Monday 7 December 2015

ಮಂಡ್ಯ :ಆಹಾರ ಪದಾರ್ಥಗಳಲ್ಲಿ ರಾಗಿ ಹಿಟ್ಟಿನ ಪಾತ್ರ ಮಹತ್ವದಾಗಿದೆ ಎಂದು ಸಂಸದ ಸಿ.ಎಸ್.ಪುಟ್ಟರಾಜು ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಜೆಎಸ್‍ಡಿ ಪೆÇ್ರೀಡೆಕ್ಟ್ ವತಿಯಿಂದ ಆಯೋಜಿಸಿದ್ದ ಸಂಕ್ರಾಂತಿ ರಾಗಿ ಹಿಟ್ಟು ಮಾರು ಕಟ್ಟೆ ಬಿಡುಗಡೆ ಸಮಾರಂ ಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಗಿಹಿಟ್ಟಿನಲ್ಲಿ ಉತ್ಕøಷ್ಟ ಪೌಷ್ಠಿಕಾಂಶವಿದ್ದು ಸರ್ವ ರೋಗಗಳನ್ನು ನಿಯಂತ್ರಿಸಬಲ್ಲ ಉತ್ತಮ ಆಹಾರ ಪದಾರ್ಥ ವಾಗಿದೆ ಸಮರ್ಪಕವಾಗಿ ರಾಗಿ ಯನ್ನು ಬಳಸಿಕೊಂಡರೆ ರೋಗ ನಿಯಂತ್ರಣ ತಡೆಗಟ್ಟಬಹುದು. ನೀರಿನ ಸಮಸ್ಯೆಯನ್ನು ನೀಗಿ ಸಬಹುದ ಎಂದರು.
ಇತ್ತೀಚಿನ ದಿನಗಳಲ್ಲಿ ರಾಗಿಯೂ ವಿಶ್ವಮಾನ್ಯತೆ ಪಡೆಯುತ್ತಿದೆ. ವಿದೇಶಿಗರು ಕೂಡ ರಾಗಿಹಿಟ್ಟನ್ನು ಹೆಚ್ಚಾಗಿ ಬಳಸುತ್ತಿರುವುದು ಗಮನಿಸಬ ಹುದು. ಅಮೇರಿಕಾ, ಚೈನಾ ಸೇರಿದಂತೆ ಮುಂತಾದ ರಾಷ್ಟ್ರ ಗಳು ವಿವಿಧ ಪದಾರ್ಥಗಳಲ್ಲಿ ಬಳಸುತ್ತಿದ್ದಾರೆ ಎಂದು ಹೇಳಿ ದರು.
ವಿಜ್ಞಾನಿಗಳು ಮತ್ತು ಕøಷಿ ತಂತ್ರಜ್ಞರು ಕಡಿಮೆ ನೀರಿನಲ್ಲಿ ಬೆಳೆಯುವ ಪೌಷ್ಠಿಕಾಂಶತೆ ಯುಳ್ಳ ಆಹಾರ ಪದಾರ್ಥ ಗಳನ್ನು ಸಂಶೋಧಿಸಬೇಕು. ರೈತರಿಗೆ ಉತ್ತಮ ಲಾಭ ನೀಡುವ ಬೆಳೆಗಳನ್ನು ಕೊಡುಗೆಯಾಗಿ ನೀಡಬೇಕು ಎಂದು ಕರೆ ನೀಡಿದರು.
ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಅನ್ನವನ್ನು ಆಹಾರ ಪದಾರ್ಥವಾಗಿ ಸೇವಿಸುತ್ತಿರು ವುದರಿಂದ ದೀರ್ಘರೋಗಗಳಿಗೆ ತುತ್ತಾಗುತ್ತಿದ್ದಾರೆ. ವೈದ್ಯರ ಸಲಹೆ ಮೇರೆಗೆ ರೋಗ ನಿಯಂತ್ರಣ ಕ್ಕಾಗಿ ರಾಗಿಯನ್ನು ಮುದ್ದೆ, ರೊಟ್ಟಿ, ಗಂಜಿ ಮೊದಲಾದ ರೂಪದಲ್ಲಿ ಬಳಸುವುದು ಅಗತ್ಯ ಎಂದು ತಿಳಿಸಿದರು.
ಬೆಂಗಳೂರು, ಕøಷಿ ವಿಶ್ವವಿದ್ಯಾನಿಲಯ ವಿಶ್ರಾಂತ ಕುಲಪತಿ ಡಾ.ಕೆ.ನಾರಾಯಣ ಗೌಡ, ಮಾಣಿಕ್ಯನಹಳ್ಳಿ ಅಶೋಕ್‍ಗೌಡ, ಮಂಜು ವಡ್ಡರಹಳ್ಳಿ, ನಾಗೇಶ್ ಎಂ.ಬಿ. ಶ್ರೀನಿವಾಸ್, ಎಂ.ಎಸ್. ಕುಮಾರ್, ಕೊಳಲು ಪತ್ರಿಕೆ ಸಂಪಾದಕ ಶ್ರೀಪಾದು ಸೇರಿದಂತೆ ಇತರರಿದ್ದರು.

No comments:

Post a Comment