Thursday 11 May 2017

ತಂತ್ರಾಂಶದಲ್ಲೂ ಕನ್ನಡ ಬಳಕೆ ಮಾಡಿ; ಸಿದ್ದರಾಮಯ್ಯ

ತಂತ್ರಾಂಶದಲ್ಲೂ ಕನ್ನಡ ಬಳಕೆ ಮಾಡಿ; ಸಿದ್ದರಾಮಯ್ಯ
      ಮೈಸೂರು ಮೇ. 11. ಮೈಸೂರು ಜಿಲ್ಲೆಯಲ್ಲಿ ಸರ್ಕಾರದ ಮಾಹಿತಿ ನೀಡುವ ಇಲಾಖೆಗಳು ಸಹ ತಂತ್ರಾಂಶದಲ್ಲಿ ಕನ್ನಡ ಬಳಕೆ ಮಾಡುವಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಪ್ರೊ. ಎಸ್.ಜಿ. ಸಿದ್ಧರಾಮಯ್ಯ ಅವರು ತಿಳಿಸಿದರು.
      ಅವರು ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕನ್ನಡ ಅನುಷ್ಠಾನದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಿಲ್ಲಾ ಮಟ್ಟದಲ್ಲಿ ಪ್ರತಿ ತಿಂಗಳು ನಡೆಯುವ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಪರಿಶೀಲಿಸಬೇಕು. ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಕನ್ನಡ ಪರ ಸಂಘಟನೆಗಳು, ವೆಬ್‍ಸೈಟ್‍ಗಳನ್ನು ಪರಿಶೀಲಿಸಿ ಕನ್ನಡ ಅನುಷ್ಠಾನದಲ್ಲಿ ಲೋಪವಿದ್ದಲ್ಲಿ, ವರದಿಯನ್ನು ಸಂಬಂಧಿಸಿದ ನೀಡುವಂತೆ ತಿಳಿಸಲಾಗುವುದು. ಆದರೆ ಇಲಾಖೆಗಳು ಪ್ರಾಧಿಕಾರದಿಂದ ಬರೆಯುವ ಪತ್ರಗಳಿಗೆ ಸರಿಯಾದ ಪ್ರತಿಕ್ರಿಯೆ ನೀಡುತ್ತಿಲ್ಲ ಎಂದರು.
     ಜಿಲ್ಲೆಯಲ್ಲಿ ಪ್ರತಿ ಮೂರು ತಿಂಗಳಿಗೊಮ್ಮೆ ಕನ್ನಡ ಜಾಗೃತಿ ಸಭೆ ನಡೆಸಿ ಜಿಲ್ಲೆಯಲ್ಲಿ ಕನ್ನಡ ಅನುಷ್ಠಾನದ ಬಗ್ಗೆ ಚರ್ಚಿಸಬೇಕು. ತಾಲ್ಲೂಕು ಮಟ್ಟದಲ್ಲೂ ಸಹ ತಹಶೀಲ್ದಾರ್ ಅಧ್ಯಕ್ಷತೆಯಲ್ಲಿ ಕನ್ನಡ ಜಾಗೃತಿ ಸಭೆ ನಡೆಸಬೇಕು. ಕನ್ನಡದವರನ್ನು ಕಾರ್ಖಾನೆಗಳಲ್ಲಿ ಸಿ ಮತ್ತು ಡಿ ಗ್ರೂಪ್ ವರ್ಗದ ನೌಕರರನ್ನು ನೇಮಕ ಮಾಡಿಕೊಂಡಿರುವ  ಬಗ್ಗೆ ಕೈಗಾರಿಕೆ ಇಲಾಖೆಯಿಂದ ಮಾಹಿತಿ ಪಡೆದ ಅಧ್ಯಕ್ಷರು ಕೆಲವು ಕಾರ್ಖನೆಗಳಲ್ಲಿ ಕನ್ನಡ ಮಾತನಾಡುವವರ ಬಗ್ಗೆ ತಾರತಮ್ಯ ನಡೆಯುತ್ತಿರುವ ಬಗ್ಗೆ ದೂರು ಬಂದಿದ್ದು, ಈ ಬಗ್ಗೆ ಪರಿಶೀಲಿಸುವಂತೆ ಕೈಗಾರಿಕೆ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.
      ಖಾಸಗಿ ಶಾಲೆಗಳಲ್ಲಿ ವಿದ್ಯಾರ್ಥಿಗಳು ಕನ್ನಡ ಭಾಷೆಯಲ್ಲಿ ಮಾತನಾಡಿದರೆ ದಂಡ ವಿಧಿಸುತ್ತಾರೆ ಎಂಬ ದೂರುಗಳು ಕೇಳಿಬರುತ್ತಿದೆ. ಈ ಬಗ್ಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕಾರಿಗಳು ಪರಿಶೀಲಿಸಬೇಕು. ಮೈಸೂರು ಜಿಲ್ಲೆ ಪ್ರವಾಸಿ ತಾಣವಾಗಿದ್ದು, ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡದ ನಾಮಫಲಕವನ್ನು ಅಳವಡಿಸಬೇಕು. ಕನ್ನಡದ ಜೊತೆಯಲ್ಲಿ ಆಂಗ್ಲ ಅಥವಾ ಇನ್ನಿತರ ಭಾಷೆಗಳನ್ನು ಅಳವಡಿಸುವಂತೆ ತಿಳಿಸಿದರು.
      ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಸುದರ್ಶನ, ಮಡ್ಡಿಗೆರೆ ಗೋಪಾಲ್, ರೇವಣ್ಣ, ಪ್ರಮೋದ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತದ ಅಧ್ಯಕ್ಷ ವೈ.ಡಿ.ರೇವಣ್ಣ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್  ಆಧ್ಯಕ್ಷ ವೈ.ಡಿ.ರಾಜಣ್ಣ, ಜಿಲ್ಲಾಧಿಕಾರಿ ರಂದೀಪ್ ಡಿ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಮುರುಳೀಧರ್ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆ ಸಹಾಯಕ ನಿರ್ದೇಶಕ ಚನ್ನಪ್ಪ ಅವರುಗಳು ಉಪಸ್ಥಿತರಿದ್ದರು.
ವಿವಿಧ ಸೌಲಭ್ಯ ಅರ್ಜಿ ಆಹ್ವಾನ
ಮೈಸೂರು ಮೇ. 11.ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮದ ವತಿಯಿಂದ ಸ್ವಯಂ ಉದ್ಯೋಗ ಯೋಜನೆ, ಉದ್ಯಮ ಶೀಲತಾ ಅಭಿವೃದ್ಧಿ ಯೋಜನೆ, ನೇರಸಾಲ- ಹಸು/ಎಮ್ಮೆ/ಕುರಿ/ಮೇಕೆ ಸಾಕಾಣಿಕೆ, ಕಿರುಸಾಲ ಯೋಜನೆ, ಮಹಿಳಾ ಸಮೃದ್ಧಿ ಯೋಜನೆ, ಗಂಗಾಕಲ್ಯಾಣ ಯೋಜನೆ/  ವೈಯಕ್ತಿಕ ತೆರೆದ ಬಾವಿ ಯೋಜನೆ, ಏತ ನೀರಾವರಿ ಯೋಜನೆ, ಭೂ ಒಡೆತನ ಯೋಜನೆ ಹಾಗೂ ವಿಕಲಚೇತನ ಯೋಜನೆಯಡಿ ಸೌಲಭ್ಯ ಒದಗಿಸಲು ಅರ್ಹ ಫಲಾಪೇಕ್ಷಿಗಳಿಂದ ಅರ್ಜಿ ಆಹ್ವಾನಿಸಿದೆ.
ಅರ್ಜಿ ಸಲ್ಲಿಸಲು ಮೇ 25 ಕಡೆಯ ದಿನಾಂಕವಾಗಿದ್ದು, ಅರ್ಜಿಯನ್ನು ಡಾ.ಬಿ.ಆರ್. ಅಂಬೇಡ್ಕರ್ ಅಭಿವೃದ್ಧಿ ನಿಗಮ, ಚಾಮರಾಜಮೊಹಲ್ಲಾ, ಮೈಸೂರು ಇಲ್ಲಿ/ ತಾಲ್ಲೂಕು ಮಟ್ಟದಲ್ಲಿರುವ ನಿಗಮ ಕಚೇರಿಗಳು/ ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ/ ತಾಲ್ಲೂಕು ಪಂಚಾಯತ್ ಕಚೇರಿ/ನಿಗಮದ ವೆಬ್‍ಸೈಟ್ ತಿತಿತಿ.ಚಿಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ  ಇಲ್ಲಿ ಪಡೆದುಕೊಳ್ಳುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2332480 ನ್ನು ಸಂಪರ್ಕಿವುದು.
ಮಾವಿನ ಮೇಳ
     ಮೈಸೂರು ಮೇ. 11. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ವತಿಯಿಂದ ಮೇ 10 ರಿಂದ ಜೂನ್ 9 ರವರೆಗೆ ಸಯ್ಯಾಜಿರಾವ್ ರಸ್ತೆಯಲ್ಲಿರುವ ಸಗಟು ಹಣ್ಣುಗಳ ಮಾರುಕಟ್ಟೆ ಉಪ ಪ್ರಾಂಗಣದಲ್ಲಿ ಮಾವಿನ ಮೇಳವನ್ನು ಆಯೋಜಿಸಲಾಗಿದೆ.
    ಗ್ರಾಹಕರಿಗೆ ನೇರವಾಗಿ ಉತ್ತಮ ಗುಣಮಟ್ಟದ ವಿವಿಧ ತಳಿಯ ಮಾವಿನ ಹಣ್ಣುಗಳನ್ನು ಉತ್ತಮ ಬೆಲೆಯಲ್ಲಿ ದೊರೆಯುವಂತೆ ಮಾಡುವುದು ಮಾವಿನ ಮೇಳದ ಉದ್ದೇಶವಾಗಿದೆ. ಗ್ರಾಹಕರು ಮತ್ತು ರೈತರು ಇದರ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.  
ಭಾರಿ ವಾಹನ ಚಾಲನಾ ತರಬೇತಿ
      ಮೈಸೂರು ತಾಲ್ಲೂಕು ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಮೈಸೂರು ನಗರ ಮತ್ತು ಗ್ರಾಮಾಂತರ ಪ್ರದೇಶದ ಪರಿಶಿಷ್ಟ ಜಾತಿ ನಿರುದ್ಯೋಗಿ ಯುವಕ/ಯುವತಿಯರಿಗೆ ಭಾರಿ ವಾಹನ ಚಾಲನಾ ತರಬೇತಿ ನೀಡಲು ಅರ್ಜಿ ಆಹ್ವಾನಿಸಿದೆ.
       ಅರ್ಜಿ ಸಲ್ಲಿಸುವವರ ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು. ಎಸ್.ಎಸ್.ಎಲ್.ಸಿ. ವಿದ್ಯಾರ್ಹತೆ ಹೊಂದಿರಬೇಕು. ಲಘುವಾಹನ ಚಾಲನಾ ಪರವಾನಗಿ ಪಡೆದು ಒಂದು ವರ್ಷ ಪೂರ್ಣಗೊಳಿಸಿರಬೇಕು. ಆಸಕ್ತರು, ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಸಮಾಜ ಕಲ್ಯಾಣ ಇಲಾಖೆ, ಮೈಸೂರು ತಾಲ್ಲೂಕು ಇಲ್ಲಿ ಪಡೆದುಕೊಂಡು ಅಗತ್ಯ ದಾಖಲಾತಿಗಳೊಂದಿಗೆ ಭರ್ತಿ ಮೇ 25 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ವಿವರಗಳಿಗೆ ದೂರವಾಣಿ ಸಂಖ್ಯೆ 0821-2520910 ನ್ನು ಸಂಪರ್ಕಿಸುವುದು.
ಹಳೇ ದಿನಪತ್ರಿಕೆಗಳ ವಿಲೇವಾರಿ
      ಮೈಸೂರು ಮೇ. 11. ನಗರ ಕೇಂದ್ರ ಗ್ರಂಥಾಲಯ, ಮೈಸೂರು ಹಾಗೂ ವಿವಿಧ ಶಾಖೆಗಳಲ್ಲಿ ಮತ್ತು ಸೇವಾ/ ಕೇಂದ್ರಗಳಲ್ಲಿ ಹಾಗೂ ವಾಚನಾಲಯಗಳಲ್ಲಿ 2016-17 ನೇ ಸಾಲಿಗೆ ಸಂಬಂಧಿಸಿದಂತೆ ಗ್ರಂಥಾಲಯಗಳಲ್ಲಿ ಲಭ್ಯವಿರುವ ಹಳೇ ದಿನಪತ್ರಿಕೆ ಹಾಗೂ ನಿಯತಕಾಲಿಕೆಗಳನ್ನು ನಿಯಮಾನುಸಾರ ವಿಲೇವಾರಿ ಮಾಡಲಾಗುವುದು ದರಪಟ್ಟಿ ಸಲ್ಲಿಸಲು ಮೇ 18 ಕೊನೆಯ ದಿನಾಂಕವಾಗಿದ್ದು, ಹೆಚ್ಚಿನ ವಿವರಗಳಿಗೆ ಉಪನಿರ್ದೇಶಕರು, ನಗರ ಕೇಂದ್ರ ಗ್ರಂಥಾಲಯ, ಮೈಸೂರು. ದೂರವಾಣಿ ಸಂಖ್ಯೆ 0821-2423678 ನ್ನು ಸಂಪರ್ಕಿಸುವುದು.
ವಾಹನಗಳ ಬಹಿರಂಗ ಹರಾಜು
       ಮೈಸೂರು ಮೇ. 11: ಕೆ.ಎಸ್.ಆರ್.ಪಿ. 5ನೇ ಪಡೆ ಕಮಾಂಡೆಂಟ್ ಕಚೇರಿಗೆ ಸೇರಿದ ಅನುಪಯುಕ್ತ 11 ಟಾಟಾ ಬಸ್ಸುಗಳು ಹಾಗೂ 1 ಜೀಪುನ್ನು ಮೇ 31 ರಂದು ಬೆಳಿಗ್ಗೆ 11 ಗಂಟೆಗೆ ಲಲಿತ ಮಹಲ್ ರಸ್ತೆಯಲ್ಲಿ ಕೆ.ಎಸ್.ಆರ್.ಪಿ. 5ನೇ ಪಡೆ ಕಮಾಂಡೆಂಟ್ ಕಚೇರಿ ಆವರಣದಲ್ಲಿ ಟೆಂಡರ್ ಕಮ್ ಬಹಿರಂಗ ಹರಾಜು ಮೂಲಕ ವಿಲೇವಾರಿ ಮಾಡಲಾಗುವುದು.
     ಟೆಂಡರ್ ನ್ನು ಮೇ 30 ರ ಸಂಜೆ 5 ಗಂಟೆಯೊಳಗಾಗಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2473549 ನ್ನು ಸಂಪರ್ಕಿಸುವುದು.


ಸಾಲಸೌಲಭ್ಯ ಅರ್ಜಿ ಆಹ್ವಾನ
      ಮೈಸೂರು ಮೇ. 11. ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಮುಖ್ಯಮಂತ್ರಿಗಳ ಸ್ವಯಂ ಉದ್ಯೋಗ ಸೃಜನ ಯೋಜನೆಯಡಿ  ಪ್ರಥಮ ಪೀಳಿಗೆ ಉದ್ಯಮಶೀಲರಿಗೆ ಪ್ರತಿ ಘಟಕಕ್ಕೆ ಗರಿಷ್ಟ ರೂ. 10.00 ಲಕ್ಷ ಯೋಜನಾ ವೆಚ್ಚದ  ಉತ್ಪಾದನಾ ಘಟಕ ಹಾಗೂ ಆಯ್ದ ಸೇವಾ ಉದ್ಯಮಗಳನ್ನು ಪ್ರಾರಂಭಿಸಲು ವಿವಿಧ ಹಣಕಾಸು ಸಂಸ್ಥೆ ಮೂಲಕ ಸಾಲ ಒದಗಿಸಲಾಗುವುದು.
      ಅರ್ಜಿ ಸಲ್ಲಿಸುವವರ ವಯೋಮಿತಿ 21 ರಿಂದ 35 ವರ್ಷದೊಳಗಿರಬೇಕು. ವಿಶೇಷ ವರ್ಗದವರಿಗೆ 45 ವರ್ಷ ವಯೋಮಿತಿಯಾಗಿರುತ್ತದೆ. 8ನೇ ತರಗತಿ ವಿದ್ಯಾರ್ಹತೆ ಹೊಂದಿರಬೇಕು. ಸಾಮಾನ್ಯ ವರ್ಗದ ಉದ್ಯಮ ಶೀಲರಿಗೆ ಯೋಜನಾ ವೆಚ್ಚದ ಶೇ. 25 ರಷ್ಟು (ಗರಿಷ್ಠ 2.50 ಲಕ್ಷ ರೂ.,) ವಿಶೇಷ ವರ್ಗದವರಿಗೆ ಶೇ. 30 ರಷ್ಟು (ಗರಿಷ್ಠ 3.50 ಲಕ್ಷ ರೂ. ಸಹಾಯ ಧನ ಮಂಜೂರು ಮಾಡಲಾಗುವುದು.
    ಅರ್ಜಿಯನ್ನು ವೆಬ್‍ಸೈಟ್ ತಿತಿತಿ.ಛಿmegಠಿ.ಞಚಿಡಿ.ಟಿiಛಿ.iಟಿ ಆನ್‍ಲೈನ್ ಮೂಲಕ ಜೂನ್ 12 ರೊಳಗಾಗಿ ಸಲ್ಲಿಸಬೇಕಿದ್ದು, ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2520886/ 2563370 ನ್ನು ಸಂಪರ್ಕಿಸುವುದು.
ಮೇ 12 ರಂದು ರಾಮಾ ರಾಮಾ ರೇ    
       ಮೈಸೂರು ಮೇ. 11. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ಹಾಗೂ ಮೈಸೂರು ಫಿಲ್ಮ್ ಸೊಸೈಟಿ, ಸಂಯುಕ್ತಾಶ್ರಯದಲ್ಲಿ ಆಯೋಜಿಸಿರುವ ಸಿನಿಮಾ ಸಮಯದಲ್ಲಿ ಮೇ 12 ರಂದು ಸಂಜೆ 6 ಗಂಟೆಗೆ ಮೈಸೂರಿನ ಕಲಾಮಂದಿರದಲ್ಲಿ ಡಿ. ಸತ್ಯಪ್ರಕಾಶ್ ನಿರ್ದೇಶನದ ರಾಮಾ ರಾಮಾ ರೇ  ಕನ್ನಡ ಚಲನಚಿತ್ರ ಪ್ರದರ್ಶಿಸಲಾಗುವುದು.
     ಮನುಷ್ಯ ಸಂಬಂಧಗಳ ಮಹತ್ವ, ಶಕ್ತಿ ಮತ್ತು ಸೂಕ್ಷ್ಮತೆಗಳನ್ನು ಜನ ಮರಣಗಳ ಭಯ ಮತ್ತು ಕ್ರೋಧ, ಭದ್ರತೆ ಮತ್ತು ಅಭದ್ರತೆ ಅದೃಷ್ಟ ಮತ್ತು ವಿಧಿಗಳ ಹಿನ್ನೆಲೆಗಳಲ್ಲಿ ರಾಮಾ ರಾಮಾ ರೇ ಚಿತ್ರ ಅನಾವರಣಗೊಳ್ಳುತ್ತದೆ. ವಿಭಿನ್ನ ವ್ಯಕ್ತಿತ್ವಗಳ ಹಾಸ್ಯ ಮತ್ತು ವ್ಯಂಗಗಳ ಘಮದೊಂದಿಗೆ ಸಾಗುವ ಜೀಪ್ ಪ್ರಯಾಣದ ಸುತ್ತ ರಾಮಾ ರಾಮಾ ರೇ ಚಿತ್ರಕಥೆ ಇರುತ್ತದೆ.
      ಇದಕ್ಕೂ ಮುನ್ನ ಅಂದು ಸಂಜೆ 5-30 ಕ್ಕೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ಮಿಸಿರುವ ವಿಸ್ತøತ ವಿಜ್ಞಾನ ಸಾಕ್ಷ್ಯಚಿತ್ರ  ಪ್ರದರ್ಶಿಸಲಾಗುವುದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.
 
ಕುಡಿಯುವ ನೀರು ಪೋಲಾಗಾದಂತೆ ಎಚ್ಚರ ವಹಿಸಿ
ಮೈಸೂರು ಮೇ. 11. ಮೈಸೂರು ನಗರದ ನೀರು ಸರಬರಾಜು ಮಾಡುವ ಮೂಲಗಳಾದ ಕಾವೇರಿ ಮತ್ತು ಕಬಿನಿ ನದಿಗಳಲ್ಲಿ ನೀರಿನ ಮಟ್ಟವು ತೀವ್ರವಾಗಿ ಇಳಿದಿರುವುದರಿಂದ ಮೈಸೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೊಂಗಳ್ಳಿ, ಬೆಳಗೊಳ, ಮೇಳಾಪುರ ಮತ್ತು ಬಿದರಗೋಡುಗಳಲ್ಲಿನ ಮೂಲ ಸ್ಥಾವರ ಯಂತ್ರಾಗಾರಗಳಿಗೆ ನೀರಿನ ಹರಿವು ಇಲ್ಲದಂತಾಗಿ ನೀರು ಸರಬರಾಜಿಗೆ ತೊಂದರೆಯಾಗಿದೆ.
ಮೈಸೂರು ನಗರದ ಸಾರ್ವಜನಿಕರು ಕುಡಿಯುವ ನೀರನ್ನು ಪೋಲು ಮಾಡದಂತೆ ಗೃಹಬಳಕೆಗೆ ಮಾತ್ರ ನೀರು ಬಳಕೆ ಮಾಡಿ  ನೀರು ಉಳಿತಾಯಕ್ಕಾಗಿ P್ಪ್ರಮ ಕೈಗೊಳ್ಳುವ ಮೂಲಕ ಮೈಸೂರು ಮಹಾನಗರ ಪಾಲಿಕೆಯೊಂದಿಗೆ ಸಹಕರಿಸಬೇಕಾಗಿ ಕೋರಲಾಗಿದೆ. ಸಾರ್ವಜನಿಕರು ಕುಡಿಯುವ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಉಪಯೋಗಿಸಬಾರದು, ಕುಡಿಯುವ ನೀರನ್ನು ಮನೆಯ ಅಂಗಳ ತೊಳೆಯಲು, ವಾಹನ ತೊಳೆಯಲು,  ಗಿಡಗಳಿಗೆ ನೀರು ಹಾಯಿಸಲು, ತೋಟಗಳಿಗೆ ನೀರು ಸರಬರಾಜು ಮಾಡಲು, ನಳವನ್ನು ಸದಾಕಾಲ ತೆರೆದು ನೀರು ಹರಿಯುವಂತೆ ಮಾಡುವುದು, ಟ್ಯಾಂಕ್‍ನಿಂದ ನೀರು ಸೋರುವಿಕೆಯಾಗಲು ಹಾಗೂ ನೀರು ಹರಿಯುವಂತೆ ಪೋಲು ಮಾಡುವುದನ್ನು  ಸ್ಥಗಿತಗೊಳಿಸಬೇಕಾಗಿ ಮೈಸೂರು ಮಹಾನಗರ ಪಾಲಿಕೆಯವರು ಮನವಿ ಮಾಡಿದ್ದಾರೆ.
ಗ್ರಾಹಕರು ಕುಡಿಯುವ ನೀರು ಪಡೆಯಲು ಕೊಳವೆ ಮಾರ್ಗಕ್ಕೆ ಪಂಪ್ ಅಳವಡಿಸಿ ನೀರು ತೆಗೆದುಕೊಳ್ಳುವುದು, ನಳಗಳನ್ನು ಅಳವಡಿಸದೆ ಇರುವುದರಿಂದ ಅನ್ಯತಹ ನೀರು ಪೋಲಾಗುವುದು ಕಂಡುಬಂದಲ್ಲಿ ಅಂತಹ ಗ್ರಾಹಕರುಗಳ ಪಂಪ್‍ಗಳನ್ನು ವಶಕ್ಕೆ ತೆಗೆದುಕೊಂಡು ಹಿಂದಿರುಗಿಸುವುದಿಲ್ಲ. ಹಾಗೂ ನೀರು ಸರಬರಾಜು ಸಂಪರ್ಕವನ್ನು ಕಡಿತಗೊಳಿಸುವುದಲ್ಲದೆ ದಾವೆ ಹಾಕಲು ಕ್ರಮವಹಿಸಲಾಗುವುದು ಎಂದು ಮೈಸೂರು ಮಹಾನಗರ ಪಾಲಿಕೆ ವಾಣಿವಿಲಾಸ ನೀರು ಸರಬರಾಜು ವಿಭಾಗದ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
 

No comments:

Post a Comment