Monday 19 January 2015

ಕುಡಿಯುವ ನೀರಿನ ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ : ರಾಮಚಂದ್ರಯ್ಯ.

ಕುಡಿಯುವ ನೀರಿನ ಬಾಕಿ ಪಾವತಿಸದಿದ್ದರೆ ಸಂಪರ್ಕ ಕಡಿತ :                   ರಾಮಚಂದ್ರಯ್ಯ.
ಮಂಡ್ಯ,ಜ.20- ನಗರಾದ್ಯಂತ ಕುಡಿಯುವ ನೀರಿನ ಬಿಲ್ ಸುಮಾರು 8.5 ಕೋಟಿ ಬಾಕಿ ಇದ್ದು, ಈ ವಿಚಾರವಾಗಿ ಬಾಕಿದಾರರಿಗೆ ನೋಟೀಸ್ ಜಾರಿ ಮಾಡಲಾಗಿದೆ ಹಾಗೂ ಬಾಕಿದಾರರಿಗೆ ಬಿಲ್ ಪಾವತಿಸುವಂತೆ ಸೂಚಿಸಲಾಗಿದೆ ಎಂದು ಕುಡಿಯುವ ನೀರು ಮತ್ತು ಒಳಚರಂಡಿ ಮಂಡಳಿಯ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಮಚಂದ್ರಯ್ಯ ತಿಳಿಸಿದ್ದಾರೆ.
ಅವರು ಪತ್ರಿಕೆಯೊಂದಿಗೆ ಮಾತನಾಡುತ್ತಾ, ನಗರದಲ್ಲಿ 18,972 ಕುಡಿಯುವ ನೀರಿನ ಸಂಪರ್ಕ ಹೊಂದಿದ್ದು, ಇದರಲ್ಲಿ 1 ಸಾವಿರದಿಂದ 50 ಸಾವಿರ ರೂ.ಗಳ ವರೆಗೆ ಹೋಟೆಲ್ ಸೇರಿದಂತೆ ಇತರೆ ಖಾಸಗಿ ಉದ್ಯಮಿದಾರರು ಮತ್ತು ನಾಗರೀಕರೂ ಬಿಲ್ ಬಾಕಿ ಉಳಿಸಿಕೊಂಡಿದ್ದಾರೆ. ಸದರಿ ವಿಚಾರವಾಗಿ ನೋಟೀಸ್ ಈಗಾಗಲೇ ಹೊರಡಿಸಿದ್ದು, ಮುಂದಿನ ವಾರದಿಂದ ಮೂರು ತಂಡವನ್ನು ರಚಿಸಿ ಪ್ರತಿ ವಾರ್ಡ್‍ನಲ್ಲೂ ಬಿಲ್ ಬಾಕಿ ಇರುವ ಗ್ರಾಹಕರಿಗೆ ನೀರಿನ ಸಂಪರ್ಕವನ್ನು ಕಡಿತಗೊಳಿಸುವುದಾಗಿ ಎಚ್ಚರಿಸಿದ್ದಾರೆ.
ಮುಂದುವರೆದು ಮಾತನಾಡಿದ ಅವರು, ಕಛೇರಿಯಲ್ಲಿಯೂ ಸಹ ನೌಕರರ ಕೊರತೆಇದ್ದು, ಸಾಕಷ್ಟು ತೊಂದರೆಯನ್ನು ಅನುಭವಿಸುವಂತಾಗಿದೆ. ಐದು ಮಂದಿ ಇಂಜಿನಿಯರ್ ಇರಬೇಕಾದ ಕಛೇರಿಯಲ್ಲಿ ಕೇವಲ ಒಬ್ಬರು ಕಾರ್ಯನಿರ್ವಹಿಸುತ್ತಿದ್ದಾರೆ.
ನೀರು ನಿರ್ವಹಣಾ ಕೆಲಸಕ್ಕೆ 8 ಮಂದಿಯ ಅವಶ್ಯಕತೆ ಇದೆ. ಸಂಪೂರ್ಣ 8 ಮಂದಿಯ ಹುದ್ದೆ ಕಾಲಿಯಾಗಿರುವುದರಿಂದ ಸಾಕಷ್ಟು ಕೆಲಸ ಕಾರ್ಯಗಳು ಕುಂಠಿತಗೊಂಡಿದೆ. ಜೊತೆಗೆ ಕಛೇರಿಯ ಕೆಲಸಕ್ಕೆಂದು ಎಂಟು ಮಂದಿ ಸಿಬ್ಬಂದಿಯ ಅವಶ್ಯಕತೆ ಇದ್ದು ಅವರ ಕೊರತೆಯೂ ಕಾಡುತ್ತಿದೆ. ಈಗ ಹೊರಗುತ್ತಿಗೆಯ ಆಧಾರದ ಮೇಲೆ ಕೆಲವರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಅವರ ಮೇಲೆ ಜವಾಬ್ದಾರಿಯ ಕೆಸಲಗಳನ್ನು ವಹಿಸಲು ಸಾಧ್ಯವಾಗದಿರುವುದರಿಂದ ಇಷ್ಟೆಲ್ಲ ಬಾಕಿ ಉಳಿಯಲು ಕಾರಣವಾಗಿದೆ ಎಂದು ತಿಳಿಸಿದರು.

No comments:

Post a Comment