Saturday, 27 June 2015

ರೈತರು ಆತ್ಮಹತ್ಯೆಮಾಡಿ ಕೊಳ್ಳಬಾರದು -ಮುಖ್ಯಮಂತ್ರಿ ಸಿದ್ದರಾಮಯ್ಯ










ಮೈಸೂರು, ಜೂ. 27- ರಾಜ್ಯದಲ್ಲಿ ರೈತರು ಆತ್ಮಹತ್ಯೆ ಕಡೆ ಮುಖ ಮಾಡಬಾರದು ಎಂದು ಮಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ನಗರದ ಹೂರವಲಯದಲ್ಲಿರುವ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಶನಿವಾರ ತಮ್ಮನ್ನು ಭೇಟಿ ಮಾಡಿದ ಮಾಧ್ಯಮ ಪ್ರತಿನಿಧಿಗಳೊಂದಿಗೆ ಸಿಎಂ ಅವರು ಮಾತನಾಡಿದರು. ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನÀಲ್ಲಿ ಕಬ್ಬಿನ ಗದ್ದೆಗೆ ಬೆಂಕಿ ಹಾಕಿ ಅದಕ್ಕೆ ಹಾರಿ ಸಾವನ್ನಪ್ಪಿದ ರೈತ ನಿಂಗೆಗೌಡರ ಆತ್ಮಹತ್ಯೆಗೆ ರಾಜ್ಯ ಸರಕಾರ ಕಾರಣವಾಗಿದೆ ಎಂದು ಹೇಳಿ ರೈತ ಸಂಘದ ಕಾರ್ಯಕರ್ತರು ನಿಮ್ಮ ವಿರುದ್ಧ ದೂರನ್ನು ದಾಖಲಿಸಿದ್ದಾರಲ್ಲ ಎಂದಾಗ, ಮೇಲಿನಂತೆ ಸಿಎಂ ಉತ್ತರಿಸಿ ದೂರಿನ ಬಗ್ಗೆ ನ್ಯಾಯಾಲಯದಲ್ಲಿ ಹೋರಾಡುವುದಾಗಿ ಸಿದ್ದರಾಮಯ್ಯ ಹೇಳಿದರು.ಕೇಂದ್ರ ಸರಕಾರ 2300 ರೂ.ಗಳನ್ನು ಕಬ್ಬು ಬೆಲೆಗೆ ನಿಗಧಿ ಮಾಡಿದೆ. ಈ ಪೈಕಿ 400 ರೂ. ನೀಡುವಂತೆ ರಾಜ್ಯ ಸರಕಾರಕ್ಕೆ ಸೂಚಿಸಿದೆ ಎಂದವರು ಹೇಳಿ, ಈ ಬಗ್ಗೆ ಕೇಂದ್ರ ಸಚಿವ ರಾಂ ವಿಲಾಸ್ ಪಾಸ್ವಾನ್ ಅವರೊಂದಿಗೆ ಮಾತನಾಡಿದ್ದು, ಈ ಹಣವನ್ನು ಕೇಂದ್ರ ಸರಕಾರವೇ ಪಾವತಿಸುವಂತೆ ಮನವಿ ಮಾಡಲಾಗಿದೆ ಎಂದರು.ರೈತರು ಯಾವುದೇ ಸಂದರ್ಭದಲ್ಲೂ ಆತ್ಮಸ್ಥೈರ್ಯ ಕಳೆದುಕೊಳ್ಳಬಾರದೆಂದು ಹೇಳಿದ ಸಿಎಂ, ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೇಳಿದರು.ಪ್ರಕೃತಿ ವಿಕೋಪದಿಂದ ಈ ರೀತಿಯ ನಷ್ಟ ಉಂಟಾಗಲಿದೆ. ಹಲವು ವರ್ಷಗಳಿಂದ ನಡೆಯುತ್ತಿರುವ ಈ ಬಗ್ಗೆಯೂ ತಿಳಿದಿದ್ದಾರೆ ಹಿಗಿದ್ದೂ ರೈತರು ಆತ್ಮಹತ್ಯಗೆ ಮುಂದಾಗುವುದು ಸರಿಯಲ್ಲವೆಂದರು.ಅತಿವೃಷ್ಠಿ ಅನಾವೃಷ್ಠಿಯಿಂದ ನಷ್ಟ ಸಂಭವಿಸುತ್ತದೆ. ಇದರಿಂದ ರೈತರು ಆತ್ಮಹತ್ಯೆ ಮಾಡಿಕೊಳ್ಳಬಾರದೆಂದು ಹೇಳಿದರು.ಸರಕಾರ ರೈತರ ಸಮಸ್ಯೆಗೆ ಸ್ಪಂದಿಸಲಿದೆ ಎಂದರು.ಕಬ್ಬು ಬೆಳೆಗಾರರ ಬಾಕಿಗೆ ಸರಕಾರ ಮುಂದಾಗಿ ಕೆಲ ಕ್ರಮಗಳನ್ನು ಕೈಗೊಂಡಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.ಕಬಿನಿ ಜಯಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ನಾಳೆ (ಜೂ. 28) ಬಾಗಿನ ಅರ್ಪಿಸುವುದಾಗಿ ಸಿಎಂ ಹೇಳಿದರು.ಕಬಿನಿ ಜಲಾಶಯ ತುಂಬಲು ಇನ್ನು 3 ಅಡಿ ಮಾತ್ರ ಬಾಕಿ ಇದೆ. ಇಂದು ಅಥವಾ ನಾಳೆ ವೇಳೆಗೆ ತುಂಬಲಿದೆ ಎಂದರು.ನಮ್ಮ ಸರಕಾರ ಅಧಿಕಾರಕ್ಕೆ ಬಂದ ನಂತರ ಪ್ರತಿ ವರ್ಷ ರಾಜ್ಯದ ಎಲ್ಲಾ ಜಲಾಶಯಗಳು ಭರ್ತಿ ಆಗುತ್ತಿದೆ. ಇದರಿಂದ ತಮಿಳುನಾಡಿಗೆ ನೀರನ್ನು ಹರಿಸಲು ತೊಂದರೆ ಇಲ್ಲ ಎಂದರು. ನೆರೆ ರಾಜ್ಯವಾದ ತಮಿಳುನಾಡಿನೊಂದಿಗೆ ನೀರಿಗೆ ಸಂಬಂಧಿಸಿದ ತಕರಾರು ಉದ್ಭವಿಸುವುದಿಲ್ಲವೆಂದರು.ನಗರದ ಮಾನಸಗಂಗೋತ್ರಿಯಲ್ಲಿರುವ ಸೆನೆಟ್‍ಭವನದಲ್ಲಿ ಜನಮನ ಫಲಾನುಭವಿಗಳೊಂದಿಗೆ ಮುಖ್ಯಮಂತ್ರಿಗಳ ಸಂವಾದ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಸಿದ್ದರಾಮಯ್ಯನವರು ಭಾಗವಹಿಸಲಿದ್ದಾರೆ.ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಬೆಂಗಳೂರಿನಿಂದ ಮೈಸೂರಿಗೆ ಇಂದು ಬೆಳಗ್ಗೆ ವಿಶೇಷ ವಿಮಾನದಲ್ಲಿ ಆಗಮಿಸಿದರು. ಮುಖ್ಯಮಂತ್ರಿಗಳೊಂದಿಗೆ ಸಚಿವ ರೋಷನ್ ಬೇಗ್ ಇದ್ದರು.

No comments:

Post a Comment