ವರುಷ ಒಂದು, ಆರಂಭ ಅನೇಕ " - ಛಾಯಾಚಿತ್ರಪ್ರದರ್ಶನ .
"ವರುಷ ಒಂದು, ಆರಂಭ ಅನೇಕ " - ಹೆಸರಿನ ಡಿ ಎ ವಿ ಪಿ ಛಾಯಾಚಿತ್ರ ಪ್ರದರ್ಶನ ವನ್ನು ಕೇಂದ್ರ ಸಂಸದೀಯವ್ಯವಹಾರ ಮತ್ತು ನಗರಾಭಿವೃದ್ದಿ ಖಾತೆ ಸಚಿವ ಶ್ರೀವೆಂಕಯ್ಯ ನಾಯ್ದು ಅವರು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿಂದು ಶುಭಾರಂಭ ಗೊಳಿಸಿದರು .
ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು ಸರ್ಕಾರ ಒಂದು ವರ್ಷದ ಅವಧಿಯಲ್ಲಿ ನಡೆಸಿದ ಹಲವಾರು ಕಾರ್ಯಗಳವರದಿಯನ್ನು ಜನರಿಗೆ ನೀದುತ್ತಿದ್ದೇವೆಯೇ ಹೊರತುಸಾಧನೆಗಳ ಸಮಾರಂಭ ವಲ್ಲ ಯಂದು ಸ್ಪಸ್ತ ಪಡಿಸಿದರು .ಯಾವುದೇ ಹಗರಣ ಗಳಿಲ್ಲದ ಎನ್ ಡಿ ಎ ಸರ್ಕಾರದಒಂದು ವರ್ಷವಿದು , ಇದು ಕೇವಲ ಆರಂಭ , ಇನ್ನೂಹಲವಾರು ಕಾರ್ಯಕ್ರಮಗಳು ಬರಲಿವೆ ಯಂದು ತಿಳಿಸಿದರು. ಕಳೆದ ೫೮ ವರ್ಷಗಳಲ್ಲಿ ಭಾರತದಲ್ಲಿ ಮೊದಲ ಬಾರಿಗೆಸಾಮಾಜಿಕ ಭದ್ರತಾ ಯೋಜನೆಗಳು ಜಾರಿಗೆ ಬಂದಿವೆ,ಹಿಂದೆಲ್ಲ ಇದ್ದದ್ದು ಕೇವಲ ಸಾಮಾಜಿಕ ಕ್ಷೇತ್ರದಯೋಜನೆಗಳಷ್ಟೇ ಎಂದು ಹೇಳಿದರು. ಭಾರತವು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರ ಸಮರ್ಥನಾಯಕತ್ವದಲ್ಲಿ ಅಂತಾರಾಷ್ಟ್ರೀಯ ಗಮನವನ್ನು ಸೆಳೆದಿದೆ ,ದೇಶದಲ್ಲಿ ಕಳೆದ ೫೮ ವರ್ಷಗಳಲ್ಲಿ ಇದ್ದುದ್ದು ಕೇವಲ ೨ಕೋಟಿ ಬ್ಯಾಂಕ್ ಅಕೌಂಟು ಗಳು , ಆದರೆ ಶ್ರೀ ಮೋದಿಅವರ ಮಾರ್ಗದರ್ಶನದಲ್ಲಿ ಕೇವಲ ನಾಲ್ಕು ತಿಂಗಳಿನಲ್ಲಿ ೧೫ಕೋಟಿ ಬ್ಯಾಂಕ್ ಅಕೌಂಟು ಗಳನ್ನು ತೆರೆಯಲಾಗಿದೆ ಎಂದುತಿಳಿಸಿದರು .
ಕೇಂದ್ರ ರಾಸಾಯನಿಕ ಹಾಗು ರಸಗೊಬ್ಬರ ಖಾತೆ ಸಚಿವ ಶ್ರೀ ಅನಂತ್ ಕುಮಾರ್ ಅವರು ಮಾತನಾಡಿ , ರೈತರಿಗೆಸಕಾಲದಲ್ಲಿ ರಸಗೊಬ್ಬರ ಪೂರೈಸಲು ಎಲ್ಲ ರೀತಿಯಮುಂಜಾಗ್ರತ ಕ್ರಮ ಕೈಗೊಂಡಿದ್ದು ಇದರಿಂದ ರೈತರು ಹೆಚ್ಚಿನಬೆಳೆ ತೆಗೆಯಲು ಅನುಕೂಲವಾಗುತ್ತದೆ ಎಂದು ತಿಳಿಸಿದರು .
ಕೇಂದ್ರ ಕಾನೂನು ಮತ್ತು ನ್ಯಾಯಾಂಗ ಖಾತೆ ಸಚಿನ ಶ್ರೀ ಡಿ.ವಿ .ಸದಾನಂದ ಗೌಡ , ಬೆಂಗಳೂರು ಕೇಂದ್ರ ಲೋಕ ಸಭಾಸದಸ್ಯ ಶ್ರೀ ಪಿ .ಸಿ . ಮೋಹನ್ ಹಾಗೂ ಸಾರ್ವಜನಿಕರುಅಧಿಕ ಸಂಖೆಯಲ್ಲಿ ಹಾಜರಿದ್ದರು . ನಂತರ ಕೇಂದ್ರ ಸಂಗೀತಮತ್ತು ನಾಟಕ ವಿಭಾಗದಿಂದ ಸಾಂಸ್ಕೃತಿಕ ಕಾರ್ಯಕ್ರಮಗಳುನಡೆದವು .
ಇಸ್ರೋ , ಹಲವಾರು ಬ್ಯಾಂಕು ಗಳು ಹಾಗೂ ವಿಮಾಕಂಪನಿಗಳು ಪ್ರದರ್ಶನದಲ್ಲಿ ಪಾಲ್ಗೊಂಡಿವೆ . ಕೇಂದ್ರಜಾಹೀರಾತು ಮತ್ತು ದೃಶ್ಯ ಪ್ರಚಾರ ಸಚಿವಾಲಯದ ಕ್ಷೇತ್ರಪ್ರದರ್ಶನ ವಿಭಾಗವು (davp ) ಈ ಪ್ರದರ್ಶನವನ್ನುಏರ್ಪಡಿಸಿದ್ದು , ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಈತಿಂಗಳ ೧೯ ರ ವರೆಗೆ ಬೆಳೆಗ್ಗೆ ೭ ರಿಂದ ಸಂಜೆ ೭ ರ ವರೆಗೆಪ್ರದರ್ಶನ ಸಾವಜನಿಕರಿಗೆ ತೆರೆದಿರುತ್ತದೆ .
No comments:
Post a Comment