Wednesday 14 January 2015

ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ

                              ವೃತ್ತಿ ನೈಪುಣ್ಯತೆ ತರಬೇತಿ ಸಮಾರೋಪ ಸಮಾರಂಭ
 ಮೈಸೂರು, ಜನವರಿ 14- ದೃಶ್ಯ ಮಾಧ್ಯಮದ ವೇಗದ ಬೆಳವಣಿಗೆ ಅಭಿವೃಧ್ಧಿ ದೃಷ್ಟಿಯಿಂದ ಸಮಾಜದಲ್ಲಿ ಮೇಲೆ ಒಳ್ಳೆಯ ಪರಿಣಾಮ ಬೀರುತ್ತಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೊ ಸಿ. ಬಸವರಾಜು ಹೇಳಿದರು.
 ಅವರು ಇಂದು ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ವತಿಯಿಂದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
 ದೃಶ್ಯ ಮಾಧ್ಯಮದ ಕ್ಷೇತ್ರ ಅಪಾರವಾಗಿದೆ. ಪ್ರತಿಭೆಗೆ ಬಹಳಷ್ಟು ಅವಕಾಶವಿದೆ. ಮುದ್ರಣ ಮಾಧ್ಯಮ ಜೊತೆಯಲ್ಲಿ ದೃಶ್ಯ ಮಾಧ್ಯಮ ಸಮಾಜದಲ್ಲಿರು ತೊಡುಕುಗಳನ್ನು ಸರಿಪಡಿಸಲು ಶ್ರಮಿಸುತ್ತಿದೆ ಎಂದು ತಿಳಿಸಿದರು. 
  ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಪದವೀಧರ ಯುವಕ ಯುವತಿಯರಿಗೆ ವಿದ್ಯುನ್ಮಾನ ಮಾಧ್ಯಮದಲ್ಲಿ ವೃತ್ತಿ ನೈಪುಣ್ಯತೆ ತರಬೇತಿ  ಮಾಧ್ಯಮ ಕ್ಷೇತ್ರದಲ್ಲಿ ಈ ವರ್ಗದ ಪ್ರತಿಭಾವಂತರಿಗೆ ತಮ್ಮ ಕೌಶಲ್ಯವನ್ನು ಪ್ರದರ್ಶಿಸಲು ಉತ್ತಮ ವೇದಿಕೆ. ಸ್ವಂತ ದುಡಿಮೆಯನ್ನು ಅವಲಂಬಿಸುವವರಿಗೆ ಈ ತರಬೇತಿ ಒಳ್ಳೆಯ ಅವಕಾಶ ಎಂದು ತಿಳಿಸಿದರು.
  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಉಪ ನಿರ್ದೇಶಕರಾದ ಎ.ಆರ್.ಪ್ರಕಾಶ್ ಮಾತನಾಡಿ ಸರ್ಕಾರ ಹಾಗೂ ಸಾರ್ವಜನಿಕರ ನಡುವಿನ  ಕೊಂಡಿಯಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮೇಲಿದೆ. ಸರ್ಕಾರದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಸುದ್ದಿ, ಜಾಹಿರಾತು, ಬೀದಿ ನಾಟಕ, ಕಲಾ ಜಾಥ ಹಾಗೂ ಇತರೆ ಮಧ್ಯಮಗಳ  ಮೂಲಕ ಜನರಿಗೆ ಅರಿವು ಮೂಡಿಸುವ ಕೆಲಸ ಇಲಾಖೆ ಮಾಡುತ್ತಿದೆ.
  ತರಬೇತಿಯನ್ನು ಪಡೆದ ವಿದ್ಯಾರ್ಥಿಗಳು ಮುಂದಿನ ವರ್ಷ ನಡೆಯುವ ತರಬೇತಿ  ವೇಳೆಗೆ ಜೀವನದಲ್ಲಿ ಉನ್ನತ ಸ್ಥಾನವನ್ನು ಸಂಪಾದಿಸಿದರೆ ತರಬೇತಿಯ ಉದ್ದೇಶ ಯಶಸ್ವಿಯಾದಂತೆ ಎಂದರು.
  ಇದೇ ಸಂದರ್ಭದಲ್ಲಿ ತರಬೇತಿಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು.
  ಮೈಸೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಬಹುಮಾಧ್ಯಮ ಸಂಶೋಧನಾ ಕೇಂದ್ರದ ನಿದೇಶಕರಾದ ನಿರಂಜನ್ ವಾನಳ್ಳಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು.

No comments:

Post a Comment