Monday 9 May 2016

ಬಸವಣ್ಣರವರತತ್ವ ಹಾಗೂ ಚಿಂತನೆ ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಸಿದ್ದರಾಮಯ್ಯ


 ತತ್ವ ಹಾಗೂ ಚಿಂತನೆ ಇಂದಿಗೂ ಪ್ರಸ್ತುತ: ಮುಖ್ಯಮಂತ್ರಿ ಸಿದ್ದರಾಮಯ್ಯ
    ಮೈಸೂರು,ಮೇ.9. ಜಗತ್ ಜ್ಯೋತಿ ಬಸವಣ್ಣ ನವರ  ತತ್ವ, ಆದರ್ಶ ಹಾಗೂ ಚಿಂತನೆಗಳೂ ಇಂದಿಗೂ ಮಾತ್ರವಲ್ಲ ಎಂದೆದಿಂಗೂ ಪ್ರಸ್ತುತ ಎಂದೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
       ಅವರು ಇಂದು ಮೈಸೂರಿನ ಕಲಾಮಂದಿರದಲ್ಲಿ ಜಿಲ್ಲಾಡಳಿತ ಹಾಗೂ  ಕನ್ನಡ ಮತ್ತು ಸಂಸ್ಕøತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಬಸವ ಜಯಂತಿ ಹಾಗೂ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ, ಬಸವಣ್ಣ ನವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿದ ನಂತರ  ಮಾತನಾಡಿದರು.
ಮನುಷ್ಯರಾಗಿ ಹುಟ್ಟುವ ನಾವು ಚಿಕ್ಕವಯಸ್ಸಿನಲ್ಲಿ ಬೆಳೆಯುವಾಗ ಯಾವುದೇ ಜಾತಿ, ಧರ್ಮದ ಬೇಧವಿಲ್ಲದೇ ಬೆಳೆಯುತ್ತೇವೆ. ಮನುಷ್ಯರಾಗಿ ಹುಟ್ಟುವ ನಾವು ಯಾವುದೇ ಜಾತಿ, ಮತ, ಧರ್ಮದ ಹೆಸರನ್ನು ಹಣೆಪಟ್ಟಿಗೆ ಕಟ್ಟುಕೊಳ್ಳದೇ ಮನುಷ್ಯರಾಗಿ ಮರಣ ಹೊಂದುವುದೇ ನಾವು ಈ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆ ಎಂದರು.
       12 ನೇ ಶತಮಾನದಲ್ಲಿಯೇ ಬಸವಣ್ಣನವರು ಜಾತಿ ಪದ್ಧತಿ, ಸಮಾಜದಲ್ಲಿ ಕೆಳವರ್ಗದ ಜನರಿಗೆ ಸಮಾನತೆ, ಮಹಿಳಾ ಸಮಾನತೆ, ಆರ್ಥಿಕ ಸಮಾನತೆಗಾಗಿ ಹೋರಾಟ ನಡೆಸಿದರು. ಇಂದಿಗೂ ನಾವು ಸಮಾಜದಲ್ಲಿ ಕೆಳ ವರ್ಗದ ಜನರಿಗೆ  ದೇವಸ್ಥಾನಕ್ಕೆ ಪ್ರವೇಶ ನಿಷೇಧ, ಮೌಡ್ಯ, ಕಂದಾಚಾರ ಮುಂತಾದ ಪ್ರಕರಣಗಳನ್ನು ನೋಡುತ್ತಿರುವುದು ಚಿಂತಾಜನಕ ವಿಷಯವಾಗಿದೆ ಎಂದರು.
       ಸಮಾಜದಲ್ಲಿ ಎಲ್ಲರೂ ಸಮಾನರು, ಎಲ್ಲರೂ ನಮ್ಮವರು ಎಂಬ ಬಸವಣ್ಣನವರ ಆದರ್ಶವನ್ನು ಪ್ರಮಾಣಿಕವಾಗಿ ಪಾಲಿಸಿದರೆ ನಾವು ಬಸವಣ್ಣನವರಿಗೆ ಸಲ್ಲಿಸುವ ದೊಡ್ಡ ಗೌರವ ಹಾಗೂ ಬಸವಣ್ಣ ನವರು ಕಂಡ ಸಮ ಸಮಾಜ ಎಂಬ ಕನಸು ನೆನಸಾಗುತ್ತದೆ ಎಂದರು.
      12 ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಮಹಿಳೆಯರಿಗೆ ಹಾಗೂ ಕೆಳವರ್ಗದವರಿಗೆ ಶೇ 90 ರಷ್ಟು ಸ್ಥಾನ ನೀಡಲಾಗಿತ್ತು. ಅಕ್ಷರ ವಂಚಿತರು, ಕೆಳವರ್ಗದವರು, ಮಹಿಳೆಯರು ತಮ್ಮ ನೋವುಗಳ ಬಗ್ಗೆ  ಚರ್ಚಿಸಿ ವಚನಗಳಲ್ಲಿ ವ್ಯಕ್ತ ಪಡಿಸುತ್ತಿದ್ದರು. ಬಸವಣ್ಣನವರು ಕಾಯಕ ವರ್ಗ ಎಂಬುದನ್ನು ತಿಳಿಸಿದರು. ಕಾಯಕ ಎಂದರೇ ನ್ಯಾಯವಾಗಿ ದುಡಿಯಬೇಕು. ದುಡಿಮೆಯಿಂದ ಗಳಿಸಿದ ಹಣವನ್ನು ಸಮಾನವಾಗಿ ಹಂಚಿಕೆಯಾಗಬೇಕು. ಕಾರ್ಲ್ ಮಾಕ್ಸ್ ಅವರು 19 ನೇ ಶತಮಾನದಲ್ಲಿ ಯಾರು ದುಡಿಯುತ್ತರೋ ಅವರಿಗೆ ಆಹಾರ ಸೇವಿಸುವ ಹಕ್ಕಿದೆ ಎಂದರು. ಒಟ್ಟಾರೆ ಮಹಾನ್ ವ್ಯಕ್ತಿಗಳು ಕಾಯಕವೇ ಮನುಷ್ಯನ ಲಕ್ಷಣ ಎಂದು ತಿಳಿಸಿದ್ದಾರೆ ಎಂದರು.
      ರಾಷ್ಟ್ರನಾಯಕರು, ದಾರ್ಶನಿಕರ ಜಯಂತಿ ಆಚರಿಸುವ ಸಂದರ್ಭದಲ್ಲಿ ಸಮಾಜಕ್ಕೆ ಗಣನೀಯ ಕೊಡುಗೆ ನೀಡಿದವರನ್ನು ಗುರುತಿಸಿ ಗೌರವಿಸಲಾಗುವುದು. ಈ ಬಾರಿಯ ಬಸವ ಜಯಂತಿಯಲ್ಲಿ ಬಸವ ರಾಷ್ಟ್ರೀಯ ಪುರಸ್ಕಾರ 2015 ನೀಡಲು ಜನಪದ ಹಾಗೂ ವಚನ ಸಾಹಿತ್ಯದಲ್ಲಿ ಅಪಾರ ಕೊಡುಗೆ ನೀಡಿರುವ  ಡಾ. ಗೊ.ರು. ಚನ್ನಬಸಪ್ಪ  ಅವರನ್ನು ಸಮಿತಿ ಆಯ್ಕೆ ಮಾಡಿರುತ್ತದೆ. ಇದು ಸಂತೋಷದ ವಿಷಯವಾಗಿದೆ  ಎಂದರು.
  ಇದೇ ಸಂದರ್ಭದಲ್ಲಿ ಡಾ. ಗೊ.ರು. ಚನ್ನಬಸಪ್ಪ ಅವರಿಗೆ ಬಸವ ರಾಷ್ಟ್ರೀಯ ಪುರಸ್ಕಾರ ಪ್ರದಾನ ಮಾಡಿದರು. ಚಾಮರಾಜನಗರ ಜಿಲ್ಲೆಯ ಮೊದಲ ಗ್ಯಾಸೆಟಿಯರ್‍ನ್ನು ಬಿಡುಗಡೆ ಮಾಡಿದರು.  ಶಾಸಕ ವಾಸು ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸುತ್ತೂರು ಸುಕ್ಷೇತ್ರದ ಶ್ರೀ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿ ಅವರ ದಿವ್ಯಸಾನಿಧ್ಯ ವಹಿಸಿದ್ದರು.  ಹಿರಿಯ ಚಿಂತಕ ರಂಜಾನ್ ದರ್ಗಾ ಅವರು ಬಸವಣ್ಣನವರ ಕುರಿತು ಉಪನ್ಯಾಸ ನೀಡಿದರು.   ಪ್ರಶಸ್ತಿ ಪುರಸ್ಕøತ ಭಾಗವಹಿಸಲಿದ್ದಾರೆ.
     ಕಂದಾಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಶ್ರೀನಿವಾಸಪ್ರಸಾದ್, ಸಹಕಾರ ಸಚಿವ ಹೆಚ್.ಎಸ್. ಮಹಾದೇವ ಪ್ರಸಾದ್, ಕನ್ನಡ ಮತ್ತು ಸಂಸ್ಕøತಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನರ, ಹಿರಿಯ ನಾಗರಿಕರ ಸಬಲೀಕರಣ ಸಚಿವೆ ಉಮಾಶ್ರೀ, ವಿಧಾನಸಭಾ ಸದಸ್ಯರುಗಳಾದ ತನ್ವೀರ್ ಸೇಠ್, ಎಂ.ಕೆ. ಸೋಮಶೇಖರ್, ವಿಧಾನ ಪರಿಷತ್ ಸದಸ್ಯರಾದ  ಗೋ. ಮಧುಸೂಧನ್, ಆರ್. ಧರ್ಮಸೇನ, ಕಾವೇರಿ ಪ್ರದೇಶಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಸಿ. ದಾಸೇಗೌಡ, ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಕೆ.ಆರ್. ಮೋಹನ್‍ಕುಮಾರ್, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ರೀಹಾನಬಾನು, ಹಾಗೂ ಇನ್ನಿತರ ಗಣ್ಯರು ಕಾರ್ಯಕ್ರಮದಲ್ಲಿ  ಭಾಗವಹಿಸಿದ್ದ

No comments:

Post a Comment