Thursday, 2 July 2015

ಮೈಸೂರು, ಜು. 2- ಅಲ್ಪ ಸಂಖ್ಯಾತರ ಇಲಾಖೆಯಲ್ಲಿನ ಅವ್ಯವಹಾರದ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಶ್ರೀ ರಾಮ ಸೇನೆಯ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಆಗ್ರಹಿಸಿದ್ದಾರೆ.
 ನಗರದ ಪತ್ರಕರ್ತರಭವನದಲ್ಲಿ ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಇಲಾಖೆಯಲ್ಲಿ 3 ಸಾವಿರ ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು ಅವರು ಆರೋಪಿಸಿದರು.
ಕೇಂದ್ರ ಹಾಗೂ ರಾಜ್ಯ ಸರಕಾರದಿಂದ ಬರುವ ಅನುದಾನ ಶೇ. 90ರಷ್ಟು ಮುಸ್ಲಿಮರಿಗೆ, 10ರಷ್ಟು ಕ್ರಿಶ್ಚಿಯನ್ನರಿಗೆ ಸವಲತ್ತುರೂಪದಲ್ಲಿ ಸಿಗುತ್ತದೆ. ಆದರೆ ಅಲ್ಪ ಸಂಖ್ಯಾತರ ಪಟ್ಟಿಯಲ್ಲಿಯೇ ಇರುವ ಸಿಕ್ಕರು, ಜೈನರು, ಪಾರ್ಸಿಗಳು ಮತ್ತು ಬೌದ್ಧರಿಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ ಎಂದರು.
ಈ ಬಗ್ಗೆ ಪ್ರಶ್ನಿಸಲು ಹೋದರೆ ಅಲ್ಪಸಂಖ್ಯಾತರ ಪ್ರಮಾಣ ಪತ್ರ ತರುವಂತೆ ಸೂಚಿಸುತ್ತಾರೆ. ಆದರೆ ಈ ಪತ್ರ ಎಲ್ಲಿ ಯಾರಿಂದ ಸಿಗುತ್ತದೆ ಎಂಬ ಮಾಹಿತಿಯನ್ನು ಯಾರೂ ಹೇಳುವುದಿಲ್ಲ ಎಂದವರು ತಿಳಿಸಿದರು.
 ಈ ಇಲಾಖೆಯಲ್ಲಿ ನಡೆಯುತ್ತಿರುವ ಅವ್ಯವಹಾರದ ಬಗ್ಗೆ ಮುಖ್ಯಮಂತ್ರಿಗಳ ಗಮನ ಸೆಳೆಯಲು ಜು. 6ರಂದು ಬೆಳಗಾವಿಯ ಅಧಿವೇಶನ ಸಂದರ್ಭದಲ್ಲಿ  ಸೌಲಭ್ಯ ವಂಚಿತ 10 ಸಾವಿರ ಮಂದಿ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಮನವಿ ಪ್ರತ ಸಲ್ಲಿಲಾಗುತ್ತದೆ ಎಂದವರು ಹೇಳಿದರು.
ಅಲ್ಪ ಸಂಖ್ಯಾತರ ಹೆಸರಿನಲ್ಲಿ ಸವಲತ್ತು ಪಡೆದುಕೊಂಡು ಮುಸ್ಲಿಮರು ಮುಂದುವರೆದಿದ್ದಾರೆ ಅವರನ್ನು ಅಲ್ಪ ಸಂಖ್ಯಾತ ಪಟ್ಟಿಯಿಂದ ಕೈಬಿಡಬೇಕು. ಅಲ್ಪ ಸಂಖ್ಯಾತ ಇಲಾಖೆಯಲ್ಲಿನ ತಾರತಮ್ಯ ಹೋಗಲಾಡಿಸಬೇಕು. ಈ ಬಗ್ಗೆ ಸಮಗ್ರ ತನಿಖೆ ಆಗಬೇಕೆಂದು ಒತ್ತಾಯಿಸಿದರು.

      ಮೈಸೂರಲ್ಲಿ 2 ದಿನ ಉದ್ಯೋಗ ಮೇಳ
ಮೈಸೂರು,ಜು.2- ಮೈಸೂರಿನ  ಮಹಾರಾಜ ಇನ್ಸ್‍ಟಿಟ್ಯೂಟ್ ತಾಂತ್ರಿಕ ಸಂಸ್ಥೆ ವತಿಯಿಂದ  ಇದೇ ತಿಂಗಳ 6 ಮತ್ತು 7 ರಂದು ಎರಡು ದಿನಗಳು  ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ ಎಂದು ಸಂಸ್ಥೆಯ ವ್ಯವಸಾಪಕ ಹರ್ಷಿತ್ ದಿವಾಕರ್ ತಿಳಿಸಿದರು.
 ಮೈಸೂರಿನ ಪತ್ರಕತ್ರ ಭವನದಲ್ಲಿ ಸುದ್ಧಿಗೋಷ್ಟಿ ನಡೆಸಿ ಮಾತನಾಡಿದ ಅವರು, ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸುವ ಸಲುವಾಗಿ ಈ ಉದ್ಯೋಗ ಮೇಳ ಆಯೋಜಿಸಲಾಗಿದ್ದು, ಓ ಮೇಳದಲ್ಲಿ ಎಲ್ಲಾ ಡಿಪ್ಲಮೋ ಪಧವಿದರರು ಹಾಗೂ ಸ್ನಾತಕೋತ್ತರ ಪದವಿ ಹೊಂದಿರುವವರಿಗೆ  ಉತ್ತಮ ಅವಕಾಶವಾಗಿದೆ  ಇದನ್ನು ವಿದ್ಯಾರ್ಥಿಗಳು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
  ಮಹಾರಾಜ ಶಿಕ್ಷಣ ಸಂಸ್ಥೆಯು ಈ ಮೇಲವನ್ನು ಸಾಮಾಜಿಕ ಹಿತದೃಷ್ಟಿಯಿಂದ  ಆಯೋಜಿಸಿದೆ, ಇದರಲ್ಲಿ ಭಾಗವಹಿಸುವ  ಉದ್ಯೋಗಾಕಾಂಕ್ಷಿಗಳು ಯಾವುದೇ ರೀತಿಯ  ಮುಂಗಡ ಶುಲ್ಕವಾಗಲೀ ಹಾಗೂ ಇತರೆ ಶುಲ್ಕವನ್ನು ಪಾವತಿಸುವಂತಿಲ್ಲ, ಈ ಕಾರ್ಯಕ್ರಮದಲ್ಲಿ ಸುಮಾರು 150ಕ್ಕೂ ಹೆಚ್ಚು ಕಂಪನಿಗಳು  ಭಾಗವಹಿಸಲಿದ್ದು,  ಇದರಿಮದ  ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಂದಿಗೆ   ಹುದ್ದೆಗಳು ಸಿಗುವ  ಅವಕಾಶಗಳಿರುತ್ತವೆ ಇದು ಜಿಲ್ಲೆಯ ಜನತೆಗೆ  ಉತ್ತಮ ಅವಕಾಶವಾಗಿರುತ್ತದೆಎಮದು ಹೇಳಿದರು.
 ಉದ್ಯೋಗ ಮೇಳವು ಶ್ರೀರಂಗಪಟ್ಟಣ ತಾಲ್ಲೂಕು ಬೆಳವಾಡಿ ಗ್ರಾಮದಲ್ಲಿರುವ ಮಹಾರಾಜ ಇನ್ಸ್‍ಟಿಟ್ಯೂಟ್ ಆಫ್ ಟೆಕ್ನಾಲಜಿ  ಆವರಣದಲ್ಲಿ  ಬೆಳಿಗ್ಗೆ 9 ರಿಮದ  ಸಂಜೆ 5ರ ವರೆಗೆ ನಡೆಯಲಿದೆ, ಅಭ್ಯರ್ಥಿಗಳು, 10ನೇ, ಪಿಯುಸಿ, ಐಟಿಐ, ಬಿಇ, ಬಿಎಸ್‍ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಎಸ್‍ಡಬ್ಲ್ಯು,  ಎಂಎ, ಎಂಕಾಂ, ಎಂಎಸ್ ಡಬ್ಲ್ಯು, ಎಂಟೆಕ್,  ಸೇರಿದಮತೆ ಇತರೆ ಎಲ್ಲಾ  ಪದವಿದರರು  ಭಾಗವಹಿಸಬಹುದಾಗಿದೆ, ಅಭ್ಯರ್ಥಿಗಳು ತಮ್ಮೊಂದಿಗೆ  ದಾಖಲಾತಿಗಳೊಂದಿಗೆ ಬಯೋಡೆಟಾದ ಹತ್ತು ಪ್ರತಿಗಳನ್ನು ತರಲು ಕೋರಿದ್ದಾರೆ,  ಹೆಚ್ಚಿನ ಮಾಹಿತಿಗಾಗಿ 9739532219, 8050316746, 7204279196, 9480839606  ಅನ್ನು ಸಂಪರ್ಕಿಸಲು ಕೋರಿದೆ. ಅಭ್ಯರ್ಥಿಗಲ ಅನುಕೂಲಕ್ಕಾಗಿ ಮೈಸೂರು ನಗರದ ವಿವಿದ ಭಾಗಗಳಿಂದ ಉದ್ಯೋಗ ಮೇಳ ನಡೆಯುವ ಸ್ಥಳಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ ಎಂದು ಹೇಳಿದರು.
ಮೈಸೂರು:ಜು.2: ನಾಲ್ಕು ವರ್ಷದ ಗಂಡು ಚಿರತೆಯೊಂದನ್ನು ದುಷ್ಕರ್ಮಿಗಳು ಹೊಡೆದು ಕೊಂದು ಹಾಕಿರುವ ಘಟನೆ ಗುರುವಾರ ವರದಿ ಯಾಗಿದೆ. ಮೈಸೂರು ಜಿಲ್ಲೆಯ ವರಕೂಡು ಗ್ರಾಮದಲ್ಲೇ ಈ ಘಟನೆ ವರದಿಯಾಗಿರುವುದು. ವರಕೂಡು ಗ್ರಾಮದ ನಿವಾಸಿ ಜಯರಾಮು ಎಂಬುವರ ಜಮೀನಿನಲ್ಲಿ ಮೃತ ಚಿರತೆಯ ದೇಹ ಪತ್ತೆಯಾಗಿದೆ ಎನ್ನಲಾಗಿದೆ.

ಕಳೆಬರಹವನ್ನು ಪರಿಶೀಲಿಸಿರುವ ವಲಯ ಅರಣ್ಯ ಅಧಿಕಾರಿಗಳು ದುಷ್ಕರ್ಮಿಗಳು ದೊಣ್ಣೆಯಿಂದ ಹೊಡೆದು ಚಿರತೆಯನ್ನು ಹತ್ಯೆ ಮಾಡಿರು ವ ಶಂಕೆಯನ್ನು ವ್ಯಕ್ತಪಡಿಸಿದ್ದಾರೆ. ಅಧಿಕಾರಿಗಳ ಪರಿಶೀಲನಾ ಕಾರ್ಯ ಮುಂದುವರೆದಿದ್ದು, ಸ್ಥಳೀಯರಿಂದ ಈ ಸಂಬಂಧ ಹೆಚ್ಚಿನ ಮಾಹಿತಿ ಪಡೆಯುತ್ತಿದ್ದಾರೆ.

ಮೈಸೂರು ಗ್ರಾಮಾಂತರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

No comments:

Post a Comment