Monday 2 May 2016

ಮಂಡ್ಯ, ಮೇ.2- ಜಿಲ್ಲಾ ಪಂಚಾಯಿತಿ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಇಂದು ನಡೆದ ಚುನಾವಣೆಯಲ್ಲಿ ಜಾ.ದಳ ಪಕ್ಷದ ಅಭ್ಯರ್ಥಿಗಳಾದ ಪ್ರೇಮಕುಮಾರಿ ಅಧ್ಯಕ್ಷರಾಗಿ ಹಾಗೂ ಗಾಯಿತ್ರಿ ರೇವಣ್ಣ ಉಪಾಧ್ಯಕ್ಷರಾಗಿ ಆಯ್ಕೆಯಾದರು.
41 ಸದಸ್ಯ ಬಲದ ಮಂಡ್ಯ ಜಿಲ್ಲಾ ಪಂಚಾಯತ್‍ನಲ್ಲಿ ಜೆಡಿಎಸ್ 27, ಕಾಂಗ್ರೆಸ್ 13 ಸ್ಥಾನಗಳಿಸಿದ್ದರೆ ಓರ್ವ ಪಕ್ಷೇತರ ಸದಸ್ಯರು ಆಯ್ಕೆಯಾಗಿದ್ದರು.
ಅಧ್ಯಕ್ಷ ಸ್ಥಾನಕ್ಕೆ ಜಾ.ದಳ ಪಕ್ಷದಿಂದ ಅಧಿಕøತ ಅಭ್ಯರ್ಥಿಯಾಗಿ ಪಕ್ಷದ ಹಿರಿಯ ಸದಸ್ಯೆ ಕೆ.ಆರ್.ಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಜಿ.ಪಂ. ಸದಸ್ಯೆ ಜೆ.ಪ್ರೇಮಕುಮಾರಿ ಹಾಗೂ ಅದೇ ತಾಲ್ಲೂಕಿನ ಉಪಾಧ್ಯಕ್ಷ ಸ್ಥಾನಕ್ಕೆ ಬೂಕನಕೆರೆ ಕ್ಷೇತ್ರದ ಪಿ.ಕೆ.ಗಾಯಿತ್ರಿ ರೇವಣ್ಣಅವರನ್ನು ಜಾ.ದಳ ಜಿಲ್ಲಾಧ್ಯಕ್ಷ ಡಿ.ರಮೇಶ್ ಘೋಷಣೆ ಮಾಡಿದರು. ಕಾಂಗ್ರೆಸ್ ಪಕ್ಷದಿಂದ ಮಳವಳ್ಳಿ ತಾಲ್ಲೂಕಿನ ಬೆಳಕವಾಡಿ ಜಿ.ಪಂ. ಸದಸ್ಯ ಜಯಕಾಂತ ಅಂಕರಾಜು ಹಾಗೂ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೋಳ ಜಿ.ಪಂ. ಸದಸ್ಯೆ ಸವಿತಾ ನಾಮಪತ್ರ ಸಲ್ಲಿಸಿದ್ದರು. ಪ್ರೇಮಕುಮಾರಿ ಹಾಗೂ ಗಾಯಿತ್ರಿ ರೇವಣ್ಣ 27 ಮತಗಳ ಪಡೆಯುವ ಮೂಲಕ ಜಯಕಾಂತ ಅಂಕರಾಜು, ಸವಿತಾರವರನ್ನು (13)ಯವರನ್ನು 14 ಮತಗಳ ಅಂತರದಲ್ಲಿ ಸೋಲಿಸಿದರು.
 ಅಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ಪಕ್ಷದಲ್ಲಿ ಪ್ರಬಲ ಆಕಾಂಕ್ಷಿತರಾಗಿದ್ದ  ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಕ್ಷೇತ್ರದ ಎಸ್.ನಾಗರತ್ನಸ್ವಾಮಿ, ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಲಕ್ಷ್ಮೀಸಾಗರ ಕ್ಷೇತ್ರದ ಶಾಂತಲರಾಮಕೃಷ್ಣ, ಹೊಳಲು ಕ್ಷೇತ್ರದ ಅನುಪಮ ಕುಮಾರಿ, ದುದ್ದ ಕ್ಷೇತ್ರದ ಸುಧಾಜಯಶಂಕರ್ ಹಾಗೂ ನಾಗಮಂಗಲ ತಾಲ್ಲೂಕಿನ ದೇವಲಾಪುರ ಕ್ಷೇತ್ರದ ಹೆಚ್.ಸಿ.ರುಕ್ಮಿಣಿ ಶಂಕರ್ ಅವರನ್ನು ಸಮಾಧಾನಪಡಿಸಿದ ಜೆಡಿಎಸ್ ವರಿಷ್ಠರು ಅಂತಿಮವಾಗಿ ಪಕ್ಷದ ಹಿರಿಯ ಸದಸ್ಯೆ ಜೆ.ಪ್ರೇಮಕುಮಾರಿ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡುವ ಮೂಲಕ ಜೆಡಿಎಸ್‍ನಲ್ಲಿ ಉಂಟಾಗಬಹುದಾಗಿದ್ದ ವ್ಯತಿರಿಕ್ತ ಪರಿಣಾಮಕ್ಕೆ ಇತಿಶ್ರೀ ಹಾಡಲು ಮುಂದಾದರೂ ಭಿನ್ನಮತ ಸ್ಫೋಟಗೊಂಡು ಮದ್ದೂರು ತಾಲ್ಲೂಕಿನ ಚಾಮನಹಳ್ಳಿ ಕ್ಷೇತ್ರದ ಎಸ್.ನಾಗರತ್ನಸ್ವಾಮಿ ಬಂಡಾಯವಾಗಿ ನಾಮಪತ್ರ ಸಲ್ಲಿಸಿ ಪಕ್ಷದ ಮುಖಂಡರ ತೀರ್ಮಾನಕ್ಕೆ ಸೆಡ್ಡು ಹೊಡೆದರು.
ಜೆಡಿಎಸ್ ಮುಖಂಡರ ಸಭೆ
ಪಕ್ಷದ ಅಧಿಕೃತ ಅಭ್ಯರ್ಥಿಯನ್ನು ಘೋಷಿಸುವ ಮುನ್ನ ಸಂಸದ ಪುಟ್ಟರಾಜು, ಶಾಸಕರಾದ ಚಲುವರಾಯಸ್ವಾಮಿ, ಡಿ.ಸಿ.ತಮ್ಮಣ್ಣ, ರಮೇಶ್‍ಬಾಬು, ನಾರಾಯಣಗೌಡ, ವಿಧಾನಪರಿಷತ್ ಸದಸ್ಯ ಅಪ್ಪಾಜಿಗೌಡ ಹಾಗೂ ಮಾಜಿ ಶಾಸಕರಾದ ಎಂ.ಶ್ರೀನಿವಾಸ್, ಡಾ.ಅನ್ನದಾನಿ, ಜಿ.ಬಿ.ಶಿವಕುಮಾರ್, ಪಕ್ಷದ ಜಿಲ್ಲಾಧ್ಯಕ್ಷ ಡಿ.ರಮೇಶ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ ಅಂತಿಮವಾಗಿ ಜೆ.ಪ್ರೇಮಕುಮಾರಿ ಹಾಗೂ ಗಾಯಿತ್ರಿ ರೇವಣ್ಣ ಅವರನ್ನು ಪ್ರಥಮ ಅವಧಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ವರಿಷ್ಠರು ಪ್ರಕಟಿಸಿದರು.
 ಪಕ್ಷೇತರ ಅಭ್ಯರ್ಥಿ ತಟಸ್ಥ
ಬಸರಾಳು ಜಿ.ಪಂ. ಕ್ಷೇತ್ರದಿಂದ ಜಾ.ದಳ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಚಂದಗಾಲು ಶಿವಣ್ಣ ಕಾಂಗ್ರೆಸ್ ಹಾಗೂ ಜಾ.ದಳ ಅಭ್ಯರ್ಥಿಗಳಿಬ್ಬರನ್ನು ಬೆಂಬಲಿಸದೆ ತಟಸ್ಥವಾಗಿ ಉಳಿದರು.


ನಾಗಮಂಗಲ, ಮೇ.2- ವಿಜ್ಞಾನ ಎಷ್ಟೇ ಬೆಳೆದರೂ ಜನತೆ ನಮ್ಮ ಸಂಸ್ಕøತಿಯನ್ನು ಎಂದೂ ಮರೆಯಬಾರದೆಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.
ತಾಲ್ಲೂಕಿನ ಬೆಳ್ಳೂರು ಹೋಬಳಿ ಚಾಮಲಾಪುರ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಬಸವೇಶ್ವರ ದೇವಾಲಯ ಉದ್ಘಾಟಿಸಿ ಅವರು ಮಾತನಾಡಿದರು.
ಮನುಷ್ಯ ದೇವಾಲಯಕ್ಕೆ ಬಂದಾಗ ಮಾತ್ರ ಮನಸ್ಸನ್ನು ಶುದ್ಧಿಯಾಗಿಟ್ಟುಕೊಂಡು ಹೊರಗೆ ಹೋದಾಗ ತಮ್ಮ ಅನಾಚಾರವನ್ನು ಮತ್ತೆ ಮುಂದುವರಿಸುವ ಪ್ರವøತ್ತಿಯನ್ನು ಬಿಡಬೇಕು ಎಂದು ತಿಳಿಹೇಳಿದರು.
ಜನರು ತಮ್ಮಲ್ಲಿರುವ ದ್ವೇಷ, ಅಸೂಯೆಯನ್ನು ಬಿಟ್ಟು ಸಮಾಜದಲ್ಲಿರುವ ಅವೈಜ್ಞಾನಿಕ ವಿಷಯಗಳನ್ನು ಹೋಗಲಾಡಿಸಿ, ನಂಬಿಕೆ, ಭಕ್ತಿಭಾವವನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.
ತಾ.ಪಂ.ಸದಸ್ಯೆ ಜಯಲಕ್ಷ್ಮಮ್ಮ, ಕೆ.ಎಸ್.ಪುಟ್ಟಸ್ವಾಮಿಗೌಡ, ಬಿಜೆಪಿ ತಾಲ್ಲೂಕು ಅಧ್ಯಕ್ಷ ಪಾರ್ಥಸಾರಥಿ, ಸುರೇಶ್, ಕೆ.ಎಚ್. ವೆಂಕಟೇಶ್, ಸೇರಿದಂತೆ ಮತ್ತಿತರರು ಪಾಲ್ಗೊಂಡಿದ್ದರು.

No comments:

Post a Comment