Monday 7 December 2015


ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ ಭಕ್ತಸಾಗರ.
ನಜನಗೂಡು: ಡಿ.07.  ಇಂದು ಕಾರ್ತಿಕ ಮಾಸದ ಕಡೇ ಸೋಮವಾರದ ಪ್ರಯುಕ್ತ  ರಾಜ್ಯದ ವಿವಿಧ ಮೂಲೆಗಳಿಂದ ಭಕ್ತರು ಆಗಮಿಸಿ ಬೆಳಿಗಿನ ಜಾವ 4.30ರಿಂದ ಸ್ನಾನ-ಸಂಧ್ಯವಂದನೆಗಳನ್ನು ಮಾಡಿ, ಹರಕೆಯಂತೆ  ಮುಡಿಕಟ್ಟೆಯಲ್ಲಿ ಕೇಶವನ್ನು ತೆಗೆಸಿಕೊಂಡು, ನಂತರ ಸ್ನಾನಮಾಡಿ, ಉರುಳುಸೇವೆ, ಮಾಡುತ್ತಾ ದೇವಸ್ಥಾನದ  ಸರತಿ ಸಾಲಿನಲ್ಲಿ ನಿಂತು ಶ್ರೀಕಂಠೇಶ್ವರ ಸ್ವಾಮಿ ದರ್ಶನ ಪಡೆದು ಕೃತಾರ್ಥರಾದರು.
     ಬೆಳೆಗಿನ ಜಾವದ  ಸೇವೆಯಗಳಾದ  ಕಪಿಲಾ ತೀರ್ಥದ  ಮಜ್ಜನ, ಬಿಲ್ವಪತ್ರೆ, ಪಂಚಾಮೃತಾಭಿಷೇಕ, ಜೇನುತುಪ್ಪ, ಹಾಲು-ಮೊಸರು, ಶಾಲ್ಯಾನ್ನ, ಮುಂತಾದ ಅಭಿಷೇಕಗಳು ನಡೆದು ನಂತರ  ವಿವಿಧ ಅರ್ಚನೆಗಳು, ವಿವಿಧ ಸೇವೆಗಳಾದ ತುಲಾಭಾರ,
ಭಕ್ತರಿಂದ ಪ್ರಸಾದವಿನಿಯೋಗ, ಹರಕೆ ಮುಂತಾದವುಗಳು ಜರುಗಿದವು.
     ಜನಸಂದಣಿಯ ಕಾರಣ ದೇವಸ್ಥಾನದವತಿಯಿಂದ  ಧ್ವನಿವರ್ದಕದಲ್ಲಿ  ಭಕ್ತಾಧಿಗಳಿಗೆ ಎಚ್ಚರಿಕೆಯಾಗಿರಲು  ಗಂಟೆಯಂತೆ ,ತಮ್ಮ ತಮ್ಮ ವಸ್ತುಗಳನ್ನು, ಬೆಲೆಬಾಳುವ ಆಭರಣಗಳನ್ನು ಸುರಕ್ಷತವಾಗಿ ನೋಡಿಕೊಳ್ಳಲು  ಎಚ್ಚರಿಸುತ್ತಿರುವುದು ಕಾಣಬರುತ್ತಿತ್ತು.
      ದೇವಸ್ಥಾನದಲ್ಲಿ ವಿಷೇಶತೆಯಿಂದ  ಜನರನ್ನು ನಿಯಂತ್ರಿಸಲು ಸಂಚಾರಿ ಪೆÇಲೀಸರು, ಹಾಗೂ ಭಕ್ತರ  ವಸ್ತುಗಳ  ಕಳ್ಳತನವಾಗದಂತೆ  ವಿವಿಧ ಮಾರು ವೇಶಗಳಲ್ಲಿ  ಪೆÇಲೀಸ್ ತಂಡ ಸದಾ ಸನ್ನದ್ದರಾಗಿ ಕೆಲಸಮಾಡುತ್ತಿದ್ದು  ಕಾಣುವಂತಿತ್ತು.

No comments:

Post a Comment