23ನೇ ಜೂನ್ 2015
ಜಿಲ್ಲೆಯಲ್ಲಿ 9 ಲಕ್ಷ ಲೀಟರ್ ಹಾಲು ಉತ್ಪಾದಿಸುವ ನಿರೀಕ್ಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ
ಮೈಸೂರು,ಜೂ.24-ಮೈಸೂರು ಜಿಲ್ಲೆಯಲ್ಲಿ 2019 -20 ನೇ ಸಾಲಿನ ವೇಳೆಗೆ 9 ಲಕ್ಷ ಲೀಟರ್ ಹಾಲು ಉತ್ಪಾದಿಸುವ ನಿರೀಕ್ಷೆ ಇದ್ದು, ಉತ್ಪಾದಿಸುವ ಹಾಲನ್ನು ಸಂಸ್ಕರಿಸಲು ಅನುಕೂಲವಾಗುವಂತೆ ಮೈಸೂರು ಜಿಲ್ಲೆಯಲ್ಲಿ ಮೆಗಾ ಹಾಲಿನ ಡೈರಿಯನ್ನು ಸ್ಥಾಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಶ್ರೀ ಸಿದ್ದರಾಮಯ್ಯ ಅವರು ತಿಳಿಸಿದರು.
ಅವರು ಇಂದು ನಗರದ ಆಲನಹಳ್ಳಿನಲ್ಲಿ 183 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ನೂತನ ಮೆಗಾ ಡೇರಿ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮೈಸೂರು ಜಿಲ್ಲೆಯ 7 ತಾಲ್ಲೂಕುಗಳಿಂದ ಪ್ರತಿದಿನ 5 ಲಕ್ಷ ಲೀಟರ್‍ಗೂ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತಿದ್ದು, ಈ ಹಾಲನ್ನು ಸಂಸ್ಕರಿಸಿ, ಮಾರಾಟ ಮಾಡುವುದು, ಹಾಲಿನ ಪುಡಿ ಸೇರಿದಂತೆ ವಿವಿಧ ಉತ್ಪನ್ನಗಳನ್ನು ತಯಾರಿಸಬೇಕು. ಹಾಲಿ ಇರುವಂತಹ ಡೇರಿಯಲ್ಲಿ 3 ಲಕ್ಷ ಲೀಟರ್ ಹಾಲನ್ನು ಮಾತ್ರ ಸಂಸ್ಕರಿಸಲು ಸಾಧ್ಯವಾಗುತ್ತಿತ್ತು. ಈಗ ನಿರ್ಮಾಣಗೊಳ್ಳಲಿರುವ ಮೆಗಾ ಡೇರಿಯಲ್ಲಿ ಪ್ರಾರಂಭದಲ್ಲಿ 6 ಲಕ್ಷ ಲೀಟರ್ ಸಂಸ್ಕರಿಸಬಹುದು 1 ಲಕ್ಷ ಕೆಜಿ ಮೊಸರು ತಯಾರಿಕೆ ಸಾಮಥ್ರ್ಯವನ್ನು ಹೊಂದಿರುತ್ತದೆ. ಮುಂದೆ ಅತ್ಯಾಧುನಿಕ ತಂತ್ರಾಜ್ಞಾನ ಬಳಸಿ 9 ಲಕ್ಷ ಲೀಟರ್ ಹಾಲನ್ನು ಸಂಸ್ಕರಿಸಬಹುದು ಇದಲ್ಲದೆ 30 ಮೆಟ್ರಿಕ್ ಟನ್ ಹಾಲಿನ ಪುಡಿ ಘಟಕವು ಸಹ ಇಲ್ಲಿ ಪ್ರಾರಂಭವಾಗಲಿದೆ ಎಂದು ತಿಳಿಸಿದರು.
ಮೆಗಾ ಡೇರಿಯಲ್ಲಿ ಪ್ರತಿ ದಿನ 50000 ಲೀಟರ್‍ಗಳಷ್ಟು ಕ್ರೀಂನ್ನು ಬೇರ್ಪಡಿಸಿ 20000+25000 ಕೆಜಿ ಬೆಣ್ಣೆಯನ್ನು ತಯಾರಿಸುವ ಸಾಮಥ್ರ್ಯವಿದ್ದು, ಮಾರಾಟಕ್ಕೆ ಅವಶ್ಯವಿರುವ 5.0 ಲಕ್ಷಗಳಷ್ಟು ಹಾಲನ್ನು ವಿವಿಧ ಮಾದರಿಯ ಮತ್ತು ಅಳತೆಯ ಪ್ಯಾಕೆಟ್‍ಗಳಲ್ಲಿ ಪ್ಯಾಕ್ ಮಾಡಿ. ಗುಣಮಟ್ಟ ಕಾಪಾಡಲು ಕೋಲ್ಡ್ ಸ್ಟೋರ್ಸ್‍ನಲ್ಲಿ ಸಂಗ್ರಹಿಸಿಡಬಹುದಾಗಿರುತ್ತದೆ. ಹಾಗೂ ಉತ್ಪಾದಿಸಿದ ಬೆಣ್ಣೆಯನ್ನು ಸಂಗ್ರಹಿಸಿಡಲು ಅತಿ ಕಡಿಮೆ ಉಷ್ಣತೆಯ ಶೈತ್ಯಾಗಾರ ಸಹ ಇರುತ್ತದೆ ಎಂದರು.
ಪ್ರತಿ ದಿನ ರಾಜ್ಯದಲ್ಲಿ 72 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ಪ್ರತಿ ಸಾಲಿನಲ್ಲಿ ಈ ಉತ್ಪಾದನೆ ಶೇ. 15 ರಿಂದ 20 ರವರೆಗೆ ಏರಿಕೆಯಾಗಲಿದೆ. ಹಾಲು ಉತ್ಪಾದನೆ ಹೆಚ್ಚುತ್ತಿದ್ದು, ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳು ಉತ್ಪಾದನೆಯಾಗುವ ಹಾಲನ್ನು ಮಾರಾಟ ಮಾಡುವ ಬಗ್ಗೆ ಹೆಚ್ಚಿನ ನಿಗಾ ವಹಿಸಬೇಕು ಎಂದರು.
ಗ್ರಾಮೀಣ ಭಾಗದ ಜನರು ಹಾಲು ಉತ್ಪಾದಿಸಿ ಅವರು ಬಳಸಿಕೊಂಡು ಉಳಿದ ಹಾಲನ್ನು ಪಾರದರ್ಶಕವಾಗಿ ಖರೀದಿಸುವ ಉದ್ದೇಶದಿಂದ ಹಾಲು ಉತ್ಪಾದಾಕರ ಸಂಘಗಳನ್ನು ಪ್ರಾರಂಭಿಸಲಾಯಿತು. ಗ್ರಾಮೀಣ ಭಾಗದಲ್ಲಿ ಜನರು ಇಂದು ಉತ್ಪಾದಿಸುವ ಹಾಲನ್ನು ಪೂರ್ಣವಾಗಿ ತಾವು ಕೂಡ ಬಳಸದೇ ಮಾರಾಟ ಮಾಡುತ್ತಿದ್ದರೆ. ಹಾಲು ಪೌಷ್ಠಿಕಾಂಶವುಳ್ಳ ಪೂರ್ಣ ಆಹಾರವಾಗಿದ್ದು, ಉತ್ಪಾದಿಸುವ ಹಾಲನ್ನು ಗ್ರಾಮೀಣ ಜನರು ಬಳಸುವಂತೆ ಸಲಹೆ ನೀಡಿದರು.
ಪ್ರತಿ ದಿನ ಉತ್ಪಾದನೆಯಾಗುತ್ತಿರುವ 72 ಲಕ್ಷ ಲೀಟರ್ ಹಾಲಿಗೆ ಪ್ರತಿ ಲೀಟರ್ ಹಾಲಿಗೆ ರೂ 4/- ರಂತೆ ಸಹಾಯಧನ ನೀಡಲಾಗುತ್ತಿದ್ದು, ಸರ್ಕಾರದಿಂದ 2 ಕೋಟಿ 88 ಲಕ್ಷ ರೂ. ಹಣವನ್ನು ಕೆ.ಎಂ.ಎಫ್‍ಗೆ ಬಿಡುಗಡೆ ಮಾಡಲಾಗುತ್ತಿದೆ. 7 ಲಕ್ಷ ಲೀಟರ್ ಹಾಲನ್ನು ಮಕ್ಕಳಿಗೆ ಕ್ಷೀರ ಭಾಗ್ಯ ಯೋಜನೆಯಡಿ ನೀಡಲಾಗುತ್ತಿದೆ ಎಂದರು.
ಮೈಸೂರು ಜಿಲ್ಲಾ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ಒಟ್ಟು 945 ಹಾಲು ಉತಾದಕರ ಸಹಕಾರ ಸಂಘಗಳು ಕಾರ್ಯಚರಣೆಯಲಿದ್ದು, ಇದರಲ್ಲಿ 595 ಸಾಮಾನ್ಯ ಸಂಘಗಳು ಹಾಗೂ 350 ಮಹಿಳಾ ಸಂಘಗಳು ಇರುತ್ತದೆ. ಒಟ್ಟು 1,95,000 ಸದಸ್ಯರಿರುತ್ತಾರೆ. ರೈತನಿಗೆ ಪ್ರತಿ ವಾರ ವರಮಾನ ನೀಡುವಂತ ಉದ್ಯೋಗವಾಗಿದೆ. ರಾಜ್ಯದ್ಯಂತ ಹಾಲು ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ಹಾಲು ಪರೀಕ್ಷಕರಿಗೆ ಹಣ ನೀಡಲು 48 ಕೋಟಿ ರೂ ಹಣ ಬಿಡುಗಡೆ ಮಾಡಲಾಗಿದೆ ಎಂದರು.
ಸಹಕಾರ, ಸಕ್ಕರೆ ಸಚಿವ ಹೆಚ್.ಎಸ್. ಮಹದೇವ ಪ್ರಸಾದ್, ಕಾನೂನು ಮತ್ತು ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ.ಜಯಚಂದ್ರ, ಶಾಸಕ ಎಂ.ಕೆ. ಸೋಮಶೇಖರ್, ಹೆಚ್.ಪಿ. ಮಂಜುನಾಥ್, ಮೈಸೂರು ಮಹಾನಗರ ಪಾಲಿಕೆಯ ಮಹಾಪೌರರಾದ ಆರ್. ಲಿಂಗಪ್ಪ, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಡಾ|| ಬಿ. ಪುಷ್ಪಾ ಅಮರನಾಥ್, ವಿಧಾನಪರಿಷತ್ ಸದಸ್ಯ ಆರ್. ಧರ್ಮಸೇನ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಕೆ.ಆರ್. ಮೋಹನ್ ಕುಮಾರ್, ಜಿಲ್ಲಾಧಿಕಾರಿ ಸಿ.ಶಿಖಾ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.
ಪ್ರೋತ್ಸಾಹ ಧನ ಅರ್ಜಿ ಆಹ್ವಾನ
ಮೈಸೂರು,ಜೂ.2೪.-ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ವತಿಯಿಂದ 2014-15ನೇ ಸಾಲಿನಲ್ಲಿ ಉತ್ತೀರ್ಣರಾಗಿರುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ ಉತ್ತೇಜನ ಯೋಜನೆಯಡಿ ಪ್ರೋತ್ಸಾಹಧನ ವಿತರಿಸಲು ಅರ್ಜಿ ಆಹ್ವಾನಿಸಿದೆ.
ಆಸಕ್ತರು ಎಸ್.ಎಸ್.ಎಲ್.ಸಿ/ಪಿ.ಯು.ಸಿ/ಪದವಿ, ಸ್ನಾತಕೋತ್ತರ ಪದವಿಯಲ್ಲಿ ಉತ್ತೀರ್ಣರಾಗಿರುವ ಪರೀಕ್ಷೆ ಅಂಕ ಪಟ್ಟಿ ಪ್ರತಿ, ಜಾತಿ, ಆದಾಯ, ವಾಸಸ್ಥಳ, ಆಧಾರ್ ಕಾರ್ಡ್ ಪ್ರಮಾಣ ಪತ್ರದ ಪ್ರತಿಯೊಂದಿಗೆ ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಂಪರ್ಕಿಸಿ ಅರ್ಜಿ ಪಡೆದು ಭರ್ತಿ ಮಾಡಿದ ಅರ್ಜಿಯನ್ನು ಸಲ್ಲಿಸುವುದು. ಪದವಿ ಪೂರ್ವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 30, ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ನವೆಂಬರ್ 30 ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನಾಂಕವಾಗಿರುತ್ತದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 0821-2422088ನ್ನು ಸಂಪರ್ಕಿಸಬಹುದು.
ನ್ಯಾಷನಲ್ ಡಿಫೆನ್ಸ್ ಮತ್ತು ನಾವೆಲ್ ಅಕಾಡೆಮಿ ಪರೀಕ್ಷೆ
ಮೈಸೂರು,ಜೂ.2೪.ಕೇಂದ್ರ ಲೋಕ ಸೇವಾ ಆಯೋಗ ಆರ್ಮಿ, ನೇವಿ & ಏರ್ ಫೋರ್ಸ್ ಗಳಲ್ಲಿ ಖಾಲಿ ಇರುವ 375 ಹುದ್ದೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.
ಆರ್ಮಿಗೆ ಯಾವುದೇ ವಿಭಾಗದಲ್ಲಿ ಪಿ.ಯು.ಸಿ., ಪಾಸಾಗಿರಬೇಕು. ನೇವಿ & ಏರ್ ಫೋರ್ಸ್ ಗೆ ವಿಜಾÐನ (ಪಿಜಿಕ್ಸ್ & ಮ್ಯಾತ್ಸ್) ವಿಷಯಗಳಲ್ಲಿ ಪಿ.ಯು.ಸಿ. ಪಾಸಾಗಿರಬೇಕು.ವಯೋಮಿತಿ ದಿನಾಂಕ: 02-01-1997 ರಿಂದ 01-01-2000 ರೊಳಗೆ ಜನಿಸಿರಬೇಕು
ತಿತಿತಿ.uಠಿsಛಿoಟಿಟiಟಿe.ಟಿiಛಿ.iಟಿ ವೆಬ್ ಸೈಟ್ ನಲ್ಲಿ ಆನ್‍ಲೈನ್ ಮೂಲಕ ಜುಲೈ 17 ರೊಳಗಾಗಿ ಸಲ್ಲಿಸುವುದು. ಹೆಚ್ಚಿನ ಮಾಹಿತಿಗೆ ವೆಬ್ ಸೈಟ್: hಣಣಠಿ://ತಿತಿತಿ.uಠಿsಛಿ.gov.iಟಿ ಅಥವಾ ಉಪಮುಖ್ಯಸ್ಥರು, ಉದ್ಯೋಗ ಮಾಹಿತಿ ಮತ್ತು ಮಾರ್ಗದರ್ಶನ ಕೇಂದ್ರ, ಗ್ರಂಥಾಲಯ ಕಟ್ಟಡ, ಮಾನಸಗಂಗೋತ್ರಿ, ಮೈಸೂರು ದೂರವಾಣಿ: 0821-2516844 ,9449686641 ಇವರನ್ನು ಸಂಪರ್ಕಿಸುವುದು.
ಸಭೆ ಮುಂದೂಡಿಕೆ
ಮೈಸೂರು,ಜೂ.23.(ಕ.ವಾ):-ಲೋಕಸಭಾ ಸದಸ್ಯ ಆರ್. ಧ್ರುವನಾರಾಯಣ್ ಅವರ ಅಧ್ಯಕ್ಷತೆಯಲ್ಲಿ ಜೂನ್ 30 ರಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಬೇಕಿದ್ದ ಜಿಲ್ಲಾ ಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅನಿವಾರ್ಯ ಕಾರಣಗಳಿಂದ ಮುಂದೂಡಲಾಗಿದ್ದು, ಸಭೆಯು ಜುಲೈ 4 ರಂದು ಬೆಳಿಗ್ಗೆ 10-30ಕ್ಕೆ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆಯಲಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಪಿ.ಎ.ಗೋಪಾಲ್ ಅವರು ಪ್ರಕಟಣೆಯಲ್ಲಿ ತಿಳಿಸಿದರೆ.

No comments:
Post a Comment