27ರಂದು ಮೈಸೂರಿನಲ್ಲಿ ನಡೆಯಲಿರುವ ರಾಷ್ಟ್ರ ಮತ್ತು ಅಂತರರಾಷ್ಟ್ರ ಮಟ್ಟದ ಕ್ರೀಡೆಗಳಲ್ಲಿ ಪದಕ ವಿಜೇತರಾದ ಕ್ರೀಡಾಪಟುಗಳಿಗೆ ನಗದು ಪುರಸ್ಕಾರ ಪ್ರದಾನ ಸಮಾರಂಭ
ಯುವಜನತೆಯಲ್ಲಿರುವ ಅಪಾರ ಶಕ್ತಿಯನ್ನು ಸಮಾಜ ನಿರ್ಮಾಣಕ್ಕೆ ಬಳಸಿಕೊಳ್ಳಲು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಲು ಸರ್ಕಾರ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಮೂಲಕ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾರಿಗೊಳಿಸುತ್ತಾ ಬಂದಿದೆ. 2012 ಹಾಗೂ 2013 ನೇ ಸಾಲಿನಲ್ಲಿ ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾಗಿ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದೆ.
ಸರ್ಕಾರವು ಕ್ರೀಡಾಪಟುಗಳ ಕಲ್ಯಾಣಕ್ಕಾಗಿ ಕ್ರೀಡಾ ಸಂಜೀವಿನಿ ಎಂಬ ವಿಮಾ ಯೋಜನೆಯನ್ನು ಜಾರಿಗೆ ತಂದಿದೆ. ಕಷ್ಟದಲ್ಲಿರುವ ಹಿರಿಯ ಕ್ರೀಡಾಪಟುಗಳಿಗೆ ಮಾಸಿಕ ಪಿಂಚಣಿಯನ್ನು ಸಹ ಜಾರಿಗೆ ತಂದಿದೆ. ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ಗುರುತಿಸಿ ಅವರ ಕ್ರೀಡಾ ಬೆಳವಣಿಗೆಗೆ ಪೂರಕವಾಗಿ ತರಬೇತಿ ವ್ಯವಸ್ಥೆಯನ್ನು ರೂಪಿಸಿದೆ.. ಒಳಾಂಗಣ ಕ್ರೀಡಾಂಗಣ, ಈಜುಕೊಳಗಳು, ಗರಡಿಮನೆಗಳ ಜೊತೆಯಲ್ಲಿಯೇ ಕ್ರೀಡಾಶಾಲೆ, ಕ್ರೀಡಾ ನಿಲಯಗಳನ್ನು ಸ್ಥಾಪಿಸಲಾಗಿದೆ.
ಯುವಜನರೇ ಪ್ರಗತಿಯ ಬೆನ್ನೆಲುಬು ಎಂದು ದೃಢವಾಗಿ ನಂಬಿರುವ ಸರ್ಕಾರ ಅವರನ್ನು ಸಬಲೀಕರಿಸಲು ಅನೇಕ ಕ್ರೀಡಾ ಕಲ್ಯಾಣ ಯೋಜನೆಗಳನ್ನು ಹಮ್ಮಿಕೊಂಡಿದ್ದು ಅವುಗಳನ್ನು ಕಾರ್ಯಗತಗೊಳಿಸುವ ಮೂಲಕ ದೇಶಕ್ಕೆ ಅತ್ಯುತ್ತಮ ಕ್ರೀಡಾಪಟುಗಳನ್ನು ಜೊತೆಗೆ ಸದೃಢ ಯುವಜನರನ್ನು ನೀಡುವ ಮೂಲಕ ಸರ್ಕಾರವು ಬದ್ಧವಾಗಿರುತ್ತದೆ.
2012 ಹಾಗೂ 2013ನೇ ಸಾಲಿನಲ್ಲಿ ಸುಮಾರು 557 ಕ್ರೀಡಾಪಟುಗಳಿಗೆ ನಗದು ಪುರಸ್ಕಾರವನ್ನು ನೀಡಲಾಗುತ್ತಿದ್ದು ಇವರಲ್ಲಿ 38 ವಿಕಲಚೇತನ ಕ್ರೀಡಾಪಟುಗಳಿಗೂ ಸಹ ಪುರಸ್ಕಾರ ಮಾಡಲಾಗುತ್ತಿದೆ.
ನಿರ್ದೇಶಕರು
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

No comments:
Post a Comment