ಸಮಾಜ ನಿರ್ಮಾಣದಲ್ಲಿ ಯುವಕರ ಪಾತ್ರ ಮಹತ್ವ: ಮುಖ್ಯಮಂತ್ರಿ
ಮೈಸೂರು, ಜೂನ್ 27. ಯುವಜನರು ಸಮಾಜ ನಿರ್ಮಾಣದಲ್ಲಿ ಮಹತ್ವದ ಪಾತ್ರವಹಿಸುತ್ತಿದ್ದು, ಅವರ ಪ್ರೋತ್ಸಹಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಇಂದು ಜೆ.ಕೆ.ಕ್ರೀಡಾಂಗಣದ ಆವರಣದಲ್ಲಿರುವ ಅಮೃತ ಮಹೋತ್ಸವ ಭವನದಲ್ಲಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯಿಂದ 2012 ಹಾಗೂ 2013ನೇ ಸಾಲಿನಲ್ಲಿ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಹಮ್ಮಿಕೊಳ್ಳಲಾದ ನಗದು ಪುರಸ್ಕಾರ ಪ್ರದಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಯುವಕರನ್ನು ಸದೃಢ ಹಾಗೂ ಸಬಲೀಕರಿಸಲು ಸರ್ಕಾರದಿಂದ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕ್ರೀಡಾಪಟುಗಳಿಗೆ ನೀಡಲಾಗುತ್ತಿದ್ದ ಬಹುಮಾನದ ಮೊತ್ತವನ್ನು ಹೆಚ್ಚಿಸಲಾಗಿದೆ. ರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕಗಳಿಸಿದವರಿಗೆ ರೂ 1 ಲಕ್ಷದಿಂದ ರೂ 5 ಲಕ್ಷಕ್ಕೆ, ಬೆಳ್ಳಿ ಪದಕ ವಿಜೇತರಿಗೆ ರೂ 50,000 ರಿಂದ ರೂ 3ಲಕ್ಷ, ಕಂಚು ಪದಕ ವಿಜೇತರಿಗೆ ರೂ 25,000 ರಿಂದ ರೂ 2 ಲಕ್ಷ ಹಾಗೂ ಅಂತರಾಷ್ಟ್ರಮಟ್ಟದಲ್ಲಿ ಚಿನ್ನದ ಪದಕಗಳಿಸಿದವರಿಗೆ ರೂ 10 ಲಕ್ಷದಿಂದ ರೂ 25 ಲಕ್ಷಕ್ಕೆ ನಗದು ಬಹುಮಾನವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾಗಬೇಕಾದರೆ ಉತ್ತಮ ಗುಣಮಟ್ಟದ ಸೌಲಭ್ಯ ಹಾಗೂ ತರಬೇತಿ ಮುಖ್ಯವಾಗಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅನೇಕ ಕ್ರೀಡಾ ಹಾಸ್ಟಲ್ ಹಾಗೂ ಟ್ರ್ಯಾಕ್‍ಗಳನ್ನು ನಿರ್ಮಿಸಿದೆÉ. ದೇಶದಲ್ಲಿ ಕರ್ನಾಟಕ ಅತೀ ಹೆಚ್ಚು ಸಿಂಥೆಟಿಕ್ ಟ್ರ್ಯಾಕ್‍ಗಳನ್ನು ಹೊಂದಿರುವ ರಾಜ್ಯವಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.
ಪಾಠ ಪ್ರವಚನದ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಪ್ರಾಮುಖ್ಯತೆ ನೀಡಬೇಕು. ಕ್ರೀಡಾಪಟುಗಳು ಶೈಕ್ಷಣಿಕವಾಗಿ ಪ್ರಗತಿ ಹೊಂದಲು ಸಮಾನ್ಯ ಪ್ರವೇಶ ಪರೀಕ್ಷೆಯ ಮೂಲಕ 100 ಇಂಜಿನಿಯರಿಂಗ್ ಸೀಟ್ ಗಳನ್ನು ನೀಡಲಾಗಿದೆ. ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಸರ್ಕಾರಿ ಹಾಗೂ ಇತರೆ ಕ್ಷೇತ್ರದಲ್ಲಿ ಕೆಲಸ ಸಿಗಲಿದೆÉ. ತಂದೆ ತಾಯಂದಿರ ಪ್ರೋತ್ಸಹ ಕ್ರೀಡಾಪಟುಗಳಿಗೆ ಅಗತ್ಯ. ಆದ್ದರಿಂದ ತಂದೆ ತಾಯಂದಿರು ತಮ್ಮ ಮಕ್ಕಳಲ್ಲಿನ ಕ್ರೀಡಾ ಪ್ರತಿಭೆಯನ್ನು ಗುರುತಿಸಿ ಅಗತ್ಯ ಪ್ರೋತ್ಸಹ ನೀಡಲು ಮುಂದಾಗಬೇಕು ಎಂದರು.
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ರಾಷ್ಟ್ರೀಯತೆ ಹಾಗೂ ಜಾತ್ಯಾತೀತ ಮನೂಭಾವ ಹೆಚ್ಚುತ್ತದೆ. ಕ್ರೀಡೆಯಲ್ಲಿ ಜಾತಿ ಧರ್ಮವೆಂಬ ಭೇದಭಾವ ಇರುವುದಿಲ್ಲ. ಕ್ರೀಡೆ ಮಹತ್ವದ ಕ್ಷೇತ್ರವಾಗಿದ್ದು, ಬದುಕಿನಲ್ಲಿ ಕ್ರೀಡಾಮನೂಭಾವ ಬೆಳಸಲು ಮುಖ್ಯಪಾತ್ರವಹಿಸುತ್ತದ್ದೆ. ಕ್ರೀಡಾ ಕ್ಷೇತ್ರದಲ್ಲಿ ಸಮಾನತೆ ತರಲು ವಿಕಲಚೇತನ ಹಾಗೂ ಇತರೆ ಕ್ರೀಡಾಪಟುಗಳಿಗೆ ನಗದು ಬಹುಮಾನದ ಮೊತ್ತ ಹಾಗೂ ಪ್ರೋತ್ಸಹವನ್ನು ಸಮಾನವಾಗಿ ನೀಡಲಾಗುತ್ತಿದೆ ಎಂದು ಮುಖ್ಯಮಂತ್ರಿ ಹೇಳಿದರು.
2012 ಮತ್ತು 2013ನೇ ಸಾಲಿನಲ್ಲಿ ವಿಕಲಚೇತನ ಕ್ರೀಡಾಪಟುಗಳು ಸೇರಿದಂತೆ 557 ಜನರಿಗೆ ನಗದು ಬಹುಮಾನವನ್ನು ಇಂದು ನೀಡಲಾಗುತ್ತಿದೆ. 117 ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ರಾಷ್ಟ್ರೀಯ ಮಟ್ಟದ 440 ಕ್ರೀಡಾಪಟುಗಳು ಸೇರಿದ್ದು, ರೂ. 4,40,13,127 ನಗದು ಬಹುಮಾನವನ್ನು ನೀಡಲಾಗುತ್ತಿದೆ. ಇದರಲ್ಲಿ ಅಂತರಾಷ್ಟ್ರೀಯ ಮಟ್ಟದ 5 ಜನ ವಿಕಲಚೇತನ ಕ್ರೀಡಾಪಟುಗಳು ಹಾಗೂ 33 ರಾಷ್ಟ್ರೀಯ ಮಟ್ಟದ ವಿಕಲಚೇತನ ಕ್ರೀಡಾಪಟುಗಳು ಒಳಗೊಂಡಿದ್ದಾರೆ ಎಂದು ತಿಳಿಸಿದರು.
ಕ್ರೀಡಾಪಟುಗಳಿಗೆ ತರಬೇತಿದಾರರ ಅವಶ್ಯವಿದೆ. ತರಬೇತಿದಾರರಿಲ್ಲದೆ ಯಾವ ಕ್ರೀಡಾಪಟು ಕ್ರೀಡಾಕ್ಷೇತ್ರÀದಲ್ಲಿ ಸಾಧನೆ ಮಾಡುವುದು ಅಸಾಧ್ಯ. ತರಬೇತಿದಾರರು ಕ್ರೀಡಾಪಟುಗಳ ಭವಿಷ್ಯ ನಿರ್ಮಾಣ ಮಾಡುವುದರಲ್ಲಿ ಮುಖ್ಯ ಪಾತ್ರವಹಿಸುತ್ತಾರೆ. ಕ್ರೀಡಾ ಇಲಾಖೆಯಿಂದ ಹೆಚ್ಚಿನ ಪ್ರಸ್ತಾವನೆಗಳು ಬಂದಲ್ಲಿ ಸರ್ಕಾರದಿಂದ ಎಲ್ಲಾ ರೀತಿಯಲ್ಲಿ ಸಹಕಾರ ನೀಡಲಾಗುವುದು ಎಂದು ಮುಖ್ಯಮಂತ್ತಿ ಸಿದ್ದರಾಮಯ್ಯ ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವಜನ ಸೇವಾ ಮತ್ತು ಮೀನುಗಾರಿಕೆ ರಾಜ್ಯ ಸಚಿವ ಕೆ. ಅಭಯಚಂದ್ರ, ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಮೈಸೂರು ಮಹಾನಗರಪಾಲಿಕೆ ಮಹಾಪೌರ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ. ಬಿ. ಪುಷ್ಪ ಅಮರನಾಥ್, ವಿಧಾನಸಭಾ ಸದಸ್ಯ ವಾಸು, ಎಂ.ಕೆ. ಸೋಮಶೇಖರ್, ಕಾವೇರಿ ಅಚ್ಚುಕಟ್ಟು ಅಭಿವೃದ್ಧಿ ಪ್ರಾಧಿಕಾರ ಸಿ. ದಾಸೇಗೌಡ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಧಾನ ಕಾರ್ಯದರ್ಶಿ ನಾಗಾಂಬಿಕಾ ದೇವಿ, ನಿರ್ದೇಶಕರಾದ ಹೆಚ್.ಎಸ್. ವೆಂಕಟೇಶ್ ಹಾಗೂ ಇತರೆ ಗಣ್ಯರು ಭಾಗವಹಿಸಿದರು.
No comments:
Post a Comment