾದ ಪ್ರೊ|| ಗೋವರ್ದನ್ ಮೆಹತ ಅವರು ಘಟಿಕೋತ್ಸವ ಭಾಷಣ ಮಾಡಲಿದ್ದಾರೆ.
     ರಾಜ್ಯದ ರಾಜ್ಯಪಾಲರು ಹಾಗೂ ಕುಲಾಧಿಪತಿಗಳ ವಾಜುಬಾಯಿ ವಾಲಾ ಅವರು ಘಟಿಕೋತ್ಸವದ ಅಧ್ಯಕ್ಷತೆ ವಹಿಸಲಿದ್ದು, ಉನ್ನತ ಶಿಕ್ಷಣ ಮತ್ತು ಪ್ರವಾಸೋದ್ಯಮ ಸಚಿವ ಆರ್. ವಿ. ದೇಶಪಾಂಡೆ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸುವರು ಎಂದು ವಿಶ್ವವಿದ್ಯಾನಿಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.    
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ಜಿಲ್ಲಾ ಪ್ರವಾಸ
     ಮೈಸೂರು,ಏ.09. ಡಾ|| ಸರೋಜಿನಿ ಮಹಿಷಿ ವರದಿ ಅನುಷ್ಠಾನ ಹಾಗೂ ನಾಮಫಲಕಗಳಲ್ಲಿ ತ್ರಿಭಾಷಾ ಸೂತ್ರ ಅಳವಡಿಸುವ ಬಗ್ಗೆ ಪರಿಶೀಲಿಸಲು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ.ಎಲ್. ಹನುಮಂತಯ್ಯ ಅವರು ಏಪ್ರಿಲ್ 13 ರಂದು ಬೆಳಿಗ್ಗೆ 11-30 ಗಂಟೆಗೆ ಮೈಸೂರಿನಲ್ಲಿರುವ ಕೇಂದ್ರೀಯ ಆಹಾರ ಮತ್ತು ತಾಂತ್ರಿಕ ಸಂಶೋಧನಾ ಸಂಸ್ಥೆಗೆ ಭೇಟಿ ನೀಡಲಿದ್ದಾರೆ.
ಮಂದಪ್ಪ ಎಲ್.ಎಂ. ಅವರಿಗೆ  ಪಿಎಚ್.ಡಿ. ಪದವಿ

    ಮೈಸೂರು,ಏ.09.ಮೈಸೂರು ವಿಶ್ವವಿದ್ಯಾಲಯವು ಮಂದಪ್ಪ ಎಲ್.ಎಂ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಿದೆ. ಡಾ. ಹೆಚ್.ಕೆ. ಮನನ್‍ಮಣಿ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ  “ಒoಟeಛಿuಟಚಿಡಿ ಆeಣeಛಿಣioಟಿ oಜಿ ಃಚಿಛಿiಟಟus ಅeಡಿeus ಚಿಟಿಜ Iಣs ಖಿoxiಟಿs iಟಿ ಈooಜ” ಕುರಿತು ಸಾದರಪಡಿಸಿದ ಃioಣeಛಿhಟಿoಟogಥಿ ವಿಷಯದ ಮಹಾಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ಮಂದಪ್ಪ ಎಲ್.ಎಂ. ಅವರು ಸದರಿ ಪಿಎಚ್.ಡಿ. ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ.

Wednesday, 8 April 2015

ಮಂಡ್ಯ: ಮೇಲುಕೋಟೆ ವಿಧಾನ ಸಭಾ ಕ್ಷೇತ್ರದ ದುದ್ದ ಹೋಬಳಿಯ 5 ಪಂಚಾಯಿತಿಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಕುರಿತಂತೆ ಶಾಸಕ ಕೆ.ಎಸ್. ಪುಟ್ಟಣ್ಣಯ್ಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಯೋಜನೆಯ ರೂಪುರೇಷೆ ಸಿದ್ದಪಡಿಸಲು ಸೂಚನೆ ನೀಡಿದರು.
ತಾಲೂಕಿನ ದುದ್ದ ಗ್ರಾಮದಲ್ಲಿ ನಡೆದ ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, 85 ರಿಂದ 90 ಕೋಟಿ ರೂ. ವೆಚ್ಚದ ಯೋಜನೆಗೆ 15ದಿನದೊಳಗೆ ನಕಾಶೆ ತಯಾರಿಸಿ ವರದಿ ಸಿದ್ಧಪಡಿಸುವಂತೆ ತಿಳಿಸಿದರು.
ವರದಿ ಬಂದ ನಂತರ ಅಂದಾಜು ವೆಚ್ಚ ತಯಾರಿಸಿ ಟೆಂಡರ್ ಪ್ರಕ್ರಿಯೆ ಪ್ರಾರಂಭಿಸುವಂತೆ ತಿಳಿಸಿದರಲ್ಲದೆ, ಶೀಘ್ರ ಈ ಯೋಜನೆಯನ್ನು ಅನುಷ್ಠಾನಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಈ ವ್ಯಾಪ್ತಿಯ ಸುಮಾರು 19 ಕಿ.ಮೀ. ಪೈಪ್‍ಲೈನ್ ಮೂಲಕ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಇದಾಗಿದ್ದು, 2500 ಎಕರೆ ಪ್ರದೇಶಕ್ಕೆ ನೀರುಣಿಸಬಹುದಾಗಿದೆ. ಅಂತರ ಜಲ ಕುಸಿತದಿಂದಾಗಿ ಈ ಪ್ರದೇಶದ ಜನತೆ ನೀರಿಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದರು. ಈ ಯೋಜನೆಯಿಂದಾಗಿ ಅಂತರ್‍ಜಲ ರಕ್ಷಣೆಯ ಜೊತೆಗೆ ಪಂಪ್‍ಸೆಟ್ ಮೂಲಕ ಜನತೆ ನೀರು ತಮ್ಮ ಜಮೀನುಗಳಿಗೆ ಬಳಸಬಹುದಾಗಿದೆ ಎಂದು ಹೇಳಿದರು.
ಲಾಲ್‍ಬಹದ್ದೂರ್ ಶಾಸ್ತ್ರಿ ಪಿಕಪ್‍ನಿಂದ ಪಾಂಡವಪುರ-ಹುಲಿಕೆರೆ ಕೊಪ್ಪಲು-ಬೇವುಕಲ್ಲು ಮಾರ್ಗವಾಗಿ ದುದ್ದ ಹೋಬಳಿಗೆ ನೀರೊದಗಿಸಲು ಪೈಪ್‍ಲೈನ್ ಅಳವಡಿಸಲು ಚಿಂತನೆ ನಡೆಸಲಾಗಿದೆ. ಈ ಯೋಜನೆ ಅನುಷ್ಠಾನದಿಂದಾಗಿ ಕೃಷಿ ಮತ್ತು ಕುಡಿಯುವ ನೀರಿನ ಸಮಸ್ಯೆ ಶಾಶ್ವತವಾಗಿ ನೀಗಿಸಲು ಇದೊಂದು ಉತ್ತಮ ಬೆಳವಣಿಗೆಯಾಗಿದೆ ಎಂದು ತಿಳಿಸಿದರು.
ಮುದಗಂದೂರು, ಹುಲಿಕೆರೆಕೊಪ್ಪಲು, ದುದ್ದ, ಬಂಕನಹಳ್ಳಿ, ಜವನಹಳ್ಳಿ, ಬಂತಪ್ಪನಕೊಪ್ಪಲು, ಮಾದೇಶ್ವರ, ಬಿ.ಹಟ್ನ, ಮಾದೇಗೌಡನಕೊಪ್ಪಲು, ಮಾರಚಾಕನಹಳ್ಳಿ, ತಿಪ್ಪಾಪುರ ಸೇರಿದಂತೆ 39 ಕೆರೆಗಳಿಗೆ ನೀರು ತುಂಬಿಸಬಹುದಾಗಿದೆ ಎಂದು ಅಭಿಪ್ರಾಯಪಟ್ಟದರು.
ಕಾವೇರಿ ನೀರಾವರಿ ನಿಗಮದ ಕಾರ್ಯಪಾಲಕ ಅಭಿಯಂತರ ಚಂದ್ರಕುಮಾರ್, ಸಹಾಯಕ ಕಾರ್ಯಪಾಲಕ ಅಭಿಯಂತರ ಚಿದಂಬರನಾಥ್, ಸಹಾಯಕ ಇಂಜಿನಿಯರ್ ರಫಿ, ಪುಟ್ಟಮಾಯಿಗೌಡ, ಸರ್ವೇಯರ್ ಧರ್ಮರಾಜು, ಮುಖಂಡರಾದ ಶಂಭೂನಹಳ್ಳಿ ಸುರೇಶ್, ಆತ್ಮಾನಂದ ಸೇರಿದಂತೆ ಇತರರು ಈ ಸಂದರ್ಭದಲ್ಲಿ ಇದ್ದರು.

“ಕೊರಮ” ಎಂದು ನಮೂದಿಸುವಂತೆ ಜಿಲ್ಲಾ ಕುಳುವ ಸಮಾಜ ಮನವಿ
ಮಂಡ್ಯ: ಏಪ್ರಿಲ್ 11 ರಿಂದ 30ರವರೆಗೆ ನಡೆಯಲಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಕುಳುವ ಸಮಾಜದ ಬಂಧುಗಳು ಉಪ ಜಾತಿ ಕಲಂನಲ್ಲಿ “ಕೊರಮ” ಎಂದು ನಮೂದಿಸಬೇಕು ಎಂದು ಮಂಡ್ಯ ಜಿಲ್ಲಾ ಕುಳುವ ಸಮಾಜ ಮನವಿ ಮಾಡಿದೆ.
ಮುಂಬರುವ ದಿನಗಳಲ್ಲಿ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯವನ್ನು ಪಡೆದುಕೊಳ್ಳಲು ಈ ಸಮೀಕ್ಷೆ ಪ್ರಮುಖವಾದುದರಿಂದ ಜಿಲ್ಲೆಯ ಎಲ್ಲ ಕುಳುವ ಬಂಧುಗಳು ಎಚ್ಚರಿಕೆಯಿಂದ ಯಾವುದೇ ಪಂಗಡ,ಬೆಡಗುಗಳನ್ನು ನಮೂದಿಸದೆ “ಕೊರಮ” ಎಂದಷ್ಟೇ ನಮೂದಿಸಬೇಕು ಎಂದು ಜಿಲ್ಲಾ ಕುಳುವ ಸಮಾಜದ ಮುಖಂಡ ಗಣಂಗೂರು ವೆಂಕಟೇಶ್, ಸೋಮಶೇಖರ್ ತಿರುಮಲಾಪುರ, ಚಾಮಲಾಪುರ ರಾಮಕೃಷ್ಣ, ಮಾಲಗಾರನಹಳ್ಳಿ ವೆಂಕಟೇಶ್, ಗವಿರಂಗ ಮತ್ತಿತರ ಮುಖಂಡರು ಪ್ರಕಟಣೆಯಲ್ಲಿ ಕೋರಿದ್ದಾರೆ.

ಮುದ್ರಾ ಬ್ಯಾಂಕ್‍ಗೆ ಚಾಲನೆ ಅರ್ಥ ವ್ಯವಸ್ಥೆ ಬೆಳವಣಿಗೆಗೆ ಸಣ್ಣ ಉದ್ದಿಮೆದಾರರ ಕೊಡುಗೆ ಅಪಾರ: ಪ್ರಧಾನ ಮಂತ್ರಿ

ಮುದ್ರಾ ಬ್ಯಾಂಕ್‍ಗೆ ಚಾಲನೆ
ಅರ್ಥ ವ್ಯವಸ್ಥೆ ಬೆಳವಣಿಗೆಗೆ ಸಣ್ಣ ಉದ್ದಿಮೆದಾರರ ಕೊಡುಗೆ ಅಪಾರ: ಪ್ರಧಾನ ಮಂತ್ರಿ  

ದೇಶದ ಸಣ್ಣ ಉದ್ದಿಮೆದಾರರಿಗೆ ಆರ್ಥಿಕ ನೆರವು ನೀಡುವ ಉದ್ದೇಶದಿಂದ ಆರಂಭಿಸಲಾಗಿರುವ ‘ಮುದ್ರಾ ಬ್ಯಾಂಕ್’ಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ನವದೆಹಲಿಯಲ್ಲಿಂದು ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ದೇಶದ ಅರ್ಥ ವ್ಯವಸ್ಥೆಯ ಬೆಳವಣಿಗೆ ಮತ್ತು ಅಭಿವೃದ್ಧಿಗೆ ಸಣ್ಣ ಉದ್ದಿಮೆದಾರರು ಮಹತ್ತರ ಕೊಡುಗೆ ನೀಡುತ್ತಿದ್ದಾರೆ ಎಂದರು.

 ದೇಶದ ಸಣ್ಣ ಉದ್ದಿಮೆಗಳಲ್ಲ್ಲಿ ಸುಮಾರು 12 ಕೋಟಿ ಜನರು ದುಡಿಯುತ್ತಿದ್ದಾರೆ. ಇಂತಹ ಸಣ್ಣ ವ್ಯಾಪಾರಿಗಳು ನಿರಂತರವಾಗಿ ಸಾಲದಾರರಿಂದ ಶೋಷಣೆಗೊಳಗಾಗುತ್ತಿದ್ದಾರೆ. ‘ಮುದ್ರಾ ಬ್ಯಾಂಕ್’ ಮೂಲಕ  ಸಣ್ಣ ವ್ಯಾಪಾರಿಗಳಿಗೆ ಹಣಕಾಸಿನ ನೆರವು ನೀಡಲಾಗುತ್ತದೆ .ಈ ಮೂಲಕ ಅವರ ಆತ್ಮ ವಿಶ್ವಾಸವನ್ನು ಹೆಚ್ಚಿಸಲಾಗುತ್ತದೆ ಎಂದು ಪ್ರಧಾನ ಮಂತ್ರಿ ಹೇಳಿದರು.  ಗುಜರಾತ್‍ನ ಮುಖ್ಯ ಮಂತ್ರಿಯಾಗಿದ್ದ ಸಂದರ್ಭದಲ್ಲಿ ಸಾವಿರಾರು ಬಡ ಮುಸಲ್ಮಾನರಿಗೆ ಉದ್ಯೋಗ ಕಲ್ಪಿಸಿದ್ದ ಪರಿಸರ ಸ್ನೇಹಿ ಗಾಳಿಪಟ ಉದ್ದಿಮೆಗೆ ತಾವು ನೀಡಿದ ಬೆಂಬಲವನ್ನು ಪ್ರಧಾನ ಮಂತ್ರಿ ಈ ಸಂದರ್ಭದಲ್ಲಿ ಸ್ಮರಿಸಿದರು.

ಕೃಷಿ ವಲಯದಲ್ಲಿ ಮೌಲ್ಯ ವರ್ಧನೆ ಕುರಿತು ಮಾತನಾಡಿದ ಪ್ರಧಾನ ಮಂತ್ರಿ ನಾವು ಸಮುದಾಯ ಮಟ್ಟದಲ್ಲಿ ಕೃಷಿ ಕ್ಷೇತ್ರದ ಮೌಲ್ಯ ವರ್ಧನೆಯಲ್ಲಿ ನಿರತ ರೈತರ ಜಾಲವನ್ನು ಸೃಷ್ಠಿಸಬೇಕು. ಅಕಾಲಿಕ ಮಳೆ ಮತ್ತ ಹವಾಮಾನ ವೈಪರಿತ್ಯಗಳಿಂದ ತೊಂದರೆಗೊಳಗಾಗುತ್ತಿರುವ ದೇಶದ ರೈತರ ಕುರಿತು ನಾವು ಆಲೋಚಿಸಬೇಕು ಎಂದರು.

ಈ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಜನಧನ ಯೋಜನೆ ಅನುಷ್ಠಾನದಲ್ಲಿ ದೇಶದ ಬ್ಯಾಂಕ್‍ಗಳ ಪರಿಶ್ರಮವನ್ನು ಪ್ರಧಾನಮಂತ್ರಿ ಶ್ಲಾಘಿಸಿದರು.

ಕೇಂದ್ರ ಹಣಕಾಸು ಸಚಿವ ಶ್ರೀ ಅರುಣ್ ಜೇಟ್ಲಿ, ಹಣಕಾಸು ಖಾತೆಯ ರಾಜ್ಯ ಸಚಿವ ಶ್ರೀ. ಜಯಂತ್ ಸಿನ್ಹಾ, ಭಾರತೀಯ ರಿಸರ್ವ್  ಬ್ಯಾಂಕ್ ಗವರ್ನರ್ ಶ್ರೀ ರಘರಾಮ್ ರಾಜನ್ ಮತ್ತಿತರರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

ವಿಶ್ವ ಆರೋಗ್ಯ ದಿನ: ಕೇಂದ್ರ ಕ್ಷೇತ್ರ ಪ್ರಚಾರ ನಿರ್ದೇಶನಾಲಯದಿಂದ “ಮಿಷನ್ ಇಂದ್ರಧನುಷ್” ಕುರಿತ ವಿಶೇಷ ಜಾಗೃತಿ ಕಾರ್ಯಕ್ರಮ



ಈವತ್ತಿನ ಸಮಾಜದಲ್ಲಿ ಜನರಲ್ಲಿ ಆರೋಗ್ಯ ಕುರಿತಾದ ಕಾಳಜಿ ಹೆಚ್ಚಾಗುತ್ತಿದ್ದು ರೋಗ ಬಂದ ಮೇಲೆ ಅದಕ್ಕೆ ಮದ್ದು ಪಡೆಯುವುದಕ್ಕಿಂತ ರೋಗ ತಡೆಯತ್ತ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂದು ವೈದ್ಯಾಧಿಕಾರಿ ಡಾ: ಕಾವೇರಿ ನಾಣಯ್ಯ ತಿಳಿಸಿದರು. .07: ವಿಶ್ವ ಆರೋಗ್ಯ ದಿನದ ಹಿನ್ನೆಲೆಯಲ್ಲಿಂದು ಶ್ರೀರಂಗಪಟ್ಟಣ ತಾಲೂಕು ಮೇಳಾಪುರ ಗ್ರಾಮದಲ್ಲಿ ಮಿಷನ್ ಇಂದ್ರ ಧನುಷ್ ಯೋಜನೆ ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು.
ಭಾರತ ಸರ್ಕಾರದ ಕ್ಷೇತ್ರ ಪ್ರಚಾರ ನಿರ್ದೇಶನಾಲಯದ ಮೈಸೂರು-ಮಂಡ್ಯ ಘಟಕ ಏರ್ಪಡಿಸಿದ್ದ ಕಾರ್ಯಕ್ರಮಕ್ಕೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ, ಶ್ರೀರಂಗಪಟ್ಟಣ ತಾಲೂಕು ಮತ್ತು ಮೇಳಾಪುರ ಗ್ರಾಮ ಪಂಚಾಯತಿ ಸಹಯೋಗ ಒದಗಿಸಿದ್ದವು.
ದೈಹಿಕ ಹಾಗೂ ಮಾನಸಿಕ ಖಾಯಿಲೆಗಳ ಬಗ್ಗೆ ವಿಸ್ತøತ ವಿವರಣೆ ನೀಡಿದ ವೈದ್ಯರು ಅವುಗಳನ್ನು ಮೊದಲ ಹಂತದಲ್ಲೇ ಪತ್ತೆ ಹಚ್ಚಿ ವೈದ್ಯರ ಸಲಹೆಯೊಂದಿಗೆ ಉಲ್ಬಣಿಸದಂತೆ ನೋಡಿಕೊಳ್ಳಬೇಕೆಂದು ಡಾ: ಕಾವೇರಿ ಸಲಹೆ ನೀಡಿದರು. ಮೇಳಾಪುರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಜನತೆ ಆರೋಗ್ಯ ಸಂಬಂಧಿಸಿದಂತೆ ಸರ್ಕಾರ ಕೊಡುತ್ತಿರುವ ಸವಲತ್ತುಗಳನ್ನು ಚೆನ್ನಾಗಿ ಬಳಸಿಕೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತ ಪಡಿಸಿದರು.
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರಾದ ಡಾ: ಎಚ್. ಪಿ. ಮಂಜುಳಾ ಮಾತನಾಡುತ್ತಾ ಸಾಗುವಳಿಯಿಂದ ಸೇವನೆವರೆಗೆ ಸಮೃದ್ಧ ಆಹಾರ ಎಂಬ ಸೂತ್ರ ಅವಡಿಸಿಕೊಂಡರೆ ಪ್ರತಿಯೊಬ್ಬರ ಆರೋಗ್ಯವೂ ತಂತಾನೆ ಸುಸ್ಥಿತಿಯಲ್ಲಿರುತ್ತದೆ ಎಂದು ಹೇಳಿದರು. ಉತ್ತಮ ಆರೋಗ್ಯ ಉತ್ತಮ ದೈಹಿಕ ಸಾಮಥ್ರ್ಯವನ್ನು ನಿರ್ಮಿಸುತ್ತದೆ ಎಂದೂ ಅವರು  ಪ್ರತಿಪಾದಿಸಿದರು.
ಕ್ಷೇತ್ರ ಪ್ರಚಾರ ನಿರ್ದೇಶನಾಲಯ, ಮೈಸೂರು-ಮಂಡ್ಯ ವಲಯದ ಮುಖ್ಯಸ್ಥರಾದ ಡಾ: ಟಿ.ಸಿ.ಪೂರ್ಣಿಮಾ ಅವರು ಮಿಷನ್ ಇಂದ್ರಧನುಷ್ ಯೋಜನೆ ಮಕ್ಕಳಲ್ಲಿ 9 ವಿಧದ ರೋಗಗಳನ್ನು ಪ್ರತಿರೋಧಿಸುವಂಥ ಲಸಿಕೆ ಪೂರೈಸುವÀ ಕಾರ್ಯಕ್ರಮವಾಗಿದೆ; ವಾರ್ಷಿಕ 2 ಕೋಟಿಗೂ ಹೆಚ್ಚು ಮಕ್ಕಳಿಗೆ ಚುಚ್ಚುಮದ್ದು ನೀಡುವ ಗುರಿ ಈ ಯೋಜನೆಯಡಿಯಲ್ಲಿದೆ. ಸರ್ಕಾರ ಕೊಡಮಾಡುವ ಯೋಜನೆಗಳ ಲಾಭ ಪಡೆದುಕೊಳ್ಳಲು ಜನತೆ ತುದಿಗಾಲಿನಲ್ಲಿ ನಿಲ್ಲಬೇಕು ಎಂದು ಹೇಳಿದರು.
ಇತ್ತೀಚೆಗೆ ದೊರೆತಿರುವ ಮಾಹಿತಿಯಂತೆ ವರ್ಷದಲ್ಲಿ ಸುಮಾರು 89 ಲಕ್ಷ ಮಕ್ಕಳು ಸಾರ್ವತ್ರಿಕ ಲಸಿಕಾ ವ್ಯವಸ್ಥೆಯಲ್ಲಿ ಲಭ್ಯವಿರುವ ಎಲ್ಲಾ ಲಸಿಕೆಗಳನ್ನು ಪಡೆಯುವುದೇ ಇಲ್ಲ. ಲಸಿಕೆಗಳನ್ನು ಪಡೆಯದೆ ಅಥವಾ ಭಾಗಶಃ ಪಡೆದ ಮಕ್ಕಳು ಬಾಲ್ಯದಿಂದಲೇ ಉಂಟಾಗುವ ಖಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಡಾ: ಟಿ.ಸಿ. ಪೂರ್ಣಿಮಾ ಮಾಹಿತಿ ನೀಡಿದರು.ಕಾರ್ಯಕ್ರಮವನ್ನು ಮೇಳಾಪುರ ಗ್ರಾಮ ಪಂಚಾಯತಿ ಅಧ್ಯಕ್ಷೆ ಶ್ರೀಮತಿ ಮಹದೇವಮ್ಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಆರೋಗ್ಯ ಕಾರ್ಯಕರ್ತರು ಉತ್ತÀಮ ಸಲಹೆಗಳನ್ನು ಜನರಿಗೆ ನೀಡಿದರು. ಆರೋಗ್ಯ, ನೈರ್ಮಲ್ಯ ಹಾಗೂ ಸ್ವಚ್ಛತೆಗೆ ಸಂಬಂಧಿಸಿದಂತೆ ನಡೆಸಿದ ರಸಪ್ರಶ್ನೆ ಕಾರ್ಯಕ್ರಮದಲ್ಲಿ ವಿಜೇತರಾದವರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ಲೀಲಾ, ಗ್ರಾಮದ ಮುಖಂಡರಾದ ಪ್ರಾಣೇಶ್, ಜಯರಾಂ, ಸುಮತಿ, ಲಕ್ಷ್ಮಿ ಮತ್ತಿತರರು ಹಾಜರಿದ್ದರು.


ಸಲಹಾ ಸಮಿತಿ ಸಭೆ

ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳು ಹಾಗೂ ಪ್ಲಾಸ್ಟಿಕ್ ಪಾರ್ಕ್‍ಗಳ ಕುರಿತು ಸಂಸದರೊಂದಿಗೆ ಶ್ರೀ. ಅನಂತ್ ಕುಮಾರ್ ಚರ್ಚೆ
ಏಪ್ರಿಲ್ 8, 2015

ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಶ್ರೀ ಅನಂತ್ ಕುಮಾರ್ ನೇತೃತ್ವದಲ್ಲಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವಾಲಯಕ್ಕೆ ಸಂಬಂಧಿಸಿದ ಸಂಸದರ ಸಲಹಾ ಸಮಿತಿ ಸಭೆ ನಿನ್ನೆ ನವದೆಹಲಿಯಲ್ಲಿ ನಡೆಯಿತು. ‘ಪೆಟ್ರೋಲಿಯಂ, ರಾಸಾಯನಿಕ ಮತ್ತು ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳು ಹಾಗೂ ಪ್ಲಾಸ್ಟಿಕ್ ಪಾರ್ಕ್‍ಗಳು’ ಎಂಬ ವಿಷಯದ ಕುರಿತು ಸಭೆಯಲ್ಲಿ ಚರ್ಚೆ ನಡೆಸಲಾಯಿತು.  ನಿಗಧಿತ ಅವಧಿಯಲ್ಲಿ ಪೆಟ್ರೋರಾಸಾಯನಿಕ ಹೂಡಿಕೆ ಪ್ರದೇಶಗಳಲ್ಲಿ ರೂಪಾಯಿ 7,62,000 ಕೋಟಿ ಹೂಡಿಕೆಯನ್ನು ಗಳಿಸಿ ಸುಮಾರು 34 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸುವುದು ಮೋದಿ ಸರ್ಕಾರದ ಗುರಿ ಎಂದು ಸಚಿವರು ಸಭೆಯಲ್ಲಿ ತಿಳಿಸಿದರು.

 ಹೆಚ್ಚುತ್ತಿರುವ ಬೇಡಿಕೆಗೆ ಅನುಗುಣವಾಗಿ ಪ್ಲಾಸ್ಟಿಕ್ ಪಾರ್ಕ್‍ಗಳ ಸಂಖ್ಯೆಯನ್ನು 4 ರಿಂದ 10ಕ್ಕೇರಿಸುವುದು ಮೋದಿ ಸರ್ಕಾರದ ಉಪಕ್ರಮಗಳಲ್ಲೊಂದು ಎಂದು ಸಚಿವರು ಸಲಹಾ ಸಮಿತಿ ಸದಸ್ಯರಿಗೆ ತಿಳಿಸಿದರು.  ಹೆಚ್ಚುವರಿ ಸಾಮಥ್ರ್ಯ ಸೃಷ್ಠಿಗಾಗಿ ಸಿಪೆಟ್ ( ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಇಂಜಿನಿಯರಿಂಗ್) ಗಳ ಸಂಖ್ಯೆಯನ್ನು 23 ರಿಂದ 100 ಕ್ಕೇರಿಸಲಾಗುವುದು ಎಂದು ಸಚಿವರು ತಿಳಿಸಿದರು.

 ಜೈವಿಕವಲ್ಲದ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆಗೊಳಿಸುವುದರ ಜತೆಗೆ  ಇತರ ಪಾಲಿಮರ್‍ಗಳ ಮರುಬಳಕೆಗೆ ಹೆಚ್ಚಿನ ಒತ್ತು ನೀಡಲಾಗುವುದು. ಪ್ಲಾಸ್ಟಿಕ್ ಕೈಗಾರಿಕೆಯಲ್ಲಿ ಪರಿಸರ ಸ್ನೇಹಿ ಕ್ರಮಗಳನ್ನು ಪ್ರೋತ್ಸಾಹಿಸಲು ಪ್ಲಾಸ್ಟಿಕ್ ಪರಿಷ್ಕರಣೆಯಲ್ಲಿ ಹಸಿರು ತಂತ್ರಜ್ಞಾನ ಬಳಕೆಗೆ ಸರ್ಕಾರ ಪ್ರಶಸ್ತಿಗಳನ್ನು ನೀಡಲಿದೆ ಎಂದು ಸಚಿವ ಶ್ರೀ ಅನಂತ್ ಕುಮಾರ್ ಸಭೆಯಲ್ಲಿ ತಿಳಿಸಿದರು.

ಸಭೆಯಲ್ಲಿ ಸಚಿವರು ಸಂಸದರ ಹಲವು ಸಮಸ್ಯೆಗಳಿಗೆ ಸ್ಪಂದಿಸಿದರು. ರಾಸಾಯನಿಕ ಮತ್ತು ರಸಗೊಬ್ಬರ ಖಾತೆಯ ರಾಜ್ಯ ಸಚಿವ ಶ್ರೀ ಹನ್ಸ್‍ರಾಜ್ ಗಂಗಾರಾಮ್ ಅಹಿರ್ ಸಭೆಯಲ್ಲಿ ಉಪಸ್ಥಿತರಿದ್ದರು.  

Tuesday, 7 April 2015

ಬೆಂಗಳೂರು: 2014ನೇ ಸಾಲಿನ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪ್ರಕಟವಾಗಿದೆ ಇದೇ ಏಪ್ರಿಲ್ 16ರಂದು ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.
ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಪತ್ರಕರ್ತರಿಗೆ ನೀಡಲಾಗುವ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿಯನ್ನು ಪ್ರಕಟಿಸಲಾಗಿದ್ದು, 2014ನೇ ಸಾಲಿನ ಸಾಮಾಜಿಕ ಸಮಸ್ಯೆ
ಲೇಖನಕ್ಕೆ ನೀಡುವ "ಅಭಿಮಾನಿ" ಪ್ರಶಸ್ತಿಯನ್ನು ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ವಿಜಯಕರ್ನಾಟಕ ವರದಿಗಾರ ಸಿದ್ಧಲಿಂಗಸ್ವಾಮಿ ಅವರು ಪಡೆದಿದ್ದಾರೆ, ಅತ್ಯುತ್ತಮ ಜಿಲ್ಲಾ
ಪತ್ರಿಕೆಗೆ ನೀಡುವ ಆಂದೋಲನ ಪ್ರಶಸ್ತಿಯನ್ನು ರಾಯಚೂರು ವಾಣಿ, ಮಾನವೀಯ ಸಮಸ್ಯೆ ಲೇಖನಕ್ಕೆ ನೀಡುವ ಮೈಸೂರು ದಿಗಂತ ಪ್ರಶಸ್ತಿಯನ್ನು, ಉತ್ತರ ಕನ್ನಡ ಜಿಲ್ಲೆಯ ಲೋಕದುನಿ ದಿನಪತ್ರಿಕೆಯ ವರದಿಗಾರ ಶ್ರೀಧರ ಅವರಿಗೆ ನೀಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಎಂ.ಎ.ಪೊನ್ನಪ್ಪ ಅಧ್ಯಕ್ಷತೆಯಲ್ಲಿ ಇಂದು ನಡೆದ ಸಭೆಯಲ್ಲಿ 2014ನೇ ಸಾಲಿನ ವಿಶೇಷ ಹಾಗೂ ವಾರ್ಷಿಕ ಪ್ರಶಸ್ತಿಯನ್ನು 34 ಮಂದಿಗೆ ನೀಡಲಾಗಿದೆ. ಪ್ರಶಸ್ತಿ ಪ್ರದಾನ ಸಮಾರಂಭ ಇದೇ ತಿಂಗಳ 16ರಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ನಡೆಯಲಿದ್ದು, ಪ್ರಶಸ್ತಿ ಪುರಸ್ಕೃತರಿಗೆ ತಲಾ 20,000 ನಗದು ಹಾಗೂ
ಪ್ರಶಸ್ತಿ ಫಲಕ ನೀಡಿ ಸನ್ಮಾನಿಸಲಾಗುವುದು.
ಪ್ರಶಸ್ತಿ ಪುರಸ್ಕೃತರ ಪಟ್ಟಿ
2014ರ ವಿಶೇಷ ಪ್ರಶಸ್ತಿ-ಎಂ.ಎಸ್. ಪ್ರಭಾಕರ್ (ಕಾಮರೂಪಿ)- (ಕೋಲಾರ)
2014ನೇ ಸಾಲಿನ ವಾರ್ಷಿಕ ಪ್ರಶಸ್ತಿ
1.ಕೋಟಿಗಾನಹಳ್ಳಿ ರಾಮಯ್ಯ - (ಕೋಲಾರ)
2. ಎಂ.ಕೆ. ಭಾಸ್ಕರರಾವ್ - (ಶಿವಮೊಗ್ಗ)
3. ಎಂ. ನಾಗರಾಜ - (ಮೈಸೂರು)
4. ಕೆ.ಬಿ. ರಾಮಪ್ಪ - (ಶಿವಮೊಗ್ಗ)
5.ಬಿ. ಹೊನ್ನಪ್ಪ ಭಾವಿಕೇರಿ - (ಅಂಕೋಲ-ಉ.ಕ)
6.ಗಾಯತ್ರಿ ನಿವಾಸ್ - (ಮಂಗಳೂರು)
7.ಲೀಲಾವತಿ - (ಹಾಸನ)
8.ಲಿಂಗೇನಹಳ್ಳಿ ಸುರೇಶ್ಚಂದ್ರ - (ಬೆಂಗಳೂರು)
9.ಇಫ್ತಿಕಾರ್ ಅಹಮದ್ ಶರೀಫ್ - (ಬೆಂಗಳೂರು)
10.ವೀರೇಂದ್ರ ಶೀಲವಂತ - (ಬಾಗಲಕೋಟೆ)
11.ರಿಜ್ವಾನ್ ಉಲ್ಲಾ ಖಾನ್ - (ಬೆಂಗಳೂರು)
12.ಬಿ.ಎಸ್. ಪ್ರಭುರಾಜನ್ - (ಮೈಸೂರು)
13. ಎಸ್. ನಾಗೇಂದ್ರ (ನೇತ್ರರಾಜು) - (ಮೈಸೂರು)
14.ದೇವೇಂದ್ರಪ್ಪ ಹೆಚ್. ಕಪನೂರಕರ್ - (ಕಲಬುರ್ಗಿ)
15.ಬಿ.ವಿ.ಗೋಪಿನಾಥ್ - (ಕೋಲಾರ)
16.ರೋನ್ಸ್ ಬಂಟ್ವಾಳ್ - (ಮುಂಬೈ) - ಹೊರನಾಡ ಕನ್ನಡಿಗರು
17.ಗಂಧರ್ವ ಸೇನಾ - (ಬೀದರ್)
18.ಶಿವಕುಮಾರ ಅಡಿವೆಪ್ಪ ಭೈಜಶೆಟ್ಟರ - (ಧಾರವಾಡ)
19.ಶಿವಾನಂದ ತಗಡೂರು - (ಹಾಸನ)
20. ವಿ.ನಂಜುಂಡಪ್ಪ - (ಬೆಂಗಳೂರು)
21. ಎಚ್.ಟಿ. ಅನಿಲ್ - (ಕೊಡಗು)
22. ಆಸ್ಟ್ರೋಮೋಹನ್ - (ಉಡುಪಿ)
23. ಬಸವರಾಜ ಹೊಂಗಲ್ - (ಧಾರವಾಡ)
24. ಸಿ.ಎನ್. ರಾಜು (ಮಣ್ಣೆರಾಜು) - (ತುಮಕೂರು)
25. ನಾಗಲಕ್ಷ್ಮಿ ಬಾಯಿ - (ದಾವಣಗೆರೆ)
26.ನಾಯಕ ಗಂಗೊಳ್ಳಿ - (ಉಡುಪಿ)
27.ಎನ್.ರವಿಕುಮಾರ್ - (ಶಿವಮೊಗ್ಗ)
28.ವಿಲಾಸ್ ಮೇಲಗಿರಿ - (ಹಾವೇರಿ)
29.ಮಂಜುನಾಥ ಎಂ. ಅದ್ದೆ - (ಬೆಂಗಳೂರು)
30.ಲೈಕ್ ಎ. ಖಾನ್ - (ಮೈಸೂರು)
31.ರಕ್ಷಾ ಕಟ್ಟೆಬೆಳಗುಳಿ - (ಹಾಸನ)
32.ಎಸ್.ಲಕ್ಷ್ಮೀನಾರಾಯಣ - (ಕೋಲಾರ)
33.ಸಾಹುಕಾರ್ ಚಂದ್ರಶೇಖರ್ ರಾವ್ (ಸಾಚ) - (ಚಿಕ್ಕಮಗಳೂರು)
34.ಬಂಗ್ಲೆ ಮಲ್ಲಿಕಾರ್ಜುನ - (ಬಳ್ಳಾರಿ)

ನದಿ ಮೂಲದ ನೀರು ಸರಬರಾಜು ಯೋಜನೆಗೆ ಒತ್ತು: ಮುಖ್ಯಮಂತ್ರಿ

ನದಿ ಮೂಲದ ನೀರು ಸರಬರಾಜು ಯೋಜನೆಗೆ ಒತ್ತು: ಮುಖ್ಯಮಂತ್ರಿ

ಮೈಸೂರು, ಮಾರ್ಚ್8- ರಾಜ್ಯದೆಲ್ಲಡೆ ತಲೆದೂರಿರುವ ಕುಡಿಯುವ ನೀರಿನ ಸಮಸ್ಯೆಯ ಶಾಶ್ವತ ಪರಿಹಾರಕ್ಕಾಗಿ ನದಿ ಮೂಲದ ನೀರು ಸರಬರಾಜು ಯೋಜನೆಗೆ ರಾಜ್ಯ ಸರ್ಕಾರದವತಿಯಿಂದ ಹೆಚ್ಚಿನ ಒತ್ತು ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
 ನಿನ್ನೆ ತಾಲ್ಲೂಕಿನ ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಉದ್ಬೂರು ಗ್ರಾಮದಲ್ಲಿ ಹಮ್ಮಿಕೊಳ್ಳಲಾದ 72 ಕೋಟಿ ರೂ. ವೆಚ್ಚದ ಮೈಸೂರು ಮತ್ತು ನಂಜನಗೂಡು ತಾಲ್ಲೂಕಿನ ಮಾರ್ಗ ಮಧ್ಯದ 30 ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರು ಸರಬರಾಜು ಯೋಜನೆ ಸೇರಿದಂತೆ 102 ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಹಾಗೂ ಉದ್ಘಾಟನಾ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.
 ರಾಜ್ಯದಲ್ಲಿ ಬಹಳಷ್ಟು ಗ್ರಾಮಗಳು ಕುಡಿಯುವ ನೀರಿನ ಸಮಸ್ಯೆಗೊಳಗಾಗಿವೆ. ಅಂತರ್ಜಲ ದಿನದಿಂದ ದಿನಕ್ಕೆ  ಕುಸಿಯುತ್ತಿದೆ. ನೀರಿನ ಸಮಸ್ಯೆ ನೀಗಿಸಲು ನದಿಗಳಿರುವ ಜಿಲ್ಲೆಗಳು ಸೇರಿದಂತೆ ಅದರ ಸುತ್ತಮುತ್ತಲಿನ ಜಿಲ್ಲೆಗಳ ಗ್ರಾಮಗಳಿಗೆ ಆದ್ಯತೆ ಮೇರೆಗೆ ನದಿ ಮೂಲದ ನೀರು ಸರಬರಾಜು ಯೋಜನೆಯ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಬೇಸಿಗೆಯಲ್ಲಿ ಉದ್ಭವಿಸುವ ಸಮಸ್ಯೆಗಳನ್ನು ನೀಗಿಸಲು ರಾಜ್ಯ ಸರ್ಕಾರ ಈಗಾಗಲೇ ಮುನ್ನೆಚ್ಚರಿಕೆ ಕ್ರಮವಹಿಸಿದೆ ಎಂದು ಹೇಳಿದರು.
  ಚಾಮುಂಡೇಶ್ವರಿ ವಿಧಾನ ಸಭಾ ಕ್ಷೇತ್ರದ ಮೈಸೂರು ಮತ್ತು ನಂಜನಗೂಡು ತಾಲ್ಲೂಕಿನ ಮಾರ್ಗ ಮಧ್ಯದ 30 ಗ್ರಾಮಗಳಿಗೆ ನದಿ ಮೂಲದ ಕುಡಿಯುವ ನೀರು ಸರಬರಾಜು ಯೋಜನೆಯಡಿ ಕೈಗೆತ್ತಿಕೊಳ್ಳಲಾದ 32 ಕೋಟಿ ರೂ. ವೆಚ್ಚದ ಕಾಮಗಾರಿಯನ್ನು ಇಂದು ಉದ್ಘಾಟಿಸಲಾಗಿದೆ. ಇದರಿಂದ 72 ಸಾವಿರಕ್ಕೂ ಹೆಚ್ಚು  ಜನರು ಕುಡಿಯುವ ನೀರಿನ ಸೌಲಭ್ಯ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ 11 ಕೋಟಿ ರೂ. ವೆಚ್ಚದಲ್ಲಿ 11 ಗ್ರಾಮಗಳಿಗೆ ಈ ಯೋಜನೆಯನ್ನು ವಿಸ್ತರಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 ದಲಿತರು, ಮಹಿಳೆಯರು ಹಾಗೂ ಅಲ್ಪಸಂಖ್ಯಾತರಿಗೆ ನೀಡಲಾದ 1350 ಕೋಟಿ ರೂ. ಸಾಲ, ಬಡವರಿಗೆ ಮನೆ ನಿರ್ಮಾಣಕ್ಕಾಗಿ ನೀಡಲಾದ 2448 ಕೋಟಿ ರೂ. ಸಾಲ ಹಾಗೂ ಭಾಗ್ಯ ಜೋತಿ ಹಾಗೂ ಕುಠಿರ ಜೋತಿ ಯೋಜನೆಯಡಿ ಮಾಡಲಾದ ಸಾಲವನ್ನು ರಾಜ್ಯ ಸರ್ಕಾರÀ ಮನ್ನ ಮಾಡಿದೆÉ ಎಂದ ಮುಖ್ಯಮಂತ್ರಿಗಳು ಅನ್ನಭಾಗ್ಯ ಯೋಜನೆಯಡಿ ಒಂದು ರೂಪಾಯಿಗೆ 1 ಕೆ.ಜಿ ಅಕ್ಕಿ ಹಾಗೂ ಗೋದಿ ಸೌಲಭ್ಯವನ್ನು ಪಡೆಯುತ್ತಿರುವ ಬಡವರು 2015-2016ನೇ ಸಾಲಿನಿಂದ ಸಂಪೂರ್ಣ ಉಚಿತವಾಗಿ ಸೌಲಭ್ಯವನ್ನು ಪಡೆಯಲಿದ್ದಾರೆ ಎಂದರು.
 ರಾಜ್ಯ ಸರ್ಕಾರ 2015-2016ನೇ ಸಾಲಿಗೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಿ ವರ್ಗದವರ ಅಭಿವೃದ್ಧಿಗಾಗಿ 16,326 ಕೋಟಿ ರೂ. ಅನುದಾನವನ್ನು ಮೀಸಲಿರಿಸಿದೆ. ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಚುನಾಯಿತ ಜನ ಪ್ರತಿನಿಧಿಗಳು ಅನುದಾನವು ದುರ್ಬಳಕೆಯಾಗದಂತೆ ಎಚ್ಚರವಹಿಸಬೇಕು. ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟಿ ವರ್ಗದÀ ಅರ್ಹರು ಸೌವಲತ್ತಿನ ಸಂಪೂರ್ಣ ಉಪಯೋಗ ಪಡೆಯುವಂತಾಗಬೇಕು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
 ಬಡ ಮಕ್ಕಳಿಗೆ ಶಿಕ್ಷಣದಲ್ಲಿ ಉತ್ತೇಜಿಸಲು ಹಾಗೂ ಖಾಸಗಿ ಶಾಲೆಗಳ ಮಕ್ಕಳಂತೆ ಸಮಾನ ಬಾಳು ಬದುಕಲು ಪ್ರಸಕ್ತ ಸಾಲಿನಿಂದ ಸರ್ಕಾರಿ ಶಾಲೆÉಗಳಲ್ಲಿ ವ್ಯಾಸಂಗ ಮಾಡುವ 1 ರಿಂದ 10ನೇ ತರಗತಿಯ ಮಕ್ಕಳಿಗೆ ಒಂದು ಜತೆ ಶೂ ಸೇರಿದಂತೆ 2 ಜತೆ ಸಾಕ್ಸ್ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.  
 ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್,  ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್,  ವಿಧಾನಸಭಾ ಸದಸ್ಯರುಗಳಾದ ಜಿ.ಟಿ. ದೇವೇಗೌಡ, ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್, ಉಪಾಧ್ಯಕ್ಷೆ ಲೋಕಾಮಣಿ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು.

    ಮೈಸೂರು ವಿಶ್ವ ವಿಖ್ಯಾತ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ: ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು, ಮಾರ್ಚ್7. ಮೈಸೂರು ಜಿಲ್ಲೆಯನ್ನು ವಿಶ್ವದಲ್ಲೇ ಪ್ರಸಿದ್ಧ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಗೊಳಿಸಲು ರಾಜ್ಯ ಸರ್ಕಾರದವತಿಯಿಂದ ಎಲ್ಲಾ ರೀತಿ ಸೌಕರ್ಯಗಳನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಂಗಳವಾರ
ನಗರದ ಲಿಡ್ಕರ್ ಮೈದಾನದಲ್ಲಿ ನರಸಿಂಹ ರಾಜ ವಿಧಾನ ಸಭಾ ಕ್ಷೇತ್ರದಲ್ಲಿ 128 ಕೋಟಿ ವೆಚ್ಚದಲ್ಲಿ ಹಮ್ಮಿಕೊಳ್ಳಲಾದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಹಾಗೂ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿ ಅವರು ಮಾತನಾಡಿದರು.
 ಮೈಸೂರು ಜಿಲ್ಲೆಯಲ್ಲಿ ಪ್ರವಾಸಿಗರನ್ನು ಆರ್ಕಷಿಸುವ ಅನೇಕ ವಿಶ್ವ ವಿಖ್ಯಾತ ಐಸಿಹಾಸಿ ಸ್ಥಳಗಳಿವೆ. ಆದರೆ ಅ ಸ್ಥಳಗಳು ಮೂಲಭೂತ ಸೌಕರ್ಯದಿಂದ ವಂಚಿತವಾಗಿವೆÉ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ವಿಶೇಷ ಆಸಕ್ತಿವಹಿಸಿ ಮೈಸೂರು ಜಿಲ್ಲೆಯಲ್ಲಿರು ಪ್ರವಾಸಿ ತಾಣಗಳಲ್ಲಿ ಮೂಲ ಸೌಕರ್ಯವನ್ನು ಅಭಿವೃದ್ಧಿಗೊಳಿಸಲು ಆದ್ಯತೆ ಮೇರೆಗೆ ಅನುದಾನವನ್ನು ನೀಡಲಿದೆ. ಈಗಾಗಲೇ ಮೈಸೂರಿನಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿಗೊಳಿಸಲು 10 ಕೋಟಿ ರೂ. ಅನುದಾನದ ವಿಶೇಷ ಪ್ಯಾಕೇಜ್ ನೀಡಲಾಗಿದೆ. ಚಾಮುಂಡಿ ಬೆಟ್ಟಕ್ಕೆ ಪ್ರವಾಸಿಗರನ್ನು ಆಕರ್ಷಿಸಲು ರೋಪ್‍ವೇಯನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
  ರಾಜ್ಯ ಸರ್ಕಾರ ಮೈಸೂರಿನಲ್ಲಿ ಸೋಲಿಗ ಜನಾಂಗದ ಸಮುದಾಯ ಭವನದ ನಿರ್ಮಾಣಕ್ಕೆ 1 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ ಹಾಗೂ ವಿಶ್ವಕರ್ಮ ಸಮುದಾಯದವರನ್ನು ಅಭಿವೃದ್ಧಿಗೊಳಿಸದಲು ವಿಶ್ವಕರ್ಮ ಅಭಿವೃದ್ಧಿ ಮಂಡಳಿಯನ್ನು ರಚಿಸಿದೆ. ಅಲ್ಲದೇ ಇತರೆ ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
  ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಮೂಲಭೂತ ಸೌಕರ್ಯವನ್ನು ಅಭಿವೃದ್ಧಿಗೊಳಿಸಲು ರಾಜ್ಯ ಸರ್ಕಾರ ಬದ್ದವಾಗಿದ್ದು, ರಾಜ್ಯದ ಜನರು ನೆಮ್ಮಯಿಂದ ಬಾಳಲು ಶಾಂತಿಯುತ ವಾತಾವರಣ ನಿರ್ಮಾಣ ಮಾಡಲು ದಿನ ರಾತ್ರಿ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
  ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸ್ ಪ್ರಸಾದ್,  ಲೋಕೋಪಯೋಗಿ ಸಚಿವ ಡಾ|| ಹೆಚ್.ಸಿ. ಮಹದೇವಪ್ಪ, ಮೈಸೂರು ಮಹಾನಗರ ಪಾಲಿಕೆ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್,  ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಅನಂತು, ಮೈಸೂರು ಮಹಾನಗರ ಪಾಲಿಕೆ ಉಪ ಮಹಾಪೌರರು ಎಂ. ಮಹದೇವಮ್ಮ, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಎಲ್. ಮಾದಪ್ಪ, ತಾಲ್ಲೂಕು ಪಂಚಾಯತ್ ಅಧ್ಯಕ್ಷ ಜಿ. ಕುಮಾರ್ ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದರು