ಮೈಸೂರು ನಗರದ ಬಂಬೂ ಬಜಾರ್, ವಾರ್ಡ್ ನಂ. 34 ರ ವ್ಯಾಪ್ತಿಯಲ್ಲಿ ಬರುವ ಬಹುವಿಸ್ತಾರವಾದ ಜೋಡಿ ತೆಂಗಿನ ಮರದ ಸ್ಮಶಾನದ ಅಭಿವೃದ್ದಿ ಕಾಮಗಾರಿಯು ಪಾಲಿಕೆ ವತಿಯಿಂದ ಭರದಿಂದ ಸಾಗುತ್ತಿದೆ. ದಿನಾಂಕ : 30-06-2015 ರಂದು ಬೆಳಿಗ್ಗೆ 10-00 ಗಂಟೆಗೆ ಮೈಸೂರು ಮಹಾನಗರ ಪಾಲಿಕೆ ಆಯುಕ್ತರಾದ ಡಾ:ಸಿ.ಜಿ.ಬೆಟಸೂರಮಠ ರವರು ಹಾಗೂ ವಾರ್ಡ್ ನಂ. 34 ರ ಮಾನ್ಯ ಸದಸ್ಯರಾದ ಶ್ರೀ.ಡಿ.ನಾಗಭೂಷಣ್ ರವರು ಸದರಿ ಅಭಿವೃದ್ದಿ ಕಾಮಗಾರಿಯನ್ನು ಪರಿಶೀಲಿಸಿದರು. ಈ ಸಂದರ್ಭದಲ್ಲಿ ವಲಯಕಚೇರಿ-06 ರ ಅಭಿವೃದ್ದಿ ಅಧಿಕಾರಿ ಶ್ರೀ.ಕೆ.ಎನ್.ಜಗದೀಶ್ ಹಾಗೂ ಕೊಹಿನೂರು ಇಂಜಿನಿಯರಿಂಗ್ ವಕ್ರ್ಸನ ಪ್ರೊಪ್ರೈಟರ್ ಆದ ಶ್ರೀ.ಸತೀಶ್ ರವರು ಹಾಜರಿದ್ದರು. ಈ ಕಾಮಗಾರಿಯನ್ನು ಎಸ್.ಎಫ್.ಸಿ. ಅನುದಾನದಡಿ ರೂ. 99 ಲಕ್ಷ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುತ್ತದೆ. ಈ ಸ್ಮಶಾನವನ್ನು ಉದ್ಯಾನವನದ ರೂಪದಲ್ಲಿ ಅಭಿವೃದ್ದಿ ಪಡಿಸಲಾಗುವುದೆಂದು ಆಯುಕ್ತರು ಬೆಟ್ಟಸೂರ್ ಮಠ್ ತಿಳಿಸಿದರು.
No comments:
Post a Comment