Sunday, 28 June 2015


ಪ್ರಥಮ ಪಿಯುಸಿ ಓದುತ್ತಿದ್ದ ವಿದ್ಯಾರ್ಥಿಯೊಬ್ಬ ಅನುಮಾನಾಸ್ಪದವಾಗಿ ತೆರೆದ ಬಾವಿಯಲ್ಲಿ ಸಾವನ್ನಪ್ಪಿರುವ ಘಟನೆ ಪಟ್ಟಣದ ಹೊರವಲಯದ ದೂರವಾಣಿ ಕೇಂದ್ರ ಸಮೀಪದಲ್ಲಿ ನಡೆದಿದೆ.
ಪಟ್ಟಣಕ್ಕೆ ಹೊಂದಿಕೊಂಡತ್ತಿರುವ ಸಾರೆಮೇಗಲಕೋಪ್ಪಲು ಗ್ರಾಮದ ನಾಗರಾಜು ಎಂಬುವರ ಮಗ ಎನ್.ಚಂದ್ರು (16) ಮೃತ ವ್ಯಕ್ತಿ. ಭಾನುವಾರ ಬಾವಿಯಲ್ಲಿ ಈಜಲು ಹೊದ ವ್ಯಕ್ತಿಗಳು ಚಂದ್ರು ಶವ ತೇಲುತ್ತಿರುವುದನ್ನು ಕಂಡು ಪಟ್ಟಣದ ಪೋಲಿಸರಿಗೆ ವಿಷಯ ತಿಳಿಸಿ, ಶವವನ್ನು ಮೇಲೆತ್ತಲಾಯಿತು. ಈತನ ಸಾವಿಗೆ ಏನು ಕಾರಣ ಎಂದು ತಿಳಿದು ಬಂದಿಲ್ಲ, ಬಾವಿಯಲ್ಲಿ ಜೀನ್ಸ್ ಪ್ಯಾಂಟ್ ಹಾಗೂ ಶರ್ಟ ಧರಿಸಿದ್ದ ಸ್ಥಿತಿಯಲ್ಲೇ ಶವ ತೇಲುತ್ತಿದ್ದದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ. ಬಾವಿಯಲ್ಲಿ ಈತ ಈಜಲು ಹೊಗಿದ್ದರೇ ಬಟ್ಟೆ ಕಳಚಿ ಹೊಗಬೇಕಾಗಿತ್ತು ಎಂಬುದೇ ಸ್ಥಳೀಯರ ಅನುಮಾನಕ್ಕೆ ಕಾರಣವಾಗಿದೆ.
ಕಳೆದ ಬಾರಿ ಎಸ್‍ಎಸ್‍ಎಲ್‍ಸಿಯಲ್ಲಿ ಉತೀರ್ಣನಾಗಿದ್ದ ಚಂದ್ರ ತಾಲೂಕಿನ ಬಿ.ಜಿ ನಗರದಲ್ಲಿ ಪ್ರಥಮ ಪಿಯುಸಿ ವಿದ್ಯಾಭ್ಯಾಸ ಮಾಡುತ್ತಿದ್ದ ಎನ್ನಲಾಗಿದೆ. ಈತ ಜೂ.26 ರಂದು ಮನೆಯಿಂದ ಗೆಳೆಯನ ಹತ್ತಿರ ನೋಟ್ ಬುಕ್ ತರಲು ಹೋದವನ್ನು ಮನೆಗೆ ಹಿಂದಿರುಗದ ಕಾರಣ ನಾಗಮಂಗಲ ಪಟ್ಟಣ ಪೋಲಿಸ್ ಠಾಣೆಗೆ ಈತನ ಪೋಷಕರು ಕಾಣಿಯಾಗಿರುವ ಬಗ್ಗೆ ದೂರು ನೀಡಿದ್ದರು. ಆದರೆ ಚಂದ್ರು ಭಾನುವಾರ ಶವವಾಗಿ ಪತ್ತೆಯಾಗಿದ್ದಾನೆ. ಶವವನ್ನು ಪಟ್ಟಣದ ಸಾರ್ವಜಿಕ ಆಸ್ಪತ್ರೆಗೆ ತಂದು ಶವ ಪರೀಕ್ಷೆ ಮಾಡಿ ವಾರಸುದಾರರಿಗೆ ಅಸ್ತಾಂತರಿಸಲಾಯಿತು. ಈ ಸಂಬಂಧ ಗ್ರಾಮಾಂತರ ಪೋಲಿಸ್ ಠಾಣೆಯ ಪಿಎಸ್‍ಐ ಹರೀಶ್ ಸ್ಥಳ ತನಿಖೆ ಮಾಡಿ, ನಾಗಮಂಗಲ ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

No comments:

Post a Comment