Wednesday 27 January 2016

ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಕಲ ಸಿದ್ಧತೆ


ಅಂತರರಾಷ್ಟ್ರೀಯ ಚಿತ್ರೋತ್ಸವಕ್ಕೆ ಸಕಲ ಸಿದ್ಧತೆ
     ಮೈಸೂರು,ಜ.27.-ಮೈಸೂರು ನಗರದÀಲ್ಲಿ ಇದೇ ಪ್ರಪ್ರಥಮ ಬಾರಿಗೆ ಅಂತರರಾಷ್ಟ್ರೀಯ ಚಿತ್ರೋತ್ಸವವನ್ನು ಆಯೋಜಿಸಲಾಗಿದ್ದು, ಗುರುವಾರದಿಂದ ಪ್ರಾರಂಭವಾಗುವ ಚಿತ್ರೋತ್ಸವದ ಸಿದ್ಧತೆಗಳನ್ನು ಇಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ನಿರ್ದೇಶಕ ಎನ್.ಆರ್ ವಿಶುಕುಮಾರ್ ಅವರು ಚಲನಚಿತ್ರೋತ್ಸವ ನಡೆಯುವ ಮಾಲ್ ಆಫ್ ಮೈಸೂರಿನ ಐನಾಕ್ಸ್ ಚಿತ್ರಮಂದಿರದಲ್ಲಿ ಪರಿಶೀಲನೆ ನಡೆಸಿದರು.
    ಪರೀಶೀಲನೆ ನಡೆಸಿದ ನಂತರ ಮಾತನಾಡಿ ದಿನಾಂಕ 29-01-2016 ರಿಂದ 04-02-2016 ರವರೆಗೆ ನಡೆಯುವ  ಚಿತ್ರೋತ್ಸವಕ್ಕೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ವಿವಿಧ ಭಾಷೆಗಳ ಚಲನಚಿತ್ರಗಳನ್ನು  ನಾಲ್ಕು ಪರದೆಗಳಲ್ಲಿ ಉತ್ತಮ ಪ್ರತಿ ದಿನ 5 ಪ್ರದರ್ಶನಗಳಂತೆ ಒಟ್ಟಾರೆ 140 ಚಲನಚಿತ್ರಗಳನ್ನು ಪ್ರದರ್ಶಿಸಲಾಗುವುದು. ಮೈಸೂರಿನ  ಸಾರ್ವಜನಿಕರಿಗೆ ಹಾಗೂ ಚಲನಚಿತ್ರ ರಂಗದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ  ಇದು ಸುವರ್ಣ ಅವಕಾಶವಾಗಿದ್ದು, ವಿಶ್ವ ಸಿನಿಮಾ, ಏಷ್ಯಾ ಸಿನಿಮಾ, ಇಂಡಿಯನ್ ಸಿನಿಮಾ, ಕನ್ನಡ ಸಿನಿಮಾಗಳನ್ನು ವೀಕ್ಷಿಸಬಹುದು ಎಂದರು.
     ಜನವರಿ 11 ರಿಂದಲೇ ನೊಂದಣಿ ಕಾರ್ಯ ಧನ್ವಂತ್ರಿ ರಸ್ತೆಯಲ್ಲಿರುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನಡೆಯುತ್ತಿದ್ದು, 500ಕ್ಕೂ ಹೆಚ್ಚು ಜನ ಈವರೆಗೆ ಪ್ರತಿನಿಧಿಗಳಾಗಿ ನೋಂದಾಯಿಸಿಕೊಂಡಿದ್ದಾರೆ. ನೋಂದಣಿ ಶುಲ್ಕ ಸಾರ್ವಜನಿಕರಿಗೆ ರೂ. 600, ವಿದ್ಯಾರ್ಥಿಗಳಿಗೆ, ಚಿತ್ರ ಸಮಾಜದ ಸದಸ್ಯರಿಗೆ, ಚಲನಚಿತ್ರರಂಗದಲ್ಲಿ ಕೆಲಸ ಮಾಡುವವರಿಗೆ ರೂ. 300 ಇರುತ್ತದೆ ಎಂದರು.
   ಚಲನಚಿತ್ರೋತ್ಸವದ ಬಗ್ಗೆ ಮೈಸೂರು ನಗರದಲ್ಲಿರುವ ಸಮೂಹ ಮಾಧ್ಯಮ ಹಾಗೂ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ತೋರಿ ಮುಂದೆ ಬಂದು  ಪಠ್ಯ ಚಟುವಟಿಕೆ ಭಾಗವಾಗಿಯೇ ಈ ಚಿತ್ರೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವುದು ಹರ್ಷದಾಯಕ ವಿಷಯವಾಗಿದೆ ಎಂದರು.  
      ಚಿತ್ರೋತ್ಸವದ ಉದ್ಘಾಟನಾ ಸಮಾರಂಭ ಜನವರಿ 28 ರಂದು ಬೆಂಗಳೂರಿನ ವಿಧಾನಸೌಧದ ಮುಂಭಾಗದಲ್ಲಿ ನಡೆಯಲಿದ್ದು, ಮೈಸೂರಿನಲ್ಲಿ ಜನವರಿ 28 ರಂದು ಸಂಜೆ 6 ಗಂಟೆಗೆ ಕಲಾಮಂದಿರದಲ್ಲಿ ಹಲವು ಪ್ರಶಸ್ತಿ ವಿಜೇತ ‘ತಿಥಿ’ ಕನ್ನಡ ಚಿತ್ರದ ಪ್ರದರ್ಶನದೊಂದಿಗೆ ಚಿತ್ರೋತ್ಸವಕ್ಕೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.
        ವಿಶ್ವ ಸಿನಿಮಾ, ಏಷ್ಯಾ ಸಿನಿಮಾ, ಇಂಡಿಯನ್ ಸಿನಿಮಾ, ಕನ್ನಡ ಸಿನಿಮಾ. ಸಿನಿಮಾ ಪುನಾರವಲೋಕನ ಹೀಗೆ ಹಲವು ವಿಭಾಗಗಳಲ್ಲಿ ಚಿತ್ರಗಳು ಪ್ರದರ್ಶನಗೊಳ್ಳುತ್ತವೆ. ಕೋರ್ಟ್,(ಮರಾಠಿ), ಲೆವಿಯಥಾನ್ (ರಷ್ಯಾ), ಕಾರ್ನ್‍ಐಲ್ಯಾಂಡ್(ಜಾರ್ಜಿಯಾ),  ಪ್ರಾಂಕೋಫೋನಿಯಾ (ಜರ್ಮನಿ), ರಾಮ್ಸ್ (ಐಲ್ಯಾಂಡ್). ಟ್ಯಾಕ್ಸಿ(ಇರಾನ್), ಆಂಟನ್ ಚೆಕಾಫ್ ಹೀಗೆ ಸರಿಸುಮಾರು 140 ಪ್ರಮುಖ ಚಿತ್ರಗಳನ್ನು ವೀಕ್ಷಿಸುವ ಅವಕಾಶ ಇದೆ ಎಂದರು
     18 ವರ್ಷ ಮೇಲ್ಪಟ್ಟವರಿಗೆ ಮಾತ್ರ ನೋಂದಣಿಗೆ ಅವಕಾಶ ಇದ್ದು ನೋಂದಾಯಿಸಿಕೊಳ್ಳಲು ಇಚ್ಚಿಸುವವರು 2 ಭಾವಚಿತ್ರ, ಗುರುತಿನ ಚೀಟಿ ಸಹಿತ ಬೆಳಿಗ್ಗೆ 11 ಗಂಟೆಯಿಂದ ಸಂಜೆ 5-30 ಗಂಟೆಯವರೆಗೆ ವಾರ್ತಾಭವನದಲ್ಲಿ, ಸಂಜೆ         5-30 ರಿಂದ 7-30 ರವರೆಗೆ ಮಾಲ್ ಆಫ್ ಮೈಸೂರ್ ಐನಾಕ್ಸ್ ಚಿತ್ರಮಂದಿರದಲ್ಲಿ ನೋಂದಾಯಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 2420050, 9448092049 ಹಾಗೂ ಆನ್‍ಲೈನ್ ಕೂಡ ನೋಂದಣಿಗೆÉ ಅವಕಾಶವಿದ್ದು, ನೋಂದಣಿ ಹಾಗೂ ಚಲನಚಿತ್ರಗಳ ವಿವರಗಳಿಗೆ ವೆಬ್‍ಸೈಟ್ ತಿತಿತಿ.biಜಿಜಿes.iಟಿ ನಲ್ಲಿ ಸಂಪರ್ಕಿಸಬಹುದು ಎಂದು ತಿಳಿಸಿದರು.
    ಇದೇ ಸಂದರ್ಭದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪನಿರ್ದೇಶಕ ಎ.ಆರ್. ಪ್ರಕಾಶ್ ಅವರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಆಹ್ವಾನ
                              ಮೈಸೂರು,ಜ.27.(ಕ.ವಾ.)-ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನೊಂದಾವಣೆಯಾಗಿ ಕ್ರೀಡೆ, ಸಾಂಸ್ಕøತಿಕ ಮತ್ತು ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿರುವ ಯುವಕ/ಯುವತಿ ಸಂಘÀ/ ಮಂಡಳಿಗಳ 5 ಮಂದಿಗೆ ಮತ್ತು ಯುವಕ ಸಂಘ/ಯುವತಿ ಮಂಡಳಿ ಇವುಗಳಿಗೆ ತಲಾ ಒಂದರಂತೆ ಜಿಲ್ಲಾ ಯುವ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಿದೆ.
 ಕ್ರೀಡೆ, ಸಾಂಸ್ಕøತಿಕ, ಸಮುದಾಯ ಅಭಿವೃದ್ದಿ ಕ್ಷೇತ್ರಗಳಲ್ಲಿ ಮತ್ತು ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿರುವ 15 ರಿಂದ 35 ವರ್ಷ ವಯೋಮಿತಿಯ ಯುವಕ/ಯುವತಿಯರು ಹಾಗೂ ಯುವಕ ಸಂಘ, ಯುವತಿ ಮಂಡಳಿ ಇವರುಗಳು ಜಿಲ್ಲಾ ಯುವ ಪ್ರಶಸ್ತಿಗೆ ಅರ್ಜಿ ಸಲ್ಲಿಸಬಹುದು.
      ಆಸಕ್ತರು ತಮ್ಮ ವೈಯಕ್ತಿಕ ಅರ್ಜಿಯೊಂದಿಗೆ ಸಾಧನೆಗಳ ದೃಢೀಕೃತ ಪ್ರಶಸ್ತಿ ಪತ್ರಗಳ ಪ್ರಸ್ತಾವನೆಯನ್ನು ದಿನಾಂಕ 25-02-2016 ರ ಒಳಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜರ್‍ಬಾದ್, ಮೈಸೂರು ಇಲ್ಲಿಗೆ ಸಲ್ಲಿಸುವುದು.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2564179 ರ ಮೂಲಕ ಪಡೆಯಬಹುದಾಗಿರುತ್ತದೆ.
ಕ್ರೀಡಾ ಶಾಲೆ ಪ್ರವೇಶಕ್ಕೆ ಆಯ್ಕೆ ಪ್ರಕ್ರಿಯೆ
     ಮೈಸೂರು,ಜ.27.ಮೈಸೂರು ಜಿಲ್ಲಾ ಪಂಚಾಯತ್ ವತಿಯಿಂದ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ನಡೆಸುತ್ತಿರುವ  ಜಿಲ್ಲಾ ಕ್ರೀಡಾಶಾಲೆಯ 2016-17ನೇ ಸಾಲಿನ ಪ್ರವೇಶಕ್ಕೆ ದಿನಾಂಕ 05-02-2016 ಮತ್ತು 06-02-2016 ರಂದು ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಲಿದೆ.
    ಅಥ್ಲೆಟಿಕ್ ಮತ್ತು ಜಿಮ್ನಾಸ್ಟಿಕ್ ಕ್ರೀಡೆಗಳಿಗೆ ಸಂಬಂಧಿಸಿದಂತೆ ಮಾತ್ರ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಆಯ್ಕೆ ಪ್ರಕ್ರಿಯೆಯಲ್ಲಿ ಭಾಗವಹಿಸುವವರು ದಿನಾಂಕ 01-06-2016 ಕ್ಕೆ 10 ವರ್ಷದೊಳಗಿರಬೇಕು ಹಾಗೂ 4ನೇ ತರಗತಿ ಓದುತ್ತಿರಬೇಕು. 2016-17ನೇ ಶೈಕ್ಷಣಿಕ ಸಾಲಿಗೆ 5ನೇ ತರಗತಿಗೆ ಪ್ರವೇಶ ಪಡೆಯಲು ಅರ್ಹರಾಗಿರಬೇಕು. ಭಾಗವಹಿಸುವ ಕ್ರೀಡಾಪಟುಗಳು ದಿನಾಂಕ 05-02-2016 ರಂದು ಬೆಳಿಗ್ಗೆ 8.30 ಗಂಟೆಗೆ ಚಾಮುಂಡಿ ವಿಹಾರ ಕ್ರೀಡಾಂಗಣ, ನಜûರಾಬಾದ್, ಮೈಸೂರು ಇಲ್ಲಿ ವರದಿ ಮಾಡಿಕೊಳ್ಳುವುದು.
     ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಾಮುಂಡಿ ವಿಹಾರ ಕ್ರೀಡಾಂಗಣ, ನಜûರಾಬಾದ್, ಮೈಸೂರು ದೂರವಾಣಿ ಸಂಖ್ಯೆ: 0821-2564179 ಇವರನ್ನು ಸಂಪರ್ಕಿಸುವುದು.
           ಜನವರಿ 28 ರಂದು ಸಾಮಾನ್ಯ ಕೌನ್ಸಿಲ್ ಸಭೆ
     ಮೈಸೂರು,ಜ.27.ಮೈಸೂರು ಮಹಾನಗರ ಪಾಲಿಕೆಯ ನಾಲ್ವಡಿ ಕೃಷ್ಣರಾಜ ಒಡೆಯರ್ ಸಭಾಂಗಣದಲ್ಲಿ  ಜನವರಿ 28 ರಂದು ಮಧ್ಯಾಹ್ನ 3 ಗಂಟೆಗೆ ಮಹಾನಗರ ಪಾಲಿಕೆ ಸಾಮಾನ್ಯ ಕೌನ್ಸಿಲ್ ಸಭೆ ಜರುಗಲಿದೆ ಎಂದು ಮೈಸೂರು ಮಹಾನಗರ ಪಾಲಿಕೆಯ ಕೌನ್ಸಿಲ್ ಕಾರ್ಯದರ್ಶಿ ತಿಳಿಸಿದ್ದಾರೆ.
ಹೆಚ್1ಎನ್1  ಆತಂಕ ಬೇಡ ಅರಿವಿರಲಿ
   ಮೈಸೂರು,ಜ.27.ಹೆಚ್1ಎನ್1 ಇನ್ ಫ್ಲ್ಯೂಯೆಂಜಾ ಎ ತೀವ್ರವಾಗಿ ಹರಡುವ ಉಸಿರಾಟದ ಸೋಂಕು ರೋಗವಾಗಿದ್ದು, ನಿರ್ದಿಷ್ಟ ಮತ್ತು ಸೂಕ್ತ ಚಿಕಿತ್ಸೆಯಿಂದ ಸಂಪೂರ್ಣವಾಗಿ ಗುಣಮುಖರಾಗಬಹುದು. ಇದು ಸಾಮಾನ್ಯ ವೈರೆಸ್ ಜ್ವರವಾಗಿದ್ದು, ಮುನ್ನಚ್ಚರಿಕ ಕ್ರಮಗಳಿಂದ ಈ ಜ್ವರ ಹರಡುವುದನ್ನು ತಡೆಗಟ್ಟಬಹುದು.
    ತೀವ್ರವಾದ ಶೀತ, ಜ್ವರ, ಕೆಮ್ಮು, ತಲೆನೋವು, ಗಂಟಲು ನೋವು ಮತ್ತು ಮೈ ಕೈ ನೋವು, ಉಸಿರಾಟದ ತೊಂದರೆ ಇನ್ನು ಮುಂತಾದವುಗಳು ಈ ಜ್ವರದ ಮುಖ್ಯ ಲಕ್ಷಣಗಳು.
    ಸೋಂಕಿತ ವ್ಯಕ್ತಿಯು ಕೆಮ್ಮುವುದರಿಂದ ಮತ್ತು ಸೀನುವುದರಿಂದ ವಾತಾವರಣದಲ್ಲಿ ವೈರಾಣುವಿನ ಕಣಗಳು ಹರಡಿ ದಿನನಿತ್ಯದ ಬಳಕೆಯ ವಸ್ತುವಿನ ಮೇಲೆ ಕೂರುತ್ತವೆ. ಆರೋಗ್ಯವಂತೆ ವ್ಯಕ್ತಿ ಈ ವಸ್ತುಗಳನ್ನು ಮುಟ್ಟಿದ/ಉಪಯೋಗಿಸಿದ ನಂತರ ಕೈಗಳಿಂದ ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳುವುದರಿಂದ ಸೋಂಕು ಹರಡುತ್ತದೆ.
    ಈ ಜ್ವರವನ್ನು ನಿಯಂತ್ರಿಸಲು ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಕರವಸ್ತ್ರದಿಂದ ಅಥವಾ ಟಿಶ್ಯೂ ಕಾಗದದಿಂದಾಗಲಿ ಮುಚ್ಚಿಕೊಳ್ಳಿ, ನಿಮ್ಮ ಮೂಗು, ಕಣ್ಣು ಅಥವಾ ಬಾಯಿಯನ್ನು ಮುಟ್ಟಿಕೊಳ್ಳುವ ಮೊದಲು ಮತ್ತು ನಂತರ ನಿಮ್ಮ ಕೈಗಳನ್ನು ಸಾಬೂನಿನಿಂದ ಮತ್ತು ನೀರಿನಿಂದ ಚೆನ್ನಾಗಿ ತೊಳೆದುಕೊಳ್ಳಿ, ಚೆನ್ನಾಗಿ ನಿದ್ದೆ ಮಾಡಿ, ದೈಹಿಕವಾಗಿ ಚಟುವಟಿಕೆಯಿಂದಿರಿ ಮತ್ತು ಒತ್ತಡವನ್ನು ಪರಿಣಾಮಕಾರಿಯಾಗಿ ನಿಭಾಯಿಸಿ, ಧಾರಾಳವಾಗಿ ನೀರು ಕುಡಿಯಿರಿ ಮತ್ತು ಪೌಷ್ಠಿಕಾಂಶವಿರುವ ಆಹಾರ ಸೇವಿಸಿ, ರೋಗ ನಿರೋಧಕ ಶಕ್ತಿಯನ್ನು ಬೆಳೆಸಿ, ಜನ ಸಂದಣಿಯಿರುವ ಸ್ಥಳಗಳಿಗೆ ಹೋದಾಗ ಸಾಕಷ್ಟು ಮುಂಜಾಗ್ರತಾ ಕ್ರಮಗಳನ್ನು ವಹಿಸುವುದನ್ನು ಮರೆಯದಿರಿ. ರೋಗದ ಲಕ್ಷಣವುಳ್ಳ ವ್ಯಕ್ತಿಗಳಿಂದ ಮಾರುದ್ದದ್ದಷ್ಟು ದೂರವಿರಿ.
    ರೋಗದ ಲಕ್ಷಣಗಳು ಕಂಡುಬಂದಲ್ಲಿ ಉದಾಸೀನ ಮಾಡದೆ ಕೂಡಲೇ ವೈದ್ಯರ ಸಲಹೆ ಪಡೆಯಿರಿ. ಚಿಕಿತ್ಸೆಗೆ ಸರ್ಕಾರದ ವತಿಯಿಂದ ಟ್ಯಾಮಿಪ್ಲೂ ಔಷಧಿ ಲಭ್ಯವಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಸಲಹೆ ಮೇರೆಗೆ ಪಡೆಯರಿ.

No comments:

Post a Comment